ಉಳ್ಳಾಲ್‍ನ್ಯೂಸ್ ನೆಟವರ್ಕ್
ಉಳ್ಳಾಲ: ಧಾರ್ಮಿಕ ದತ್ತಿ ಇಲಾಖೆಯಿಂದ ವಾರ್ಷಿಕವಾಗಿ 12 ಕೋಟಿ ರೂ. ಅನುದಾನ ದೇವಸ್ಥಾನ, ದೈವಸ್ಥಾನಗಳಿಗೆ ನೀಡಲಾಗುತ್ತಿದ್ದು, ಖಾಸಗಿ ಅಧೀನದ ಇನ್ನಷ್ಟು ದೇವಸ್ಥಾನಗಳಿಗೂ ಅನುದಾನ ನೀಡಲು ಪ್ರಯತ್ನಿಸುವುದಾಗಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಹೇಳಿದ್ದಾರೆ.
ಅವರು ಕಿನ್ಯ ಬೆಳರಿಂಗೆಯ ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಭಂಡಾರಮನೆ ಇದರ ವಾರ್ಷಿಕ ನೇಮೋತ್ಸವದ ಅಂಗವಾಗಿ ಇತ್ತೀಚೆಗೆ ನಡೆದ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿ ಪ್ರಸಕ್ತ ವರ್ಷ ರೂ. 2 ಕೋಟಿ ವಿನಿಯೋಗಿಸಲಾಗಿದೆ ಎಂದ ಅವರು ಪ್ರಸಕ್ತ ಸಾಲಿನಲ್ಲಿ ಇನ್ನಷ್ಟು ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರದ ಖಾಸಗೀ ಅಧೀನದ ದೇವಸ್ಥಾನಗಳಿಗೂ ಅನುದಾನ ನೀಡುವಲ್ಲಿ ಪ್ರಯತ್ನಿಸುತ್ತೇನೆ ಎಂದರು.
ಶ್ರೀ ಮಲರಾಯ ಧೂಮಾವತಿ ಬಂಟ ದೈವಸ್ಥಾನದ ಅಂತಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜನಪದ ವಿದ್ವಾಂಸ ನೀಲಯ್ಯ ಎಂ.ಅಗರಿ ದೈವಾರಾಧನೆ ಚಿಂತನೆಗಳ ಕುರಿತು ಮಾತನಾಡಿದರು. ಕ್ಷೇತ್ರದ ಗೌರವಾದ್ಯಕ್ಷ ಕೆ.ಟಿ.ಸುವರ್ಣ, ಆಡಳಿತ ಮೊಕ್ತೇಸರ ಬಾಬು ಶ್ರೀ ಶಾಸ್ತಾ ಕಿನ್ಯಾ, ಮೊಕ್ತೇಸರರಾದ ಎ.ಜೆ.ಶೇಖರ್, ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣಪ್ಪ ಗಟ್ಟಿ ಉಪಸ್ಥಿತರಿದ್ದರು.
ಪ್ರವೀಣ್.ಎಸ್.ಕುಂಪಲ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಕಿನ್ಯಾ ವಂದಿಸಿದರು.





