Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಕಿನ್ಯ ದುರ್ಗಾಪರಮೇಶ್ವರೀ ಯಕ್ಷಗಾನ ಯುವಕ ಮಂಡಲದ 46ನೆಯ ವಾರ್ಷಿಕೋತ್ಸವ ಕಿನ್ಯ ದುರ್ಗಾಪುರದಲ್ಲಿ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಕ್ಯಾಪನ್ ಡಿ. ಮಾಧವ ಶೆಟ್ಟಿ ಮಾತನಾಡಿ ಯಕ್ಷ ಅಂದರೆ ಪೂಜೆ. ಗಾನವೆಂದರೆ ಕುಣಿತ. ಅಂತಹ ಅದ್ಭುತ ಕಲೆಯನ್ನು ಪೂಜಿಸುವುದು ಯಕ್ಷಗಾನದ ತತ್ವ ಎಂದರು. ಕಾರ್ಯಕ್ರಮದಲ್ಲಿ ಪಡ್ರೆ ಚಂದ್ರು, ಯಕ್ಷಗಾನ ನಾಟ್ಯಗುರು ಸಬ್ಬಣಕೋಡಿ ರಾಮ್ ಭಟ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಹಿರಿಯ ಯಕ್ಷಗಾನ ಕಲಾವಿದ ಈಶ್ವರ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು. ಸೋಮೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್, ತೊಕ್ಕೊಟ್ಟು ಭಗವತೀ ಬ್ಯಾಂಕಿನ ಅಧ್ಯಕ್ಷ ಸದಾಶಿವ ಉಳ್ಳಾಲ್, ಸೋಮೇಶ್ವರ ರಕ್ತೇಶ್ವರಿ ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ಎಸ್. ರಾಮ್‍ದಾಸ್, ಕಿನ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಿನಿ ಪೂಜಾರಿ ಉಪಸ್ಥಿತರಿದ್ದರು. ದುರ್ಗಾಪರಮೇಶ್ವರೀ ಯಕ್ಷಗಾನ ಯುವಕ ಮಂಡಲದ ಅಧ್ಯಕ್ಷ ಮಹಾಬಲ ಪೂಂಜ, ಗೌರವಾಧ್ಯಕ್ಷ ರಾಮಯ್ಯಕಿಲ್ಲೆ ಉಪಸ್ಥಿತರಿದ್ದರು. ಯುವಕ ಮಂಡಲದ ಸಂಚಾಲಕ ಬಾಬು ಶ್ರೀ ಶಾಸ್ತಾ ಕಿನ್ಯ ಸ್ವಾಗತಿಸಿದರು. ಪತ್ರಕರ್ತ ವಿದ್ಯಾಧರ್ ಶೆಟ್ಟಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ : ಹಿರಿಯ ವಿದ್ವಾಂಸ ಕೃಷ್ಣಾಪುರದಲ್ಲಿ ಹದಿನೈದು ವರ್ಷಗಳ ಕಾಲ ಮತ್ತು ಉಳ್ಳಾಲ ಪ್ರದೇಶದ ಕೆಲ ಮಸೀದಿಗಳಲ್ಲಿ ಖತೀಬರಾಗಿ ಕಾರ್ಯನಿರ್ವಸಿದ ಇಬ್ರಾಹೀಂ ಮದನಿ (62) ಗುರುವಾರ ಮಧ್ಯಾಹ್ನ ಮುಕಚ್ಚೇರಿಯ ಸ್ವಗೃಹದಲ್ಲಿ ನಿಧನರಾದರು. ನಾಲ್ವರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ತೊಕ್ಕೊಟ್ಟು ಭಟ್ನಗರ ಶ್ರೀ ಜೈ ವೀರಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷರಾಗಿ ಕೆ. ರಾಮಚಂದ್ರ ತೊಕ್ಕೊಟ್ಟು ಆಯ್ಕೆಯಾಗಿದ್ದಾರೆ. ಟ್ರಸ್ಟಿಗಳಾದ ರಾಜೀವ ಮೆಂಡನ್, ವಿಠಲ ಶ್ರೀಯಾನ್, ಸುಂದರ ಅಮೀನ್, ಮೋನಪ್ಪ ಶ್ರೀಯಾನ್, ಜಯಾನಂದ ಅಂಚನ್, ದೇವದಾಸ್ ಶ್ರೀಯಾನ್ ಇವರ ಉಪಸ್ಥಿತಿಯಲ್ಲಿ 2016ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಇತ್ತೀಚೆಗೆ ಆಯ್ಕೆಮಾಡಲಾಯಿತು. ಉಪಾಧ್ಯಕ್ಷರಾಗಿ ಸುರೇಂದ್ರ ಶೆಟ್ಟಿ ಮಂಚಿಲಗುತ್ತು, ವಿಶ್ವನಾಥ ಮೆಂಡನ್, ಕಾರ್ಯದರ್ಶಿಯಾಗಿ ಸತೀಶ್ ಭಟ್ನಗರ, ಕೋಶಾಧಿಕಾರಿಯಾಗಿ ರೋಹಿದಾಸ್ ಭಟ್ನಗರ, ಜೊತೆ ಕಾರ್ಯದರ್ಶಿಯಾಗಿ ಧರ್ಮರಾಜ, ದಿನೇಶ್ ನಾೈಕ್ ತೊಕ್ಕೊಟ್ಟು, ಲೆಕ್ಕಪರಿಶೋಧಕರಾಗಿ ಶಿವರಾಮ ಟಿ., ಕ್ರೀಡಾ ಕಾರ್ಯದರ್ಶಿಯಾಗಿ ನವೀನ್ ಕುಂಪಲ, ಜೊತೆ ಕ್ರೀಡಾ ಕಾರ್ಯರ್ಶಿಯಾಗಿ ಕಿಶೋರ್ ಗಾಂಧಿನಗರ, ಪ್ರವೀಣ್ ಕೊಲ್ಯ ಸದ್ಯರಾಗಿ ರಮೇಶ್ ಮೆಂಡನ್, ನಾಗೇಶ್ ಶೆಟ್ಟಿ, ಪ್ರಕಾಶ್ ಕುಂಪಲ, ತರುಣ್ ಶೆಟ್ಟಿ ಕುಂಪಲ, ಶರತ್ ತೊಕ್ಕೊಟ್ಟು, ಪ್ರದೀಪ್ ಕಾಪಿಕಾಡ್, ಚಂದ್ರ ಮೆಂಡನ್, ನಾಗೇಶ್ ಕುಂಪಲ, ಕೃಷ್ಣಪ್ಪ ಮೆಂಡನ್ ಲೋಕೇಶ್ ಕುತ್ತಾರ್ ಇವರು ಆಯ್ಕೆಯಾದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಉಪ್ಪಿನಂಗಡಿ ನೀರಕಟ್ಟೆಯಲ್ಲಿ ಪತ್ತೆಯಾದ ಅನಾಥ ಕಾರು ಮತ್ತು ಅದರೊಳಗೆ ರಕ್ತದ ಕಲೆಗಳು ಕಂಡ ಪ್ರಕರಣಕ್ಕೆ ಸಂಬಂಧಿಸಿ ನಾಪತ್ತೆಯಾದ ಟೂರಿಸ್ಟ್ ಕಾರು ಚಾಲಕ ಹಾಗೂ ಮಾಲೀಕ ವಿ.ಎ.ಇಸ್ಮಾಯಿಲ್ ಕುರಿತು ಕೊಣಾಜೆ ಠಾಣೆಯಲ್ಲಿ ಅವರ ಪತ್ನಿ ನೆಬೀಸಾ ಅವರು ನಾಪತ್ತೆ ದೂರು ದಾಖಲಿಸಿದ್ದಾರೆ. ಘಟನೆ ವಿವರ: ಫೆ.16 ರಂದು ಪಾವೂರು ಇನೋಳಿಯ ದೆಡಿಂಜೆ ಮನೆಯಿಂದ ಇಸ್ಮಾಯಿಲ್ ಅವರು ಬೆಳಿಗ್ಗೆ 8.00 ಗಂಟೆಗೆ ಕೆ.ಎ.20.ಸಿ 3198 ಟೂರಿಸ್ಟ್ ಕಾರಿನಲ್ಲಿ ಮಂಗಳೂರು ಕಡೆಗೆ ಹೊರಟಿದ್ದರು. ಮತ್ತೆ 10.00 ಗಂಟೆ ಸುಮಾರಿಗೆ ಪತ್ನಿ ನೆಬೀಸಾ ಅವರಿಗೆ ಕರೆ ಮಾಡಿ ತಕ್ಷಣ ರೂ. 