Author: UllalaVani

Kannada News From Coastal Karnataka

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ದೇಶದ ಸ್ವಚ್ಛತೆಯನ್ನು ಮನದಲ್ಲಿಟ್ಟುಕೊಂಡು ಪ್ರತಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸ್ವಚ್ಛತಾ ಚಳವಳಿಯನ್ನು ಆರಂಭಿಸಲು ಮುಂದಾಗಿದ್ದು, ಬಹುತೇಕ ಹಿರಿಯ ನಾಗರಿಕರನ್ನೇ ಬಳಸಿಕೊಂಡು ಅವರ ನಾಯಕತ್ವದಲ್ಲಿ ಚಳವಳಿ ಮುಂದುವರಿಯಲಿದೆ ಎಂದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್ ಅಭಿಪ್ರಾಯಪಟ್ಟರು.ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು ತಾಲೂಕು ಇದರ ಮಾರ್ಗದರ್ಶನದಲ್ಲಿ ಅಂಬಿಕಾರೋಡ್ ಗಟ್ಟಿ ಸಮಾಜ ಭವನ ಸಭಾಂಗಣದಲ್ಲಿ ಶನಿವಾರ ನಡೆದ ಕೇಂದ್ರ ಒಕ್ಕೂಟ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವಿಶ್ವದಲ್ಲೇ ಮಂಗಳೂರು ನಗರ ವಾಸಿಸಲು ಉತ್ತಮವಾದ ಸ್ಥಳ ಎಂದು ಅಂತಾರಾಷ್ಟ್ರೀಯ ಸಂಸ್ಥೆಯೊಂದು ವರದಿ ನೀಡಿದೆ. ಅದರಲ್ಲೂ ಶ್ರೀ ಕ್ಷೇತ್ರ ಧರ್ಮಸ್ಥಳ ದೇಶದಲ್ಲೇ ಸ್ವಚ್ಛ ಗ್ರಾಮ ಎಂಬ ಸ್ಥಾನವನ್ನು ಗಳಿಸಿದೆ. ಇದು ಖಾವಂದರ ಅವಿರತ ಶ್ರಮದಿಂದ ಸಾಧ್ಯವಾಗಿದೆ. ಕ್ಷೇತ್ರದಲ್ಲಿ ರೂ.8 ಕೋಟಿ ವೆಚ್ಚದಲ್ಲಿ ನೀರಿನ ಪುನರ್ ಸಂಸ್ಕರಣಾ ಘಟಕವನ್ನು ಸ್ಥಾಪಿಸಲಾಗಿದೆ. ಸಮಾಜಕ್ಕೆ ಉಪದೇಶ ನೀಡುವ ಮುನ್ನ ಬದಲಾವಣೆ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಮಾಡೂರು: ಕೊಂಡಾಣದ ಸಾಯಿಧಾಮ ಬಡಾವಣೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ದ್ವಿತೀಯ ವಾರ್ಷಿಕೋತ್ಸವ ಮತ್ತು ರಾಮನವಮಿ ಉತ್ಸವವು ಎ.3 ಸೋಮವಾರ ರಿಂದ ಎಪ್ರಿಲ್ 4 ಮಂಗಳವಾರದವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ವಾರ್ಷಿಕೋತ್ಸವ ಹಾಗೂ ರಾಮನವಮಿ ಉತ್ಸವ ಸಮಿತಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಹೇಳಿದ್ದಾರೆ. ಅವರು ಮಾಡೂರು ಸಾಯಿಧಾಮ ಬಡಾವಣೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶನಿವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ವಿವರಣೆ ನೀಡಿದ ಅವರು ರಾಮನವಮಿಯ ಪ್ರಯುಕ್ತ ಸೋಮವಾರದಂದು ಬೆಳಿಗ್ಗೆ ವಿವಿಧ ತಂಡಗಳಿಂದ ಭಜನೆ ಸಂಕೀರ್ತನೆ ಹಾಗೂ ಸಂಜೆ ನಡೆಯುವ ಸಾಂಸ್ಕøತಿಕ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀನಿವಾಸ್ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿ ಡಾ.