UN NETWORKS ಉಳ್ಳಾಲ: ಜಾರ್ಖಂಡ್ ರಾಂಚಿಯಲ್ಲಿ ನಡೆದ 2018ರ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯ 58 ಕೆ.ಜಿ ವಿಭಾಗದಲ್ಲಿ ಗಣೇಶ್ ಕುಲಾಲ್ ಇವರು ಚಿನ್ನ ಪದಕ ಪಡೆದುಕೊಂಡಿದ್ದಾರೆ. ತೊಕ್ಕೊಟ್ಟು ಭಟ್ನಗರದ ಶ್ರೀ ಶಕ್ತಿ ಭಾರತ್ ವ್ಯಾಯಾಮ ಶಾಲೆಯ ಸದಸ್ಯರಾಗಿದ್ದು, ಬಿ. ಶೇಖರ್ ಭಟ್ನಗರ ಅವರಿಂದ ತರಬೇತಿ ಪಡೆದಿದ್ದರು.
Author: UllalaVani
UN NETWORKS ಕಲ್ಮಿಂಜ: ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ 8ರ ಹರೆಯದ ಬಾಲಕಿ ಆಸಿಫಾ ಅತ್ಯಾಚಾರ ಮತ್ತು ಬರ್ಬರ ಕೊಲೆಯನ್ನು ಖಂಡಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಹಾಗೂ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಎಸ್.ಎಸ್.ಎಫ್ ಕಲ್ಮಿಂಜ ಯುನಿಟ್ ಇದರ ವತಿಯಿಂದ ಕಲ್ಮಿಂಜ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸ್ಥಳೀಯ ಖತೀಬ್ ಉಸ್ತಾದ್ ಅಬ್ದುಲ್ ಲತೀಫ್ ಸಅದಿ ಅಲ್-ಅಫ್ಳಲಿ ದೇಶದಲ್ಲಿ ಇಂತಹ ಅಮಾನವೀಯ ಕೃತ್ಯಗಳು ನಿರಂತರ ನಡೆಯುತ್ತಿದ್ದರೂ ಅದರ ಬಗ್ಗೆ ಅಧಿಕೃತರು ತೋರುವ ಅಸಡ್ಡೆ ಮತ್ತು ನಿಷ್ಕ್ರಿಯತೆ ಸಮಾನ ಕೃತ್ಯಗಳು ಸಾರ್ವತ್ರಿಕವಾಗಿ ನಡೆಯಲು ಕಾರಣವಾಗುತ್ತದೆ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೆ ಆರೋಪಿಗಳನ್ನು ಕಠಿಣ ಕಾನೂನು ಕ್ರಮಕ್ಕೆ ಗುರಿಪಡಿಸಬೇಕು ಹಾಗೂ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯನ್ನು ಇಸ್ಮಾಯಿಲ್ ಸಅದಿ ಉದ್ಘಾಟಿಸಿದರು. ಬದ್ರಿಯ ಜುಮಾ ಮಸ್ಜಿದ್ ಕಲ್ಮಿಂಜ ಅಧ್ಯಕ್ಷರಾದ ಮಹಮ್ಮದ್ ಪೂಡಲ್, ಹಿರಿಯ ನಾಯಕರಾದ ಅಬೂಬಕರ್ ಹಾಜಿ, ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್, ಎಸ್.ಎಸ್.ಎಫ್ ಸೆಕ್ಟರ್…
UN NETWORKS ಮುಡಿಪು: ರಕ್ಷಣಾ ಬೇಲಿಯಾಗಬೇಕಿದ್ದ ಪೊಲೀಸರೇ ಕೇವಲ ಎಂಟು ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಭೀಕರವಾಗಿ ಕೊಲೆ ಮಾಡಿರುವು ಮೃಗೀಯ ವರ್ತನೆಯಾಗಿದೆ. ಈ ಘಟನೆ ಮಾನವ ಸಮುದಾಯವನ್ನೇ ತಲ್ಲಣಗೊಳಿಸಿದೆ ಎಂದು ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಅಭಿಪ್ರಾಯಪಟ್ಟರು. ಜಮ್ಮು ಕಾಶ್ಮೀರದಲ್ಲಿ ನಡೆದ ಆಸಿಫಾ ಹತ್ಯೆ ಖಂಡಿಸಿ ಡಿವೈಎಫ್ ಐ ವತಿಯಿಂದ ಶನಿವಾರ ಮುಡಿಪು ಜಂಕ್ಷನ್ ನಲ್ಲಿ ನಡೆದ ಮೊಂಬತ್ತಿ ಪ್ರತಿಭಟನೆಯಲ್ಲಿ ಮಾತನಾಡಿದರು. ಮೂರು ತಿಂಗಳ ಹಿಂದೆ ಘಟನೆ ನಡೆದಿದ್ದು ಆರೋಪಿಗಳು ಪವಿತ್ರ ದೇವಾಲಯದಲ್ಲಿ ಬಾಲಕಿಯನ್ನು ಭೀಕರವಾಗಿ ಬಳಸಿಕೊಂಡಿದ್ದಾರೆ. ಈ ಬಗ್ಗೆ ದೂರು ನೀಡಲು ಹೋದಾಗ ಆರೋಪಿ ಪೊಲೀಸ್ ಬಾಲಕಿ ಯಾರದ್ದೋ ಜೊತೆ ಓಡಿ ಹೋಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದನು. ಬಾಲಕಿ ಪರವಾಗಿ ಸತತ ಪ್ರತಿಭಟನೆ, ಹೋರಾಟ ನಡೆಸಿದ ಫಲವಾಗಿ ಅಲ್ಲಿನ ಸರ್ಕಾರ ದ ಆದೇಶದ ಮೇರೆಗೆ ಉನ್ನತ ತನಿಖೆ ನಡೆದು ಆರೋಪಿ ತಂಡದ ಲ್ಲಿದ್ದರೂ ಪ್ರಕರ ಬೆಳಕಿಗೆ ಬಂದಿದ್ದು, ಕಠಿಣ ಶಿಕ್ಷೆಯಾಗುವುದು ಶತಃಸಿದ್ಧ ಎಂದು ಹೇಳಿದರು. https://www.youtube.com/watch?v=sz6nsrRrSJY ಮೇಲ್ಜಾತಿಯವರೇ ವಾಸಿಸುವ…
