ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮಂಗಳೂರು : “ಕುಸೆಲ್ದರಸೆ ’ ಖ್ಯಾತಿಯ ತುಳು ರಂಗಭೂಮಿ ಹಾಗೂ ಚಿತ್ರನಟ ಮಂಗಳೂರಿನ ನವೀನ್ ಡಿ. ಪಡೀಲ್ 2016ನೆ ಸಾಲಿನ ಉತ್ತಮ ಪೋಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ಪ್ರಾದೇಶಿಕ ಭಾಷೆಗಳ ಪೈಕಿ ತುಳು ಚಲನಚಿತ್ರದಲ್ಲಿ ಪ್ರಥಮ ಬಾರಿಗೆ ಪೋಷಕ ಪಾತ್ರದಲ್ಲಿ ಅಭಿನಯಿಸಿದ ಪಡೀಲ್ ಈ ಪ್ರಶಸ್ತಿ ಪಡೆದು ಸಾಧನೆ ಮಾಡಿದ್ದಾರೆ. ಸೂರ್ಯ ಮೆನನ್ ನಿರ್ದೇಶನದ ‘ಕುಡ್ಲ ಕೆಫೆ’ ತುಳು ಚಲನಚಿತ್ರದ ಪಾತ್ರಕ್ಕಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ‘‘ಪ್ರಶಸ್ತಿ ಬಂದಿರುವುದು ತಂಬಾ ಸಂತಸ ತಂದಿದೆ. ಕನ್ನಡ, ಕೊಂಕಣಿ ಇತರ ಪ್ರಾದೇಶಿಕ ಭಾಷೆಗಳ ನಡುವೆ ಪ್ರಥಮ ಬಾರಿಗೆ ನನಗೆ ತುಳುವಿನಲ್ಲಿ ಉತ್ತಮ ಪೋಷಕ ನಟ ಪ್ರಶಸ್ತಿ ದೊರೆತಿದೆ. ಇದಕ್ಕಾಗಿ ತುಳುನಾಡಿನ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ’’ಎಂದು ನವೀನ್ ಡಿ. ಪಡೀಲ್ ಪತ್ರಿಕೆಯೊಂದಿಗೆ ಹರುಷವನ್ನು ಹಂಚಿಕೊಂಡಿದ್ದಾರೆ. ತುಳು ನಾಟಕರಂಗದಲ್ಲಿ ಖ್ಯಾತ ಹಾಸ್ಯ ನಟನಾಗಿ, ಪೋಷಕ ನಟನಾಗಿ ಹಾಸ್ಯ ನಾಟಕಗಳ ಪ್ರಮುಖ ನಟನಾಗಿ ಮಿಂಚಿರುವ ನವೀನ್ ಡಿ. ಪಡೀಲ್ ಸುಮಾರು 70ಕ್ಕೂ…
Author: UllalaVani
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ: ಡೀಸಿಲ್ ಕಳ್ಳತನ ನಡೆಸಿ ಮಾರಾಟ ಮಾಡುತ್ತಿದ್ದ ಆರೋಪಿಗಳಿಬ್ಬರನ್ನು ಕೊಣಾಜೆ ಪೊಲೀಸರು ಬಂಧಿಸಿ ಡೀಸಿಲ್ ಹಾಗೂ ಸ್ಕೂಟರೊಂದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಬಂಧಿತ ಆರೋಪಿಗಳನ್ನು ಅಜಯ್ ಡಿಸೋಜ ಹಾಗೂ ಅವಿನಾಶ್ ಡಿಸೋಜ ಎಂದು ಗುರುತಿಸಲಾಗಿದೆ. ಆರೋಪಿಗಳಲ್ಲಿ ಓರ್ವನಾದ ಅಜಯ್ ಎಂಬಾತ ಹರೇಕಳದ ಮೀನುಗಾರಿಕಾ ಸಂಸ್ಥೆಯೊಂದರಲ್ಲಿ ಎ.ಸಿ.ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಅಲ್ಲಿ ಡೀಸಿಲನ್ನು ಕ್ಯಾನ್ ಮೂಲಕ ತುಂಬಿಸಿ ತನ್ನ ಸಹೋದರನಾದ ಅವಿನಾಶ್‍ನ ಮೂಲಕ ಅಲ್ಲಿಂದ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಮೀನುಗಾರಿಕಾ ಸಂಸ್ಥೆಯವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಕೊಣಾಜೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಡೀಸಿಲ್ ಹಾಗೂ ಸ್ಕೂಟರೊಂದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ತರಕಾರಿ ಅಂಗಡಿ ಮಾಲೀಕ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೋರ್ವರಿಗೆ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಕೊಣಾಜೆ ಅಪರಾಧ ವಿಭಾಗದ ಉಪನಿರೀಕ್ಷಕಿ ಮತ್ತು ಪೊಲೀಸ್ ಪೇದೆಯನ್ನು ಮಂಗಳೂರು ಪೊಲೀಸ್ ಕಮೀಷನರ್ ಹೊರಡಿಸಿದ ಆದೇಶದಂತೆ ಅಮಾನತುಗೊಳಿಸಲಾಗಿದೆ. ಎ.6 ರ ಸಂಜೆ ವೇಳೆ ಮುಡಿಪು ಪೇಟೆಯಲ್ಲಿದ್ದ ಪರಿಶಿಷ್ಟ ಜಾತಿ ಬೈರ ಸಮುದಾಯಕ್ಕೆ ಸೇರಿದ ಇರಾ ಮೂಳೂರು ನಿವಾಸಿ ರುಕ್ಮಯ್ಯ ಎಂಬªರ ಮೇಲೆ ದೌರ್ಜನ್ಯ ಮತ್ತು ಜಾತಿನಿಂದನೆಗೈದಿದ್ದರೆಂದು ದೂರಲಾಗಿತ್ತು. ಉಪನಿರೀಕ್ಷಕಿ ಶ್ರೀಕಲಾ ಮತ್ತು ಪೇದೆ ರಾಜೇಶ್ ಎಂಬವರು ಸೇರಿಕೊಂಡು ದೌರ್ಜನ್ಯ ಎಸಗಿದ್ದರೆಂದು ರುಕ್ಮಯ್ಯ ಅವರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನಂತೆ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೆತ್ತಿಕೊಂಡ ಕೊಣಾಜೆ ಪೊಲೀಸ್ ಠಾಣಾಧಿಕಾರಿ ಅಶೋಕ್ ಅವರು ಪೊಲೀಸ್ ಕಮೀಷನರ್ ಅವರಿಗೆ ಪ್ರಕರಣದ ವರದಿ ಸಲ್ಲಿಸಿದ್ದರು. ಅದರಂತೆ ಇಬ್ಬರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಹಿರಾ ಮಹಿಳಾ ಕಾಲೇಜು, ಬಬ್ಬುಕಟ್ಟೆ ಇದರ ವತಿಯಿಂದ 2016-17ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭವು ಹಿರಾ ಸಭಾಂಗಣದಲ್ಲಿ ನಡೆಯಿತು. ಈ ಸಮಾರಂಭದಲ್ಲಿ, ಅಂತರ್ ಕಾಲೇಜು ಮಟ್ಟದಲ್ಲಿ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಮೂಹ ಮಾಧ್ಯಮ ಮತ್ತು ಪ್ರಸ್ತುತ ಸಮಾಜ ಎಂಬ ವಿಷಯದ ಕುರಿತಂತೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಪ್ರಥಮ ಬಹುಮಾನವನ್ನು ಸಂತ ಅಲೋಶಿಯಸ್ ಕಾಲೇಜಿನ ಕು. ದೀಪ್ತಿ ಜಾರ್ಜ್, ದ್ವಿತೀಯ ಬಹುಮಾನವನ್ನು ಕು. ವಿಜಯಲಕ್ಷ್ಮಿ, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು, ತೃತೀಯ ಬಹುಮಾನವನ್ನು ಕು. ದಿಶಾ ಎಂ. ಶೆಟ್ಟಿ, ಕೆನರಾ ಕಾಲೇಜು, ಮಂಗಳೂರು ಪಡೆದಿರುತ್ತಾರೆ. ಕ್ರಮವಾಗಿ ರೂ.5000/-, ರೂ.3000/- ರೂ. 