UN NETWORKS ಕುಂಪಲ: ಕುಂಪಲದಲ್ಲಿ ಶ್ರೀ ಕೃಷ್ಣನ ಆರಾಧನೆಯ ಮೂಲಕ ಈ ಭಾಗದಲ್ಲಿ ಧಾರ್ಮಿಕ ಜಾಗೃತಿಯೊಂದಿಗೆ ಸಮಾಜದ ಸಂಘಟನೆಗೆ ಮಂದಿರವು ಕೆಲಸ ಮಾಡುತ್ತಿದೆ. ಒಂದು ಊರಿನ ಜನರು ಉತ್ಸವಗಳ ಮೂಲಕ ಒಂದಾಗುವುದರಿಂದ ಕೃಷ್ಣನ ಗೀತ ಸಂದೇಶ ಸಾಕಾರವಾಗಿದೆ ಎಂದು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ ಅವರು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಸಭಾಭವನದಲ್ಲಿ ಭಾನುವಾರ ಜರಗಿದ 21ನೇ ವರ್ಷದ ಕುಂಪಲ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವದ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದುರ್ಗಾಪರಮೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಭವಾನಿ ಶಂಕರ ಶಾಂತಿ ಕಾರ್ಯಕ್ರಮ ಉದ್ಘಾಟಿಸಿದರು. ಮಂದಿರದ ಗೌರವಾದ್ಯಕ್ಷ ಕೇಶವದಾಸ್ ಬಗಂಬಿಲ, ಉತ್ಸವ ಸಮಿತಿ ಅಧ್ಯಕ್ಷ ಶಿವಾನಂದ ಟೈಲರ್, ಗೌರವಾದ್ಯಕ್ಷ ಎಸ್.ಎಸ್.ನಾಯ್ಕ್, ಕಾರ್ಯದರ್ಶಿ ಹರೀಶ್ ಮೂರುಕಟ್ಟ, ಕೋಶಾಧಿಕಾರಿ ಆನಂದ.ಎನ್.ಕುಂಪಲ, ಸಲಹೆಗಾರ ಲಕ್ಷ್ಮಣ್ ಕಿರೋಡಿಯನ್, ಮಂದಿರದ ಕಾರ್ಯದರ್ಶಿ ರವೀಂದ್ರ ಕುಂಪಲ, ಅರ್ಚಕ ಉಗ್ಗಪ್ಪ ಟೈಲರ್, ಶ್ರೀನಿದಿ ಜುವೆಲ್ಲರ್ ಮಾಲಕ ಜಗದೀಶ್ ಆಚಾರ್ಯ, ಆಡಳಿತ ಮಂಡಳಿ ಸದಸ್ಯರಾದ ಮಾಧವ…
Author: UllalaVani
UN NETWORKS ಮಲಾರ್ : ವಿದ್ಯಾರ್ಥಿಗಳಿಗೆ ಶಾಲಾ ಪುಸ್ತಕ ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವದ ಕುರಿತು ತರಬೇತಿ ಮಲಾರ್ ಶಾಲಾ ಮುಂಭಾಗದಲ್ಲಿ ನಡೆಯಿತು. ಪಾಪ್ಯುಲರ್ ಫ್ರಂಟ್ ನ ಪ್ರಾರಂಭದಲ್ಲಿ ಸ್ಕೂಲ್ ಚಲೋ ಕಾರ್ಯಕ್ರಮ ಮಾಡಿದ್ದು ಇವತ್ತಿಗೂ ಮಾದರಿಯಾಗಿ ಮುಂದುವರಿಯುತ್ತಾ ವಿದ್ಯಾರ್ಥಿಗಳ ಪ್ರಗತಿಗೆ ಕಾರಣರಾಗಿದ್ದೇವೆ ಮುಂದೆಯೂ ಅನೇಕ ಕಾರ್ಯವನ್ನು ವಿದ್ಯಾರ್ಥಿಗಳಿಗೆ ಮಾಡಲಿದ್ದೇವೆ ಎಂದು ಹಾರಿಶ್ ಮಲಾರ್ ಕರೆನಿಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಎಮ್.ಬಶೀರ್ ನೆರವೇರಿಸಿದರು.ಹೆಲ್ಪ್ ಲೈನ್ ಅದ್ಯಕ್ಷ ಕಬೀರ್ ಮಲಾರ್.ಅಲ್ ಅಮೀನ್ ಅದ್ಯಕ್ಷ ಮುನೀರ್.ಎಮ್.ಇ.ಎಸ್ ಅದ್ಯಕ್ಷ ಇಸ್ಮಾಯಿಲ್ ಕೋಡಿ.ಕಮರ್.ಝಾಹಿದ್ ಉಪಸ್ಥಿತಿಯಿದ್ದರು.ಸುಫೈದ್ ಸ್ವಾಗತಿಸಿ ಅನ್ಸಾರ್ ಇನೊಳಿ ನಿರೂಪಿಸಿ
