Author: UllalaVani

Kannada News From Coastal Karnataka

UN NETWORKS ತೊಕ್ಕೊಟ್ಟು: ಶೈಕ್ಷಣಿಕ ಕೇಂದ್ರದ ಹೆಬ್ಟಾಗಿಲು, ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ತೊಕ್ಕೊಟ್ಟು ಜಂಕ್ಷನ್‌ ನ ಅವ್ಯವಸ್ಥೆಯಿಂದಾಗಿ ವಾಹನ ಚಾಲಕರು, ಪಾದಚಾರಿಗಳು ದಿನನಿತ್ಯ ಪರದಾಡುವಂತಾಗಿದೆ. ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಬರುವ ತೊಕ್ಕೊಟ್ಟು ಜಂಕ್ಷನ್‌ ನಲ್ಲಿ ದಿನವೊಂದಕ್ಕೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಒಂದೆಡೆ ಅಗಲೀಕರಣಕ್ಕಾಗಿ ಕಟ್ಟಡಗಳು ನೆಲಸಮವಾದರೆ ಕೆಲವು ಕಟ್ಟಡಗಳು ಶಿಥಿಲ ಸ್ಥಿತಿಯಲ್ಲಿ ಹಾಗೇ ಉಳಿದಿವೆ. ಅರ್ಧದಲ್ಲೇ ನಿಂತ‌ ಫ್ಲೈಓವರ್‌ ಕಾಮಗಾರಿ ತೊಕ್ಕೊಟ್ಟಿನಲ್ಲಿ ಫ್ಲೈಓವರ್‌ ಕಾಮಗಾರಿ ಪ್ರಾರಂಭಗೊಂಡು 8 ವರ್ಷಗಳೇ ಕಳೆದಿದೆ. ಪ್ರಾರಂಭದಲ್ಲಿ ಕಾಮಗಾರಿ ವೇಗ ಪಡೆದುಕೊಂಡಿತ್ತು. ಆದರೆ ಫ್ಲೈಓವರ್‌ ರಸ್ತೆಗೆ ಸಂಪರ್ಕಿಸುವ ಬಾಕ್ಸ್‌ ನಿರ್ಮಾಣವನ್ನು ಸಂಸ್ಥೆ ಹೊರಗುತ್ತಿಗೆ ನೀಡಿದ ಬಳಿಕ ಕಾಮಗಾರಿ ನಿಧಾನ ಗತಿಯತ್ತ ಸಾಗಿದೆ. ತೊಕ್ಕೊಟ್ಟು ಜಂಕ್ಷನ್‌ನಿಂದ ಓವರ್‌ ಬ್ರಿಡ್ಜ್ ಸಂಪರ್ಕಿಸುವವರೆಗಿನ ಬಾಕ್ಸ್‌ ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ಸಮಸ್ಯೆ ಕಡಿಮೆಯಿತ್ತು. ಆದರೆ ಆರು ತಿಂಗಳ ಹಿಂದೆ ತೊಕ್ಕೊಟ್ಟು ಜಂಕ್ಷನ್‌ ನಿಂದ ಕಲ್ಲಾಪು ಸಂಪರ್ಕಿಸುವ ಭಾಗದಲ್ಲಿ ಬಾಕ್ಸ್‌ ಕಾಮಗಾರಿಗೆ ರಸ್ತೆ ಅಗೆದದ್ದೇ ತೊಕ್ಕೊಟ್ಟಿನ ಅವ್ಯವಸ್ಥೆಗೆ ಕಾರಣವಾಗಿದೆ. ಫುಟ್‌ಪಾತ್‌ ನಲ್ಲಿ ಗುಂಡಿಗಳು ಫುಟ್‌ ಪಾತ್‌…

