nwsdsk ull ಸೊಮೇಶ್ವರ: ಮನುಷ್ಯ ಸ್ವಾರ್ಥಿ ಎಂದು ಜನರು ಆಡಿಕೊಳ್ಳುವುದು ಸುಳ್ಳು. ರಕ್ತದಾನ ಶಿಬಿರಗಳಲ್ಲಿ ಅದೆಷ್ಟೋ ಗುರುತು ಪರಿಚಯವಿಲ್ಲದವರ ಜೀವ ಉಳಿಸುವ ಕಾರ್ಯ ನಡೆಯುತ್ತದೆ. ದಾನಿಗಳಿಗೆ ಆ ತೃಪ್ತಿ ಸಿಗುತ್ತದೆ. ನಮ್ಮ ವೈಯಕ್ತಿಕ ಬದುಕನ್ನು ಬೆಳಗಿಸುವ ಚಿಂತನೆ ನಮ್ಮಲ್ಲಿದ್ದು ಅದರಷ್ಟೆ ಯೋಚನೆ ಇತರರ ಜೀವ ಉಳಿಸುವಲ್ಲೂ ಇರಬೇಕು. ನಾವು ಸನ್ಮಾರ್ಗ, ಸತ್‍ಚಿಂತನೆ, ಉತ್ತಮ ಆದರ್ಶ, ಧ್ಯೇಯಗಳೊಂದಿಗೆ ಸಮಾಜ ಸೇವೆ ಮಾಡುತ್ತಾ ಬದುಕಿದಾಗ ಅದನ್ನು ಇತರರು ಮಾದರಿಯಾಗಿ ಸ್ವೀಕರಿಸುತ್ತಾರೆ. ಅವರು ಭಾನುವಾರ ಕೋಟೆಕಾರು ಬೀರಿಯ ಸಾರ್ವಜನಿಕ ಶ್ರೀ ಗಣೇಶ ಸೇವಾ ಸಮಿತಿಯ ನೇತೃತ್ವದಲ್ಲಿ ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಆಸ್ಪತ್ರೆಯ ಸಹಯೋಗದೊಂದಿಗೆ ಜೆ.ಎಸ್.ಆಸ್ಪತ್ರೆ ಕೋಟೆಕಾರು, ಓಂ ಶಕ್ತಿ ಫ್ರೆಂಡ್ಸ್ ಸಂಕೊಳಿಗೆ, ನವಚೇತನ ಫ್ರೆಂಡ್ಸ್ ಸಂಕೊಳಿಗೆ ಹಾಗೂ ಸ್ನೇಹ ಸಂಗಮ ಉಚ್ಚಿಲ ತಂಡಗಳ ಸಂಯುಕ್ತ ಆಶ್ರಯದಲ್ಲಿ ಕೋಟೆಕಾರಿನ ಸ್ಟೆಲ್ಲಾ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೆ.ಎಸ್.ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ವಿಜಯ್ ಕುಮಾರ್ ಶಿಬಿರ ಉದ್ಘಾಟಿಸಿದರು.…
Author: UllalaVani
ಉಳ್ಳಾಲ : ಇತಿಹಾಸ ಪ್ರಸಿದ್ಧ ಉಳ್ಳಾಲ ಉರೂಸ್ ಪೂರ್ವಭಾವಿಯಾಗಿ ಉಳ್ಳಾಲ ನಗರ ಸಭಾ ವ್ಯಾಪ್ತಿಯ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 2 ಕೋಟಿ ರೂ ಪ್ರಸ್ತಾವನೆ ಸಲ್ಲಿಸಿದ್ದು, ಮುಂದಿನ ಒಂದು ತಿಂಗಳೊಳಗೆ ಎಲ್ಲಾ ಕಾಮಗಾರಿಗಳು ಮುಗಿಯಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದರು. ಅವರು ಉಳ್ಳಾಲ ಉರೂಸ್ ಪೂರ್ವ ಭಾವಿಯಾಗಿ ಉಳ್ಳಾಲ ನಗರಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ನಡೆಸಿ ಉರೂಸ್ ಕಾರ್ಯಕ್ರಮದ ಸಂದರ್ಭದಲ್ಲಿ ದೇಶ ವಿದೇಶದಿಂದ ಬರುವ ಯಾತ್ರಾರ್ಥಿಗಳಿಗೆ ಯಾವುದೇ ಅಡೆ ತಡೆಯಾಗದ ರೀತಿಯಲ್ಲಿ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪುವಿನಿಂದ ಉಳ್ಳಾಲ ಸಂಪರ್ಕಿಸುವ ರಸ್ತೆವರೆಗೆ ಮತ್ತು ತಲಪಾಡಿಯಿಂದ ತೊಕ್ಕೊಟ್ಟುವರೆಗೆ ರಸ್ತೆ ಅಭಿವೃದ್ಧಿ ಮತ್ತು ಸರ್ವಿಸ್ ರಸ್ತೆ ನಿರ್ಮಾಣವನ್ನು ಪೂರ್ತಿಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ , ಪಿಡಬ್ಲುಡಿ ಅಧಿಕಾರಿಗಳಿಗೆ ಸೂಚಿಸಿದರು. ಉಳ್ಳಾಲದಲ್ಲಿ ಕುಡಿಯುವ ನೀರು, ಒಳರಸ್ತೆಗಳ ಅಭಿವೃದ್ಧಿಗೆ ಅನುದಾನ ಸೇರಿದಂತೆ, ತುರ್ತುಸೇವೆಗೆ ಸಂಬಂಧಿಸಿದಂತೆ ಅಗ್ನಿಶಾಮಕದಳ, ಶಾಂತಿ ಸುವ್ಯವಸ್ಥೆಯ ನಿಟ್ಟಿನಲ್ಲಿ ಪೊಲೀಸ್ ಇಲಾಖೆ…
ಉಳ್ಳಾಲ : ಯುಗಧರ್ಮದಂತೆ ಬದಲಾವಣೆ ಸಹಜವಾಗಿದ್ದು ಧಾರ್ಮಿಕ ವ್ಯವಸ್ಥೆಯಲ್ಲಿಯೂ ಬದಲಾವಣೆ ಅನಿವಾರ್ಯ. ಹಿಂದಿನ ಕಾಲದ ವ್ಯವಸ್ಥೆಗಳನ್ನು ಪ್ರಸ್ತುತ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿದಾಗ ಅದನ್ನು ವಿರೋಧಿಸುವುದಕ್ಕಿಂತ ಒಪ್ಪಿಕೊಳ್ಳಬೇಕಾಗುತ್ತದೆ. ಯಾಕೆಂದರೆ ವಿಶಾಲವಾಗಿರುವ ಹಿಂದೂ ಧರ್ಮವನ್ನು ಅರಿತುಕೊಳ್ಳುವುದೇ ಬಹಳಷ್ಟಿರುವಾಗ ಅಲ್ಪಸ್ವಲ್ಪ ತಿಳಿದುಕೊಂಡು ಅದರಲ್ಲಿನ ಆಚರಣೆ, ಪದ್ಧತಿಗಳು, ನಂಬಿಕೆಗಳನ್ನು ಅರ್ಥೈಸಿಕೊಳ್ಳದೆ ನಿಂದಿಸುವುದು ತಪ್ಪು ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಮಂಗಳೂರು ಆವೃತ್ತಿಯ ಮುಖ್ಯ ಪ್ರಸರಣಾಧಿಕಾರಿ ನವನೀತ ಶೆಟ್ಟಿ ಕದ್ರಿ ಅಭಿಪ್ರಾಯಪಟ್ಟರು. ತಲಪಾಡಿ ದೇವಿಪುರದ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರು ಹಾಗೂ ಪರಿವಾರ ದೇವರುಗಳ ಪುನರ್ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆಯುತ್ತಿರುವ ಆರನೆಯ ದಿನದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ವಿಶ್ವಾಮಿತ್ರ ನಾಯಿ ಮಾಂಸ ತಿಂದನೆಂದು ಅವರನ್ನು ದೂಷಿಸುವುದಕ್ಕಿಂತ ವಿಶ್ವಾಮಿತ್ರರು ನಾಯಿ ಮಾಂಸವನ್ನು ಮಂತ್ರಶಕ್ತಿಯಿಂದ ಸ್ವಚ್ಛಗೊಳಿಸಿ ತಿಂದು, ಆ ಮೂಲಕ ಭೂಲೋಕದ ಬರಗಾಲವನ್ನು ದೇವತೆಗಳಿಗೆ ತಿಳಿಸುವ ಪ್ರಯತ್ನವನ್ನು ಮಾಡಿದ್ದರು ಎಂಬ ಮರ್ಮ ಅರಿಯದವರು ಹಿಂದೂಗಳನ್ನು ದೂರದೆ…
ಮಂಗಳೂರು: ಚಿತ್ರಕಲಾ ಶಿಕ್ಷಣ, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕ. ಸಮರ್ಥ ಕಲಾ ಶಿಕ್ಷಕನೊಬ್ಬ ಏನೂ ಅಲ್ಲದ ವಿದ್ಯಾರ್ಥಿಯನ್ನೂ ಮುಗಿಲೆತ್ತರಕ್ಕೆ ಬೆಳೆಸಬಲ್ಲವನಾಗಿದ್ದು ಮಕ್ಕಳ ಮಾನಸಿಕ ನೆಮ್ಮದಿಗೆ ಕಾರಣನಾಗಿರುತ್ತಾನೆ ಎಂದು ಡಯಟ್‍ನ ಪ್ರಾಂಶುಪಾಲರಾದ ಶ್ರೀ ಸಿಪ್ರಿಯನ್ ಮೊಂತೆರೋ ತಿಳಿಸಿದರು. ಅವರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಸಹಯೋಗದೊಂದಿಗೆ ಇತ್ತೀಚೆಗೆ ನಡೆದ ದಕ್ಷಿಣ ಕನ್ನಡ ಚಿತ್ರಕಲಾ ಶಿಕ್ಷಕರ ಸಂಘದ ತಿಂಗಳ ಕಾರ್ಯಾಗಾರವನ್ನು ನಗರದಲ್ಲಿ ಉದ್ಘಾಟಿಸಿ ಮಾತಾನಾಡಿದರು. ಮುಖ್ಯ ಅತಿಥಿಗಳಾಗಿ ಕಲಾವಿದ ಬಿ.ಗಣೇಶ ಸೋಮಯಾಜಿ ಚಿತ್ರಕಲಾ ಶಿಕ್ಷಕರು ಕಾಲಕ್ಕೆ ತಕ್ಕ ಬದಲಾಗುತ್ತಾ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ವಿದ್ಯಾರ್ಥಿಗಳು ಇನ್ನೂ ಎತ್ತರಕ್ಕೆ ಬೆಳೆಯುವುದಕ್ಕೆ ಕಾರಣರಾಗಬೇಕು ಎಂದರು. ತಿಂಗಳ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿಯ ಚಿತ್ರಕಲಾ ಶಿಕ್ಷಕ ಶ್ರೀ ಭೋಜ ಹಾಂಡ ನಿರಂತರ ಮತ್ತು ವ್ಯಾಪಕಮೌಲ್ಯ ಮಾಪನದ ಬಗ್ಗೆ ಮಾರ್ಗದರ್ಶನ ನೀಡಿದರು. ಜಿಲ್ಲೆಯ ಸುಮಾರು 100 ಮಂದಿ ಚಿತ್ರಕಲಾ ಶಿಕ್ಷಕರು ಇದರ ಸದುಪಯೋಗ ಪಡೆದುಕೊಂಡರು. ಅಧ್ಯಕ್ಷರಾಗಿ ಮಾತನಾಡಿದ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀ ಮಹಾಬಲ ಕುಳ…
