UN NETWORKS ಉಳ್ಳಾಲ: ಕಾನೂನು ಜಾರಿ ಮಾಡಿ ಗೋವು ದರೋಡೆಕೋರರನ್ನು ನಿಗ್ರಹಿಸದೇ ಇದ್ದಲ್ಲಿ ಪ್ರತಿಭಟಿಸುವ ಅವಕಾಶವೇ ಇರುತ್ತಿರಲಿಲ್ಲ. ಜೀವವನ್ನು ಹಿಂಸಿಸಿ ಕೊಂದು ತಿನ್ನುವುದು ಕೊಳಕು ಸಂಸ್ಕøತಿ ಹೋರಾಟ ಅಪೂರ್ಣವಾಗಲು ಎಂದಿಗೂ ಬಿಡುವುದಿಲ್ಲ. ಆ ಹಂತದಲ್ಲಿ ತಾನೂ ಬಂದು ಕೈಜೋಡಿಸುವುದಾಗಿ ಶ್ರೀ ಮಹಾಚಂದ್ರಾಪುರ ಮಠಧ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿ ಕರೆ ನೀಡಿದರು. ಕೈರಂಗಳದ ಪುಣ್ಯಕೋಟಿನಗರದಲ್ಲಿನ ಅಮೃತಧಾರಾ ಗೋಶಾಲೆಯಲ್ಲಿ ಟಿ.ಜಿ.ರಾಜಾರಾಂ ಭಟ್ ಗೋ ದರೋಡೆ ಆರೋಪಿಗಳ ಪತ್ತೆಗೆ ಒತ್ತಾಯಿಸಿ ಕೈಗೊಂಡಿರುವ ಆಮರಣಾಂತ ಉಪವಾಸದ 6 ನೇ ದಿನದಂದು ಭೇಟಿ ನೀಡಿ ಗೋಪೂಜೆ ನೆರವೇರಿಸಿ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು. ಪುಣ್ಯಕೋಟಿನಗರದ ಘಟನೆ ತಡವಾಗಿ ಗೊತ್ತಾಗಿದೆ. ಗೋಸಂಪರ್ಕ ನಿರಂತರವಾಗಿ ನಡೆಸುತ್ತಿರುವುದರಿಂದ ಪತ್ರಿಕೆಗಳನ್ನು ಓದುವುದನ್ನು ಬಿಟ್ಟಿರುವುದರಿಂದ ಘಟನೆ ನಡೆದಿರುವುದು ಗೊತ್ತಾಗಿರಲಿಲ್ಲ. ಎ.1 ರಂದು ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ಚಿತ್ರವನ್ನು ನೋಡಿ ಮೊದಲಿಗೆ ಎಪ್ರಿಲ್ ಫೂಲ್ ಅಂದುಕೊಂಡರೂ ಬಳಿಕ ಪ್ರಕರಣ ಬೆಳಕಿಗೆ ಬಂತು. ಸಮಾಜದಲ್ಲಿ ಒಳಿತಿಗೆ ಉಳಿಗಾಲವಿಲ್ಲದ ಸ್ಥಿತಿ, ಅನ್ಯಾಯಗಳು ಮೇರೆಮೀರಿದೆ. ಅಮೃತಧಾರಾ ಗೋಶಾಲೆಯಿಂದ ಗೋದರೋಡೆ ನಡೆಸಿದವರು…
Author: UllalaVani
UN NETWORKS ತೊಕ್ಕೊಟ್ಟು: ದರ್ಗಾದ ಸಂವಿಧಾನ ಪುಸ್ತಕಕ್ಕೆ ವಿರೋಧವಾಗಿ ಹೋದವರು ಅಧಿಕೃತವ ಅಥವಾ ಅನಧಿಕೃತವಾ ಎನ್ನುವುದನ್ನು ಜನರು ತೀರ್ಮಾನಿಸಬೇಕಾಗಿದ್ದು, ಇಂತಹ ಕೃತ್ಯವನ್ನು ಮಾಡಿರುವ ದರ್ಗಾ ಅಧಿಕಾರ ಅನಧಿಕೃತವಾಗಿದ್ದು, ಇದನ್ನು ಹೇಳಿದವರ ಮೇಲೆ ಮಾನನಷ್ಟ ಮೊಖದ್ದಮೆ ಹಾಕುವುದಾದರೆ ಮೊದಲು ದರ್ಗಾ ಕಚೇರಿಗೆ ಬೀಗ ಹಾಕಿದ ವಕ್ಪ್ ಅಧಿಕಾರಿಗಳ ಮೇಲೆ ಹಾಕಬೇಕಾಗಿದೆ ಎಂದು ಸೈಯ್ಯದ್ ಮದನಿ ಮೊಹಲ್ಲಾ ಒಕ್ಕೂಟದ ಅಧ್ಯಕ್ಷ ಪಿ.