Author: UllalaVani

Kannada News From Coastal Karnataka

UN NETWORKS ಉಳ್ಳಾಲ: ಯಾವುದೇ ಭಾಗದಲ್ಲೂ ನಿರ್ಮಾಣವಾಗುವ ಅಥವಾ ಅಭಿವೃದ್ಧಿ ಕಾಣುವ ರಸ್ತೆಗಳು ನಿಮ್ಮದಾಗಿದೆ, ಈ ನಿಟ್ಟಿನಲ್ಲಿ ನಿಮ್ಮೂರಿನ ರಸ್ತೆಗಳ ಕಾಮಗಾರಿ ಸಂದರ್ಭ ಸಂಪೂರ್ಣ ಸಹಕಾರ ನೀಡಿ ಎಂದು ಆಹಾರ ಸಚಿವ ಯು.ಟಿ.ಖಾದರ್ ಹೇಳಿದರು. ಮುನ್ನೂರು ಗ್ರಾಮದ ಪಂಡಿತೌಸ್ ಮುಖ್ಯರಸ್ತೆಯಿಂದ ಸಂತೋಷ್‍ನಗರ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ಮುನ್ನೂರು ಗ್ರಾಮದಲ್ಲಿ ಸಂತೋಷ್‍ನಗರ, ಸುಭಾಷ್‍ನಗರ ರಸ್ತೆ ಅಭಿವೃದ್ಧಿಗೆ ತಲಾ ಐದು ಲಕ್ಷ ಹಾಗೂ ಒಳರಸ್ತೆಗೆ ಹೆಚ್ಚುವರಿ ಐದು ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ. ಕಾಮಗಾರಿ ಆರಂಭಗೊಂಡು ರಸ್ತೆ ಸಂಪೂರ್ಣ ಗಟ್ಟಿಯಾಗುವತನಕ ವಾಹನ ಸಂಚಾರ ನಿಲ್ಲಿಸಿ ಸಹಕಾರ ನೀಡುವುದು ಗ್ರಾಮಸ್ಥರ ಜವಾಬ್ದಾರಿ ಎಂದು ತಿಳಿರಸ್ತೆಸಿದರು. ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯೆ ವಿಲ್ಮಾ ವಿಲ್ಫ್ರೆಡ್ ಡಿಸೋಜ, ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಕಾರ್ಮಿಕ ಘಟಕದ ಅಧ್ಯಕ್ಷ ನಾಸೀರ್ ನಡುಪದವು, ಮುನ್ನೂರು ಗ್ರಾಮ ಪಂಚಾಯಿತಿ ಸದಸ್ಯರಾದ ಹಸೈನಾರ್, ಬಾಸ್ಕರ, ಪುಷ್ಪಾ, ಐರಿನ್, ಮಾಜಿ ಅಧ್ಯಕ್ಷ ಅಬ್ದುಲ್…

