UN NETWORKS ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ. ಮುರಲೀ ಮೋಹನ ಚೂಂತಾರು ಮಹಾತ್ಮರ ತ್ಯಾಗ, ಬಲಿದಾನ ಶ್ರಮ ಮತ್ತು ಹೋರಾಟದಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಗುವಂತಾಯಿತು. ಬ್ರಿಟಿಷರ ದಬ್ಬಾಳಿಕೆಯ ಕಾರ್ಗತ್ತಲೆಯಿಂದ ಬೆಳಕಿಗೆ ತಂದ ಆಗಸ್ಟ್ 15 ಭಾರತೀಯರೆಲ್ಲರಿಗೂ ಸಂಭ್ರಮದ ದಿನವಾಗಿದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಸುಮಾರು 40 ಜನ ಗೃಹರಕ್ಷಕರು ಉಪಸ್ಥಿತರಿದ್ದರು.
Author: UllalaVani
UN NETWORKS ಮಾಡೂರು: ಶತ್ರು ರಾಷ್ಟ್ರವಾದ ಚೀನಾದ ವಸ್ತುಗಳನ್ನು ಮನೆ ಮನೆಯಲ್ಲೂ ಹೆಚ್ಚಾಗಿ ಬಳಕೆ ಮಾಡುವ ಮೂಲಕ ಪರೋಕ್ಷವಾಗಿ ಚೀನಾ ದೇಶಕ್ಕೆ ಬೆಂಬಲವನ್ನು ನೀಡುತ್ತಿದ್ದೇವೆ. ಪ್ರತಿಯೊಬ್ಬರು ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ದೇಶಿಯ ಉತ್ಪನ್ನಗಳನ್ನು ಹೆಚ್ಚಾಗಿ ಉಪಯೋಗಿಸಬೇಕಿದೆ ಎಂದು ಡಾ. ಅಣ್ಣಯ್ಯ ಕುಲಾಲ್ ಅಭಿಪ್ರಾಯಪಟ್ಟರು. ಅವರು ಶಬರಿ ಫ್ರೆಂಡ್ಸ್ ಮಾಡೂರು ಇವರ ಆಶ್ರಯದಲ್ಲಿ 14ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಮಾಡೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ಶ್ರೀ ಕೃಷ್ಣ ಸಾಂಸ್ಕೃತಿಕ ಮಹೋತ್ಸವ ಮುದ್ದು ಕೃಷ್ಣ-2017 ಪುಟಾಣಿಗಳ ಪ್ರತಿಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಷ್ಟ ಸುಖವನ್ನು ಸಮ ಪ್ರಮಾಣದಲ್ಲಿ ಸ್ವೀಕರಿಸುವವರು ಮಾತ್ರ ಜೀವನದಲ್ಲಿ ಏಳಿಗೆಯ ಮೆಟ್ಟಿಲನ್ನು ಏರಲು ಸಾಧ್ಯ. ಸಾಧನೆಗೆ ಬಡವರು ಶ್ರೀಮಂತರು ಎಂಬ ಭೇದವಿಲ್ಲ. ಸಾಧನೆ ಮಾಡುವವರು ಮಾತ್ರ ಸಾಧಕರಾಗಿ ಹೊರ ಬರಲು ಸಾಧ್ಯ. ಸ್ವದೇಶಿ ವಸ್ತುಗಳ ಬದಲಿಗೆ ವಿದೇಶಿ ವಸ್ತುಗಳ ಬಳಕೆ ಹೆಚ್ಚಾಗುತ್ತಿದ್ದು ಆಹಾರ ಪದ್ದತಿ, ಉಡುಗೆ ತೊಡುಗೆ ಎಲ್ಲವನ್ನು…
