UN NETWORKS ತೊಕ್ಕೊಟ್ಟು: ಮುಂದಿನ ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದ ಶಾಸಕ ಹಾಗೂ ಸಚಿವ ಯು.ಟಿ. ಖಾದರ್ ಅವರ ಚುನಾವಣಾ ಪ್ರಚಾರ ಕಾರ್ಯ ನಿರ್ವಿಘ್ನವಾಗಿ ನಡೆಯಲಿ ಮತ್ತು ಕ್ಷೇತ್ರದಲ್ಲಿ ಅತ್ಯಧಿಕ ಮತಗಳಿಂದ ಜಯಿಸಲಿ ಎಂದು ತೊಕ್ಕೊಟ್ಟು ಓವರ್ ಬ್ರಿಡ್ಜ್ ಕೊರಗಜ್ಜ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಶ್ರೀ ಕ್ಷೇತ್ರದ ಗೌರವ ಸಲಹೆಗಾರ ಗೌರವ ಸಲಹೆಗಾರ ರೋಹಿತ್ ಉಳ್ಳಾಲ್ ಮಾತನಾಡಿ ಕೊರಗಜ್ಜ ಸೇವಾ ಸಮಿತಿಯ ಆಶ್ರಯದ ಈ ಸನ್ನಿಧಿಯ ಅಭಿವೃದ್ಧಿಯಲ್ಲಿ ಯು.ಟಿ.ಖಾದರ್ ಅವರ ಸಹಕಾರ ಮಹತ್ವದ್ದು, ಕಳೆದ ಬಾರಿ ಚುನಾವಣಾ ಸಂದರ್ಭದಲ್ಲಿ ವಿಸೇಷ ಪ್ರಾರ್ಥನೆ ಸಲ್ಲಿಸಿದ್ದು, ಸಚಿವರಾಗಿ ಆಯ್ಕೆಯಯಾಗಲಿ ಎಂದು ವಿಶೇಷ ಪ್ರಾರ್ಥನೆ ನಡೆಸಿದ್ದವು ಇದೀಗ ಚುನಾವಣೆ ಹಿನ್ನಲೆಯಲ್ಲಿ ಖಾದರ್ ಅವರ ಪ್ರಚಾರ ಕಾರ್ಯ ನಿರ್ವಿಘ್ನವಾಗಿ ನಡೆಯಲಿ ಎಂದ ಅವರು ಈ ಕ್ಷೇತ್ರಕ್ಕೆ ಸರ್ವಧರ್ಮದವರು ಬಂದು ಸೇವೆ ನೀಡುತ್ತಿದ್ದು, ಎಲ್ಲರಿಗೂಈ ಸಮಾನ ಆದ್ಯತೆ ನೀಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಸಚಿವ ಯು.ಟಿ. ಖಾದರ್, ಉಮಾಮಹೇಶ್ವರೀ ದೇವಸ್ಥಾನದ ಮೊಕ್ತೇಸರ ಈಶ್ವರ…
Author: UllalaVani
UN NETWORKS ಕೊಣಾಜೆ: ಮಾತಿನ ಮೂಲಕವೇ ಮೆರೆಯುತ್ತಿರುವ ತಾಳಮದ್ದಳೆ, ಅದೊಂದು ಆಕರ್ಷಕ ಮತ್ತು ಶ್ರೀಮಂತವಾದ ಕಲೆಯಾಗಿದೆ. ಪುರಾಣಲೋಕವನ್ನು ಮತ್ತೆ ಮತ್ತೆ ನಮ್ಮ ಮುಂದೆ ತೆರೆದಿಡುವ ತಾಳಮದ್ದಳೆಯಂತಹ ಕಲೆಗೆ ಸರಿಸಮಾನವಾದಂತಹ ಕಲೆ ಬೇರೊಂದಿಲ್ಲ. ತಾಳೆ ಮದ್ದಳೆಯ ಅರ್ಥಧಾರಿಗಳು ಇಂದು ವಿಮರ್ಶೆಗಳಿಗೆ ಒಗ್ಗಿಕೊಂಡು ಶ್ರಿಮಂತ ಕಲೆಯ ಬೆಳವಣಿಗೆಗೆ ಸಾಕ್ಷಿಯಾಗಬೇಕು ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪ್ರೊ.