UN NETWORKS ಉಳ್ಳಾಲ: ಬೋಳಿಯಾರು ಬಿಜೆಪಿ ಸಭೆಯಲ್ಲಿ ಹನೀಫ್ ನಿಝಾಮಿಯವರು ಮಂಜನಾಡಿ ಗ್ರಾ.ಪಂ ಅಧ್ಯಕ್ಷರನ್ನು ಹೀನಾಯವಾಗಿ ನಿಂದಿಸಿರುವುದು ಖಂಡನೀಯ, ವಾರ್ಡಿಗೆ ಬಿಜೆಪಿಯವರು ಕೇವಲ 30,000 ರೂ. ನೀರು ನೀಡಿದ್ದರೆ, ಸಚಿವರು ಕೋಟ್ಯಂತರ ಅನುದಾನವನ್ನು ಒದಗಿಸಿದ್ದಾರೆ ಎಂದು ಅಸೈ ಮದಕ ನಿವಾಸಿ ಅಬೂಬಕರ್ ಎಂಬವರು ಹೇಳಿದ್ದಾರೆ. ಹನೀಫ್ ನಿಝಾಮಿ ನಡೆ ವಿರೋಧಿಸಿ ಅಸೈ ಮದಕ ನಾಗರಿಕರು ಪ್ರತಿಕ್ರಿಯಿಸಿ, ಕಾಂಗ್ರೆಸ್ ನ ಸಚಿವರು ಐದು ವರ್ಷದ ಅವಧಿಯಲ್ಲಿ ಅಸೈಗೋಳಿ 5 ಲಕ್ಷ ರೂ, ಬೊಳ್ಯ ರಸ್ತೆ ರೂ. 5ಲಕ್ಷ, ಬಲ್ಪ ಗೋಳಿ 13 ಲಕ್ಷ ಸೇರಿದಂತೆ ಕೋಟಿಗೂ ಅಧಿಕ ಅನುದಾನ ಒದಗಿಸಿದ್ದು, ವಾರ್ಡು ಅಭಿವೃದ್ಧಿಯಲ್ಲಿ ಮುಂದಿದೆ. ಆದರೆ ಅಸೈ ಮದಕ ವಾರ್ಡಿನ ಸದಸ್ಯ ಮಹಮ್ಮದ್ ಅಸೈ ಅವರನ್ನು ನಿಂದಿಸಿ, ಕುಡಿಯುವ ನೀರು ಮತ್ತು ಬೀದಿ ದೀಪಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನಿಝಾಮಿ ನಡೆ ಸರಿಯಲ್ಲ. ಅಧಿಕಾರಿಗಳು ಮತ್ತು ನಿಝಾಮಿ ವಾರ್ಡಿಗೆ ಬಂದು ದಾರಿದೀಪಗಳ, ಕುಡಿಯುವ ನೀರಿನ ಯೋಜನೆಗಳನ್ನು ಪರಿಶೀಲಿಸಿ ಮತ್ತೆ ಮಾತನಾಡಲಿ ಎಂದು ಆಗ್ರಹಿಸಿರುವ…
Author: UllalaVani
UN NETWORKS ಗ್ರಾಮಚಾವಡಿ: ಕೋಟಿಪದವು ಶ್ರೀ ರಾಮ ಮಂದಿರ ಮತ್ತು ದಕ್ಷ ಯುವ ಬಳಗ ಗ್ರಾಮಚಾವಡಿ ಇದರ ವತಿಯಿಂದ ಕೋಟಿಪದವು ಶ್ರೀ ರಾಮ ಮಂದಿರ ವಠಾರದಲ್ಲಿ ವನಮಹೊತ್ಸವ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಸಂಘದ ಗೌರವ ಸಲಹೆಗಾರರಾದ ನಾರಾಯಣ ಟೈಲರ್ ,ನಾಗೇಶ್ ಗಟ್ಟಿ, ನವೀನ್ ಕೊಣಾಜೆ, ಸಂಘದ ಅಧ್ಯಕ್ಷರಾದ ನವೀನ್ ಆರ್ಚಾಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
