Author: UllalaVani

Kannada News From Coastal Karnataka

UN NETWORKS ಉಳ್ಳಾಲ: ಪದವು ಮೇಗಿನ ಮನೆ ರಘುರಾಮ ಆಳ್ವ (78) ಅವರು ಅಸೌಖ್ಯದಿಂದ ಮಂಗಳವಾರ ಸ್ವಗೃಹದಲ್ಲಿ ನಿಧನರಾದರು. ಅವರು ಎರ್ಮಾಳು ತೆಂಕ ಸರಕಾರಿ ಹಿರಿಯ ಶಾಲೆಯಲ್ಲಿ ಮುಖ್ಯ ಅಧ್ಯಾಪಕರಾಗಿ ಹಾಗೂ ಮಂಗಳೂರು ಕಾರ್ ಸ್ಟ್ರೀಟ್ ಜೂನಿಯರ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುತ್ತಾರೆ. ನಂತರ ಕೆಮ್ಮಣ್ಣುಗುಂಡಿ ಜ್ಯೂನಿಯರ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದರು. ಇದಲ್ಲದೆ ಕಲ್ಲಾಪು ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ವ್ಯವಸ್ಥಾಪಕರಾಗಿದ್ದರು. ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

Read More

UN NETWORKS ಸೋಮೇಶ್ವರ: ಜಿಲ್ಲೆಯಲ್ಲಿ ಗೋಕಳ್ಳತನ ಸಂಪೂರ್ಣವಾಗಿ ನಿಲ್ಲಬೇಕು ಮತ್ತು ಅಮೃತಧಾರ ಗೋಶಾಲೆಯ ಗೋಕಳವು ಮಾಡಿದ ಗೋಕಳ್ಳರಿಗೆ ಕಠಿಣ ಶಿಕ್ಷೆಯಾಗಬೇಕು ನಾಡಿನಾದ್ಯಂತ ಗೋಸಂರಕ್ಷಣೆಯಾಗಬೇಕು ಈ ನಿಟ್ಟಿನಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಸಹ ಸಂಘಟನೆಗಳ ಸಹಯೋಗದೊಂದಿಗೆ ಸಾಮೂಹಿಕ ಪ್ರಾರ್ಥನೆಯನ್ನು ಉಳ್ಳಾಲ ವ್ಯಾಪ್ತಿಯ ಎಲ್ಲಾ ದೇವಸ್ಥಾನಗಳ ದೈವಸ್ಥಾನ ಮತ್ತು ಮಂದಿರಗಳಲ್ಲಿ ಯಶಸ್ವಿಯಾಗಿ ನಡೆಸಿದೆ ಎಂದು ವಿಶ್ವಹಿಂದೂ ಪರಿಷತ್‍ನ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್‍ವೆಲ್ ತಿಳಿಸಿದರು. ಪುಣ್ಯಕೋಟಿ ಅಮೃತಾಗೋಶಾಲೆಯ ಗೋಕಳ್ಳತನಕ್ಕೆ ಸಂಬಂಧಿಸಿದಂತೆ ಕಳೆದ ಆರು ದಿನಗಳಿಂದ ನಡೆಯುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ಮತ್ತು ನಾಡಿನಾದ್ಯಂತ ಗೋರಕ್ಷಣೆಗಾಗಿ ಶುಕ್ರವಾರ ಉಳ್ಳಾಲದಾದ್ಯಂತ ನಡೆದ ಸಾಮೂಹಿಕ ಪ್ರಾರ್ಥನೆಯ ಅಂಗವಾಗಿ ಸೋಮೇಶ್ವರ ಶ್ರಿ ಸೋಮನಾಥ ದೇವಸ್ಥಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯ ಬಳಿಕ ಮಾತನಾಡಿದರು. ಜಿಲ್ಲಾ ಕಾರ್ಯಾಧ್ಯಕ್ಷ ಗೋಪಾಲ ಕುತ್ತಾರ್ ಮಾತನಾಡಿ ಅಮೃತಧಾರ ಗೋಶಾಲೆಯಲ್ಲಿ ಕಳವು ನಡೆಸಿ ಎಂಟು ದಿನಗಳಾದರೂ ದನವನ್ನು ಕಡಿದವರನ್ನು ಹಿಡಿದಿರುವ ಪೊಲೀಸರು ಕಳ್ಳರನ್ನು ಬಂಧಿಸಲು ಸಾಧ್ಯವಾಗಿಲ್ಲ. ಗೋಕಳ್ಳರನ್ನು ಬಂಧಿಸಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಟಿ.ಜಿ. ರಾಜಾರಾ ಭಟ್ ಅವರಿಗೆ…

