Author: UllalaVani

Kannada News From Coastal Karnataka

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಹಳೆಕೋಟೆ  : ರಾಜ್ಯದಲ್ಲಿ ಇಂದು ಮಾತೃಭಾಷಾ ಶಿಕ್ಷಣ ಸಂಸ್ಥೆ ಅದರಲ್ಲೂ ಕನ್ನಡ ಮಾಧ್ಯಮ ಶಾಲೆಗಳು ಅಳಿವಿನಂಚಿನಲ್ಲಿದೆ. ಆಂಗ್ಲ ಭಾಷಾ ವ್ಯಾಮೋಹದಿಂದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಈ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಿ ಬಡ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದೇ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ನ ಪ್ರಥಮ ಆದ್ಯತೆ ಎಂದು ಉಳ್ಳಾಲ ಕೇಂದ್ರ ಜಮಾಅತ್ ನ ಅಧ್ಯಕ್ಷರಾದ  ಅಬ್ದುಲ್ ರಶೀದ್ ರವರು ಹೇಳಿದರು. ಅವರು ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುವ ಸಯ್ಯಿದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಗೆ ಸಾಧಾರಣ 16 ಲಕ್ಷ ರೂಪಾಯಿ ಮೊತ್ತದ ಹೊಸ ಬಸ್ಸನ್ನು ಉಚಿತವಾಗಿ ನೀಡುತ್ತಾ ಕನ್ನಡ ಮಾಧ್ಯಮ ಶಾಲೆಗಳಿಗೂ ಆಕರ್ಷಣೆಯಿಂದ ವಿದ್ಯಾರ್ಥಿಗಳು ಬರಬೇಕು. ಈ ಶಾಲೆಗೆ ದೂರ ಪ್ರದೇಶಗಳಿಂದ ಬರುವ ಮಕ್ಕಳು ಉಚಿತವಾಗಿ ಬರಬೇಕು ಎಂಬ ಉದ್ದೇಶದಿಂದ ಟ್ರಸ್ಟ್ ವತಿಯಿಂದ ಬಸ್ ಒದಗಿಸಲಾಗಿದೆ ಎಂದರು. ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಇದು…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಇಬ್ಬರ ತಂಡ ಯುವಕನನ್ನು ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳಾಲ ಕೋಡಿ ಸಮೀಪದ ವೀರಭದ್ರ ದೇವಸ್ಥಾನ ಹಾಗೂ ರೆಹಮಾನಿಯಾ ಮಸೀದಿ ನಡುವೆ ಸೋಮವಾರ ತಡರಾತ್ರಿ ವೇಳೆ ಸಂಭವಿಸಿದೆ. ಕೋಡಿ ನಿವಾಸಿ ನೌಷಾದ್ ಹುಸೈನ್ (23) ಕೊಲೆ ಯತ್ನಕ್ಕೊಳಗಾಗಿರುವ ಯುವಕ. ಮುಕ್ಕಚ್ಚೇರಿಯಲ್ಲಿರುವ ಸಮೋಸಾ ತಯಾರಿಕಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಷಾದ್ ಕೆಲಸಕ್ಕೆಂದು ತೆರಳುವ ಸಂದರ್ಭ ಘಟನೆ ನಡೆದಿದೆ. ಬೈಕಿನಲ್ಲಿ ತೆರಳುವ ಸಂದರ್ಭ ಎದುರಿನಿಂದ ಇನ್ನೊಂದು ಬೈಕಿನಲ್ಲಿ ಬಂದ ಇಬ್ಬರು ಆಗಂತುಕರು ನೌಷಾದ್ ಮೇಲೆ ತಲವಾರು ಬೀಸಿದ್ದರು. ತಲವಾರಿನ ಏಟಿನಿಂದ ತಪ್ಪಿಸುವ ಸಂದರ್ಭ ಕೈಯನ್ನು ಅಡ್ಡ ಹಿಡಿದಿದ್ದರಿಂದಾಗಿ ಕೈಗೆ ಕಡಿತದ ಗಾಯವಾಗಿದೆ. ತಪ್ಪಿಸುವ ಧಾವಂತದಲ್ಲಿ ಬೈಕ್ ರಸ್ತೆಗೆ ಉರುಳಿಬಿದ್ದಿದೆ. ಸದ್ದು ಕೇಳಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದ ಪೊಲೀಸ್ ಪೇದೆಗಳಿಬ್ಬರು ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿದಾಗ ಓರ್ವ ಆರೋಪಿ ಮೊಗವೀರಪಟ್ನ ಕಡೆಗೆ ಓಣಿಯ ಮೂಲಕ ಪರಾರಿಯಾದರೆ, ಇನ್ನೋರ್ವ ಆರೋಪಿ ಬೈಕ್ ಸಮೇತ ಪರಾರಿಯಾಗಿದ್ದಾನೆ. ಪೊಲೀಸರು ಬರುವಲ್ಲಿ…