ಎಸ್. ಮಹಮ್ಮದ್ ಶಿಹಾಬುದ್ದೀನ್ ಕಾಮಿಲ್ ಸಖಾಫಿ ಅಭಿಪ್ರಾಯಪಟ್ಟರು. ತೊಕ್ಕೊಟ್ಟು ಕೇಂದ್ರ ಬಸ್ ನಿಲ್ದಾಣದ ಬಳಿ ಸಯ್ಯದ್ ಮದನಿ ದರ್ಗಾದ ಅನಧಿಕೃತ ಸಮಿತಿಯ ವಿರುದ್ಧ ನಡೆದ ಬೃಹತ್ ಪ್ರತಿಭಟನೆಯನ್ನುದ್ಧೇಶಿಸಿ ಮಾತನಾಡಿದರು.ದರ್ಗಾ ಸಂವಿಧಾನ ಪ್ರಕಾರ ಖಾಝಿಯರವರ ತೀರ್ಮಾನ ಅಂತಿಮ ಆದರೆ ದರ್ಗಾ ಅಧಿಕಾರ ವಹಿಸಿಕೊಳ್ಳುವ ಸಂದರ್ಭ ಖಾಝಿಯವರನ್ನು ಧಿಕ್ಕರಿಸಿ ನಿಯಮ ಕಡೆಗಣಿಸಿ ಅಧಿಕಾರ ವಹಿಸಿಕೊಂಡಿದ್ದಾರೆ. ಈಗಿನ ಖಾಝಿಯನ್ನು ಸಂಪೂರ್ಣ ಕಡೆಗಣಿಸಲಾಗಿದೆ. ತಾಜುಲ್ ಉಲಮಾ ಇದ್ದಾಗಲೇ ಅವರ ವಿರೋಧ ಇದ್ದರೂ ದರ್ಗಾ ಮುಂಭಾಗದ ಮಸೀದಿಯಲ್ಲಿ ಜುಮಾ ಆರಂಭಿಸಲಾಗಿದೆ. ತಾಜುಲ್ ಉಲಮಾರನ್ನು ಕಡೆಗಣಿಸಿದ ಯಾವುದೇ ಮುಸಲ್ಮಾನರು ಮುಂದಕ್ಕೆ ಹೋಗಲು…
UN NETWORKS ಕೈರಂಗಳ: ಗೋಮಾತೆಯ ರಕ್ಷಣೆಗಾಗಿ ಅಗತ್ಯಬಿದ್ದಲ್ಲಿ ನಾವು ಶಸ್ತ್ರವನ್ನು ಕೈಗೆತ್ತಿಕೊಳ್ಳಲು ಸನ್ನದ್ಧ. ಶುಕ್ರವಾರ ಸಂಜೆ ಸಂದ್ಯಾಕಾಲದವರೆಗೆ ಇಲಾಖೆಗಳಿಗೆ ಮೀಸಲಾಗಿರಿಸಿದ್ದೇವೆ, ಆ ಸಮಯದಲ್ಲಿ ಬಂಧಿಸಿ ಮರಣ ದಂಡನೆ ಆಗುವ ರೀತಿಯ ಕೇಸು ಹಾಕಬೇಕು. ಒಂದು ವೇಳೆ ಅದಕ್ಕೆ ಪೊಲೀಸ್ ಇಲಾಖೆಗೆ ತಾಕತ್ತು ಇಲ್ಲವಾದರೆ ಪೊಲೀಸರು ಟೊಪ್ಪಿ ಕೆಳಗಿಟ್ಟು, ಹಿಂದೂ ಕಾರ್ಯಕರ್ತರಿಗೆ ಬಿಟ್ಟುಕೊಡಿ ಎಂದು ಹಿಂದೂ ಮುಖಂಡ ಕುಂಟಾರು ರವೀಶ್ ತಂತ್ರಿ ಸವಾಲು ಹಾಕಿದರು. ಅವರು ಗುರುವಾರ ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯಿಂದ ಗೋಕಳ್ಳತನ ಮಾಡಿದ ಗೋಹಂತಕರನ್ನು ಬಂಧಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಐದನೇ ದಿನದ ಆಮರಣಾಂತ ಉಪವಾಸ ಸತ್ಯಾಗ್ರಹದಲ್ಲಿ ವಿಶೇಷ ಗೋಪೂಜೆ ಸಲ್ಲಿಸಿ ಮಾತನಾಡಿದರು.ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಸುಬ್ರಹ್ಮಣ್ಯ ಭಟ್ ಕಜಂಪಾಡಿ ಮಾತನಾಡಿ ಅಸಾಮಾನ್ಯರಾದ ಆರಕ್ಷಕರು ಯಾವುದೇ ಸುಳಿವು ಇಲ್ಲದೆಯೂ ಅಪರಾಧಿಗಳನ್ನು ಹುಡುಕಿ ತರುವವರು. ಆದರೆ ಐದು ದಿನವಾದರೂ ಗೋಕಳ್ಳರ ಪತ್ತೆಯಾಗಿಲ್ಲ ಎನ್ನುವುದು ಆನೇಕ ಗೊಂದಲಕ್ಕೆ ಎಡೆಮಾಡುತ್ತಿದೆ. ಸದ್ಗುಣವನ್ನು ವಿಕೃತದೆಡೆಗೆ ತಿರುಗಿಸುವ ಪ್ರಯತ್ನ ಮಾಡದೆ ಜವಾಬ್ದಾರಿಯಿಂದ ವರ್ತಿಸುವುದು ಒಳಿತು…
UN NETWORKS ಮುಂಬಯಿ: ಹೊಸಂಗಡಿ ಮಳ್ ಹರ್ ಇಸ್ಲಾಮಿಕ್ ಇದರ ಮುಂಬಯಿ ಘಟಕ ವತಿಯಿಂದ 4ನೇ ಸ್ವಲಾತ್ ವಾರ್ಷಿಕ ಎಪ್ರಿಲ್ 7ರಂದು ಸಂಜೆ5ಗಂಟೆಗೆ ಮುಂಬಯಿಯ ದಾದರ್ ಪೂರ್ವದ ಲತ್ವೀಫಿಯ ಸುನ್ನೀ ಮಸ್ಜಿದ್ ದಲ್ಲಿ ನಡೆಯಲಿದೆ. ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್-ಬುಖಾರಿ ನೇತ್ರತ್ವ ವಹಿಸಿದರು. ಡಾ. ಹುಸೈನ್ ಸಖಾಫಿ ಚುಳ್ಳಿಕ್ಕೋಡ್, ಮಾಸ್ಟರ್ ಶಿಹಾನ್ ಉಳ್ಳಾಲ, ಹಿಲಾಲ್ ಬಶೀರ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಮುಂಬಯಿ ಘಟಕ ಮ್ಯಾನೇಜರ್ ಸಿದ್ದೀಕ್ ಮುಸ್ಲಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ULLAL NETWORKS ಕೈರಂಗಳ: ಭಟ್ ಅವರು ಕೈಗೊಂಡಿರುವ ಅಮರಣಾಂತ ಉಪವಾಸಕ್ಕೆ ನ್ಯಾಯ ಸಿಗದೇ ಇದ್ದಲ್ಲಿ ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯ ಜನತೆ ಅವರ ಹೋರಾಟದಲ್ಲಿ ಭಾಗಿಯಾಗಲಿದ್ದು, ಈ ಮೂಲಕ ದನ ಕಳ್ಳರ ಅಟ್ಟಹಾಸಕ್ಕೆ ಕೊನೆ ಹಾಡಬೇಕಿದೆ ಎಂದು ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವರಾದ ಕೃಷ್ಣ .ಜೆ.ಪಾಲೇಮಾರ್ ಹೇಳಿದ್ದಾರೆ. ಕೈರಂಗಳ ಪುಣ್ಯಕೋಟಿನಗರದ ಅಮೃತಧಾರಾ ಗೋಶಾಲೆಯಲ್ಲಿ ಐದನೇ ದಿನಕ್ಕೆ ಕಾಲಿಟ್ಟಿರುವ ಟಿ.ಜಿ.