2000/- ನಗದು ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ವಿಜೇತರಿಗೆ ವಿತರಿಸಲಾಯಿತು. 2015-16ನೇ ಸಾಲಿನಲ್ಲಿ ಅತ್ಯಕ ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಸನ್ಮಾನ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಜಿಲ್ಲೆಯಲ್ಲಿ ಸೌಹಾರ್ದ ನೆಲೆನಿಂತುವಂತೆ ಮಾಡುವ ಪ್ರಯತ್ನ ಎಲ್ಲರಿಂದಲೂ ನಡೆಯಬೇಕು, ಧರ್ಮದ ಮೇಲಿರುವ ಪರಸ್ಪರ ಅಪನಂಬಿಕೆಗಳು ದೂರಗೊಂಡಲ್ಲಿ ಸೌಹಾರ್ದತೆ ಸಾಧ್ಯ, ಈ ಹಿನ್ನೆಲೆಯಲ್ಲಿ ಇತರ ಯಾವುದೇ ದುರುದ್ದೇಶ ಇಲ್ಲದೆ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ತಪ್ಪಲ್ಲ ಎಂದು ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಭಿಪ್ರಾಯಪಟ್ಟರು. ಉಳ್ಳಾಲ ಮೆಲಂಗಡಿ ಮೊಹಿಯುದ್ದೀನ್ ಜುಮಾ ಮಸೀದಿ (ಹೊಸಪಳ್ಳಿ)ಯಲ್ಲಿ ನಡೆದ 87ನೇ ರಾತೀಬು ನೇರ್ಚೆ, 10 ದಿನಗಳ ಮತ ಪ್ರವಚನ, ಸ್ವಲಾತ್ ಮಜ್ಲೀಸ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು. ಮೊಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಯೂಸುಫ್ ಮಿಸ್ಬಾಹಿ, ನ್ಯಾಯವಾದಿ ಕೆ.ಪಿ.ಶುಕೂರು, ಮೊಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಫಾರೂಕ್ ಉಳ್ಳಾಲ್, ಮನಪಾ ಮಾಜಿ ಮೇಯರ್ ಕೆ.ಅಶ್ರಫ್, ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಪ್ರಮುಖರಾದ ಯು.ಎಚ್.ಅಹ್ಮದ್ ಬಾವ, ಇಬ್ರಾಹಿಂ ಖಾಸಿಂ, ಅಶ್ರಫ್ ಮುಸ್ಲಿಯಾರ್, ಅಲಿ ಅಕ್ಬರ್, ಜಮಾಲ್ ಬಾರ್ಲಿ, ಆಸಿಫ್…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಇರಾ : ಧಾರ್ಮಿಕ ಅರಿವು ಹಿಂದಿನಿಂದಲೇ ನಡೆಯುತ್ತಿದ್ದರೂ ಮದರಸಾ ಶಿಕ್ಷಣ ಮುಖಾಂತರ ಎಳೆ ಮಕ್ಕಳೂ ಸುಲಲಿತವಾಗಿ ಧಾರ್ಮಿಕ ಜ್ಞಾನ ಪಡೆಯುಂತೆ ಮಾಡಿದ ಕೀರ್ತಿ ಸಮಸ್ತ ವಿದ್ಯಾಭ್ಯಾಸ ಬೋರ್ಡ್‍ಗೆ ಸಲ್ಲುತ್ತದೆ ಎಂದು ಪಾತೂರು ಕಜೆ ಎಕೆಎಂ ಅಕಾಡೆಮಿ ಮುಖ್ಯಸ್ಥ ಇ.