Read More

ಉಳ್ಳಾಲ್‍ನ್ಯೂಸ್ ನೆಟ್‍ವರ್ಕ್ ತೊಕ್ಕೊಟ್ಟು: ರೈಲಿನಡಿಗೆ ತಲೆಕೊಟ್ಟು ಉಪ್ಪಳ ಮೂಲದ ಮಂಗಳೂರಿನಲ್ಲಿ ವಿದ್ಯಾರ್ಥಿಯಾಗಿರುವ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ನಸುಕಿನ ಜಾವ ಸಂಭವಿಸಿದೆ. ಉಪ್ಪಳ ಬೇಕೂರು ನಿವಾಸಿ ಲೋಕಯ್ಯ ಪೂಜಾರಿ ಎಂಬವರ ಪುತ್ರ ನಿಶಾನ್ ಕುಮಾರ್ .ಬಿ (26) ಆತ್ಮಹತ್ಯೆ ನಡೆಸಿರುವ ವಿದ್ಯಾರ್ಥಿ. ತೊಕ್ಕೊಟ್ಟು ಕೊಲ್ಯ ನಡುವಿನ ಜಾಯ್‍ಲ್ಯಾಂಡ್ ಶಾಲೆ ಎದುರುಗಡೆ ವಿದ್ಯಾರ್ಥಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳೂರು ಕೆಂಜಾರು ಶ್ರೀದೇವಿ ತಾಂತ್ರಿಕ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿರುವ ಈತ ಶನಿವಾರ ಸಂಜೆ ಮನೆಗೆ ಹೋಗದೆ ನಾಪತ್ತೆಯಾಗಿದ್ದನು. ಇದರಿಂದ ಗಾಬರಿಗೊಂಡ ಮನೆಮಂದಿ ಹುಡುಕಾಡಿದರೂ ಶನಿವಾರ ತಡರಾತ್ರಿವರೆಗೂ ಪತ್ತೆಯಾಗಿರಲಿಲ್ಲ. ಭಾನುವಾರ ಬೆಳಿಗ್ಗೆ ನಿಶಾನ್ ಮೃತದೇಹ ಜಾಯ್ ಲ್ಯಾಂಡ್ ರೈಲ್ವೇ ಹಳಿ ಸಮೀಪ ಪತ್ತೆಯಾಗಿತ್ತು. ಈ ಬಗ್ಗೆ ಸ್ಥಳೀಯರು ಮಂಗಳೂರು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ವಿದ್ಯಾರ್ಥಿ ಕಿಸೆಯಲ್ಲಿ ಡೆತ್ ನೋಟ್ ಪತ್ತೆಯಾಗಿತ್ತು. ` ನನ್ನ ಸಾವಿಗೆ ನಾನೇ ಕಾರಣ’ ಎಂದು ಬರೆದಿಡಲಾಗಿತ್ತು. ಈತನ ಕಿಸೆಯಲ್ಲಿ ಔಷಧಿಗಳ ಚೀಟಿಗಳು,…