Read More

UN NETWORKS ತೊಕ್ಕೊಟ್ಟು: ಪ್ರಸ್ತುತ ದಿನಗಳಿಗೆ ಅನುಗುಣವಾಗಿ ಚರ್ಚ್ ಶತಮಾನೋತ್ಸವ ಸಮಿತಿ ಆಯೋಜಿಸಿರುವ ಕಾರ್ಯಕ್ರಮ ಮಹತ್ವಪೂರ್ಣವಾಗಿದೆ. ಈ ಮೂಲಕ ಎಲ್ಲಾ ಜಾತಿ, ಧರ್ಮದವರು ಒಗ್ಗಟ್ಟಾಗಿ ಬಾಳುವ ಸಂದೇಶ ಸಾರಿದಂತಾಗಿದೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಅಭಿಪ್ರಾಯಪಟ್ಟರು. ತೊಕ್ಕೊಟ್ಟು ಸಂತ ಸೆಬೆಸ್ತಿಯನ್ನರ ಚರ್ಚಿನ ಶತಮಾನೋತ್ಸವದ ಅಂಗವಾಗಿ ಕಲ್ಲಾಪು ಆಡಂಕುದ್ರುವಿನಿಂದ ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಚರ್ಚ್ ತನಕ ಭಾನುವಾರ ಶಾಂತಿ ಹಾಗೂ ಸೌಹಾರ್ದಕ್ಕೆ ಪ್ರತೀಕವಾಗಿ ಹಮ್ಮಿಕೊಳ್ಳಲಾಗಿದ್ದ ಮ್ಯಾರಾಥಾನ್‍ಗೆ ಆಡಂಕುದ್ರುವಿನಲ್ಲಿ ಚಾಲನೆ ನೀಡಿ ಮಾತನಾಡಿದರು. ಸಾವಿರಕ್ಕೂ ಮಿಕ್ಕಿದ ಮಂದಿ ಪಾಲ್ಗೊಂಡಿದ್ದು ದುಷ್ಕತ್ಯ ಎಸಗುವವರಿಗೆ, ಕೋಮು ಭಾವನೆ ಕೆರಳಿಸುವ ಮಂದಿಗೆ ಕಾರ್ಯಕ್ರಮದಿಂದ ಶಾಂತಿ ಮನೋಸ್ಥಿತಿ ನಿರ್ಮಾಣವಾಗಲಿದೆ. ಪ್ರಸ್ತುತ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಅಗತ್ಯ, ಈ ನಿಟ್ಟಿನಲ್ಲಿ ಜಿಲ್ಲೆಗೆ ಮಾದರಿಯಾದಂತಹ ಕಾರ್ಯಕ್ರಮ ತೊಕ್ಕೊಟ್ಟುವಿನಲ್ಲಿ ನಡೆದಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ದಾಯ್ಜಿವಲ್ರ್ಡ್ ಮುಖ್ಯಸ್ಥ ವಾಲ್ಟರ್ ನಂದಳಿಕೆ ಮಾತನಾಡಿ ಸದ್ಯ ಜಿಲ್ಲೆ ಅತ್ಯಂತ ದುರ್ಬಲ ಸ್ಥಿತಿಯನ್ನು ಎದುರಿಸುತ್ತಿದೆ. ಪ್ರತಿನಿತ್ಯ ಶಾಂತಿ ಕದಡುವಂತಹ ಸುದ್ಧಿಗಳನ್ನು ಕೇಳಿ…

Read More

UN NETWORKS ಕೊಲ್ಯ: ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರ ಭಾವನೆಗಳಿಗೆ ಧಕ್ಕೆ ಬಾರದಂತೆ ಅನುಷ್ಠಾನಕ್ಕೆ ತಂದು ಜನರ ಚಿಂತನೆಗಳಿಗೆ ಸ್ಪಂಧಿಸಿರುವ ಯಡಿಯೂರಪ್ಪ ನೇತೃತ್ವದ ಸರಕಾರವನ್ನು ಮತ್ತೆ ರಾಜ್ಯದ ಜನತೆ ಬಯಸುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಅಭಿಪ್ರಾಯಪಟ್ಟರು. ಕೊಲ್ಯ ಸೌಭಾಗ್ಯ ಸದನದಲ್ಲಿ ಬಿಜೆಪಿ ಮಂಗಳೂರು ಕ್ಷೇತ್ರ ಸಮಿತಿ ವತಿಯಿಂದ ಭಾನುವಾರ ನಡೆದ ನವಭಾರತಕ್ಕಾಗಿ ನವಕರ್ನಾಟಕ ಚುನಾವಣಾ ಪ್ರಣಾಳಿಕೆ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಇದೇ ಮೊದಲ ಬಾರಿಗೆ ಬಿಜೆಪ ಚುನಾವಣ ಪ್ರಣಾಳಿಕೆಯಲ್ಲೂ ಹೊಸತನ ತಂದಿದ್ದು ಆ ನಿಟ್ಟಿನಲ್ಲಿ ರಾಜ್ಯ, ಜಿಲ್ಲೆ , ಕ್ಷೇತ್ರ ಮಟ್ಟದಲ್ಲಿ ಅಗತ್ಯವಿರುವ ಕಾರ್ಯಕ್ರಮಗಳ ಕುರಿತಾಗಿ ಪ್ರತಿಯೊಬ್ಬರ ಭಾವನೆ ಚಿಂತನೆಗಳನ್ನು ಪತ್ರವೊಂದರಲ್ಲಿ ಬರೆದು ತಿಳಿಸಬಹುದು. ಯಡಿಯೂರಪ್ಪ ನೇತೃತ್ವ ಸರಕಾರ ಆಡಳಿತಕ್ಕೆ ಬಂದಾಗ ಯಾವ ಕಾರ್ಯಕ್ರಮ ಅಗತ್ಯ ಎಂಬುದನ್ನು ಬಲು ಸುಲಭದಲ್ಲಿ ಅರಿಯಲು ಸಾಧ್ಯವಾಗುತ್ತದೆ. ಆ ಮೂಲಕ ನವಕರ್ನಾಟಕ ನಿರ್ಮಾಣದಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಅಗತ್ಯವಿದ್ದು ಪ್ರತಿಯೊಬ್ಬರ ಚಿಂತನೆಗೆ ಮನ್ನಣೆ ದೊರಕಲಿದೆ ಎಂದರು. ದಶಕದ ಹಿಂದೆ ಪ್ರಪಂಚದಲ್ಲಿ ಚೀನಾ ಏಕ ಪಕ್ಷ ಪಾರಮ್ಯ…