ರಾಜಾರಾಂ ಭಟ್ ನೇತೃತ್ವದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಕ್ಕೆ ಭೇಟಿ ನೀಡಿ ಮಾತನಾಡಿದರು. ಅಮೃತಧಾರಾ ಗೋಶಾಲೆಯಿಂದ ಗೋವಿನ ದರೋಡೆ ನಂತರ ದೂರು ನೀಡಿದರೂ ಸರಿಯಾದ ಸಮಯಕ್ಕೆ ಪೊಲೀಸರು ಪರಿಶೀಲನೆ ನಡೆಸದೆ ತಾತ್ಸಾರ ಮನೋಭಾವನೆ ತೋರಿದ್ದಾರೆ. ಜಿಲ್ಲೆಯ ಜನತೆ ಗೋಮಾತೆಯ ಭಕ್ತರೇ ಆಗಿದ್ದಾರೆ. ಎಲ್ಲಾ ಧರ್ಮದವರು ಗೋವನ್ನು ಆರಾಧನೆ ಮಾಡುವವರೇ ಆಗಿದ್ದಾರೆ. ಆದರೆ ಅದರ ನಡುವೆ ದನಕಳ್ಳರನ್ನು ಪ್ರೋತ್ಸಾಹಿಸುವ ಕಾರ್ಯ ಸರಕಾರದಿಂದ ಆಗಿದೆ. ಅದಕ್ಕಾಗಿ ನಡೆಯುತ್ತಿರುವ ಅಮರಣಾಂತ ಉಪವಾಸದಲ್ಲಿ ಎರಡು ಜಿಲ್ಲೆಗಳ ಜನ ಬೆಂಬಲಿಸಲಿದ್ದಾರೆ. ಸರಕಾರದ ಕಣ್ಣಮುಚ್ಚಾಲೆ ಜನರಿಗೆ ಸಾಕಾಗಿದೆ. ದರೋಡೆಕೋರರಿಗೆ, ಕಳ್ಳಕಾಕರಿಗೆ…
UN NETWORKS ಉಳ್ಳಾಲ: ಉಳ್ಳಾಲ ಭಾಗದ ಎಲ್ಲಾ ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರಗಳಲ್ಲಿ ಎ.6 ರಂದು ಗೋ ಸಂರಕ್ಷಣೆಗಾಗಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ ಎಂದು ವಿಶ್ವ ಹಿಂದು ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಕೃಷ್ಣಮೂರ್ತಿ ಹೇಳಿದ್ದಾರೆ. ಕುತ್ತಾರು ಬಾಲಸಂರಕ್ಷಣಾ ಕೇಂದ್ರದಲ್ಲಿ ಗುರುವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.ದೇಶದಲ್ಲಿ ಬಹುಸಂಖ್ಯಾತರ ಹಕ್ಕಿಗಾಗಿ ಹೋರಾಟ ನಡೆಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಗೋ ಉತ್ಪನ್ನಗಳ ಕೊರತೆಯಾದಲ್ಲಿ ಮನುಷ್ಯ ಜೀವಿಸಲು ಕಷ್ಟಕರವಾಗಬಹುದು. ರಾಜ್ಯ ಸರಕಾರ ಪ್ರಮಾಣ ವಚನ ಸ್ವೀಕರಿಸಿದ ಮರುದಿನದಂದೇ ಉಳ್ಳಾಲ ಭಾಗದಲ್ಲಿ ಗೂವು ಕಳವು ನಡೆಸಿ ತುಳಸೀಕಟ್ಟೆಯಲ್ಲಿ ಗೋವಿನ ಗೊರಸು ಇಟ್ಟಿರುವಂತಹ ಹೇಯ ಕೃತ್ಯ ನಡೆದಿದೆ, ತದನಂತರ ಬೆನ್ನಲ್ಲೇ ಜಾನುವಾರು ಕಳವು ಪ್ರಕರಣ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಆದರೆ ಸರಕಾರದ ಮಂತ್ರಿಗಳು, ಶಾಸಕರು ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಶಾಸನವನ್ನು ವಾಪಸ್ಸು ಪಡೆಯುವ ಮೂಲಕ ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಸಮಾಜದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಅತಂತ್ರದಲ್ಲಿರುವ ಹಾಗೂ ನಶಿಸಿ ಹೋಗುತ್ತಲಿರುವ ಗೋ ಸಂಪತ್ತನ್ನು ಉಳಿಸುವ ಉದ್ದೇಶದಿಂದ ವಿ.