UN NETWORKS ಉಳ್ಳಾಲ: ಕರಾವಳಿ ಭಾಗದಲ್ಲಿ ಕೋಮುಗಲಭೆಗೆ ಹೆಚ್ಚಿನ ಪ್ರಚೋದನೆ ನೀಡಲಾಗುತ್ತಿದೆ ಹೊರತು ದೇಶಕಾಯುವ ಮನೋಭಾವವನ್ನು ಬೆಳೆಸಲಾಗುತ್ತಿಲ್ಲ. ಗಡಿ ಕಾಯುವಾಗ, ಯುದ್ಧ ಮಾಡುವಾಗ ಜಾತಿ ಬೇಧವಿಲ್ಲದೆ ಮುಸ್ಲಿಮರು, ಕ್ರೈಸ್ತರು, ಹಿಂದುಗಳು ಒಟ್ಟಾಗಿ ಭಯೋತ್ಪಾಧಕರನ್ನು ಸೋಲಿಸುವ ಕಾರ್ಯದಲ್ಲಿ ತೊಡಗುತ್ತಿದ್ದೇವೆ. ಕರಾವಳಿ ಭಾಗದಲ್ಲಿ ಮಾತ್ರ ವ್ಯತಿರಿಕ್ತ ಉದಾಹರಣೆ ಎದ್ದು ಕಾಣುತ್ತಿದೆ ಎಂದು ಜಮ್ಮು ಕಾಶ್ಮೀರದ ಎನ್‍ಕೌಂಟರ್‍ನಲ್ಲಿ ಭಾಗಿಯಾದ ಭಾರತೀಯ ಸೇನೆಯ ಯೋಧ ಝುಬೇರ್ ಹಳೇನೆರಂಕಿ ಹೇಳಿದರು. ಚೆಂಬುಗುಡ್ಡೆ ಫ್ರೆಂಡ್ಸ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಚೆಂಬುಗುಡ್ಡೆಯ ನೂರುಲ್ ಹುದಾ ಮದರಸದಲ್ಲಿ ಭಾನುವಾರ ಜರಗಿದ ಬಿ.ಎಂ. ಮುಹಮ್ಮದ್ ಮದನಿ ಸ್ಮರಣಾರ್ಥ ಎರಡನೇ ವರ್ಷದ ಬೃಹತ್ ರಕ್ತದಾನ ಶಿಬಿರ ಮತ್ತು ಯೋಧ ಝುಬೇರ್ ಹಳೇನೆರಂಕಿಯವರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಬ್ಲಡ್ ಡೋನರ್ಸ್ ಮಂಗಳೂರು ಹಮ್ಮಿಕೊಂಡ ಕಾರ್ಯಕ್ರಮ ಜೀವದಾನ ಮಾಡುವಂತಹ ಶಿಬಿರದಲ್ಲಿ ದೇಶಭಕ್ತಿ ಎದ್ದು ಕಾಣುತ್ತಿದೆ. ಐದು ವರ್ಷಗಳ ಹಿಂದೆ ಮದರಸದಲ್ಲಿ ಭಯೋತ್ಪಾದನೆ ಕಲಿಸಲಾಗುತ್ತಿದೆ…
Author: UllalaVani
UN NETWORKS ಉಳ್ಳಾಲ: ಫಾಸ್ಟ್ ಫುಡ್ ಮಾಲೀಕನಿಗೆ ರೌಡಿಶೀಟರ್ ಓರ್ವ ಬಿಸಿ ಎಣ್ಣೆ ಎರಚಿ ಮಾರಣಾಂತಿಕ ದಾಳಿ ನಡೆಸಿರುವ ಘಟನೆ ಉಳ್ಳಾಲ ದ ಪ್ಯಾರಿಸ್ ಹೊಟೇಲಿನ ಎದುರುಗಡೆ ನಿನ್ನೆ ತಡರಾತ್ರಿ ಸಂಭವಿಸಿದ್ದು, ಘಟನೆಯಿಂದ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. ಉಳ್ಳಾಲ ನಿವಾಸಿ ಗಫೂರ್ (30) ದಾಳಿಗೆ ಒಳಗಾದ ಫಾಸ್ಟ್ ಫುಡ್ ಅಂಗಡಿ ಮಾಲೀಕರು. ಇವರ ಮೇಲೆ ಹಲವು ಪ್ರಕರಣಗಳ ಆರೋಪಿಯಾಗಿದ್ದ ರೌಡಿಶೀಟರ್ ಆಗಿರುವ ನಮಿತ್ ದಾಳಿ ನಡೆಸಿದ್ದಾನೆ. ವಾರದ ಹಿಂದೆ ಅಂಗಡಿಯಲ್ಲಿ ತಿಂದು ಹಣ ಬಾಕಿಯಿರಿಸಿದ್ದ ನಮಿತ್‍ನನ್ನು ಗಫೂರ್ ಎರಡು ದಿನಗಳ ಹಿಂದೆ ಹಣ ಕೇಳಿದ್ದರು. ಈ ವೇಳೆ ನಮಿತ್ ಹಣ ಕೊಡುವುದಿಲ್ಲ ಎಂದು ಬೆದರಿಸಿ ಜೀವಬೆದರಿಕೆಯನ್ನು ಒಡ್ಡಿ ತೆರಳಿದ್ದ. ಇದರಿಂದ ಗಾಬರಿಗೊಂಡ ಗಫೂರ್ ಅವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಆರೋಪಿಯನ್ನು ಹಿಡಿಯುವ ಪ್ರಯತ್ನ ಮಾಡಿರಲಿಲ್ಲ. ಶನಿವಾರ ಮತ್ತೊಮ್ಮೆ ಅಂಗಡಿಯತ್ತ ಬಂದ ನಮಿತ್ ಗಫೂರ್ ಅವರಿಗೆ ಏಕಾಏಕಿ ಹಲ್ಲೆ ನಡೆಸಿದ್ದು, ಬಳಿಕ ಕಬಾಬ್ ಕಾಯಿಸಿಟ್ಟಿದ್ದ ಬಿಸಿ ಎಣ್ಣೆಯನ್ನೇ…
UN NETWORKS ಉಳ್ಳಾಲ: ವಾಯುಯಾನ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ದೇಶ -ವಿದೇಶದಾದ್ಯಂತ ವಿಪುಲ ಅವಕಾಶಗಳಿದ್ದು, ಪ್ರವಾಸೋದ್ಯಮ ಅಭಿವೃದ್ಧಿಯಾಗುವ ಮೂಲಕ ವಾಯುಯಾನ ಸಂಸ್ಥೆಗಳ ಆದಾಯ ಹೆಚ್ಚಾಗುವುದರೊಂದಿಗೆ ಉದ್ಯೋಗ ಸೃಷ್ಟಿಯೂ ಆಗಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎಂಬಿಎ (ಟಿಟಿಎಂ) ವಿಭಾಗದ ಅಸಿಸ್ಟೆಂಟ್ ಪ್ರೊ. ಜೋಸೆಫ್ ಪಿ.ಡಿ. ಅಭಿಪ್ರಾಯಪಟ್ಟರು. ಅವರು ಉಳ್ಳಾಲ ಸೋಮೇಶ್ವರ ರಸ್ತೆಯಲ್ಲಿರುವ ಮೆರೇಡಿಯನ್ ಕಾಲೇಜು ಇದರ ಘಟಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ವಿತರಿಸಿ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಾಯುಯಾನ ಉತ್ಕøಷವಾಗಿ ಬೆಳೆಯುತ್ತಿದ್ದು, ಭಾರತದಿಂದ ಹೊರದೇಶಕ್ಕೆ ಮತ್ತು