Author: UllalaVani

Kannada News From Coastal Karnataka

ಉಳ್ಳಾಲ್‍ನ್ಯೂಸ್ ನೆಟವರ್ಕ್ ಉಳ್ಳಾಲ: ಧಾರ್ಮಿಕ ದತ್ತಿ ಇಲಾಖೆಯಿಂದ ವಾರ್ಷಿಕವಾಗಿ 12 ಕೋಟಿ ರೂ. ಅನುದಾನ ದೇವಸ್ಥಾನ, ದೈವಸ್ಥಾನಗಳಿಗೆ ನೀಡಲಾಗುತ್ತಿದ್ದು,   ಖಾಸಗಿ ಅಧೀನದ ಇನ್ನಷ್ಟು ದೇವಸ್ಥಾನಗಳಿಗೂ ಅನುದಾನ ನೀಡಲು  ಪ್ರಯತ್ನಿಸುವುದಾಗಿ  ರಾಜ್ಯ ಧಾರ್ಮಿಕ ಪರಿಷತ್  ಸದಸ್ಯ  ಪದ್ಮನಾಭ ಕೋಟ್ಯಾನ್ ಹೇಳಿದ್ದಾರೆ. ಅವರು  ಕಿನ್ಯ ಬೆಳರಿಂಗೆಯ ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಭಂಡಾರಮನೆ  ಇದರ ವಾರ್ಷಿಕ ನೇಮೋತ್ಸವದ ಅಂಗವಾಗಿ  ಇತ್ತೀಚೆಗೆ ನಡೆದ ಧಾರ್ಮಿಕ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ  ಧಾರ್ಮಿಕ   ವಿಚಾರಗಳಿಗೆ ಸಂಬಂಧಿಸಿ ಪ್ರಸಕ್ತ ವರ್ಷ ರೂ. 2 ಕೋಟಿ ವಿನಿಯೋಗಿಸಲಾಗಿದೆ ಎಂದ ಅವರು  ಪ್ರಸಕ್ತ ಸಾಲಿನಲ್ಲಿ ಇನ್ನಷ್ಟು ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರದ ಖಾಸಗೀ ಅಧೀನದ ದೇವಸ್ಥಾನಗಳಿಗೂ ಅನುದಾನ  ನೀಡುವಲ್ಲಿ ಪ್ರಯತ್ನಿಸುತ್ತೇನೆ ಎಂದರು. ಶ್ರೀ ಮಲರಾಯ ಧೂಮಾವತಿ ಬಂಟ ದೈವಸ್ಥಾನದ ಅಂತಪೂಜಾರಿ  ಅಧ್ಯಕ್ಷತೆ ವಹಿಸಿದ್ದರು.  ಜನಪದ ವಿದ್ವಾಂಸ ನೀಲಯ್ಯ ಎಂ.ಅಗರಿ ದೈವಾರಾಧನೆ ಚಿಂತನೆಗಳ ಕುರಿತು  ಮಾತನಾಡಿದರು. ಕ್ಷೇತ್ರದ ಗೌರವಾದ್ಯಕ್ಷ ಕೆ.ಟಿ.ಸುವರ್ಣ, ಆಡಳಿತ ಮೊಕ್ತೇಸರ ಬಾಬು ಶ್ರೀ ಶಾಸ್ತಾ ಕಿನ್ಯಾ, ಮೊಕ್ತೇಸರರಾದ ಎ.ಜೆ.ಶೇಖರ್,…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮೂಲನೆಗೆ ಸಂಬಂಧಿಸಿದ ಅಭಿಯಾನ ಪ್ರಾರಂಭಗೊಂಡ ಬಳಿಕ ಕ್ಷಯರೋಗ ಪೀಡಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಕ್ಷಯ ರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಸರಕಾರದೊಂದಿಗೆ ಖಾಸಾಗಿ ವೈದ್ಯಕೀಯ ಸಂಸ್ಥೆಗಳು ಸಂಘಟನೆಗಳ ಬೆಂಬಲ ಅಗತ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಮಕೃಷ್ಣ ರಾವ್ ಅಭಿಪ್ರಾಯಪಟ್ಟರು. ಅವರು ನಾಟೆಕಲ್‍ನ ಕಣಚೂರು ಆಸ್ಪತ್ರೆ ಆಡಿಟೋರಿಯಂನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ , ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಕ್ಷಯ ಚಿಕಿತ್ಸಾ ಕೇಂದ್ರ ದ.ಕ.ಜಿಲ್ಲಾ ಕ್ಷಯರೋಗ ನಿವಾರಣಾ ಸಂಘ ಹಾಗೂ ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ನಾಟೆಕಲ್ ಮಂಗಳೂರು ಇದರ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಕ್ಷಯ ರೋಗ ದಿನಾಚರಣೆ -2017 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮನುಷ್ಯನ ರೋಗ ನಿರೋಧಕ ಶಕ್ತಿಗಳು ಕಡಿಮೆಯಾದಾಗ ಕ್ಷಯ ರೋಗದಂತಹ ಸಮಸ್ಯೆಗಳು ಬರುತ್ತಿದ್ದು, ಮುಖ್ಯವಾಗಿ ಇಂತಹ ಜನರನ್ನು ಗುರುತಿಸಿ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ: ದೈಹಿಕ ಶಿಕ್ಷಣವು ನಮ್ಮಲ್ಲಿ ದೈಹಿಕ ದೃಢತೆಯನ್ನು ಬೆಳೆಸುವುದು ಮಾತ್ರವಲ್ಲದೆ ಉತ್ತಮವಾದ ಮನಸ್ಸು, ಶಾಂತಿ ನೆಮ್ಮದಿಗೆ ಸ್ಪೂರ್ತಿದಾಯಕವಾಗಿದೆ. ಹಾಗೆಯೇ ನಮ್ಮ ಋಣಾತ್ಮಕ ಚಿಂತನೆಯನ್ನು ದೂರಗೊಳಿಸಿ ಒಗ್ಗಟ್ಟಿನೊಂದಿಗೆ ಉತ್ತಮ ಸಮಾಜವನ್ನು ಕಟ್ಟುವಲ್ಲಿ ಪರಿಣಾಮವನ್ನು ಬೀರುತ್ತದೆ ಎಂದು ಪೊಲೀಸ್ ಕಮೀಷನರ್ ಚಂದ್ರಶೇಖರ್ ಅವರು ಅಭಿಪ್ರಾಯ ಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ಹಳೆಸೆನೆಟ್ ಸಭಾಂಗಣದಲ್ಲಿ `ಇವಾಲ್ಯೂಷನ್ ಆಫ್ ಫಿಸಿಕಲ್ ಎಜ್ಯುಕೇಶನ್ ಪ್ರೋಗ್ರಾಮ್ ಇನ್ ಕಾಲೇಜ್ ಅಫಿಲಿಯೇಟೆಡ್ ಟು ಮಂಗಳೂರು ಯುನಿವರ್ಸಿಟಿ’ ಎಂಬ ವಿಷಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಗಾರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಭಾರತದಲ್ಲಿ ದೈಹಿಕ ಶಿಕ್ಷಣದ ಬೆಳವಣಿಗೆಗೆ ಅಷ್ಟಾಗಿ ಮಹತ್ವ ಸಿಕ್ಕಿಲ್ಲ. ವಿದ್ಯಾರ್ಥಿ ದೆಸೆಯಲ್ಲೇ ಹಂತ ಹಂತವಾಗಿ ವ್ಯವಸ್ಥಿತವಾದ ದೈಹಿಕ ಶಿಕ್ಷಣಕ್ಕೆ ಪೂರಕವಾದ ಚಟುವಟಿಕೆಗಳು ಹಮ್ಮಿಕೊಂಡರೆ ದೈಹಿಕ ಸದೃಡತೆಯಳ್ಳ ಮಾನವ ಸಂಪನ್ಮೂಲದ ನಿರ್ಮಾಣದೊಂದಿಗೆ ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು. ಪೊಲೀಸ್ ಇಲಾಖೆ ಮತ್ತು ದೈಹಿಕ ಶಿಕ್ಷಣ ಕ್ಷೇತ್ರಕ್ಕೆ ಅವಿನಾಭಾವ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ: ತೆಂಕುತಿಟ್ಟಿನ ಸುಪ್ರಸಿದ್ಧ ಯಕ್ಷಗಾನ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ ಅವರ ನಿಧನಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರವು ಗಾಢ ಸಂತಾಪವನ್ನು ವ್ಯಕ್ತಪಡಿಸಿದೆ. ಗೇರುಕಟ್ಟೆ ಗಂಗಯ್ಯ ಶೆಟ್ಟಿ ಅವರು ತಮ್ಮ 16ನೇ ವಯಸ್ಸಿನಲ್ಲಿಯೇ ಯಕ್ಷರಂಗವನ್ನು ಪ್ರವೇಶಿಸಿ ಕಟೀಲು ಮೇಳದಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ್ದರು. ಕಟೀಲು ಮೇಳದಲ್ಲಿ ಸುಪ್ರಸಿದ್ದ ಬಣ್ಣದ ವೇಷಧಾರಿ ಬಣ್ಣದ ಕುಟ್ಯಪುರವರ ಒಡನಾಟದಲ್ಲಿ ಬಣ್ಣದ ವೇಷದತ್ತ ಆಕರ್ಷಿತರಾದ ಗಂಗಯ್ಯ ಶೆಟ್ಟರು ಬಣ್ಣದ ವೇಷಗಳ ಸೂಕ್ಷ್ಮತೆ ಹಾಗೂ ರಂಗದ ನಡೆಯನ್ನು ಕಲಿತಿದ್ದರು. ಮುಂದೆ ಮಹಿಷಾಸುರ ವೇಷದ ಮೂಲಕ ಯಕ್ಷಗಾನ ರಂಗದಲ್ಲಿ ಪ್ರಸಿದ್ದ ಕಲಾವಿದರಾಗಿ ಮಿಂಚಿ ತನ್ನದೇ ಆದ ಛಾಪು ಮೂಡಿಸಿ ರಂಗದಲ್ಲಿ ಮೆರೆದ ಕಲಾವಿದರಾಗಿದ್ದಾರೆ. ರಾಮಾಯಣ, ಮಹಾಭಾರತ ಮುಂತಾದ ಪುರಾಣಗಳ ಆಳವಾದ ಜ್ಞಾನ ಹೊಂದಿದ್ದ ಶೆಟ್ಟರು ಮಹಿಷಾಸುರ ಪಾತ್ರದೊಂದಿಗೆ ರುದ್ರಭೀಮ, ಅರುಣಾಸುರ, ರಾವಣ, ಮೈರಾವಣ, ವೀರಭದ್ರ, ಚಂದಗೋಪ, ಶನೈಶ್ವರ, ಕೌಂಡ್ಲಿಕ ಹೀಗೆ ಪೌರಾಣಿಕ ಪ್ರಸಂಗಗಳ ಪ್ರಮುಖ ಖಳ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮುಡಿಪು: ಎಲ್ಲರೂ ಚಲನಚಿತ್ರವನ್ನು ನೋಡುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಉತ್ತಮ ಸಿನಿಮಾಗಳನ್ನು ಮಾತ್ರ ನೋಡದೆ ಕೆಟ್ಟ ಸಿನಿಮಾಗಳನ್ನು ಕೂಡಾ ನಾವು ನೋಡಬೇಕು. ಕೆಲವರಿಗೆ ಇಷ್ಟವಾಗದ್ದು ನಮಗೆ ಇಷ್ಟವಾಗಬಹುದು. ಅಥವಾ ಸಿನಿಮಾವು ಎಲ್ಲಿ ಎಡವಿದೆ ಎಂಬ ಪರಾಮರ್ಷೆಯನ್ನು ಮಾಡಿಕೊಳ್ಳಲು ಅವಕಾಶವಾಗುತ್ತದೆ ಎಂದು ತುಳು ಚಲನಚಿತ್ರ ನಿರ್ದೇಶಕ ಡಾ.ರಿಚರ್ಡ್ ಕ್ಯಾಸ್ಟಲಿನೋ ಅವರು ಅಭಿಪ್ರಾಯಪಟ್ಟರು ಅವರು ಮಂಗಳೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮ ವಿಭಾಗದ ವತಿಯಿಂದ ಪತ್ರಿಕೋದ್ಯಮ ವಿಭಾಗದ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯುವ ಚಲನಚಿತ್ರೋತ್ಸವ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಇಂದು ತಂತ್ರಜ್ಞಾನದ ಯುಗವಾಗಿದ್ದು ಸಿನಿಮಾ ರಂಗದಲ್ಲೂ ನಾವು ಸಾಕಷ್ಟು ಆಧುನಿಕತೆ ಮತ್ತು ಬದಲಾವಣೆಗಳಾಗಿರುವುದನ್ನು ಗಮನಿಸಬಹುದು. ಸಿನಿಮಾ ಮನರಂಜನೆಯ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವಂತಾಗಬೇಕು. ವಿದ್ಯಾರ್ಥಿ ಜೀವನದಲ್ಲೇ ನಾವು ಸಿನಿಮಾ ರಂಗದ ಹಲವು ಮಗ್ಗುಲುಗಳನ್ನು