ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಹೋಲಿಕೆ ಎಂಬ ಗುಣ ಮಾರಕವಾಗಿದ್ದು,ಇಂತಹ ವ್ಯಕ್ತಿತ್ವವನ್ನು ಹೊಂದಿರುವವರು ಜೀವನದಲ್ಲಿ ಯಶಸ್ವಿ ಕಾಣಲು ಅಸಾಧ್ಯ ಎಂದು ಯೆನೆಪೋಯ ವೈದ್ಯಕೀಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ವಿಜಯ ಕುಮಾರ್ ಅಭಿಪ್ರಾಯಪಟ್ಟರು.ಅವರು ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ದೇರಳಕಟ್ಟೆ ಸಭಾಂಗಣದಲ್ಲಿ ಬುಧವಾರ ನಡೆದ ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಘಟಕ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಹೋಮಿಯೋಪತಿ ಪದವಿ ಹಾಗೂ ಹೋಮಿಯೋಪಥಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ 27 ನೇ ಪದವಿ ಪ್ರಧಾನದಲ್ಲಿ ಘಟಿಕೋತ್ಸವ ಭಾಷಣ ನೆರವೇರಿಸಿದರು. ಪ್ರಾರ್ಥನೆ, ತಾಳ್ಮೆ, ಗ್ರಹಿಸುವಿಕೆ ಈ ಮೂರು ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಯಶಸ್ವಿಯನ್ನು ಕಾಣಬಹುದಾಗಿದೆ. ವೈದ್ಯಕೀಯ ವೃತ್ತಿಯಲ್ಲಿ ಹಣ ಸಂಪಾದಿಸುವುದು ಸುಲಭ ಎಂಬ ಕಾರಣಕ್ಕಾಗಿ ಈ ವೃತ್ತಿಯನ್ನು ಆಯ್ಕೆ ಮಾಡಕೊಳ್ಳದೆ ಸಮಾಜದಲ್ಲಿ ಗೌರವಯುತವಾದ ವೈದ್ಯರಾಗಿ ರೋಗಿಗಳ ಸೇವೆಯನ್ನು ಮಾಡುವ ಗುರಿಯನ್ನು ಹೊಂದುವ ಮೂಲಕ ಯಶಸ್ವಿ ವೈದ್ಯನಾಗಲು ಸಾಧ್ಯ. ಪರಸ್ಪರ ವ್ಯಕ್ತಿತ್ವದ ಹೋಲಿಕೆಯನ್ನು ಮಾಡಿಕೊಳ್ಳುವುದರಿಂದ ಅಸೂಯೆಯ ಭಾವನೆ ಬೆಳೆದುಕೊಳ್ಳುತ್ತದೆ. ಇದರಿಂದ ಆತ್ಮವಿಶ್ವಾಸ…
Author: UllalaVani
ಉಳ್ಳಾಲ್‍ನ್ಯೂಸ್ ನೆಟ್‍ವರ್ಕ್ ಉಳ್ಳಾಲ: 4 ದಿನಗಳಿಗೊಮ್ಮೆ ಕುಡಿಯುವ ನೀರು ಕೊಡುತ್ತಿರುವ ಸರಕಾರಗಳು, ಜನರನ್ನು ಕೆಲಸಕ್ಕೆ ಹೋಗದೆ ನೀರಿಗಾಗಿ ಅಲೆದಾಟ ನಡೆಸುವಂತಹ ವಾತಾವರಣವನ್ನು ನಿರ್ಮಿಸಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಕೃಷ್ಣಪ್ಪ ಸಾಲ್ಯಾನ್ ಅಭಿಪ್ರಾಯಪಟ್ಟರು. ಅವರು ಬೆಲೆ ಏರಿಕೆ ವಿರೋಧಿಸಿ ಸಿಪಿಐಎಂ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಶ್ರೀಮಂತರನ್ನು ರಕ್ಷಿಸುವ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ಬಡ, ಮಾಧ್ಯಮ ವರ್ಗದವರು ಬೀದಿಪಾಲಾಗುವಂತಹ ಸ್ಥಿತಿ ಉದ್ಭವಿಸಿದೆ. ಕುಡಿಯುವ ನೀರನ್ನೇ ಪೂರೈಸಲಾಗದ ಸರಕಾರ ಮತ್ತೆ ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್, ದಿನಬಳಕೆ ವಸ್ತುಗಳಿಗೂ ಬೆಲೆ ಏರಿಕೆ ಮಾಡುವ ಮೂಲಕ ಚುನಾವಣೆ ವೇಳೆ ನೀಡಿದ ಭರವಸೆಯನ್ನೇ ಸುಳ್ಳಾಗಿಸಿದ್ದಾರೆ. ಕನಿಷ್ಠ ನೀರಿನ ವ್ಯವಸ್ಥೆಯಲ್ಲಾದರೂ ಸ್ಥಳೀಯ ಜನಪ್ರತಿನಿಧಿಗಳುಯ ಸ್ಪಂಧಿಸಿ ಜನಸಾಮಾನ್ಯರಿಗೆ ನೆಮ್ಮದಿಯಿಂದ ಬದುಕುವ ವಾತಾವರಣವನ್ನು ನಿರ್ಮಿಸಬೇಕಿದೆ ಎಂದರು. ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಯು.ಜಯಂತ ನಾೈಕ್ ಮಾತನಾಡಿ ನೋಟು ಅಮಾನ್ಯೀಕರಣದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ವಾರಕ್ಕೆ ಆರು…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ : ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಘಟಕ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಹೋಮಿಯೋಪತಿ ಪದವಿ ಹಾಗೂ ಹೋಮಿಯೋಪಥಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ 27 ನೇ ಪದವಿ ಪ್ರಧಾನ ಸಮಾರಂಭ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ದೇರಳಕಟ್ಟೆ ಸಭಾಂಗಣದಲ್ಲಿ ಮಾ.29 ರಂದು ಬೆಳಿಗ್ಗೆ 10.30 ಕ್ಕೆ ನಡೆಯಲಿದೆ ಎಂದುಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಇದರ ಆಡಳಿತಾಧಿಕಾರಿ ಫಾ.ವಿನ್ಸೆಂಟ್ ಸಲ್ದಾನ್ಹ ಹೇಳಿದ್ದಾರೆ. ದೇರಳಕಟ್ಟೆ ಫಾದರ್ ಮುಲ್ಲರ್ಸ್ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು 79 ಹೋಮಿಯೋಪತಿ ಪದವಿ ಹಾಗೂ 23 ಹೋಮಿಯೋಪತಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಈ ವರ್ಷ ಪದವಿ ಸ್ವೀಕರಿಸಲಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಡೆಸಿದ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯನ್ನು ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಘೋಷಿಸಿದ ಮತ್ತು ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಅವರಲ್ಲಿ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮುಡಿಪು: ಮಕ್ಕಳಲ್ಲಿ ತೆಗೆದುಕೊಳ್ಳುವ ಗುಣ ಕಳೆದು ಹೋಗಿದೆ, ಇಟ್ಟುಕೊಳ್ಳಲು ಆಗದಿರುವುದರಿಂದ ಅನುಭವಿಸಲು ಅವರಿಂದ ಅಸಾಧ್ಯವಾಗುತ್ತಿದ್ದು, ಅವರ ಸಾಮಥ್ರ್ಯದ ಲೂಟಿ ಆಗುತ್ತಿದೆ ಎಲ್ಲರೂ ಮಿತಿಯ ಒಳಗಡೆ ಬಂಧಿಯಾಗಿದ್ದಾರೆ ಎಂದು ಮಂಗಳೂರು ಸ್ವರೂಪ ಅಧ್ಯಯನ ಸಂಸ್ಥೆಯ ನಿರ್ದೇಶಕ ಗೋಪಾಡ್ಕರ್ ಆತಂಕ ವ್ಯಕ್ತಪಡಿಸಿದರು. ಅವರು ನ್ಯೂಸ್ ಪಾಯಿಂಟ್ ಮುಡಿಪು, ಜನ ಶಿಕ್ಷಣ ಟ್ರಸ್ಟ್ ಮುಡಿಪು ಮತ್ತು ಚಿತ್ತಾರ ಬಳಗ ಮಂಗಳೂರು ಇವರ ಸಹಭಾಗಿತ್ವದೊಂದಿಗೆ ಮುಡಿಪು ಜನಶಿಕ್ಷಣ ಕೇಂದ್ರದಲ್ಲಿ ಆಯೋಜಿಸಲಾಗಿದ್ದ 2016-17ರ ಮಂಚಿ ಮಕ್ಕಳ ಕೊಲಾಜ್ ಚಿತ್ರ ಪಯಣದ ಸಂಪನ್ನ ಸಮಾರಂಭ ಮತ್ತು ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿದರು. ಮಕ್ಕಳು ಶಿಕ್ಷಣದ ಸಾಧ್ಯತೆಯ ಮಿತಿಯೊಳಗೆ ಉಳಿದುಕೊಂಡಿದ್ದಾರೆ. ಅವರನ್ನು ಕೆರಳಿಸಿ ಸಹಜವಾಗಿ ಅರಳಿಸುವ ರೀತಿಯಲ್ಲಿ ಕಾರ್ಯಗಳು ಆರಂಭವಾಗಬೇಕಿದೆ. ಸದ್ಯದ ಸ್ಥಿತಿಯಲ್ಲಿ ಮಕ್ಕಳ ಕಲಿಯುವ ಹಕ್ಕನ್ನು ಬೇರೆಯವರು ಇಟ್ಟುಕೊಂಡಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ದೇಹಕ್ಕೆ ಮತ್ತು ಮನಸ್ಸಿಗೆ ಶಿಕ್ಷೆಯಾಗುತ್ತಿದೆ ಎಂದರು. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್.ಸಿ, ನ್ಯೂಸ್ ಪಾಯಿಂಟ್ ಮಾಲೀಕ ವೆಂಕಟೇಶ್.ಹೆಚ್, ಕೊಳ್ನಾಡು ಮಂಚಿ ಸರಕಾರಿ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಹಳೆಕೋಟೆ : ರಾಜ್ಯದಲ್ಲಿ ಇಂದು ಮಾತೃಭಾಷಾ ಶಿಕ್ಷಣ ಸಂಸ್ಥೆ ಅದರಲ್ಲೂ ಕನ್ನಡ ಮಾಧ್ಯಮ ಶಾಲೆಗಳು ಅಳಿವಿನಂಚಿನಲ್ಲಿದೆ. ಆಂಗ್ಲ ಭಾಷಾ ವ್ಯಾಮೋಹದಿಂದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಈ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಿ ಬಡ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದೇ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ನ ಪ್ರಥಮ ಆದ್ಯತೆ ಎಂದು ಉಳ್ಳಾಲ ಕೇಂದ್ರ ಜಮಾಅತ್ ನ ಅಧ್ಯಕ್ಷರಾದ ಅಬ್ದುಲ್ ರಶೀದ್ ರವರು ಹೇಳಿದರು. ಅವರು ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುವ ಸಯ್ಯಿದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಗೆ ಸಾಧಾರಣ 16 ಲಕ್ಷ ರೂಪಾಯಿ ಮೊತ್ತದ ಹೊಸ ಬಸ್ಸನ್ನು ಉಚಿತವಾಗಿ ನೀಡುತ್ತಾ ಕನ್ನಡ ಮಾಧ್ಯಮ ಶಾಲೆಗಳಿಗೂ ಆಕರ್ಷಣೆಯಿಂದ ವಿದ್ಯಾರ್ಥಿಗಳು ಬರಬೇಕು. ಈ ಶಾಲೆಗೆ ದೂರ ಪ್ರದೇಶಗಳಿಂದ ಬರುವ ಮಕ್ಕಳು ಉಚಿತವಾಗಿ ಬರಬೇಕು ಎಂಬ ಉದ್ದೇಶದಿಂದ ಟ್ರಸ್ಟ್ ವತಿಯಿಂದ ಬಸ್ ಒದಗಿಸಲಾಗಿದೆ ಎಂದರು. ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಇದು…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಇಬ್ಬರ ತಂಡ ಯುವಕನನ್ನು ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳಾಲ ಕೋಡಿ ಸಮೀಪದ ವೀರಭದ್ರ ದೇವಸ್ಥಾನ ಹಾಗೂ ರೆಹಮಾನಿಯಾ ಮಸೀದಿ ನಡುವೆ ಸೋಮವಾರ ತಡರಾತ್ರಿ ವೇಳೆ ಸಂಭವಿಸಿದೆ. ಕೋಡಿ ನಿವಾಸಿ ನೌಷಾದ್ ಹುಸೈನ್ (23) ಕೊಲೆ ಯತ್ನಕ್ಕೊಳಗಾಗಿರುವ ಯುವಕ. ಮುಕ್ಕಚ್ಚೇರಿಯಲ್ಲಿರುವ ಸಮೋಸಾ ತಯಾರಿಕಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಷಾದ್ ಕೆಲಸಕ್ಕೆಂದು ತೆರಳುವ ಸಂದರ್ಭ ಘಟನೆ ನಡೆದಿದೆ. ಬೈಕಿನಲ್ಲಿ ತೆರಳುವ ಸಂದರ್ಭ ಎದುರಿನಿಂದ ಇನ್ನೊಂದು ಬೈಕಿನಲ್ಲಿ ಬಂದ ಇಬ್ಬರು ಆಗಂತುಕರು ನೌಷಾದ್ ಮೇಲೆ ತಲವಾರು ಬೀಸಿದ್ದರು. ತಲವಾರಿನ ಏಟಿನಿಂದ ತಪ್ಪಿಸುವ ಸಂದರ್ಭ ಕೈಯನ್ನು ಅಡ್ಡ ಹಿಡಿದಿದ್ದರಿಂದಾಗಿ ಕೈಗೆ ಕಡಿತದ ಗಾಯವಾಗಿದೆ. ತಪ್ಪಿಸುವ ಧಾವಂತದಲ್ಲಿ ಬೈಕ್ ರಸ್ತೆಗೆ ಉರುಳಿಬಿದ್ದಿದೆ. ಸದ್ದು ಕೇಳಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದ ಪೊಲೀಸ್ ಪೇದೆಗಳಿಬ್ಬರು ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿದಾಗ ಓರ್ವ ಆರೋಪಿ ಮೊಗವೀರಪಟ್ನ ಕಡೆಗೆ ಓಣಿಯ ಮೂಲಕ ಪರಾರಿಯಾದರೆ, ಇನ್ನೋರ್ವ ಆರೋಪಿ ಬೈಕ್ ಸಮೇತ ಪರಾರಿಯಾಗಿದ್ದಾನೆ. ಪೊಲೀಸರು ಬರುವಲ್ಲಿ…