UN NETWORKS ಉಳ್ಳಾಲ: ಸ್ವಾತಂತ್ರ್ಯದಿನದಂದು ಉಳ್ಳಾಲದಲ್ಲಿ ಅಬ್ಬಕ್ಕ ರಾಣಿಯನ್ನು ಸ್ಮರಿಸುವ ಉದ್ದೇಶದಿಂದ ಮುಂದಿನ ವರ್ಷ ಅರ್ಥಪೂರ್ಣ ಆಚರಣೆಯನ್ನು ನಡೆಸುವ ಉದ್ದೇಶವನ್ನು ಹೊಂದಿದ್ದು, ಎಲ್ಲಾ ಸಮುದಾಯದವರನ್ನು ಸೇರಿಸಿಕೊಂಡು ದೇಶ ಭಕ್ತರನ್ನು ಗೌರವಿಸುವ ಕೆಲಸ ಅದರ ಮೂಲಕ ಆಗಬೇಕಿದೆ ಎಂದು ಕರಾವಳಿ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಅಭಿಪ್ರಾಯಪಟ್ಟರು. ಅವರು ಕರಾವಳಿ ಸಾಂಸ್ಕೃತಿಕ ಪರಿಷತ್ ಹಾಗೂ ವಿದ್ಯಾರಣ್ಯ ಕಲಾವೃಂದ ಉಳ್ಳಾಲದ ವತಿಯಿಂದ ಸ್ವಾತಂತ್ರ್ಯ ದಿನದ ಪ್ರಯುಕ್ತ ಉಳ್ಳಾಲದ ವೀರ ರಾಣಿ ಅಬ್ಬಕ್ಕ ಪ್ರತಿಮೆಗೆ ಹೂವಿನ ಹಾರ ಹಾಕಿ ಗೌರವ ಸಲ್ಲಿಸಿ ಮಾತನಾಡಿದರು. ಉಳ್ಳಾಲದವರಿಗೆ ದೇಶಕ್ಕಾಗಿ ಸೇವೆಗೈದ ಅಬ್ಬಕ್ಕಳನ್ನು ಆರಾಧಿಸುವ ಅವಕಾಶ ದೊರೆತಿರುವುದು ಸಂತಸದ ವಿಚಾರ. ಸ್ವಾತಂತ್ರ್ಯ ದಿನದಂದು ಅಬ್ಬಕ್ಕ ರಾಣಿಯ ಆಚರಣೆ ಜಿಲ್ಲೆಗೆ ಮಾದರಿಯಾಗುವ ರೀತಿಯಲ್ಲಿ ನಡೆಯಬೇಕಿದೆ. ಅದರಲ್ಲಿ ಎಲ್ಲಾ ಸಮುದಾಯದವರು ಪಾಲ್ಗೊಂಡು ದೇಶ ಸೇವೆಯಲ್ಲಿ ಪಾಲ್ಗೊಂಡವರನ್ನು ಗುರುತಿಸುವ ಹಾಗೂ ಗೌರವಿಸುವ ಉದ್ದೇಶವನ್ನು ಹೊಂದಿದ್ದೇವೆ. ಸೈನಿಕರನ್ನೇ ವಿರೋಧಿಸುವ ಪುಸ್ತಕ ಮಂಗಳೂರು ವಿಶ್ವವಿದ್ಯಾನಿಲಯದ ಮೂಲಕ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ…
UN NETWORKS ಚೆಂಬುಗುಡ್ಡೆ: ಗಿಡನೆಡುವ ಮೂಲಕ ಪರಿಸರ ಒಳಿತಿಗಾಗಿ ನಡೆಯುವ ಕಾರ್ಯಕ್ರಮವನ್ನು ನಗರಸಭೆ ವ್ಯಾಪ್ತಿಯಲ್ಲಿ ಆಯೋಜಿಸಬೇಕೆಂದು ಎಂದು ಸೈಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು. ಅವರು ಸ್ವಾತಂತ್ರೋತ್ಸವದ ಪ್ರಯುಕ್ತ ಉಳ್ಳಾಲ ನಗರಸಭೆಯ 27 ನೇ ವಾರ್ಡಿನಲ್ಲಿ ನಡೆದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಳಯ ಆಗುವುದೆಂದು