Read More

UN NETWORKS ಉಳ್ಳಾಲ: ಕಾನೂನು ಜಾರಿ ಮಾಡಿ ಗೋವು ದರೋಡೆಕೋರರನ್ನು ನಿಗ್ರಹಿಸದೇ ಇದ್ದಲ್ಲಿ ಪ್ರತಿಭಟಿಸುವ ಅವಕಾಶವೇ ಇರುತ್ತಿರಲಿಲ್ಲ. ಜೀವವನ್ನು ಹಿಂಸಿಸಿ ಕೊಂದು ತಿನ್ನುವುದು ಕೊಳಕು ಸಂಸ್ಕøತಿ ಹೋರಾಟ ಅಪೂರ್ಣವಾಗಲು ಎಂದಿಗೂ ಬಿಡುವುದಿಲ್ಲ. ಆ ಹಂತದಲ್ಲಿ ತಾನೂ ಬಂದು ಕೈಜೋಡಿಸುವುದಾಗಿ ಶ್ರೀ ಮಹಾಚಂದ್ರಾಪುರ ಮಠಧ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿ ಕರೆ ನೀಡಿದರು. ಕೈರಂಗಳದ ಪುಣ್ಯಕೋಟಿನಗರದಲ್ಲಿನ ಅಮೃತಧಾರಾ ಗೋಶಾಲೆಯಲ್ಲಿ ಟಿ.ಜಿ.ರಾಜಾರಾಂ ಭಟ್ ಗೋ ದರೋಡೆ ಆರೋಪಿಗಳ ಪತ್ತೆಗೆ ಒತ್ತಾಯಿಸಿ ಕೈಗೊಂಡಿರುವ ಆಮರಣಾಂತ ಉಪವಾಸದ 6 ನೇ ದಿನದಂದು ಭೇಟಿ ನೀಡಿ ಗೋಪೂಜೆ ನೆರವೇರಿಸಿ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು. ಪುಣ್ಯಕೋಟಿನಗರದ ಘಟನೆ ತಡವಾಗಿ ಗೊತ್ತಾಗಿದೆ. ಗೋಸಂಪರ್ಕ ನಿರಂತರವಾಗಿ ನಡೆಸುತ್ತಿರುವುದರಿಂದ ಪತ್ರಿಕೆಗಳನ್ನು ಓದುವುದನ್ನು ಬಿಟ್ಟಿರುವುದರಿಂದ ಘಟನೆ ನಡೆದಿರುವುದು ಗೊತ್ತಾಗಿರಲಿಲ್ಲ. ಎ.1 ರಂದು ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ಚಿತ್ರವನ್ನು ನೋಡಿ ಮೊದಲಿಗೆ ಎಪ್ರಿಲ್ ಫೂಲ್ ಅಂದುಕೊಂಡರೂ ಬಳಿಕ ಪ್ರಕರಣ ಬೆಳಕಿಗೆ ಬಂತು. ಸಮಾಜದಲ್ಲಿ ಒಳಿತಿಗೆ ಉಳಿಗಾಲವಿಲ್ಲದ ಸ್ಥಿತಿ, ಅನ್ಯಾಯಗಳು ಮೇರೆಮೀರಿದೆ. ಅಮೃತಧಾರಾ ಗೋಶಾಲೆಯಿಂದ ಗೋದರೋಡೆ ನಡೆಸಿದವರು…

