ಉಳ್ಳಾಲ ನ್ಯೂಸ್ ನೆಟ್‍ವರ್ಕ್
ತೊಕ್ಕೊಟ್ಟು :ಸಾಮಾಜಿಕ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಅಳೇಕಲದ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತೊಕ್ಕೊಟ್ಟು ಕಲ್ಲಾಪುವಿನ ಯುನಿಟಿ ಸಭಾಂಗಣದಲ್ಲಿ ಬುಧವಾರ ನಡೆದ 5ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 7ಮಂದಿ ಬಡ ಹೆಣ್ಣು ಮಕ್ಕಳು ವೈವಾಹಿಕ ಜೀವನಕ್ಕೆ ಕಾಲಿಸಿರಿಸಿದರು.

ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ಸಯ್ಯಿದ್ ಮದನಿ ದರ್ಗಾ ಉಳ್ಳಾಲ ಇಲ್ಲಿನ ಖತೀಬರಾದ ಮುಹಮ್ಮದ್ ಶಮೀಮ್ ಸಖಾಫಿ ಅವರು ದುವಾ ನೆರವೇರಿಸಿದರು. ಬೋಳಂಗಡಿ ಹವ್ವಾ ಮಸ್ಜಿದ್ ಖತೀಬರಾದ ಸಯ್ಯದ್ ಯಾಹ್ಯಾ ತಂಗಳ್ ಜೋಡಿಗಳಿಗೆ ಸಂದೇಶ ನೀಡಿದರು.
ಮುಹಿಯಗಯುದ್ದೀನ್ ಜುಮಾ ಮಸ್ಜಿದ್ ಮೇಲಂಗಡಿ ಉಳ್ಳಾಲ ಇಲ್ಲಿನ ಖತೀಬರಾದ ಯೂಸುಫ್ ಮಿಸ್ಬಾಹಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್,.ಕ.ಜಿಲ್ಲಾ ವಕ್ಪ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಎಸ್.ಎಂ. ರಶೀದ್, ಉಳ್ಳಾಲ ಶ್ರೀ ಚೀರಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್, ದ.ಕ.ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಮುನೀರ್ ಬಾವ, ರಾಜ್ಯ ಅಲ್ಪಸಂಖ್ಯಾತಬ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್ ಕುಂಇಮೋನು, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎಸ್.ಮುಹಮ್ಮದ್ ಮಸೂದ್, ಬಿಜೆಪಿ ಮಂಗಳೂರು ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಎಸ್‍ಡಿಪಿಐ ಜಿಲ್ಲಾ ಅಧ್ಯಕ್ಷ ಹನೀಫ್ ಖಾನ್ ಕೊಡಾಜೆ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್‍ಶೆಟ್ಟಿ, ತೊಕ್ಕೊಟ್ಟುವಿನ ಯು.ಎಚ್. ಲಾಜೆಸ್ಟಿಕ್‍ನ ಯು.ಎಚ್. ಹಸೈನಾರ್, ಪೆÇಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ, ಸುಲ್ತಾನ್ ಗೋಲ್ಡ್‍ನ ಆಡಳಿತ ನಿರ್ದೇಶಕ ಟಿ.ಎಂ. ಅಬ್ದುಲ್ ರವೂಫ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‍ನ ನಿರ್ದೇಶಕ ರಫೀಕ್ ಮಾಸ್ಟರ್, ಎಂಐಟಿಎಸ್‍ನ ನಿರ್ದೇಶಕ ಅಸ್ಕಾನ್ ಶೇಖ್, ಉಳ್ಳಾಲ ನಗರಸಭಾ ಸದಸ್ಯ ಫಾರೂಕ್ ಉಳ್ಳಾಲ್, ಯು.ಎಚ್.ಮಹಮ್ಮದ್, ಯು.ಕೆ. ಮೋನು, ಮೂಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಭಾಗವಹಿಸಿದ್ದರು.
ನಸ್ರುತುಲ್ ಮಸಾಕಿನ್ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಮುಹಮ್ಮದ್ ತ್ವಾಹ, ಉಪಾಧ್ಯಕ್ಷ ಯು.ಎಸ್.ಹನೀಫ್, ಪ್ರಧಾನ ಕಾರ್ಯದರ್ಶಿ ಕೆ.ಎನ್.ಮಹಮ್ಮದ್, ಕೋಶಾ„ಕಾರಿ ಯು.ಎಂ.ಜಬ್ಬಾರ್, ಯು.ಹೆಚ್.ಸಿದ್ಧೀಖ್, ಯು. ಡಿ. ಇಬ್ರಾಹಿಂ, ಎನ್.ಕೆ. ಅಹಮ್ಮದ್, ಯು.ಎಂ. ರಹಮತ್ತುಲ್ಲಾ ಉಪಸ್ಥಿತರಿದ್ದರು.
ಟ್ರಸ್ಟಿನ ಸದಸ್ಯ ಕೆಎಂಕೆ ಮಂಜನಾಡಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಜತೆ ಕಾರ್ಯದರ್ಶಿ ಯು.ಪಿ ಹಮೀದ್ ವಂದಿಸಿದರು.