Read More

ವರದಿ: ಹರೀಶ್ ಪೂಜಾರಿ ಕೊಣಾಜೆ ಚಿತ್ರಗಳು: ಗಂಗಾಧರ್ ಕವಿತಾ ಸ್ಟುಡಿಯೋ ಕೊಣಾಜೆ ಕೊಣಾಜೆ: ಬ್ರಹ್ಮ ಶ್ರೀನಾರಾಯಣ ಗುರು ಸೇವಾ ಸಂಘ ಗ್ರಾಮಚಾವಡಿ ಕೊಣಾಜೆ ಇದರ ಅಂಗಸಂಸ್ಥೆಗಳಾದ ಬ್ರಹ್ಮಶ್ರೀ ನಾರಾಯಣ ಗುರು ಕೊಣಾಜೆ ಗ್ರಾಮ ಸಮಿತಿ ಯುವ ಘಟಕ ಮತ್ತು ಮಹಿಳಾ ಘಟಕ ಕೊಣಾಜೆ ಇದರ ಜಂಟಿ ವಾರ್ಷಿಕ ವiಹಾಸಭೆ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಯುವ ಘಟಕದ ದಶಮ ಸಂಭ್ರಮದ ಸಮಾರೋಪ ಸಮಾರಂಭ ಕೊಣಾಜೆ ಮುಟ್ಟಿಂಜದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮಚಾವಡಿ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ರಾಘವ ಪೂಜಾರಿ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ದ್ಯೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ನಂದನ ಬಿತ್ತಿಲ್ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್ ಮಾತನಾಡಿ ನಾರಾಯಣ ಗುರು ಸಂಘದ ಕೊಣಾಜೆ ಗ್ರಾಮದ ಯುವ ಘಟಕ, ಗ್ರಾಮಸಮಿತಿ, ಮಹಿಳಾ ಘಟಕಗಳು ಉತ್ತಮ ಸಮಾಜ ಸೇವೆತಯಲ್ಲಿ ಪಾಲ್ಗೊಂಡು ಇತರೆ ಸಂಘಟನೆಗಳಿಗೆ ಮಾದರಿಯಾಗಿದೆ. ಇದರ ಜತೆಗೆ ಎಲ್ಲಾ ಸಮಾಜದವರನ್ನು ಒಗ್ಗೂಡಿಸುವ ಕೆಲಸ…

Read More

ಉಳ್ಳಾಲ್‍ನ್ಯೂಸ್ ನೆಟವರ್ಕ್ ಮುಡಿಪು: ನ್ಯೂಸ್ ಪಾಯಿಂಟ್ ಮುಡಿಪು, ಜನಶಿಕ್ಷಣ ಟ್ರಸ್ಟ್ ಹಾಗೂ ಚಿತ್ತಾರ ಬಳಗ ಮಂಗಳೂರು ಇದರ ಸಹಭಾಗಿತ್ವದಲ್ಲಿ ಮಂಚಿ ಮಕ್ಕಳ ಕೊಲಾಜ್ ಚಿತ್ರಕಲಾ ಪ್ರದರ್ಶನವು ಮಾ. 27 ರಿಂದ ಎಪ್ರಿಲ್ 2ರ ತನಕ ಮುಡಿಪು ಜನಶಿಕ್ಷಣ ಕೇಂದ್ರದಲ್ಲಿ ನಡೆಯಲಿದೆ. ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಇಲ್ಲಿನ 25 ಮಂದಿ ವಿದ್ಯಾರ್ಥಿಗಳು ಚಿತ್ರಕಲಾ ಶಿಕ್ಷಕ ತಾರನಾಥ ಕೈರಂಗಳ್ ಅವರ ಮಾರ್ಗದರ್ಶನದಲ್ಲಿ ರಚಿಸಿದ 25 ಕೊಲಾಜ್ ಕಲಾಕೃತಿಗಳ ಚಿತ್ರಪಯಣ 2016ರ ಜೂನ್ 1 ರಂದು ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಉದ್ಘಾಟನೆಗೊಂಡಿತ್ತು. ಬಳಿಕ ಬಂಟ್ವಾಳ, ಮಂಗಳೂರು, ಪುತ್ತೂರು, ಸುಳ್ಯ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಪ್ರದರ್ಶನಗೊಂಡಿದ್ದು ಚಿತ್ರ ಪಯಣದ ಸಂಪನ್ನ ಸಮಾರಂಭವು 27.03.2017 ರಂದು ಮುಡಿಪಿನಲ್ಲಿ ಆಯೋಜಿಸಲಾಗಿದೆ. ಈ ದಿನ ಬೆಳಿಗ್ಗೆ ಗಂಟೆ 10ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ  ವಾಲ್ಟರ್ ಎಚ್.ಡಿ’ಮೆಲ್ಲೊ ಚಿತ್ರಕಲಾ ಪ್ರದರ್ಶನದ ವೀಕ್ಷಣೆಗೆ ಚಾಲನೆ ನೀಡಲಿದ್ದಾರೆ. ಚಿತ್ರಪಯಣದ ನೆನಪಿನ ಹೊತ್ತಗೆಯನ್ನು…

Read More

ಉಳ್ಳಾಲ್‍ನ್ಯೂಸ್ ನೆಟವರ್ಕ್ ಕುಂಪಲ : ಕುಂಪಲ ಶ್ರೀ  ಬಾಲಕೃಷ್ಣ ಮಂದಿರದ  ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ನಡೆದ 10ನೇ ವರ್ಷದ  ಏಕಾಹ ಭಜನೋತ್ಸವಕ್ಕೆ ದೀಪ್ತಿ ಅವಿನಾಶ್  ಶೆಟ್ಟಿ ಮಡ್ಯಾರ್, ಪವಿತ್ರ ಗಣೇಶ್ ಗಟ್ಟಿ ಕುಂಪಲ , ಮಮತಾ ಹರೀಶ್ ಪೂಜಾರಿ  ಅಂಬ್ಲಮೊಗರು  ಶನಿವಾರ ಚಾಲನೆ ನೀಡಿದರು. ಮಂದಿರದ ಅಧ್ಯಕ್ಷ ಸತೀಶ್ ಕುಂಪಲ, ಮಹಾಪೋಷಕ ಕೇಶವದಾಸ್ ಬಗಂಬಿಲ, ಮಹಿಳಾ ಸಮಿತಿ ಅಧ್ಯಕ್ಷೆ ರೇಖಾ ಚಂದ್ರಹಾಸ್, ಉತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಬಿ.ಜೆ, ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಂಪಲ,  ಆಡಳಿತ ಮಂಡಳಿಯ ಪ್ರವೀಣ್.ಯಸ್. ಕುಂಪಲ,  ಸಂಜೀವ ಕುಲಾಲ್,  ಹರಿಪ್ರಸಾದ್ ಶೆಟ್ಟಿ,  ಮಾಧವ ಬಗಂಬಿಲ,  ವೆಂಕಟೇಶ್ ಕುಂಪಲ  ಉಪಸ್ಥಿತರಿದ್ದರು.

