ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ಜಮಾಹಿತುಲ್ ಮೊಹಲ್ಲಿಮೀನ್ ಇದರ ವತಿಯಿಂದ ದೇರಳಕಟ್ಟೆಯ ಸಿಟಿ ಗ್ರೌಂಡ್‍ನಲ್ಲಿ ನಡೆದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಧ್ವಜಾರೋಹಣಗೈದರು.
ಈ ಸಂದರ್ಭದಲ್ಲಿ ವಿದ್ಯಾರತ್ನ ಆಂಗ್ಲ ಮಾದ್ಯಮ ಶಾಲಾ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಹರೇಕಳ, ಸುರೇಶ್ ಬಿ. ಶೆಟ್ಟಿ, ಕಿನ್ಯಾ ಗ್ರಾಮ ಪಂಚಾಯತ್ ಸದಸ್ಯ ಮಹಾಬಲ ಪೂಂಜಾ, ಬೆಳ್ಮ ಗ್ರಾಮ ಪಂಚಾಯತ್ ಸದಸ್ಯ ಕಬೀರ್ ಡಿ, ಕೇಂದ್ರ ಬದ್ರಿಯಾ ಜುಮಾ ಮಸೀದಿಯ ಮಾಜಿ ಆದ್ಯಕ್ಷ ಇಸ್ಮಾಯಿಲ್, ಅಧ್ಯಕ್ಷ ಅಬೂಬಕ್ಕಾರ್, ಕೆ.ಎಸ್. ಎಸ್‍ಕೆಎಸ್‍ಎಸ್‍ಎಫ್ ಜಿಲ್ಲಾ ಉಪಾಧ್ಯಕ್ಷ ಫಾರೂಕ್ ಕಲ್ಲಡ್ಕ, ಸಂಶುಲ್ಲಾ ಉಲಮಾ ಇಸ್ಲಾಮಿಕ್ ದೇರಳಕಟ್ಟೆ ಇದರ ಅಧ್ಯಕ್ಷ ಅಹಮ್ಮದ್ ಸಿರಾಜ್ ತಾಜ್, ಮಹಮ್ಮದ್ ಪನೀರ್, ಲತೀಫ್ ದಾರಿಮಿ, ಫಾರೂಕ್ ದಾರಿಮಿ, ಯಾಸರ್ ಅರಾಫತ್, ಕೆ.ಯು. ಖಲೀಲ್ , ರಹಮಾನ್ ಅರ್ಷದಿ ಉಪಸ್ಥಿತರಿದ್ದರು.