UN NETWORKS ದೇರಳಕಟ್ಟೆ : ದೇರಳಕಟ್ಟೆ ಜಂಕ್ಷನ್ನಿನ ರಸ್ತೆಬದಿಯಲ್ಲಿದ್ದ ಬೀದಿ ಬದಿ ವ್ಯಾಪಾರಸ್ಥರ ಮತ್ತು ಗೂಡಂಗಡಿಗಳ ತೆರವು ಕಾರ್ಯಾಚರಣೆ ಬೆಳ್ಮ ಗ್ರಾಮ ಪಂಚಾಯತ್ ವತಿಯಿಂದ ಶುಕ್ರವಾರ ನಡೆಯಿತು. ಬೆಳ್ಮ ಪಂಚಾಯತ್ ಗೆ ಒಳಪಡುವ ದೇರಳಕಟ್ಟೆ ಜಂಕ್ಷನ್ನಿನ ರಸ್ತೆ ಬದಿಗಳಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಗೂಡಂಗಡಿಗಳ ಮತ್ತು ಬೀದಿ ಬದಿ ವ್ಯಾಪಾರಿಗಳನ್ನು ಪಂಚಾಯತ್ ಆಡಳಿತ ಮುನ್ಸೂಚನೆ ನೀಡಿ ತೆರವುಗೊಳಿಸಿದೆ. ಅಂಗಡಿಗಳ ಕಾರ್ಯಾಚರಣೆಯಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗುತಿತ್ತು. ಇದರಿಂದ ಸಾರ್ವಜನಿಕರ ದೂರುಗಳು ಬಂದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಪರಿಸರವನ್ನು ಸ್ವಚ್ಛ, ಸುಂದರವಾಗಿ ಮಾಡಬೇಕು ಅನ್ನುವ ಉದ್ದೇಶದಿಂದ 15 ಬೀದಿ ಬದಿಯ ವ್ಯಾಪಾರಸ್ಥರ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ರಸ್ತೆ ಬದಿಯಲ್ಲಿ ವಾಹನಗಳು ನಿಲ್ಲಲ್ಲು ಅಸಾಧ್ಯವಾಗುತಿತ್ತು. ಅದರಂತೆ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅವರಾಗಿಯೇ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಗ್ರಾಮಸ್ಥರ ಸಹಕಾರದಿಂದ ಯಶಸ್ವಿ ಕಾರ್ಯಾಚರಣೆ ನಡೆದಿದೆ ಎಂದು ಬೆಳ್ಮ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಬ್ದುಲ್ ಸತ್ತಾರ್ ತಿಳಿಸಿದರು. ಗ್ರಾ.ಪಂ ಸದಸ್ಯೆ ಕಬೀರ್. ಡಿ, ಯೂಸುಫ್ ಬಾವ, ಅಕ್ಸಾ ಉಸ್ಮಾನ್, ಸಿಬ್ಬಂದಿ…
UN NETWORKS ಕಲ್ಲಾಪು: ಚಾಲಕನ ನಿಯಂತ್ರಣ ತಪ್ಪಿದ ಲಾರಿ ಕಂದಕಕ್ಕೆ ಉರುಳಿದ ಘಟನೆ ರಾ.ಹೆ.66ರ ಕಲ್ಲಾಪು ಬಳಿ ಶುಕ್ರವಾರ ಸಂಭವಿಸಿದೆ. ಕೇರಳ ಕಡೆಯಿಂದ ಮಂಗಳೂರು ಕಡೆಗೆ ಸರಕು ಸಾಗಿಸುವ ಲಾರಿ ಕಲ್ಲಾಪು ಸಮೀಪ ಚಾಲಕನ ನಿಯಂತ್ರಣ ತಪ್ಪಿ ಉರುಳಿದೆ. ಘಟನೆಯಲ್ಲಿ ಲಾರಿ ಚಾಲಕ ಮತ್ತು ಕ್ಲೀನರ್ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.
UN NETWORKS ಸೋಮೇಶ್ವರ: ಗ್ರಾಮದಲ್ಲಿ ಆಧಾರ್ ಕಾರ್ಡು ಮಾಡುವ ಕೇಂದ್ರವಿಲ್ಲದೇ ಜನರು ಆಧಾರ್ ಮತ್ತು ರೇಷನ್ ಕಾರ್ಡುಗಳಿಗಾಗಿ ಪರಾದಾಡುವಂತಾಗಿದೆ. ಬೇರೆ ಗ್ರಾಮದಲ್ಲಿರುವ ಆಧಾರ್ ಕೇಂದ್ರಗಳಲ್ಲಿ ರೂ.500 ಪಡೆಯುತ್ತಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಈ ಕುರಿತು ಹಣ ಪಡೆದು ಆಧಾರ್ ನೋಂದಿಸುವವರ ವಿರುದ್ಧ ಕ್ರಮಕೈಗೊಳ್ಳಬೇಕಿದೆ ಎಂದು ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರುಸಭಾಭವನದಲ್ಲಿ ಗುರುವಾರ ನಡೆದ ಸೋಮೇಶ್ವರ ಗ್ರಾಮ ಪಂಚಾಯತ್ ಇದರ 2017-18ನೇ ಸಾಲಿನ 1ನೇ ಹಂತದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಸಿದ ಸೋಮೇಶ್ವರ ಗ್ರಾ.ಪಂ ಅಧ್ಯಕ್ಷ ರಾಜೇಶ್ ಉಚ್ಚಿಲ್ ಸಮಸ್ಯೆಯ ಬಗ್ಗೆ ಈಗಾಗಲೇ ಮನಗಂಡು ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದರು. ಪಿಲಾರು ಸಮೀಪ ನೀರು ಹೋಗುವ ದಾರಿಯಲ್ಲಿ ಮನೆ ನಿರ್ಮಿಸಿದ್ದು, ಇದರ ಕುರಿತು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಿದೆ. . ರಸ್ತೆ ಬದಿಗಳಲ್ಲಿ ನೀರು ಇಕ್ಕಟ್ಟಾಗುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿವೆ. ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ನಡೆಯುತ್ತಿಲ್ಲ ಎಂಬ ಸಮಸ್ಯೆಗೆ ಉತ್ತರಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ಘನತ್ಯಾಜ್ಯ ಘಟಕಕ್ಕೆ ಜಾಗವನ್ನು…
UN NETWORKS ಉಳ್ಳಾಲ : ಅನುಭವಗಳು ಈಗಿನ ವ್ಯವಸ್ಥೆಗೆ ಸರಿ ಹೊಂದುವುದಿಲ್ಲವೆಂದು ಅರಿತಾಗ, ಈಗಿನ ವಿದ್ಯಾರ್ಥಿಗಳಿಗೆ ಬೇಕಾದ ಜ್ಞಾನವನ್ನು ವೃದ್ಧಿಸಲು ಕಾರ್ಯಗಾರಗಳು ಸಹಕಾರಿಯಾಗುತ್ತದೆ. ಈ ಮೂಲಕ ಬದುಕಿಗೆ ವ್ಯವಸ್ಥೆಯನ್ನು ಕಲ್ಪಿಸುತ್ತದೆ ಎಂದು ಉಳ್ಳಾಲ ನಗರಸಭೆ ಪೌರಾಯುಕ್ತೆ ವಾಣಿ.ವಿ.ಆಳ್ವ ಅಭಿಪ್ರಾಯಪಟ್ಟರು. ಅವರು ದಕ್ಷಿಣ ಕನ್ನಡ ಭೌತಶಾಸ್ತ್ರ ಉಪನ್ಯಾಸಕರ ಸಂಘ ಇವರ ವತಿಯಿಂದ ಉಳ್ಳಾಲದ ಕೆ.