Read More

UN NETWORKS ನಾಟೆಕಲ್: ಮಸೀದಿ ಟ್ಯೂಬ್‍ಲೈಟ್ , ಮನೆಯೊಂದರ ಲೈಟ್ ಮತ್ತು ಮಾಂಸದ ಅಂಗಡಿಗೆ ಹಾನಿಗೈದು ಗಲಭೆಗೆ ಯತ್ನಿಸಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಾಟೆಕಲ್ ಸಮೀಪ ನಡೆದಿದ್ದು, ಸಿಸಿಟಿವಿಯಲ್ಲಿ ಸರೆಸಿಕ್ಕ ದೃಶ್ಯದ ಆಧಾರದಲ್ಲಿ ಸುಳ್ಯ ಮೂಲದ ಇಬ್ಬರನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಾಟೆಕಲ್ ಜಂಕ್ಷನ್ನಿನಲ್ಲಿರುವ ರಕ್ಷೀದಿ ಮಸೀದಿಯಲ್ಲಿ ಘಟನೆ ನಡೆದಿದೆ. ತಡರಾತ್ರಿ ಬೈಕಿನಲ್ಲಿ ಬಂದಿದ್ದ ಇಬ್ಬರು ಕಿರಾತಕರು ಮಸೀದಿಯೊಳಗಡೆ ನುಗ್ಗಿ ಹೊರಹಾಕಿದ್ದ ಟ್ಯೂಬ್ ಲೈಟ್ ಧ್ವಂಸಗೈದು ಮತ್ತೆ ಒಳನುಗ್ಗಿ ಅಲ್ಲಿ ಹಾಕಲಾಗಿದ್ದ ಟ್ಯೂಬ್‍ಲೈಟನ್ನು ಹುಡಿಗೈದು ಪರಾರಿಯಾಗಿದ್ದಾರೆ. ಅಲ್ಲದೆ ಸ್ಥಳದಲ್ಲೇ ಇದ್ದ ಮನೆಯೊಂದರ ಲೈಟ್ ನ್ನೂ ಪುಡಿಗೈದ ಕಿರಾತಕರು ಅಲ್ಲಿ ಸಮೀಪವೇ ಇದ್ದ ಮಾಂಸದ ಅಂಗಡಿಗೆ ಅಳವಡಿಸಲಾಗಿದ್ದ ಟೈಲ್ಸ್ ಅನ್ನೂ ಮುರಿದು ಹಾಕಿದ್ದಾರೆ. ಘಟನೆ ನಂತರ ಜಂಕ್ಷನ್ನಿನಲ್ಲಿ ಅಂಗಡಿಯೊಂದಕ್ಕೆ ಅಳವಡಿಸಲಾಗಿದ್ದ ಸಿಸಿಟಿವಿಯನ್ನು ಮುರಿದು ಬೈಕಿನಲ್ಲಿ ಪರಾರಿಯಾಗಿದ್ದಾರೆ. ಬೆಳಿಗ್ಗೆ ಮಸೀದಿಗೆ ನಮಾಜಿಗೆ ಬಂದ ಸಂದರ್ಭ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತು ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಅಂಗಡಿಯಲ್ಲಿ…