Read More

UN NETWORKS ತೊಕ್ಕೊಟ್ಟು: ದರ್ಗಾದ ಸಂವಿಧಾನ ಪುಸ್ತಕಕ್ಕೆ ವಿರೋಧವಾಗಿ ಹೋದವರು ಅಧಿಕೃತವ ಅಥವಾ ಅನಧಿಕೃತವಾ ಎನ್ನುವುದನ್ನು ಜನರು ತೀರ್ಮಾನಿಸಬೇಕಾಗಿದ್ದು, ಇಂತಹ ಕೃತ್ಯವನ್ನು ಮಾಡಿರುವ ದರ್ಗಾ ಅಧಿಕಾರ ಅನಧಿಕೃತವಾಗಿದ್ದು, ಇದನ್ನು ಹೇಳಿದವರ ಮೇಲೆ ಮಾನನಷ್ಟ ಮೊಖದ್ದಮೆ ಹಾಕುವುದಾದರೆ ಮೊದಲು ದರ್ಗಾ ಕಚೇರಿಗೆ ಬೀಗ ಹಾಕಿದ ವಕ್ಪ್ ಅಧಿಕಾರಿಗಳ ಮೇಲೆ ಹಾಕಬೇಕಾಗಿದೆ ಎಂದು ಸೈಯ್ಯದ್ ಮದನಿ ಮೊಹಲ್ಲಾ ಒಕ್ಕೂಟದ ಅಧ್ಯಕ್ಷ ಪಿ.ಎಸ್. ಮಹಮ್ಮದ್ ಶಿಹಾಬುದ್ದೀನ್ ಕಾಮಿಲ್ ಸಖಾಫಿ ಅಭಿಪ್ರಾಯಪಟ್ಟರು. ತೊಕ್ಕೊಟ್ಟು ಕೇಂದ್ರ ಬಸ್ ನಿಲ್ದಾಣದ ಬಳಿ ಸಯ್ಯದ್ ಮದನಿ ದರ್ಗಾದ ಅನಧಿಕೃತ ಸಮಿತಿಯ ವಿರುದ್ಧ ನಡೆದ ಬೃಹತ್ ಪ್ರತಿಭಟನೆಯನ್ನುದ್ಧೇಶಿಸಿ ಮಾತನಾಡಿದರು.ದರ್ಗಾ ಸಂವಿಧಾನ ಪ್ರಕಾರ ಖಾಝಿಯರವರ ತೀರ್ಮಾನ ಅಂತಿಮ ಆದರೆ ದರ್ಗಾ ಅಧಿಕಾರ ವಹಿಸಿಕೊಳ್ಳುವ ಸಂದರ್ಭ ಖಾಝಿಯವರನ್ನು ಧಿಕ್ಕರಿಸಿ ನಿಯಮ ಕಡೆಗಣಿಸಿ ಅಧಿಕಾರ ವಹಿಸಿಕೊಂಡಿದ್ದಾರೆ. ಈಗಿನ ಖಾಝಿಯನ್ನು ಸಂಪೂರ್ಣ ಕಡೆಗಣಿಸಲಾಗಿದೆ. ತಾಜುಲ್ ಉಲಮಾ ಇದ್ದಾಗಲೇ ಅವರ ವಿರೋಧ ಇದ್ದರೂ ದರ್ಗಾ ಮುಂಭಾಗದ ಮಸೀದಿಯಲ್ಲಿ ಜುಮಾ ಆರಂಭಿಸಲಾಗಿದೆ. ತಾಜುಲ್ ಉಲಮಾರನ್ನು ಕಡೆಗಣಿಸಿದ ಯಾವುದೇ ಮುಸಲ್ಮಾನರು ಮುಂದಕ್ಕೆ ಹೋಗಲು…