ಹಿಂಪ, ಹಿಂದು…
UN NETWORKS ಉಳ್ಳಾಲ: ಕಾಂಗ್ರೆಸ್ ಸರಕಾರ ಆಡಳಿತದ ಬಳಿಕ ಉಳ್ಳಾಲದಲ್ಲಿ ವಿಜಯೋತ್ಸವದ ಮರುದಿನವೇ ಗೋಕಳ್ಳತನ ಆರಂಭವಾಗಿದ್ದು, ಕಳೆದ ಐದು ವರ್ಷಗಳಿಂದ ಉಳ್ಳಾಲ ಮತ್ತು ಕೊಣಾಜೆ ಪೊಲೀಸ್ ಠಾಣೆಯಲ್ಲಿ 22 ಎಫ್ ಐ ಆರ್ ಗಳು ಗೋ ಕಳ್ಳರ ವಿರುದ್ಧ ಆಗಿದ್ದು, ಇಲ್ಲಿನ ಜನಪ್ರತಿನಿಧಿಗಳ , ಕಾಂಗ್ರೆಸ್‍ನ ದ್ವಂದ್ವ ನೀತಿಯಿಂದ ಅವರ ಕುಮ್ಮಕ್ಕಿನಿಂದಲೇ ಗೋಕಳ್ಳರು ರಾಜಾರೋಷವಾಗಿ ತಮ್ಮ ಕೃತ್ಯವನ್ನು ಮಾಡುತ್ತಿದ್ದಾರೆ ಎಂದು ವಿಶ್ವಹಿಂದೂ ಪರಿಷತ್‍ನ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‍ವೆಲ್ ಅಭಿಪ್ರಾಯಪಟ್ಟರು. ಕೈರಂಗಳ ಪುಣ್ಯಕೋಟಿನಗರದಲ್ಲಿ ನಡೆಯಯುತ್ತಿರುವ ಟಿ.ಜಿ,.ರಾಜಾರಾಮ ಭಟ್ಟರ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಪೂರಕವಾಗಿ ಭಟ್ ಅವರ ಆರೋಗ್ಯ ಸ್ಥಿರತೆಗಾಗಿ ಕುತ್ತಾರು ರಾಜರಾಜೇಶ್ವರೀ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಗೋಪ್ರೇಮಿ ಸಂಘಟನೆಗಳ ಆಶ್ರಯದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯ ಬಳಿಕ ಮಾತನಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮರುದಿನವೇ ಉಳ್ಳಾಲ ಉಚ್ಚಿಲದಲ್ಲಿ ಮಯ್ಯರ ಮನೆಯ ಗೋ ಕಳವು ಮಾಡಿ ಗೋವಿನ ತಲೆ ಕೈಕಾಲುಗಳನ್ನು ತುಳಸಿಕಟ್ಟೆಯಲ್ಲಿ ಇಡುವ ಮೂಲಕ ಪ್ರಾರಂಭಗೊಂಡ ಗೋಹತ್ಯೆ ಕಳೆದ ಐದು ವರ್ಷಗಳಿಂದ…