UN NETWORKS ಕೈರಂಗಳ:ಇಲ್ಲಿನ ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ಇದರ ವತಿಯಿಂದ ಶಾಲಾ ವಿಧ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವು ಕೈರಂಗಳ ಅ.ಹಿ.ಪ್ರಾ ಶಾಲೆಯಲ್ಲಿ ಜರುಗಿತು.ಕಾರ್ಯಕ್ರಮಕ್ಕೆ ಜೆ.ಎಂ.ಆರ್ ಪಡಿಕ್ಕಲ್ ಖತೀಬ್ ನಾಸೀರುದ್ದೀನ್ ಮದನಿ ದುವಾ ಮೂಲಕ ಚಾಲನೆ ನೀಡಿದರು.ಶಾಲಾ ಮುಖ್ಯೋಪಾಧ್ಯಾಯರಾದ ಶಿವರಾಮ್ ಭಟ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದ ಉಧ್ಘಾಟನೆಯನ್ನು,ತಾ.ಪಂ ಸದಸ್ಯರಾದ ಹೈದರ್ ಕೈರಂಗಳ ಉಧ್ಘಾಟಿಸಿ ಮಾತನಾಡುತ್ತಾ ಅಲ್-ಅಮೀನ್ ಸಂಸ್ಥೆ ಯು ನಿಷ್ಕಂಳಕ ಮನಸ್ಸಿನಿಂದ ಸಮಾಜಕ್ಕೆ ಅರ್ಪಿಸುತ್ತಿರುವ ಸೇವೆಯು ಮಹತ್ತರವಾಗಿದೆ,ಸಂಸ್ಥೆಯ ಕಾರ್ಯಚಟುವಟಿಕೆಗಳು ಶ್ಲಾಘನೀಯ ಎಂದರು. ಕಾರ್ಯಕ್ರಮ ದಲ್ಲಿ ತೋಟಾಲ್ ಜುಮಾ ಮಸ್ಜಿದ್ ಖತೀಬ್ ಮುಹಿಯ್ಯದ್ದೀನ್ ಸಹದಿ ತೋಟಾಲ್,ನರಿಂಗಾನ ಗ್ರಾ.ಪಂ ಸದಸ್ಯರಾದ ಮುರಳೀಧರ್ ಶೆಟ್ಟಿ ಮೋರ್ಲ,ಕೈರಂಗಳ ಗ್ರಾ.ಪಂ ಸದಸ್ಯ ಲೋಹಿತ್.ವಿ ಗಟ್ಟಿ,ಸಂಸ್ಥೆಯ ಗೌರವಾಧ್ಯಕ್ಷ ಅಹ್ಮದ್ ಕುಂಙಿ, ಸಮಾಜಸೇವಕ ರಹಿಮಾನ್ ಹೂಹಾಕುವ ಕಲ್ಲು,ಗೌಸಿಯಾ ಯಂಗ್ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಇಬ್ರಾಹಿಂ ಪಾರೆ,ಬದ್ರುಲ್ ಹುದಾ ಅಸೋಸಿಯೇಷನ್ ಅಧ್ಯಕ್ಷ ಪೈಝಲ್ ಪಡಿಕ್ಕಲ್,ಅನ್ಸಾರ್ ಪಡಿಕ್ಕಳ್,ಸ್ಥಳೀಯರಾದ ಹೈದರ್ ಮಲಿ,ಶಾಕಿರ್,ಇಬ್ರಾಹಿಂ, ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ಅಧ್ಯಕ್ಷ ಹಂಝ.ಬಿ ಮತ್ತಿತರು ಉಪಸ್ಥಿತರಿದ್ದರು. ಬಳಿಕ ಕೈರಂಗಳ ಶಾಲಾ ಮುಖ್ಯೋಪಾಧ್ಯಾಯರಾಗಿ…