ಹೊರದೇಶಗಳಿಂದ ದೇಶಕ್ಕೆ ತಲುಪಲು ದರ ಬಹಳಷ್ಟು ಕಡಿಮೆಯಾಗಿದೆ. ಪ್ರವಾಸೋದ್ಯಮದ ಅಭಿವೃದ್ಧಿ ಜತೆಗೆ ಆದಾಯ ಮತ್ತು ಉದ್ಯೋಗ ಸೃಷ್ಟಿಯೂ ಹೆಚ್ಚಾಗುತ್ತಿದೆ. ಸಾಮಾಜಿಕವಾಗಿಯೂ ವಾಯುಯಾನ ವಲಯ ಉನ್ನತ ಮಟ್ಟದಲ್ಲಿ ಕಾರ್ಯಾಚರಿಸುತ್ತಿದೆ. ವಿದ್ಯಾರ್ಥಿಗಳು ಕೇವಲ ಪದವಿ ಪಡೆದರೆ ಸಾಲದು, ಕಂಪೆನಿಗಳಿಗೆ ಬೇಕಾದ ರೀತಿಯ ಕೌಶಲ್ಯವೃದ್ಧಿಯನ್ನು ಬೆಳೆಸಬೇಕಿದೆ. ಅದಕ್ಕಾಗಿ ಪರಿಶ್ರಮ ಅಗತ್ಯ ಎಂದರು. https://www.youtube.com/watch?v=S19ovf66FTM https://www.youtube.com/watch?v=19zi5lytraQ&t=206s https://www.youtube.com/watch?v=uS25BccEtuc&t=1305s ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೆರೆಡಿಯನ್ ಕಾಲೇಜು ನಿರ್ದೇಶಕ ಡಾ| ಜೋಬಿ ಇ.ಸಿ…
UN NETWORKS ತಲಪಾಡಿ: ತಂಡವೊಂದು ಅಕ್ರಮವಾಗಿ ಬಾರಿನ ಕ್ಯಾಷ್ ಕೌಂಟರಿಗೆ ನುಗ್ಗಿ ದಾಂಧಲೆಗೈದು, ಇಬ್ಬರ ಮೇಲೆ ಹಲ್ಲೆ ನಡೆಸಿ ನಗದು , ಮದ್ಯದ ಬಾಟಲಿ ಲೂಟಿಗೈದು ಸೊತ್ತುಗಳಿಗೆ ಹಾನಿ ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ದೇವಿಪುರ ರಸ್ತೆಯಲ್ಲಿ ಬುಧವಾರ ನಡೆದಿದೆ. ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಲಪಾಡಿ ದೇವಿಪುರ ರಸ್ತೆಯಲ್ಲಿರುವ ಅತಿಥಿ ಬಾರ್ ನಲ್ಲಿ ದಾಂಧಲೆ ನಡೆದಿದೆ. ಸ್ಥಳೀಯ ನಿವಾಸಿಗಳಾದ ನಿಚ್ಚು , ಸಂದೇಶ, ಗಣೇಶ, ರಾಹುಲ್, ರಮಾನಂದ, ಕಿರಣ್, ಶಿವ, ಹಾಗೂ ಇತರೆ 12 ಮಂದಿಯ ತಂಡ ಅಕ್ರಮವಾಗಿ ನುಗ್ಗಿ ದಾಂಧಲೆ ನಡೆಸಿದೆ. ಮಧ್ಯಾಹ್ನ ವೇಳೆ ಬಾರಿನ ಕ್ಯಾಷ್ ಕೌಂಟರಿನೊಳಕ್ಕೆ ನುಗ್ಗಿದ ತಂಡ ಕಂಪ್ಯೂಟರ್, ಪ್ರಿಂಟರ್ ಪುಡಿಗೈದು, ಕ್ಯಾಷಿನಲ್ಲಿರಿಸಲಾಗಿದ್ದ ರೂ. 