ಉಳ್ಳಾಲ್‍ನ್ಯೂಸ್ ನೆಟ್‍ವರ್ಕ್ ತೊಕ್ಕೊಟ್ಟು: ರೈಲಿನಡಿಗೆ ತಲೆಕೊಟ್ಟು ಉಪ್ಪಳ ಮೂಲದ ಮಂಗಳೂರಿನಲ್ಲಿ ವಿದ್ಯಾರ್ಥಿಯಾಗಿರುವ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ನಸುಕಿನ ಜಾವ ಸಂಭವಿಸಿದೆ. ಉಪ್ಪಳ ಬೇಕೂರು ನಿವಾಸಿ ಲೋಕಯ್ಯ ಪೂಜಾರಿ ಎಂಬವರ ಪುತ್ರ ನಿಶಾನ್ ಕುಮಾರ್ .ಬಿ (26) ಆತ್ಮಹತ್ಯೆ ನಡೆಸಿರುವ ವಿದ್ಯಾರ್ಥಿ. ತೊಕ್ಕೊಟ್ಟು ಕೊಲ್ಯ ನಡುವಿನ ಜಾಯ್‍ಲ್ಯಾಂಡ್ ಶಾಲೆ ಎದುರುಗಡೆ ವಿದ್ಯಾರ್ಥಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳೂರು ಕೆಂಜಾರು ಶ್ರೀದೇವಿ ತಾಂತ್ರಿಕ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿರುವ ಈತ ಶನಿವಾರ ಸಂಜೆ ಮನೆಗೆ ಹೋಗದೆ ನಾಪತ್ತೆಯಾಗಿದ್ದನು. ಇದರಿಂದ ಗಾಬರಿಗೊಂಡ ಮನೆಮಂದಿ ಹುಡುಕಾಡಿದರೂ ಶನಿವಾರ ತಡರಾತ್ರಿವರೆಗೂ ಪತ್ತೆಯಾಗಿರಲಿಲ್ಲ. ಭಾನುವಾರ ಬೆಳಿಗ್ಗೆ ನಿಶಾನ್ ಮೃತದೇಹ ಜಾಯ್ ಲ್ಯಾಂಡ್ ರೈಲ್ವೇ ಹಳಿ ಸಮೀಪ ಪತ್ತೆಯಾಗಿತ್ತು. ಈ ಬಗ್ಗೆ ಸ್ಥಳೀಯರು ಮಂಗಳೂರು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ವಿದ್ಯಾರ್ಥಿ ಕಿಸೆಯಲ್ಲಿ ಡೆತ್ ನೋಟ್ ಪತ್ತೆಯಾಗಿತ್ತು. ` ನನ್ನ ಸಾವಿಗೆ ನಾನೇ ಕಾರಣ’ ಎಂದು ಬರೆದಿಡಲಾಗಿತ್ತು. ಈತನ ಕಿಸೆಯಲ್ಲಿ ಔಷಧಿಗಳ ಚೀಟಿಗಳು,…
ವರದಿ: ಹರೀಶ್ ಪೂಜಾರಿ ಕೊಣಾಜೆ ಚಿತ್ರಗಳು: ಗಂಗಾಧರ್ ಕವಿತಾ ಸ್ಟುಡಿಯೋ ಕೊಣಾಜೆ ಕೊಣಾಜೆ: ಬ್ರಹ್ಮ ಶ್ರೀನಾರಾಯಣ ಗುರು ಸೇವಾ ಸಂಘ ಗ್ರಾಮಚಾವಡಿ ಕೊಣಾಜೆ ಇದರ ಅಂಗಸಂಸ್ಥೆಗಳಾದ ಬ್ರಹ್ಮಶ್ರೀ ನಾರಾಯಣ ಗುರು ಕೊಣಾಜೆ ಗ್ರಾಮ ಸಮಿತಿ ಯುವ ಘಟಕ ಮತ್ತು ಮಹಿಳಾ ಘಟಕ ಕೊಣಾಜೆ ಇದರ ಜಂಟಿ ವಾರ್ಷಿಕ ವiಹಾಸಭೆ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಯುವ ಘಟಕದ ದಶಮ ಸಂಭ್ರಮದ ಸಮಾರೋಪ ಸಮಾರಂಭ ಕೊಣಾಜೆ ಮುಟ್ಟಿಂಜದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮಚಾವಡಿ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ರಾಘವ ಪೂಜಾರಿ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ದ್ಯೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ನಂದನ ಬಿತ್ತಿಲ್ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್ ಮಾತನಾಡಿ ನಾರಾಯಣ ಗುರು ಸಂಘದ ಕೊಣಾಜೆ ಗ್ರಾಮದ ಯುವ ಘಟಕ, ಗ್ರಾಮಸಮಿತಿ, ಮಹಿಳಾ ಘಟಕಗಳು ಉತ್ತಮ ಸಮಾಜ ಸೇವೆತಯಲ್ಲಿ ಪಾಲ್ಗೊಂಡು ಇತರೆ ಸಂಘಟನೆಗಳಿಗೆ ಮಾದರಿಯಾಗಿದೆ. ಇದರ ಜತೆಗೆ ಎಲ್ಲಾ ಸಮಾಜದವರನ್ನು ಒಗ್ಗೂಡಿಸುವ ಕೆಲಸ…