ಕೆ.ಎಂ ಶರೀಫ್ ಮುಸ್ಲಿಯಾರ್ ಹೇಳಿದರು.ಇರಾ ಸಂಪಿಲ ಸಂಶುಲ್ ಉಲಮಾ ಕ್ರಿಯಾ ಸಮಿತಿಯ ತೃತೀಯ ವಾರ್ಷಿಕೋತ್ಸವ ಹಾಗೂ ಅನುಸ್ಮರಣಾ ಸಂಪಿಲ ಸಂಶುಲ್ ಉಲಮಾ ನಗರದಲ್ಲಿ ಭಾನುವಾರ ನಡೆದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕಾಸರಗೋಡು ಮಸೀದಿಯ ಖತೀಬ್ ಝುಬೈರ್ ಫೈಝಿ ಅಂಕೋಲ ಮಾತನಾಡಿ, ಭಗವಂತ ಅನುಗ್ರಹ ಇದ್ದಲ್ಲಿ ಯಾವುದೇ ಸಂದರ್ಭದಲ್ಲೂ ಯಾರ ಭಯವೂ ಇರುವುದಿಲ್ಲ, ಈ ನಿಟ್ಟಿನಲ್ಲಿ ಭಗವಂತನ ಅನುಗ್ರಹ ದೊರೆಯುವಂತಾಗಲು ಶ್ರಮಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಪ್ರಯುಕ್ತ ಉಸ್ತಾದ್ ಪಾತೂರು ಶೈಖುನಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಸಂಶುಲ್ ಉಲಮಾ ಮೌಲೀದ್ ಪಾರಾಯಣ ಹಾಗೂ ಸಮಸ್ತ ಕೇರಳ ಜಂ-ಇಯತುಲ್ ಉಲಮಾ ಕೇಂದ್ರ ಮುಶಾವರ ನೂತನ ಉಪಾಧ್ಯಕ್ಷ ಶೈಖುನಾ ಮಿತ್ತಬೈಲ್…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಪೊಳಲಿ:ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಒಂದು ತಿಂಗಳ ತನಕ ನಡೆಯುವ ಜಾತ್ರಾ ಮಹೋತ್ಸವವು ಸೋಮವಾರ ಸಂಜೆ ನಡೆದ ಆಕರ್ಷಕ ರಥೋತ್ಸವದ ಮೂಲಕ ಮುಕ್ತಾಯಗೊಂಡಿತು.
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಅಸೈಗೋಳಿ: ಸರಕಾರ ಚಾಲಕರಿಗಾಗಿಯೇ ಕಾಯಿದೆ, ಕಾನೂನು, ಸವಲತ್ತುಗಳನ್ನು ಜಾರಿಗೊಳಿಸಿದರೂ ಅದು ಅವರಿಗೆ ತಲುಪುತ್ತಿಲ್ಲ, ಅದನ್ನು ತಲುಪಿಸುವ ನಿಟ್ಟಿನಲ್ಲಿ ತುಳುನಾಡು ರಕ್ಷಣಾ ವೇದಿಕೆ ವಿವಿಧ ಕಾರ್ಯಕ್ರಮಗಳೊಂದಿಗೆ ಕಾರ್ಯಾಚರಿಸುತ್ತಿದೆ ಎಂದು ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಹೇಳಿದ್ದಾರೆ. ಅವರು ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ವಿಧಾನಸಭಾ ಕ್ಷೇತ್ರ ಘಟಕ ವತಿಯಿಂದ ಖಾಸಗಿ ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಲಾರಿ ಮತ್ತು ಬಸ್ ಚಾಲಕರಿಗಾಗಿ ಹಮ್ಮಿಕೊಂಡಿದ್ದ ಖಾಸಗೀ ವಾಣಿಜ್ಯ ವಾಹನ ಚಾಲಕರ ವಿಮಾ ಯೋಜನೆಯ 5 ನೇ ಹಂತದ ನೋಂದಾವಣೆ ಕಾರ್ಯಕ್ರಮಕ್ಕೆ ಅಸೈಗೋಳಿ ಯುವಕ ಮಂಡಲದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದರು. 