Read More

UN NETWORKS ಕೊಣಾಜೆ : ಕೊಣಾಜೆ ಗ್ರಾಮ ಪಂಚಾಯಿತಿ ಹಾಗೂ ಕೊಣಾಜೆಪದವು ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ನಮ್ಮ ತ್ಯಾಜ್ಯ ನಮ್ಮ ಹೊಣೆ, ನಮ್ಮ ಗ್ರಾಮ ಸ್ವಚ್ಚ ಗ್ರಾಮ ಎಂಬ ಕಲ್ಪನೆಯೊಂದಿಗೆ ಸ್ವಚ್ಚತೆಯ ಬಗ್ಗೆ ಕಾಲ್ನಡಿಗೆ ಜಾಥಾ ಕಾರ್ಯಕ್ರಮವು ಶನಿವಾರ ಕೊಣಾಜೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ಅವರು ಮಾತನಾಡಿ, ಸ್ವಚ್ಚತೆಯ ಬಗ್ಗೆ ಈಗಾಗಲೇ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿಯೊಬ್ಬರ ಮನೆ ಮನದಲ್ಲಿ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿದರೆ ಆರೋಗ್ಯಕರ ಸಮಾಜವಾಗಿ ರೂಪುಗೊಳ್ಳಲಿದೆ ಎಂದರು. ಕೊಣಾಜೆ ಪಂಚಾಯಿತಿ ಅಧ್ಯಕ್ಷ ಶೌಕತ್ ಆಲಿ ಅವರು ಮಾತನಾಡಿ, ಕೊಣಾಜೆ ಗ್ರಾಮದಲ್ಲಿ ಈಗಾಗಲೇ ಸ್ವಚ್ಚತೆಯ ಬಗ್ಗೆ ಹಲವಾರು ಯೋಜನೆಯ ಮೂಲಕ ಜಾಗೃತಿ ಮೂಡಿಸಲಾಗಿದೆ. ಪ್ರತೀ ಮನೆ ಮನೆಯಿಂದ ಕಸಗಳನ್ನು ವಾಹನದ ಮೂಲಕ ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ ಗ್ರಾಮದ ಜನರಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿದೆ. ಅಲ್ಲದೆ ಇಂತಹ ಕಾರ್ಯಕ್ರಮಗಳ ಮೂಲಕ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ಆಗುತ್ತಿದೆ ಎಂದರು.…

Read More

UN NETWORKS ಮುಡಿಪು: ಸ್ವಚ್ಚತೆಯ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಾಗಿದ್ದು ಈ ನಿಟ್ಟಿನಲ್ಲಿ ಯುವ ಸಮುದಾಯ ಸ್ವಚ್ಚತೆಯೊಂದಿಗೆ ಮಾದರಿ ಸಮಾಜ ನಿರ್ಮಿಸಲು ಪಣತೊಡಬೇಕು ಎಂದು ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಅವರು ಹೇಳಿದರು. ಅವರು ಪಜೀರು ಗ್ರಾಮ ಪಂಚಾಯಿತಿ ವತಿಯಿಂದ ಕಂಬ್ಲಪದವು ಬಳಿ ಸ್ವಚ್ಚತೆಗಾಗಿ ನಡೆದ ಕಾಲ್ನಡಿಗೆ ಜಾಥಾವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಇಂದು ದೇಶದೆಲ್ಲೆಡೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಇಂತಹ ಕಾರ್ಯಕ್ರಮಗಳಿಗೆ ನಾವೆಲ್ಲರೂ ಪ್ರೋತ್ಸಾಹಿಸುವುದರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ, ಪಜೀರು ಪಂಚಾಯಿತಿ ಉಪಾಧ್ಯಕ್ಷರಾದ ಜ್ಯೋತಿ, ತಾಲೂಕು ಪಂಚಾಯಿತಿ ಸದಸ್ಯ ನವೀನ್ ಪಾದಲ್ಪಾಡಿ, ಮಾಜಿ ಸದಸ್ಯರಾದ ಉಮ್ಮರ್ ಪಜೀರು, ಪಂಚಾಯಿತಿ ಮಾಜಿ ಅಧ್ಯಕ್ಷರಾದ ಇಂತಿಯಾಝ್, ಪ್ಲೋರಿನ ಡಿಸೋಜ, ನಝೀರ್ ಮೊಯ್ದಿನ್, ಮುಖಂಡರಾದ ಪದ್ಮನಾಭ ನರಿಂಗಾನ, ಸಮೀರ್ ಪಜೀರು, ಸದಸ್ಯರಾದ ರಫೀಕ್ ಮೊದಲಾದವರು ಉಪಸ್ಥಿತರಿದ್ದರು.