UN NETWORKS ಬೋಳಿಯಾರ್: ಬಿಜೆಪಿ ಇಂದು ದೇಶದಲ್ಲಿ ಬೆಳೆಯಲು ಪಕ್ಷದ ಹಿರಿಯರು ಹಾಕಿದ ಅಡಿಪಾಯದಿಂದ ಸಾಧ್ಯವಾಗಿದ್ದು, ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ 61 ಸಾವಿರ ಮತಗಳು ಪಡೆಯಲು ಪಕ್ಷದ ಚಿಹ್ನೆಯಾದ ತಾವರೆ ಮತ್ತು ಪ್ರತೀ ಕಾರ್ಯಕರ್ತರ ಅವಿರತ ಶ್ರಮದಿಂದ ಸಾಧ್ಯವಾಗಿದೆ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ಸಂದರ್ಭದಲ್ಲಿ ದುಡಿದ ಪಕ್ಷದ ಕಾರ್ಯಕರ್ತರಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇತ್ರದಲ್ಲಿ ಕಳೆದ ಚುನಾವಣೆಗೆ ಹೋಲಿಸಿದರೆ ಸುಮಾರು 20 ಸಾವಿರ ಅ„ಕ ಮತಗಳು ಬಂದಿದೆ. ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದರೂ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸೋತರು ಹೆಚ್ಚುವರಿ ಮತಗಳನ್ನು ಪಡೆದ ಗೆಲುವು ನಮ್ಮಲ್ಲಿದೆ. ಈ ಮತಗಳು ಉಆವುದೇ ವೈಯಕ್ತಿಕ ಮತಗಳು ಅಲ್ಲ ಬಿಜೆಪಿ ಪಕ್ಷದ ಚಿಹ್ನೆ ಮತ್ತು ಕಾರ್ಯಕರ್ತರ ಬೆವರಿನ ಹನಿ ಮತಗಳಾಗಿ ಪರಿವರ್ತನೆಯಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಬಲಗೊಳಿಸಲು ಇಂದಿನಿಂದಲೇ…
UN NETWORKS ಉಳ್ಳಾಲ: ವೈದ್ಯಕೀಯ ವಿದ್ಯಾರ್ಥಿಗಳಿದ್ದ ಕಾರು ರಿಕ್ಷಾವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡು, ರಿಕ್ಷಾದಲ್ಲಿದ್ದ ಪ್ರಯಾಣಿಕರೂ ಗಾಯಗೊಂಡಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕುದಕಟ್ಟೆ ಯೆನೆಪೋಯ ಆಸ್ಪತ್ರೆ ಎದುರುಗಡೆ ಶನಿವಾರ ತಡರಾತ್ರಿ ಸಂಭವಿಸಿದೆ. ರಿಕ್ಷಾ ಚಾಲಕ ಅಸೈಗೋಳಿ ನಿವಾಸಿ ದಿವಾಕರ್ (35) ಗಂಭೀರ ಗಾಯಗೊಂಡಿದ್ದಾರೆ. ದೇರಳಕಟ್ಟೆಯಿಂದ ಕುತ್ತಾರು ಸಿಲಿಕೋನಿಯಾ ಫ್ಲಾಟಿನ ಕಡೆಗೆ ಬಾಡಿಗೆ ಕೊಂಡೊಯ್ಯುತ್ತಿದ್ದ ರಿಕ್ಷಾಗೆ, ಎದುರಿನಿಂದ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ಬಂದ ನಾಲ್ವರು ವೈದ್ಯಕೀಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಿದ್ದ ಕಾರು ಮುಖಾಮುಖಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ರಿಕ್ಷಾ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಚಾಲಕನನ್ನು ಅವಶೇಷಗಳಿಂದ ಹೊರ ತೆಗೆಯಲು ಕೆಲ ಸಮಯ ತಗಲಿತು. ತಲೆ ಹಾಗೂ ಕಾಲಿನ ಭಾಗಕ್ಕೆ ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲ್ಪಟ್ಟರೆ, ಹಿಂಬದಿಯಲ್ಲಿದ್ದ ಮೂವರು ಪ್ರಯಾಣಿಕರನ್ನು ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರ್ಯಾಷ್ ಡ್ರೈವಿಂಗ್ : ಕಾರು ಚಾಲಕ ವೈದ್ಯಕೀಯ ವಿದ್ಯಾರ್ಥಿ ಪಾರ್ಟಿ ಮುಗಿಸಿ ಅಮಿತ ವೇಗದಲ್ಲಿ ಕಾರು…
UN NETWORKS ಕೊಣಾಜೆ: ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನ ಕ್ಷೇತ್ರದ ಸಂಶೋಧನೆ ಮಹತ್ವದ್ದಾಗಿದ್ದು ಭಾರತೀಯ ಪ್ರತಿಭಾವಂತ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳಿ ತಮ್ಮಲ್ಲಿರುವ ಜ್ಞಾನವನ್ನು ಅಲ್ಲಿ ಹಂಚುವುದರಿಂದ ತಮ್ಮ ಸಂಶೋಧನೆ ನಡೆಸುವ ಸಂಸ್ಥೆ ಪೇಟೆಂಟ್ ಪಡೆಯುವ ಮೂಲಕ ಅದರ ಪೂರ್ಣ ಪ್ರಮಾಣದ ಲಾಭ ಪಡೆಯುತ್ತದೆ. ಹಾಗಾಗಿ ಭಾರತೀಯ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಮಾತೃಭೂಮಿಯಲ್ಲಿಯೇ ಸಂಶೋಧನೆಗೆ ಬಳಸುವ ಮೂಲಕ ಭಾರತಕ್ಕೆ ಪೂರ್ಣ ಪ್ರಮಾಣದ ಲಾಭವನ್ನು ದೊರಕುವಂತೆ ಮಾಡಬೇಕು. ಅಂತಹ ಕಾರ್ಯದಿಂದ ವಿದೇಶಿಯರ ಮುಂದೆ ನಾವು ಸದಾ ಕೈಚಾಚುವ ಅನಿವಾರ್ಯತೆಯನ್ನು ತಪ್ಪಿಸಬಹುದು ಎಂದು ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು. ಅವರು ಶನಿವಾರ ಮಂಗಳೂರು ವಿವಿಯ ಮಂಗಳಾ ಆಡಿಟೋರಿಯಂನಲ್ಲಿ ವಿವಿ ಕುಲಪತಿ ಪ್ರೊ.ಕೆ. ಭೈರಪ್ಪ ಅವರಿಗೆ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಸಾಹಿತಿಗಳು ಹಾಗೂ ವಿಜ್ಞಾನಿಗಳು ಉತ್ತಮ ಆಡಳಿತಗಾರರಾಗಲು ಸಾಧ್ಯವಿಲ್ಲ ಎಂಬ ಮಾತು ಇದೆಯಾದರೂ ಅದನ್ನು ತಪ್ಪು ಎಂದು ತೋರಿಸಿಕೊಟ್ಟವರಲ್ಲಿ ಕುವೆಂಪು ಸಾಲಿಗೆ ಮಂಗಳೂರು ವಿವಿಯಲ್ಲಿ ಕಾರ್ಯ ನಿರ್ವಹಿಸಿದ ಪ್ರೊ.ಕೆ. ಭೈರಪ್ಪ ಅವರು ಉದಾಹರಣೆ.…
UN NETWORKS ಉಳ್ಳಾಲ: ವಿದ್ಯಾರ್ಥಿಗಳಲ್ಲಿ ಪರಿಸರದ ಕುರಿತು ಕಾಳಜಿ ಅಗತ್ಯವಿದ್ದು, ಶಿಕ್ಷಣದೊಂದಿಗೆ ಪರಿಸರ ರಕ್ಷಣೆಗೆ ಆದ್ಯತೆ ನೀಡುತ್ತಿದ್ದು, ಈ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಶಿಕ್ಷಣ ಸಂಸ್ಥೆಯಿಂದ ನಡೆಯಲಿದೆ ಎಂದು