Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಸಂಕೊಳಿಗೆ : ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಬೈಕ್‍ನಲ್ಲಿ ಬಂದ ಆಗಂತುಕರಿಬ್ಬರು ಸರ ಎಳೆದು ಪರಾರಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಸಂಕೊಳಿಗೆ ಬಳಿ ನಡೆದಿದ್ದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂಗನವಾಡಿ ಶಿಕ್ಷಕಿಯಾಗಿರುವ ಉಚ್ಚಿಲ ಸಂಕೊಳಿಗೆ ನಿವಾಸಿ ಪುಷ್ಪಲತಾ ಎಂಬವರ ಸರವನ್ನು ಸೆಳೆದು ಪರಾರಿಯಾಗಿದ್ದು, ಮನೆ ಕಡೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‍ನಲ್ಲಿ ಬಂದ ಆಗಂತುಕರು ಈ ಕೃತ್ಯವನ್ನು ನಡೆದಿದೆ. ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ: ಜಿಲ್ಲಾ ಪಂಚಾಯಿತಿಯ ವಿಕಲಚೇತನರ ನಿಧಿಯಿಂದ ಮಂಜೂರಾದ ತಲಪಾಡಿ ಗ್ರಾಮ ಪಂಚಾಯಿತಿನ ರಾಮನಗರ 1 ನೇ ಅಡ್ಡರಸ್ತೆಯ ಕಾಂಕ್ರೀಟಿಕರಣಕ್ಕೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ ಶಿಲಾನ್ಯಾಸಗೈದರು. ರಾಮನಗರ ಪ್ರದೇಶದಲ್ಲಿರುವ ಅಂಗವಿಕಲೆ ವಿಜಯಭಾರತಿ ಎಂಬವರಿಗೆ ರಸ್ತೆಯಿಲ್ಲದೆ ಹೋಗಿ ಬರಲು ಅಸಾಧ್ಯವಾಗುತಿತ್ತು. ಈ ಬಗ್ಗೆ ಅವರು ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ ಜಿ.ಪಂ ಅಧ್ಯಕ್ಷರ ಜತೆಗೆ ಸಮಾಲೋಚಿಸಿ ರೂ. 3 ಲಕ್ಷ ಅನುದಾನವನ್ನು ಮಂಜೂರು ಮಾಡಲಾಗಿದೆ. ತಲಪಾಡಿ ಪಂ. ವ್ಯಾಪ್ತಿಗಳಲ್ಲಿ ಬೇಧಭಾವವಿಲ್ಲದೆ ಸಂಸದರು, ಜಿಲ್ಲಾ ಪಂಚಾಯಿತಿ, ಪಂಚಾಯಿತಿ ಕಾರ್ಯ ನಿರ್ವಹಿಸುತ್ತಿದೆ . ಮುಂದೆ ತಲಪಾಡಿಯಿಂದ ದೇವಿಪುರಕ್ಕೆ ಹೋಗುವ ರಸ್ತೆಯ ಕಾಂಕ್ರೀಟಿಕರಣಕ್ಕೆ 3.25 ಕೋಟಿ ಹಣ ಮಂಜೂರಾಗಿದೆ. ಶೀಘ್ರದಲ್ಲಿ ಅದರ ಕಾಮಗಾರಿಯನ್ನು ಪೂರ್ತಿಗೊಳಿಸಿ ಜನರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದರು. ಈ ಸಂದರ್ಭ ತಲಪಾಡಿ ಗ್ರಾ.ಪಂ ಅಧ್ಯಕ್ಷ ಸುರೇಶ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಮಾಜಿ ಸದಸ್ಯ ವಿನಯ ನಾಯ್ಕ್, ತಲಪಾಡಿ ಪಂ. ಉಪಾಧ್ಯಕ್ಷೆ ಜಯಲಕ್ಷ್ಮೀ .ಟಿ, ಬಿಜೆಪಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ: ತಾಯಿ ಮತ್ತು ಮಗಳಿಗೆ ತೆಂಗಿನಕಾಯಿ ಕೀಳುವ ಯುವಕನೋರ್ವ ಹಲ್ಲೆ ನಡೆಸಿರುವ ಘಟನೆ ಸೋಮವಾರ ಸಂಜೆ ನಾರ್ಲ ಪಡೀಲು ಎಂಬಲ್ಲಿ ನಡೆದಿದೆ. ತಲಪಾಡಿ ನಾರ್ಲ ಪಡೀಲ್ ನಿವಾಸಿ ಮೈಕಲ್ ಹಲ್ಲೆ ನಡೆಸಿದ ಆರೋಪಿಯಾಗಿದ್ದು, ಆತನ ನೆರೆಮನೆಯ ನಿವಾಸಿಗಳಾದ ನೆಬಿಸಾ(62) ಮತ್ತು ಆಕೆಯ ಪುತ್ರಿ ಆಸ್ಮಾ(38) ಗಾಯಗೊಂಡು ಆಸ್ಪತ್ರೆಗೆ ದಾಖಲಾದವರು. ಘಟನೆಯ ವಿವರ : ಮೈಕಲ್ ತನ್ನ ನೆರೆಮನೆಯೊಬ್ಬರ ತೆಂಗಿನ ಮರದಿಂದ ತೆಂಗಿನ ಕಾಯಿ ಕೀಳುತ್ತಿದ್ದಾಗ ತೆಂಗಿನ ಗರಿ ತಾಗಿ ಕೇಬಲ್ ವಯರ್ ಕೆಳಗೆ ಬಿದ್ದಿತ್ತು. ಈ ವಿಚಾರದಲ್ಲಿ ಪಕ್ಕದ ಮನೆಯ ನೆಬಿಸಾ ಅವರು ಕೇಬಲನ್ನು ಮೇಲಕ್ಕೆ ಕಟ್ಟಿಕೊಡುವಂತೆ ಕೇಳಿದಾಗ ಅವ್ಯಾಚ ಶಬ್ದಗಳಿಂದ ನೆಬಿಸಾರನ್ನು ನಿಂದಿಸಿದ್ದು, ಈ ಸಂದರ್ಭದಲ್ಲಿ ನೆಬಿಸಾ ಅವರ ಮಗಳು ಆಸ್ಮಾ ಬಂದು ಯಾಕೆ ತಾಯಿಯನ್ನು ನಿಂದಿಸುತ್ತಿಯಾ ಎಂದು ಕೇಳಿದಾಗ ಕೈಯಲ್ಲಿದ್ದ ತೆಂಗಿನ ಕಾಯಿಯಿಂದ ಅಸ್ಮಾಳ ತಲೆಗೆ ಹೊಡೆದಿದ್ದು, ಪ್ರಜ್ಞÉ ತಪ್ಪಿ ಬಿದ್ದ ಆಸ್ಮಾಳ ಬಳಿ ನೆಬಿಸಾ ಬಂದಾಗ ಮೈಕಲ್ ಕಲ್ಲಿನಿಂದ ನೆಬಿಸಾ ಅವರ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಚ್ಚಿಲ: ಸೋಮೇಶ್ವರ ನ್ಯೂ ಉಚ್ಚಿಲದಲ್ಲಿರುವ ವೃಂದಾವನದಲ್ಲಿ ಕೋಟಿ ಚೆನ್ನಯರಿಗೆ `ಪನಿಯರ ಪರ್ವ ಸೇವೆ’ ಸೆ. 22ರಂದು ರಾತ್ರಿ 8.30ಕ್ಕೆ ನಡೆಯಲಿದೆ. ಪಡುಮಲೆಯ ಗೆಜ್ಜೆಗಿರಿ ನಂದನ ಬಿತ್ತಿಲ್‍ನಲ್ಲಿ ಶ್ರೀ ಜೀವನ್ ಗುರೂಜಿ ಅವರು ಇಟ್ಟ ದೃಶ್ಯಾಂಜನ ಪ್ರಶ್ನೆಯಲ್ಲಿ ಕಂಡು ಬಂದ ಹಿನ್ನಲೆಯಲ್ಲಿ ಕೋಟಿ ಚೆನ್ನಯರ ಹುಟ್ಟು 22-9-1556ರಂದು ಆಗಿದ್ದು, ಈ ಹಿನ್ನಲೆಯಲ್ಲಿ ಸ್ವರ್ಣ ಕೇದಗೆ ಕೋಟಿ-ಚೆನ್ನಯ ಪ್ರತಿಷ್ಠಾನ ನ್ಯೂ ಉಚ್ಚಿಲದಲ್ಲಿ ಪನಿಯಾರ ಪರ್ವ ಸೇವೆಯನ್ನು ಹಮ್ಮಿಕೊಂಡಿದೆ ಎಂದು ಪ್ರಕಟನೆ ತಿಳಿಸಿದೆ

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುತ್ತಾರು: ಸದಾ ಶಾಂತಿಯನ್ನೇ ಬಯಸುವ ಹಿಂದೂ ಬಾಂಧವರು ಮಕ್ಕಳನ್ನಾದರೂ ಹುಟ್ಟಿಸಿ ಎಂದು ಕರೆ ನೀಡಿದವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರಿಯ ಕಾರ್ಯಕಾರಿಣಿ ಸದಸ್ಯ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಕರೆ ನೀಡಿದ್ದಾರೆ. ಅವರು ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿ ವಿನಾಯಕ ಮಂದಿರದ ವಠಾರದಲ್ಲಿ ಭಾನುವಾರ ನಡೆದ ವಿಶ್ವ ಹಿಂದೂ ಪರಿಷತ್, ಮಾತೃಮಂಡಳಿ, ದುರ್ಗಾವಾಹಿನಿ ಉಳ್ಳಾಲ ಪ್ರಖಂಡ ಇದರ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷತ್‍ನ ಸುವರ್ಣ ವರ್ಷಾಚರಣೆಯ ಸಮಾರೋಪ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದರೂ, ಹಿಂದೂಗಳ ನಂಬಿಕೆ, ಶ್ರದ್ಧೆಗಳಿಗೆ ಅನ್ಯಾಯವಾಗುತ್ತಿದ್ದು, ಹಿಂದೂ ಸಂಸ್ಕøತಿ ನಮ್ಮ ಆಚಾರ ವಿಚಾರಗಳು ಮುಂದಿನ ಪೀಳಿಗೆಗೆ ಉಳಿಯ ಬೇಕಾದರೆ ಹಿಂದೂ ಸಮಾಜ ರಕ್ಷಣೆಗೆ ಸಂಕಲ್ಪ ತೊಡಲು ಸಿದ್ಧರಾಗಬೇಕು. ಜಾನುವಾರು, ಹಿಂದೂ ಹುಡುಗಿಯರು ಓಡುವಾಗ ವಿರೋಧಿಸುವ ಹಿಂದೂಗಗಳು ಕನಿಷ್ಟ ಪಕ್ಷ ಹೆಚ್ಚುಮಕ್ಕಳನ್ನಾದರೂ ಸೃಷ್ಟಿಸಿ. ಇದರಿಂದ ಕರಾವಳಿ ಜಿಲ್ಲೆಯಲ್ಲಿ ಮುಸ್ಲಿಮರ ಸಂಖ್ಯಾಬಲವನ್ನು ಕಡಿಮೆಗೊಳಿಸಬಹುದು. ಹುಟ್ಟಿದ ಮಕ್ಕಳ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಸುಪ್ರಿಯಾ ಆರೋಗ್ಯ ಸ್ಥಿತಿಯ ಮತ್ತು ಚಿಕಿತ್ಸೆಗೆ ದಾನಿಗಳ ಮೊರೆ ಕೇಳಿ ಉಳ್ಳಾಲ್ ನ್ಯೂಸ್.ಕಾಂ ಮೊದಲ ವರದಿ ಮಾಡಿತ್ತು. ಇದಕ್ಕೆ ಸ್ಪಂಧಿಸಿದ ನಮ್ಮ ಕುಂಬ್ಳೆ ವಾಟ್ಸ್ಯಾಪ್ ಗ್ರೂಪ್ ನ ಯುವಕರ ತಂಡ ವೆಬ್ ಸೈಟಿನಲ್ಲಿ ಪ್ರಕಟವಾದ ಭಾವಚಿತ್ರವನ್ನು ಗ್ರೂಪಿನ ಪ್ರೊಫೈಲ್ ಫೋಟೊ ಆಗಿ ಬಳಸಿಕೊಂಡು ವರದಿಯನ್ನು ಷೇರ್ ಮಾಡಿ ದಾನಿಗಳ ಗಮನ ಸೆಳೆದಿದ್ದರು. ಲಿವರಿನ ತೊಂದರೆಗೊಳಗಾದ ಕುತ್ತಾರು ಮುಂಡೋಳಿಯ  ಸುಪ್ರಿಯಾಳ ಚಿಕಿತ್ಸೆ ವೆಚ್ಚಕ್ಕೆ  ಒಂದು ತಿಂಗಳ ಕಾಲ ಗುಂಪಿಗೆ ಹಲವರನ್ನು ಸೇರಿಸಿಕೊಂಡು ಅವರಿಂದ ಪಡಕೊಂಡ ಹಣವನ್ನು ಒಟ್ಟುಗೂಡಿಸಿ ಇದೀಗ ರೂ. 1,33,000 ಹಣವನ್ನು ಸಂಗ್ರಹಿಸಿ ಸುಪ್ರಿಯಾಳಿಗೆ ಹಸ್ತಾಂತರಿಸಿದ್ದಾರೆ. ಈ ಹಿಂದೆಯೂ ` ಸೈಕಲಿನಿಂದ ಬಿದ್ದು ಹಾಸಿಗೆ ಹಿಡಿದ ಬಾಲಕ’ ಎಂಬ ಶೀರ್ಷಿಕೆಯಡಿ ಸುಭಾಷನಗರದ ಪುನೀತ್ ಮಾನವೀಯ ವರದಿಗೂ ದಾನಿಗಳು ಸ್ಪಂಧಿಸಿದ್ದಾರೆ. ನಮ್ಮ ಕುಂಬಳೆ ವಾಟ್ಸ್ಯಾಪ್ ಗ್ರೂಪ್ ಅನ್ನುವ ಪ್ರಮುಖ ಗ್ರೂಪಿನ ಜತೆಗೆ ವಾಟ್ಸ್ಯಾಪ್  ಗ್ರೂಪ್  ಮೆಂಬರ್ಸ್, ಗಟ್ಟಿ ಬ್ರದರ್ಸ್ ಗ್ರೂಪ್ ಮೆಂಬರ್ಸ್, ಕೂಡ್ಲು ಗೋಪಾಲಕೃಷ್ಣ ಸ್ಕೂಲ್…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಲ್ಲಾಪು: ಕಾರೊಂದು ಡಿವೈಡರ್‍ಗೆ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕಲ್ಲಾಪು ಬಳಿ ಭಾನುವಾರ ನಡೆದಿದ್ದು ಗಂಭೀರ ಗಾಯಗೊಂಡವರನ್ನು ಕೋಟೆಕಾರು ನಿವಾಸಿ ಅಶೋಕ್ (54)ಹಾಗೂ ಗೀತಾ(52) ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಮಂಗಳೂರು ಕಡೆ ಪ್ರಯಾಣಿಸುತ್ತಿದ್ದಾಗ ಕಲ್ಲಾಪು ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‍ಗೆ ಡಿಕ್ಕಿ ಹೊಡೆದಿದ್ದು ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ಇಬ್ಬರು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಅಶೋಕ್ ನೀಡಿದ ದೂರಿನ ಮೇರೆಗೆ ಕಾರು ಚಾಲಕ ವಿಜೇತ್‍ನ ವಿರುದ್ಧ ಪ್ರಕರಣ ದಾಖಲಾಗಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ : ಬೈಕ್‍ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ಗೆ ಸವಾರರಿಬ್ಬರು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟಿನಲ್ಲಿ ಭಾನುವಾರ ನಡೆದಿದ್ದು ಗಂಭೀರ ಗಾಯಗೊಂಡವರನ್ನು ಕೊಲ್ಯ ನಿವಾಸಿ ಸಚಿನ್ ಮತ್ತು ವಿವೇಕಾನಂದ ಎಂದು ಗುರುತಿಸಲಾಗಿದೆ. ವಿವೇಕಾನಂದ ಮಂಗಳೂರು ಕಡೆಯಿಂದ ಕೊಲ್ಯಕ್ಕೆ ಹೋಗಲು ಸಚಿನ್‍ರವರ ಬೈಕ್‍ನಲ್ಲಿ ಸಂಚರಿಸುತ್ತಿದ್ದರು. ಬೈಕ್ ತೊಕ್ಕೊಟ್ಟು ತಲುಪುತ್ತಿದ್ದಂತೆಯೇ ಹಿಂದಿನಿಂದ ಬಂದ ಬಸ್ ಬೈಕ್‍ಗೆ ಡಿಕ್ಕಿ ಹೊಡೆದಿದ್ದು ಹೊಡೆದ ರಭಸಕ್ಕೆ ಬೈಕ್‍ನಲ್ಲಿದ್ದ ಇಬ್ಬರು ಸವಾರರು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣಕ್ಕೆ ಸಂಬಂ„ಸಿದಂತೆ ಬಸ್ ಚಾಲಕನ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು : ರೋಗಿಗಳಿಗೆ ಸೂಕ್ತ ಸಮಯದಲ್ಲಿ ರಕ್ತ ದೊರಕುವ ನಿಟ್ಟಿನಲ್ಲಿ ದೇಶದಲ್ಲಿ ಪ್ರಥಮ ಬಾರಿಗೆ` ರಕ್ತ ಸಂಜೀವಿನಿ ವೆಬ್ ಸೈಟ್’ ಪ್ರಾರಂಭಿಸಿದ್ದು, ಈ ವೈಬ್ ಸೈಟ್ ಮೂಲಕ ಅಗತ್ಯ ಇರುವ ರಕ್ತ ಯಾವ ಬ್ಲಡ್ ಬ್ಯಾಂಕ್‍ನಲ್ಲಿ ಇದೆ ಎನ್ನುವ ಮಾಹಿತಿ ಸಿಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಬಿಪ್ರಾಯಪಟ್ಟರು. ಅವರು