ಗೊತ್ತಿದ್ದರೂ, ಮನುಷ್ಯ ಮರಗಳನ್ನು ಕಡಿದು ಕಟ್ಟಡ ನಿರ್ಮಾಣದಲ್ಲೇ ನಿರತನಾಗಿದ್ದಾನೆ. ಈ ನಡುವೆ ಪರಿಸರಕ್ಕೆ ಪೂರಕವಾದ ಕೆಲಸವನ್ನು ಹಮ್ಮಿಕೊಳ್ಳುವುದರ ಮೂಲಕ ಬಿಸಿಲ ತಾಪಮಾನವನ್ನು ಕಡಿಮೆಗೊಳಿಸುವುದರ ಜತೆಗೆ ಪರಿಸರವನ್ನು ಉಳಿಸುವ ಕಾರ್ಯದಲ್ಲಿ ನಿರತರಾಗಬೇಕಿದೆ ಎಂದರು. ಈ ಸಂದರ್ಭ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಮೋನು, ಪೌರಾಯುಕ್ತೆ ವಾಣಿ.ವಿ.ಆಳ್ವ, ಉಳ್ಳಾಲ ನಗರಸಭೆಯ ಪರಿಸರ ಅಭಿವೃದ್ಧಿ ರಾಯಭಾರಿ ಮಾಧವ ಉಳ್ಳಾಲ್, ಸ್ಥಳೀಯ ಸದಸ್ಯ ಬಾಝಿಲ್ ಡಿಸೋಜ, ದರ್ಗಾ ಉಪಾಧ್ಯಕ್ಷ ಮಹಮ್ಮದ್ ತ್ವಾಹ, ಚೆಂಬುಗುಡ್ಡೆ ಮಸೀದಿ ಅಧ್ಯಕ್ಷ ಮಹಮ್ಮದ್ ಹನೀಫ್, ಅಬ್ಬಾಸ್ ಮುಸ್ಲಿಯಾರ್, ನಗರಸಭೆ ಸದಸ್ಯೆ ಭಾರತಿ , ನಾಮನಿರ್ದೇಶಿತ ಸದಸ್ಯರುಗಳಾದ ರವಿ ಕಾಪಿಕಾಡ್, ರಿಚ್ಚಿ ವೇಗಸ್…
UN NETWORKS ತೊಕ್ಕೊಟ್ಟು: ಸಸಿಗಳನ್ನು ನೆಡುವ ಮೂಲಕ ಪರಿಸರ ಪೂರಕ ಕಾರ್ಯಗಳಿಗೆ ಒತ್ತನ್ನು ಕೊಡುವುದರ ಮೂಲಕ, ಮುಂದಿನ ಪೀಳಿಗೆಗೆ ಉತ್ತಮ ವಾತಾವರಣವನ್ನು ಕಲ್ಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಸೋಮೇಶ್ವರ ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮೀ ಗಟ್ಟಿ ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟು ಸಮೃದ್ಧಿ ಹೌಸಿಂಗ್ ಸೊಸೈಟಿ ವತಿಯಿಂದ ಸೊಸೈಟಿ ಆವರಣದಲ್ಲಿ ಜರಗಿದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಸಾರ್ವಜನಿಕರಿಗೆ ಸಸಿ ವಿತರಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಟಿ.ಸುವರ್ಣ ಮಾತನಾಡಿ ಸ್ವಾತಂತ್ರ್ಯೋತ್ಸವದ ದಿನದಂದು ವಿತರಿಸಲಾದ ಗಿಡಗಳನ್ನು ನೆಡುವುದರ ಜತೆಗೆ ಪೋಷಿಸುವ ಕೆಲಸವನ್ನು ಮಾಡಿದಲ್ಲಿ ಪರಿಸರವನ್ನು ಉಳಿಸುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಿದಂತಾಗುವುದು ಎಂದರು. ಈ ಸಂದರ್ಭ ಭರತ್ ರಂಗೋಲಿ, ದಯಾನಂದ, ರಾಜೇಶ್ ಕೆರೆಬೈಲ್, ಬಾಲಕೃಷ್ಣ, ವನಮಾಲ ಪ್ರಕಾಶ್, ರೇಣುಕೋ ಕೋಟ್ಯಾನ್, ಜನಾರ್ದನ ಆಚಾರ್ಯ, ಪ್ರೇಮನಾಥ್ ಉಳ್ಳಾಲ್, ಭಾಸ್ಕರ್, ಫ್ರಾನ್ಸಿಸ್ ಡಿಸೋಜ ಉಪಸ್ಥಿತರಿದ್ದರು. ಜೀವನ್ ಕುಮಾರ್ ತೊಕ್ಕೊಟ್ಟು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
UN NETWORKS ತೊಕ್ಕೊಟ್ಟು:ಉಳ್ಳಾಲ ಹಸಿದ ವಿದ್ಯಾರ್ಥಿಗೆ ಊಟ ಕೊಡಲಾರದ ಸೆಕ್ಯುಲಾರ್‍ವಾದಿಗಳಂತಹ ಚಿಂತನೆಯಿಂದ ಹಿಂದು ಸಮುದಾಯ ಶೋಷಣೆಗೆಕ್ಕೊಳಗಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲೆ ಕಾರ್ಯಕಾರಿಣಿ ಸದಸ್ಯ ಹಾಗೂ ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಹೇಳಿದರು. ಅವರು ವಿಶ್ವ ಹಿಂದು ಪರಿಷತ್, ಬಜರಂಗದಳದ ಉಳ್ಳಾಲ ಪ್ರಖಂಡ ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಸಲುವಾಗಿ ಅಂಬಿಕಾರೋಡ್ ಗಟ್ಟಿ ಸಮಾಜ ಭವನದಿಂದ ತೊಕ್ಕೊಟ್ಟು ಬಸ್ಸು ನಿಲ್ದಾಣದವರೆಗೆ ಸೋಮವಾರ ಜರಗಿದ ಬೃಹತ್ ಪಂಜಿನ ಮೆರವಣಿಗೆ ಮತ್ತು ತೊಕ್ಕೊಟ್ಟುವಿನಲ್ಲಿ ನಡೆದ ದಿಕ್ಸೂಚಿ ಭಾಷಣ ಮಾಡಿದರು. ಹಿಂದು ರಾಷ್ಟ್ರದಲ್ಲಿ ಹಿಂದುಗಳು ಹಬ್ಬಗಳನ್ನು ಆಚರಿಸುವ ಸಂದರ್ಭ ಗಣೇಶನ ವಿಗ್ರಹದ ಎತ್ತರ, ಪೆಂಡಾಲ್ ಅಳತೆಯನ್ನು ಲಿಖಿತವಾಗಿ ನೀಡುವ ದೌರ್ಭಾಗ್ಯ ಇದೆ. ಹಿಂದಿನ ಇತಿಹಾಸವೆಲ್ಲವೂ ಭೂಮಿಯಲ್ಲಿ ಇದ್ದವರೆಲ್ಲಾ ಹಿಂದುಗಳು ಹಾಗೂ ಹಿಂದುಸ್ತಾನ ತ್ಯಾಗದ ನೆಲ ಎಂಬ ಇತಿಹಾವಿದೆ. ಆದರೆ ತುಷ್ಟೀಕರಣದ ಗೋಜಿನಲ್ಲಿ ಧ್ವಜದ ಬಣ್ಣವನ್ನು ತುಂಡು ಮಾಡುವುದರ ಜತೆಗೆ ದೇಶವನ್ನೇ ತುಂಡು ಮಾಡಲಾಗಿದೆ. ಹಿಂದುಗಳ ಭಾವನೆಯನ್ನು ಒಂದುಗೂಡಿಸುವ ಸಲುವಾಗಿ…