ದೇರಳಕಟ್ಟೆ, ಜ.೨೩: ಬದ್ರಿಯಾ ಕೇಂದ್ರ ಜುಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದರಸ ದೇರಳಕಟ್ಟೆ ಇದರ ಆಶ್ರಯದಲ್ಲಿ ಮೀಲಾದುನ್ನಬಿ ಹಾಗೂ ಮೀಲಾದ್ ಫೆಸ್ಟ್ ೨೦೧೫ ಕಾರ್ಯಕ್ರಮವು ಜಮಾಅತ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿಯವರ ಅಧ್ಯಕ್ಷತೆಯಲ್ಲಿ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ಥಳೀಯ ಖತೀಬರಾದ ಬಹು| ಏ.ಒ ಶರೀಫ್ ದಾರಿಮಿಯವರು ಮಾತನಾಡಿ ಪೈಗಂಬರ ಸಂದೇಶವನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು, ನೆರೆಮನೆಯವನು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ನನ್ನವನಲ್ಲ ಎಂಬ ಪ್ರವಾದಿ ನುಡಿಯನ್ನು ಅರ್ಥೈಸಿಕೊಂಡು ಸಮಾಜದಲ್ಲಿ ಆಡಂಬರ ಮದುವೆಗೆ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಇದ್ದು ಆಡಂಬರ ಮದುವೆಯ ಆಮಂತ್ರಣವನ್ನು ಆಯಾ ಜಮಾಅತಿನ ಖತೀಬರಿಗೆ ನೀಡದಿರುವುದೇ ಲೇಸು ಎಂದು ಹೇಳಿದರು. ಆರಂಭದಲ್ಲಿ ಮಸೀದಿ ಗೌರವಾಧ್ಯಕ್ಷರಾದ ಅಬ್ದುಲ್ಲಾ ಹಾಜಿಯವರು ಧ್ವಜಾರೋಹಣಗೈದರು. ನಂತರ ಹಯಾತುಲ್ ಇಸ್ಲಾಂ ಮದರಸ ದೇರಳಕಟ್ಟೆ, ಅರಫಾ ಮದರಸ ಜಲಾಲ್‌ಬಾಗ್ ಹಾಗೂ ಮನಾರುಲ್ ಹುದಾ ಮದರಸ ದೇರಳಕಟ್ಟೆ, ಅರಫಾ ಮದರಸ ಜಲಾಲ್‌ಬಾಗ್ ಹಾಗೂ ಮನಾರುಲ್ ಹುದಾ ಮದರಸ ಗ್ರೀನ್ ಗ್ರೌಂಡ್ ಇಲ್ಲಿನ ಮದರಸ ವಿದ್ಯಾರ್ಥಿಗಳ ಸ್ಕೌಟ್ ಮತ್ತು ದಫ್ ನೊಂದಿಗೆ…
ಉಳ್ಳಾಲ: ಬಡವರ ಅಂಗಡಿಗಳನ್ನೇ ಗುರಿಯಾಗಿಸಿ ನಡೆಸುತ್ತಿರುವ ಕಿಡಿಗೇಡಿಗಳು ಕೃತ್ಯ ಖಂಡನೀಯ. ಉಳ್ಳಾಲ ನಗರಸಭೆ ಮತ್ತು ಟೈಲರ್‍ಸ್ ಅಸೋಸಿಯೇಷನ್ ಆಶ್ರಯದಲ್ಲಿ ಮತ್ತೆ ಅಂಗಡಿಯಲ್ಲಿ ವ್ಯಾಪಾರ ನಡೆಸುವಂತೆ ಎಲ್ಲಾ ರೀತಿಯಲ್ಲಿ ಸಹಕರಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಅವರು ತೊಕ್ಕೊಟ್ಟು ಕಿಡಿಗೇಡಿಗಳು ಬೆಂಕಿ ಹಾಕಿರುವ ಟಿ.ಸಿ.ರೋಡ್ ನಲ್ಲಿರುವ ವಾಸುದೇವ ಪೂಜಾರಿ ಎಂಬವರಿಗೆ ಸೇರಿದ ನಿತ್ಯಾನಂದ ಟೈರ್‍ಸ್ ಅಂಗಡಿಗೆ ಭೇಟಿ ನೀಡಿ ಹೇಳಿದರು. ತೊಕ್ಕೊಟ್ಟು ಒಳಪೇಟೆಯಲ್ಲಿರುವ ಎರಡು ಸಿಸಿಟಿವಿ ಕೆಮರಾ ಮೂಲಕ ಆರೋಪಿಗಳನ್ನು ಪತ್ತೆಹಚ್ಚುವ ಕಾರ್‍ಯ ಪೊಲೀಸರು ಶೀಘ್ರವೇ ನಡೆಸುತ್ತಾರೆ. ಶೇ.