ಪಾಂಡ್ಯರಾಜ ಬಳ್ಳಾಲ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಭೌತಶಾಸ್ತ್ರ ಉಪನ್ಯಾಸಕರಿಗೆ ನಡೆದ ಒಂದು ದಿನದ ಕಾರ್ಯಗಾರದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸರಕಾರಿ ಪದವಿಪೂರ್ವ ಕಾಲೇಜುಗಳಿಗೆ ಉಚಿತ ಪ್ರಾಯೋಗಿಕ ಉಪಕರಣ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕರ್ತವ್ಯದ ಒತ್ತಡಗಳ ನಡುವೆ ಜೀವನಕ್ಕೆ ಅರ್ಥವಿರುವುದಿಲ್ಲ. ಈ ಸಮಯದಲ್ಲಿ ಕಾರ್ಯಗಾರಗಳಂತಹ ವಿಶೇಷ ತರಬೇತಿಗಳು ಮನಸ್ಸಿಗೆ ಹಿತ ನೀಡುವುದರಿಂದ ಒತ್ತಡಗಳಿಂದ ಹೊರಬರಲು ಸಾಧ್ಯವಾಗುತ್ತದೆ. ಕಾರ್ಯಗಾರಗಳು ಅಧ್ಯಾಪಕ ವೃಂದಕ್ಕೆ ಹೊಸ ಅನುಭವಗಳನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳಿಗೆ ಹೊಸತನವನ್ನು ಕಲಿಸಲು ಸಾಧ್ಯವಾಗುವುದು ಎಂದರು. ಕೆ.ಪಾಂಡ್ಯರಾಜ ಬಳ್ಳಾಲ್ ಚ್ಯಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥೆ ಡಾ.ಪ್ರಿಯಾ ಬಳ್ಳಾಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಪಾಂಡ್ಯರಾಜ…
UN NETWORKS ಮಂಜೇಶ್ವರ: ಎಸ್ಸೆಸ್ಸೆಫ್ ಮಂಜೇಶ್ವರ ಡಿವಿಷನ್ ಸಾಹಿತ್ಯೊತ್ಸವ್ ಆ.12,13 ಶನಿ ಮತ್ತು ಆದಿತ್ಯವಾರಗಳಲ್ಲಿ ಮೀಯ್ಯಪ್ಪದವು ಶಾಲಾ ವಠಾರದಲ್ಲಿ ನಡೆಯಲಿದೆ. ಶನಿವಾರ ಸಂಜೆ 3 ಗಂಟೆಗೆ ಸ್ವಾಗತ ಕಮಿಟಿ ಚೆಯರ್‍ಮಾನ್ ಹಾರಿಸ್ ಹನೀಫಿ ಯವರ ನೇತ್ರತ್ವದಲ್ಲಿ ದ್ವಜಾರೋಹಣ ನಡೆಯಲಿದೆ. ಸಂಜೆ 7 ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಬಟ್ಟಿಪ್ಪದವು ಮುಹಮ್ಮದ್ ಮುಸ್ಲಿಯಾರ್ ಪ್ರಾರ್ಥನೆ ನಡೆಸುವರು. ಪೋಗ್ರಾಂ ಸಮಿತಿ ಚೆಯರ್‍ಮಾನ್ ಮಜೀದ್ ಸಅದಿ ಸುಬ್ಬಯಿಕಟ್ಟೆಯವರ ಅಧ್ಯಕ್ಷತೆಯಲ್ಲಿ ಪ್ರಮುಖ ಕನ್ನಡ ಸಾಹಿತಿ ಪಿ ಎನ್ ಮೂಡಿತ್ತಾಯ ಕಾರ್ಯಕ್ರಮವನ್ನು ಉಧ್ಘಾಟಿಸುವರು. ಎಸ್ ವೈ ಎಸ್ ಉಪ್ಪಳ ಝೋನ್ ಅಧ್ಯಕ್ಷ ಸಿದ್ದೀಖ್ ಸಖಾಫಿ ಆವಳ ಸಂದೇಶ ಭಾಷಣ ಮಾಡುವರು. ಅಬ್ದುಲ್ ಹಮೀದ್ ಸಖಾಫಿ ಮೇರ್ಕಳ, ಮುಹಮ್ಮದ್ ಸಖಾಫಿ ತೋಕೆ, ಅಬ್ದುರ್ರಹ್ಮಾನ್ ಸಖಾಫಿ ಚಿಪ್ಪಾರ್, ಬಶೀರ್ ಮದನಿ, ಪಾರೂಖ್ ಪೊಸೋಟ್, ಅಶ್ರಫ್ ಸಖಾಫಿ ಉರ್ಣಿ, ನಿಯಾಝ್ ಸಖಾಫಿ ಆನೆಕಲ್ ಉಪಸ್ಥಿತರಿರುವರು. ಬಳಿಕ ಹತ್ತು ಸೆಕ್ಟರ್ ಗಳಿಂದ ಆಗಮಿಸಿದ ಸುಮಾರು 600 ರಷ್ಟು ವಿದ್ಯಾರ್ಥಿಗಳು 100ರಷ್ಟು ವಿಭಾಗಗಳಲ್ಲಾಗಿ ಮನೋಹರವಾದ ಕಲಾ…
UN NETWORKS ತೊಕ್ಕೊಟ್ಟು: ತೊಕ್ಕೊಟ್ಟು ಭಟ್ನಗರದ ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 57ನೇ ವರ್ಷದ ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವವು ಆ.14 ರಿಂದ 15ರ ವರೆಗೆ ನಡೆಯಲಿದೆ. ಆ.14 ರಂದು ಸೋಮವಾರ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ ತಲಪಾಡಿಯ ಪ್ರಧಾನ ಅರ್ಚಕರಾದ ಗಣೇಶ್ ಭಟ್ ಇವರಿಂದ ಶ್ರೀ ಕ್ರಷ್ಣ ಬೆಳ್ಳಿ ಪ್ರತಿಮೆ ಪ್ರತಿಷ್ಠೆ ನಡೆಯಲಿದೆ.ಆ.15ರಂದು ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ಶ್ರೀ ವಿಠೋಭ ರುಕ್ಮಾಯಿ ಮಂದಿರ ತೊಕ್ಕೊಟ್ಟು ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 10ಗಂಟೆಯಿಂದ ತೊಕ್ಕೊಟ್ಟು ಅಂಬೇಡ್ಕರ್ ಮೈದಾನದಲ್ಲಿ “ಮಡಕೆ ಒಡೆಯುವ ಸ್ಪರ್ಧೆ” ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಸಂಜೆ 7 ಗಂಟೆಗೆ ಅಡಿಕೆ ಏರುವ ಸ್ಪರ್ಧೆ ನಡೆಯಲಿದೆ. ನಾಟ್ಯ ನಿಲಯ ಶ್ರೀ ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯ ವೃಂದದವರಿಂದ `ನಾಟ್ಯೋಲ್ಲಾಸಂ’ ನೃತ್ಯ ವೈಭವ ಸಂಜೆ 6ರಿಂದ ನಡೆಯಲಿದೆ. 7.30ಕ್ಕೆ ಶ್ರೀ ಜೈ ವೀರ ಮಾರುತಿ ವ್ಯಾಯಾಮ…
UN NETWORKS ಕೊಣಾಜೆ: ಬಿಜೆಪಿ ಮುಸ್ಲಿಂ ಧಾರ್ಮಿಕ ಮುಖಂಡರುಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಉಸ್ತಾದರೋರ್ವರಿಗೆ ಎರಡು ವಿದೇಶಿ ಕರೆಗಳ ಮೂಲಕ ಜೀವಬೆದರಿಕೆಯೊಡ್ಡಿರುವ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಎರಡು ಅಪರಿಚಿತ ಧ್ವನಿ ಹಾಗೂ ನಾಲ್ಕು ಸಂಖ್ಯೆಯುಳ್ಳ ವಿದೇಶಿ ಕರೆ ಮೂಲಕ ಬೆಳ್ಮ ಕಲ್ಪಾದೆ ಮತ್ತು ತಲಪಾಡಿ ಮದರಸ ಶಿಕ್ಷಕನಾಗಿರುವ ಎ.