Read More

UN NETWORKS ಮುಡಿಪು: ಕುರ್ನಾಡು ಗ್ರಾ. ಪಂ. ವ್ಯಾಪ್ತಿಯ ಮಿತ್ತ ಕೋಡಿ ಅಮೃತ ಕಲ್ಪ ಎಂಬಲ್ಲಿ ಮುಡಿಪು- ಮೆಲ್ಕಾರ್‌ ಮುಖ್ಯರಸ್ತೆ ಮೇಲೆ ಗುಡ್ಡ ಕುಸಿದು ಸಂಚಾರ ಅಸ್ತವ್ಯಸ್ತವಾಯಿತು. ಸೋಮವಾರ ಸಂಜೆಯಿಂದ ಧಾರಾಕಾರ ಮಳೆ ಸುರಿದಿತ್ತು. ಮಂಗಳವಾರ ಬೆಳಗ್ಗಿನ ಜಾವ ಕುರ್ನಾಡು ಬಳಿ ಗುಡ್ಡ ಕುಸಿದಿದ್ದು, ಮುಡಿಪುವಿನಿಂದ ಬಿ.ಸಿ. ರೋಡ್‌ ಕಡೆ ಸಂಚರಿಸುವ ವಾಹನಗಳಿಗೆ ತಡೆಯಾಯಿತು. ಈ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನಗಳು ಬೋಳಿಯಾರ್‌ ಕುರ್ನಾಡು ಮಾರ್ಗವಾಗಿ ಮುಡಿಪು ಮತ್ತು ಬಿ.ಸಿ.ರೋಡ್‌ ಕಡೆ ಸಂಚಾರ ನಡೆಸಿದವು.

Read More

UN NETWORKS ಕೋಟೆಕಾರು : ಭಾರೀ ಮಳೆಗೆ ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಮಾಡೂರು ಶ್ರೀ ಪಾಡಂಗರ ಭಗವತಿ ಕ್ಷೇತ್ರಕ್ಕೆ ಸಂಪರ್ಕಿಸುವ ರಸ್ತೆಯಿಡೀ ಜಲಾವೃತಗೊಂಡು ಸುಮಾರು 150 ಮನೆಮಂದಿಗೆ ಅತಂತ್ರ ಸ್ಥಿತಿ ಮಂಗಳವಾರ ನಿರ್ಮಾಣವಾಯಿತು. ಒಂದು ಕಿ.ಮೀ ಉದ್ದದ ರಸ್ತೆಯಿಡೀ ಜಲಾವೃತಗೊಂಡು ಮೊಣಕಾಲುವರೆಗೆ ನೀರು ತುಂಬಿದೆ. ಪರಿಣಾಮ ಆ ರಸ್ತೆಯಲ್ಲಿ ತೆರಳುವ ವಾಹನಗಳು ತೆರಳಲು ಸಾಧ್ಯವಾಗದೆ, ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ , ಉದ್ಯೋಗಿಗಳು ಕೆಲಸ ಕಾರ್ಯಗಳಿಗೆ ತೆರಳಲು ಸಾಧ್ಯವಾಗದೆ ಮನೆಯಲ್ಲೇ ಉಳಿಯುವಂತಾಯಿತು. ಸುಮಾರು 50 ಮನೆಗಳ ಮೆಟ್ಟಿಲುವರೆಗೆ ನೀರು ತುಂಬಿದ್ದು, ಇನ್ನೊಂದು ದಿನ ಮಳೆಯಾದರೆ ಮನೆಯೊಳಗೆ ನೀರು ನುಗ್ಗುವ ಆತಂಕದಲ್ಲಿ ಜನರಿದ್ದಾರೆ. ಅವೈಜ್ಞಾನಿಕ ಕಿಂಡಿಅಣೆಕಟ್ಟು : 2017-18 ನೇ ಸಾಲಿನಲ್ಲಿ ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರಕಾರ ಕೈಗೊಂಡ ಯೋಜನೆಯಂತೆ, ಜಿಲ್ಲಾ ಪಂಚಾಯಿತಿ ಅನುದಾನದಡಿ ಈ ಭಾಗದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಅದು ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವುದರಿಂದ ಸಮಸ್ಯೆ ಉದ್ಭವಿಸಿದೆ ಅನ್ನುವುದು ಸ್ಥಳೀಯರ ಆರೋಪ. ಕಿರಿದಾದ ಕಿಂಡಿ ಅಣೆಕಟ್ಟು ದೊಡ್ಡ ಪ್ರಮಾಣದಲ್ಲಿ…