Read More

UN NETWORKS ಕೈರಂಗಳ: ಗೋಮಾತೆಯ ರಕ್ಷಣೆಗಾಗಿ ಅಗತ್ಯಬಿದ್ದಲ್ಲಿ ನಾವು ಶಸ್ತ್ರವನ್ನು ಕೈಗೆತ್ತಿಕೊಳ್ಳಲು ಸನ್ನದ್ಧ. ಶುಕ್ರವಾರ ಸಂಜೆ ಸಂದ್ಯಾಕಾಲದವರೆಗೆ ಇಲಾಖೆಗಳಿಗೆ ಮೀಸಲಾಗಿರಿಸಿದ್ದೇವೆ, ಆ ಸಮಯದಲ್ಲಿ ಬಂಧಿಸಿ ಮರಣ ದಂಡನೆ ಆಗುವ ರೀತಿಯ ಕೇಸು ಹಾಕಬೇಕು. ಒಂದು ವೇಳೆ ಅದಕ್ಕೆ ಪೊಲೀಸ್ ಇಲಾಖೆಗೆ ತಾಕತ್ತು ಇಲ್ಲವಾದರೆ ಪೊಲೀಸರು ಟೊಪ್ಪಿ ಕೆಳಗಿಟ್ಟು, ಹಿಂದೂ ಕಾರ್ಯಕರ್ತರಿಗೆ ಬಿಟ್ಟುಕೊಡಿ ಎಂದು ಹಿಂದೂ ಮುಖಂಡ ಕುಂಟಾರು ರವೀಶ್ ತಂತ್ರಿ ಸವಾಲು ಹಾಕಿದರು. ಅವರು ಗುರುವಾರ ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯಿಂದ ಗೋಕಳ್ಳತನ ಮಾಡಿದ ಗೋಹಂತಕರನ್ನು ಬಂಧಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಐದನೇ ದಿನದ ಆಮರಣಾಂತ ಉಪವಾಸ ಸತ್ಯಾಗ್ರಹದಲ್ಲಿ ವಿಶೇಷ ಗೋಪೂಜೆ ಸಲ್ಲಿಸಿ ಮಾತನಾಡಿದರು.ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಸುಬ್ರಹ್ಮಣ್ಯ ಭಟ್ ಕಜಂಪಾಡಿ ಮಾತನಾಡಿ ಅಸಾಮಾನ್ಯರಾದ ಆರಕ್ಷಕರು ಯಾವುದೇ ಸುಳಿವು ಇಲ್ಲದೆಯೂ ಅಪರಾಧಿಗಳನ್ನು ಹುಡುಕಿ ತರುವವರು. ಆದರೆ ಐದು ದಿನವಾದರೂ ಗೋಕಳ್ಳರ ಪತ್ತೆಯಾಗಿಲ್ಲ ಎನ್ನುವುದು ಆನೇಕ ಗೊಂದಲಕ್ಕೆ ಎಡೆಮಾಡುತ್ತಿದೆ. ಸದ್ಗುಣವನ್ನು ವಿಕೃತದೆಡೆಗೆ ತಿರುಗಿಸುವ ಪ್ರಯತ್ನ ಮಾಡದೆ ಜವಾಬ್ದಾರಿಯಿಂದ ವರ್ತಿಸುವುದು ಒಳಿತು…