1 ಲಕ್ಷ ನಗದು , ಮೊಬೈಲ್ ಕಳವುಗೈದು , ಮದ್ಯದ ಬಾಟಲಿಯಿಂದ ಬಾರ್ ಸಿಬ್ಬಂದಿ ತಲೆಗೆ, ಕೈಗೆ ಹೊಡೆದಿದ್ದಾರೆ. ಜತೆಗೆ ಬಾಟಲಿಗಳನ್ನು ಕಳವು ನಡೆಸಿದ್ದಾರೆ . ಘಟನೆಯಲ್ಲಿ ಸಿಬ್ಬಂದಿ ಪ್ರವೀಣ್ ಮತ್ತು ಸುಜಿತ್ ಎಂಬವರು ಗಾಯಗೊಂಡಿದ್ದಾರೆ.…
UN NETWORKS ಉಳ್ಳಾಲ: ಒರ್ವ ಮುಸ್ಲಮಾನನಾಗಬೇಕಾದರೆ ಅತನಿಗೆ ಮದ್ರಸ ವಿಧ್ಯೆ ಅತ್ಯಗತ್ಯವಾಗಿದೆ. ಮದ್ರಸ ವಿಧ್ಯೆ ಪಡೆದರೆ ಮಾತ್ರ ಸಂರ್ಪೂಣ ಮುಸ್ಲಮಾನನಾಗಿ ಬಾಳಲುಸಾಧ್ಯ ಎಂದು ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್-ಬುಖಾರಿ ಕೂರತ್ ತಂಙಳ್ ಅಭಿಪ್ರಾಯಪಟ್ಟರು. ಅವರು ಮಂಜನಾಡಿ ಗ್ರಾಮದ ಕೊಲ್ಲರಕೋಡಿ ನೂರುಲ್ ಹುದಾ ಮಸೀದಿ ತಖ್ವಾ ಹಾಗೂ ಎಸ್‍ವೈಎಸ್ ಮತ್ತು ಎಸ್ಸೆಸ್ಸೆಫ್ ಕೊಲ್ಲರಕೋಡಿ ಶಾಖೆವತಿಯಿಂದ ನಿರ್ಮಿಸಿದ ನೂತನ ಮದ್ರಸ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಮದ್ರಸ ವಿಧ್ಯೆ ಪಡೆಯದೆ ಮುಸ್ಲಿಮನಾಗಿ ಬದುಕಲು ಸಾಧ್ಯವಿಲ್ಲ. ಇಂದು ಧಾರ್ಮಿಕ ವಿಧ್ಯೆ ಪಡೆಯುವರರ ಸಂಖ್ಯೆ ಕುಸಿತ ಗೊಂಡಿದ್ದು. ಪೋಷಕರ ತಮ್ಮ ಮಕ್ಕಳನ್ನು ಲೌಕಿಕ ವಿದ್ಯೆ ಜೋತೆಗೆ ಧಾರ್ಮಿಕ ವಿದ್ಯಾಭ್ಯಾಸವನ್ನು ನೀಡದಿದರೆ ಮಾತ್ರ ಉತ್ತಮ ನಾಗರಿಕನ್ನಾಗಿ ಬೆಳೆಯಲು ಸಾಧ್ಯ ಎಂದು ಹೇಳಿದರು. ಮಂಜನಾಡಿ ಅಲ್-ಮದೀನಾ ವಿದ್ಯಾ ಸಂಸ್ಥೆಯ ಶಿಲ್ಪಿ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಧಾರ್ಮಿಕ ವಿಧ್ಯೆ ಇಲ್ಲದವನ್ನು ಪ್ರಾಣಿಗೆ ಸಮಾನವಾಗಿದ್ದು, ಮದ್ರಸ ವಿಧ್ಯೆ ಪಡೆಯಲು…
