ಉಳ್ಳಾಲ ನ್ಯೂಸ್ ನೆಟ್‍ವರ್ಕ್ ನಡುಪದವು : ಕೊಣಾಜೆ ನಡುಪದವಿನ ಪಿ.ಎ. ತಾಂತ್ರಿಕ ಮಹಾವಿದ್ಯಾಲಯದ ಆಶ್ರಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ ಕಾಲೇಜುಗಳ ಮಂಗಳೂರು ವಲಯ ಮಟ್ಟದ ಅಂತರ್‍ಕಾಲೇಜು ಫುಟ್ಬಾಲ್ ಪಂದ್ಯಾಟ ಎ.5 ಮತ್ತು 6 ರಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿದೆ. ಪಂದ್ಯಾಟದಲ್ಲಿ ಭಾಗವಹಿಸಲು ಇಚ್ಚಿಸುವ ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯ ಸಂಯೋಜನೆಗೊಳಪಟ್ಟ ತಾಂತ್ರಿಕ ಮಹಾವಿದ್ಯಾಲಯ ತಂಡಗಳು ಎ.5ರ ಬೆಳಿಗ್ಗೆ 9ಕ್ಕೆ ಮೈದಾನದಲ್ಲಿ ತಂಡದ ಹೆಸರು ನೊಂದಾಯಿಸಿಕೊಳ್ಳಬಹುದು ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.
Author: UllalaVani
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕಿನ್ಯಾ: ಆಡಿನ ವಿಚಾರಕ್ಕೆ ಸಂಬಂಧಿಸಿ ನೆರೆಮನೆಯ ಯುವಕನೋರ್ವ ರಾಡಿನಿಂದ ವೃದ್ಧ ದಂಪತಿ ಸೇರಿದಂತೆ ಅವರ ಪುತ್ರನಿಗೆ ಹಲ್ಲೆ ನಡೆಸಿರುವ ಘಟನೆ ಕಿನ್ಯಾ ಶಾಲೆ ಸಮೀಪದ ಬೆಳರಿಂಗೆ ಬಳಿ ಬುಧವಾರ ತಡರಾತ್ರಿ ವೇಳೆ ಸಂಭವಿಸಿದ್ದು, ಗಾಯಗೊಂಡಿರುವ ಮೂವರು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿನ್ಯಾ ಬೆಳರಿಂಗೆ ನಿವಾಸಿಗಳಾದ ಜನಾರ್ದನ ಆಳ್ವ (70), ಅವರ ಪತ್ನಿ ಪುಷ್ಪಾವತಿ (52) ಹಾಗೂ ಪುತ್ರ ಅಜಿತ್ (30) ದಾಳಿಗೊಳಗಾದವರು. ನೆರೆಮನೆಯ ಸಫಾಕ್ ((28) ಆತನ ಸಹೋದರನ ನೆರವಿನಿಂದ ದಾಳಿ ನಡೆಸಿರುವುದಾಗಿ ಹಲ್ಲೆಗೊಳಗಾದ ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆ ವಿವರ: ಸಂಜೆ ವೇಳೆ ಜನಾರ್ದನ ಹಾಗೂ ಮನೆಯವರು ಟಿ.