UN NETWORKS ಉಳ್ಳಾಲ: ಶಾಲೆಗಳಲ್ಲಿ ಸರ್ವಧರ್ಮಗಳ ಆಚರಣೆಯನ್ನು ಆಚರಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಏಕತೆಯ ಸಂದೇಶವನ್ನು ಮೂಡಿಸಲು ಸಾಧ್ಯ ಎಂದು ರತ್ನ ಎಜ್ಯೂಕೇಶನ್ ಟ್ರಸ್ಟ್ ನ ಅಧ್ಯಕ್ಷ ಕೆ.ರವೀಂದ್ರ ರೈ ಉಳಿದೊಟ್ಟು ಅಭಿಪ್ರಾಯಪಟ್ಟರು.ಅವರು ದೇರಳಕಟ್ಟೆ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯ ರವೀಂದ್ರ ಕಲಾ ವೇದಿಕೆಯಲ್ಲಿ ಶಾಲೆಯ ಸಿರಿಮುಡಿ ತುಳು ಸಂಘ ಶನಿವಾರ ಆಯೋಜಿಸಿದ್ದ ಆಟಿದೊಂಜಿ ದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸರ್ವಧರ್ಮಗಳ ಆಚರಣೆಗಳನ್ನು ಶಾಲೆಯ ಸಿರಿಮುಡಿ ತುಳು ಸಂಘ ಆಚರಿಸುವ ಮೂಲಕ ವಿದ್ಯಾರ್ಥಿಗಳಿಗೂ ಉತ್ತಮ ಸಂದೇಶವನ್ನು ನೀಡುತ್ತಾ ಬಂದಿದೆ. ಹಿಂದೆ ಕಷ್ಟ ಕಾಲದಲ್ಲಿ ಪ್ರಕೃತಿಯಿಂದ ಸಿಕ್ಕ ಸೊತ್ತುಗಳನ್ನೇ ಉಪಯೋಗಿಸಿಕೊಂಡು ಜನ ಆಹಾರವಾಗಿ ಬಳಸುತ್ತಿದ್ದರು. ಇದೇ ಆಟಿ ತಿಂಗಳ ಆಚರಣೆಯ ಮೂಲಕ ಅದನ್ನು ಸ್ಮರಿಸುವುದರೊಂದಿಗೆ ಮುಮದಿನ ಪೀಳಿಗೆಗೆ ತಿಳಿಸುವ ಕೆಲಸ ನಡೆಯಬೇಕಿದೆ ಎಂದರು. ವಿದ್ಯಾ ರತ್ನ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿ ಸೌಮ್ಯ ಆರ್.ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಶಾಲಾ ಮುಖ್ಯೋಪಾದ್ಯಾಯಿನಿ ನಯಿಮ ಹಮೀದ್ ಉಪಸ್ಥಿತರಿದ್ದರು.ರವಿ ಕುಮಾರ್ ಕೋಡಿ ಕಾರ್ಯಕ್ರಮ ಸ್ವಾಗತಿಸಿ ನಿರ್ವಹಿಸಿದರು, ಶಿಕ್ಷಕ ರಮೇಶ್ ವಂದಿಸಿದರು.…
UN NETWORKS ಕುತ್ತಾರು: ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ “ದೇಶ ಉಳಿಸಿ, ದ್ವೇಷ ಅಳಿಸಿ” ಎಂಬ ಘೋಷ ವಾಕ್ಯದೊಂದಿಗೆ ಅಝಾದಿ ರ್ಯಾಲಿಯು ಶನಿವಾರ ಮದನಿ ನಗರದಿಂದ ದೇರಳಕಟ್ಟೆ ಸಿ.ಟಿ ಗ್ರೌಂಡ್ ತನಕ ನಡೆಯಿತು. ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಅಧ್ಯಕ್ಷತೆಯಲ್ಲಿ ನಡೆದ ರ್ಯಾಲಿಗೆ ಉಮರಾ ನೇತಾರ ಉಂಞ ಚಾಲನೆ ನೀಡಿದರು.