UN NETWORKS ಕೈರಂಗಳ: ಗೋವಿನ ಪರವಾಗಿ ಸತ್ಯಾಗ್ರಹ ನಡೆಸುತ್ತಿರುವ ರಾಜಾರಾಮ್ ಭಟ್ ಅವರು ಅನಾರೋಗ್ಯಕ್ಕೆ ಒಳಗಾದರೆ ಜಿಲ್ಲಾಡಳಿತ ಮತ್ತು ಸರ್ಕಾರವೇ ಹೊಣೆಯಾಗುತ್ತೆ. ಮುಂದಿನ ಎರಡು ದಿನಗಳಲ್ಲಿ ಸರ್ಕಾರ ಸ್ಪಂದಿಸದೇ ಇದ್ದಲ್ಲಿ ಎಲ್ಲಾ ಸಂತರು ಕಾಲ್ನಡಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತೇವೆ. ಆದರೆ ಇದಕ್ಕೂ ಸ್ಪಂದನೆ ಸಿಗದೇ ಇದ್ದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಬೆಚ್ಚಿ ಬೀಳುವ ರೀತಿಯಲ್ಲಿ ಹೋರಾಟ ನಡೆಯಲಿದೆ ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯಿಂದ ಗೋಕಳ್ಳತನ ಮಾಡಿದ ಗೋಹಂತಕರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಭಾನುವಾರ ಗೋಶಾಲೆ ಆವರಣದಲ್ಲಿ ಗೋಶಾಲೆ ಸಮಿತಿ ಅಧ್ಯಕ್ಷ ಟಿ.ಜಿ.ರಾಜಾರಾಮ ಭಟ್ ಆರಂಭಿಸಿರುವ ಆಮರಣಾಂತ ಉಪವಾಸ ಸತ್ಯಾಗ್ರಹದ ನಾಲ್ಕನೇ ದಿನವಾದ ಬುಧವಾರ ದಂದು ಹಮ್ಮಿಕೊಂಡಿದ್ದ ಸಾಧು-ಸಂತರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ಪ್ರತಿಯೊಂದು ಧರ್ಮದವರ ಪರವಾಗಿ ರಾಜರಾಮ್ ಭಟ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಮುಂದಿನ ದಿನಗಳಲ್ಲಿ ಅಂದೋಲನವಾಗಬೇಕು. ಈ ಪ್ರದೇಶದ ಶಿಕ್ಷಣ…
UN NETWORKS ಕೈರಂಗಳ: ` ಕಳೆದ ಹತ್ತು ವರ್ಷದಲ್ಲಿ ಸುಮಾರು 35 ಗೋವುಗಳನ್ನು ಕಳೆದುಕೊಂಡಿದ್ದೇನೆ. ಮನಸ್ಸಿಗೆ ತುಂಬಾ ನೋವಾಗುತ್ತಿದೆ, ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಮೇಯಲು ಯಾಕೆ ಬಿಡುತ್ತೀರಿ ಎಂದು ಬೈಯ್ದು ನಮ್ಮನ್ನು ವಾಪಸ್ಸು ಕಳುಹಿಸುತ್ತಾರೆಯೇ ಹೊರತು ದನಕಳವು ನಡೆಸಿದವರನ್ನು ಹುಡುಕುವ ಪ್ರಯತ್ನ ಮಾಡುತ್ತಿಲ್ಲ ಎಂದು ಕೊಣಾಜೆ ನಡುಪದವು ನಿವಾಸಿ ಸುಮಾರು 65 ರ ಹರೆಯದ ಹೈನುಗಾರಿಕೆ ನಡೆಸುತ್ತಿರುವ ಕಲ್ಯಾಣಿ ಅಲವತ್ತುಕೊಂಡರು. ಗೋದರೋಡೆಗೈದವರ ಪತ್ತೆಗಾಗಿ ಟಿ.ಜಿ.