Author: UllalaVani

Kannada News From Coastal Karnataka

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕಿನ್ಯಾ : ಎಲ್ಲರಿಗೂ ಸಮಾನವಾಗಿ ಗೌರವ ನೀಡಬೇಕೆಂದು ಇಸ್ಲಾಂ ಕಲ್ಪಿಸುತ್ತದೆ. ಗೌರವ ಸ್ಥಾನಮಾನ ನೀಡುವ ವಿಚಾರದಲ್ಲಿ ಧರ್ಮ, ಸಂಪ್ರದಾಯ, ಜಾತಿ ಲೆಕ್ಕಾಚಾರ ಮಾಡಲು ಇಸ್ಲಾಂ ಅವಕಾಶ ನೀಡಲಿಲ್ಲ ಎಂದು ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಹೇಳಿದರು. ಅವರು ಕಿನ್ಯ ಮಸ್ಜಿದುಲ್ ಬುಖಾರಿ, ಎಸ್‍ವೈಎಸ್ ಮತ್ತು ಎಸ್ಸೆಸ್ಸೆಫ್ ಇದರ ಆಶ್ರಯದಲ್ಲಿ ಕಿನ್ಯದಲ್ಲಿ ಭಾನುವಾರ ನಡೆದ ಸುನ್ನಿ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು. ಇಸ್ಲಾಂನ್ನು ಕೂಲಂಕಷವಾಗಿ ಅಧ್ಯಯನ ಮಾಡಿದರೆ ಮಾತ್ರ ಧರ್ಮದ ಮಹತ್ವ ಅರಿಯಲು ಸಾಧ್ಯ. ಧರ್ಮದ ವಿಚಾರದಲ್ಲಿ ಚರ್ಚೆ ಮಾಡುವ ಮೊದಲು ಅಧ್ಯಯನ ಅಗತ್ಯ ಎಂದರು.ಅಸಯ್ಯದ್ ಕೆ.ಎಸ್. ಆಲವಿ ತಂಙಳ್ ಅಲ್ ಐದರೂಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಸ್ಸಯ್ಯದ್ ಕುಂಞ ಕೋಯ ತಂಙಳ್ ದುವಾ ನೆರವೇರಿಸಿದರು. ಶರಫ್ಪುಲ್ ಉಲಮಾ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಅಶ್ರಫ್ ಸಖಾಫಿ ಕಿನ್ಯ , ಇಝುದ್ದೀನ್ ಅಹ್ಸನಿ ಕಿನ್ಯ, ಬುಖಾರಿ ಮಸ್ಜಿದ್ ಖತೀಬ್ ನಿಸಾರ್ ಮದನಿ, ಕಿನ್ಯ ಮಸೀದಿ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಬಾವಲಿಗುರಿ : ಪಾವೂರು ಹರೇಕಳದ ಬಾವಲಿಗುರಿ ಶ್ರೀ ಬಬ್ಬುಸ್ವಾಮಿ ಸೇವಾ ಸಮಿತಿ ಆಶ್ರಯದಲ್ಲಿ ನಡೆಯುವ ಕೋರ್ದಬ್ಬು ತನ್ನಿಮಾನಿಗ ಪರಿವಾರ ದೈವಗಳ 10ನೇ ವರ್ಷದ ನೇಮೋತ್ಸವ ಹಾಗೂ ಸತ್ಯನಾರಾಯಣ ಪೂಜೆ ಎ.15ರಿಂದ ಎ.17ರವರೆಗೆ ನಡೆಯಲಿದೆ. ಎ. 17ರಂದು ಶನಿವಾರ ಶ್ರೀ ಸತ್ಯನಾರಾಯಣ ಪೂಜೆ, ಸ್ಥಳ ಗುಳಿಗ ಹಾಗೂ ಬಬ್ಬುಸ್ವಾಮಿ ನತ್ತು ತನ್ನಿಮಾನಿಗ ದೈವದ ನೇಮೋತ್ಸವ, ಎ.16ರಂದು ಪಂಜುರ್ಲಿ ಗುಳಿಗ ನೇಮ, ಎ,17ರಂದು ರಾಹುಗುಳಿಗ ನೇಮೋತ್ಸವ ನಡೆಯಲಿದೆ ಎಂದು ಸಮಿತಿ ಪ್ರಕಟನೆ ತಿಳಿಸಿದೆ.