Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಗ್ರಾಮ

ಇಂಜಿನಿಯರ್ ಯುವತಿಯ ಸೈಕಲ್ ಜಾಥ

UllalaVaniBy UllalaVaniMarch 18, 2017No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಹಾಗೂ ದಿವಂಗತ ಉಪಕುಲಪತಿಗಳ ಪುತ್ರಿಯೋರ್ವರು ಜಮ್ಮು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸೈಕಲ್ ಪ್ರಯಾಣ ಬೆಳೆಸಿದ್ದು, 37ನೇ ದಿನವಾದ ಶುಕ್ರವಾರ ಮಂಗಳೂರು ಮೂಲಕ ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ ಮಾರ್ಗವಾಗಿ ಕೇರಳದ ಕಡೆ ಪ್ರಯಾಣ ಬೆಳೆಸಿದರು. ಲಿಂಗ ಸಮಾನತೆ ಮತ್ತು ಹದಿಹರೆಯದವರಿಗೆ ಜೀವನ ಕೌಶಲ್ಯ ಶಿಕ್ಷಣದ ಉದ್ದೇಶವನ್ನಿಟ್ಟುಕೊಂಡು ಸೈಕಲ್ ಜಾಥಾ ಆರಂಭಿಸಿದ್ದಾರೆ.

17ullal2 17ullal3 17ullal4ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿಗಳಾಗಿದ್ದ ದಿ.ಶಿವಶಂಕರ ಮೂರ್ತಿ ಇವರ ಪುತ್ರಿಯಾಗಿರುವ ಮೈಸೂರು ಮೂಲದ 27ರ ಹರೆಯದ ಶ್ರುತಿ ಸೈಕಲ್ ಜಾಥಾ ನಡೆಸುತ್ತಿರುವವರು. ಫೆ.8 ರಂದು ಜಮ್ಮು ಕಾಶ್ಮೀರದಿಂದ ಸೈಕಲ್ ಪ್ರಯಾಣ ಆರಂಭಿಸಿರುವ ಶ್ರುತಿ ಈವರೆಗೆ 3,000 ಕ್ಕೂ ಅಧಿಕ ಕಿ.ಮೀ.ನಷ್ಟು ಕ್ರಮಿಸಿ 11 ರಾಜ್ಯಗಳನ್ನು ದಾಟಿ ಇದೀಗ ಕರ್ನಾಟಕದ ಗಡಿಯನ್ನು ದಾಟಿ ಕೇರಳವನ್ನು ತಲುಪಿದ್ದಾರೆ.

ಮೂಲತ: ಸಾಫ್ಟ್‍ವೇರ್ ಇಂಜಿನಿಯರ್ ಆಗಿರುವ ಶ್ರುತಿ ಮೂರು ವರ್ಷ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕೆಲಸ ಮಾಡಿ ವೃತ್ತಿಯನ್ನು ಬಿಟ್ಟು ಹದಿಹರೆಯದ ಮಕ್ಕಳ ವಿಷಯದಲ್ಲಿ ಫೆಲೋಶಿಪ್ ಪಡೆದು ಜೀವನ ಕೌಶಲ್ಯ ಶಿಕ್ಷಣ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ತೊಕ್ಕೊಟ್ಟಿನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಕಳೆದ ಮೂರು ವರ್ಷಗಳಿಂದ ಸೈಕ್ಲಿಂಗ್ ಹವ್ಯಾಸವನ್ನು ಪ್ರಾರಂಭಿಸಿದ್ದೆ, ಎರಡು ಮೂರು ದಿನಗಳ ಸೈಕ್ಲಿಂಗ್ ಈ ಹಿಂದೆಯೂ ಮಾಡಿದ್ದೆ. ಈ ಬಾರಿ ಒಂದು ಲಿಂಗ ಸಮಾನತೆಯ ವಿಚಾರವನ್ನು ಪ್ರಮುಖ ಧ್ಯೇಯ ವಾಕ್ಯವನ್ನಾಗಿ ಇಟ್ಟುಕೊಂಡು ಕಾಶ್ಮೀರ್ ಟು ಕನ್ಯಾಕುಮಾರಿ ಪ್ರಯಾಣ ಬೆಳೆಸಿದ್ದೇನೆ. ಈ ನಡುವೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 48 ದಿನಗಳಲ್ಲಿ 4500 ಕಿ.ಮೀ ಸೈಕ್ಲಿಂಗ್ ಮಾಡುವ ಗುರಿಯೊಂದಿಗೆ ಹೊರಟಿದ್ದು, ದಾರಿಯಲ್ಲಿ ಸಿಗುವ ಸರಕಾರಿ ಶಾಲೆಗಳಲ್ಲಿ ಹದಿಹರೆಯದ ಸಮಸ್ಯೆಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡುವ ಕಾರ್ಯವನ್ನು ನಡೆಸಿದ್ದು, ಕಳೆದ 36 ದಿನಗಳ ಸೈಕ್ಲಿಂಗ್ ಸಮಯದಲ್ಲಿ ಸುಮಾರು 1500ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದರು.