7 ದಿನದ ಸಪ್ತಾಹದ ಮೂಲಕ 2 ಲಕ್ಷ ರೂ. ವಿಮಾ ನೋಂದಣಿಯನ್ನು ವೇದಿಕೆ ಹಮ್ಮಿಕೊಂಡಿದೆ. ಚಾಲಕರಿಗೆ ದಿನದ ದುಡಿಮೆ ಕಡಿತಗೊಳಿಸಿ ನೋಂದಾಯಿಸಲು ಕಷ್ಟ ಸಾಧ್ಯ, ಅದಕ್ಕಾಗಿ ವೇದಿಕೆ ಚಾಲಕರು ಇರುವ ಸ್ಥಳಕ್ಕೆ ತೆರಳಿ ನೋಂದಣಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಚಾಲಕರು ಎಲ್ಲಾ ರೀತಿಯಲ್ಲೂ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಶಂಕಿತ ಉಗ್ರರ ಬಂಧನ ಪ್ರಕರಣದ ಹಿನ್ನಲೆಯಲ್ಲಿ 2008ರಲ್ಲಿ ಉಳ್ಳಾಲದಲ್ಲಿ ಬಂಧಿತರಾಗಿದ್ದ ಆರೋಪಿಗಳಲ್ಲಿ ಮೂವರು ಅಪರಾಧಿಗಳೆಂದು ಪರಿಗಣಿಸಿ ಉಳಿದ ನಾಲ್ವರನ್ನು ನಗರದ ನ್ಯಾಯಾಲಯವು ಸೋಮವಾರ ಬೆಳಿಗ್ಗೆ ದೋಷಮುಕ್ತಗೊಳಿಸಿ ಬಿಡುಗಡೆಗೊಳಿಸಿದೆ. ಸಾಂದರ್ಭಿಕ ಚಿತ್ರ ಸೈಯ್ಯದ್ ಮಹಮ್ಮದ್ ನೌಷದ್, ಅಹ್ಮದ್ ಬಾವಾ ಅಬೂಬಕ್ಕರ್ ಮತ್ತು ಫಕೀರ್ ಅಹ್ಮದ್ ಈ ಮೂವರನ್ನು ಅಪರಾಧಿಗಳು ಎಂದು ತೀರ್ಪು ನೀಡಿದ್ದ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಇನ್ನುಳಿದ ಮುಹಮ್ಮದ್ ಅಲಿ, ಅವರ ಪುತ್ರ ಜಾವದ್ ಅಲಿ, ಶಬೀರ್ ಭಟ್ಕಳ ಹಾಗೂ ರಫೀಕ್ ದೋಷಮುಕ್ತಗೊಳಿಸಿ ಬಿಡುಗಡೆಗೊಳಿಸಿದ್ದಾರೆ. ಇಂಡಿಯನ್ ಮುಜಾಹಿದ್ದೀನ್ ನಂಟಿನ ಹಿನ್ನೆಲೆಯಲ್ಲಿಯಲ್ಲಿ ಸ್ಫೋಟಕ ಪತ್ತೆ ಮತ್ತು ವಿಧ್ವಂಸಕ ಕೃತ್ಯಕ್ಕೆ ಯೋಜನೆ ಹಾಕಿದ್ದರೆಂದು ಏಳು ಮಂದಿಯನ್ನು ಮಂಗಳೂರು ಪೆÇಲೀಸರು ಬಂಧಿಸಿದ್ದರು. ಬಂಧನ ಈ ಪ್ರಕರಣಕ್ಕೆ ಸಂಬಂಧಿಸಿ 6 ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದು ಅಪರಾಧಿಗಳ ಶಿಕ್ಷೆ ಪ್ರಮಾಣ ಪ್ರಕಟವನ್ನು ನ್ಯಾಯಾಲಯವು ಎಪ್ರಿಲ್ 12ಕ್ಕೆ ಮುಂದೂಡಿದೆ.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ತೊಕ್ಕೊಟ್ಟು ಪೆರ್ಮನ್ನೂರು ಸಂತ ಸೆಬೆಸ್ತಿಯನ್ನರ ಇಗರ್ಜಿಯಲ್ಲಿ ಗರಿಗಳ ಭಾನುವಾರ ವಿಜೃಂಭಣೆಯಿಂದ ನಡೆಯಿತು. ಧರ್ಮಗುರು ಜೆ.ಬಿ.ಸಲ್ದಾನ್ಹ ನೇತೃತ್ವ ವಹಿಸಿದ್ದರು.