ಪಾನೀರ್‍ನ ಆಸ್ಸಿಸಿ ಸೆಂಟ್ರಲ್ ಸ್ಕೂಲ್‍ನ ಪ್ರಾಂಶುಪಾಲೆ ಸಿಸ್ಟರ್ ಜೂಲಿಯಾನ ಪಾೈಸ್ ಅಭಿಪ್ರಾಯಪಟ್ಟರು. ದೇರಳಕಟ್ಟೆಯ ಪಾನೀರ್‍ನಲ್ಲಿರುವ ಅಸ್ಸಿಸಿ ಸೆಂಟ್ರಲ್ ಸ್ಕೂಲ್‍ನಲ್ಲಿ ಶಾಲಾ ಪ್ರಾರಂಬೊತ್ಸವ ಪ್ರಯುಕ್ತ ಸ್ವಚ್ಛ ಪರಿಸರ ಸಂದೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಭಾಸ್ಕರ ರೈ, ಚಿತ್ರಕಲಾ ಶಿಕ್ಷಕ ಸೂರ್ಯಕಾಂತ್ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸ್ವಚ್ಛ ಪರಿಸರ ಜಾಗೃತಿ ಪ್ರಯುಕ್ತ ಪರಿಸರಸದಲ್ಲಿ ವಿವಿಧ ಗಿಡಗಳ ಬೀಜ ಹಾಕಲಾಯಿತು.
UN NETWORKS ಉಳ್ಳಾಲ: ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡುವುದು ದೇವರ ಕೆಲಸವಾಗಿದ್ದು, ಇಂತಹ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಡೈಮಂಡ್ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಎಸೋಸಿಯೇಶನ್ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಸೇವೆಯನ್ನು ನಡೆಸಲಿ ಎಂದು ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಚಾಲನೆ ನೀಡಿದರು. ಉಳ್ಳಾಲ ಮುಕ್ಕಚ್ಚೇರಿ ಡೈಮಂಡ್ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಎಸೋಸಿಯೇಶನ್ ವತಿಯಿಂದ ಉಳ್ಳಾಲ ಒಂಭತ್ತುಕೆರೆ ದ,ಕ,ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ 24 ವರ್ಷದಿಂದ ಉಳ್ಳಾಲ ಮುಕ್ಕಚ್ಚೇರಿ ಅಂಗನವಾಡಿ ಕಾರ್ಯಕರ್ತೆಯಾಗಿ ಮತ್ತು ಸರಕಾರದಿಂದ ಸಿಗುವ ಸವಲತ್ತುಗಳನ್ನು ಜನಸಾಮಾನ್ಯರಿಗೆ ಒದಗಿಸುವ ಕೆಲಸವನ್ನು ನಿರ್ವಹಿಸುತ್ತಿರುವ ಧರ್ಮಿಣಿಯವರನ್ನು ಸನ್ಮಾನಿಸಲಾಯಿತು. ಸಾಮಾಜಿಕ ಕಾರ್ಯಕರ್ತ ಯು.ಬಿ. ಮಾರಪ್ಪ, ಉಳ್ಳಾಲ ನಗರ ಸಭೆ ಸದಸ್ಯ ಮುಹಮ್ಮದ್ ಮುಕ್ಕಚ್ಚೇರಿ, ಶಾಲಾ ಮುಖ್ಯೋಪದ್ಯಾಯಿನಿ ಪುಷ್ಪಾ, ಡೈಮಂಡ್ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಎಸೋಸಿಯೇಶನ್ ಉಪಾಧ್ಯಕ್ಷ ಖಾಲೀದ್, ವ್ಯವಸ್ಥಾಪಕ ಇಂತಿಯಾಝ್ ಶೇಖ್,ಕೋಶಾಧಿಕಾರಿ ಇಕ್ಬಾಲ್, ಸದಸ್ಯರಾದ ಹನೀಫ್ ಗೋವಾ, ಇಮ್ತಿಯಾಝ್, ಸಿದ್ದೀಕ್, ಇಜಾಝ್,…
