UN NETWORKS
ಮಂಗಳೂರು : ಸುನ್ನೀ ಸಂದೇಶ ಮಾಸ ಪತ್ರಿಕೆಯ 16ನೇ ವಾರ್ಷಿಕ ಮಹಾ ಸಂಭ್ರಮ ಹಾಗೂ ಎಸ್ಕೆಎಸ್ಎಸ್ಎಫ್ ಬೆಳ್ಮ ರೆಂಜಾಡಿ ಶಾಖೆಯ 18ನೇ ವಾರ್ಷಿಕ ಸಂಭ್ರಮದ ಪ್ರಯುಕ್ತ ಮಾರ್ಚ್ 15ರಿಂದ 25ರ ತನಕ ಮಾದಕ ದ್ರವ್ಯದ ವಿರುದ್ಧ ಲಹರಿ ಮುಕ್ತ ಸಮಾಜ ಎಂಬ ಘೋಷಣೆಯೊಂದಿಗೆ 10 ದಿವಸಗಳ ಪ್ರಚಾರ ಕಾರ್ಯಕ್ರಮದ ಮಾದಕ ದ್ರವ್ಯದ ವಿರುದ್ಧ ಲಹರಿ ಮುಕ್ತ ಸಮಾಜ ಎಂಬ ಘೋಷಣೆಯೊಂದಿಗೆ ನಡೆಯುವ ಜನಾಂದೋಲನವನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿ ಸುನ್ನೀಸಂದೇಶ ಮಾಸ ಪತ್ರಿಕೆಯ ನಿರ್ದೇಶಕರು, ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿಯ ಉಪಾಧ್ಯಕ್ಷರು, ಕಾರ್ಯಕ್ರಮದ ಕೋಶಾಧಿಕಾರಿಯು ಆದ ಸಿತಾರ್ ಅಬ್ದುಲ್ ಮಜೀದ್ ಹಾಜಿ ಕಣ್ಣೂರುರವರು ಶಿಕಾರಿಪುರದ ರುದ್ರಭೂಮಿಗಳ ಸಮಿತಿ ಅಧ್ಯಕ್ಷರೂ ಝುಲೈಕ ಚಾರಿಟೇಬಲ್ ಟ್ರಸ್ಟಿ ಮಾಜಿ ಅಧ್ಯಕ್ಷರು ಆದ ಹನೀಫ್ ಹಾಜಿ ಶಿಕಾರಿಪುರ ಹಾಗೂ ಶಿಕಾರಿಪುರ ಮುಸ್ಲಿಂ ಜಮಾಅತಿನ ಅಧ್ಯಕ್ಷರಾದ ಫಾರೂಕ್ ಶಿಕಾರಿಪುರರವರಿಗೆ ಮಾದಕ ದ್ರವ್ಯದ ವಿರುದ್ಧ ಹೊರತಂದ ಕಿರುಹೊತ್ತಿಗೆಯನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮುಹಮ್ಮದ್ ಹನೀಫ್, ಉದ್ಯಮಿ ಮುಹಮ್ಮದ್ ಸೆಲೀಂ ಶಿಕಾರಿಪುರ, ಸಾಜ್ ಶಿಕಾರಿಪುರ, ಜಯಕುಮಾರ್ ರೈತ, ರಮೇಶ್ ನಾಯಕ್ ಬೊಳ್ಳೂರು, ಫಾರೂಕ್ ಶಿಕಾರಿಪುರ, ಹನೀಫ್ ಬಾವಾ ಬಿ.ಸಿ.ರೋಡ್, ಫಕ್ರುದ್ದೀನ್ ಹಾಜಿ, ಮುಹಮ್ಮದ್ ಹಾಜಿ, ಸಲೀಂ ಬಾವ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಕರ್ನಾಟಕದ ವಿವಿಧ ಭಾಗಗಳಲ್ಲಿ ನಡೆಯುವ ಮಾದಕ ದ್ರವ್ಯದ ವಿರುದ್ಧ ಲಹರಿ ಮುಕ್ತ ಸಮಾಜ ಎಂಬ ಘೋಷಣೆಯೊಂದಿಗೆ ನಡೆಯುವ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಂಗವಾಗಿ 2018 ಮಾರ್ಚ್ 25ರಂದು ಆದಿತ್ಯವಾರ ಸಂಜೆ 6 ಗಂಟೆಗೆ ದೇರಳಕಟ್ಟೆಯ ಸಿಟಿಗ್ರೌಂಡ್ನಲ್ಲಿ ಅಂತರ್ರಾಷ್ಟ್ರೀಯ ಪ್ರಭಾಷಣಗಾರ ಜನಮನಗೆದ್ದ ಖ್ಯಾತ ವಾಗ್ಮಿ ಪ್ರಭಾಷಣ ಲೋಕದ ಸೌಂದರ್ಯ ಖಲೀಲ್ ಹುದವಿ ಅಲ್ಮಾಲಿಕಿರವರಿಂದ ಮುಖ್ಯ ಪ್ರಭಾಷಣ ನಡೆಯಲಿದೆ.