ಉಳ್ಳಾಲ್‍ನ್ಯೂಸ್ ನೆಟವರ್ಕ್ ಮುಡಿಪು: ನ್ಯೂಸ್ ಪಾಯಿಂಟ್ ಮುಡಿಪು, ಜನಶಿಕ್ಷಣ ಟ್ರಸ್ಟ್ ಹಾಗೂ ಚಿತ್ತಾರ ಬಳಗ ಮಂಗಳೂರು ಇದರ ಸಹಭಾಗಿತ್ವದಲ್ಲಿ ಮಂಚಿ ಮಕ್ಕಳ ಕೊಲಾಜ್ ಚಿತ್ರಕಲಾ ಪ್ರದರ್ಶನವು ಮಾ. 27 ರಿಂದ ಎಪ್ರಿಲ್ 2ರ ತನಕ ಮುಡಿಪು ಜನಶಿಕ್ಷಣ ಕೇಂದ್ರದಲ್ಲಿ ನಡೆಯಲಿದೆ. ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಇಲ್ಲಿನ 25 ಮಂದಿ ವಿದ್ಯಾರ್ಥಿಗಳು ಚಿತ್ರಕಲಾ ಶಿಕ್ಷಕ ತಾರನಾಥ ಕೈರಂಗಳ್ ಅವರ ಮಾರ್ಗದರ್ಶನದಲ್ಲಿ ರಚಿಸಿದ 25 ಕೊಲಾಜ್ ಕಲಾಕೃತಿಗಳ ಚಿತ್ರಪಯಣ 2016ರ ಜೂನ್ 1 ರಂದು ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಉದ್ಘಾಟನೆಗೊಂಡಿತ್ತು. ಬಳಿಕ ಬಂಟ್ವಾಳ, ಮಂಗಳೂರು, ಪುತ್ತೂರು, ಸುಳ್ಯ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಪ್ರದರ್ಶನಗೊಂಡಿದ್ದು ಚಿತ್ರ ಪಯಣದ ಸಂಪನ್ನ ಸಮಾರಂಭವು 27.03.2017 ರಂದು ಮುಡಿಪಿನಲ್ಲಿ ಆಯೋಜಿಸಲಾಗಿದೆ. ಈ ದಿನ ಬೆಳಿಗ್ಗೆ ಗಂಟೆ 10ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ವಾಲ್ಟರ್ ಎಚ್.ಡಿ’ಮೆಲ್ಲೊ ಚಿತ್ರಕಲಾ ಪ್ರದರ್ಶನದ ವೀಕ್ಷಣೆಗೆ ಚಾಲನೆ ನೀಡಲಿದ್ದಾರೆ. ಚಿತ್ರಪಯಣದ ನೆನಪಿನ ಹೊತ್ತಗೆಯನ್ನು…
ಉಳ್ಳಾಲ್‍ನ್ಯೂಸ್ ನೆಟವರ್ಕ್ ಕುಂಪಲ : ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ನಡೆದ 10ನೇ ವರ್ಷದ ಏಕಾಹ ಭಜನೋತ್ಸವಕ್ಕೆ ದೀಪ್ತಿ ಅವಿನಾಶ್ ಶೆಟ್ಟಿ ಮಡ್ಯಾರ್, ಪವಿತ್ರ ಗಣೇಶ್ ಗಟ್ಟಿ ಕುಂಪಲ , ಮಮತಾ ಹರೀಶ್ ಪೂಜಾರಿ ಅಂಬ್ಲಮೊಗರು ಶನಿವಾರ ಚಾಲನೆ ನೀಡಿದರು. ಮಂದಿರದ ಅಧ್ಯಕ್ಷ ಸತೀಶ್ ಕುಂಪಲ, ಮಹಾಪೋಷಕ ಕೇಶವದಾಸ್ ಬಗಂಬಿಲ, ಮಹಿಳಾ ಸಮಿತಿ ಅಧ್ಯಕ್ಷೆ ರೇಖಾ ಚಂದ್ರಹಾಸ್, ಉತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಬಿ.ಜೆ, ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಂಪಲ, ಆಡಳಿತ ಮಂಡಳಿಯ ಪ್ರವೀಣ್.ಯಸ್. ಕುಂಪಲ, ಸಂಜೀವ ಕುಲಾಲ್, ಹರಿಪ್ರಸಾದ್ ಶೆಟ್ಟಿ, ಮಾಧವ ಬಗಂಬಿಲ, ವೆಂಕಟೇಶ್ ಕುಂಪಲ ಉಪಸ್ಥಿತರಿದ್ದರು.

