ಉಳ್ಳಾಲ ನ್ಯೂಸ್ ನೆಟ್‍ವರ್ಕ್ ತೊಕ್ಕೊಟ್ಟು: ರಿಕ್ಷಾ ಟೆಂಪೋ ಮತ್ತು ಕಾರಿನ ನಡುವೆ ಅಪಘಾತ ತೊಕ್ಕೊಟ್ಟು ಅಂಬಿಕಾರೋಡಿನಲ್ಲಿ ನಿನ್ನೆ ನಡೆಯಿತು. ಕಾಸರಗೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರು ಎದುರಿನಿಂದ ತೆರಳುತ್ತಿದ್ದ ಟೆಂಪೋಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ.
Author: UllalaVani
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಒಂಭತ್ತುಮಾಗಣೆ ಸೀಮೆ ಗಟ್ಟಿಯವರ ಶ್ರೀ ಸೋಮನಾಥ ಸೇವಾ ಸಮಿತಿ ವತಿಯಿಂದ ಕುಲಸ್ವಾಮಿ ಶ್ರೀ ಸೋಮನಾಥ ದೇವರಿಗೆ ರಜತ ಪಲ್ಲಕ್ಕಿ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಹಸಿರು ಹೊರೆಕಾಣಿಕೆ ಸಮರ್ಪಣೆಯ ಮೆರವಣಿಗೆ ತೊಕ್ಕೊಟ್ಟು ಅಂಬಿಕಾರೋಡಿನ ಗಟ್ಟಿ ಸಮಾಜಭವನದಿಂದ ಸೋಮೇಶ್ವರ ದೇವಸ್ಥಾನವರೆಗೆ ಭಾನುವಾರ ಜರಗಿತು.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಇನೋಳಿ: ತಂತ್ರಜ್ಞಾನಗಳಿಂದ ಆಗುತ್ತಿರುವ ಪರಿಣಾಮಗಳು ಆದಾಯಗಳಿಗೂ ಅಡ್ಡಿಯನ್ನು ಉಂಟು ಮಾಡುತ್ತಿದೆ. ಹೊಸತನವನ್ನು ಅಳವಡಿಸದ ಕಂಪೆನಿಗಳು ಕೇವಲ 10-15 ವರ್ಷಗಳಲ್ಲಿ ಮುಚ್ಚಲ್ಪಡುತ್ತಿರುವುದು ಕಳವಳಕಾರಿ ಸಂಗತಿ ಎಂದು ಇನ್ಫೋಸಿಸ್ ಮಂಗಳೂರು ಇದರ ಮುಖ್ಯಸ್ಥ ಗೋಪಿಕೃಷ್ಣನ್ ಕೊಣ್ಣನಾಥ್ ಹೇಳಿದ್ದಾರೆ. ಅವರು ಇನೋಳಿ ಬೆರೀಸ್ ನಾಲೆಡ್ಜ್ ಕ್ಯಾಂಪಸ್ಸಿನಲ್ಲಿ ಶನಿವಾರ ಜರಗಿದ ಬೇರೀಸ್ ಅಕಾಡೆಮಿ ಆಫ್ ಲರ್ನಿಂಗ್ ಇದರ ಬಿಟ್ ಆಂಡ್ ಬೀಡ್ಸ್ ಉತ್ಸವ್-2017 ರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 1950ರ ಅವಧಿಗಳಲ್ಲಿ ಆರಂಭವಾದ ಕಂಪೆನಿಗಳು 80-90 ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯಾಚರಿಸಿದರೆ, ಸದ್ಯ ಆರಂಭವಾಗುತ್ತಿರುವ ಕಂಪೆನಿಗಳು 10-15 ವರ್ಷಗಳಲ್ಲೇ ಮುಚ್ಚಿಹೋಗುತ್ತಿವೆ. ಹೊಸತನವನ್ನು ಅಳವಡಿಸದೆ ಕಂಪೆನಿಗಳು ನಷ್ಟ ಹೊಂದುವ ಮೂಲಕ ಮುಚ್ಚುಗಡೆಯಾಗುತ್ತಿದೆ. ತಂತ್ರಜ್ಞಾನಗಳಿಂದ ಆಗುತ್ತಿರುವ ಪರಿಣಾಮಗಳು ಆದಾಯಗಳಿಗೂ ಅಡ್ಡಿಯನ್ನು ಉಂಟು ಮಾಡುತ್ತಿದೆ. ಜ್ಞಾನ ವರ್ಧಿಗೆ ಪರಿಸರದಲ್ಲಿ ಆಗುತ್ತಿರುವ ಬದಲಾವಣೆಗಳ ಜತೆಗೆ ಬೆರೆಯಬೇಕಿದೆ. ಪಾಶ್ರ್ವವಾಗಿ ಚಿಂತಿಸುವ ಮೂಲಕ ಉತ್ಸಾಹದ ಜತೆಗೆ ಜೀವನ ಅನುಸರಿಸಬೇಕಿದೆ. ಸಮಸ್ಯೆಗಳನ್ನು ಅರ್ಥೈಸಿ…
