UN NETWORKS
ಇರಾ: ರಾಜ್ಯದ ಆಹಾರ ಮತ್ತು ನಾಗರೀಕ ಪೊರೈಕೆ ಸಚಿವರಾದ ಯು.ಟಿ.ಖಾದರ್ ರವರ ಅನುದಾನದಿಂದ ಇರಾ ಗ್ರಾಮದ ದರ್ಕಾಸ್ ಗ್ರಾಮ ಪಂಚಾಯತ್ ಸಂಪರ್ಕ ರಸ್ತೆ ಡಾಮರೀಕರಣ ಕಾಮಗಾರಿಗೆ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ್ ಕರ್ಕೇರ ರವರು ಚಾಲನೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಪಂಚಾಯತ್ ಸದಸ್ಯರಾದ ಎಮ್.ಬಿ.ಉಮರ್, ಮೊಹಿದಿನ್ ಕುಂಞ ,ರಮೇಶ್ ಪೂಜಾರಿ ,ವಲಯ ಕಾಂಗ್ರೆಸ್ ಅಧ್ಯಕ್ಷರಾದ ಮುರಲೀದರ್ ಭಂಡಾರಿ ,ಅನಿಲ್ ಸೂತ್ರಬೈಲ್ ,ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಮುರಳಿ, ಗ್ರಾಮದ ಸ್ಥಳೀಯರಾದ ವಿಶ್ವನಾಥ್ ಕೊಟ್ಟಾರಿ, ಚಂದ್ರಶೇಖರ್ ,ಬಶೀರ್ ಇರಾ, ಶ್ರೀಧರ ಬೆಳ್ಚಡ ,ಹನೀಫ್ ಪರಪ್ಪು ,ಮುಂತಾದ ಗಣ್ಯರು ಉಪಸ್ಥಿತರಿದ್ದರು.