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಕುಂಪಲ ಗುರು ನಗರದ ಶ್ರೀ ಮಾರುತಿ ಮಠದ ಶ್ರೀಕೃಷ್ಣ ಮುಖ್ಯಪ್ರಾಣ ದೇವಸ್ಥಾನದಲ್ಲಿ ನಡೆಯುತ್ತಿರುವ 108 ದಿನಗಳ ಆಹೋರಾತ್ರಿ ಭಜನಾ ಕಾರ್ಯಕ್ರಮದ 100ನೇ ದಿನದ ಅಂಗವಾಗಿ ಶ್ರೀ ಕ್ಷೇತ್ರಕ್ಕೆ ಕಂಚಿನ ಪ್ರಭಾವಳಿ ಮತ್ತು ಹಸಿರು ಹೊರೆಕಾಣಿಕೆ  ಶ್ರೀ ಅಮೃತಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಅಂಬಿಕಾರೋಡ್ ಗಟ್ಟಿ ಸಮಾಜ ಭವನದ ಬಳಿಯಿಂದ ಶ್ರೀ ಕ್ಷೇತ್ರಕ್ಕೆ ನಡೆದ ಹೊರೆ ಕಾಣಿಕೆ ಮೆರವಣಿಗೆಗೆ ಸೋಮೇಶ್ವರದ ದಿನೇಶ್ ಫಣಿಕ್ಕರ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷರು, ಸದಸ್ಯರು, ಭಜನಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ :ಉಳ್ಳಾಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದ ಅಪರಾಧ ವಿಭಾಗದ ಉಪ ನಿರೀಕ್ಷಕರ ಜೀಪಿಗೆ ಟಿಪ್ಪರೊಂದು ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಸೋಮೇಶ್ವರ ಬಳಿ ಸೋಮವಾರ ಬೆಳಗ್ಗಿನ ಜಾವ ನಡೆದಿದ್ದು, ಜೀಪಿನಲ್ಲಿದ್ದ ಎಸ್ಐ ಸಹಿತ ಚಾಲಕ ಪವಾಡಸದೃಶ್ಯವಾಗಿ ಪಾರಾಗಿದ್ದು, ಟಿಪ್ಪರನ್ನು ಕೊಲ್ಯ ಬಳಿ ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅಪರಾಧ ವಿಭಾಗದ ಉಪ ನಿರೀಕ್ಷಕ ಮೋಹನ್ದಾಸ್ ಸಂಚರಿಸುತ್ತಿದ್ದ ಜೀಪಿಗೆ ಟಿಪ್ಪರ್ ಡಿಕ್ಕಿ ಹೊಡೆದಿದ್ದು, ಚಾಲಕ ಕಾನ್ಸ್ಟೇಬಲ್ ಪ್ರಶಾಂತ್ ಮತ್ತು ಮೋಹನ್ ದಾಸ್  ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಪೋಲಿಸರ ವಾಹನಕ್ಕೆ ಡಿಕ್ಕಿ ಹೊಡೆಸಿದ ಚಾಲಕ ಬೆದರಿ ಟಿಪ್ಪರನ್ನು ನಿಲ್ಲಿಸದೆ ಪರಾರಿಯಾಗಿದ್ದು ಬಳಿಕ ಟಿಪ್ಪರನ್ನು ಕೊಲ್ಯದಲ್ಲಿ ವಶಕ್ಕೆ ತೆಗೆದುಕೊಂಡರು. ಉಳ್ಳಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ಆಟೋ ಚಾಲಕ ಕೆ.ಸಿ.ರೋಡ್ ನಿವಾಸಿ ಶೇಖ್ ಮೊಯ್ದೀನ್ (65)ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ. ಎ. 1ರಂದು ಕೋಟೆಕಾರು ಪೆಟ್ರೋಲ್ ಪಂಪ್ ಬಳಿ ತನ್ನ ಆಟೋ ರಿಕ್ಷಾಕ್ಕೆ ಪೆಟ್ರೋಲ್ ಹಾಕಿಸಿ ಅಲ್ಲಿಂದ ಆಟೋ ರಿಕ್ಷಾ ಪಾರ್ಕ್ ಗೆ ತೆರಳುತ್ತಿದ್ದ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಮಾರುತಿ ಒಮ್ನಿ ಕಾರು ಢಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಮೊಯ್ದಿನ್ ಅವರ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮಧ್ಯಾಹ್ನ ಸಾವನ್ನಪ್ಪಿದ್ದಾರೆ. ಮೃತರಿಗೆ ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರು ಇದ್ದಾರೆ. ಆರೋಪಿ ಚಾಲಕನನ್ನು ಉಳ್ಳಾಲ ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ:  ಕಾಸರಗೋಡಿನಿಂದ ಅಪಹರಿಸಲ್ಪಟ್ಟ ಬಾಲಕಿಯನ್ನು  ರಿಕ್ಷಾ ಚಾಲಕರೊಬ್ಬರು  ಸೋಮೇಶ್ವರ ರೈಲ್ವೇ ನಿಲ್ದಾಣದಿಂದ  ಉಳ್ಳಾಲ ದರ್ಗಾಕ್ಕೆ ತಲುಪಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಆಕೆಯನ್ನು ಪಾಲಕರ ವಶಕ್ಕೆ ಒಪ್ಪಿಸಲಾಗಿದೆ. ಕಾಸರಗೋಡಿನ ಕೋಟಿಕುಳಂನ 12ರ ಬಾಲಕಿ ಮದರಸ ಶಿಕ್ಷಣಕ್ಕೆಂದು ತೆರಳಿದ್ದು, ರೈಲು ಮೂಲಕ ಬಂದಿದ್ದ ಬಾಲಕಿ ಸೋಮೇಶ್ವರ ರೈಲು ನಿಲ್ದಾಣದಲ್ಲಿ ಗಾಬರಿಯಿಂದ ಕೂಗುತ್ತಿದ್ದಾಗ ಸ್ಥಳೀಯ ರಿಕ್ಷಾ ಚಾಲಕರೊಬ್ಬರು ಉಳ್ಳಾಲ ದರ್ಗಾಕ್ಕೆ ಕರೆ ತಂದಿದ್ದರು.   ಅಪಹರಣ ಶಂಕೆ : ಬಾಲಕಿಯ ಹೇಳಿಕೆಯಂತೆ ತಾನು ಬೆಳಗ್ಗೆ ಮದರಸಕ್ಕೆಂದು ಹೋಗುತ್ತಿದ್ದಾಗ ಹಿಂದಿನ ಬಂದ ಅಪರಿಚಿತರು ಬಟ್ಟೆಯನ್ನು ಮುಖಕ್ಕೆ ಹಿಡಿದಿದ್ದು, ಈ ಸಂದರ್ಭದಲ್ಲಿ ಸ್ಮೃತಿ ತಪ್ಪಿದ ತಾನು ಎಚ್ಚರವಾದಾಗ ರೈಲಿನಲ್ಲಿದ್ದೆ. ರೈಲು ನಿಂತಾಗ ಗಾಬರಿಯಿಂದ ಇಳಿದು ಕೂಗಲು ಪ್ರಾರಂಭಿಸಿದಾಗ ಸ್ಥಳೀಯರು ವಿಚಾರಿಸಿ ನನ್ನನ್ನು ಇಲ್ಲಿಗೆ ಕರೆ ತಂದರು ಎಂದು ತಿಳಿಸಿದ್ದಾಳೆ. ದರ್ಗಾದಲ್ಲಿ ಬಂದಿದ್ದ ಬಾಲಕಿಯಿಂದ ಮಾಹಿತಿ ಪಡೆದ ದರ್ಗಾ ಸಮಿತಿಯವರು  ಆಕೆಯ ಮನೆಗೆ ಮಾಹಿತಿ ನೀಡಿದ್ದು, ಮನೆಯಲ್ಲಿ ಬಾಲಕಿಯನ್ನು ಹುಡುಕಾಡುತ್ತಿದ್ದ ಪಾಲಕರು ಮಂಗಳೂರಿನಲ್ಲಿರುವ ಸಂಬಂಧಿಕರಿಗೆ ಮಾಹಿತಿ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ತಮ್ಮ ಮೇಲೆ ನಂಬಿಕೆಯಿಟ್ಟು ಚಿಕಿತ್ಸೆಗೆ ಬರುವ ರೋಗಿಗಳ ಮೇಲೆ ಕಾಳಜಿ, ಹಾಗೂ ಕೆಲಸ ನೀಡಿದ ಸಂಸ್ಥೆಯ ಮೇಲೆ ಸಿಬ್ಬಂದಿಗಳು ಹಾಗೂ ವೈದ್ಯರಿಗೆ ಪ್ರೀತಿಯಿದ್ದಲ್ಲಿ ಯಾವುದೇ ಸಂಸ್ಥೆ ಕೀರ್ತಿಯ ಉತ್ತಂಗಕ್ಕೇರಲು ಸಾಧ್ಯ ಎಂದು ಉಳ್ಳಾಲ ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು. ಯು.ಟಿ.