UN NETWORKS ಕೊಣಾಜೆ: ಜೀವನದಲ್ಲಿ ನಾವು ಕಠಿಣವಾದ ಪರಿಶ್ರಮ ಹಾಗೂ ಸಾಧನೆಯೊಂದಿಗೆ ಮುನ್ನಡೆದರೆ ಮುಂದೆ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ನಮ್ಮಲ್ಲಿ ಟ್ಯಾಲೆಂಟ್ ಇರದಿದ್ದರೂ ಮತ್ತೊಬ್ಬರಲ್ಲಿರುವ ಟ್ಯಾಲೆಂಟನ್ನು ಗುರುತಿಸಿ ಅವರನ್ನು ಮೇಲಕೆತ್ತುವ ಕೆಲಸ ಮಾಡಿದರೆ ಮುಂದೊಂದು ದಿನ ಅವರು ನಮ್ಮನ್ನು ನೆನಪಿಸುತ್ತಾರೆ ಎಂದು ಸಂಗೀತ ಮತ್ತು ಚಲನಚಿತ್ರ ನಿರ್ದೇಶಕ ರವಿ ಬಸ್ರೂರು ಅವರು ಹೇಳಿದರು.ಅವರು ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಆಶ್ರಯದಲ್ಲಿ ವಿವಿಯ ಮಂಗಳಾ ಸಭಾಂಗಣದಲ್ಲಿ ನಡೆಯುತ್ತಿರುವ `ಸಂಭ್ರಮ-2018′ ಕಾರ್ಯಕ್ರಮವನ್ನು ಮಂಳವಾರ ಉದ್ಘಾಟಿಸಿ ಮಾತನಾಡಿದರು. ಸಂಗೀತ ಕ್ಷೇತ್ರದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ನಾನು ಉದ್ಯೋಗವನ್ನು ಅರಸಿಕೊಂಡು ಬೆಂಗಳೂರಿಗೆ ತೆರಳಿದ್ದರೂ ಆಸಕ್ತಿ ಕ್ಷೇತ್ರದ ಯಾವುದೇ ಉದ್ಯೋಗ ಸಿಗದೆ ತೊಂದರೆಯನ್ನೆದುರಿಸಿದ್ದೆ. ಆಧುನಿಕತೆಗೆ ಸಂಬಂಧಿಸಿದಂತೆ ಪರಿಕರಗಳನ್ನು ಖರೀದಿಸಲೂ ಹಣ ಇರಲಿಲ್ಲ. ಒಂದು ಸಮಯದಲ್ಲಿ ಕಿಡ್ನಿ ಮಾರಾಟ ಮಾಡಲೂ ಯೋಚನೆ ಮಾಡಿದ್ದೆ. ಆದರೆ ಆಪತ್ ಕಾಲದಲ್ಲಿ ಒಬ್ಬರು ನನಗೆ ಸಹಾಯ ಮಾಡಿ ಕೀ ಬೋರ್ಡ್ ತೆಗೆಯಲು ಸಹಾಯ ಮಾಡಿದರು. ಬಳಿಕ ಪರಿಶ್ರಮದ ಮೂಲಕ ಸಂಗೀತ ಕ್ಷೇತ್ರದಲ್ಲಿ ಸಾಧನೆ…
UN NETWORKS ಉಳ್ಳಾಲ: ರೈತಬಂಧು ಯಡಿಯೂರಪ್ಪ ನೇತೃತ್ವದ ಸರಕಾರದ ಅವಧಿಯಲ್ಲಿ ಉತ್ತಮ ಯೋಜನೆಗಳು ಜಾರಿಗೊಳಿಸುವುದರೊಂದಿಗೆ ಅನುಷ್ಠಾನವೂ ಆಗಿತ್ತು. ಇದರ ಸ್ಮರಣೆಯೊಂದಿಗೆ ರೈತರ ಹಿತ ಕಾಪಾಡುವ ಸಲುವಾಗಿ ರೈತ ಮೋರ್ಚಾದಿಂದ ಮುಷ್ಟಿ ಅಕ್ಕಿ ಅಭಿಯಾನ ಮಂಗಳೂರು ಕ್ಷೇತ್ರದಲ್ಲಿ ಚಾಲನೆ ನೀಡಲಾಗಿದೆ ಎಂದು ವಿಧಾನಪರಿಷತ್ ಸದಸ್ಯೆ ಹಾಗೂ ನಟಿ ತಾರಾ ಅನುರಾಧ ಹೇಳಿದರು. ಅವರು ಮಂಗಳೂರು ಕ್ಷೇತ್ರದ ಅಸೈಗೋಳಿಯ ಕೃಷಿಕ ರಾಮಕೃಷ್ಣ ಮತ್ತು ಕುರ್ನಾಡಿನ ಟಿ.