ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ ಸಮೀಪದ ಮೊಗವೀರಪಟ್ಣದಲ್ಲಿ ಶನಿವಾರ ನಡೆದ ಬಾರ್ಜ್ ದುರಂತದ ಬಗ್ಗೆ ಕ್ಷಿಪ್ರ ಕ್ರಮ ಕೈಗೊಂಡಿರುವ ಸ್ಥಳೀಯ ಶಾಸಕರು ಹಾಗೂ ರಾಜ್ಯ ಆಹಾರ ಸಚಿವರಾದ ಯು.ಟಿ.ಖಾದರ್ ಬೆಳ್ಳಂಬೆಳಗ್ಗೆ ಪಣಂಬೂರು ಕೋಸ್ಟ್ ಗಾರ್ಡ್ ಗೆ ತೆರಳಿ ಅಧಿಕಾರಿಗಳಿಗೆ ಇನ್ನಷ್ಟು ಚುರುಕು ಮುಟ್ಟಿಸಿದ್ದಾರೆ. ಸಚಿವರು ಬೆಳಗ್ಗೆ ಪಣಂಬೂರು ಕೋಸ್ಟ್ ಗಾರ್ಡ್ ಗೆ ಅನಿರೀಕ್ಷಿತ ಭೇಟಿ ನೀಡಿದ ಬಳಿಕ ಅಧಿಕಾರಿಗಳು ಇನ್ನಷ್ಟು ಕಾರ್ಯಪ್ರವೃತ್ತರಾಗಿದ್ದಾರೆ. ಕೋಸ್ಟ್ ಗಾರ್ಡ್ ಡಿಐಜಿ ಎಸ್.ಎಸ್. ದಾಸಿಲ, ಕಮಾಂಡೆಂಟ್ ಜಸ್ವಾಲ್ ಅವರಲ್ಲಿ ಕಾರ್ಯಾಚರಣೆಯ ರೂಪುರೇಷೆಯ ಬಗ್ಗೆ ಸಚಿವರು ಚರ್ಚಿಸಿದರು. ಬ್ರಿಟಿಷ್ ಕಂಪೆನಿಯ ದುಬಾರಿ ಎ.ಸಿ.ವಿ. (ಂiಡಿ ಅuಣಠಿoಟಿ ಗಿeseಟ) ಓವರ್ ಕ್ರಾಫ್ಟ್ ಬೋಟನ್ನು ಇದೀಗ ಬೆಳಗ್ಗಿನಿಂದ ಕಾರ್ಯಾಚರಣೆಗೆ ಇಳಿಸಲಾಗಿದೆ. ಈ ವಿಶೇಷ ಬೋಟ್ ನೀರು ಹಾಗೂ ಹೊಯ್ಗೆಯಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. (ನಿನ್ನೆ ಈ ಬೋಟ್ ದೂರ ಇತ್ತೆನ್ನಲಾಗಿದೆ.) 50 ಮಂದಿ ಕೋಸ್ಟ್ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅದರ ಜೊತೆ ಅಮರಿಯಾ ಶಿಪ್, ರಾಜಧೂತ್ ಸ್ಟಾಂಡ್ ಶಿಪ್ ಸಜ್ಜುಗೊಂಡಿದೆ.…
Author: UllalaVani
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ:ಉಳ್ಳಾಲದಲ್ಲಿ ಬಾರ್ಜ್ ಮುಳುಗಡೆ ದುರಂತ ಪ್ರಕರಣಕ್ಕೆ ಸಂಬಂಧಿಸಿ ಕೋಸ್ಟ್ ಗಾರ್ಡ್ ಹೋವರ್ ಕ್ರಾಫ್ಟ್ ಎಸಿವಿ ಎಚ್-196 ಮತ್ತು ಅಮರ್ತ್ಯಾ ಹಡಗಿನ ಮೂಲಕ ನಿರಂತರ ಮೂರು ಗಂಟೆಗಳ ಕಾರ್ಯಾಚರಣೆಯಲ್ಲಿ ಬಾರ್ಜ್‍ನಲ್ಲಿ ಅಪಾಯಕ್ಕೆ ಸಿಲುಕಿದ್ದ 23 ಮಂದಿಯನ್ನು ಭಾನುವಾರ ಬೆಳಿಗ್ಗೆ ರಕ್ಷಿಸಲಾಗಿದ್ದು, ನಾಲ್ಕು ಮಂದಿಯನ್ನು ಶನಿವಾರ ಸಂಜೆ ವೇಳೆ ರಕ್ಷಿಸಲಾಗಿತ್ತು. ಕಡಲ್ಕೊರೆತ ಶಾಶ್ವತ ಕಾಮಗಾರಿ ನಿರತ ಬಾರ್ಜ್ ಶನಿವಾರ ಮಧ್ಯಾಹ್ನದ ವೇಳೆ ಅಪಾಯಕ್ಕೆ ಸಿಲುಕಿತ್ತು. ಸಂಜೆ ವೇಳೆ ಕೋಸ್ಟ್ ಗಾರ್ಡ್ ಹಡಗು ಕಾರ್ಯಾಚರಣೆಗೆ ಇಳಿದರೂ, ಸಮುದ್ರದ ಅಲೆಗಳ ರಭಸಕ್ಕೆ ಕಾರ್ಯಾಚರಣೆಗೂ ಅಡ್ಡಿಯುಂಟಾಗಿತ್ತು. ಆದರೂ ನಡುವೆ ಸಣ್ಣ ದೋಣಿ( ಲೈಫ್ ಗಾರ್ಡ್) ಮೂಲಕ ಅಪಾಯದಲ್ಲಿ ಸಿಲುಕಿದ್ದ ಬಾರ್ಜ್ ಸಮೀಪಕ್ಕೆ ತೆರಳಿ ನಾಲ್ವರನ್ನು ದೋಣಿ ಮೂಲಕ ಹಾಕುವ ಸಂದರ್ಭ, ಬಾರ್ಜ್ ಗೆ ತಗಲಿದ ಲೈಫ್ ಗಾರ್ಡ್ ಬೋಟಿಗೆ ಹಾನಿಯಾಗಿ ನಾಲ್ವರನ್ನು ಮಾತ್ರ ರಕ್ಷಿಸಲಾಗಿತ್ತು. ಬೃಹತ್ ಗಾತ್ರದ ಅಲೆಗಳ ನಡುವೆ ಕಗ್ಗತ್ತಲಲ್ಲಿ ರಾತ್ರಿ ಕಳೆದರು: ಸಮುದ್ರದಲ್ಲಿ 60 ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದರಿಂದ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಮಂಗಳೂರು ಉಳ್ಳಾಲ ಸಮುದ್ರದಲ್ಲಿ ಬಾರ್ಜ್ ಮುಳುಗಡೆ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಯನ್ ಕೋಸ್ಟಲ್ ಗಾರ್ಡ್ ಇಲಾಖಾ ಅಧಿಕಾರಿಗಳು ನಾಳೆ ಮುಂಜಾನೆಯಿಂದ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮಾಹಿತಿ ಸಿಕ್ಕ ಕೂಡಲೇ ಐ.ಸಿ.ಜಿ.ಎಸ್ ಅಮರ್ತ್ಯ ನೌಕೆ ಸ್ಥಳಕ್ಕೆ ಧಾವಿಸಿದೆ ಈಗಾಗಲೇ ನಾಲ್ವರು ಬಾರ್ಜ್ ಸಿಬಂಧಿ ರಕ್ಷಣೆ ಮಾಡಲಾಗಿದೆ.