ವಿ ನೋಡುತ್ತಿದ್ದ ಸಂದರ್ಭ ನೆರೆಮನೆಯ ಸಫಾಕ್ ರಾಡಿನಿಂದ ನಾಯಿಗೆ ಬಡಿಯಲು ಆರಂಭಿಸಿದ್ದನು. ಇದನ್ನು ಕಂಡು ಜನಾರ್ದನ ಅವರು ಪ್ರಶ್ನಿಸುತ್ತಿದ್ದಂತೆ ಅವರ ಮೇಲೆಯೂ ರಾಡಿನಿಂದ ಹಲ್ಲೆ ನಡೆಸಿದ್ದಾನೆ. ಇದನ್ನು ಕಂಡ ಪುತ್ರ ಅಜಿತ್ ತಡೆಯಲು ಮುಂದಾದಾಗ ಅವರ ಮೇಲೂ ಕೈಯಿಂದ ಹಲ್ಲೆ ನಡೆಸಿದ್ದಾನೆ. ಇದನ್ನು ತಡೆಯಲು ಬಂದ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ನರಿಂಗಾನ : ನರಿಂಗಾನ ವಿದ್ಯಾನಗರದ ರಕ್ತೇಶ್ವರಿ ಕಟ್ಟೆಯ ಶ್ರೀ ರಕ್ತೇಶ್ವರಿ ಅಮ್ಮನವರ ಸನ್ನಿಧಿಯ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ತೃತೀಯ ವರ್ಧಂತಿ ಉತ್ಸವ ಎ.23 ರಂದು ನಡೆಯಲಿದ್ದು ಆಮಂತ್ರಣ ಪತ್ರಿಕೆಯ ಬಿಡುಗಡೆ ಇತ್ತೀಚೆಗೆ ಕ್ಷೇತ್ರದಲ್ಲಿ ನಡೆಯಿತು. ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಅಮ್ಮೆಂಬಳ ಸದಾಶಿವ ನಾವಡ ಇವರು ಬಿಡುಗಡೆಗೊಳಿಸಿದರು. ಶ್ರೀ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿದ ಮಹಾದ್ವಾರವನ್ನು ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ವೇದಮೂರ್ತಿ ವಾಸುದೇವ ಆಸ್ರಣ್ಣ ಸಮರ್ಪಣೆ ನಡೆಸಲಿದ್ದಾರೆ. ಬೋಳಂತಕೋಡಿ ರಾಮಭಟ್ ನೇತೃತ್ವದಲ್ಲಿ ದ್ವಾದಶ ನಾರಿಕೇಳ ಗಣಯಾಗ ಮತ್ತು ಶ್ರೀ ಲಲಿತಾ ಸಹಸ್ರನಾಮ ಯಾಗ ಜರಗಲಿದ್ದು, ಸಾಂಸ್ಕøತಿ ಕಾರ್ಯಕ್ರಮ, ನೇಮೋತ್ಸವ ನಡೆಯಲಿದೆ ಎಂದು ತಿಳಿಸಿದರು.
ಕೊಣಾಜೆ : ಕರ್ತವ್ಯ ಮೆರೆದ ಪೊಲೀಸ್ ಪೇದೆಗೆ ದುಷ್ಕರ್ಮಿಯೋರ್ವ ಕೆನ್ನೆಗೆ ಬಡಿದು ಬೈಕಿನಲ್ಲಿ ಪರಾರಿಯಾಗಿರುವ ಘಟನೆ ಮಂಗಳವಾರ ತಡರಾತ್ರಿ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರು ಎಂಬಲ್ಲಿ ನಡೆದಿದೆ. ಕೊಣಾಜೆ ಪೊಲೀಸ್ ಠಾಣೆಯ ಪೇದೆ ಆದರ್ಶ್(21) ಹಲ್ಲೆಗೊಳಗಾದವರು. ಘಟನೆ ವಿವರ: ಮಂಗಳೂರಿನಲ್ಲಿ ಪಿಎಫ್ ಐ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಹಿನ್ನೆಲೆಯಲ್ಲಿ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಗಿಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ನಿಟ್ಟಿನಲ್ಲಿ ಬೋಳಿಯಾರು ಸಮೀಪ ಕೊಣಾಜೆ ಠಾಣೆಯ ಪೇದೆ ಆದಶ್ ್ ಗಸ್ತಿನಲ್ಲಿದ್ದರು. ತಡರಾತ್ರಿ ಸಮಯದಲ್ಲಿ ಮುಡಿಪು ಕಡೆಯಿಂದ ಬೋಳಿಯಾರು ಕಡೆಗೆ ಬರುತ್ತಿದ್ದ ಬೈಕ್ ಸವಾರನೋರ್ವ ಮಾರ್ಗ ಮಧ್ಯೆ ರಸ್ತೆ ವಿಭಜಕಕ್ಕೆಂದು ಅಗೆಯಲಾಗಿದ್ದ ಹೊಂಡಕ್ಕೆ ಬೈಕ್ ಸಮೇತ ಉರುಳಿಬಿದ್ದಿದ್ದನು. ಇದನ್ನು ಕಂಡ ಸ್ಥಳೀಯ ಯುವಕರು ಪೊಲೀಸ್ ಪೇದೆಯ ಜತೆಗೆ ಕೈಜೋಡಿಸಿ ಹೊಂಡಕ್ಕೆ ಬಿದ್ದವನನ್ನು ಬೈಕ್ ಸಮೇತ ಮೇಲಕ್ಕೆ ಎತ್ತಿದ್ದರು. ಬಳಿಕ ಬೈಕ್ ಸವಾರ ಪೊಲೀಸ್ ಪೇದೆಯನ್ನು ತರಾಟೆಗೆ ತೆಗೆದು, ಹೊಂಡವನ್ನು ಮುಚ್ಚಲು ನಿಮ್ಮಿಂದ ಸಾಧ್ಯವಿಲ್ಲ. ಅದನ್ನು ಬಿಟ್ಟು ಬೇರೆಲ್ಲಾ ದೌರ್ಜನ್ಯ ಎಸಗುತ್ತೀರಿ’…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಮಂಗಳೂರು ಪೊಲೀಸ್ ಕಮೀಷನರ್ ಕಚೇರಿ ಎದುರು ಮಂಗಳವಾರದಂದು ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಪಿಎಫ್ ಐ ಕಾರ್ಯಕರ್ತರಿಗೆ ಲಾಠಿಚಾರ್ಜ್ ನಡೆಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸೂಕ್ಷ್ಮ ಪ್ರದೇಶ ತೊಕ್ಕೊಟ್ಟು, ಉಳ್ಳಾಲ ವ್ಯಾಪ್ತಿಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ತೊಕ್ಕೊಟ್ಟು, ದೇರಳಕಟ್ಟೆ, ಕುತ್ತಾರು, ಕೋಟೆಕಾರು, ತಲಪಾಡಿ , ಭಾಗಗಳಲ್ಲಿ ಪೊಲೀಸ್ ಆಯುಕ್ತರ ಆದೇಶದಂತೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಥಳೀಯ ಠಾಣಾ ಸಿಬ್ಬಂದಿ ರಸ್ತೆ ಬದಿ ಗಸ್ತಿನಲ್ಲಿರುವುದು ಕಡಿಮೆಯಾಗಿ ಕಂಡುಬಂತು. ಬೆಳಿಗ್ಗೆ ಉರ್ವ ಸಬ್ ಇನ್ಸ್ ಪೆಕ್ಟರ್ ಮೇಲಿನ ಹಲ್ಲೆಯಿಂದಾಗಿ ಸ್ಥಳೀಯ ಪೊಲೀಸರು ಬೆದರಿ ಗಸ್ತಿನಲ್ಲಿರಲಿಲ್ಲ ಅನ್ನುವುದು ಸ್ಥಳೀಯರ ಅಭಿಪ್ರಾಯವಾಗಿತ್ತು. ಕೆಎಸ್‍ಆರ್‍ಪಿ ಪೊಲೀಸರೇ ಹೆಚ್ಚಾಗಿ ಭದ್ರತೆಯಲ್ಲಿರುವುದು ಕಂಡುಬಂತು. ಪೊಲೀಸರ ದೌರ್ಜನ್ಯಕ್ಕೆ: ಎಸ್ಸೆಸ್ಸೆಫ್ ಖಂಡನೆ ಮಂಗಳೂರಿನಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ದೌರ್ಜನ್ಯ ಎಸಗಿರುವುದನ್ನು ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಡಗು ಖಂಡಿಸಿದ್ದಾರೆ. ಇಲ್ಲಿ ಯಾವುದೇ ಪ್ರತಿಭಟನೆ ನಡೆದಾಗ ಸಾಮಾನ್ಯವಾಗಿ ಸಂಬಂಧಪಟ್ಟವರು ಪ್ರತಿಭಟನಾ ಸ್ಥಳಕ್ಕೆ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಚೆಂಬುಗುಡ್ಡೆ : ಉಳ್ಳಾಲ ನಗರಸಭಾ ವ್ಯಾಪ್ತಿಯ ಚೆಂಬುಗುಡ್ಡೆ ಮಹಾಂಕಾಳಿ ಪಡ್ಪು ಬಳಿ ಪರಿಶಿಷ್ಠ ಜಾತಿ ಮತ್ತು ವರ್ಗಗಳಿಗೆ ಸೇರಿದ ಕಾಲನಿಯಲ್ಲಿ ಎರಡನೇ ಮನೆ ನಿರ್ಮಿಸಲು ಯತ್ನಿಸಿದ್ದ ಮಹಿಳೆಯೊಬ್ಬರ ಪ್ರಯತ್ನಕ್ಕೆ ನಗರಸಭೆ ಅ„ಕಾರಿಗಳು ತಡೆಯೊಡ್ಡಿದ್ದು, ಮಹಿಳೆಯ ವಶದಲ್ಲಿ ಭೂಮಿಯನ್ನು ಮಂಗಳವಾರ ನಡೆಸಿದ ಕಾರ್ಯಾಚರಣೆಯಲ್ಲಿ ನಗರಸಭೆಯ ವಶಕ್ಕೆ ತೆಗೆದುಕೊಂಡರು. ಪಾರ್ವತಿ ಯಾನೆ ರಮ್ಯಾ ಕಳೆದ ಒಂದೂವರೆ ವರ್ಷದಿಂದ ಚೆಂಬುಗುಡ್ಡೆ ಮಹಾಂಕಾಳಿಪಡ್ಪುವಿನಲ್ಲಿ ವಾಸಿಸುತ್ತಿದ್ದು, ಪರಿಶಿಷ್ಠ ಜಾತಿ ಪಂಗಡಕ್ಕೆ ಸಂಬಂ„ಸಿದ ಸವಲತ್ತನ್ನು ನಗರಸಭೆಯಿಂದ ಪಡೆದಿದ್ದರು ಎನ್ನಲಾಗಿದೆ. ಕಳೆದ ಮೂರು ತಿಂಗಳಿಂದ ತನ್ನ ಮನೆಯ ಪಕ್ಕದಲ್ಲಿದ್ದ ಖಾಲಿ ಜಾಗವನ್ನು ಅತಿಕ್ರಮಿಸಿಕೊಂಡು ಅದರಲ್ಲಿ ಮನೆ ಕಟ್ಟುವ ನಿಟ್ಟಿನಲ್ಲಿ ಸಂಬಂ„ತ ಇಲಾಖೆಯನ್ನು ಸಂಪರ್ಕಿಸಿದ್ದು, ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ವಿಚಾರದಲ್ಲಿ ಕಳೆದ ಎರಡು ತಿಂಗಳಿಂದ ಸ್ಥಳೀಯರಿಗೆ ಮತ್ತು ಪಾರ್ವತಿ ಅವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದರಿಂದ ಕೆರಳಿದ ಸ್ಥಳೀಯರು ಉಳ್ಳಾಲ ನಗರಸಭೆಗೆ ದೂರು ನೀಡಿದ್ದರು. ನಗರಸಭೆಯ ಅ„ಕಾರಿಗಳು ಪರಿಶೀಲನೆ ನಡೆಸಿ ಮಂಗಳವಾರ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಚಿತ್ರಗಳು: ಅಶೋಕ್ ಮಂಗಳೂರು ಮಾಡೂರು : ಮಾಡೂರಿನ ಶಿರಡಿ ಸಾಯಿಬಾಬಾನ ಮಂದಿರದಲ್ಲಿ ಬೆಳ್ಳಿ ಚಿನ್ನ, ರಥಕ್ಕೆ ಪ್ರಾಮುಖ್ಯತೆ ನೀಡದೆ ದೀನ ದಲಿತರ ಸೇವೆ ನಡೆಯುವ ಮೂಲಕ ಸಾಯಿಬಾಬರ ನಿಜವಾದ ಪೂಜೆ ಈ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದು ಶ್ರೀ ನಿತ್ಯಾನಂದ ಮಹಾಪೀಠಂ, ಶ್ರೀ ಕ್ಷೇತ್ರ ಕೊಂಡೆವೂರಿನ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಭಿಪ್ರಾಯಪಟ್ಟರು.ಅವರು ಮಾಡೂರು ಕೊಂಡಾಣದ ಸಾಯಿಧಾಮದ ಶ್ರೀ ಶಿರಡಿ ಬಾಬಾ ಮಂದಿರದ ದ್ವಿತೀಯ ವಾರ್ಷಿಕೋತ್ಸವ ಮತ್ತು ರಾಮನವಮಿ ಉತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಶಿರಡಿ ಸಾಯಿ ಮಂದಿರದಲ್ಲಿ ಸಂಕಲ್ಪ ದೈವ ಸಂಕಲ್ಪವಾಗಿದೆ. ಶಾಲೆ, ಆಸ್ಪತ್ರೆ ಸೇರಿದಂತೆ ಸಮಾಜದಲ್ಲಿ ಹಿಂದುಳಿದವರ ಕಾರ್ಯಕ್ಕೆ ಮಂದಿರ ಪೂರಕವಾಗುತ್ತಿದ್ದು, ಶಿರಡಿಗೆ ಹೋಗಲು ಅನಾನುಕೂಲವಾಗುವ ಭಕ್ತರಿಗೆ ಈ ಕ್ಷೇತ್ರ ಪರ್ಯಾಯ ಕ್ಷೇತ್ರವಾಗಿ ಬೆಳಗುತ್ತಿದೆ ಎಂದರು. ಶಿರಡಿ ಸಾಯಿ ಬಾಬಾರ ಭಕ್ತರಿಗೆ ಶ್ರದ್ಧೆ ಮತ್ತು ತಾಳ್ಮೆ ಅತೀ ಅಗತ್ಯ ಈ ಎರಡು ಗುಣಗಳು ಇದ್ದರೆ ಮನಸ್ಸಿನೊಂದಿಗೆ ಜ್ಞಾನಶುದ್ಧೀಕರಣ ಸಾಧ್ಯವಿದ್ದು, ಶ್ರದ್ಧೆ ಭಕ್ತಿಯಿಂದ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ರಾಜಗುಡ್ಡೆ : ಹರೇಕಳ ಗ್ರಾಮದ ರಾಜಗುಡ್ಡೆಯಲ್ಲಿರುವ ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಅಮಿತಾ ಶೆಟ್ಟಿ ಅವರಿಗೆ ಶಾಲಾ ಎಸ್‍ಡಿಎಂಸಿ, ಗ್ರಾಮಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ಸನ್ಮಾನ ಕಾಯಕ್ರಮ ನಡೆಯಿತು.ಎಸ್‍ಡಿಎಂಸಿ ಹಿರಿಯ ಸದಸ್ಯ ರಾಮದಾಸ್ ಪೂಂಜ ಮಾತನಾಡಿ ಸನ್ಮಾನ ನೆರವೇರಿಸಿ ತಮ್ಮ ವೃತ್ತಿ ಜೀವನದಲ್ಲಿ ಪ್ರಾಮಾಣಿಕ ಹಾಗೂ ಕ್ರೀಯಾಶೀಲವಾಗಿ ಸೇವೆ ಸಲ್ಲಿಸಿದ ಕೀರ್ತಿ ಅಮಿತಾ ಅವರದ್ದಾಗಿದ್ದು, ನಿವೃತ್ತ ಜೀವನದಲ್ಲೂ ತಮ್ಮ ಕಾರ್ಯ ಚಟುವಟಿಕೆಗಳನ್ನು