ಎಂ.ಅಣ್ಣಯ್ಯ ಕುಲಾಲ್ ವಹಿಸಲಿದ್ದಾರೆ. ಶ್ರೀಕ್ಷೇತ್ರ ಕೊಂಡೆವೂರು ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಂದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ: ಶಿಕ್ಷಣವು ಉದ್ಯೋಗಕ್ಕೆ ಮಾತ್ರ ಸೀಮಿತವಾಗದೆ ನಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪರಿಣಾಮಕಾರಿಯಾಗಬೇಕು. ಇಂದಿನ ಜಾಗತೀಕರಣ, ತಂತ್ರಜ್ಞಾನಯುಕ್ತವಾದ ಸಮಾಜದಲ್ಲಿ ಯುವ ಸಮುದಾಯದ ಪಾತ್ರ ಪ್ರಮುಖವಾದುದು ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಪರಿಶ್ರಮದೊಂದಿಗೆ ಜೀವನದಲ್ಲಿ ಯಶಸ್ಸನ್ನು ಕಂಡುಕೊಳ್ಳಬೇಕು ಎಂದು ಆಹಾರ ಸಚಿವ ಯು.ಟಿ.ಖಾದರ್ ಅವರು ಹೇಳಿದರು. ಅವರು ಶುಕ್ರವಾರ ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವ್ಯವಹಾರಗಳ ಸಂಶೋಧನಾ ಮತ್ತು ಸ್ನಾತಕೋತ್ತರ ಅಧ್ಯಯನ ವಿಭಾಗದ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ರಾಷ್ಟ್ರಮಟ್ಟದ ವಿಚಾರಸಂಕಿರಣ ಮತ್ತು ಸ್ನಾತಕೋತ್ತರ ವಾಣಿಜ್ಯ ಮತ್ತು ವ್ಯವಹಾರ ಉತ್ಸವ `ಮ್ಯಾಗ್ನಮ್’-2017ನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ವಾಣಿಜ್ಯ ವ್ಯವಹಾರ ಕ್ಷೇತ್ರವು ಬಹಳ ಮಹತ್ತರವಾದ ಕ್ಷೇತ್ರವಾಗಿದ್ದು ಈ ನಿಟ್ಟಿನಲ್ಲಿ ಕಾಮರ್ಸ್ ವಿದ್ಯಾರ್ಥಿಗಳ ಜವಾಬ್ಧಾರಿಯೂ ಹೆಚ್ಚಿದೆ. ಜೀವನದಲ್ಲಿ ನಾವು ತಾಳ್ಮೆ ಸಂಯಮದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ಸಮಾಜದ ನಿರ್ಮಾಣ ಮಾಡಬೇಕು ಎಂದು ಹೇಳಿದರು. ನಾವು ಎಲ್ಲಿ ಹೋದರೂ ಭಾರತೀಯ ಸಂಸ್ಕøತಿಯನ್ನು ಮರೆಯಲು ಸಾಧ್ಯವಿಲ್ಲ. ಕೆಲವರು ಪದವಿಯ ಬಳಿಕ ವಿದೇಶಕ್ಕೆ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ದೇರಳಕಟ್ಟೆ: ಹತ್ತು ರುಪಾಯಿ ನಾಣ್ಯದ ಅಪಮೌಲ್ಯದ ಬಗ್ಗೆ ಆರ್ ಬಿ ಐ ಯಿಂದ ಯಾವುದೇ ಆದೇಶ ಬಂದಿಲ್ಲ ಆದರೆ ಇದೀಗ ಬ್ಯಾಂಕುಗಳು ಅದನ್ನು ಸ್ವೀಕರಿಸದೇ ಆರ್.ಬಿ,ಐ ನಿಯಮವನ್ನು ದಿಕ್ಕರಿಸುತ್ತಿದ್ದಾರೆ, ಇದು ಜನಸಾಮಾನ್ಯರನ್ನು ಗೊಂದಲಕ್ಕೀಡು ಮಾಡುತ್ತಿದೆ ಎಂದು ತುಳುನಾಡು ರಕ್ಷಣಾ ವೇದಿಕೆಯ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಂ.ಸಿರಾಜ್ ಅಡ್ಕರೆ ಹೇಳಿದ್ದಾರೆ. ಸಿಂಡಿಕೇಟ್ ಬ್ಯಾಂಕಿನ ದೇರಳಕಟ್ಟೆ ಶಾಖೆಯಲ್ಲಿ 10 ರೂ. ನಾಣ್ಯವನ್ನು ಪಡೆಯುತ್ತಿಲ್ಲ ಎಂದು ಆರೋಪಿಸಿ ಮಂಗಳೂರು ವಿಧಾನಸಭಾಕ್ಷೇತ್ರದ ತುಳುನಾಡು ರಕ್ಷಣಾ ವೇದಿಕೆ ಶುಕ್ರವಾರ ಬ್ಯಾಂಕಿನ ಎದುರುಗಡೆ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಜನಸಾಮಾನ್ಯರು ದುಡಿಮೆಯ ಮೊತ್ತದಲ್ಲಿ ಖರ್ಚು ವೆಚ್ಚದಲ್ಲಿ ಮಿಕ್ಕಿದ ಹಣವನ್ನು ಸುರಕ್ಷಿತವಾಗಿಡಲು ನೆರವಾಗುವ ಉದ್ದೇಶಕ್ಕಾಗಿ ಬ್ಯಾಂಕ್ ಗಳನ್ನು ಅವಲಂಬಿತರಾಗಿದ್ದಾರೆ. ಸಾಮಾನ್ಯ ಜನರು, ವಿವಿಧ ವರ್ಗದಲ್ಲಿ ದುಡಿಯುತ್ತಿರುವ ಕಾರ್ಮಿಕರು, ಬೀಡಿ ಕಾರ್ಮಿಕರು, ವಿದ್ಯಾರ್ಥಿಗಳು ಬ್ಯಾಂಕ್ ಗಳ ಸೇವೆಯನ್ನು ಅರಸಿಕೊಂಡು ಹೋಗುತ್ತಾರೆ, ಆದರೆ ಇತ್ತೀಚಿಗೆ ಬ್ಯಾಂಕುಗಳ ಸೇವೆಯು ಜನರನ್ನು ಸತಾಯಿಸುವಲ್ಲಿ ಕೆಲಸಮಾಡುತ್ತಿದೆ. ಹತ್ತು ರುಪಾಯಿ ನಾಣ್ಯದ ಅಪಮೌಲ್ಯದ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇನ್ನೂ 6 ರೇಷನ್ ಅಂಗಡಿಗಳನ್ನು ಸ್ಥಾಪಿಸಬಹುದಾಗಿದ್ದು ಸ್ವಸಹಾಯ ಸಂಘ, ಸ್ತ್ರೀಶಕ್ತಿ ಗುಂಪುಗಳು ಮತ್ತು ಸಹಕಾರಿ ಸಂಘಗಳು ಮುಂದೆ ಬಂದಲ್ಲಿ ಅವರಿಗೆ ಅಂಗಡಿ ತೆರೆಯಲು ಪ್ರಥಮ ಆದ್ಯತೆಯನ್ನು ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ಕೋಟೆಕಾರು ಪಟ್ಟಣ ಪಂಚಾಯತ್ ಪಟ್ಟಣ ಪಂಚಾಯತ್‍ನಲ್ಲಿ ಶೇ. 24.10, ಶೇ. 7.25 ಮತ್ತು ಶೇ. 3ರ ನಿಧಿಯಡಿ ವಿವಿಧ ಸೌಲಭ್ಯ ವಿತರಣಾ ಸಮಾರಂಭದಲ್ಲಿ ಶುಕ್ರವಾರ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದರು. ಸ್ಥಳೀಯ ಜನಪ್ರತಿನಿಧಿಗಳು ಕ್ರಮ ಪ್ರಕಾರವಾಗಿ ಕಾರ್ಯ ನಿರ್ವಹಿಸಿದಲ್ಲಿ ಗ್ರಾಮದ ಅಭಿವೃದ್ಧಿ ಸಾಧ್ಯ, ಕೋಟೆಕಾರು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿದ ಬಳಿಕ ನಗರೋತ್ಥಾನ ಯೋಜನೆಯಡಿ ರೂ. 