75,000 ಹಣದೊಂದಿಗೆ ಅಸೈಗೋಳಿಗೆ ಬರಲು ತಿಳಿಸಿದ್ದರು. ಅಲ್ಲಿಗೆ ಕಾರಿನಲ್ಲಿ ಬಂದಿದ್ದ ಇಸ್ಮಾಯಿಲ್ ಅವರು ಕರಾವಳಿ ಸೊಸೈಟಿಯಿಂದ ರೂ.1,75,000 ಹಣವನ್ನು ಪಡೆದು ಬಳಿಕ ಪತ್ನಿ ನೆಬೀಸಾ ಅವರಿಂದ ರೂ.75,000 ಹಣ ಸಹಿತ ಒಟ್ಟು 2,50,000 ನಗದಿನೊಂದಿಗೆ ಫರಂಗಿಪೇಟೆಗೆ ಹೋಗಲು ಇದೆ ಎಂದು ತಿಳಿಸಿ ಹೊರಟಿದ್ದರು. ಮತ್ತೆ ಸಂಜೆ 4.00 ಗಂಟೆಗೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಚ್ಚಿಲ :ಧರ್ಮದ ಮೇಲೆ ಪರಿಪೂರ್ಣ ವಿಶ್ವಾಸ ಇಟ್ಟುಕೊಂಡರೆ ಮಾತ್ರ ಪರಲೋಕದಲ್ಲಿ ರಕ್ಷಣೆ ಸಾಧ್ಯ. ವ್ಯಾಪಾರ, ಹಣ ಸಂಪಾದಣೆ, ವ್ಯವಹಾರ ಇಹಲೋಕಕ್ಕೆ ಮಾತ್ರ ಸೀಮಿತವಾಗಿದೆ ಹೊರತು ಪರಲೋಕಕ್ಕೆ ಅಲ್ಲ. ಶಾಂತಿ ಸೌಹಾರ್ದತೆಯಿಂದ ಇದ್ದುಕೊಂಡು ಇಸ್ಲಾಂ ಬೋಧಿಸಿದ ಮಾರ್ಗವನ್ನು ಅನುಕರಣೆ ಮಾಡಿ ಅಲ್ಲಾಹನಲ್ಲಿ ವಿಶ್ವಾಸ ಇಟ್ಟುಕೊಂಡಲ್ಲಿ ರಕ್ಷಣೆ ಸಿಗಬಹುದು ಎಂದು ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಹೇಳಿದರು. ಅವರು ಉಚ್ಚಿಲದಲ್ಲಿ ಅಸ್ಸಯ್ಯಿದ್ ಶರೀಫ್ ಅಲ್ ಅರಬ್ಬಿ ವಲಿಯುಲ್ಲಾಹಿಯವರ ಹೆಸರಿನಲ್ಲಿ ಮೂರು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ಉರೂಸ್ ಸಮಾರಂಭವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಸ್ವರ್ಗಕ್ಕೆ ಹೋಗಲು ಪರಿಶ್ರಮ ಬಹಳಷ್ಟು ಪಡೆಯಬೇಕು. ನರಕಕ್ಕೆ ಹೋಗಲು ಪರಿಶ್ರಮ ಬೇಡ. ಧಾರ್ಮಿಕ ಕ್ಷೇತ್ರದಲ್ಲಿ ಸಿಗುವ ವಿವಿಧ ಬಿರುದುಗಳು, ಎಸ್‍ಎಸ್‍ಎಫ್, ಎಸ್‍ಕೆ ಎಸ್‍ಎಸ್‍ಎಫ್, ವಿವಿಧ ಸಂಘಟನೆಗಳು ಇಹಲೋಕಕ್ಕೆ ಮಾತ್ರ ಸೀಮಿತ. ಪರಲೋಕದ ರಕ್ಷಣೆಗೆ ಈ ಸಂಘಟನೆ ನೆರವಿಗೆ ಬರುವುದಿಲ್ಲ ಎಂದರು. ಮಾತಿನಲ್ಲಿ ಜಾಗ್ರತೆ ವಹಿಸಬೇಕು. ಮಾತು ತಪ್ಪಿದರೆ ಶಾಂತಿ ಹದಗೆಟ್ಟು ಹೋಗಬಹುದು. ಮಾತಿನಿಂದ ರಕ್ಷಣೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಮೀನುಗಾರಿಕೆ ನಡೆಸುತ್ತಿರುವಾಗ ಬೋಟ್ ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದ ಉಳ್ಳಾಲ ಮೊಗವೀರಪಟ್ಣ ನಿವಾಸಿ ರಾಜ್ಯ ಪ್ರಶಸ್ತಿ ಪುರಸ್ಕøತ ಜೀವರಕ್ಷಕ ಈಜುಗಾರ ಜಯಂತ ಸಾಲಿಯಾನ್(48) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ತಿಂಗಳ ಹಿಂದೆ ತನ್ನದೇ ಪಾಲುದಾರಿಕೆಯ ಬೋಟ್‍ನಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಬೋಟ್‍ನಲ್ಲಿದ್ದ ಕಂಬ ತುಂಡಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಉಸ್ತಾದ್ ದಿ.