ರಾಜಾರಾಂ ಭಟ್ ನೇತೃತ್ವದಲ್ಲಿ ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯಲ್ಲಿ ಕೈಗೊಳ್ಳಲಾದ ಅಮರಣಾಂತ ಉಪವಾಸ ಸತ್ಯಾಗ್ರಹದ ಮೂರನೇ ದಿನವಾದ ಮಂಗಳವಾರ ನಡೆದ ಗೋ ಸಂತ್ರಸ್ತರ ಸಭೆಯಲ್ಲಿ ನೊಂದವರ ಮಾತು ಕೇಳಿಬಂತು. ಗೋಕಳ್ಳರ ಅಟ್ಟಹಾಸಕ್ಕೆ ಜಗ್ಗದೆ ಇದೀಗ 6 ಹಸುವನ್ನು ಮನೆಯಲ್ಲಿ ಸಾಕುತ್ತಿದ್ದೇನೆ ಆದರೆ ಅದನ್ನು ಯಾವ ಕಟುಕ ಬಂದು ಕದ್ದುಕೊಂಡು ಹೋಗುತ್ತಾನೆ ಅನ್ನುವ ಭಯವೂ ಮನದಲ್ಲಿದೆ. ರಾತ್ರಿ ಮಲಗಿರುವ ಸಂದರ್ಭದಲ್ಲಿ ಗೋ ಹಂತಕರು ಬಂದು ಸ್ವಂತ ಮಗುವಿನಂತೆ ಸಾಕಿದ ಹಸುಗಳನ್ನು ಕದ್ದು…
UN NETWORKS ಉಳ್ಳಾಲ: ಇಸ್ಲಾಂ ಸ್ವಚ್ಛತೆಯನ್ನು ಪ್ರತಿಪಾದಿಸುವ ಧರ್ಮ, ಈ ನಿಟ್ಟಿನಲ್ಲಿ ಜಾಗತಿಕ ಮುಸ್ಲಿಮರು ಸ್ವಚ್ಛತೆಗೆ ಪ್ರಥಮ ಸ್ಥಾನ ನೀಡುತ್ತಾರೆ ಎಂದು ಮದ್ರಸ ಅದ್ಯಾಪಕರ ವೇದಿಕೆಯ ಕೆ.ಎ ಅಬ್ದುಲ್ ಅಝೀಝ್ ಝುಹ್‍ರಿ ಪುಣಚ ಹೇಳಿದರು. ಅವರು ಮಂಗಳೂರಿನ ಮದ್ರಸ ಅದ್ಯಾಪಕರ ವೇದಿಕೆ ವತಿಯಿಂದ ಕುತ್ತಾರು ಮದನಿ ನಗರದಲ್ಲಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಹಯೋಗದಲ್ಲಿ ನಡೆದ ಪರಿಸರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಸ್ಲಾಂ ಧರ್ಮವೆಂದರೆ ಪ್ರಕೃತಿ ಧರ್ಮ, ಇಸ್ಲಾಮಿನ ಹಲವು ಪಾಠಗಳು ಪ್ರಕೃತಿಯನ್ನು ಸಂರಕ್ಷಿಸಲು ಎಚ್ಚರಿಸುತ್ತಿದೆ. ಪರಿಸರವನ್ನು ಸಂಬಂಧವಿಡದೆ ಕಡೆಗಣಿಸಿ ಮುಂದಕ್ಕೆ ಸಾಗುವುದು ಭೂಷಣವಲ್ಲ. ಮದರಸ ಅಧ್ಯಾಪಕರೆಂದಲ್ಲಿ ಕೇವಲ ಸಂದೇಶ ನೀಡುವವರು ಮಾತ್ರವಲ್ಲ, ಪ್ರಾಯೋಗಿಕವಾಗಿ ಮಾಡಿ ತೋರಿಸುವವರು ಎಂದು ಈ ಸಾಮಾಜಿಕ ಕಾರ್ಯದ ಮೂಲಕ ಸಾಬೀತಾಗಿದೆ. ಎಲ್ಲರ ಸಹಕಾರವನ್ನು ಯಾಚಿಸುತ್ತಾ ಸ್ವಸ್ಥ್ಯ ಸಮಾಜ ನಿರ್ಮಿಸಲು ಮದರಸ ಅಧ್ಯಾಪಕರಿಂದ ಪ್ರಯತ್ನವಾಗಿದೆ ಎಂದರು. ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‍ನ ಸಲಹೆಗಾರ ರಫೀಕ್ ಮಾಸ್ಟರ್ ಮಾತನಾಡಿ ಸ್ವಚ್ಛತೆ ಎಂಬುದು ಮುಸ್ಲಿಮನ ಸತ್ಯವಿಶ್ವಾಸದ ಅರ್ಧ ಭಾಗವಾಗಿದೆ. ಸ್ವಚ್ಛ ಭಾರತ…