Read More

UN NETWORKS ಮುಂಬಯಿ: ಹೊಸಂಗಡಿ ಮಳ್ ಹರ್ ಇಸ್ಲಾಮಿಕ್ ಇದರ ಮುಂಬಯಿ ಘಟಕ ವತಿಯಿಂದ 4ನೇ ಸ್ವಲಾತ್ ವಾರ್ಷಿಕ ಎಪ್ರಿಲ್ 7ರಂದು ಸಂಜೆ5ಗಂಟೆಗೆ ಮುಂಬಯಿಯ ದಾದರ್ ಪೂರ್ವದ ಲತ್ವೀಫಿಯ ಸುನ್ನೀ ಮಸ್ಜಿದ್ ದಲ್ಲಿ ನಡೆಯಲಿದೆ. ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್-ಬುಖಾರಿ ನೇತ್ರತ್ವ ವಹಿಸಿದರು. ಡಾ. ಹುಸೈನ್ ಸಖಾಫಿ ಚುಳ್ಳಿಕ್ಕೋಡ್, ಮಾಸ್ಟರ್ ಶಿಹಾನ್ ಉಳ್ಳಾಲ, ಹಿಲಾಲ್ ಬಶೀರ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಮುಂಬಯಿ ಘಟಕ ಮ್ಯಾನೇಜರ್ ಸಿದ್ದೀಕ್ ಮುಸ್ಲಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ULLAL NETWORKS ಕೈರಂಗಳ: ಭಟ್ ಅವರು ಕೈಗೊಂಡಿರುವ ಅಮರಣಾಂತ ಉಪವಾಸಕ್ಕೆ ನ್ಯಾಯ ಸಿಗದೇ ಇದ್ದಲ್ಲಿ ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯ ಜನತೆ ಅವರ ಹೋರಾಟದಲ್ಲಿ ಭಾಗಿಯಾಗಲಿದ್ದು, ಈ ಮೂಲಕ ದನ ಕಳ್ಳರ ಅಟ್ಟಹಾಸಕ್ಕೆ ಕೊನೆ ಹಾಡಬೇಕಿದೆ ಎಂದು ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವರಾದ ಕೃಷ್ಣ .ಜೆ.ಪಾಲೇಮಾರ್ ಹೇಳಿದ್ದಾರೆ. ಕೈರಂಗಳ ಪುಣ್ಯಕೋಟಿನಗರದ ಅಮೃತಧಾರಾ ಗೋಶಾಲೆಯಲ್ಲಿ ಐದನೇ ದಿನಕ್ಕೆ ಕಾಲಿಟ್ಟಿರುವ ಟಿ.ಜಿ.ರಾಜಾರಾಂ ಭಟ್ ನೇತೃತ್ವದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಕ್ಕೆ ಭೇಟಿ ನೀಡಿ ಮಾತನಾಡಿದರು. ಅಮೃತಧಾರಾ ಗೋಶಾಲೆಯಿಂದ ಗೋವಿನ ದರೋಡೆ ನಂತರ ದೂರು ನೀಡಿದರೂ ಸರಿಯಾದ ಸಮಯಕ್ಕೆ ಪೊಲೀಸರು ಪರಿಶೀಲನೆ ನಡೆಸದೆ ತಾತ್ಸಾರ ಮನೋಭಾವನೆ ತೋರಿದ್ದಾರೆ. ಜಿಲ್ಲೆಯ ಜನತೆ ಗೋಮಾತೆಯ ಭಕ್ತರೇ ಆಗಿದ್ದಾರೆ. ಎಲ್ಲಾ ಧರ್ಮದವರು ಗೋವನ್ನು ಆರಾಧನೆ ಮಾಡುವವರೇ ಆಗಿದ್ದಾರೆ. ಆದರೆ ಅದರ ನಡುವೆ ದನಕಳ್ಳರನ್ನು ಪ್ರೋತ್ಸಾಹಿಸುವ ಕಾರ್ಯ ಸರಕಾರದಿಂದ ಆಗಿದೆ. ಅದಕ್ಕಾಗಿ ನಡೆಯುತ್ತಿರುವ ಅಮರಣಾಂತ ಉಪವಾಸದಲ್ಲಿ ಎರಡು ಜಿಲ್ಲೆಗಳ ಜನ ಬೆಂಬಲಿಸಲಿದ್ದಾರೆ. ಸರಕಾರದ ಕಣ್ಣಮುಚ್ಚಾಲೆ ಜನರಿಗೆ ಸಾಕಾಗಿದೆ. ದರೋಡೆಕೋರರಿಗೆ, ಕಳ್ಳಕಾಕರಿಗೆ…