Read More

UN NETWORKS ಪಾನೀರ್: ಸಮಾಜದಲ್ಲಿ ಶಾಂತಿ, ಸಮಾಧಾನ, ಸೌಹಾರ್ದತೆ ನೆಲೆ ನಿಲ್ಲುವಂತಾಗಲು ಪ್ರತಿಯೊಬ್ಬರು ಶ್ರಮಿಸಬೇಕಿದೆ, ಇದು ಧಾರ್ಮಿಕ ಹಬ್ಬದ ಸಂದೇಶವೂ ಆಗಿದೆ ಎಂದು ಪಾನೀರ್ ದಯಾಮಾತೆ ಮೆರ್ಸಿಯಮ್ಮನವರ ಇಗರ್ಜಿಯ ಧರ್ಮಗುರು ಫಾ.ಡೆನ್ನಿಸ್ ಸುವಾರೀಸ್ ಅಭಿಪ್ರಾಯಪಟ್ಟರು. ಮಾತೆ ಮೆರ್ಸಿಯಮ್ಮ ಇಗರ್ಜಿಯ ವಾರ್ಷಿಕ ಉತ್ಸವ ಪ್ರಯುಕ್ತ ಭಾನುವಾರ ದೇರಳಕಟ್ಟೆಯಿಂದ ಚರ್ಚ್‍ವರೆಗೆ ಪವಿತ್ರ ಪ್ರಸಾದದ ಮೆರವಣಿಗೆ ಬಳಿಕ ನಡೆದ ಬಲಿಪೂಜೆಯಲ್ಲಿ ಅವರು ಮಾತನಾಡಿದರು. ಚರ್ಚ್‍ನ ವಾರ್ಷಿ ಹಬ್ಬದ ಬಲಿಪೂಜೆ ಪ್ರಯುಕ್ತ ಶಾಂತಿಯ ಸಂದೇಶ ಸಾರಲು ಮೆರವಣಿಗೆ ನಡೆಸಲಾಗಿದೆ, ಭಾಗವಹಿಸಿರುವ ಪ್ರತಿಯೊಬ್ಬರ ಮೇಲೂ ದೇವನ ಶಾಂತಿ, ಸಂದೇಶ ವರ್ಷಿಸಲಿ ಎಂದು ಹಾರೈಸಿದರು. ಜಪ್ಪು ಸಂತ ಜೋಸೆಫ್ ಸೆಮಿನರಿಯ ರೆಕ್ಟರ್ ಫಾ.ಜೋಸೆಫ್ ಮಾರ್ಟಿಸ್, ಮಿಲಾಗ್ರೀಸ್ ಕಾಲೇಜಿನ ಪ್ರಾಂಶುಪಾಲ ಫಾ.ಮೈಕೆಲ್ ಸಾಂತುಮಾಯರ್, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಎಲಿಯಾಸ್ ಡಿಸೋಜ, ಕಾರ್ಯದರ್ಶಿ ಡೆನ್ನಿಸ್ ಗೊನ್ಸಾಲೀಸ್, ಮಾಜಿ ಉಪಾಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ, ಧರ್ಮಭಗಿನಿಯರು ಉಪಸ್ಥಿತರಿದ್ದರು. `ಪಾನೀರ್ ದಯಾಮೇತೆ ಮೆರ್ಸಿಯಮನವರ ಇಗರ್ಜಿ ಪುರಾತನವಾಗಿದ್ದು, ಇತಿಹಾಸವನ್ನೂ ಹೊಂದಿದೆ, ಇದರ ವಾರ್ಷಿಕ ಹಬ್ಬದ ಪೂರ್ವಭಾವಿಯಾಗಿ…