ಜಿ.ರಾಜಾರಾಂ ಭಟ್ ಅವರ ಮನೆಯಲ್ಲಿ ಮುಷ್ಟಿ ಅಕ್ಕಿ ಅಭಿಯಾನಕ್ಕೆ ಮಂಗಳವಾರ ದಂದು ಚಾಲನೆ ನೀಡಿ ಮಾತನಾಡಿದರು. ರೂ. 8,000 ಕೋಟಿ 2,000 ಕೋಟಿ ಘೋಷಣೆಗಳು ಮಾತ್ರ ಈಗಿನ ರಾಜ್ಯ ಸರಕಾರ ಮಾಡುವ ಮೂಲಕ ಘೋಷಣೆಗಳು, ಭಾಗ್ಯಗಳಿಗೆ ಮಾತ್ರ ಸೀಮಿತವಾಗಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ರೈತರನನು ಪ್ರೋತ್ಸಾಹಿಸುವ ಸಲುವಾಗಿ ರೈತಗೀತೆಗೆ ನಾಡಗೀತೆಯಷ್ಟೇ ಪ್ರಾಮುಖ್ಯೆತಯನ್ನು ನೀಡಿತ್ತು. ಪ್ರಸ್ತುತ ಐದು ವರ್ಷಗಳಲ್ಲಿ 3,000 ರೈತರ ಆತ್ಮಹತ್ಯೆ ನಡೆದಿವೆ. ಇದಕ್ಕೆ ಕೊನೆಗಾಣಿಸಬೇಕಿರುವುದು ರಾಜ್ಯ ಸರಕಾರದ ಕರ್ತವ್ಯವಾಗಿತ್ತು. ಆದರೆ ಸಿನಿಮಾದಲ್ಲಿ ನಟನೆ ಮಾಡಿ ಮತ್ತೆ ಉತ್ತಮವವಾಗಿ…
UN NETWORKS ಮುಂಬಯಿ: ಕಾಸರಗೋಡುವಿನ ಹೊಸಂಗಡಿ ಮಳ್ ಹರ್ ಇಸ್ಲಾಮಿಕ್ ಸಂಸ್ಥೆಯ ಇದರ ಮುಂಬಯಿ ಘಟಕ ವತಿಯಿಂದ 4ನೇ ಸ್ವಲಾತ್ ವಾರ್ಷಿಕ ಮುಂಬಯಿಯ ದಾದರ್ ಪೂರ್ವದ ಲತ್ವೀಫಿಯ ಸುನ್ನೀ ಮಸ್ಜಿದ್ ದಲ್ಲಿ ಇತ್ತೀಚೆಗೆ ನಡೆಯಿತು. ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್-ಬುಖಾರಿ ನೇತ್ರತ್ವ ವಹಿಸಿ ಮಾತನಾಡಿ, ಕಾಸರಗೋಡುನಲ್ಲಿ ಕಾರ್ಯಾಚರಿಸುತ್ತಿರುವ ಮಳ್ ಹರ್ ವಿದ್ಯಾ ಸಂಸ್ಥೆ ಇಂದು ದೊಡ್ಡ ಮಟ್ಟದಲ್ಲಿ ಬೆಳವಣಿಗೆಯಾಗಲು ಇತರ ರಾಜ್ಯ ಮತ್ತು ವಿದೇಶಿಯರ ಸಹಕಾರದಿಂದಾಗಿದೆ. ವಿಶೇಷವಾಗಿ ಮುಂಬಯಿಲ್ಲಿ ನೂತನ ಶಾಖೆ ಪ್ರಾರಂಭಿಸಿ ಸಂಸ್ಥೆಗೆ ಪ್ರಚಾರದ ಜೋತೆಗೆ ಸಹಕಾರವನ್ನು ನೀಡಿದ್ದಿರಿ ಮುಂಬಯಿ ಘಟಕಕ್ಕೆ ವಿಶೇಷ ಅಭಿನಂದನೆಯನ್ನು ಸಲ್ಲಿಸುತ್ತಿದೆನೆ ಎಂದು ಹೇಳಿದರು. ಡಾ. ಹುಸೈನ್ ಸಖಾಫಿ ಚುಳ್ಳಿಕ್ಕೋಡ್ ಮುಖ್ಯ ಪ್ರಭಾಷಣ ಗೈದರು. ಮಾಸ್ಟರ್ ಶಿಹಾನ್ ಉಳ್ಳಾಲ, ಹಿಲಾಲ್ ಬಶೀರ್, ಹಸನ್ ಮುಸ್ಲಿಯಾರ್ ಮುಂಬ್ರ, ಮುಂಬಯಿ ಘಟಕ ಅಧ್ಯಕ್ಷ ಸತ್ತಾರ್ ಬದ್ರಿಯ, ಉಪಾಧ್ಯಕ್ಷ ಮುಸ್ತಫಾ ಕುರ್ಳ, ಕಾರ್ಯದರ್ಶಿ ಮುಝ್ಮಿಲ್, ಕೋಶಾಧಿಕಾರಿ ಅಶ್ರಫ್ ಬೊಳ್ಮಾರ್, ಸದಸ್ಯರಾದ ಇಲ್ಯಾಸ್ ತೌಡುಗೋಳಿ, ಅಝೀಝ್ ಕಿನ್ಯ, ಮುಂತಾದವರು ಭಾಗವಹಿಸಲಿದ ಸ್ಥಳೀಯ…
UN NETWORKS ಕೈರಂಗಳ: ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರೆ ಗೋಶಾಲೆಯಿಂದ ಗೋ ಕಳವು ಪ್ರಕರಣ ಮತ್ತು ಗೋ ಹಂತಕರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಹಿರಿಯರಾದ ರಾಜಾರಾಮ್ ಭಟ್‍ರವರ ಉಪವಾಸ ಸತ್ಯಾಗ್ರಹಕ್ಕೆ ಪರಿಸರದ ಸರ್ವ ಧರ್ಮಿಯರು ಸ್ಪಂದಿಸಿರುವುದು ಸ್ವಾಗತರ್ಹ. ಆದರೆ ಕಾಂಗ್ರೇಸ್ ಈ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದ ಗೋಶಾಲೆಯ ಕಾವಲುಗಾರರನ್ನೇ ತನಿಖೆಗೆ ಒಳಪಡಿಸಬೇಕೆಂದು ಹೇಳಿಕೆ ಕೊಟ್ಟಿರುವುದು ಕ್ಷೇತ್ರದಲ್ಲಿ ನಡೆದಿರುವ ಗೋಕಳ್ಳತನಕ್ಕೆ ಇವರದ್ದೇ ಶ್ರೀ ರಕ್ಷೆ ಇರುವುದನ್ನು ತೋರಿಸುತ್ತದೆ ಎಂದು ಮಂಗಳೂರು ಕ್ಷೇತ್ರ ಬಿ.ಜೆ.ಪಿ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್ ಆರೋಪಿಸಿದ್ದಾರೆ. ಆಸ್ತಿಕ ಬಂಧುಗಳು ದೈವ ದೇವಸ್ಥಾನಗಳಲ್ಲಿ ಗೋ ಸಂರಕ್ಷಣೆ ಬಗ್ಗೆ ಸಾಮೂಹಿಕ ಪ್ರಾರ್ಥನೆಗೈದರೆ,ಕಾಂಗ್ರೇಸಿಗರು ರಾಜಕೀಯ ಪ್ರೇರಿತವಾಗಿ ಖಾದರ್ ಚುನಾವಣೆಯಲ್ಲಿ ಗೆಲ್ಲಬೇಕೆಂದು ಪ್ರಾರ್ಥನೆ ಮಾಡುತ್ತಿದ್ದಾರೆ. ಎಂದು