Read More

UN NETWORKS ಉಳ್ಳಾಲ: ಉಳ್ಳಾಲ ಭಾಗದ ಎಲ್ಲಾ ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರಗಳಲ್ಲಿ ಎ.6 ರಂದು ಗೋ ಸಂರಕ್ಷಣೆಗಾಗಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ ಎಂದು ವಿಶ್ವ ಹಿಂದು ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಕೃಷ್ಣಮೂರ್ತಿ ಹೇಳಿದ್ದಾರೆ. ಕುತ್ತಾರು ಬಾಲಸಂರಕ್ಷಣಾ ಕೇಂದ್ರದಲ್ಲಿ ಗುರುವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.ದೇಶದಲ್ಲಿ ಬಹುಸಂಖ್ಯಾತರ ಹಕ್ಕಿಗಾಗಿ ಹೋರಾಟ ನಡೆಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಗೋ ಉತ್ಪನ್ನಗಳ ಕೊರತೆಯಾದಲ್ಲಿ ಮನುಷ್ಯ ಜೀವಿಸಲು ಕಷ್ಟಕರವಾಗಬಹುದು. ರಾಜ್ಯ ಸರಕಾರ ಪ್ರಮಾಣ ವಚನ ಸ್ವೀಕರಿಸಿದ ಮರುದಿನದಂದೇ ಉಳ್ಳಾಲ ಭಾಗದಲ್ಲಿ ಗೂವು ಕಳವು ನಡೆಸಿ ತುಳಸೀಕಟ್ಟೆಯಲ್ಲಿ ಗೋವಿನ ಗೊರಸು ಇಟ್ಟಿರುವಂತಹ ಹೇಯ ಕೃತ್ಯ ನಡೆದಿದೆ, ತದನಂತರ ಬೆನ್ನಲ್ಲೇ ಜಾನುವಾರು ಕಳವು ಪ್ರಕರಣ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಆದರೆ ಸರಕಾರದ ಮಂತ್ರಿಗಳು, ಶಾಸಕರು ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಶಾಸನವನ್ನು ವಾಪಸ್ಸು ಪಡೆಯುವ ಮೂಲಕ ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಸಮಾಜದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಅತಂತ್ರದಲ್ಲಿರುವ ಹಾಗೂ ನಶಿಸಿ ಹೋಗುತ್ತಲಿರುವ ಗೋ ಸಂಪತ್ತನ್ನು ಉಳಿಸುವ ಉದ್ದೇಶದಿಂದ ವಿ.ಹಿಂಪ, ಹಿಂದು…