ಅರಿತುಕೊಂಡರೆ ಮುಂದಿನ ದಿನಗಳಲ್ಲಿ ನಾವು ಕೂಡಾ ಈ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಲು ಅವಕಾಶವಾಗುತ್ತದೆ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಮೂಹ ಸಂವಹನ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಅಂಬ್ಲಮೊಗರು: ಅಂಬ್ಲಮೊಗರು ಪಂಚಾಯತ್ ವ್ಯಾಪ್ತಿಯ ತಾರಿಪಡ್ಪು ಎಂಬಲ್ಲಿ ಕೊಳವೆಬಾವಿ ತೆಗೆಯುವುದನ್ನು ವಿರೋಧಿಸಿದ ತಾರಿಗುಡ್ಡೆ ಕೆರೆಬೈಲು, ಬರುವ ನಿವಾಸಿಗಳು ಕಾಮಗಾರಿಗೆ ತಡೆಯೊಡ್ಡಿದ ಘಟನೆ ಗುರುವಾರ ನಡೆದಿದೆ. ತಾರಿಪಡ್ಪು ಪ್ರದೇಶದಲ್ಲಿ ಈಗಾಗಲೇ ಮೂರು ಕೊಳವೆಬಾವಿಗಳನ್ನು ಕೊರೆಯಲಾಗಿದೆ. 100 ಕ್ಕಿಂತಲೂ ಅಧಿಕ ಮನೆಗಳಿಗೆ ಪಂಚಾಯಿತಿ ವತಿಯಿಂದ ಕೊಡುತ್ತಿರುವ ನೀರು ಇಲ್ಲಿನ ಕೊಳವೆಬಾವಿಗಳಿಂದಲೇ ಹೋಗುತ್ತಿದೆ. ಮತ್ತೆ ಇದೀಗ ಗ್ರಾಮದ 300 ರಷ್ಟು ಮನೆಗಳಿರುವ ಮದಕ ಪ್ರದೇಶಕ್ಕೆ ನೀರು ಕೊಡಲು ತಾರಿಪಡ್ಪು ಬಳಿ ಕೊಳವೆಬಾವಿ ನಿರ್ಮಿಸಲು ಇಂದು ಬೋರ್‍ವೆಲ್ ಕೊರೆಯುವ ಯಂತ್ರ ಆಗಮಿಸಿತ್ತು. ಇದನ್ನು ಕಂಡ ಸ್ಥಳೀಯರು ಕಾಮಗಾರಿ ನಡೆಸದಂತೆ ತಡೆಯೊಡ್ಡಿದ್ದಾರೆ. ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಅಂಬ್ಲಮೊಗರು ಪಂಚಾಯತ್ ಅಧ್ಯಕ್ಷ ರಫೀಕ್ ಅವರ ಜತೆಗೆ ಸ್ಥಳೀಯರು ವಾಗ್ವಾದಕ್ಕೆ ಇಳಿದರು. ಸ್ಥಳದಲ್ಲಿ ಮೂರು ಕೊಳವೆಬಾವಿ ನಿರ್ಮಿಸಿದಾಗಲೂ ವಿರೋಧ ವ್ಯಕ್ತಪಡಿಸಿಲ್ಲ. ಇಡೀ ಅಂಬ್ಲಮೊಗರು ಪಂಚಾಯಿತಿ ವ್ಯಾಪ್ತಿ ಬಹುದೊಡ್ಡ ಇರುವಾಗ ಒಂದೇ ಪ್ರದೇಶವನ್ನು ಕೇಂದ್ರೀಕರಿಸಿ ಕೊಳವೆ ಬಾವಿ ನಿರ್ಮಿಸುವುದರಲ್ಲಿ ಅರ್ಥವಿಲ್ಲ. ಸ್ಥಳದಲ್ಲಿರುವ ಮನೆಗಳ ಬಾವಿಗಳಲ್ಲಿ ಈಗಾಗಲೇ ನೀರು ಬತ್ತಿ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ: ನರಿಂಗಾನ ಗ್ರಾಮ ಪಂಚಾಯಿತಿಯ ಮೂರನೇ ವಾರ್ಡಿನ ಸಿ.ಎಚ್.ರಹ್ಮಾನ್ ಅವರ ಅನುದಾನದಿಂದ ಚಂದಹಿತ್ತುಲುನಿಂದ ಕಟ್ಟೆಪುಣಿತನಕ ನಿರ್ಮಾಣಗೊಂಡ ನೂತನ ರಸ್ತೆಯನ್ನು ಆಹಾರ ಸಚಿವರಾದ ಯು.ಟಿ.ಖಾದರ್ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಚಂದ್ರಹಾಸ್ ಕರ್ಕೇರ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ, ನರಿಂಗಾನ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಪಂಚಾಯಿತಿ ಸದಸ್ಯ ಸಿ.