ಸಮುದ್ರ ಪ್ರಕ್ಷುಬ್ಧಗೊಂಡಿರೋ ಕಾರಣದಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು ನಾಳೆ ಮುಂಜಾನೆಯಿಂದ ಕಾರ್ಯಾಚರಣೆ ಆರಂಭಿಸಲಾಗುವುದು ಎಂದಿದ್ದಾರೆ. ಮುಳುಗಡೆ ಭೀತಿಯಲ್ಲಿರೋ ಬಾರ್ಜ್ ಪಕ್ಕದಲ್ಲಿ ಕೋಸ್ಟಲ್ ಗಾರ್ಡ್ ನೌಕೆ ಕಾವಲು ಕಾಯುತ್ತಿದೆ. ಸದ್ಯಕ್ಕೆ ಬಾರ್ಜ್ ನಲ್ಲಿ 23 ಸಿಬ್ಬಂದಿ ಜೀವಭೀತಿಯಲ್ಲಿ ಕಾಲಕಳೆಯುತ್ತಿದ್ದಾರೆ ಅವರಲ್ಲಿ ಒಬ್ಬ ಮಾಸ್ಟರ್, ಇಬ್ಬರು ಚೀಫ್ ಇಂಜಿನಿಯರ್, 12 ಜನ ಆಯಿಲರ್ ಸೇರಿದಂತೆ ರೋಪರ್, ಸೀಮ್ಯಾನ್ಸ್ ಸಿಲುಕಿಕೊಂಡಿದ್ದಾರೆ. ಸಮುದ್ರದಲ್ಲಿ ಸಿಲುಕಿರುವವರ ಹೆಸರು ಮಾಸ್ಟರ್ ಮುರಗನ್ ಶೋಭಿತ್ ಉಪೇಂದ್ರ ಮಿಶ್ರಾ ಯಾನ್ ರಾಕೇಶ್ ಮನೋಜ್ ತವುಡೆ ವಿಮಲ್ ಅಜಯ್ ಇನ್ನಿತರರು
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಬಾರ್ಜಿನೊಳಗಡೆ ನೀರು ನುಗ್ಗುತ್ತಿದೆ. ದೇಶದಲ್ಲಿ ತಾಂತ್ರಿಕತೆ ಇಷ್ಟೊಂದು ಮುಂದುವರಿದರೂ ನಮ್ಮಲ್ಲಿಗೆ ಯಾರೂ ಬರುವ ಪ್ರಯತ್ನ ಮಾಡುತ್ತಿಲ್ಲ ಸರ್. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದೇವೆ. ಹೆಲಿಕಾಪ್ಟರ್ ಮೂಲಕ ತಕ್ಷಣ ಕಾರ್ಯಾಚರಿಸಿ ರಕ್ಷಿಸಿ, ಇಲ್ಲವಾದರೆ 23 ಮಂದಿಯೂ ಸಾಯಬೇಕಾದೀತು. ಇಷ್ಟರವರೆಗೆ 5 ಮಂದಿಯನ್ನು ಮಾತ್ರ ರಕ್ಷಿಸಿದ್ದಾರೆ ‘ ಇದು ಬಾರ್ಜ್ ಒಳಗಡೆ ಸಿಲುಕಿರುವ ಶೋಭಿತ್ ರಾತ್ರಿ 8.46ರ ಹೊತ್ತಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ರಕ್ಷಣೆಗೆ ಮೊರೆ ಹೋದ ರೀತಿಯಿದು. `ಏಳು ದಿನಗಳಾದರೂ ಕರೆದೊಯ್ಯಲು ಕಂಪೆನಿಯವರು ಬಂದಿಲ್ಲ ‘ ರೀಫ್ ಕಾಮಗಾರಿ ಮುಗಿದು ಏಳು ದಿನಗಳಾಗಿದೆ. ನಾಲ್ಕು ದಿನಗಳ ಹಿಂದೆ ಸಮುದ್ರದ ಅಬ್ಬರಕ್ಕೆ ಬಾರ್ಜಿಗೆ ಕಟ್ಟಲಾಗಿದ್ದ ಎರಡು ಆಂಕರ್‍ಗಳು ತುಂಡಾಗಿತ್ತು. ಕಂಪೆನಿಯವರಿಗೆ ಮಾಹಿತಿ ನೀಡಿದ್ದರೂ ಸ್ಪಂಧಿಸಿರಲಿಲ್ಲ. ಶನಿವಾರ ಮಧ್ಯಾಹ್ನ ವೇಳೆಗೆ ಮೂರನೇ ಆಂಕರ್ ಕೂಡಾ ತುಂಡಾಗಿ ಒಂದು ಕಡೆ ಬಾರ್ಜ್ ಮುಳುಗಲು ಆರಂಭವಾಗಿದೆ. ಮಧ್ಯಾಹ್ನ ವೇಳೆ ಕಂಪೆನಿಯವರಿಗೆ ಮಾಹಿತಿ ನೀಡಿದ್ದರೂ ಸ್ಪಂಧಿಸಿರಲಿಲ್ಲ. ಸಂಜೆ 6 ಗಂಟೆ ವೇಳೆಗೆ ಕರಾವಳಿ ರಕ್ಷಣಾ ಪಡೆಯ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಕರಾವಳಿ ಸಂರಕ್ಷಣಾ ಘಟಕಕ್ಕೆ ಸೇರಿದ ಶಾಶ್ವತ ಕಡಲ್ಕೊರೆತ ಕಾಮಗಾರಿ ನಿರತ ಬಾರ್ಜ್ ಉಳ್ಳಾಲ ಸಮುದ್ರ ತೀರದಿಂದ 300 ಮೀ ದೂರದಲ್ಲಿ ಕಲ್ಲುಗಳಿಗೆ ಢಿಕ್ಕಿ ಹೊಡೆದು ಮುಳುಗುವ ಭೀತಿಯನ್ನು ಎದುರಿಸುತ್ತಿದ್ದು, 33 ಮಂದಿ ಕಾರ್ಮಿಕರು ಅಪಾಯದಂಚಿನಲ್ಲಿ ಸಿಲುಕಿದ್ದು ಬೃಹತ್ ಗಾತ್ರದ ಅಲೆಗಳಿಂದಾಗಿ ರಕ್ಷಣಾ ಕಾರ್ಯಾಚರಣೆಗೂ ಶನಿವಾರ ತಡರಾತ್ರಿವರೆಗೂ ಅಡ್ಡಿಯಾಗಿದೆ. ಕಳೆದ 2 ವರ್ಷಗಳಿಂದ ಉಳ್ಳಾಲದ ಮೊಗವೀರಪಟ್ನ, ಕೋಟೆಪುರ , ಕೋಡಿ ಭಾಗದ ಸಮುದ್ರ ತೀರದಲ್ಲಿ ಶಾಶ್ವತ ತಡೆಗೋಡೆ ಕಾಮಗಾರಿ ನಡೆಯುತ್ತಿದೆ. ಸಮುದ್ರ ತೀರದಲ್ಲಿ ರೀಫ್ಸ್ ಅಳವಡಿಸುವ ಕಾಮಗಾರಿಯಲ್ಲಿ ನಿರತವಾಗಿದ್ದ ಬಾರ್ಜ್ ( ಕಾಮಗಾರಿ ನಿರತ ಹಡಗು) ಗುರುವಾರದಂದು ಒಂದು ಹಂತದ ಕಾಮಗಾರಿಯನ್ನು ಮುಗಿಸಿತ್ತು. ಆದರೆ ಶನಿವಾರ ಮಧ್ಯಾಹ್ನ 1.30 ಸುಮಾರಿಗೆ ರೀಫ್ಸ್ ಮೇಲೆ ಹಾಕಲಾದ ಕಲ್ಲುಗಳಿಗೆ ಡಿಕ್ಕಿ ಹೊಡೆದ ಹಡಗು ಅಪಾಯದಂಚಿನಲ್ಲಿ ಸಿಲುಕಿ, ಅಲೆಗಳ ಮಧ್ಯೆ ಸಿಲುಕಿದೆ. ಇದರಿಂದಾಗಿ ಹಡಗು ಒಳಗಡೆ ಕಾಮಗಾರಿ ನಿರತ ಸ್ಥಳೀಯ ಪಾಂಡೇಶ್ವರ ನಿವಾಸಿ ಶೋಭಿತ್ ಎಂಬ ಯುವಕ ಸೇರಿದಂತೆ ಹೊರರಾಜ್ಯಗಳ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಪ್ರಸ್ತುತ ಕಾಲಘಟ್ಟದಲ್ಲಿ ಅಂತರ್‍ಜಾಲ ವ್ಯವಸ್ಥೆ ಬಲಗೊಳ್ಳುತ್ತಿದೆ.ಇದು ಇಂಟರ್‍ನೆಟ್ ಯುಗ ಇಂಟರ್‍ನೆಟ್‍ನಲ್ಲಿ ಒಳಿತು -ಕೆಡಕು ಎರಡೂ ಇದೆ. ಕೊಳಕನ್ನು ತೆಗೆದು ಪರಿಶುದ್ದ ಸಮಾಜ ನಿರ್ಮಾಣವಾಗಬೇಕಾದರೆ ಇನ್ನರ್‍ನೆಟ್ ಜಾಗೃತಗೊಳ್ಳಬೇಕಾಗಿದೆ ಎಂದು ಒಡಿಯೂರಿನ ಸಾಧ್ವಿ ಶ್ರೀ ಮಾತಾನಂದಮಯಿ ಹೇಳಿದರು. ಉಳ್ಳಾಲದ ಅಬ್ಬಕ್ಕ ಟಿ.ವಿಯ ನೂತನ ವೆಬ್‍ಸೈಟ್‍ಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಸುದ್ದಿ ನೀಡುವ ಧಾವಂತದಲ್ಲಿ ಮಾಧ್ಯಮಗಳು ಎಂದೂ ಸಮಾಜಕ್ಕೆ ತಪ್ಪು ಸಮದೆಶವನ್ನು ನೀಡಬಾರದು. ಪ್ರತಿಯೊಂದು ನಾಣ್ಯಕ್ಕೂ ಎರಡು ಮುಖಗಳಿದೆ ಎಂಬುದು ಸೂಚ್ಯವಾಗರಿಬೇಕು ಎಂದರು. ಶ್ರೀ ಕ್ಷೇತ್ರ ಕಣಂತ್ತೂರಿನ ಆಡಳಿತ ಮೊಕ್ತೇಸರ ತಿಮ್ಮಪ್ಪ ಕೊಂಡೆ ಯಾನೆ ಮಂಜು ಭಂಡಾರಿ ಸಭಾಧ್ಯಕ್ಷತೆ ವಹಿಸಿದ್ದರು. ಕಂಕನಾಡಿ ಗರಡಿ ಕ್ಷೇತ್ರದ ಶ್ರೀಮತಿ ಸುಲೋಚನ ಚಿತ್ತರಂಜನ್,ವಿದ್ಯಾರತ್ನ ವಿದ್ಯಾಸಂಸ್ಥೆಯ ಸಂಚಾಲಕಿ ಶ್ರೀಮತಿ ಸೌಮ್ಯ ಆರ್. ಶೆಟ್ಟಿ,ಸೂರಜ್ ಶಿಕ್ಷಣು ಅಧ್ಯಕ್ಷರಾದ ಮಂಜುನಾಥ್ ಎಸ್ ರೇವಣ್ಕರ್, ಉದ್ಯಮಿ ಅನಿಲ್‍ದಾಸ್ ,ಬಿಜೆಪಿ ಕಾರ್ಯಕಾರಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಬಿಜೆಪಿ ಕ್ಷೇತ್ರಾಧ್ಯಕ್ಷರಾದ ಸಂತೋಷ್‍ಕುಮಾರ್ ರೈ ಬೋಳ್ಯಾರು, ಧಾರ್ಮಿಕ ಪರಷತ್ ಜಿಲ್ಲಾ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಶೈಕ್ಷಣಿಕವಾಗಿ ಅಭಿವೃದ್ಧಿಯಾಗುತ್ತಿರುವ ದೇರಳಕಟ್ಟೆಯಲ್ಲಿ ಸುಸಜ್ಜಿತವಾದ ಜಂಕ್ಷನ್ ಡಾಮರೀಕರಣ ಸೇರಿದಂತೆ ಅಗಲೀಕರಣ ನಡೆಸಿದ್ದು, ಮುಂದಿನ ದಿನಗಳಲ್ಲಿ ಜಂಕ್ಷನ್ ಸೌಂದರೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದರು. ಅವರು ದೇರಳಕಟ್ಟೆಯಲ್ಲಿ ನೂತನವಾಗಿ ಅಭಿವೃದ್ಧಿಗೊಳಿಸಿದ ಜಂಕ್ಷನ್‍ಗೆ ಚಾಲನೆ ನೀಡಿ ಮಾತನಾಡಿದರು. ದೇರಳಕಟ್ಟೆಯಂತೆ ನಾಟೆಕಲ್ ಜಂಕ್ಷನ್ ಅಭಿವೃದ್ಧಿ ಕಾಮಾಗಾರಿ ಪೂರ್ಣಗೊಂಡಿದೆ. ಈ ವ್ಯಾಪ್ತಿಯಲ್ಲಿ ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆಗಳು ಅಭಿವೃದ್ಧಿಯಾಗುತ್ತಿರುವ ಹಿನ್ನಲೆಯಲ್ಲಿ ಜಂಕ್ಷನ್‍ನಲ್ಲಿ ಜನಸಂಖ್ಯೆ ಸೇರಿದಂತೆ ವಾಹನ ದಟ್ಟಣೆಯಿಂದ ಮುಕ್ತಿ ಸಿಗಲು ಜಂಕ್ಷನ್ ಅಭಿವೃದ್ಧಿ ಅತ್ಯಂತ ಅವಶ್ಯಕವಾಗಿದ್ದು ಈಗಾಗಲೇ ರಾಜ್ಯ ಹೆದ್ದಾರಿಯಾಗಿರುವ ಈ ರಸ್ತೆಯ ಡಾಮರೀಕರಣ ಮತ್ತು ಅಗಲೀಕರಣ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಅವರು ದೇರಳಕಟ್ಟೆ ಜಂಕ್ಷನ್ ಸುಂದರವಾಗಿ ಇಡುವಲ್ಲಿ ಸ್ಥಳೀಯ ವ್ಯಾಪಾರಿಗಳ ಸಹಕಾರ ಅಗತ್ಯ ಎಂದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಬೆಳ್ಮ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯ ಕೃಷ್ಣಪ್ಪ, ಉಪಾಧ್ಯಕ್ಷ ಬಿ.ಎಂ. ಅಬ್ದುಲ್ ಸತ್ತಾರ್,…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ : ಮಕ್ಕಳ ಶೈಕ್ಷಣಿಕ ಮತ್ತು ಆರೋಗ್ಯದ ಕಾಳಜಿ ಹೆತ್ತವರದಾಗಿದ್ದು, ಅವರ ಶಿಕ್ಷಣದ ಸಂದರ್ಭದಲ್ಲಿ ದಿನದ ಕೆಲ ಸಮಯವನ್ನು ಮೀಸಲಿಡುವ ಕಾರ್ಯ ಹೆತ್ತವರದ್ದು. ಮಕ್ಕಳು ಶೈಕ್ಷಣಿಕ ಸಬಲೀಕರಣವಾದರೆ ಮುಂದಿನ ಜೀವನದಲ್ಲಿ ಅವರು ಆರ್ಥಿಕ ಸಬಲತೆಯನ್ನು ಪಡೆಯಲು ಸಾಧ್ಯ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆಯ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆಯಲ್ಲಿ ವಿಶೇಷ ದಾಖಲಾತಿ ಆಂದೋಲನ , ಸಾಮಾನ್ಯ ದಾಖಲಾತಿ ಆಂದೋಲನ, ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಪುಸ್ತಕ ವಿತರಣೆ ಮತ್ತು ಸೈಕಲ್ ವಿತರಿಸಿ ಮಾತನಾಡಿದರು. ನಮ್ಮ ಮುಂದಿನ ಭವಿಷ್ಯ ಇಂದಿನ ಮಕ್ಕಳಲ್ಲಿದೆ. ಇಂದು ದೊಡ್ಡ ದೊಡ್ಡ ಹುದ್ದೆಯಲ್ಲಿರುವವರು ಹಿಂದೆ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಕಷ್ಟಪಟ್ಟವರೇ. ಬಡವರಾಗಿ ಹುಟ್ಟಬಹುದು ಆದರೆ ಶಿಕ್ಷಣದ ಮೂಲಕ ಶ್ರೀಮಂತರಾಗಬಹುದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸರಕಾರ ನೀಡುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಉನ್ನತ ಶಿಕ್ಷಣ ಪಡೆದು ಆರ್ಥಿಕವಾಗಿ ಬಲಿಷ್ಠರಾಗುವ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆಯನ್ನು ನೀಡಬೇಕು ಎಂದರು.…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಮಂಗಳೂರು: ಎಸ್ ಎಸ್ ಎಫ್ ನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಜೂ.3 ರಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಆಯೋಜಿಸಿರುವ ಕೇಂದ್ರ ಸರಕಾರ ಜಾರಿಗೊಳಿಸಿರುವ ಗೋಹತ್ಯೆ ನಿಷೇಧ ಕಾನೂನು ವಿರುದ್ಧದ ಪ್ರತಿಭಟನೆಯಲ್ಲಿ ಮೈಸೂರು ಮೂಲದ ಮಠವೊಂದರ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂದು ಎಸ್ ಎಸ್ ಎಫ್ ತಿಳಿಸಿದೆ. ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಮೈಸೂರು ಮೂಲದ ಮಠವೊಂದರ ಸ್ವಾಮೀಜಿ ಭಾಗವಹಿಸಿ ಭಾಷಣ ಮಾಡಲಿದ್ದಾರೆ. ಅಲ್ಲದೆ ಎನ್.ಕೆ.ಎಂ ಶಾಫಿ ಸಅದಿ ಬೆಂಗಳೂರು, ಐವನ್ ಡಿ’ಸೋಜ ಮಂಗಳೂರು, ಮಾಜಿ ಮೇಯರ್ ಆಶ್ರಫ್ ಕೆ, ದಲಿತ ಸಂಘರ್ಷ ಸಮಿತಿಯ ಚಂದು ಎಲ್, ಶೇಕರ್. ಎಲ್, ಉಮರ್ ಸಖಾಫಿ ಕಂಬಳಬೆಟ್ಟು, ಕೆ.