Read More

UN Networks ಉಳ್ಳಾಲ: ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮುಸ್ಲಿಮರ ಮತಗಳನ್ನು ಪಡೆದು ವಿಜಯಿಯಾದ ಸಚಿವ ರಮಾನಾಥ ರೈ ಕಳೆದ ನಾಲ್ಕು ವರ್ಷಗಳಲ್ಲಿ ಮುಸ್ಲಿಮರ ಸಮಸ್ಯೆಗಳಿಗೆ ಸ್ಪಂಧಿಸದೆ ಸಮುದಾಯದ ಕೆಂಗಣ್ಣಿಗೆ ಗುರಿಯಾದ್ದು ಇದನ್ನು ಮುಚ್ಚಿಡಲು ದ.ಕ ಜಿಲ್ಲಾ ಕಾಂಗ್ರೆಸ್ ಸಂಘಟನೆಯ ಮೇಲೆ ನಿರಾಧಾರ ಆರೋಪ ಮಾಡುತ್ತಿದೆ ಎಂದು ಪಾಪ್ಯುಲರ್ ಫ್ರಂಟ್ ಜಿಲ್ಲಾದ್ಯಕ್ಷ ನವಾಝ್ ಉಳ್ಳಾಲ ತಿಳಿಸಿದ್ದಾರೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ನನ್ನ ಮತ್ತು ಪ್ರಭಾಕರ್ ಭಟ್ ನಡುವೆ ನೇರ ಸ್ಪರ್ಧೆ ಎಂದು ಹೇಳಿ ಮುಸ್ಲಿಮರ ಮತಗಳನ್ನು ಪಡೆಯಲು ಸಚಿವರು ಯಶಸ್ವಿಯಾಗಿದ್ದರು. ಆದರೆ ಚುನಾವಣೆಯಲ್ಲಿ ವಿಜಯಿಯಾದ ನಂತರ ಪ್ರಭಾಕರ್ ಭಟ್ ನಿರಂತರವಾಗಿ ಮುಸ್ಲಿಮರ ವಿರುದ್ಧ ಕೋಮು ಪ್ರಚೋದನಕಾರಿ ಭಾಷಣ ಮಾಡಿ ಗಲಭೆಗಳಿಗೆ ನೇರ ಕಾರಣವಾಗಿದ್ದರೂ ಕನಿಷ್ಟ ಪಕ್ಷ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲು ಉಸ್ತುವಾರಿ ಸಚಿವರಿಗೆ ಸಾಧ್ಯವಾಗಿಲ್ಲ . ಇದೀಗ ಮುಸ್ಲಿಮರ ಋಣ ತೀರಿಸಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿ ಮತ್ತೆ ಮೋಸ ಮಾಡಲು ಹೊರಟಿದ್ದಾರೆ. ವರ್ಷಗಳ ಹಿಂದೆ ನಡೆದ ಕಾಂಗ್ರೆಸ್ ಕಾರ್ಯಕರ್ತ…

Read More

UN Networks ಉಳ್ಳಾಲ: ಎಂಸಿ ಗ್ರೇಡ್ ಇನ್ಫೋಟೆಕ್ ಪ್ರೈ. ಲಿ. ಇವರ `ಏಷಿಯನ್ ಸಾಫ್ಟ್’ ಸಾಫ್ಟ್‍ವೇರ್ ಡೆವಲಪ್ಪಿಂಗ್ ಕಚೇರಿಯನ್ನು ದೇರಳಕಟ್ಟೆ ಪುಂಚಮೆ ಕಾಂಪ್ಲೆಕ್ಸ್‍ನಲ್ಲಿ ಶನಿವಾರ ಸಾರಿಗೆ ಸಚಿವ ಹೆಚ್.ಎಂ ರೇವಣ್ಣ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ರಾಜ್ಯದ ಯುವಕರು ಸ್ವಂತ ಕಂಪೆನಿಗಳನ್ನು ಸ್ಥಾಪಿಸುವ ಮೂಲಕ ಅನೇಕ ಯುವಕರಿಗೆ ಮಾದರಿಯಾಗಲಿ. ಸಂಸ್ಥೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮ ಹೆಸರನ್ನು ಪಡೆಯಲಿ. ಜನರಿಗೆ ಉತ್ತಮ ಸೇವೆಯನ್ನು ಒದಗಿಸುವ ಮುಖೇನ ಗ್ರಾಮೀಣ ಭಾಗದ ಯುವಕರಿಗೆ ಕೆಲಸವನ್ನು ಒದಗಿಸುವ ಕಾರ್ಯವಾಗಿದೆ ಎಂದು ಹಾರೈಸಿದರು. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಮಾತನಾಡಿ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ಯುವಕನೋರ್ವ ಸ್ವಂತ ಸಂಸ್ಥೆಯನ್ನು ಕಟ್ಟುವ ಮೂಲಕ ರಾಜ್ಯ ಸರಕಾರದ ಚಿಂತನೆಗಳನ್ನು ಪೂರೈಸಿದಂತಾಗಿದೆ. ಯುವಕರಿಗೆ ಸ್ಟಾರ್ಟ್‍ಅಪ್ ಮತ್ತು ಸ್ಕಿಲ್ ಟ್ರೈನಿಂಗ್‍ಗೆ ಹೆಚ್ಚಿನ ಒತ್ತನ್ನು ನೀಡುತ್ತಿದೆ. ಸಂಸ್ಥೆ ರಾಜ್ಯ, ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಚರಿಸಲಿ ಎಂದು ಶುಭಹಾರೈಸಿದರು. ಮಂಜನಾಡಿ ಯತೀಂ ಖಾನ ಅಧ್ಯಕ್ಷ ಅಬ್ಬಾಸ್ ಉಸ್ತಾದ್ ದುಆ ನೆರವೇರಿಸಿದರು.…