೫ ರಷ್ಟಿರುವ ಕಿಡಿಗೇಡಿಗಳು ಇಂತಹ ಕೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಇದನ್ನು ಧರ್ಮ ಆಧಾರಿತವಾಗಿ ತೆಗೆದುಕೊಳ್ಳದೆ, ಸಮಾಜದ್ರೋಹಿಗಳ ಮತ್ತು ಬಡವರ ನಡುವಿನ ಹೋರಾಟ ಎಂದು ಪರಿಗಣಿಸಿ ಆರೋಪಿಗಳ ಪತ್ತೆಗೆ ಎಲ್ಲರೂ ಸಹಕರಿಸಬೇಕು ಎಂದರು. ಈ ಸಂದರ್ಭ ಉಳ್ಳಾಲ ನಗರಸಭೆ ಅಧ್ಯಕ್ಷೆ ಗಿರಿಜಾ ಬಾ, ಉಪಾಧ್ಯಕ್ಷೆ ರಝಿಯಾ ಇಬ್ರಾಹಿಂ, ಟೈಲರ್‍ಸ್ ಅಸೋಸಿಯೇಷನ್ ಮಾಜಿ ಜಿಲ್ಲಾಧ್ಯಕ್ಷ ರಮೇಶ್ ಮಾಡೂರು, ಉಳ್ಳಾಲ ಎಸ್.ಐ.ಗಳಾದ ಭಾರತಿ, ರಾಜೇಂದ್ರ, ಟೈಲರ್‍ಸ್ ಅಸೋಸಿಯೇಷನ್ನಿನ ಗಿರೀಶ್,…
ಉಳ್ಳಾಲ: ಮನುಷ್ಯ ಸುಖವನ್ನು ಅರಸುತ್ತಾ ಸಾಗಿದ್ದು ಇನ್ನೂ ತೃಪ್ತನಾಗಿಲ್ಲ. ಪ್ರಯಾಣದಲ್ಲಿರುವ ವ್ಯಕ್ತಿಯೊಬ್ಬ ಮಳೆ ಬರುವಾಗ ನಿಂದಿಸಿದರೆ, ಅದುವೇ ರೈತ ಹರ್ಷಗೊಳ್ಳುತ್ತಾನೆ. ಆಂಗ್ಲರು ಬ್ರೆಡ್ ತಿಂದು ಸಂತಸ ಪಟ್ಟರೆ ನಮ್ಮ ಜಿಲ್ಲೆಯವರು ಗಂಜಿ ಊಟದಲ್ಲಿ ತೃಪ್ತಿಪಟ್ಟುಕೊಳ್ಳಬಹುದು. ಹಾಗಾಗಿ ಸುಖ ಎಂಬುದು ವ್ಯಕ್ತಿ, ಸಮಾಜ, ನಾಡು, ಕಾಲ ಕಾಲಕ್ಕೆ ಬದಲಾಗುತ್ತದೆ ಎಂದು ಧರ್ಮಸ್ಥಳ ನಿತ್ಯಾನಂದನಗರ ಶ್ರೀರಾಮ ಕ್ಷೇತ್ರ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನದಲ್ಲಿ ನುಡಿದರು. ತಲಪಾಡಿ ದೇವಿಪುರದ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರು ಹಾಗೂ ಪರಿವಾರ ದೇವರುಗಳ ಪುನರ್ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆಯುತ್ತಿರುವ ಐದನೆಯ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಮನುಷ್ಯನಾಗಿ ಹುಟ್ಟಿದ ಮೇಲೆ ನಮ್ಮ ಲಕ್ಷ ್ಯ ಆತ್ಮನ ಸಾಕ್ಷಾತ್ಕಾರದತ್ತ ಇರಬೇಕು. ಮಗು ತಾಯಿಯ ಗರ್ಭದಿಂದ ಬಂದ ಕೂಡಲೇ ಮೂರು ಗುಣಗಳಿಂದ ಆವರಿಸಲ್ಪಡುತ್ತದೆ. ಅಕ್ಕಸಾಲಿಗನೊಬ್ಬ ಶುದ್ಧ ಅಪರಂಜಿ ಚಿನ್ನವಾದರೂ ಅದನ್ನು ಸುಂದರ ಹಾಗೂ ಗಟ್ಟಿಬಂಗಾರ ಮಾಡಲು ಅದಕ್ಕೆ ಸ್ವಲ್ಪ…
