UN NETWORKS
ಕೋಟೆಕಾರು: ನಾದುರಸ್ತಿಯಲ್ಲಿರುವ ರಸ್ತೆ ದುರಸ್ತಿಗೆ ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಯುವಕನೋರ್ವ ಪ್ರಧಾನಿ ಕಚೇರಿಗೆ ಬರೆದ ಪತ್ರಕ್ಕೆ ಸ್ಪಂಧನೆ ದೊರೆತಿದ್ದು, ಕಾಮಗಾರಿಗೆ ನಗರೋತ್ಥಾನ 3 ರಲ್ಲಿ ರೂ. 50 ಲಕ್ಷ ಅನುದಾನ ಮಂಜೂರಾಗಿದೆ.
ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೊಂಡಾಣ, ಮಾಡೂರು ಜಂಕ್ಷನ್ ಕೊಂಡಾಣ ದೈವಸ್ಥಾನ ಹಾಗೂ ಶ್ರೀ ಸಾಯಿ ಬಾಬಾ ಮಂದಿರಕ್ಕೆ ಸಂಪರ್ಕಿಸುವ ರಸ್ತೆಯ ನಾದುರಸ್ತಿಯಲ್ಲಿತ್ತು. ಈ ಬಗ್ಗೆ ಉದ್ಯಮಿ ಹಾಗೂ ಸಮಾಜ ಸೇವಕ ಮಾಡೂರು ಕೊಂಡಾಣದ ಸುರೇಶ್ ಕೆ.ಪಿ ಅವರ ಪುತ್ರ ಸಾಗರ್.ಎಸ್ ಅವರು 2017ರ ಮಾ. 17 ರಂದು ಪ್ರಧಾನ ಮಂತ್ರಿಯವರಿಗೆ ದುರಸ್ತಿಗೆ ಆಗ್ರಹಿಸಿ ದೂರು ಸಲ್ಲಿಸಿದ್ದರು.
ಅದರಂತೆ ಪ್ರಧಾನಿ ಕಚೇರಿಯಿಂದ ಕೋಟೆಕಾರು ಪಟ್ಟಣ ಪಂಚಾಯಿತಿಗೆ ಬಂದ ಸೂಚನೆಯಂತೆ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿಯವರು ಸ್ಪಂಧಿಸಿ ಮನವಿಯಂತೆ ಸ್ಥಳ ಪರಿಶೀಲನೆ ಮಾಡಲಾಗಿದೆ. ರಸ್ತೆ ಅಭಿವೃದ್ಧಿ ಕಾವiಗಾರಿಗೆ ನಗರೋತ್ಥಾನ 3ರ ಅಡಿ ರೂ. 50 ಲಕ್ಷ ಅನುದಾನ ಕಾದಿರಿಸಲಾಗಿದೆ. ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿ ಆರಂಭದ ಹಂತದಲ್ಲಿದೆ ಎಂದು ಹಿಂಬರಹ ನೀಡಿದ್ದಾರೆ.