ಎಂ.ಎಲ್.ಸಾಮಗ ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಕಾಸರಗೋಡು ಇದರ ಆಶ್ರಯದಲ್ಲಿ ಶನಿವಾರ ಮಂಗಳೂರು ವಿವಿಯ ಹಳೆಸೆನೆಟ್ ಸಭಾಂಗಣದಲ್ಲಿ ನಡೆದ ಯಕ್ಷಗಾನ ತಾಳಮದ್ದಳೆ ಅರ್ಥಗಾರಿಕಾ ಶಿಬಿರ ರಂಗ-ಪ್ರಸಂಗ `ಅರ್ಥಾಂತರಂಗ-6′ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ತಾಳಮದ್ದಳೆಯಲ್ಲಿ ಒಂದೇ ಮಾದರಿ ಅಂತ ಇಲ್ಲ. ಪ್ರಸಂಗಗಳು, ಪಾತ್ರಧಾರಿಗಳು ಬದಲಾಣೆಗಳಾದಂತೆ ಕತೆಯ ವಿಶ್ಲೇಷಣೆಯಲ್ಲಿ, ಸ್ವರೂಪದಲ್ಲಿ ಬದಲಾವಣೆಗಳಾಗುವುದನ್ನು ನಾವು ಗಮನಿಸುತ್ತೇವೆ. ಇದು ತಾಳಮದ್ದಳೆ ಅರ್ಥಗಾರಿಕೆಯ ವಿಭಿನ್ನತೆಯೂ, ವೈಶಿಷ್ಟ್ಯತೆಯ ಆಗಿರಬಹುದು. ತಾಳಮದ್ದಳೆಯ…
UN NETWORKS ಕೈರಂಗಳ : ಕೈರಂಗಳ ಗ್ರಾಮದ ಪುಣ್ಯಕೋಟಿ ನಗರದಲ್ಲಿ ಆಮರಣಾಂತ ಉಪವಾಸಕ್ಕೆ ಭೇಟಿ ನೀಡಿದ್ದ ಕಲ್ಲಡ್ಕ ಭಟ್ ಅವರು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಧರ್ಮ ವಿರೋಧಿ ಭಾಷಣ ಮಾಡಿರುವುದರ ವಿರುದ್ಧ ಚುನಾವಣಾ ಆಯೋಗ ಮಾಹಿತಿ ಸಂಗ್ರಹಿಸಿ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದೆ. ಎರಡು ದಿನಗಳ ಕಾಲ ಆಮರಣಾಂತ ಉಪವಾಸದಲ್ಲಿ ಭಾಗಿಯಾಗಿದ್ದ ಸಂದರ್ಭ ಭಟ್ ಅವರು `ದನದ ಮಾಂಸ ತಿನ್ನುವ ಸಚಿವರನ್ನು ದೇವಸ್ಥಾನದೊಳಕ್ಕೆ ಬಿಡಬಾರದು. ಗೋ ದರೋಡೆಗೆ ಕ್ರಮಕೈಗೊಳ್ಳದೆ ಪ್ರೋತ್ಸಾಹಿಸುವಂತಹ ಸರಕಾರದ ಮತ್ತು ಭಾಗದ ಶಾಸಕರ ಬದಲಾವಣೆಯಾಗಬೇಕಿದೆ ಅಂದಿದ್ದರು. ಮರುದಿನ ಅಲ್ಲೇ ಖಾಸಗಿ ಜಾಗದಲ್ಲಿ ಮಾತನಾಡಲು ಅವಾಶವಿದೆ ಎಂದು ಅನ್ನುತ್ತಾ ನೀತಿ ಸಂಹಿತೆಯ ವಿರುದ್ಧ ನಿಂದನಾತ್ಮಕ ಹೇಳಿಕೆಯನ್ನು ನೀಡಿದ್ದರು. ಇದರಿಂದ ಚುನಾವಣಾ ಆಯೋಗ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಸಾರ್ವಜನಿಕರಲ್ಲಿ ಗೊಂದಲ ಮತ್ತು ಅನುಮಾನ ಹುಟ್ಟಿಸುವಂತೆ ಭಟ್ ಅವರ ಭಾಷಣ ಪ್ರೇರೇಪಿಸಿದೆ ಎಂದು ಚುನಾವಣಾ ಆಯೋಗ ಆರೋಪಿಸಿತ್ತು. ಅದರಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಾದ…
UN NETWORKS ಕೈರಂಗಳ: ಕೈರಂಗಳದ ಪುಣ್ಯಕೋಟಿನಗರದಲ್ಲಿನ ಅಮೃತಧಾರಾ ಗೋಶಾಲೆಯಲ್ಲಿ ಕೈಗೊಳ್ಳಲಾದ ಆಮರಣಾಂತ ಉಪವಾಸ 7ನೇ ದಿನವನ್ನು ಪೂರೈಸಿದ್ದು, ಇದೀಗ 8ನೇ ದಿನಕ್ಕೆ ಕಾಲಿರಿಸುವತ್ತ ಮುಂದಾಗಿದೆ. ಉಪವಾಸ ಸತ್ಯಾಗ್ರಹದ ನೇತೃತ್ವ ವಹಿಸಿಕೊಂಡಿರುವ ಟಿ.ಜಿ.ರಾಜಾರಾಂ ಭಟ್ ಅವರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿದ್ದು, ಮಲಗಿದ ಸ್ಥಳದಿಂದ ಏಳಲಾಗದ ಸ್ಥಿತಿಯಲ್ಲಿದ್ದಾರೆ. ಆರೋಗ್ಯ ಪರೀಕ್ಷೆ ನಡೆಸುತ್ತಿರುವ ಮುಡಿಪು ಸರಕಾರಿ ವೈದ್ಯರು ಆರೋಗ್ಯದಲ್ಲಿ ವ್ಯತ್ಯಾಸ ಇರುವ ಕುರಿತು ತಿಳಿಸಿದ್ದು, ಮುಂಜಾಗ್ರತಾ ವಹಿಸುವಂತೆ ಸೂಚಿಸಿದ್ದಾರೆ. ಎಸ್‍ಸಿಡಿಸಿಸಿ ನಿರ್ದೇಶಕರಾಗಿರುವ ಟಿ.ಜಿ.ರಾಜಾರಾಂ ಭಟ್ ಅವರನ್ನು ಭೇಟಿ ಮಾಡಿ ಉಪವಾಸ ಕೈಬಿಡಲು ಎಸ್ ಡಿಸಿಸಿ ಅಧ್ಯಕ್ಷ ರಾಜೇಂದ್ರ ಕುಮಾರ್ ಅವರು ಶನಿವಾರ ಬೆಳಿಗ್ಗೆ ಉಪವಾಸ ಸ್ಥಳಕ್ಕೆ ಭೇಟಿ ನೀಡಿದರೂ, ಭಟ್ ಅವರು ಸತ್ಯಾಗ್ರಹ ಹಿಂಪಡೆಯಲು ಹಿಂದೇಟು ಹಾಕಿದ್ದಾರೆ. ಸಂಜೆ ವೇಳೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಸ್ಥಳಕ್ಕಾಗಮಿಸಿ ಭಟ್ ಆರೋಗ್ಯ ಸ್ಥಿತಿಯನ್ನು ಗಮನಿಸಿ ಉಪವಾಸ ಹಿಂಪಡೆಯುವಂತೆ ಕೇಳಿಕೊಂಡರೂ ಅವರು ಒಪ್ಪಲಿಲ್ಲ. ಬಳಿಕ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್ ಅವರು ರಾಷ್ಟ್ರೀಯ…