UN NETWORKS ಕೊಣಾಜೆ: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಪೂರಕವಾಗಿದೆ ಎಂದು ಎಂದು ಮೂಡದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಅವರು ಅಭಿಪ್ರಾಯ ಪಟ್ಟರು. ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ದ.ಕ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇದರ ಆಶ್ರಯದಲ್ಲಿ ಕೊಣಾಜೆ ಪದವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಆರ್ಥಿಕ ಸಂಕಷ್ಟದಿಂದ ಯಾವುದೇ ವಿದ್ಯಾರ್ಥಿಯ ಶಿಕ್ಷಣ ಮೊಟಕುಗೊಳ್ಳಬಾರದೆಂಬ ಉದ್ದೇಶದಿಂದ ಇಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವು ಶಿಕ್ಷಣಕ್ಕಾಗಿ ಬೃಹತ್ ಮೊತ್ತದ ಹಣವನ್ನು ವಿನಿಯೋಗಿಸುತ್ತಿದೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆಯಬೇಕು ಎಂದ ಅವರು ವಿದ್ಯಾರ್ಥಿಗಳು ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಶಿಸ್ತು, ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಮುನ್ನಡೆಯಬೇಕು ಎಂದರು. ಉದ್ಯಮಿ ಪ್ರಸಾದ್ ರೈ ಕಲ್ಲಿಮಾರ್ ಅವರು, ಇಂದು ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆಗಳಿವೆ. ಆದರೆ ಸ್ಪರ್ಧೆಯು ಆರೋಗ್ಯಕರವಾಗಿರಬೇಕು. ಪ್ರತಿಭಾ ಕಾರಂಜಿಯಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಹಲವಾರು ಅವಕಾಶಗಳನ್ನು ಸೃಷ್ಟಿಸುತ್ತದೆ…
UN NETWORKS ಉಳ್ಳಾಲ: ಮಂಗಳೂರು ವಿಶ್ವವಿದ್ಯಾನಿಲಯದ ಬಿಸಿಎ ಹಾಗೂ ಬಿ.ಎಸ್ಸಿ ವಿಭಾಗದ ಪಠ್ಯಪುಸ್ತಕದಲ್ಲಿ ದೇಶ ಕಾಯುವ ಸೈನಿಕರ ಕುರಿತು ವಿವಾದಾತ್ಮಕ ಹೇಳಿಕೆಯನ್ನು ಉಲ್ಲೇಖಿಸಿರುವ ನಡೆಯ ವಿರುದ್ಧ ಮತ್ತು ಪಠ್ಯ ಪುಸ್ತಕವನ್ನು ಆಯ್ಕೆ ಮಾಡಿದ ಸಮಿತಿ ಸದಸ್ಯರಿಗೆ ನೋಟೀಸು ಜಾರಿ ಮಾಡುವಂತೆ ಆಗ್ರಹಿಸಿ ಕರಾವಳಿ ಸಾಂಸ್ಕೃತಿಕ ಪರಿಷತ್ ವತಿಯಿಂದ ಅಪರ ಜಿಲ್ಲಾಧಿಕಾರಿಯವರಿಗೆ ಶುಕ್ರವಾರ ಮನವಿಯನ್ನು ಸಲ್ಲಿಸುವ ಮೂಲಕ ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ. ಮಂಗಳೂರು ವಿವಿಯ ಬಿಸಿಎ, ಹಾಗೂ ಬಿ.ಎಸ್ಸಿ ವಿಭಾಗದ ಕನ್ನಡ ಪಠ್ಯಪುಸ್ತಕದಲ್ಲಿ 12ಗದ್ಯಪಾಠಗಳನ್ನು ಅಳವಡಿಸಿದ್ದು ಅದರಲ್ಲಿ 10ನೇ ಪಾಠವಾಗಿ ಬರಗೂರು ರಾಮಚಂದ್ರಪ್ಪ ಅವರು ಬರೆದ ` ಸಂಸ್ಕೃತಿ: ಶ್ರಮ ಮತ್ತು ಸೃಜನಶೀಲತೆ’ ಎಂಬ ಕೃತಿಯಿಂದ ಆಯ್ದುಕೊಳ್ಳಲಾದ `ಯುದ್ಧ: ಒಂದು ಉದ್ಯಮ’ ಎಂಬ ವಿಷಯವನ್ನು ಆಯ್ಕೆ ಮಾಡಿದ್ದಾರೆ. ಇಲ್ಲಿ ಸೈನಿಕರನ್ನು ಅತ್ಯಾಚಾರಿಗಳಂತೆ ಬಂಬಿಸಲಾಗಿದ್ದು, ಸೈನಿಕರ ಪತ್ನಿಯರನ್ನು ಅವಮಾನಿಸಲಾಗಿದೆ. ಯುದ್ಧ ಎನ್ನುವುದು ಒಂದು ವ್ಯಾಪಾರ ಅನ್ನುವಂತಹ ಸಂದೇಶವನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮೂಡುವಂತಹ ಪಾಠವಿದೆ. ಪಠ್ಯವನ್ನು ಆಯ್ಕೆ ಮಾಡಿದ ಸಮಿತಿ ಸದಸ್ಯರಿಗೆ ನೊಟೀಸ್ ಜಾರಿ ಮಾಡಿ ಅವರಿಂದ…