ಬಿ ಹನೀಫ್ ನಿಝಾಮಿ ಎಂಬವರಿಗೆ ಜೀವಬೆದರಿಕೆ ಒಡ್ಡಿರುವ ಎರಡು ದೂರವಾಣಿ ಕರೆಗಳು ಬಂದಿವೆ. ನಾಲ್ಕು ಸಂಖ್ಯೆಯುಳ್ಳ ನಂಬರಿನಲ್ಲಿ ಕರೆ ಮಾಡಿರುವ ಅಪರಿಚಿತರು ಉಸ್ತಾದರನ್ನು ಅವಾಚ್ಯವಾಗಿ ನಿಂದಿಸಿ ಜೀವಬೆದರಿಕೆಯನ್ನು ಒಡ್ಡಿದ್ದಾರೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಬಿಜೆಪಿ ಏರ್ಪಡಿಸಿದ ಸಭೆಯಲ್ಲಿ ಹಲವು ಧಾರ್ಮಿಕ ಮುಖಂಡರು ಭಾಗವಹಿಸಿರುವ ಕಾರ್ಯಕ್ರಮ ಹಲವು ವಿವಾದಗಳಿಗೆ ಕಾರಣವಾಗಿದೆ.
UN Networks ಮಾಡೂರು: ಶಬರಿ ಫ್ರೆಂಡ್ಸ್ ಮಾಡೂರು ಇವರ ಆಶ್ರಯದಲ್ಲಿ 14ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶ್ರೀ ಕೃಷ್ಣ ಸಾಂಸ್ಕೃತಿಕ ಮಹೋತ್ಸವ ಮುದ್ದು ಕೃಷ್ಣ-2017 ಪುಟಾಣಿಗಳ ಪ್ರತಿಭಾ ಕಾರ್ಯಕ್ರಮವು ಆ.13 ರಂದು ಭಾನುವಾರ ಮಾಡೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಪ್ರಯುಕ್ತ ಸಂಜೆ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಉದ್ಯಾವರ ಮಾಡ ಇದರ ಅಣ್ಣ ದೈವದ ಪಾತ್ರಿ ರಾಜ ಬೆಳ್ಚಪಾಡ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಪಿ.ಕೃಷ್ಣ ಗಟ್ಟಿ ಸೋಮೇಶ್ವರ ಅಧ್ಯಕ್ಷತೆಯನ್ನು ವಹಿಸಲಿದ್ದು, ವ್ಯವಸ್ಥಾಪನಾ ಪ್ರಮುಖ್ ಪ್ರೊ. ವಿ.ಜಯರಾಮ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಡಾ. ಅಣ್ಣಯ್ಯ ಕುಲಾಲ್, ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರು ಗುತ್ತು, ಸುರೇಶ್ ಕೆ.ಪಿ, ಮೋಹನ್ ಯು.ಶೆಟ್ಟಿ, ಅನಿಲ್ ದಾಸ್, ತುಳು ಚಲನಚಿತ್ರ ನಟ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ರಾಷ್ಟ್ರೀಯ ಪವರ್ ಲಿಫ್ಟರ್ ಹೇಮಚಂದ್ರ ಬಬ್ಬುಕಟ್ಟೆ , ಕೆ. ಸೀತಾರಾಮ್ ಬಂಗೇರ ಕೊಲ್ಯ, ಕುಶಾಲಾಕ್ಷಿ ವಿ…