ಉಳ್ಳಾಲ್‍ನ್ಯೂಸ್ ನೆಟ್‍ವರ್ಕ್ ಅಸೈಗೋಳಿ: ತುಳುನಾಡು ರಕ್ಷಣಾ ವೇದಿಕೆಯ ಮಂಗಳೂರು ವಿಧಾನಸಭಾ ಕ್ಷೇತ್ರ ಘಟಕದ ವತಿಯಿಂದ ಖಾಸಗಿ ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಲಾರಿ ಮತ್ತು ಬಸ್ ಚಾಲಕರಿಗಾಗಿ ಖಾಸಗಿ ವಾಣಿಜ್ಯ ವಾಹನ ಚಾಲಕರ ವಿಮಾ ಯೋಜನೆಯ 5 ನೇ ಹಂತದ ನೊಂದಾವಣೆ ಕಾರ್ಯಕ್ರಮ ಎಪ್ರಿಲ್. 10 ರಂದು ಸಂಜೆ 4.00 ಕ್ಕೆ ಅಸೈಗೋಳಿ ಯುವಕ ಮಂಡಲದಲ್ಲಿ ಜರಗಲಿದೆ. ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಂಗಳೂರು ವಿಧಾನಸಭಾ ಕ್ಷೇತ್ರದ ತು.ರವೇ ಅಧ್ಯಕ್ಷ ಸಿರಾಜ್ ಅಡ್ಕರೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತು.ರ.ವೇ ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಜ್ಯೋತಿಕಾ ಜೈನ್, ಗೌರವಾಧ್ಯಕ್ಷ ಡಾ.ಹಾಜಿ ಕೆ.ಎ. ಮುನೀರ್ ಬಾವಾ, ಜಿಲ್ಲಾ ಘಟಕದ ತು.ರ.ವೇ ಅಧ್ಯಕ್ಷ ಹಮೀದ್ ಹಸನ್ ಮಾಡೂರು, ಕೇಂದ್ರೀಯ ಕೋಶಾಧಿಕಾರಿ ಅಬ್ದುಲ್ ರಶೀದ್ ಜೆಪ್ಪು, ಹಿರಿಯ ಕಾರ್ಮಿಕ ನಿರೀಕ್ಷಕರುಗಳಾದ ಮೇರಿ, ಗಣಪತಿ ಹೆಗಡೆ, ಯುವ ಘಟಕದ ಜಿಲ್ಲಾಧ್ಯಕ್ಷ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಚ್ಚಿಲಗುಡ್ಡೆ: ರಸ್ತೆ, ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆಯನ್ನು ರಾಜ್ಯ ಸರಕಾರ ನೀಡುತ್ತಿದ್ದು, ಸಚಿವರು ಈ ನಿಟ್ಟಿನಲ್ಲಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲೆಡೆಯೂ ಸಕಲ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಹೇಳಿದ್ದಾರೆ. ಅವರು ಶಾಸಕರ ನಿಧಿಯಿಂದ ರೂ. 10 ಲಕ್ಷ ಅನುದಾನದಿಂದ ಕಾಂಕ್ರೀಟಿಕರಣಗೊಂಡ ಸೋಮೇಶ್ವರ ಗ್ರಾಮದ ಉಚ್ಚಿಲಗುಡ್ಡೆಯ ಅಡ್ಡರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಹಮ್ಮದ್ ಹುಸೈನ್ ವಹಿಸಿದ್ದರು. ಸೋಮೆಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಭಟ್ನಗರ, ಅಬ್ದುಲ್ ರೆಹಮಾನ್ ಕೋಡಿಜಾಲ್, ಉಚ್ಚಿಲ ಮುಬಾರಕ್ ವೆಲ್ಫೇರ್ ಅಸೋಸಿಯೇಷನ್ನಿನ ಅಧ್ಯಕ್ಷ ಮೊಹ್ಸಿನ್ ರೆಹ್ಮಾನ್, ಸೋಮೇಶ್ವರ ಪಂ. ಸದಸ್ಯರಾದ ಎನ್.