UN NETWORKS ಉಳ್ಳಾಲ: ಅಲ್ಲಿ ಎದ್ದು ಬಿದ್ದು ಕೆಸರಿನಲ್ಲಿ ಹೊರಳಾಡಿ ವಾಹನವನ್ನು ದೂಡಿಕೊಂಡು ಹೋದವರೇ ಜಾಸ್ತಿ. ಮೈಪೂರ್ತಿ ಕೆಸರು ಮಣ್ಣನ್ನು ಹೊತ್ತು ವಾಪಸ್ಸು ಮನೆ ಸೇರುವಂತಾದರೆ, ಇನ್ನು ಕೆಲವರು ಅದೇ ಬಟ್ಟೆಯಲ್ಲಿ ವಾಹನದಲ್ಲಿ ಪ್ರಯಾಣಿಸುವಂತಾಯಿತು. ಇದು ಅಕಾಲಿಕವಾಗಿ ಭಾನುವಾರ ಸಂಜೆ ಸುರಿದ ಮಳೆಯಿಂದಾಗಿ ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆಯಲ್ಲಿನ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ದೇರಳಕಟ್ಟೆ ಆಸ್ಪತ್ರೆ ಎದುರಿನ ವಾಸ್ತವ ಸ್ಥಿತಿ. ತಿಂಗಳ ಹಿಂದೆ ದೇರಳಕಟ್ಟೆಯ ಫಾದರ್ ಮುಲ್ಲರ್ಸ್ ಆಸ್ಪತ್ರೆಯಿಂದ ನಿತ್ಯಾನಂದನಗರದಲ್ಲಿರುವ ಬೇರೀಸ್ ಮಾಲ್ ವರೆಗಿನ ರಾಜ್ಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ನಡೆಯುತ್ತಿದೆ. ಅಗಲೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಎರಡು ಭಾಗದ ರಸ್ತೆಗೂ ಮಣ್ಣು ಹಾಕಿ ಎತ್ತರ ಮಾಡಲಾಗಿತ್ತು. ಒಂದು ಬದಿಯ ರಸ್ತೆಯಲ್ಲಿ ಮಣ್ಣನ್ನು ಶೇಖರಿಸಿದ್ದರಿಂದಾಗಿ ಏಕಮುಖ ಸಂಚಾರ ಮಾತ್ರವಿತ್ತು. ಭಾನುವಾರ ಸಂಜೆ ಸುರಿದ ಅಕಾಲಿಕ ಮಳೆಯಿಂದಾಗಿ ಮಣ್ಣು ಕೆಸರಾಗಿ ವಾಹನಗಳು ತೆರಳುವಾಗ ಜಾರಲು ಆರಂಭವಾಗಿತ್ತು. ಹಲವು ಬಸ್ಸುಗಳು ಅರಿವಿಲ್ಲದೆ ತೆರಳಿದ್ದರಿಂದಾಗಿ ಮಾರ್ಗಮಧ್ಯೆ ಜಾರಲು ಆರಂಭಿಸಿದರಿಂದಾಗಿ ಮುಂದೆ ಪ್ರಯಾಣಿಸಲು ಅಸಾಧ್ಯವಾಯಿತು. ದ್ವಿಚಕ್ರ ವಾಹನ ಸವಾರರು ಹಲವು…
UN NETWORKS ಉಳ್ಳಾಲ: ಮುಸ್ಲಿಂ ಸಮುದಾಯ ಕೇವಲ ಮತ ಹಾಕಲು, ಬ್ಯಾನರ್, ಬಂಟಿಂಗ್ಸ್ ಕಟ್ಟುವ ಪ್ರಭಾವಿ ರಾಜಕಾರಣಿಗಳ ಗುಲಾಮರಾಗದೆ ತಮ್ಮ ಹಕ್ಕು ಪಡೆಯಲು ಮುಂದಾಗಬೇಕು ಎಂದು ಎಸ್‍ಡಿಪಿಐ ರಾಜ್ಯ ಸಮಿತಿ ಸದಸ್ಯ ಅನ್ವರ್ ಸಾದಾತ್ ಅಭಿಪ್ರಾಯಪಟ್ಟರು. ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ದೇರಳಕಟ್ಟೆ ಜಂಕ್ಷನ್‍ನಲ್ಲಿ ನಡೆದ ಚುನಾವಣಾ ಪೂರ್ವ ಸಮಾವೇಶದಲ್ಲಿ ಮುಖ್ಯ ಭಾಷಣ ಮಾಡಿದರು. ಕರ್ನಾಟಕದಲ್ಲಿ ದಲಿತರ ಬಳಿಕ ಮುಸ್ಲಿಮರ ಸಂಖ್ಯೆ ಅಧಿಕವಾಗಿದ್ದು, ಕೆಲವೇ ಸಂಖ್ಯೆಯಲ್ಲಿರುವ ಮುಸ್ಲಿಂ ಶಾಸಕರು ಅನ್ಯಾಯದ ವಿರುದ್ಧ ಮಾತನಾಡುತ್ತಿಲ್ಲ. ಉತ್ತರ ಪ್ರದೇಶದಲ್ಲಿ ಸೈಕಲ್‍ನಲ್ಲಿ ಪ್ರಯಾಣಿಸಿದ ಕಾಂಶೀರಾಂ ಅವರು ಕಟ್ಟಿದ ಬಿಎಸ್‍ಪಿ ಶೇ.3 ಮತದಿಂದ ಆರಂಭಿಸಿದ ಚುನಾವಣಾ ಪ್ರಯಾಣ ಶೇ.45ಕ್ಕೆ ತಲುಪಿದೆ. ನಾಲ್ಕು ಬಾರಿ ಬಿಎಸ್‍ಪಿ ಆಡಳಿತ ನಡೆಸಿದೆ ಎಂದಾದರೆ, ಕರ್ನಾಟಕದಲ್ಲಿ ಇದು ಎಸ್‍ಡಿಪಿಐನಿಂದ ಸಾಧ್ಯವಿದ್ದು, ಜನರ ಬೆಂಬಲ ಅಗತ್ಯ ಎಂದರು. ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮಾತನಾಡಿ, ಚುನಾವಣಾ ಅಯೋಗ 28 ಲಕ್ಷ ಖರ್ಚನ್ನು ನಿಗದಿಪಡಿಸಿದೆ, ಅಷ್ಟೇ ಹಣ ಖರ್ಚು ಮಾಡಿ ಬಿಜೆಪಿ ಮತ್ತು…
UN NETWORKS ಉಳ್ಳಾಲ: ಶಿಕ್ಷಣ ಸಂಸ್ಥೆಗಳು ಮಾಕ್ರ್ಸ್, ಪ್ಲೇಸ್‍ಮೆಂಟ್ ಹಾಗೂ ಶೈಕ್ಷಣಿಕ ಅಭಿವೃದ್ಧಿಯಲ್ಲೇ ಹೆಚ್ಚಾಗಿ ತೊಡಗಿಸಿಕೊಂಡು , ಸಂಶೋಧನೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಎಂದು ವಿಧಾನಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಅಭಿಪ್ರಾಯಪಟ್ಟರು. ಅವರು ನಿಟ್ಟೆ ವಿಶ್ವವಿದ್ಯಾಲಯದ ವಿಜ್ಞಾನ, ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ಮೂರನೇ ವಾರ್ಷಿಕೋತ್ಸವ ಸಮಾರಂಭವನ್ನು ದೇರಳಕಟ್ಟೆಯ ಕ್ಷೇಮ ಆಡಿಟೋರಿಯಂನಲ್ಲಿ ಗುರುವಾರ ಉದ್ಘಾಟಿಸಿ ಮಾತನಾಡಿದರು. ಮುಪ್ಪಾದರೂ ಒಳಗಿರುವ ಬಾಲ್ಯವನ್ನು ಸಾಯಲು ಬಿಡಬಾರದು. ಜ್ಞಾನೋದಯಕ್ಕೆ ಶಿಕ್ಷಣ ಸಹಕಾರಿ. ಶಿಕ್ಷಣದ ಜತೆಗೆ ಬಾಲ್ಯವನ್ನು ಮೈಗೂಡಿಸಿಕೊಳ್ಳುತ್ತಾ ಸಂಶೋಧನೆಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಾ ವಿದ್ಯಾರ್ಥಿಗಳು ಮುಂದುವರಿಯಬೇಕು. ಶಿಕ್ಷಣ ಸಂಸ್ಥೆಗಳು ಸಂಶೋಧನೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದು ದೇಶದ ಅಭಿವೃದ್ಧಿಗೂ ಮಾರಕವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಂಶೋಧನೆಗಳಿಗೆ ಪ್ರತ್ಯೇಕ ವಿಭಾಗವನ್ನು ಸ್ಥಾಪಿಸಿ ಸಂಶೋಧಕರಿಗೆ ಪ್ರೋತ್ಸಾಹ ನೀಡುವ ಕಾರ್ಯ ನಿಟ್ಟೆ ಸಂಸ್ಥೆಯಿಂದ ಆಗುತ್ತಿರುವುದು ಶ್ಲಾಘನೀಯ ಎಂದರು. ಮುಖ್ಯ ಅತಿಥಿಗಳಾಗಿ ನಿಟ್ಟೆ ವಿ.ವಿ ಸಹಕುಲಪತಿ ಡಾ| ಎಂ.ಯಸ್.ಮೂಡಿತ್ತಾಯ ಭಾಗವಹಿಸಿದ್ದರು. ವಿದ್ಯಾರ್ಥಿ ಕೌನ್ಸಿಲ್ ಅಧ್ಯಕ್ಷೆ ರಿಯಾ ಡಿಸೋಜಾ ಅತಿಥಿಗಳ ಪರಿಚಯಿಸಿದರು. ನಿಟ್ಟೆ ವಿಶ್ವವಿದ್ಯಾಲಯದ ವಿಜ್ಞಾನ,…
UN NETWORKS ಉಳ್ಳಾಲ: ಪ್ರವಾದಿಯವರು ಸಾರಿದ ತತ್ವಾದರ್ಶಗಳನ್ನು ಪಾಲಿಸಿಕೊಂಡು ಜೀವಿಸಬೇಕಾದ ಕರ್ತವ್ಯ ನಮ್ಮದಾಗಿದೆ ಎಂದು ಪೇರೋಡ್ ಅಬ್ದುಲ್ ರ್ರಹ್ಮಾನ್ ಸಖಾಫಿ ಹೇಳಿದರು. ಅವರು ಎಸ್ಸೆಸ್ಸೆಫ್ ಯೇನೆಪೊಯ ಕ್ಯಾಂಪಸ್ ಶಾಂತಿಬಾಗ್ ಶಾಖೆ ಇದರ ಆಶ್ರಯದಲ್ಲಿ ದೇರಳಕಟ್ಟೆ ಯೇನೆಪೊಯ ಮೆಡಿಕಲ್ ಕಾಲೇಜು ಬಳಿ ಜರಗಿದ ಬೃಹತ್ ಹುಬ್ಬುರ್ರಸೂಲ್ ಕಾನ್ಪರೆನ್ಸ್ ಭಾಗವಹಿಸಿ ಮಾತನಾಡಿದರು. ಯೇನೆಪೊಯ ಅಬ್ದುಲ್ಲ ಕುಂಞ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಬ್ಬಾಸ್ ಉಸ್ತಾದ್ ಉದ್ಘಾಟಿಸಿದರು. ಜುನೈದ್ ತಂಙಳ್, ಸಿದ್ದೀಕ್ ಮೋಂಟುಗೋಳಿ, ಉಸ್ಮಾನ್ ಸಅದಿ ಪಟ್ಟೋರಿ, ಮುನೀರ್ ಅಹ್ಮದ್ ಸಖಾಫಿ, ಅಬೂಬಕರ್ ಸಿದ್ದೀಕ್ ಝುಹ್ರಿ, ಉಮರ್ ಸಖಾಫಿ, ಅಬ್ದುಲ್ ಅಝೀಝ್ ಝುಹ್ರಿ ಪುಣಚ, ಏಷ್ಯನ್ ಬಾವಾ, ಅಲ್ತಾಫ್ ಕುಂಪಲ, ಮುಹಮ್ಮದ್, ಹನೀಫ್, ಅಬ್ದುಲ್ ಅಝೀಝ್ ಮೊದಲಾದವರು ಭಾಗವಹಿಸಿದ್ದರು. ಎಸ್.ಎಂ.ಇಲ್ಯಾಸ್ ಸಖಾಫಿ ಸ್ವಾಗತಿಸಿದರು. ಇರ್ಫಾನ್ ಎ.ಎಂ. ವಂದಿಸಿದರು.