ಕೆ,ಎಂ ಕಾಮಿಲ್ ಸಖಾಫಿ, ಹಾಫಿಳ್ ಯಾಕೂಬ್ ಸಅದಿ ನಾವೂರು ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ದೇಶದ 85% ಜನರ ಆಹಾರ ಪದ್ದತಿಯಾಗಿರುವ ಮಾಂಸಹಾರವನ್ನು ನಿಷೇಧಿಸುವ ರೀತಿಯಲ್ಲಿ ಕೇಂದ್ರ ಸರಕಾರವು…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಮುಂಬಯಿ: ರಾಯನ್‍ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹ ಸಂಸ್ಥೆಗಳ ಪ್ರವರ್ತಕಿ-ಆಡಳಿತ ನಿರ್ದೇಶಕಿ ಅಚ್ಚ ತುಳು ಕನ್ನಡದ ಮಹಾನ್ ಸಾಧಕಿ ಮೇಡಂಗ್ರೇಸ್ ಪಿಂಟೊ ಆಡಳಿತ್ವದ ರಾಯಾನ್ ಶೈಕ್ಷಣಿಕ ಸಂಸ್ಥೆಗಳು ಮತ್ತೊಮ್ಮೆತಮ್ಮ ಶಿಕ್ಷಣ ಕ್ಷೇತ್ರದ ಅಪ್ರತಿಮ ಸಾಧನೆಯನ್ನು ಕಳೆದ ಸೋಮವಾರ ಪ್ರಕಟವಾದ ಸೆಂಟ್ರಲ್ ಬೋರ್ಡ್‍ಆಫ್ ಸೆಕಂಡರಿ ಎಜ್ಯುಕೇಶನ್ (ಸಿಬಿಎಸ್‍ಇ), ಇಂಡಿಯನ್ ಸೆರ್ಟಿಫಿಕೇಟ್ ಫಾರ್ ಸೆಕಂಡರಿ ಎಜ್ಯುಕೇಶನ್ (ಐಸಿಎಸ್‍ಇ)ಮತ್ತು ಇಂಡಿಯನ್ ಸ್ಕೂಲ್‍ಸೆರ್ಟಿಫಿಕೇಟ್(ಐಎಸ್‍ಸಿ) ಪರೀಕ್ಷಾ ಫಲಿತಾಂಶಗಳಲ್ಲಿ ಪ್ರದರ್ಶಿಸಿದೆ. ರಾಯಾನ್ ವಿದ್ಯಾಸಂಸ್ಥೆಗಳು ಕಳೆದ ಹಲವು ವರ್ಷಗಳಿಂದ ಸತತವಾಗಿ ಶೇಕಡಾ100 ಫಲಿತಾಂಶಗಳನ್ನು ಪಡೆಯುತ್ತಾ ಬಂದಿದೆ. ಅದೇರೀತಿ ಈ ಬಾರಿಯೂ ಭಿನ್ನವಾಗಿಲ್ಲ. ಇದರೊಂದಿಗೆ ಡಿಸ್ಟಿಂಕ್ಷನ್ಸ್ ಮತ್ತು ಶೇ 85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಳವಾಗಿದೆ. ವಿದ್ಯಾರ್ಥಿಗಳ ಪ್ರಯತ್ನ, ಯಶಸ್ವಿ ಸಾಧನೆ ರಾಯಾನ್ ಸಂಸ್ಥೆಯ ಘನತೆಯನ್ನು ಹೆಚ್ಚಿಸಿದೆ. ಖಾರ್‍ಘರ್‍ಇಲ್ಲಿನರಾಯಾನ್‍ಅಂತರಾಷ್ಟ್ರೀಯ ಶಾಲೆಯ ವಿದ್ಯಾರ್ಥಿ ಮಾ| ಋಷಿಕೇಶ್ ನಿಕಂ ಐಸಿಎಸ್‍ಇ ಪರೀಕ್ಷೆಯಲ್ಲಿ ಒಟ್ಟು ಶೇಕಡಾ98.6 ಅಂಕ ಗಳಿಸಿದ್ದಾರೆ. ನನ್ನ ಪರೀಕ್ಷಾ ಸಿದ್ಧತೆಯ ಸಂದರ್ಭ ಶಾಲೆ ಮತ್ತು ಶಾಲೆಯ ಶಿಕ್ಷಕರು ಬಹಳಷ್ಟು…