ಫರೀದ್ ಫೌಂಡೇಶನ್ ಮೇಲಂಗಡಿ ಘಟಕದ ವತಿಯಿಂದ ದೇರಳಕಟ್ಟೆ ಕಣಚೂರು ವೈದ್ಯಕೀಯ ಕಾಲೇಜು ಮತ್ತು ಪ್ರಸಾದ್ ನೇತ್ರಾಲಯದ ಸಹಯೋಗದಲ್ಲಿ ಭಾನುವಾರ ದರ್ಗಾ ಮುಂಭಾಗ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆಲವು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ವೈದ್ಯರು, ಸವಲತ್ತು ಇಲ್ಲ ಎನ್ನುವ ನೆಪ ಹೇಳಿ ರೋಗಿಗಳನ್ನು ಕಾಯಿಸುವ ಮುಖಾಂತರ ನಿರ್ಲಕ್ಷ್ಯ ಭಾವನೆಯಿಂದ ನೋಡುವುದು ಅನುಭವಕ್ಕೆ ಬಂದಿದೆ. ಇದರಿಂದ ಆಸ್ಪತ್ರೆಯ ಹೆಸರಿಗೂ ಕಳಂಕ ಬರುವ ಸಂಭವವಿದೆ. ಇಂತಹ ಪ್ರಕರಣ ಕಡಿವಾಣಕ್ಕೆ ಆಸ್ಪತ್ರೆಗಳ ಆಡಳಿತ ವರ್ಗ ಮುಂದಾಗಬೇಕು ಎಂದು ಹೇಳಿದರು. ಮೇಲಂಗಡಿ ಮೊಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಯೂಸುಫ್ ಮಿಸ್ಬಾಹಿ ದುವಾ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ತೊಕ್ಕೊಟ್ಟು: ಸಮಾಜದಲ್ಲಿ ಹಿಂದುಳಿದವರ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಹೆಲ್ಪ್ ಇಂಡಿಯಾ ಫೌಂಡೇಶನ್ ನ ಕಾರ್ಯವೈಖರಿ ಇತರೆ ಸಂಘಟನೆಗಳಿಗೂ ಮಾದರಿಯಾಗಿದ್ದು, ಭವಿಷ್ಯದಲ್ಲಿ ದೇಶದಾದ್ಯಂತ ಸಂಘಟನೆ ಕಾರ್ಯಾಚರಿಸಲಿ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದ್ದಾರೆ. ಅವರು ತೊಕ್ಕೊಟ್ಟು ಹೆಲ್ಪ್ ಇಂಡಿಯಾ ಕಚೇರಿಯಲ್ಲಿ ಸೋಮವಾರ ಹೆಲ್ಪ್ ಇಂಡಿಯಾ ಫೌಂಡೇಶನ್ ವತಿಯಿಂದ ಉಚಿತ ಟೈಲರಿಂಗ್ ಸರ್ಟಿಫಿಕೇಟ್ ಕೋರ್ಸನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ಸೈಯ್ಯಿದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ ಸಮಾಜದಲ್ಲಿ ಸಂಸ್ಥೆಗಳಿಗೆ ಕೊರತೆಯಿಲ್ಲ, ಸ್ಥಾಪನೆಯಾದ ಕೆಲವೇ ದಿನಗಳಲ್ಲಿ ನಿಗೂಢವಾಗಿ ಮಾಯವಾಗುವ ಸಂಘಟನೆಗಳೆ ಹೆಚ್ಚಿದೆ. ಆದರೆ ಹೆಲ್ಪ್ ಇಂಡಿಯಾ ಹಲವು ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಬಡವರಿಗಾಗಿ ಹಮ್ಮಿಕೊಂಡು ಬೆಳೆಯುತ್ತಲೇ ಇದೆ. ಮಹಿಳೆಯರು ಸಬಲರಾದರೆ ಇಡೀ ಮನೆಯೇ ಬೆಳಗಿದಂತೆ, ಈ ನಿಟ್ಟಿನಲ್ಲಿ ಫೌಂಡೇಶನ್ ಮಹಿಳೆಯರಿಗೆ ಸ್ವ ಉದ್ಯೋಗ ಹೊಂದಲು ಅವಕಾಶ ಮಾಡಿಕೊಡುವ ಮೂಲಕ ಉತ್ತಮ ಕಾರ್ಯಕ್ರಮವನ್ನು…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ತೊಕ್ಕೊಟ್ಟು: ದೇಶದಾದ್ಯಂತ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣವಾಗುತ್ತಿದ್ದು, ಮುಂಬರುವ ಚುನವಣೆಯಲ್ಲಿ ಕರ್ನಾಟಕ ಕಾಂಗ್ರೆಸ್ ಮುಕ್ತವಾಗಲಿದ್ದು, ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿಯೂ ಬಿಜೆಪಿ ಶಾಸಕರು ಆಯ್ಕೆಯಾಗುವ ಮೂಲಕ ಪರಿವರ್ತನೆಯ ಪರ್ವ ಆರಂಭವಾಗಲಿದೆ ಎಂದು ಮಂಗಳೂರು ಲೋಕಸಭಾ ಕ್ಷೇತ್ರ ಸಂಸದ ನಳಿನ್ ಕುಮಾರ್ ಕಟೀಲು ಅಭಿಪ್ರಾಯಪಟ್ಟರು . ಅವರು ತೊಕ್ಕೊಟ್ಟು ಜಂಕ್ಷನ್ ಬಳಿ ಮಂಗಳೂರು ವಿಧಾನ ಸಭಾ ಕ್ಷೇತ್ರ ನೂತನ ಕಾರ್ಯಲಯದ ಉದ್ಘಾಟನೆಯ ಬಳಿಕ ನಡೆದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಹಿಂದೆ ಕಾಂಗ್ರೆಸ್ ಸೇರಿದಂತೆ ಅದನ್ನು ಅನುಕರಿಸುತ್ತಿರುವ ಪಕ್ಷಗಳು ಮುಸ್ಲಿಂ ಕೈಸ್ತರು ಸೇರಿದಂತೆ ಜಾತಿ ಓಟು ಬ್ಯಾಂಕ್‍ಗಳ ಮೂಲಕ ಅ„ಕಾರಕ್ಕೆ ಏರುವ ಕನಸು ಕಂಡಿತ್ತು ಆದರೆ ಉತ್ತರ ಪ್ರದೇಶದಲ್ಲಿ ಅಲ್ಲಿನ ಜನತೆ ಜಾತೀ ರಹಿತರಾಗಿ ಅಭಿವೃದ್ಧಿ ಪರ ಸರಕಾರಕ್ಕೆ ಮತ ನೀಡುವ ಮೂಲಕ ಪರಿವರ್ತನೆಗೆ ನಾಂದಿ ಹಾಡಿದ್ದು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮತ್ತು ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಪರ ಮತ ಹಾಕುವ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ದೇಶದ ಸ್ವಚ್ಛತೆಯನ್ನು ಮನದಲ್ಲಿಟ್ಟುಕೊಂಡು ಪ್ರತಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸ್ವಚ್ಛತಾ ಚಳವಳಿಯನ್ನು ಆರಂಭಿಸಲು ಮುಂದಾಗಿದ್ದು, ಬಹುತೇಕ ಹಿರಿಯ ನಾಗರಿಕರನ್ನೇ ಬಳಸಿಕೊಂಡು ಅವರ ನಾಯಕತ್ವದಲ್ಲಿ ಚಳವಳಿ ಮುಂದುವರಿಯಲಿದೆ ಎಂದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್ ಅಭಿಪ್ರಾಯಪಟ್ಟರು.ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು ತಾಲೂಕು ಇದರ ಮಾರ್ಗದರ್ಶನದಲ್ಲಿ ಅಂಬಿಕಾರೋಡ್ ಗಟ್ಟಿ ಸಮಾಜ ಭವನ ಸಭಾಂಗಣದಲ್ಲಿ ಶನಿವಾರ ನಡೆದ ಕೇಂದ್ರ ಒಕ್ಕೂಟ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವಿಶ್ವದಲ್ಲೇ ಮಂಗಳೂರು ನಗರ ವಾಸಿಸಲು ಉತ್ತಮವಾದ ಸ್ಥಳ ಎಂದು ಅಂತಾರಾಷ್ಟ್ರೀಯ ಸಂಸ್ಥೆಯೊಂದು ವರದಿ ನೀಡಿದೆ. ಅದರಲ್ಲೂ ಶ್ರೀ ಕ್ಷೇತ್ರ ಧರ್ಮಸ್ಥಳ ದೇಶದಲ್ಲೇ ಸ್ವಚ್ಛ ಗ್ರಾಮ ಎಂಬ ಸ್ಥಾನವನ್ನು ಗಳಿಸಿದೆ. ಇದು ಖಾವಂದರ ಅವಿರತ ಶ್ರಮದಿಂದ ಸಾಧ್ಯವಾಗಿದೆ. ಕ್ಷೇತ್ರದಲ್ಲಿ ರೂ.8 ಕೋಟಿ ವೆಚ್ಚದಲ್ಲಿ ನೀರಿನ ಪುನರ್ ಸಂಸ್ಕರಣಾ ಘಟಕವನ್ನು ಸ್ಥಾಪಿಸಲಾಗಿದೆ. ಸಮಾಜಕ್ಕೆ ಉಪದೇಶ ನೀಡುವ ಮುನ್ನ ಬದಲಾವಣೆ…

Read More