Read More

UN NETWORKS ಉಳ್ಳಾಲ: ಕಾಂಗ್ರೆಸ್ ಸರಕಾರ ಆಡಳಿತದ ಬಳಿಕ ಉಳ್ಳಾಲದಲ್ಲಿ ವಿಜಯೋತ್ಸವದ ಮರುದಿನವೇ ಗೋಕಳ್ಳತನ ಆರಂಭವಾಗಿದ್ದು, ಕಳೆದ ಐದು ವರ್ಷಗಳಿಂದ ಉಳ್ಳಾಲ ಮತ್ತು ಕೊಣಾಜೆ ಪೊಲೀಸ್ ಠಾಣೆಯಲ್ಲಿ 22 ಎಫ್‍ ಐ ಆರ್ ಗಳು ಗೋ ಕಳ್ಳರ ವಿರುದ್ಧ ಆಗಿದ್ದು, ಇಲ್ಲಿನ ಜನಪ್ರತಿನಿಧಿಗಳ , ಕಾಂಗ್ರೆಸ್‍ನ ದ್ವಂದ್ವ ನೀತಿಯಿಂದ ಅವರ ಕುಮ್ಮಕ್ಕಿನಿಂದಲೇ ಗೋಕಳ್ಳರು ರಾಜಾರೋಷವಾಗಿ ತಮ್ಮ ಕೃತ್ಯವನ್ನು ಮಾಡುತ್ತಿದ್ದಾರೆ ಎಂದು ವಿಶ್ವಹಿಂದೂ ಪರಿಷತ್‍ನ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‍ವೆಲ್ ಅಭಿಪ್ರಾಯಪಟ್ಟರು. ಕೈರಂಗಳ ಪುಣ್ಯಕೋಟಿನಗರದಲ್ಲಿ ನಡೆಯಯುತ್ತಿರುವ ಟಿ.ಜಿ,.ರಾಜಾರಾಮ ಭಟ್ಟರ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಪೂರಕವಾಗಿ ಭಟ್ ಅವರ ಆರೋಗ್ಯ ಸ್ಥಿರತೆಗಾಗಿ ಕುತ್ತಾರು ರಾಜರಾಜೇಶ್ವರೀ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಗೋಪ್ರೇಮಿ ಸಂಘಟನೆಗಳ ಆಶ್ರಯದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯ ಬಳಿಕ ಮಾತನಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮರುದಿನವೇ ಉಳ್ಳಾಲ ಉಚ್ಚಿಲದಲ್ಲಿ ಮಯ್ಯರ ಮನೆಯ ಗೋ ಕಳವು ಮಾಡಿ ಗೋವಿನ ತಲೆ ಕೈಕಾಲುಗಳನ್ನು ತುಳಸಿಕಟ್ಟೆಯಲ್ಲಿ ಇಡುವ ಮೂಲಕ ಪ್ರಾರಂಭಗೊಂಡ ಗೋಹತ್ಯೆ ಕಳೆದ ಐದು ವರ್ಷಗಳಿಂದ…

Read More

UN NETWORKS ಕೈರಂಗಳ: ಗೋವಿನ ಪರವಾಗಿ ಸತ್ಯಾಗ್ರಹ ನಡೆಸುತ್ತಿರುವ ರಾಜಾರಾಮ್ ಭಟ್ ಅವರು ಅನಾರೋಗ್ಯಕ್ಕೆ ಒಳಗಾದರೆ ಜಿಲ್ಲಾಡಳಿತ ಮತ್ತು ಸರ್ಕಾರವೇ ಹೊಣೆಯಾಗುತ್ತೆ. ಮುಂದಿನ ಎರಡು ದಿನಗಳಲ್ಲಿ ಸರ್ಕಾರ ಸ್ಪಂದಿಸದೇ ಇದ್ದಲ್ಲಿ ಎಲ್ಲಾ ಸಂತರು ಕಾಲ್ನಡಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತೇವೆ. ಆದರೆ ಇದಕ್ಕೂ ಸ್ಪಂದನೆ ಸಿಗದೇ ಇದ್ದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಬೆಚ್ಚಿ ಬೀಳುವ ರೀತಿಯಲ್ಲಿ ಹೋರಾಟ ನಡೆಯಲಿದೆ ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯಿಂದ ಗೋಕಳ್ಳತನ ಮಾಡಿದ ಗೋಹಂತಕರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಭಾನುವಾರ ಗೋಶಾಲೆ ಆವರಣದಲ್ಲಿ ಗೋಶಾಲೆ ಸಮಿತಿ ಅಧ್ಯಕ್ಷ ಟಿ.ಜಿ.ರಾಜಾರಾಮ ಭಟ್ ಆರಂಭಿಸಿರುವ ಆಮರಣಾಂತ ಉಪವಾಸ ಸತ್ಯಾಗ್ರಹದ ನಾಲ್ಕನೇ ದಿನವಾದ ಬುಧವಾರ ದಂದು ಹಮ್ಮಿಕೊಂಡಿದ್ದ ಸಾಧು-ಸಂತರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ಪ್ರತಿಯೊಂದು ಧರ್ಮದವರ ಪರವಾಗಿ ರಾಜರಾಮ್ ಭಟ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಮುಂದಿನ ದಿನಗಳಲ್ಲಿ ಅಂದೋಲನವಾಗಬೇಕು. ಈ ಪ್ರದೇಶದ ಶಿಕ್ಷಣ…

Read More