ಇಸ್ಮಾಯಿಲ್, ಉಚ್ಚಿಲ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕರೀಂ ನಾಗತೋಟ, ಫ್ರೆಂಡ್ಸ್ ಉಚ್ಚಿಲಗುಡ್ಡೆಯ ಅಧ್ಯಕ್ಷ ಅಬ್ದುಲ್ ನಝೀರ್ ಯು.ಟಿ, ಗುತ್ತಿಗೆದಾರರಾದ ಪಿಯುಶ್ ಮೊಂತೇರೊ, ಗಣೇಶ್ ತಲಪಾಡಿ, ಹಾಗೂ ಕೆ.ಪಿ.ಇಸ್ಮಾಯಿಲ್,…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಪ್ಪಿನಂಗಡಿ: ಬಾಲಿವುಡ್ ನಟಿ ಮತ್ತು ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಶನಿವಾರ ತಮ್ಮ ಹುಟ್ಟೂರಾದ ಮಂಗಳೂರಿಗೆ ಆಗಮಿಸಿದ್ದರು ಆದರೆ ಪ.್ರತೀ ಬಾರಿಯಂತೆ ಖುಷಿಖುಷಿಯಾಗಿ ಹುಟ್ಟೂರಿಗೆ ಭೇಟಿ ಕೊಡುತ್ತಾ ಇದ್ದ ಐಶ್ ಮೊಗದಲ್ಲಿ ಈ ಬಾರಿ ಮಾತ್ರ ಸಂತಸ ಇರಲಿಲ್ಲ. ತಂದೆಯನ್ನು ಕಳೆದುಕೊಂಡಿರೋ ಐಶ್ ಅಪ್ಪನ ಅಸ್ಥಿ ವಿಸರ್ಜನೆಗಾಗಿ ಕುಟುಂಬದ ಜೊತೆಗೆ ಊರಿಗೆ ಬಂದಿದ್ದರು. ಬೇಸರದ ಮಧ್ಯೆಯೇ ಸಂಗಮ ಕ್ಷೇತ್ರದಲ್ಲಿ ತಂದೆಯ ಅಂತಿಮ ವಿಧಿಗಳನ್ನ ಪೂರೈಸಿ ತೆರಳಿದ್ದಾರೆ. ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈಗೆ ಹುಟ್ಟೂರಿನ ಮೇಲೆ ಅದೆಂಥದ್ದೋ ಪ್ರೀತಿ. ಪ್ರತೀ ಬಾರಿ ಹುಟ್ಟೂರಾದ ಮಂಗಳೂರಿಗೆ ಭೇಟಿ ನೀಡೋ ಐಶ್ ಇಲ್ಲಿನ ಸಂಬಂಧಿಕರ ಮನೆ, ದೇವಸ್ಥಾನಗಳಿಗೆ ಭೇಟಿ ನೀಡಿ ವಾಪಾಸಾಗುತ್ತಾರೆ. ಆದರೆ ಈ ಬಾರಿಯ ಭೇಟಿ ಮಾತ್ರ ಅವರ ಪಾಲಿಗೆ ಅತ್ಯಂತ ದುಃಖದಾಯವಾಗಿತ್ತು. ಇದೇ ಮೊದಲ ಬಾರಿಗೆ ಪ್ರೀತಿಯ ಅಪ್ಪನ ಸಾಂಗತ್ಯವಿಲ್ಲದೇ ಐಶ್ ಹುಟ್ಟೂರಿಗೆ ಆಗಮಿಸಿದ್ದರು. ಅದು ಕೂಡ ತಂದೆ ಕೃಷ್ಣ ರಾಜ್…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಬೋಳಿಯಾರ್: ವಾಹನವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಲಾರಿ ರಸ್ತೆಗೆ ಅಡ್ಡವಾಗಿ ಮಗುಚಿಬಿದ್ದಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರು ಸಮೀಪ ಇಂದು ಮುಂಜಾನೆ ವೇಳೆ ಸಂಭವಿಸಿದೆ. ಮೆಲ್ಕಾರಿನಿಂದ ಕೊಣಾಜೆ ಕಡೆಗೆ ಮರದ ಲೋಡನ್ನು ಸಾಗಾಟ ನಡೆಸುತ್ತಿದ್ದ ಲಾರಿ ಎದುರಿನಲ್ಲಿದ್ದ ಟ್ಯಾಂಕರ್ ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿಬಿದ್ದಿದೆ. ಘಟನೆಯಿಂದ ಮೆಲ್ಕಾರ್ ಮುಡಿಪು ಕಡೆಗೆ ಚಲಿಸುವ ವಾಹನಗಳಿಗೆ ಕೆಲಕಾಲ ಅಡ್ಡಿಯುಂಟಾಯಿತು. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಲಾರಿ ಕ್ರೇನ್ ಮೂಲಕ ಮೇಲೆತ್ತಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮುಡಿಪು: ಕನಕದಾಸರ ಕೀರ್ತನೆ ಅಥವಾ ಅವರ ಕಾವ್ಯಗಳು ಬರಿ ಸಾಹಿತ್ಯ ಕೃತಿಗಳಾಗದೆ, ಅವು ಒಂದು ಸಾಂಸ್ಕøತಿಕ ಪಠ್ಯವಾಗಿವೆ. ಕೀರ್ತನೆಗಳನ್ನು ಸಾಹಿತ್ಯದ ನೆಲೆಗಳಾದ ಉಪಮೆ, ರೂಪಕದ ಭಾಷೆಯಾಗಿ ಮಾತ್ರ ನೋಡದೆ ಅದರ ಸಾಮಾಜಿಕ ಎಚ್ಚರದ ಬಗ್ಗೆ ಅಧ್ಯಯನವಾಗಬೇಕಾದ ಅಗತ್ಯತೆ ಇದೆ. ಆದರೆ ಅವಜ್ಞೆಯಲ್ಲಿದ್ದ ದಾಸ ಸಾಹಿತ್ಯಕ್ಕೆ ಇತ್ತೀಚಿನ ದಶಕಗಳಲ್ಲಿ ಕನಕದಾಸರ ಅಧ್ಯಯನ ಮೂಲಕ ಹೊಸ ನೆಲೆ ಬೆಲೆ ಅದರ ಪುನರ್ ಪರಿಶೀಲನೆಗೆ ಅವಕಾಶ ಸಿಕ್ಕಿರುವುದು ಉತ್ತಮವಾದ ಬೆಳವಣಿಗೆಯಾಗಿದೆ ಎಂದು ಖ್ಯಾತ ಸಾಹಿತಿ ಪ್ರೊ.ಎ.ವಿ.ನಾವಡ ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರದ ವತಿಯಿಂದ ಗುರುವಾರ ಹಳೆಸೆನೆಟ್ ಸಭಾಂಗಣದಲ್ಲಿ ನಡೆದ `ಕನಕ ಸ್ಮøತಿ’ ಕಾರ್ಯಕ್ರಮದಲ್ಲಿ `ಕನಕ ಪ್ರಸರಣ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕನಕದಾಸರ ಬಗ್ಗೆ ಹೊಸ ಎಚ್ಚರ, ಹೊಸ ಆಲೋಚನೆಗಳು ಹುಟ್ಟಿಕೊಳ್ಳುವ ಮೂಲಕ ಕರ್ನಾಟಕ ಸಾಂಸ್ಕøತಿಕ ಲೋಕದಲ್ಲಿ ಒಂದು ತಿರುವು ಕಾಣಿಸಿಕೊಂಡಿದೆ. ಕೆಳವರ್ಗದ ಒಬ್ಬ ಸಂತ ಮಹೋನ್ನತ್ತವಾದ ಸಾಧನೆ, ಹೊಸ ವಿಚಾರಧಾರೆಯು ಹರಿಯಬಿಟ್ಟಿದ್ದಾನೆ ಎನ್ನುವ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮುಡಿಪು: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕøತಿಕ ಸ್ಪರ್ಧೆಗಳಂತಹ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಜ್ಞಾನ ಕೌಶಲ್ಯವನ್ನು ವೃದ್ದಿಸಿ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಭೈರಪ್ಪ ಅವರು ಹೇಳಿದರು.ಅವರು ಮಂಗಳೂರು ವಿವಿ ಬಯಲು ರಂಗಮಂದಿರದಲ್ಲಿ ಗುರುವಾರ ಮಂಗಳೂರು ವಿವಿ ಕ್ಯಾಂಪಸ್‍ನಲ್ಲಿರುವ ವಿಶ್ವವಿದ್ಯಾಲಯ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮಂಗಳೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಉತ್ತಮ ಕೌಶಲವನ್ನು ವೃದ್ಧಿಸಿಕೊಳ್ಳಲು ವಿವಿ ಕ್ಯಾಂಪಸ್‍ನಲ್ಲಿ ಉತ್ತಮ ಅವಕಾಶಗಳಿವೆ. ಅಲ್ಲದೆ ಮುಂದಿನ ದಿನಗಳಲ್ಲಿ ಇಲ್ಲಿರುವ ಬಿಎ, ಬಿಕಾಂ ಜೊತೆಗೆ ವಿಜ್ಞಾನ ವಿಭಾಗವನ್ನು ಯೋಜನೆಯನ್ನು ಆರಂಭಿಸಲಾಗುವುದು ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲೆ ಡಾ.