ತೊಕ್ಕೊಟ್ಟು ಗಾಂಧಿನಗರದ ಕುದ್ಮುಲ್ ರಂಗ ರಾವ್ ಸಮುದಾಯ ಭವನದಲ್ಲಿ ಉಳ್ಳಾಲ ನಗರ ಸಭೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಳ್ಳಾಲ ನಗರ ಪ್ರಾಥಮಿಕ ಆರೋಗ್ಯಕೇಂದ್ರ, ಪ್ರಾದೇಶಿಕ ರಕ್ತ ಪೂರಣಾ ಕೇಂದ್ರ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ, ಎಂವಿ. ಶೆಟ್ಟಿ ಮೆಮೋರಿಯಲ್ ಟಸ್ಟ್ ಇವರ ಸಹಭಾಗಿತ್ವದಲ್ಲಿ ಭಾನುವಾರ ನಡೆದ ಸ್ವಯಂ ಪ್ರೇರಿತ ರಕ್ತದಾನ ಬೃಹತ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು . ಆರೋಗ್ಯ ಇಲಾಖೆಯು ಪ್ರತೀ ಜಿಲ್ಲಾ ಕೇಂದ್ರದಲ್ಲಿ ರಕ್ತದಾನ ಸಂಗ್ರಹ ಮತ್ತು ಪ್ರತೀ ತಾಲೂಕು ಕೇಂದ್ರದಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪಿಸಲಿದ್ದು,…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ : ಗ್ರಾಮೀಣ ಪ್ರದೇಶಕ್ಕೆ ವೈದ್ಯಕೀಯ ಸವಲತ್ತು ನೀಡುವುದರೊಂದಿಗೆ, ಜನರಲ್ಲಿ ವೈದ್ಯಕೀಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಯೋಜನೆಯನ್ನು ರೂಪಿಸಿ ಕಾರ್ಯಗತಗೊಳಿಸುತ್ತಿದ್ದು, ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದು ದೇರಳಕಟ್ಟೆ ಕಣಚೂರು ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್ ಇದರ ಅಧ್ಯಕ್ಷ ಯು.ಕಣಚೂರು ಮೋನು ತಿಳಿಸಿದರು. ದೇರಳಕಟ್ಟೆ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಕುತ್ತಾರು ಬಟ್ಟೆದಡಿ ಜೈ ಹನುಮಾನ್ ಕ್ರೀಡಾ ಮಂಡಳಿ ಇದರ ಆಶ್ರಯದಲ್ಲಿ ಮುನ್ನೂರು ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ಉಚಿತ ವೈದ್ಯಕೀಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಅಧ್ಯಕ್ಷತೆಯನ್ನು ಬಟ್ಟೆದಡಿ ಶ್ರೀ ಜೈ ಹನುಮಾನ್ ಕ್ರೀಡಾ ಮಂಡಳಿ ಇದರ ಅಧ್ಯಕ್ಷ ಚಂದ್ರಹಾಸ ಡಿ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಆಡಳಿತ ವೈದ್ಯಾ„ಕಾರಿ ಡಾ. ರೋಹನ್, ಮುನ್ನೂರು ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಾರದಾ, ಬಟ್ಟೆದಡಿ ಶ್ರೀ ಜೈ ಹನುಮಾನ್…

Read More