ಮಂಗಳೂರು ಮಂಡಲ ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್ ಆರೋಪಿಸಿದರು. ಗೋಹಂತಕರನ್ನು ಸಮಾಜಘಾತುಕರನ್ನು ಗಾಂಜಾ ಮಾಫೀಯದವರನ್ನು ಬೆಳೆಯಲು ಬಿಟ್ಟು ಈಗ ಪ್ರಾರ್ಥನೆ ಮಾಡಿದರೆ ಲಾಭವಿಲ್ಲ.ಖಾದರ್ ಜನರನ್ನು ಮರಳು ಮಾಡಲು ಗಿಮಿಕ್ಸ್ ರಾಜಕೀಯ ಬಿಡಲಿ ಗೋಕಳ್ಳರ ವಿರುದ್ಧ ಪ್ರಾರ್ಥನೆ ಮಾಡಲಿ…
UN NETWORKS ಉಳ್ಳಾಲ: ಹಿಂದಿನ ಆಡಳಿತದ ಅವಧಿಯಲ್ಲಿ ನಡೆದಿರುವ ಎಡವಟ್ಟುಗಳನ್ನು ಈಗಿನ ಸಮಿತಿಯ ತಲೆಗೆ ಕಟ್ಟದೆ, ನಡೆದ ಘಟನೆ ಮರೆತು ಒಗ್ಗಟ್ಟಿನಿಂದ ಉಳ್ಳಾಲವನ್ನು ಮಾದರಿಯನ್ನಾಗಿಸೋಣ ಎಂದು ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹೇಳಿದರು. ಮೇಲಂಗಡಿ ಮುಹಿದ್ದೀನ್ ಜುಮಾ ಮಸೀದಿ (ಹೊಸಪಳ್ಳಿ) ಹಾಗೂ ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ವತಿಯಿಂದ ಮಸೀದಿಯಲ್ಲಿ 88ನೇ ರಾತೀಬು ಹರಕೆ ಪ್ರಯುಕ್ತ ಹತ್ತು ದಿನ ನಡೆದ ಧಾರ್ಮಿಕ ಮತ ಪ್ರಸಂಗದ ಭಾನುವಾರ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಸ್ಲಾಂ ಧರ್ಮೀಯರು ಎಂದ ಮೇಲೆ ಪ್ರವಾದಿ (ಸ.ಅ) ಅವರ ತತ್ವ, ಸಿದ್ಧಾಂತಗಳನ್ನು ಅನುಸರಿಸುವುದು ಮುಖ್ಯ. ದ್ವೇಷ ಮರೆತು ಶಾಂತಿಯ ಜೀವನಕ್ಕು ಆದ್ಯತೆ ನೀಡಿದಾಗ ಒಗ್ಗಟ್ಟಿನಿಂದ ಮುನ್ನಡೆಯಲು ಸಾಧ್ಯ. ಪ್ರವಾದಿ ಸಿದ್ಧಾಂತ ಪಾಲನೆ ಎಲ್ಲದ ಧ್ಯೇಯವಾಗಿರಬೇಕು ಎಂದು ಹೇಳಿದರು. ಸಭಾ ಕಾರ್ಯಕ್ರಮ ಉದ್ಘಾಟಿಸಿದ ಉಡುಪಿ ಜಮಾಅತ್ ಸಂಯುಕ್ತ ಖಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಮಾತನಾಡಿ, ಯಾವುದೇ ಒಂದು ಉತ್ತಮ ಕೆಲಸ ಮಾಡುವ ಸಂದರ್ಭ ಆತ್ಮವಿಶ್ವಾಸ, ಮನಸಾಕ್ಷಿ…