ಸೈಕ್ಲಿಂಗ್ ಸಮಯದಲ್ಲಿ ಎಲ್ಲಾ ಕಡೆ ಉತ್ತಮ ಬೆಂಬಲ ಸಿಕ್ಕಿತ್ತು. ಕಾಶ್ಮೀರದಿಂದ ಗೋವಾವರಗೆ ತನ್ನಿಬ್ಬರು ಸ್ನೇಹಿತರು ಸ್ಕಾರ್ಪಿಯೋ ಮೂಲಕ ಬೆಂಗಾವಲಾಗಿ ಬಂದಿದ್ದರು. ಗೋವಾದಿಂದ ಕನ್ಯಾಕುಮಾರಿಯವರೆಗೆ ಏಕಾಂಗಿಯಾಗಿ ಸೈಕ್ಲಿಂಗ್ ನಡೆಸುವ ಯೋಜನೆ ಹಾಕಿದ್ದು ಮಾ. 27ಕ್ಕೆ ಕನ್ಯಾಕುಮಾರಿ ತಲುಪುವ ಗುರಿಯನ್ನು ಹೊಂದಿದ್ದೇನೆ ಎಂದರು.

ಮನೆಯಲ್ಲಿ ಬೆಂಬಲ :

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕುಲಪತಿಯಾಗಿದ್ದ ದಿ.ಶಿವಶಂಕರ ಮೂರ್ತಿ ಅವರ ಪುತ್ರಿಯಾಗಿರುವ ಶ್ರುತಿ ಅವರು ಸೈಕ್ಲಿಂಗ್ ವಿಚಾರವನ್ನು ತಾಯಿ, ಅಕ್ಕ ಮತ್ತು ಅಣ್ಣನಲ್ಲಿ ತಿಳಿಸಿದಾಗ ಮೊದಲು ಅವಕಾಶ ನೀಡಿರಲಿಲ್ಲ. ಬಳಿಕ ಸೈಕ್ಲಿಂಗ್ ನಡೆಸಲು ಅನುಮತಿ ನೀಡಿದರು ಎನ್ನುವ ಅವರು ಕಳೆದ 36 ದಿನಗಳ ಸೈಕ್ಲಿಂಗ್‍ನಲ್ಲಿ ಹವಾಮಾನ ಬದಲಾವಣೆ, ಆಹಾರ ವ್ಯತ್ಯಾಸ ಸ್ವಲ್ಪ ಸಮಸ್ಯೆಯಾದರು ಎಲ್ಲಾ ಕಡೆ ಜನರು ಸಹಕಾರ ನೀಡಿದರು ಎಂದು ತಿಳಿಸಿದರು.

ದಿನದಲ್ಲಿ 8 ಗಂಟೆಯ ಸೈಕ್ಲಿಂಗ್ :

ಬೆಳಿಗ್ಗೆ 6 ಗಂಟೆಯಿಂದ ಸೈಕ್ಲಿಂಗ್ ಆರಂಭಿಸುವ ಶ್ರುತಿ ಸಂಜೆ 6ರ ವರೆಗೆ ಸೈಕ್ಲಿಂಗ್ ನಡೆಸುತ್ತಾರೆ. ದಾರಿಯಲ್ಲಿ ಸಿಗುವ ಸರಕಾರಿ ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳಿಗೆ ಎರಡು ಗಂಟೆ ವ್ಯಯಿಸಿ , ಎರಡು ಗಂಟೆಯ ಕಾಲ ಆಹಾರ ವಿಶ್ರಾಂತಿಗೆ ಬಳಸುತ್ತಾರೆ. ಉಳಿದ 8 ಗಂಟೆಗಳ ಕಾಲ ನಿರಂತರವಾಗಿ ಸೈಕಲ್ ತುಳಿಯುತ್ತಲೇ ದಾರಿಯನ್ನು ಮುಂದುವರಿಸುತ್ತಿದ್ದಾರೆ.