Read More

ಉಳ್ಳಾಲ್‍ನ್ಯೂಸ್ ನೆಟವರ್ಕ್ ಉಳ್ಳಾಲ: ಧಾರ್ಮಿಕ ದತ್ತಿ ಇಲಾಖೆಯಿಂದ ವಾರ್ಷಿಕವಾಗಿ 12 ಕೋಟಿ ರೂ. ಅನುದಾನ ದೇವಸ್ಥಾನ, ದೈವಸ್ಥಾನಗಳಿಗೆ ನೀಡಲಾಗುತ್ತಿದ್ದು,   ಖಾಸಗಿ ಅಧೀನದ ಇನ್ನಷ್ಟು ದೇವಸ್ಥಾನಗಳಿಗೂ ಅನುದಾನ ನೀಡಲು  ಪ್ರಯತ್ನಿಸುವುದಾಗಿ  ರಾಜ್ಯ ಧಾರ್ಮಿಕ ಪರಿಷತ್  ಸದಸ್ಯ  ಪದ್ಮನಾಭ ಕೋಟ್ಯಾನ್ ಹೇಳಿದ್ದಾರೆ. ಅವರು  ಕಿನ್ಯ ಬೆಳರಿಂಗೆಯ ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಭಂಡಾರಮನೆ  ಇದರ ವಾರ್ಷಿಕ ನೇಮೋತ್ಸವದ ಅಂಗವಾಗಿ  ಇತ್ತೀಚೆಗೆ ನಡೆದ ಧಾರ್ಮಿಕ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ  ಧಾರ್ಮಿಕ   ವಿಚಾರಗಳಿಗೆ ಸಂಬಂಧಿಸಿ ಪ್ರಸಕ್ತ ವರ್ಷ ರೂ. 2 ಕೋಟಿ ವಿನಿಯೋಗಿಸಲಾಗಿದೆ ಎಂದ ಅವರು  ಪ್ರಸಕ್ತ ಸಾಲಿನಲ್ಲಿ ಇನ್ನಷ್ಟು ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರದ ಖಾಸಗೀ ಅಧೀನದ ದೇವಸ್ಥಾನಗಳಿಗೂ ಅನುದಾನ  ನೀಡುವಲ್ಲಿ ಪ್ರಯತ್ನಿಸುತ್ತೇನೆ ಎಂದರು. ಶ್ರೀ ಮಲರಾಯ ಧೂಮಾವತಿ ಬಂಟ ದೈವಸ್ಥಾನದ ಅಂತಪೂಜಾರಿ  ಅಧ್ಯಕ್ಷತೆ ವಹಿಸಿದ್ದರು.  ಜನಪದ ವಿದ್ವಾಂಸ ನೀಲಯ್ಯ ಎಂ.ಅಗರಿ ದೈವಾರಾಧನೆ ಚಿಂತನೆಗಳ ಕುರಿತು  ಮಾತನಾಡಿದರು. ಕ್ಷೇತ್ರದ ಗೌರವಾದ್ಯಕ್ಷ ಕೆ.ಟಿ.ಸುವರ್ಣ, ಆಡಳಿತ ಮೊಕ್ತೇಸರ ಬಾಬು ಶ್ರೀ ಶಾಸ್ತಾ ಕಿನ್ಯಾ, ಮೊಕ್ತೇಸರರಾದ ಎ.ಜೆ.ಶೇಖರ್,…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮೂಲನೆಗೆ ಸಂಬಂಧಿಸಿದ ಅಭಿಯಾನ ಪ್ರಾರಂಭಗೊಂಡ ಬಳಿಕ ಕ್ಷಯರೋಗ ಪೀಡಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಕ್ಷಯ ರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಸರಕಾರದೊಂದಿಗೆ ಖಾಸಾಗಿ ವೈದ್ಯಕೀಯ ಸಂಸ್ಥೆಗಳು ಸಂಘಟನೆಗಳ ಬೆಂಬಲ ಅಗತ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಮಕೃಷ್ಣ ರಾವ್ ಅಭಿಪ್ರಾಯಪಟ್ಟರು. ಅವರು ನಾಟೆಕಲ್‍ನ ಕಣಚೂರು ಆಸ್ಪತ್ರೆ ಆಡಿಟೋರಿಯಂನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ , ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಕ್ಷಯ ಚಿಕಿತ್ಸಾ ಕೇಂದ್ರ ದ.ಕ.ಜಿಲ್ಲಾ ಕ್ಷಯರೋಗ ನಿವಾರಣಾ ಸಂಘ ಹಾಗೂ ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ನಾಟೆಕಲ್ ಮಂಗಳೂರು ಇದರ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಕ್ಷಯ ರೋಗ ದಿನಾಚರಣೆ -2017 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮನುಷ್ಯನ ರೋಗ ನಿರೋಧಕ ಶಕ್ತಿಗಳು ಕಡಿಮೆಯಾದಾಗ ಕ್ಷಯ ರೋಗದಂತಹ ಸಮಸ್ಯೆಗಳು ಬರುತ್ತಿದ್ದು, ಮುಖ್ಯವಾಗಿ ಇಂತಹ ಜನರನ್ನು