ಅನಿತಾ ರವಿಶಂಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜಿಲ್ಲಿ ಶಿಕ್ಷಣದ ಜೊತೆಗೆ ಕೌಶಲ ವೃದ್ಧಿಸುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗದ ಜೊತೆಗೆ ವಿವಿಧ ಕಾಲೇಜಿನಲ್ಲಿ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಕಾಲೇಜಿಗೂ ಕೀರ್ತಿಯನ್ನು…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮುಡಿಪು: ವಿದ್ಯಾರ್ಥಿಗಳಲ್ಲಿ ಸಂಭ್ರಮ ಪಡುವ ಮನಸ್ಸಿನ ಜೊತೆಗೆ ಧ್ಯಾನಸ್ಥರಾಗುವ ಮನಸ್ಸು ಅಗತ್ಯವಾಗಿರಬೇಕು. ಇತ್ತೀಚೆಗೆ ಎಳೆಯ ಪೀಳಿಗೆಯಲ್ಲಿ ಈ ಎರಡು ಬಗೆಯ ಮನಸ್ಸುಗಳು ಕಡಿಮೆಯಾಗುತ್ತಿರುವಂತೆಯೇ ನಮ್ಮ ಹಿಂದಿನ ಕಾಲದಿಂದ ಆಚರಣೆಯಲ್ಲಿದ್ದಂತಹ ಸಂಪ್ರದಾಯದ ಆಚರಣೆಗಳನ್ನು ನೆನಪಿಸುವ ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ಬಹಳ ಮಹತ್ವಪೂರ್ಣವಾದವು ಎಂದು ಮಂಗಳೂರು ವಿಶ್ವವಿದ್ಯಾಲಯದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಪ್ರೊ.ಕೆ.ಚಿನ್ನಪ್ಪ ಗೌಡ ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾಲಯದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಗಳು ಶುಕ್ರವಾರ ವಿಭಾಗದಲ್ಲಿ ಏರ್ಪಡಿಸಿದ್ದ ಸಾಂಪ್ರದಾಯಿಕ ದಿನಾಚರಣೆ `ದೇಸಿ ಹಬ್ಬ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬೇರೆ ಬೇರೆ ಕಾಲಘಟ್ಟದ ಸಾಂಸ್ಕøತಿಕ ಸಂಗತಿಗಳು, ಆಚರಣೆಗಳು, ಸಂಪ್ರದಾಯಗಳನ್ನು ಒಂದೆಡೆ ಕಟ್ಟಿ ಯುವ ಜನಾಂಗಕ್ಕೆ ಇದರ ಮಹತ್ವವನ್ನು ವಿಸ್ತರಿಸುವ ಕೆಲಸ ಬಹಳ ಕಠಿಣ. ಇಂದು ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಗಳು ಸಾಂಪ್ರದಾಯಿಕ ಆಚರಣೆಯ ಸಂದರ್ಭದಲ್ಲಿ ಗ್ರಾಮೀಣ ಬದುಕಿನ ಚಿತ್ರಣವನ್ನು ಬಹಳ ಸುಂದರವಾಗಿ ಕಟ್ಟಿಕೊಡುವ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಿದ್ದಾರೆ ಎಂದರು. ಪ್ರಾಧ್ಯಾಪಕರಾದ ಪ್ರೊ.ಶಿವರಾಮ…