ವೀರಪ್ಪ ಪುತ್ರನ್ ಅವರ ಪುತ್ರರಾಗಿದ್ದ ಅವರು ಕಬಡ್ಡಿ ಆಟಗಾರರಾಗಿದ್ದರು. ಬ್ರದರ್ಸ್ ಸ್ಪೋರ್ಟ್ ಕ್ಲಬ್, ಶ್ರೀ ಮಾರುತಿ ವ್ಯಾಯಾಮ ಶಾಲೆಯ ಸಕ್ರೀಯರಾಗಿದ್ದ ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದಾದಿಯರಿಗೆ ಗುಣಾತ್ಮಾಕ ಮತ್ತು ವಿವೇಚನಾಯುಕ್ತ ಸಂಶೋಧನೆಗಳ ಅಗತ್ಯವಿದ್ದು ಈ ನಿಟ್ಟಿನಲ್ಲಿ ಕಾರ್ಯಗಾರ ಸಹಕಾರಿಯಾಗಲಿದೆ ಎಂದು ಬೆಂಗಳೂರಿ ಎಂ.ಎಸ್.ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಎಜ್ಯೂಕೇಶನ್ ಆಂಡ್ ರಿಸರ್ಚ್‍ನ ಪ್ರಾಂಶುಪಾಲೆ ಡಾ. ಜಾದವ್ ಸೊನಾಲಿ ತಾರಚಂದ್ ಅಭಿಪ್ರಾಯಪಟ್ಟರು. ನಿಟ್ಟೆ ಉಷಾ ನರ್ಸಿಂಗ್ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ದೇರಳಕಟ್ಟೆಯ ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ವಿಂಶತಿ ಭವನದಲ್ಲಿ ಗುರವಾರ ಜರುಗಿದ ಸಂಶೋಧನೆಯ ಸಂಸ್ಕøತಿ ಹಾಗೂ ಆರೋಗ್ಯದ ಮಾಹಿತಿ ಮತ್ತು ಸಾಕ್ಷಿ ಪ್ರತಿಕ್ರಿಯೆ ಕುರಿತು ಎರಡು ದಿನಗಳ ಕಾಲ ನಡೆಯುವ ರಾಷ್ಟ್ರಮಟ್ಟದ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ದಾದಿಯರು ವೈದ್ಯಶಾಸ್ತ್ರದ ಎಲ್ಲಾ ವಿಭಾಗಗಳ ಪರಿಣತಿಯನ್ನು ಹೊಂದಿರುತ್ತಾರೆ. ಆದುದರಿಂದಾಗಿ ತಮ್ಮ ಸ್ವಂತ ವೃತ್ತಿಯ ಜ್ಞಾನದಿಂದ ಹೊರಬಾಗುತ್ತಿದ್ದಾರೆ. ರೋಗಿಗಳ ಶುಶ್ರೂಷೆಯೇ ತಮ್ಮ ಕರ್ತವ್ಯದ ಉದ್ದೇಶವಾಗಿರುವುದರಿಂದ ಅದರ ಕುರಿತು ಹೆಚ್ಚಿನ ಜ್ಞಾನ ಸಂಪಾದಿಸಿಕೊಳ್ಳುವುದರ ಅಗತ್ಯವಿದೆ. ದಾದಿಯರು ಅನ್ವೇಷಕರಲ್ಲ ಆದರೆ ಸಂಶೋಧನೆಯಲ್ಲಿ ಪ್ರವರ್ತಕರು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಎ.ಬಿ ಶೆಟ್ಟಿ ದಂತ ವಿದ್ಯಾಲಯದ ಪ್ರಾಂಶುಪಾಲ ಡಾ.ಯು.ಎಸ್.