UN NETWORKS ಉಳ್ಳಾಲ: ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಲು ಜವಬ್ದಾರಿಯಿಂದ ಕರ್ತವ್ಯ ನಿರ್ವಹಿಸುವುದು ಹಾಗೂ ದಕ್ಷತೆ ಕಾಪಾಡಿಕೊಳ್ಳುವುದು ಅತಿ ಮುಖ್ಯ ಎಂದು ದೇರಳಕಟ್ಟೆಯ ಕಣಚೂರು ವೈದ್ಯಕೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹಿಮಾನ್ ಹೇಳೀದರು. ನಾಟೆಕಲ್‍ನ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಶುಕ್ರವಾರ ನಡೆದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಗಾರದಿಂದ ಪರಸ್ಪರ ಜ್ಞಾನ ಹಂಚುವ ಕಾರ್ಯ ನಡೆಯುತ್ತದೆ. ಹಾಗೆಯೇ ತಮ್ಮ ಕ್ಷೇತ್ರದಲ್ಲಾಗುತ್ತಿರುವ ಆವಿಷ್ಕಾರ ಸಂಶೋಧನೆಗಳನ್ನು ಅರಿಯಲು ಸಾಧ್ಯವಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು, ವೈದ್ಯರು, ತಜ್ಞರು ಕಾರ್ಯಗಾರದಲ್ಲಿ ಪಾಲ್ಗೊಳ್ಳುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ.ಎಚ್.ಎಸ್. ವಿರೂಪಾಕ್ಷ, ವೈದ್ಯಕೀಯ ಅಧೀಕ್ಷಕ ಡಾ. ದೇವಿಪ್ರಸಾದ್ ಶೆಟ್ಟಿ, ಕೆಎಂಸಿಯ ಡಾ. ಅಣ್ಣಯ್ಯ ಕುಲಾಲ್, ಹಾಗೂ ಸಹಾಯಕ ಡೀನ್ ಡಾ. ಶ್ರೀಶ ಉಪಸ್ಥಿತರಿದ್ದರು. ಕಾರ್ಯಗಾರ ಮುಖ್ಯ ಸಂಘಟನೆ ಕಾರ್ಯದರ್ಶಿ ಡಾ. ಶಕುಂತಲಾ ಆರ್.ರೈ ಸ್ವಾಗತಿಸಿದರು. ಕಾರ್ಯಕ್ರಮ ಸಂಘಟಕ ಡಾ. ರೋಶನ್ ಎಸ್…
UN NETWORKS ತಲಪಾಡಿ:ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ನಿಖಿಲ್ ಎನ್ ಶೆಟ್ಟಿ ಇವರು ಭಾರತದ ಸ್ಪೋರ್ಟ್ಸ್ ಅತೋರಿಟಿ ವತಿಯಿಂದ ಟೈಕ್ವೋಂಡೊ ತರಬೇತಿ ಪಡೆಯಲು ಆಯ್ಕೆಯಾಗಿರುತ್ತಾರೆ.ಇವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಗೂ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಿಂದ ಎಸ್. ಎ. ಐ ಗೆ ಆಯ್ಕೆಯಾಗಿರುವ ಪ್ರಥಮ ವಿದ್ಯಾರ್ಥಿಯಾಗಿರುತ್ತಾರೆ. ಶಾಲಾ ಆಡಳಿತ ಮಂಡಳಿ, ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗದವರು ವಿದ್ಯಾರ್ಥಿಯನ್ನು ಅಭಿನಂದಿಸಿರುತ್ತಾರೆ.