ಭದ್ರತೆಗೆ ವಿವಿಧ ವಸ್ತುಗಳ ಬಳಕೆ:

ಶ್ರುತಿ ಹದಿಹರೆಯದ ಯುವತಿಯಾಗಿರುವುದರಿಂದ ಬಹಳ ಉತ್ಸಾಹದಿಂದಲೇ ಪ್ರಯಾಣವನ್ನು ಮುಂದುವರಿಸುತ್ತಿದ್ದಾರೆ. ತಮ್ಮ ಸುರಕ್ಷತೆಗೆ ಪೆಪ್ಪರ್ ಸ್ಪ್ರೇ, ಮೊಬೈಲ್ ಆ್ಯಪ್, ಪಿನ್ ಮೊದಲಾದ ಸೊತ್ತುಗಳನ್ನು ಬ್ಯಾಗಿನಲ್ಲಿಟ್ಟುಕೊಂಡೇ ಪ್ರಯಾಣ ಮುಂದುವರಿಸುತ್ತಿರುವುದಾಗಿ ತಿಳಿಸಿದ್ದಾರೆ. ಇಷ್ಟು ದಿನಗಳಲ್ಲಿ ಎಲ್ಲಾ ಭಾಗದ ಜನ ಉತ್ತಮವಾಗಿ ಸಹಕರಿಸಿದ್ದಾರೆ. ಯಾರಿಂದಲೂ ತೊಂದರೆಯೂ ಆಗಿಲ್ಲ ಎಂದು ಶ್ರುತಿ ಹೇಳುತ್ತಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಅಂತರರಾಷ್ಟ್ರೀಯ ನರವಿಜ್ಞಾನ ರೋಗನಿರೋಧಕ ಕಾರ್ಯಾಗಾರ

March 9, 2026

ತೊಕ್ಕೊಟ್ಟಿನಲ್ಲಿ ಅನ್ವಿತ್ ಎಲೆಕ್ಟ್ರಾನಿಕ್ಸ್ ನವೀಕೃತ ಮಳಿಗೆ ಉದ್ಘಾಟನೆ

March 9, 2026

ಎ.ಸಿ ಫಿಟಿಂಗ್ ವೇಳೆ ಆಯ ತಪ್ಪಿಬಿದ್ದ ತಲಪಾಡಿ ನಿವಾಸಿ ಹರ್ಷಿತ್ ಸಾವು..!!

March 9, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಅಂತರರಾಷ್ಟ್ರೀಯ ನರವಿಜ್ಞಾನ ರೋಗನಿರೋಧಕ ಕಾರ್ಯಾಗಾರ

By UllalaVaniMarch 9, 20260

ಉಳ್ಳಾಲ: ಭಾರತದಲ್ಲಿ ಮಲ್ಟಿಪಲ್ ಸ್ಕ್ಲೆರೋಸಿಸ್ ಸೇರಿದಂತೆ ಕೆಲವು ನರವಿಜ್ಞಾನ ರೋಗಗಳು ಇಂದಿನ ದಿನಗಳಲ್ಲಿ ಯುವಕರಲ್ಲಿಯೂ ಕಂಡುಬರುತ್ತಿವೆ. ಎಲ್ಲ ವಯೋಮಾನದವರಲ್ಲೂ ಈ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ತೊಕ್ಕೊಟ್ಟಿನಲ್ಲಿ ಅನ್ವಿತ್ ಎಲೆಕ್ಟ್ರಾನಿಕ್ಸ್ ನವೀಕೃತ ಮಳಿಗೆ ಉದ್ಘಾಟನೆ

March 9, 2026

ಎ.ಸಿ ಫಿಟಿಂಗ್ ವೇಳೆ ಆಯ ತಪ್ಪಿಬಿದ್ದ ತಲಪಾಡಿ ನಿವಾಸಿ ಹರ್ಷಿತ್ ಸಾವು..!!