5 ಕೋಟಿ ಅನುದಾನ ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಹೆಚ್ಚಿನ ಅನುದಾನಗಳು , ವಿವಿಧ ಸವಲತ್ತುಗಳು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸ್ಕಾಲರ್ ಶಿಪ್ ನಲ್ಲೂ ಏರಿಕೆಯಾಗಿದೆ. ಇದರ ಸದುಪಯೋಗವನ್ನು ಗ್ರಾಮಸ್ಥರು…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯತ್ ಆದ ನಂತರದ ಪ್ರಥಮ 2017-18 ನೇ ಸಾಲಿನ ಬಜೆಟ್ ಸಭೆ ಗುರುವಾರ ಪಂಚಾಯತ್‍ನಲ್ಲಿ ನಡೆದಿದ್ದು, ಒಟ್ಟು ಆದಾಯ 10.59 ಕೋಟಿ ಅನುದಾನದಡಿ ಲೆಕ್ಕಾಚಾರದಲ್ಲಿ ನಡೆದ ಬಜೆಟಿನಲ್ಲಿ 10.48 ಲಕ್ಷ ಖರ್ಚು ಅಂದಾಜಿಸಲಾಗಿದೆ ಮತ್ತು 10.60 ಲಕ್ಷ ಮಿಗತೆ ಬಜೆಟ್ ಮಂಡಿಸಲಾಗಿದ್ದು, ನೀರು ಮತ್ತು ಘನ ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಒತ್ತು ನೀಡುವ ಕುರಿತು ಚರ್ಚಿಸಲಾಯಿತು. ಸ್ವಯಂ ಘೋಷಿತ ಆಸ್ತಿ ತೆರಿಗೆ ಜಾರಿಯಲ್ಲಿ ರೂ. 1.60 ಲಕ್ಷ ಅಂದಾಜಿಸಿಲಾಗಿದೆ. ನೀರಿನ ಬಿಲ್ ಪಾವತಿಯಲ್ಲಿ ರೂ. 28 ಲಕ್ಷ, ನೀರಿನ ಅಭಾವ ಅನುದಾನದಡಿ ರೂ. 40 ಲಕ್ಷ, ವಿಪತ್ತು ನಿರ್ವಹಣಾ ಅನುದಾನದಡಿ ಜಿಲ್ಲಾಧಿಕಾರಿಯಿಂದ ರೂ. 20 ಲಕ್ಷ, ಪಟ್ಟಣ ಪಂಚಾಯಿತಿನ ರೂ. 30 ಲಕ್ಷ, ಕಟ್ಟಡ ಪರವಾನಿಗೆ ಮತ್ತು ಅಭಿವೃದ್ಧಿ ಶುಲ್ಕ ರೂ. 53 ಲಕ್ಷ , ಉದ್ದಿಮೆ ಪರವಾನಿಗೆಯಿಂದ ರೂ. 5 ಲಕ್ಷ , ಜಾಹೀರಾತು ಶುಲ್ಕ ರೂ. 25,000, ಘನತ್ಯಾಜ್ಯ ವಿಲೇವಾರಿ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ:ವಿದ್ಯಾರ್ಥಿಗಳು ಜೀವನದಲ್ಲೇ ಉತ್ತಮ ಉದ್ದೇಶದ ಮೂಲಕ ಕಾರ್ಯಪ್ರವೃತ್ತರಾಗಿ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳುವ ಮೂಲಕ ಸವಾಲುಗಳನ್ನು ಎದುರಿಸುವ ಗುಣಗಳನ್ನು ಬೆಳೆಸುವುದರಿಂದ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಅದಾನಿ ಉಡುಪಿ ಪವರ್ ಕಾರ್ಪೋರೇಶನ್ ಲಿಮಿಟೆಡ್‍ನ ಕಾರ್ಯಕಾರಿ ನಿರ್ದೇಶಕ ಕಿಶೋರ್ ಆಳ್ವ ತಿಳಿಸಿದರು. ಅವರು ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವ್ಯವಹಾರಗಳ ಸಂಶೋಧನಾ ಮತ್ತು ಸ್ನಾತಕೋತ್ತರ ಅಧ್ಯಯನ ವಿಭಾಗದ ಆಶ್ರಯದಲ್ಲಿ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರಸಂಕಿರಣ ಮತ್ತು ಸ್ನಾತಕೋತ್ತರ ವಾಣಿಜ್ಯ ಮತ್ತು ವ್ಯವಹಾರ ಉತ್ಸವ `ಮ್ಯಾಗ್ನಮ್’-2017 ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಆಧುನಿಕ ಸ್ಮಧ್ಮಾತ್ಮಕ ಯುಗದಲ್ಲಿ ತಂತ್ರಜ್ಞಾನ ಸೇರಿದಂತೆ ವಾಣಿಜ್ಯ ವ್ಯವಹಾರವು ಕ್ಷೇತ್ರವೂ ಬದಲಾವಣೆಯನ್ನು