Read More

UN NETWORKS ಉಳ್ಳಾಲ : ಕೃಷಿ ಕೂಲಿ ಕಾರ್ಮಿಕರ ಕೊರತೆಯಿಂದ ಜಿಲ್ಲೆಯಲ್ಲಿ ಕೃಷಿಕಾರ್ಯಗಳು ಹಿನ್ನಡೆಯಾಗುತ್ತಿದ್ದು ಇಂತಹ ಸಂದರ್ಭದಲ್ಲಿ ಯಾಂತ್ರೀಕೃತ ಭತ್ತದ ಕೃಷಿಗೆ ಪ್ರೋತ್ಸಾಹ ನೀಡುವ ಮೂಲಕ ರೈತರನ್ನು ಬೆಂಬಲಿಸುವ ಕಾರ್ಯವನ್ನು ನಡೆಸುತ್ತಿರುವ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಶ್ಲಾಘನೀಯವಾಗಿದ್ದು ಕೃಷಿ ಯಂತ್ರಧಾರೆ ಯೋಜನೆಯ ಲಾಭವನ್ನು ಎಲ್ಲಾ ಕೃಷಿಕರೂ ಪಡೆಯುವಂತಾಗಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ ಅಭಿಪ್ರಾಯಪಟ್ಟರು. ಅವರು ಅಂಬ್ಲಮೊಗರು ಗ್ರಾಮದ ಮದಕ ಪಡ್ಯಾರಮನೆ ಬಳಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು ಇದರ ಆಶ್ರಯದಲ್ಲಿ `ರೈತ ಕೃಷಿ ಪಾಠಶಾಲೆ ತರಬೇತಿ ಕಾರ್ಯಕ್ರಮದಲ್ಲಿ ಕೃಷಿ ಯಂತ್ರಧಾರೆ ಯೋಜನೆಯಡಿ `ಕೃಷಿ ಯಾಂತ್ರಿಕರಣ` ನೇಜಿ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ರೈತರು ಭತ್ತದ ಕೃಷಿ ಲಾಭದಾಯಕವಲ್ಲ ಎನ್ನುವ ನಿಟ್ಟಿನಲ್ಲಿ ಕೃಷಿ ನಡೆಸಲು ಹಿಂಜರಿಯುತ್ತಿದ್ದಾರೆ. ಆದರೆ ಆಧುನಿಕ ಕೃಷಿ ಪದ್ಧತಿಯಲ್ಲಿ ಕೃಷಿ ನಡೆಸಿದರೆ ಕೃಷಿಯಲ್ಲಿ ಲಾಭ ಮಾಡಿಕೊಳ್ಳಲಲು ಸಾಧ್ಯವಿದೆ. ಇಂತಹ ಸಂದರ್ಭದಲ್ಲಿ ಸ್ವಸಹಾಯ ಗುಂಪುಗಳ ಮೂಲಕ ಅತೀ ಕಡಿಮೆ ವೆಚ್ಚದಲ್ಲಿ…

Read More

UN NETWORKS ತಲಪಾಡಿ: ಜಗತ್ತಿಗೆ ಭಾರತ ನೀಡಿದ ಶ್ರೇಷ್ಠ ಕೊಡುಗೆಯಾಗಿರುವ ಯೋಗ ಶಿಕ್ಷಣದ ಮಹತ್ವ ವಿದ್ಯಾರ್ಥಿಗಳಿಗೆ ಅತೀ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಈ ಶಿಕ್ಷಣವನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಆರ್ಟ್ ಆಫ್ ಲಿವಿಂಗ್‍ನ ಯೋಗ ಶಿಕ್ಷಕಿ ಸುಮನಾ ಕಾಮತ್ ಅಭಿಪ್ರಾಯಟ್ಟರು. ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣದ ಮಾರ್ಗದರ್ಶನ ನೀಡಿ ಮಾತನಾಡಿದರು ಕಾರ್ಯಕ್ರಮದಲ್ಲಿ ಆರ್ಟ್ ಆಫ್ ಲಿವಿಂಗ್‍ನ ತಂಡವು ಶಾರದಾ ವಿದ್ಯಾನಿಕೇತನ ವಿದ್ಯಾರ್ಥಿಗಳಿಗೆ ಯೋಗದ ವಿವಿಧ ಆಸನಗಳಾದ ಚಕ್ರಾಸನ, ವಜ್ರಾಸನ, ಗರುಡಾಸನ, ಉಷ್ಟ್ರಾಸನ, ಭುಜಂಗಾಸನ, ಮಕರಾಸನ, ಬಕಾಸನ, ಪ್ರಾಣಾಯಮಗಳನ್ನು ಪ್ರಾತ್ಯಕ್ಷಿತೆಯ ಮೂಲಕ ತಿಳಿಸಿಕೊಟ್ಟರು. ದೈಹಿಕ ಶಿಕ್ಷಕಿ ಅರುಣಾ ಕಾರ್ಯಕ್ರಮ ನಿರೂಪಿಸಿದರು, ಶಾಲಾ ಪ್ರಾಂಶುಪಾಲೆ ಸುಷ್ಮಾ ಜನಾರ್ಧನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Read More

UN NETWORKS ಉಳ್ಳಾಲ : ಖುವ್ವತುಲ್ ಇಸ್ಲಾಂ ಮದ್ರಸ ಪಟ್ಲ ಇದರ 2018 – 2019 ನೇ ಸಾಲಿನ ಮದ್ರಸ ಪ್ರಾರಂಭೋತ್ಸವ ಹಾಗು ಮನೆ ಮನೆಗೆ ಸಸಿ ವಿತರಣಾ ಕಾರ್ಯಕ್ರಮ ಕಲ್ಲಾಪು ಪಟ್ಲದ ಮದ್ರಸ ಹಾಲ್‍ನಲ್ಲಿ ನಡೆಯಿತು. ತಖ್ವಾ ಜುಮಾ ಮಸೀದಿ ಪಟ್ಲ ಅಧ್ಯಕ್ಷರಾದ ಮಹಮೂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮದ್ರಸ ಪ್ರಾರಂಭೋತ್ಸವವನ್ನು ಕಲ್ಲಾಪುವಿನ ಸಮಾಜ ಸ್ನೇಹಿಯೋರ್ವರ ಸಂಪೂರ್ಣ ಸಹಕಾರದೊಂದಿಗೆ ಮನೆ ಮನೆಗೆ ಸಸಿ ವಿತರಿಸುವ ಮೂಲಕ ವೈವಿಧ್ಯಮಯ ರೀತಿಯಲ್ಲಿ ಆಚರಿಸಲಾಯಿತು. ಮದ್ರಸ ಅಧ್ಯಾಪಕ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಮಾತನಾಡಿ ಅರಿವಿನಂಗಳಕ್ಕೆ ಮನುಕುಲವನ್ನು ನಡೆಸಿದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಪವಿತ್ರ ಇಸ್ಲಾಂ ಎಂಬ ಶಾಂತಿಯ ಜೀವನದರ್ಶನಗಳ ಆರಂಭದ ಹೆಜ್ಜೆ ಮದ್ರಸಗಳು ಆಗಿದೆ. ಮದ್ರಸ ರಂಗದ ಸ್ಪಷ್ಟ ರಚನಾಕಾರ ಸಂಸ್ಥಾಪಕ ಮರ್ಹೂಂ ನೂರುಲ್ ಉಲಮಾ ಎಂ.ಎ. ಅಬ್ದುಲ್ ಖಾದಿರ್ ಮುಸ್ಲಿಯಾರ್ ಹಿಂದೆ ಊರು ಕೇರಿಗಳಿಗೆ ಪಾದಯಾತ್ರೆ ಮಾಡಿ ಅರೆಹೊಟ್ಟೆಯಲ್ಲಿ ಸಾಗಿ ಮದ್ರಸ ಸಂಸ್ಥಾಪನೆಯ ಸಂದೇಶ ಮುಟ್ಟಿಸಿ ಪ್ರಾಯೋಗಿಕತೆಗೆ ತಂದ…