UN NETWORKS ಉಳ್ಳಾಲ: ಪದವು ಮೇಗಿನ ಮನೆ ರಘುರಾಮ ಆಳ್ವ (78) ಅವರು ಅಸೌಖ್ಯದಿಂದ ಮಂಗಳವಾರ ಸ್ವಗೃಹದಲ್ಲಿ ನಿಧನರಾದರು. ಅವರು ಎರ್ಮಾಳು ತೆಂಕ ಸರಕಾರಿ ಹಿರಿಯ ಶಾಲೆಯಲ್ಲಿ ಮುಖ್ಯ ಅಧ್ಯಾಪಕರಾಗಿ ಹಾಗೂ ಮಂಗಳೂರು ಕಾರ್ ಸ್ಟ್ರೀಟ್ ಜೂನಿಯರ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುತ್ತಾರೆ. ನಂತರ ಕೆಮ್ಮಣ್ಣುಗುಂಡಿ ಜ್ಯೂನಿಯರ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದರು. ಇದಲ್ಲದೆ ಕಲ್ಲಾಪು ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ವ್ಯವಸ್ಥಾಪಕರಾಗಿದ್ದರು. ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
UN NETWORKS ಸೋಮೇಶ್ವರ: ಜಿಲ್ಲೆಯಲ್ಲಿ ಗೋಕಳ್ಳತನ ಸಂಪೂರ್ಣವಾಗಿ ನಿಲ್ಲಬೇಕು ಮತ್ತು ಅಮೃತಧಾರ ಗೋಶಾಲೆಯ ಗೋಕಳವು ಮಾಡಿದ ಗೋಕಳ್ಳರಿಗೆ ಕಠಿಣ ಶಿಕ್ಷೆಯಾಗಬೇಕು ನಾಡಿನಾದ್ಯಂತ ಗೋಸಂರಕ್ಷಣೆಯಾಗಬೇಕು ಈ ನಿಟ್ಟಿನಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಸಹ ಸಂಘಟನೆಗಳ ಸಹಯೋಗದೊಂದಿಗೆ ಸಾಮೂಹಿಕ ಪ್ರಾರ್ಥನೆಯನ್ನು ಉಳ್ಳಾಲ ವ್ಯಾಪ್ತಿಯ ಎಲ್ಲಾ ದೇವಸ್ಥಾನಗಳ ದೈವಸ್ಥಾನ ಮತ್ತು ಮಂದಿರಗಳಲ್ಲಿ ಯಶಸ್ವಿಯಾಗಿ ನಡೆಸಿದೆ ಎಂದು ವಿಶ್ವಹಿಂದೂ ಪರಿಷತ್‍ನ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್‍ವೆಲ್ ತಿಳಿಸಿದರು. ಪುಣ್ಯಕೋಟಿ ಅಮೃತಾಗೋಶಾಲೆಯ ಗೋಕಳ್ಳತನಕ್ಕೆ ಸಂಬಂಧಿಸಿದಂತೆ ಕಳೆದ ಆರು ದಿನಗಳಿಂದ ನಡೆಯುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ಮತ್ತು ನಾಡಿನಾದ್ಯಂತ ಗೋರಕ್ಷಣೆಗಾಗಿ ಶುಕ್ರವಾರ ಉಳ್ಳಾಲದಾದ್ಯಂತ ನಡೆದ ಸಾಮೂಹಿಕ ಪ್ರಾರ್ಥನೆಯ ಅಂಗವಾಗಿ ಸೋಮೇಶ್ವರ ಶ್ರಿ ಸೋಮನಾಥ ದೇವಸ್ಥಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯ ಬಳಿಕ ಮಾತನಾಡಿದರು. ಜಿಲ್ಲಾ ಕಾರ್ಯಾಧ್ಯಕ್ಷ ಗೋಪಾಲ ಕುತ್ತಾರ್ ಮಾತನಾಡಿ ಅಮೃತಧಾರ ಗೋಶಾಲೆಯಲ್ಲಿ ಕಳವು ನಡೆಸಿ ಎಂಟು ದಿನಗಳಾದರೂ ದನವನ್ನು ಕಡಿದವರನ್ನು ಹಿಡಿದಿರುವ ಪೊಲೀಸರು ಕಳ್ಳರನ್ನು ಬಂಧಿಸಲು ಸಾಧ್ಯವಾಗಿಲ್ಲ. ಗೋಕಳ್ಳರನ್ನು ಬಂಧಿಸಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಟಿ.ಜಿ. ರಾಜಾರಾ ಭಟ್ ಅವರಿಗೆ…