ಕಾಣುತ್ತಿತ್ತು ಹಲವಾರು ಸವಾಲುಗಳು ಎದುರಾಗುತ್ತಿವೆ. ಇಂತಹ ಆಧುನಿಕ ಸವಾಲುಗಳನ್ನು ಎದುರಿಸಿ ಮುನ್ನಡೆಸುವಲ್ಲಿ ಯುವಜನರ ಪಾತ್ರ, ಜವಾಬ್ಧಾರಿ ಮಹತ್ತರವಾಗಿದೆ. ದೇಶದ ಸುಸ್ಥಿರ ಅಭಿವೃದ್ಧಿಯಲ್ಲಿ ವಾಣಿಜ್ಯ ಮತ್ತು ವ್ಯವಹಾರ ಕ್ಷೇತ್ರವು ಪ್ರಮುಖವಾಗಿ ಗುರುತಿಸಲ್ಪಡುತ್ತದೆ. ನಾವು ವಿದ್ಯಾರ್ಥಿ ಜೀವನದಲ್ಲೇ ಉತ್ತಮ ಉದ್ದೇಶದ ಮೂಲಕ ಕಾರ್ಯಪ್ರವೃತರಾಗಿ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂದರು.…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಮಂಗಳೂರು : ದೇಶ ಡಿಜಿಟಲೀಕರಣದತ್ತ ಮುಖ ಮಾಡುತ್ತಿದ್ದು ಗ್ರಾಹಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಸಂಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುವುದು ಎಂದು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ ಅಧ್ಯಕ್ಷ ಕೆ.ಜೈರಾಜ್ ಬಿ.ರೈ ಅಭಿಪ್ರಾಯಪಟ್ಟರು. ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ .ಲಿ. ಮಂಗಳೂರು ಇದರ ವೆಲೆನ್ಸಿಯಾ ಶಾಖೆಯಲ್ಲಿ ಇತ್ತೀಚೆಗೆ ನಡೆದ ಗ್ರಾಹಕರ ಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ ನಿರ್ದೇಶಕರು ಹಾಗೂ ಶಾಖಾ ಸಲಹಾ ಸಮಿತಿಯ ಅಧ್ಯಕ್ಷ ಎಚ್.ರಾಮಯ ಶೆಟ್ಟಿ ಸಂಘವು ಸಹಕಾರಿ ತತ್ವದಡಿಯಲ್ಲಿ ಸ್ಥಾಪನೆಯಾಗಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ.ಗ್ರಾಹಕರ ಉತ್ತಮ ಸಹಕಾರದಿಂದ ಸಂಘವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ.ಕಳೆದ 8 ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ವೆಲೆನ್ಸಿಯಾ ಶಾಖೆಯು ಹೆಚ್ಚು ಲಾಭದತ್ತ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದರು. ಮುಖ್ಯ ಅತಿಥಿಯಾಗಿ ಸಂಘದ ಮಹಾಪ್ರಬಂಧಕ ಗಣೇಶ್ ಜಿ.ಕೆ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ 5 ಜನ ಉತ್ತಮ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೈರಂಗಳ: ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಬರಡು ಭೂಮಿಯಲ್ಲಿ ಫಲವತ್ತತೆ ಬರಲು ಸಾಧ್ಯವಿದ್ದು, ಇದಕ್ಕಾಗಿ ಶ್ರಮಿಸಿದ ಪಂಚಾಯತ್ ಸದಸ್ಯರ ಹಾಗೂ ಸಹಕರಿಸಿದ ಸಚಿವರ ಕಾರ್ಯ ಶ್ಲಾಘನೀಯ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ್ ಕರ್ಕೇರ ಹೇಳಿದ್ದಾರೆ.