Read More

UN NETWORKS ಕೈರಂಗಳ : ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ಇದರ 6ನೇ ವರ್ಷದ ಸವಿನೆನಪಿಗಾಗಿ ನರಿಂಗಾನ ಗ್ರಾಮದ ಡಿ.ಜಿ ಕಟ್ಟೆ ಎಂಬಲ್ಲಿ ನಿರ್ಮಿಸಿದ ಸಾರ್ವಜನಿಕ ಬಸ್ಸು ತಂಗುದಾಣವನ್ನು ತೋಟಾಲ್ ಜುಮಾ ಮಸೀದಿಯ ಖತೀಬ ಮುಹಿಯ್ಯದ್ದೀನ್ ಸ ಅದಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಹಂತ ಹಂತವಾಗಿ ಬೆಳೆದು ಬಂದ ಅಲ್-ಅಮೀನ್ ಸಂಘಟನೆ. ಬಸ್ ತಂಗುದಾನ ನಿರ್ಮಿಸಿ ಊರಿಗೆ ನೆರಳು‌ ನೀಡುವ ಮೂಲಕ ರಾಜ್ಯಕ್ಕೆ ಮಾದರಿ ಸಂಘಟನೆಯಾಗಿದೆ ಅಲ್-ಅಮೀನ್ ಫ್ರೆಂಡ್ಸ್ ಎಂದು ಹೇಳಿದರು. ಕರ್ನಾಟಕ ಬ್ಯಾಂಕ್ ಕೈರಂಗಳ ಬ್ರಾಂಚ್ ಮೆನೇಜರ್ ವಾಸುದೇವ್ ಮಾತನಾಡಿ ಪ್ರಯಾಣಿಕರಿಗೆ ನೆರಳು ನೀಡುವ ಮಹತ್ತರ ಕಾರ್ಯ ಮಾಡಿದ ಅಲ್-ಅಮೀನ್ ಸಂಸ್ಥೆ ಶ್ಲಾಘನೀಯ,ಸಂಸ್ಥೆಯು ಸೌಹಾರ್ದತೆಯ ಪ್ರತೀಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಿಜೆಪಿ ಮಂಗಳೂರು ವಿಧಾನ ಸಭಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್‌ ಮಾತನಾಡಿ ದೇಶ ಯುವ ಸಮೂಹ ಇಂತಹ ಸಮಾಜಪರ ಕಾರ್ಯದಲ್ಲಿ ತೂಡಗಿಸಿದರೆ. ಭಾರತ ದೇಶ ಶ್ರೇಷ್ಠವಾಗಲು ಸಾಧ್ಯ. ಅಲ್-ಅಮೀನ್ ನಂತಹ ಸಂಘಟನೆಗಳು ಹಳ್ಳಿ ಹಳ್ಳಿಯಲ್ಲಿ ಹುಟ್ಟಿ ಬರಲಿ ಎಂದು…

Read More