ಎಚ್.ರಹ್ಮಾನ್, ಪಯಾಝ್ ಮೊಂಟೆಪದವು, ಲತೀಫ್ ಕಾಪಿಕಾಡ್, ಸೆಫಿಯಾ ವಿದ್ಯಾನಗರ, ಪದ್ಮನಾಭ ನರಿಂಗಾನ, ಅಬ್ದುಲ್ ಜಲೀಲ್ ಮೋಂಟುಗೋಳಿ, ಅಬ್ದುಲ್ ಖಾದರ್ ಕಟ್ಟೆಪುಣಿ, ಹನೀಫ್ ಚಂದಹಿತ್ತುಲು, ಶಾಕಿರ್, ಚಂದ್ರ ಗಟ್ಟತಡಿ, ಖಲೀಲ್, ಲತೀಫ್, ಅಹ್ಮದ್ ಕುಂಞ ಹಮೀದ್ ಹಾಜಿ, ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ತೊಕ್ಕೊಟ್ಟು :ಸಾಮಾಜಿಕ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಅಳೇಕಲದ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತೊಕ್ಕೊಟ್ಟು ಕಲ್ಲಾಪುವಿನ ಯುನಿಟಿ ಸಭಾಂಗಣದಲ್ಲಿ ಬುಧವಾರ ನಡೆದ 5ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 7ಮಂದಿ ಬಡ ಹೆಣ್ಣು ಮಕ್ಕಳು ವೈವಾಹಿಕ ಜೀವನಕ್ಕೆ ಕಾಲಿಸಿರಿಸಿದರು. ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ಸಯ್ಯಿದ್ ಮದನಿ ದರ್ಗಾ ಉಳ್ಳಾಲ ಇಲ್ಲಿನ ಖತೀಬರಾದ ಮುಹಮ್ಮದ್ ಶಮೀಮ್ ಸಖಾಫಿ ಅವರು ದುವಾ ನೆರವೇರಿಸಿದರು. ಬೋಳಂಗಡಿ ಹವ್ವಾ ಮಸ್ಜಿದ್ ಖತೀಬರಾದ ಸಯ್ಯದ್ ಯಾಹ್ಯಾ ತಂಗಳ್ ಜೋಡಿಗಳಿಗೆ ಸಂದೇಶ ನೀಡಿದರು. ಮುಹಿಯಗಯುದ್ದೀನ್ ಜುಮಾ ಮಸ್ಜಿದ್ ಮೇಲಂಗಡಿ ಉಳ್ಳಾಲ ಇಲ್ಲಿನ ಖತೀಬರಾದ ಯೂಸುಫ್ ಮಿಸ್ಬಾಹಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್,.ಕ.ಜಿಲ್ಲಾ ವಕ್ಪ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಎಸ್.ಎಂ. ರಶೀದ್, ಉಳ್ಳಾಲ ಶ್ರೀ ಚೀರಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್, ದ.ಕ.ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಮುನೀರ್ ಬಾವ,…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ: ಮಂಗಳೂರು ವಿವಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಮುಂದಿನ ಎಪ್ರಿಲ್ ತಿಂಗಳಲ್ಲೇ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಯಾಗಲಿದ್ದು, ಮಂಗಳೂರು ಘಟಕ ಕಾಲೇಜುಗಳಲ್ಲೂ ಈ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಕುಲಪತಿ ಪ್ರೊ.ಕೆ.