ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ದಾದಿಯರಿಗೆ ಗುಣಾತ್ಮಾಕ ಮತ್ತು ವಿವೇಚನಾಯುಕ್ತ ಸಂಶೋಧನೆಗಳ ಅಗತ್ಯವಿದ್ದು ಈ ನಿಟ್ಟಿನಲ್ಲಿ ಕಾರ್ಯಗಾರ ಸಹಕಾರಿಯಾಗಲಿದೆ ಎಂದು ಬೆಂಗಳೂರಿ ಎಂ.ಎಸ್.ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಎಜ್ಯೂಕೇಶನ್ ಆಂಡ್ ರಿಸರ್ಚ್ನ ಪ್ರಾಂಶುಪಾಲೆ ಡಾ. ಜಾದವ್ ಸೊನಾಲಿ ತಾರಚಂದ್ ಅಭಿಪ್ರಾಯಪಟ್ಟರು.
ನಿಟ್ಟೆ ಉಷಾ ನರ್ಸಿಂಗ್ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ದೇರಳಕಟ್ಟೆಯ ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ವಿಂಶತಿ ಭವನದಲ್ಲಿ ಗುರವಾರ ಜರುಗಿದ ಸಂಶೋಧನೆಯ ಸಂಸ್ಕøತಿ ಹಾಗೂ ಆರೋಗ್ಯದ ಮಾಹಿತಿ ಮತ್ತು ಸಾಕ್ಷಿ ಪ್ರತಿಕ್ರಿಯೆ ಕುರಿತು ಎರಡು ದಿನಗಳ ಕಾಲ ನಡೆಯುವ ರಾಷ್ಟ್ರಮಟ್ಟದ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ದಾದಿಯರು ವೈದ್ಯಶಾಸ್ತ್ರದ ಎಲ್ಲಾ ವಿಭಾಗಗಳ ಪರಿಣತಿಯನ್ನು ಹೊಂದಿರುತ್ತಾರೆ. ಆದುದರಿಂದಾಗಿ ತಮ್ಮ ಸ್ವಂತ ವೃತ್ತಿಯ ಜ್ಞಾನದಿಂದ ಹೊರಬಾಗುತ್ತಿದ್ದಾರೆ. ರೋಗಿಗಳ ಶುಶ್ರೂಷೆಯೇ ತಮ್ಮ ಕರ್ತವ್ಯದ ಉದ್ದೇಶವಾಗಿರುವುದರಿಂದ ಅದರ ಕುರಿತು ಹೆಚ್ಚಿನ ಜ್ಞಾನ ಸಂಪಾದಿಸಿಕೊಳ್ಳುವುದರ ಅಗತ್ಯವಿದೆ. ದಾದಿಯರು ಅನ್ವೇಷಕರಲ್ಲ ಆದರೆ ಸಂಶೋಧನೆಯಲ್ಲಿ ಪ್ರವರ್ತಕರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಎ.ಬಿ ಶೆಟ್ಟಿ ದಂತ ವಿದ್ಯಾಲಯದ ಪ್ರಾಂಶುಪಾಲ ಡಾ.ಯು.ಎಸ್.ಕೃಷ್ಣನಾಯಕ್ ಮಾತನಾಡಿ ಎಲ್ಲವೂ ಸಾಕ್ಷ್ಯಧಾರಿತವಾಗಿದ್ದು ವೃತ್ತಿಯಲ್ಲಿನ ಅನುಕೂಲತೆಗಳನ್ನು ಅರಿತು ಮುಂದುವರಿಯಿರಿ ಇಂತಹ ಕಾರ್ಯಗಾರಗಳಿಂದ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ದಾದಿಯರು ಜ್ಞಾನಗಳಿಸಲು ಸಾಧ್ಯ ಎಂದರು.
ಮಕ್ಕಳ ವಿಭಾಗದ ಮುಖ್ಯಸ್ಥೆ ಪ್ರೊ.ಸುಜಾತ, ಸ್ಕೂಲ್ ಆಫ್ ನರ್ಸಿಂಗ್ ಇದರ ಪ್ರಾಂಶುಪಾಲೆ ಕ್ಲೀಟಾ ಪಿಂಟೊ ಉಪಸ್ಥಿತರಿದ್ದರು.
ನಿಟ್ಟೆ ಉಷಾ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಫಾತಿಮ ಡಿಸಿಲ್ವಾ ಸ್ವಾಗತಿಸಿದರು. ಉಪನ್ಯಾಸಕರಾದ ಜೆನ್ಸಿ ಜೋಸೆಫ್ ಹಾಗೂ ಮೆಹನಾ ಪಾಯ್ಸ್ ಕಾರ್ಯಕ್ರಮ ನಿರ್ವಹಿಸಿದರು. ಉಪಪ್ರಾಂಶುಪಾಲೆ ಪ್ರೋ.ಸಬಿತ ನಾಯಕ್ ವಂದಿಸಿದರು.