ಮುಂದುವರೆಸಲಿ ಎಂದು ಶುಭ ಹಾರೈಸಿದರು. ಸನ್ಮಾನ ಸ್ವೀಕರಿಸಿದ ನಿವೃತ್ತ ಶಿಕ್ಷಕಿ ಅಮಿತಾ ಶೆಟ್ಟಿ ಮಾತನಾಡಿ ನಮ್ಮಿಂದಾಗಿ ಹಲವು ಮಂದಿ ಜೀವನ ಪಾಠ ಕಲಿಸಲು ಸಾಧ್ಯವಾದಂತಹ ಶಿಕ್ಷಕ ವೃತ್ತಿ ಅತ್ಯಂತ ತೃಪ್ತಿ ತಂದಿದೆ. ನನ್ನ ಗ್ರಾಮದಲ್ಲೇ, ಗ್ರಾಮಸ್ಥರ ಸಮ್ಮುಖದಲ್ಲಿ ವೃತ್ತಿಯಿಂದ ನಿವೃತ್ತಿಯಾಗುತ್ತಿರುವುದು ಸಂತಸ ತಂದಿದೆ ಎಂದರು. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸುಗುಣ, ನಿವೃತ್ತ ಮುಖ್ಯ ಶಿಕ್ಷಕಿ ಗಂಗಾಬಾಯಿ, ಎಸ್‍ಡಿಎಂಸಿ ಉಪಾಧ್ಯಕ್ಷೆ ಶಾಂತ, ಸಮುದಾಯದತ್ತ ಶಾಲೆ ನೋಡೆಲ್ ಶಿಕ್ಷಕರಾದ ಶಿವಕುಮಾರ್…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ನಾಟೆಕಲ್ : ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಲಾದ ವೇವ್ಸ್-2017 ಸ್ಪರ್ಧೆಯಲ್ಲಿ ಕಣಚೂರು ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಆ್ಯಂಡ್ ಸಯನ್ಸ್ ಕಾಲೇಜಿನ ಪ್ರಥಮ ಬಿ.ಕಾಂ. ವಿದ್ಯಾರ್ಥಿನಿ ಫಾತಿಮಾ ಮುಫಿದಾ, ಪೇಪರ್ ಪ್ರೆಸೆಂಟೇಷನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ದೇರಳಕಟ್ಟೆ: ಬ್ಯಾರಿಕಲಾವಿದರು ಮತ್ತು ಬರಹಗಾರರ ಒಕ್ಕೂಟವಾಗಿರುವ ದೇರಳಕಟ್ಟೆಯ `ಮೇಲ್ತೆನೆ’ ಸಂಘಟನೆಯ ವತಿಯಿಂದ ದೇರಳಕಟ್ಟೆಯಲ್ಲಿ `ಬ್ಯಾರಿ ಸಾಹಿತ್ಯ ಸಂವಾದಕೂಟ’ ನಡೆಯಿತು. ಮೇಲ್ತೆನೆ ಅಧ್ಯಕ್ಷ ಆಲಿಕುಂಞ ಪಾರೆ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಇಸ್ಮತ್ ಫಜೀರ್ ಮಂಡಿಸಿದ `ಬ್ಯಾರಿ ಭಾಷೆಯ ಪ್ರಭೇದಗಳು’ ಎಂಬ ಪ್ರಬಂಧದ ಮೇಲೆ ಚರ್ಚೆ ನಡೆಸಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾದ ಆರೀಫ್ ಕಲ್ಕಟ್ಟ, ಬಶೀರ್ ಅಹ್ಮದ್‍ಕಿನ್ಯ, ಪ್ರೋ| ನಿಯಾಝ್ ಚರ್ಚೆಯಲ್ಲಿ ಭಾಗವಹಿಸಿದ್ದರು.ಜತೆ ಕಾರ್ಯದರ್ಶಿ ಬಶೀರ್ ಕಲ್ಕಟ್ಟ ಸ್ವಾಗತಿಸಿ, ವಂದಿಸಿದರು.