ಅವರು ಕೈರಂಗಳ ಗ್ರಾಮದ ಎರ್ಮಾಡಿ ಬಳಿ ರೂ. 50 ಲಕ್ಷ ಅನುದಾನದಲ್ಲಿ ನಿರ್ಮಾಣವಾಗಲಿರುವ ಕಿಂಡಿ ಅಣೆಕಟ್ಟಿಗೆ ಬುಧವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಎರ್ಮಾಡಿ, ಕೊಳ್ಳರಮಜಲು, ಬೇರೂರು ಪ್ರದೇಶದ ರೈತರಿಗೆ ಅನುಕೂಲವಾಗಲಿದೆ. ಈ ಭಾಗದ ಕೃಷಿಕರಿಗೆ ಸಹಕಾರ ಆಗುವ ರೀತಿಯಲ್ಲಿ ಸ್ಥಳೀಯ ಜಿ.ಪಂ ಸದಸ್ಯೆ, ತಾ.ಪಂ ಹಾಗೂ ಪಂ. ಸದಸ್ಯರ ಮನವಿಗೆ ಸ್ಪಂಧಿಸಿದ ಸಚಿವರು ಮಹತ್ತರ ಯೋಜನೆಗೆ ಅನುದಾನ ಒದಗಿಸಿರುವುದು ಭಾಗದ ರೈತರಿಗೆ ಸಂತಸದ ವಿಚಾರ. ಇದರ ಸದುಪಯೋಗದಿಂದ ಸ್ಥಳದಲ್ಲಿ ಉತ್ತಮವಾದ ಬೆಳೆ ಬೆಳೆಯಲಿ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ.ಡಿ.ಎಸ್.ಗಟ್ಟಿ ಮಾತನಾಡಿ ಕಿಂಡಿಅಣೆಕಟ್ಟು ನಿರ್ಮಾಣದಿಂದ ಪಾಳುಬಿದ್ದ ಕೃಷಿಭೂಮಿಗೆ ಫಲವತ್ತತೆ ಬರಲಿದೆ. ರೈತರಿಗೆ ಕೃಷಿ ಫಲಪ್ರದವಾಗಿ ಬೆಳೆಯಲು ಕಿಂಡಿಅಣೆಕಟ್ಟು…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿಯ ನೂತನ ಕಾರ್ಯಾಲಯವು ತೊಕ್ಕೊಟ್ಟು ಹೈಲ್ಯಾಂಡ್ ಕಾಂಪ್ಲೆಕ್ಸ್ ನ 3ನೇ ಮಹಡಿಯಲ್ಲಿ ಎ.2ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ ಎಂದು ಮಂಗಳೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ತಿಳಿಸಿದ್ದಾರೆ. ಅವರು ತೊಕ್ಕೊಟ್ಟುವಿನಲ್ಲಿ ಗುರುವಾರ ಆಯೋಜಿಸಿದ್ದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ತಳಮಟ್ಟದ ಕಾರ್ಯಕರ್ತರನ್ನು ಗುರುತಿಸುವ ಸಲುವಾಗಿ ಪ್ರತಿ ಬೂತ್ ಮಟ್ಟದ ಅಧ್ಯಕ್ಷರು ಹಾಗೂ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. 25 ಗ್ರಾಮಗಳು, 1 ನಗರಸಭೆ ಹಾಗೂ 1ಪಟ್ಟಣ ಪಂಚಾಯತಿನ ಎಲ್ಲಾ ಬೂತ್ ಸಮಿತಿ ಸದಸ್ಯರು, ಹಾಗೂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಜಿಲ್ಲೆಯಲ್ಲಿ ಮಾದರಿ ಕಾರ್ಯಾಲಯ ಆಗಿ ಕಾರ್ಯಾಚರಿಸಲಿದೆ ಎಂದ ಅವರು ಉಪಚುನಾವಣೆ ನಿಮಿತ್ತ ರಾಜ್ಯ ನಾಯಕರು ಬರಲು ಅನಾನುಕೂಲವಾಗಿರುವುದರಿಂದ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು…

Read More