ಉಳ್ಳಾಲ: ಯುವಜನಾಂಗಕ್ಕೆ ಧಾರ್ಮಿಕ ಪ್ರಜ್ಞೆ ಮೂಡಿಸುವ ಸಲುವಾಗಿ ಹಲವು ಮೂಲಗಳಿಂದ ಮಾಹಿತಿ ಸಂಗ್ರಹಿಸಿ, ಭಾಷಾಂತರಿಸಿ, ತಾಳೆಗರಿಯಲ್ಲಿರುವ ವಿಷಯ ಸಂಕಲ್ಪಿಸಿ ಕನ್ನಡದ ಓದುಗರಿಗೆ ಸುಲಭವಾಗಿ ತಿಳಿಸುವ ಉದ್ದೇಶದಿಂದ ಧರ್ಮ ಜ್ಞಾನ ಪುಸ್ತಕವನ್ನು ರಚಿಸಲಾಗಿದೆ ಎಂದು ಲೇಖಕ, ತೀಯ ಸಮಾಜದ ಒಂದನೇ ಗುರಿಕಾರ ಪ್ರಕಾಶ್.ಎಂ.ಉಳ್ಳಾಲ್ ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟು ಕ್ಲಿಕ್ ಸಭಾಭವನದಲ್ಲಿ ತೊಕ್ಕೊಟ್ಟು ಬಿ.ಬಿ.ಸಿ ಪ್ರಕಾಶನದಡಿ ಮುದ್ರಣಗೊಂಡ `ಧರ್ಮ ಜ್ಞಾನ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದು ಆಚರಣೆಗಳಲ್ಲಿ ಹಲವು ನಂಬಿಕೆಗಳಿವೆ. ಅವೆಲ್ಲದಕ್ಕೂ ವೈಜ್ಞಾನಿಕ ಕಾರಣಗಳು ಇವೆ. ಇದನ್ನು ಯುವಜನಾಂಗಕ್ಕೆ ಪರಿಚಯಿಸುವ ಪ್ರಯತ್ನ ಪುಸ್ತಕದಲ್ಲಿದೆ. ಹಿಂದು ಸಮಾಜೋತ್ಸವದಲ್ಲಿ ಹೆಚ್ಚು ಯುವಜನಾಂಗ ಭಾಗವಹಿಸುವುದರಿಂದ ಅಲ್ಲಿಯೂ ಪುಸ್ತಕದ ಪ್ರಚಾರ ನಡೆಯಲಿದೆ ಎಂದರು. ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ ಕಾರ್ಯದರ್ಶಿ ಪದ್ಮನಾಭ ಮಾಡೂರು ಕಾರ್ಯಕ್ರಮ ಉದ್ಘಾಟಿಸಿದರು. ಉಳ್ಳಾಲ ತೀಯ ಸ್ವಸಹಾಯ ಸಂಘದ ಕಾರ್ಯದರ್ಶಿ ಪವನ್ ರಾಜ್ ಕೊಲ್ಯ, ನಿತಿನ್ ರಾಜ್ ಮಾಸ್ತಿಕಟ್ಟೆ, ಉದ್ಯಮಿ ಚಂದ್ರಕಾಂತ್ ತೊಕ್ಕೊಟ್ಟು, ಸತೀಶ್ ಫನಿಕರ್, ಸುರೇಂದ್ರ ಗಂಡಿ ಉಪಸ್ಥಿತರಿದ್ದರು. ತೀಯ ಸಮಾಜದ…
ಉಳ್ಳಾಲ: ಯಾವುದೇ ಪ್ರದೇಶದ ಅಭಿವೃದ್ಧಿ ಆಗಬೇಕಾದರೆ ಆ ಭಾಗದ ಜನತೆ ಹಾಗೂ ಜವಾಬ್ದಾರಿಯುತ ಸಂಘ ಸಂಸ್ಥೆಗಳು ಸಂಘಟನೆಗಳ ಪಾತ್ರ ಬಹು ಮುಖ್ಯ. ಆ ನಿಟ್ಟಿನಲ್ಲಿ ನರಿಂಗಾನ ಗ್ರಾಮದ ಸೌರ್ಕುಡೇಲಿನಲ್ಲಿ ನೂತನ ಕಿರು ಸೇತುವೆ ನಿರ್ಮಾಣಕ್ಕಾಗಿ ಸಂಘ ಸಂಸ್ಥೆಗಳು ಹಾಗೂ ಇಲ್ಲಿನ ಜನರು ವಿವಿಧ ರೀತಿಯಲ್ಲಿ ಶ್ರಮಿಸಿದ್ದಾರೆ. ನೂತನ ಸೇತುವೆ ನಿರ್ಮಾಣದ ಮೂಲಕ ಅವರೆಲ್ಲರ ನಿರೀಕ್ಷೆ ಶೀಘ್ರದಲ್ಲಿ ಈಡೇರಲಿದ್ದು, ಈ ಯೋಜನೆಗೆ ಸಹಕರಿಸಿದ ಎಲ್ಲರೂ ಅಭಿನಂದನಾರ್ಹರು ಎಂದು ರಾಜ್ಯಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಆಭಿಪ್ರಾಯಪಟ್ಟರು. ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್‍ನಿಂದ ತೌಡುಗೋಳಿ ಸಂಪರ್ಕ ರಸ್ತೆಯ ಸರ್ಕುಡೇಲಿನಲ್ಲಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಕಿರು ಸೇತುವೆಗೆ ಭಾನುವಾರ ಶಿಲಾನ್ಯಾಸಗೈದು ಅವರು ಮಾತನಾಡಿದರು. ನರಿಂಗಾನ ಭಾಗದ ಅತಿಮುಖ್ಯ ಸೇತುವೆ ಸರ್ಕುಡೇಲು ಸೇತುವೆ ಕೇರಳ ಹಾಗೂ ಕರ್ನಾಟಕ ಗಡಿಭಾಗದಲ್ಲಿ ಪ್ರಮುಖ ಕೊಂಡಿಯೇ ಆಗಿದೆ. ಸೇತುವೆ ನಿರ್ಮಾಣ ಕಾಲದಲ್ಲಿ ಇಲ್ಲಿನ ಭೂಮಾಲೀಕರು ಪರೋಪಕಾರಿ ಭಾವನೆ ತೋರಿದ ಹಿನ್ನೆಲೆಯಲ್ಲಿ ಸುಮಾರು ಐದು ದಶಕಗಳ ಹಿಂದೆಯೇ ಈ ವ್ಯಾಪ್ತಿಯಲ್ಲಿ…
ಉಳ್ಳಾಲ, ಫೆ. 15: ವಿಶ್ವಹಿಂದೂ ಪರಿಷತ್ ಸುವರ್ಣ ಮಹೋತ್ಸವದ ಅಂಗವಾಗಿ ಮಾ 1ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯುವ ಹಿಂದೂ ಸಮಾಜೋತ್ಸವದ ಪೂರ್ವಭಾವಿಯಾಗಿ ಭಾನುವಾರ ಅಸೈಗೋಳಿಯಿಂದ ಕುತ್ತಾರುವರೆಗೆ ಬೈಕ್ ರ‌್ಯಾಲಿ ನಡೆಯಿತು. ಅಸೈಗೋಳಿಯಿಂದ ದೇರಳಕಟ್ಟೆ , ಕುಂಪಲ, ಕೋಟೆಕಾರು ಬೀರಿ, ಮಾಡೂರು, ಸೋಮೇಶ್ವರ , ತೊಕ್ಕೊಟ್ಟು , ಉಳ್ಳಾಲ ಮಾರ್ಗವಾಗಿ ಕುತ್ತಾರು ಶ್ರೀ ಸಿದ್ಧಿವಿನಾಯಕ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸಮಾಪನಗೊಂಡಿತು. ಬೈಕ್ ರ್ಯಾಲಿಗೆ ವಿಶ್ವಹಿಂದೂ ಪರಿಷತ್ ಮಾಜಿ ಕಾರ್ಯದರ್ಶಿ ಹಾಗೂ ನಿವೃತ್ತ ಅಧ್ಯಾಪಕ ವೆಂಕಪ್ಪ ಮಾಸ್ಟರ್ ಅಸೈಗೋಳಿ ಚಾಲನೆ ನೀಡಿದರು. ಹಿರಿಯರಾದ ಟಿ. ಅಂಬು, ವಿಶ್ವಹಿಂದೂ ಪರಿಷತ್ ನ ಜಿಲ್ಲಾ ಕಾರ್ಯದರ್ಶಿ ಗೋಪಾಲ ಕುತ್ತಾರ್, ಬಜರಂಗದಳದ ಜಿಲ್ಲಾ ಸಹ ಸಂಚಾಲಕ ಪ್ರವೀಣ್ ಕುತ್ತಾರ್, ಪ್ರಖಂಡ ಸಂಚಾಲಕ ರವಿ ಅಸೈಗೋಳಿ, ಬಜೆಪಿ ಕೊಣಾಜೆ ಗ್ರಾಮ ಸಮಿತಿ ಅಧ್ಯಕ್ಷ ನಾರಾಯಣ ರೈ ಕ್ಕೆಮಜಲು, ವಿಶ್ವಹಿಂದೂ ಪರಿಷತ್ನ ಪ್ರಖಂಡ ಕಾರ್ಯದರ್ಶಿ ಬಿ.ನಾರಾಯಣ ಕುಂಪಲ, ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ರ‌್ಯಾಲಿ ಭಾಗವಹಿಸಿದರು.…