ಗುರುತಿಸಿ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ: ದೈಹಿಕ ಶಿಕ್ಷಣವು ನಮ್ಮಲ್ಲಿ ದೈಹಿಕ ದೃಢತೆಯನ್ನು ಬೆಳೆಸುವುದು ಮಾತ್ರವಲ್ಲದೆ ಉತ್ತಮವಾದ ಮನಸ್ಸು, ಶಾಂತಿ ನೆಮ್ಮದಿಗೆ ಸ್ಪೂರ್ತಿದಾಯಕವಾಗಿದೆ. ಹಾಗೆಯೇ ನಮ್ಮ ಋಣಾತ್ಮಕ ಚಿಂತನೆಯನ್ನು ದೂರಗೊಳಿಸಿ ಒಗ್ಗಟ್ಟಿನೊಂದಿಗೆ ಉತ್ತಮ ಸಮಾಜವನ್ನು ಕಟ್ಟುವಲ್ಲಿ ಪರಿಣಾಮವನ್ನು ಬೀರುತ್ತದೆ ಎಂದು ಪೊಲೀಸ್ ಕಮೀಷನರ್ ಚಂದ್ರಶೇಖರ್ ಅವರು ಅಭಿಪ್ರಾಯ ಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ಹಳೆಸೆನೆಟ್ ಸಭಾಂಗಣದಲ್ಲಿ `ಇವಾಲ್ಯೂಷನ್ ಆಫ್ ಫಿಸಿಕಲ್ ಎಜ್ಯುಕೇಶನ್ ಪ್ರೋಗ್ರಾಮ್ ಇನ್ ಕಾಲೇಜ್ ಅಫಿಲಿಯೇಟೆಡ್ ಟು ಮಂಗಳೂರು ಯುನಿವರ್ಸಿಟಿ’ ಎಂಬ ವಿಷಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಗಾರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಭಾರತದಲ್ಲಿ ದೈಹಿಕ ಶಿಕ್ಷಣದ ಬೆಳವಣಿಗೆಗೆ ಅಷ್ಟಾಗಿ ಮಹತ್ವ ಸಿಕ್ಕಿಲ್ಲ. ವಿದ್ಯಾರ್ಥಿ ದೆಸೆಯಲ್ಲೇ ಹಂತ ಹಂತವಾಗಿ ವ್ಯವಸ್ಥಿತವಾದ ದೈಹಿಕ ಶಿಕ್ಷಣಕ್ಕೆ ಪೂರಕವಾದ ಚಟುವಟಿಕೆಗಳು ಹಮ್ಮಿಕೊಂಡರೆ ದೈಹಿಕ ಸದೃಡತೆಯಳ್ಳ ಮಾನವ ಸಂಪನ್ಮೂಲದ ನಿರ್ಮಾಣದೊಂದಿಗೆ ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು. ಪೊಲೀಸ್ ಇಲಾಖೆ ಮತ್ತು ದೈಹಿಕ ಶಿಕ್ಷಣ ಕ್ಷೇತ್ರಕ್ಕೆ ಅವಿನಾಭಾವ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ: ತೆಂಕುತಿಟ್ಟಿನ ಸುಪ್ರಸಿದ್ಧ ಯಕ್ಷಗಾನ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ ಅವರ ನಿಧನಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರವು ಗಾಢ ಸಂತಾಪವನ್ನು ವ್ಯಕ್ತಪಡಿಸಿದೆ. ಗೇರುಕಟ್ಟೆ ಗಂಗಯ್ಯ ಶೆಟ್ಟಿ ಅವರು ತಮ್ಮ 16ನೇ ವಯಸ್ಸಿನಲ್ಲಿಯೇ ಯಕ್ಷರಂಗವನ್ನು ಪ್ರವೇಶಿಸಿ ಕಟೀಲು ಮೇಳದಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ್ದರು. ಕಟೀಲು ಮೇಳದಲ್ಲಿ ಸುಪ್ರಸಿದ್ದ ಬಣ್ಣದ ವೇಷಧಾರಿ ಬಣ್ಣದ ಕುಟ್ಯಪುರವರ ಒಡನಾಟದಲ್ಲಿ ಬಣ್ಣದ ವೇಷದತ್ತ ಆಕರ್ಷಿತರಾದ ಗಂಗಯ್ಯ ಶೆಟ್ಟರು ಬಣ್ಣದ ವೇಷಗಳ ಸೂಕ್ಷ್ಮತೆ ಹಾಗೂ ರಂಗದ ನಡೆಯನ್ನು ಕಲಿತಿದ್ದರು. ಮುಂದೆ ಮಹಿಷಾಸುರ ವೇಷದ ಮೂಲಕ ಯಕ್ಷಗಾನ ರಂಗದಲ್ಲಿ ಪ್ರಸಿದ್ದ ಕಲಾವಿದರಾಗಿ ಮಿಂಚಿ ತನ್ನದೇ ಆದ ಛಾಪು ಮೂಡಿಸಿ ರಂಗದಲ್ಲಿ ಮೆರೆದ ಕಲಾವಿದರಾಗಿದ್ದಾರೆ. ರಾಮಾಯಣ, ಮಹಾಭಾರತ ಮುಂತಾದ ಪುರಾಣಗಳ ಆಳವಾದ ಜ್ಞಾನ ಹೊಂದಿದ್ದ ಶೆಟ್ಟರು ಮಹಿಷಾಸುರ ಪಾತ್ರದೊಂದಿಗೆ ರುದ್ರಭೀಮ, ಅರುಣಾಸುರ, ರಾವಣ, ಮೈರಾವಣ, ವೀರಭದ್ರ, ಚಂದಗೋಪ, ಶನೈಶ್ವರ, ಕೌಂಡ್ಲಿಕ ಹೀಗೆ ಪೌರಾಣಿಕ ಪ್ರಸಂಗಗಳ ಪ್ರಮುಖ ಖಳ…

Read More