ಕೃಷ್ಣನಾಯಕ್…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ: ಮತಯಾಚನೆ ಸಂದರ್ಭ ಬಿಜೆಪಿ ಕಾರ್ಯಕರ್ತರಿಗೆ ಬೆಲ್ಲ ಮತ್ತು ನೀರು ನೀಡುವ ಜನರು ಅದೇ ಕಾಂಗ್ರೆಸ್ ಕಾರ್ಯಕರ್ತರಿಗೆ ಕಲ್ಲು ಮತ್ತು ಇಡಿಸೂಡಿ ಹಿಡಿದು ಓಡಿಸುತ್ತಿದ್ದಾರೆ. ಅದಕ್ಕಾಗಿ ಅವರು ರೋಡ್ ಷೋಗಳನ್ನೇ ನಡೆಸುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ. ಅವರು ಕೊಲ್ಯ ನಾರಾಯಣಗುರು ಸಭಾಭವನದಲ್ಲಿ ಬುಧವಾರ ಸಂಜೆ ಜರಗಿದ ಸೋಮೇಶ್ವರ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿದರು. ಕಳೆದ 10 ದಿನಗಳಿಂದ ಎಂಟು ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ಮತದಾರ ನೀಡಿದ್ದಾನೆ. ರಾಜ್ಯದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರ ಮಾಡಿರುವ ಆಶೀರ್ವಾದ ಜಿಲ್ಲೆಯ ಮತದಾರ ಮಾಡಲಿದ್ದಾನೆ. ನಾಲ್ಕು ಕ್ಷೇತ್ರಗಳಲ್ಲಿ ಸಚಿವ ಖಾದರ್ ವಿರುದ್ಧ ಅಲ್ಪಸಂಖ್ಯಾತರು ಕೈಜೋಡಿಸಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ಕಳೆದ ಎರಡು ಅವಧಿಗಳಲ್ಲಿ ಜಿಲ್ಲಾ ಪಂಚಾಯಿತಿ ಬಿಜೆಪಿ ಆಡಳಿತದಲ್ಲಿರುವ ಮೂಲಕ ನಿರ್ಮಲ ಪ್ರಶಸ್ತಿ ಪಡೆದುಕೊಂಡು ದೇಶದಲ್ಲೇ ಹೆಸರನ್ನು ಗಳಿಸಿ ಕಳಂಕ ರಹಿತವಾಗಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ ಅಲ್ಪಸಂಖ್ಯಾತರಿಗೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ: ಟೂರಿಸ್ಟ್ ವಾಹನ ಅಪಘಾತಕ್ಕೀಡಾಗಿ ವೃದ್ಧೆಯೊಬ್ಬರು ಮಗಳ ಎದುರಲ್ಲೇ ಸಾವನ್ನಪ್ಪಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೊಲ್ಯದಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಕೊಲ್ಯ ಸಾರಸ್ವತಿಕುಮೇರು ನಿವಾಸಿ ದಿ. ಮೋಹನ್ ಪೂಜಾರಿ ಎಂಬವರ ಪತ್ನಿ ನಾಗಮ್ಮ (70) ಮೃತರು. ಒಂಭತ್ತುಕೆರೆಯಲ್ಲಿ ನಡೆಯುತ್ತಿದ್ದ ಸಂಬಂಧಿಕರ ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾಗಮ್ಮ ಮಗಳನ್ನು ಕಾಸರಗೋಡು ಕಡೆಗೆ ಬಿಡಲೆಂದು ಕೊಲ್ಯ ಸಮೀಪ ರಾಷ್ಟ್ರೀಯ ಹೆದ್ದಾರಿ 66 ನ್ನು ದಾಟುವ ಸಂದರ್ಭ ಕೇರಳ ಕಡೆಯಿಂದ ಬರುತ್ತಿದ್ದ ಟೂರಿಸ್ಟ್ ವಾಹನ ಢಿಕ್ಕಿ ಹೊಡೆದು, ಅವರ ಮೇಲೆಯೇ ಚಲಿಸಿತ್ತು. ಪರಿಣಾಮ ನಾಗಮ್ಮ ಅವರ ದೇಹ ಛಿದ್ರಗೊಂಡು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಗಮ್ಮ ಅವರು ಮೂವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಉಳ್ಳಾಲದ ಸಮ್ಮರ್ ಸ್ಯಾಂಡಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಸೀಮಂತ ಕಾರ್ಯಕ್ರಮಕ್ಕೆ ರಜೆಯನ್ನು ಪಡೆದಿದ್ದರು. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಸ್ತೆ ದಾಟುವಾಗ ನಾಗಮ್ಮ ಅವರ ಮಗಳ ಕೈಯನ್ನೇ ಹಿಡಿದು ದಾಟುತ್ತಿದ್ದರು. ಆದರೆ ಅಪಘಾತವೂ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುತ್ತಾರು: ಮುನ್ನೂರು ತಾಲೂಕು ಪಂಚಾಯಿತಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಿಪಿಎಂ ಅಭ್ಯರ್ಥಿಯಲ್ಲೇ ತಿಳಿಯದೆ ಮತಯಾಚಿಸಿದ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಬಳಿಕ ತಬ್ಬಿಬಾದ ಪ್ರಸಂಗ ಕುತ್ತಾರು ಪದವಿನಲ್ಲಿ ಮಂಗಳವಾರ ಸಂಜೆ ನಡೆದಿದೆ. ಸೋಮೇಶ್ವರ ಹಾಗೂ ಕೊಣಾಜೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಚುನಾವಣಾ ಕಾವು ಏರುತ್ತಿದ್ದಂತೆ ಅದಕ್ಕೆ ಮೆರುಗು ನೀಡಿ ಮತಯಾಚಿಸುವ ಸಲುವಾಗಿ ಪೂಜಾರಿ ಕುತ್ತಾರು ಜಂಕ್ಷನ್ ಹಾಗೂ ಬೆಳ್ಮ ತಾ.ಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಮತಯಾಚನೆ ನಡೆಸುವ ಸಂದರ್ಭ ಅದೇ ಪ್ರದೇಶದಲ್ಲಿ ಸಿಪಿಎಂ ಅಭ್ಯರ್ಥಿ ಹಾಗೂ ಹಾಲಿ ಮುನ್ನೂರು ಪಂಚಾಯಿತಿ ಸದಸ್ಯೆ ಶಶಿಕಲಾ ಅವರು ಮತಯಾಚಿಸುತ್ತಿದ್ದರು. ಈ ವೇಳೆ ಪೂಜಾರಿ ಅವರು ಎದುರಾದಾಗ ಶಶಿಕಲಾ ಅವರ ಕೈಗೂ ಭಿತ್ತಿಪತ್ರವನ್ನು ನೀಡಿ ` ಬಡವರ ಪಾಲಿನ ಪಕ್ಷ ಕಾಂಗ್ರೆಸ್, ಅದನ್ನು ಗೆಲ್ಲಿಸಿದರೆ ಮಾತ್ರ ನೀವು ಶಾಂತಿಯಿಂದ ಬದುಕಲು ಸಾಧ್ಯ. ಹಾಗೆ ಮಾತನ್ನು ಮುಂದುವರಿಸುತ್ತಿದ್ದಂತೆ ಶಶಿಕಲಾ ಅವರು ಅಭ್ಯರ್ಥಿ ಎಂದು ಹೇಳಲು ಮುಂದಾಗುವಾಗ `ಒಮ್ಮೆ ನಿಲ್ಲಿ’ ಎಂದು ಮಾತನ್ನು ನಿಲ್ಲಿಸುತ್ತಿದ್ದ…

Read More