ಭೈರಪ್ಪ ಹೇಳಿದ್ದಾರೆ. ಮಂಗಳವಾರ ವಿವಿಯ ಹೊಸ ಸೆನೆಟ್ ಸಭಾಂಗಣದಲ್ಲಿ ಮಂಗಳವಾರ ಮಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ ಹಾಗೂ 2017-18ನೇ ಸಾಲಿನ ಬಜೆಟ್ ಮಂಡನಾ ಸಭೆಯಲ್ಲಿ ಹೇಳಿದರು. ವಿವಿಯಲ್ಲಿ ಹಲವು ವಿಭಾಗಗಳಿರುವುದರಿಂದ ಕೆಲವೊಂದು ಕೊರತೆಗಳು ಸಾಮಾನ್ಯ, ಆದರೂ ಶೈಕ್ಷಣಿಕವಾಗಿ ತೊಂದರೆಯಾಗದ ರೀತಿಯಲ್ಲಿ ನೂತನ ತಂತ್ರಜ್ಞಾನಗಳನ್ನು ನಿಭಾಯಿಸಲಾಗುತ್ತಿದೆ. ವಿವಿಯಲ್ಲಿ ಸೆಂಟರ್ ಫಾರ್ ಅಪ್ಲಿಕೇಶನ್ ಆಫ್ ರೇಡಿಯೋಸೊಟೊಫರ್ಸ್ ಆ್ಯಂಡ್ ರೇಡಿಯೇಶನ್ ಟೆಕ್ನಾಲಜಿ (ಸಿಎಆರ್‍ಆರ್‍ಟಿ) ಸ್ಥಾಪನೆ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 22 ಕೋಟಿ ಯೋಜನೆಯಲ್ಲಿ ಅಂತರಾಷ್ಟ್ರೀಯ ವಿದ್ಯಾರ್ಥಿ ಹಾಗೂ ಅತಿಥಿ ಗೃಹ ನಿರ್ಮಾಣವಾಗುತ್ತಿದ್ದು ಇದರಿಂದ ವಿದ್ಯಾರ್ಥಿಗಳ ಪೋಷಕರಿಗೂ ಅನುಕೂಲವಾಗಲಿದೆ ಎಂದ ಅವರು ಮಂಗಳೂರು ವಿವಿಯಡಿ 150 ಖಾಸಗಿ, 32 ಸರ್ಕಾರಿ, 19ಬಿಎಡ್-ಬಿಪಿಟಿ, 5 ಸ್ವಾಯತ್ತೆ ಹಾಗೂ ನಾಲ್ಕು ವಿವಿ ಘಟಕ ಕಾಲೇಜುಗಳ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಕಲ್ಲಾಪು: ಅಳೇಕಲದ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾ.22 ರಂದು ತೊಕ್ಕೊಟ್ಟು ಕಲ್ಲಾಪುವಿನ ಯುನಿಟಿ ಸಭಾಂಗಣದಲ್ಲಿ 7 ಜತೆ ಬಡ ಹೆಣ್ಣು ಮಕ್ಕಳಿಗೆ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ ಎಂದು ಟ್ರಸ್ಟಿನ ಸದಸ್ಯ ಕೆಎಂಕೆ ಮಂಜನಾಡಿ ಹೇಳಿದರು. ತೊಕ್ಕೊಟ್ಟು ಅಳೇಕಲದ ಟ್ರಸ್ಟ್ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕಳೆದ 4 ವರ್ಷಗಳಿಂದ 40 ಜತೆ ಉಚಿತ ಸಾಮೂಹಿಕ ವಿವಾಹವನ್ನು ಟ್ರಸ್ಟ್ ನೆರವೇರಿಸಿದೆ. ಈ ವರ್ಷ 10 ಜತೆ ಉಚಿತ ಸಾಮೂಹಿಕ ವಿವಾಹ ಮಾಡುವ ಯೋಜನೆಯನ್ನು ಹಾಕಿತ್ತು. ಆದರೆ ಆಯ್ಕೆ ಸಂದರ್ಭ 7 ಕುಟುಂಬಗಳು ಮಾತ್ರ ಆಯ್ಕೆ ಮಾಡಲಾಗಿದೆ. ಮುಂದಿನ 3 ಜತೆ ವಿವಾಹವನ್ನು ಬಡ ಹೆಣ್ಮಕ್ಕಳನ್ನು ಹುಡುಕಿ ರಂಝಾನ್ ನಂತರ ಅವರವರ ಮನೆಗಳಲ್ಲಿ ನಡೆಸಲಿದೆ. ಕಳೆದ ನಾಲ್ಕು ವರ್ಷಗಳಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ವಿವಾಹವಾದವರು ಸುಖಮಯ ಜೀವನ ನಡೆಸುತ್ತಿದ್ದಾರೆ. ಟ್ರಸ್ಟ್ ಎಲ್ಲಾ ಧರ್ಮದಲ್ಲಿರುವ ಕಡುಬಡವರನ್ನು ಗುರುತಿಸಿ ಅವರಿಗೆ ಮಾಸಿಕ ರೇಷನ್ ವಿತರಣೆ,…

Read More