Read More

UN NETWORKS ಉಳ್ಳಾಲ : ಸಮ್ಮೇಳನ, ವಿಚಾರ ಸಂಕಿರಣಗಳು ದಾದಿಯರಲ್ಲಿರುವ ಕೌಶಲ್ಯ ವೃದ್ಧಿಗೆ ಪೂರಕ ಎಂದು ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಸಚಿವ ಡಾ| ಜಿ ಶ್ರೀಕುಮಾರ್ ಮೆನನ್ ಅಭಿಪ್ರಾಯಪಟ್ಟರು. ಯೆನೆಪೋಯ ವಿಶ್ವವಿದ್ಯಾನಿಲಯ ಘಟಕ ಕಾಲೇಜಾದ ಯೆನೆಪೋಯ ನರ್ಸಿಂಗ್ ಕಾಲೇಜಿನ ಸಮುದಾಯ ಅರೋಗ್ಯ ವಿಭಾಗ ಇದರ ಆಶ್ರಯದಲ್ಲಿ ಸೋಂಕು ನಿಯಂತ್ರಣದಲ್ಲಿ ನರ್ಸಿಂಗ್‍ನ ಪಾತ್ರ ಎಂಬ ವಿಷಯದಲ್ಲಿ ನಡೆದ ಒಂದು ದಿನದ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆಯೊಂದಿಗೆ ಆಸ್ಪತ್ರೆಯ ಹೆಚ್ಚಿನ ಕಾರ್ಯದಲ್ಲಿ ದಾದಿಯರ ಪಾತ್ರ ಮಹತ್ವದ್ದಾಗಿದೆ. ದಾದಿಯರು ತಮ್ಮ ವೃತ್ತಿ ಸಂಬಂಧಿಸಿದ ಅನೇಕ ಹೊಸ ವಿಚಾರಗಳತ್ತ  ಜ್ಞಾನವನ್ನು ಬೆಳೆಸುವಲ್ಲಿ ಪೂರಕ ಚಟುವಟಿಕೆಗಳಲ್ಲಿ ನಿರತರಾಗಬೇಕು. ಈ ನಿಟ್ಟಿನಲ್ಲಿ ವಿಚಾರ ಸಂಕಿರಣಗಳಿಂದ ತಮ್ಮಲ್ಲಿರುವ ಕೌಶಕ್ಯವನ್ನು ವೃದ್ಧಿಸಲು ಸಹಕಾರಿಯಾಗುತ್ತದೆ ಎಂದರು. ಯೆನೆಪೋಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರು ಡಾ| ಲೀನಾ ಕೆ.ಸಿ.ದಿನದ ಮಹತ್ವವನ್ನು ವಿವರಿಸಿದರು. ಸಮ್ಮೇಳನದಲ್ಲಿ ಮಂಗಳೂರಿನ ವಿವಿಧ ಆಸ್ಪತ್ರೆಯ ಸಂಪನ್ಮೂಲ ವ್ಯಕ್ತಿಗಳು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.ಯೆನೆಪೋಯ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ| ಶ್ರೀಪತಿ ರಾವ್,…

Read More

UN NETWORKS ಉಳ್ಳಾಲ: ಸ್ವಚ್ಛ ಸರ್ವೇಕ್ಷಣ 2018ರ ಸಮೀಕ್ಷಯೆಡಿ ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಉಳ್ಳಾಲ ನಗರಸಭೆ ರಾಜ್ಯಕ್ಕೆ 250 ಸ್ಥಳೀಯ ಸಂಸ್ಥೆಗಳ ಪೈಕಿ ನಾಲ್ಕನೇ ರ್ಯಾಂಕ್ ಹಾಗೂ ಜಿಲ್ಲೆಯಲ್ಲಿ ಮೊದಲನೇ ರ್ಯಾಂಕ್ ಪಡೆದಿದೆ. ಈ ಮೂಲಕ ದಕ್ಷಿಣ ಭಾರತ (ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಗೋವಾ, ಪಾಂಡಿಚೇರಿ ರಾಜ್ಯಗಳ) ವಿಭಾಗದಲ್ಲಿ 1113 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಉಳ್ಳಾಲ ನಗರಸಭೆ 10ನೇ ರ್ಯಾಂಕ್ ಪಡೆದಿದೆ. ಜ.22 ರಿಂದ 25ರವರೆಗೆ ಸರ್ವೇಕ್ಷಣ 2018ರ ಮಾರ್ಗಸೂಚಿಯಂತೆ 2017-18 ನೇ ಸಾಲಿನ ದಾಖಲಾತಿ ಕ್ರೋಢೀಕರಿಸಿ ಕೇಂದ್ರ ಸರಕಾರದಿಂದ ನೇಮಿಸಿದ ತಂಡದಿಂದ ಒಟ್ಟು 3 ಹಂತದ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿತ್ತು. ಅದರಲ್ಲಿ ನಗರದ ಸ್ವಚ್ಛತೆ, ಸೇವಾ ಹಂತದ ಪ್ರಗತಿ, ಸ್ವತಂತ್ರ್ಯ ಮೌಲ್ಯಮಾಪನ, ಪ್ರತ್ಯಕ್ಷ ನೇರ ವೀಕ್ಷಣೆ ಹಾಗೂ ಸಾರ್ವಜನಿಕರ ಅಭಿಪ್ರಾಯಗಳ ಸಮೀಕ್ಷೆ ನಡೆದಿತ್ತು. ಸಮೀಕ್ಷೆ ಕಾರ್ಯದಲ್ಲಿ ಸಹಕಾರ ನೀಡಿದ ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು,…

Read More

UN NETWORKS ಸೋಮೇಶ್ವರ: ರಾಜ್ಯದಾದ್ಯಂತ ಧಾರ್ಮಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಕೆಲಸಗಳು ಆಗುತ್ತಿದ್ದು, ಧಾರ್ಮಿಕ ನೆಲೆಯಲ್ಲಿ ಎಲ್ಲಾ ಸಮಾಜದವರು ಸಾಮರಸ್ಯದಿಂದ ಕೂಡಿ ಆಚರಿಸುವ ಕ್ಷೇತ್ರಗಳ ಇತಿಹಾಸವಿದೆ. ಈ ನಿಟ್ಟಿನಲ್ಲಿ ಲೋಕಲ್ಯಾಣಕ್ಕಾಗಿ ಶಿವನ ಮಹತ್ವದ ಆಚರಣೆಯಾದ ಸೀಯಾಳಾಭಿಷೇಕವನ್ನು ಹಮ್ಮಿಕೊಂಡಿರುವ ಕಾರ್ಯ ಅರ್ಥಪೂರ್ಣ ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಹೇಳಿದ್ದಾರೆ. ಅವರು ಸೋಮೇಶ್ವರದ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಲೋಕಕಲ್ಯಾಣಕ್ಕಾಗಿ, ನಾಡಿನ ಏಕತೆ ಮತ್ತು ಐಕ್ಯತೆಗಾಗಿ , ಸರ್ವಜನರ ಇಷ್ಟಾರ್ಥ ಸಿದ್ಧಿಗಾಗಿ ಸೋಮವಾರ ಕ್ಷೇತ್ರದಲ್ಲಿ ಜರಗಿದ ಶ್ರೀ ಸೋಮನಾಥ ದೇವರಿಗೆ ಸೀಯಾಳ ಅಭಿಷೇಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಿವ ದೇವರಿಗೆ ಸಿಯಾಳ ಅಭಿಷೇಕ ಮಹತ್ವದ ಆರಾಧನೆಯಾಗಿದೆ. ರಾಜ್ಯದ ಎಲ್ಲೆಡೆಯೂ ಕ್ಷೇತ್ರಗಳಲ್ಲಿ ಇಲ್ಲದ ಶಿಷ್ಟಾಚಾರ, ಶ್ರದ್ಧೆ ಜಿಲ್ಲೆಯ ಕ್ಷೇತ್ರಗಳಲ್ಲಿ ಪಾಲನೆಯಾಗುತ್ತಿದೆ. ಸೋಮೇಶ್ವರ ದೇವಸ್ಥಾನ ಎಲ್ಲಾ ಧರ್ಮದವರು ಬರುವ ಕ್ಷೇತ್ರ. ಇಲ್ಲಿನ ಜೀರ್ಣೋದ್ಧಾರ ಕಾಮಗಾರಿಯೂ ನಡೆಯುತ್ತಿದ್ದು, ಮುಂದಿನ ವರ್ಷ ಬ್ರಹ್ಮಕಲಶೋತ್ಸವವೂ ಜರಗಲಿದೆ. ಕ್ಷೇತ್ರದ ಶಾಸಕರು ಹಾಗೂ ಸಚಿವರು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಅವರ ಪ್ರೋತ್ಸಾಹದಿಂದ…

