ಹರೇಕಳ: ದೊಡ್ಡ ಗಾತ್ರದ ಕಾಡುಕೋಣವೊಂದು ಹರೇಕಳ ಶಾಲೆ ಬಳಿ ತಡರಾತ್ರಿ ವೇಳೆ ಪತ್ತೆಯಾಗಿದ್ದು , ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ . ಈ ಕುರಿತು ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ.
7.5 ಅಡಿ ಎತ್ತರದ ಕಾಡುಕೋಣ ಅದಾಗಿದ್ದು, ಹರೇಕಳ ಶಾಲಾ ಸಮೀಪ ಐದು ಮಂದಿ ಸ್ಥಳೀಯರು ನಿಂತಿದ್ದಾಗ ಏಕಾಏಕಿ ಬೃಹತ್ ಗಾತ್ರದ ಕಾಡುಕೋಣ ಪ್ರತ್ಯಕ್ಷವಾಗಿದೆ. ತಕ್ಷಣವೇ ಕೋಣವನ್ನು ಕಂಡ ಸಾರ್ವಜನಿಕರು ಸ್ಥಳದಿಂದ ಪರಾರಿಯಾಗಿದ್ದಾರೆ . ಕಾಡುಕೋಣ ಇರುವುದನ್ನು ಕಾರಿನಲ್ಲಿ ತೆರಳುತ್ತಿದ್ದ ತಂಡವೊಂದು ಮೊಬೈಲ್ ಮುಖೇನ ದೃಶ್ಯ ಸೆರೆ ಹಿಡಿದಿದೆ. ಈ ಬಗ್ಗೆ ಅರಣ್ಯ ಇಲಾಖೆ ಯ ಆರ್ ಎಫ್ ಓ ಅವರಿಗೆ ಮಾಹಿತಿ ನೀಡಲಾಗಿದೆ. ಅದರಂತೆ ಅರಣ್ಯ ಇಲಾಖೆ ಅಧಿಕಾರಿ ಮೆಹಬೂಬ್ ನೇತೃತ್ವದ ಮೂವರ ತಂಡ ಕಾರ್ಯಾಚರಣೆಗೆ ತಡರಾತ್ರಿ ವೇಳೆ ಇಳಿದಿದ್ದಾರೆ. ಸ್ಥಳೀಯವಾಗಿ ಕಾಡುಪ್ರಾಣಿಗಳಾದ ಜಿಂಕೆಯು ಇದೆ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು , ನವಿಲುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದೆ . ಭೂಮಿಯನ್ನು ಅವೈಜ್ಞಾನಿಕವಾಗಿ ಅಗೆಯುವ ಕಾಯಕದಿಂದ ಕಾಡುಪ್ರಾಣಿಗಳು ಕಾಡುಗಳಿಲ್ಲದೆ ನಾಡು ಸೇರುವಂತಾಗಿದೆ . ತತಕ್ಷಣದಿಂದ ಬೇಕಾಬಿಟ್ಟಿ ಭೂಮಿಯನ್ನು ಅಗೆಯುವ ಕಾಯಕದ ವಿರುದ್ಧ ರಾಜ್ಯ ಸರಕಾರ ಕಠಿಣ ಕಾಯಿದೆ ಅಥವಾ ಕೇರಳದಲ್ಲಿ ಇರುವಂತಹ ವೆಟ್ ಲ್ಯಾಂಡ್ ಕಾಯಿದೆಯನ್ನು ಜಾರಿಗೊಳಿಸಬೇಕು ಅನ್ನುವ ಆಗ್ರಹ ಸ್ಥಳೀಯರಿಂದ ಕೇಳಿಬಂದಿದೆ