March 9, 2026

ಆಶ್ರಮ ವಾಸಿಗಳ ಜತೆಗೆ ದಿನ ಕಳೆದ ಕರ್ನಾಟಕ ಸ್ಟೇಟ್‌ ಟೈಲರ್ಸ್‌ ಅಸೋಸಿಯೇಷನ್‌ ಮಂಗಳಾದೇವಿ ವಲಯದ ಸದಸ್ಯರು

March 9, 2026
1 2 3 … 1,826 Next
Automatic YouTube Gallery

ಬೆಳ್ಮ ಪೆಲತ್ತಡಿಯ ಆಶ್ರಮವಾಸಿಗಳ ಜತೆಗೆ `ಟೈಲರ್ಸ್ ಡೇ' ದಿನ ಆಚರಣೆ

ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಮಂಗಳಾದೇವಿ ವಲಯದ ವತಿಯಿಂದ;ಬೆಳ್ಮ ಪೆಲತ್ತಡಿಯ ಆಶ್ರಮವಾಸಿಗಳ ಜತೆಗೆ ಟೈಲರ್ಸ್ ಡೇ ದಿನ ಆಚರಣೆ

ಮಂಗಳಾದೇವಿ ವಲಯದ ಸದಸ್ಯರ ಜೊತೆ ಸಂಭ್ರಮಿಸಿದ ಹಿರಿಜೀವಗಳು

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #tailorsassociation #Mangaladevi
Show More
ಬೆಳ್ಮ ಪೆಲತ್ತಡಿಯ ಆಶ್ರಮವಾಸಿಗಳ ಜತೆಗೆ `ಟೈಲರ್ಸ್ ಡೇ' ದಿನ ಆಚರಣೆ
Now Playing
ಬೆಳ್ಮ ಪೆಲತ್ತಡಿಯ ಆಶ್ರಮವಾಸಿಗಳ ಜತೆಗೆ `ಟೈಲರ್ಸ್ ಡೇ' ದಿನ ಆಚರಣೆ
ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಮಂಗಳಾದೇವಿ ವಲಯದ ವತಿಯಿಂದ;ಬೆಳ್ಮ ...
ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಮಂಗಳಾದೇವಿ ವಲಯದ ವತಿಯಿಂದ;ಬೆಳ್ಮ ಪೆಲತ್ತಡಿಯ ಆಶ್ರಮವಾಸಿಗಳ ಜತೆಗೆ ಟೈಲರ್ಸ್ ಡೇ ದಿನ ಆಚರಣೆ

ಮಂಗಳಾದೇವಿ ವಲಯದ ಸದಸ್ಯರ ಜೊತೆ ಸಂಭ್ರಮಿಸಿದ ಹಿರಿಜೀವಗಳು

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #tailorsassociation #Mangaladevi
Show More
ಈ ಬಾರಿ ರಮಾನಾಥ ರೈಯವರನ್ನು ಗೆಲ್ಲಿಸಿ; ಸಿಎಂ
Now Playing
ಈ ಬಾರಿ ರಮಾನಾಥ ರೈಯವರನ್ನು ಗೆಲ್ಲಿಸಿ; ಸಿಎಂ
ಕ್ಷೇತ್ರಕ್ಕೆ ಕೋಟಿ ಅನುದಾನ ನೀಡಿದ್ರೂ ಕ್ಷೇತ್ರದ ಜನರೇ ಸೋಲಿಸಿದ್ರು; ಮಾಜಿ ಸಚಿವ ...
ಕ್ಷೇತ್ರಕ್ಕೆ ಕೋಟಿ ಅನುದಾನ ನೀಡಿದ್ರೂ ಕ್ಷೇತ್ರದ ಜನರೇ ಸೋಲಿಸಿದ್ರು; ಮಾಜಿ ಸಚಿವ ರಮಾನಾಥ ರೈ ಅವರನ್ನು ಸೋಲಿಸಿದ್ದು, ನ್ಯಾಯವಲ್ಲ

ನಾವು ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ; ಬಂಟ್ವಾಳದಲ್ಲಿ ಸಿಎಂ ಭಾಷಣ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ...
ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #ullalvaani #UllalNews #VoiceOfUllal #UllalMedia #UllalUpdates #bantwala #kambala #cm
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d