Read More

UN NETWORKS ಕೊಣಾಜೆ: ಕೊಣಾಜೆ ಗ್ರಾಮದ ದಾಸರಮೂಲೆ ಎಂಬಲ್ಲಿ ಕಾಂಕ್ರೀಟು ಪಿಲ್ಲರ್ ಹಾಕಿ ನಿರ್ಮಿಸಿದ್ದ ಬೃಹತ್ ಆವರಣಗೋಡೆ ಮಳೆಯಿಂದಾಗಿ ಕುಸಿದು ಹಾನಿಯಾಗಿರುವ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ.ಈ ಸಂದರ್ಭದಲ್ಲಿ ಮನೆಯೊಳಗೆ ಮಲಗಿದ್ದ ಆರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಣಾಜೆಯ ದಾಸರಮೂಲೆಯ ನಿರ್ಮಲಾ ಎಂಬವರ ಮನೆಗೆ ಪಕ್ಕದ ಮನೆಯ ಏರು ಪ್ರದೇಶದಲ್ಲಿರುವ ದೇವಣ್ಣ ಶೆಟ್ಟಿ ಎಂಬವರ ಮನೆಯ ಆವರಣಗೋಡೆಯು ಮಧ್ಯರಾತ್ರಿ ಒಂದು ಗಂಟೆಯ ಸುಮಾರಿಗೆ ಕುಸಿದು ಬಿದ್ದಿದೆ. ಕುಸಿತದ ಪರಿಣಾಮ ನಿರ್ಮಲಾ ಅವರ ಮನೆಯ ಮೇಲ್ಚಾವಣಿಗೆ ಹಾನಿಯಾಗಿದ್ದು, ಗೋಡೆಯು ಬಿರುಕುಗೊಂಡು ಹಾನಿಯಾಗಿದೆ. ಘಟನೆ ಸಂಭವಿಸಿದಾಗ ಮನೆಯೊಳಗೆ ನಿರ್ಮಲಾ ಸೇರಿದಂತೆ ಅವರ ಮಕ್ಕಳಾದ ವಿದ್ಯಾ, ರಮೇಶ ಹಾಗೂ ಅಳಿಯ ಪುಟ್ನಂಜ, ಮೊಮ್ಮಕ್ಕಳು ಸೇರಿ ಒಟ್ಟು ಆರು ಜನ ಮಲಗಿದ್ದರು. ಆವರಣ ಗೋಡೆಯು ಕುಸಿದ ಶಬ್ಧ ಕೇಳಿದಾಗ ಮನೆಯೊಳಗಿದ್ದವರು ಮನೆಯಿಂದ ಹೊರಗೆ ಓಡಿ ಬಂದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ಆವರಣ ಗೋಡೆಯ ಬಳಿ ವಿದ್ಯುತ್ ಕಂಬವೂ ಅಪಾಯದಲ್ಲಿದ್ದು, ಮುಂಜಾಗ್ರತವಾಗಿ ಈ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕವನ್ನು…

Read More