UN NETWORKS ಉಳ್ಳಾಲ: ಎಸ್ಕೆಎಸ್ಸೆಸ್ಸೆಫ್ ಅಜ್ಜಿನಡ್ಕ ಮತ್ತು ಉಚ್ಚಿಲ ಶಾಖೆಯ ನೂತನ ಶಾಖಾ ಕಚೇರಿಯನ್ನು ದ.ಕ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅದಿತ್ಯವಾರ ಉದ್ಘಾಟಿಸಿದರು. ಸಯ್ಯಿದ್ ಅಮೀರ್ ತಂಙಳ್ ಕಿನ್ಯಾ ದುಅ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್ಕೆಎಸ್ಸೆಸ್ಸೆಫ್ ಅಜ್ಜಿನಡ್ಕ ಉಚ್ಚಿಲ ಶಾಖಾಧ್ಯಕ್ಷ ಹಿದಾಯತುಲ್ಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಮಸ್ತ ಕರ್ನಾಟಕ ಜಂಇಯ್ಯತುಲ್ ಉಲಮಾ ಮುಶಾವರ ಕಾರ್ಯದರ್ಶಿ ಇಬ್ರಾಹೀಂ ಬಾಖವಿ ಕೆ.ಸಿರೂಡು, ಅಜ್ಜಿನಡ್ಕ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಸುಲೈಮಾನ್ ಹಾಜಿ, ದ.ಕ ಜಿಲ್ಲಾ ಮದರಸ ಮೇನೆಜ್‍ಮೆಂಟ್ ಉಪಾಧ್ಯಕ್ಷ ಇಬ್ರಾಹೀಂ ಕೊಣಾಜೆ, ಉಚ್ಚಿಲ ಅಲ್-ಮುಬಾರಕ್ ವೆಲ್ಫೆರ್ ಎಸೋಸಿಯೇಶನ್ ಅಧ್ಯಕ್ಷ ಮುಹ್ಸಿನ್ ರಹ್ಮಾನ್, ಗಡಿನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಕ್ ತಲಪಾಡಿ, ಎಸ್ಕೆಎಸ್ಸೆಸ್ಸೆಫ್ ಅಜ್ಜಿನಡ್ಕ ಉಚ್ಚಿಲ ಶಾಖೆಯ ಕಾರ್ಯದರ್ಶಿ ಮೊಹಮ್ಮದ್ ಹನೀಫ್ ಎಸ್.ಬಿ, ಸದಸ್ಯರಾದ ಹಮೀದ್ ಹಾಜಿ, ಸಮಾಜ ಸೇವಕರಾದ ಸಲೀಂ ಅಬ್ಬಾಸ್ ಉಚ್ಚಿಲ,ಅಹ್ಮದ್ ಪೇರಿಬೈಲ್, ಇಸ್ಮಾಯಿಲ್ ಎನ್. ಎನ್ ಮೊೈದೀನ್ ಕುಂಞ, ಈ ಸಂದರ್ಭ ಉಪಸ್ಥಿತರಿದರು. ಅಬ್ದುಲ್ಲಾ ಅರ್ಶದಿ ಕೆ.ಸಿ…
UN NETWORKS ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2017-18ನೇ ಸಾಲಿನ `ಯಕ್ಷಮಂಗಳ ಪ್ರಶಸ್ತಿ’ಗೆ ಬಡಗುತಿಟ್ಟಿನ ಹಿರಿಯ ಯಕ್ಷಗಾನ ಭಾಗವತರಾದ ಮತ್ಯಾಡಿ ನರಸಿಂಹ ಶೆಟ್ಟಿ, ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಪೆರುವೋಡಿ ನಾರಾಯಣ ಹಾಸ್ಯಗಾರ ಹಾಗೂ ಪ್ರಸಿದ್ಧ ಸ್ತ್ರೀ ವೇಷಧಾರಿ ಪಾತಾಳ ವೆಂಕಟರಮಣ ಭಟ್ ಅವರು ಆಯ್ಕೆಯಾಗಿದ್ದಾರೆ. ವಿದ್ವಾಂಸರಾದ ಡಾ.ಎನ್.ನಾರಾಯಣ ಶೆಟ್ಟಿ ಶಿಮಂತೂರು ಅವರ `ಯಕ್ಷಗಾನ ಛಂದೋಂಬುಧಿ’ ಗ್ರಂಥವು ಯಕ್ಷಮಂಗಳ ಕೃತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಎಪ್ರಿಲ್ 24ರಂದು ಮಂಗಳೂರು ವಿವಿಯ ಮಂಗಳ ಸಭಾಂಗಣದಲ್ಲಿ ನಡೆಯಲಿದ್ದು, ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಶಸ್ತಿ ವಿತರಿಸಲಿಸದ್ದಾರೆ.ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷರಾದ ಪ್ರೊ.ಎಂ.ಎ.ಹೆಗಡೆ, ಪ್ರಸಿದ್ದ ಅಂಕಣಕಾರರಾದ ನಾ.ಕಾರಂತ ಪೆರಾಜೆ, ಯಕ್ಷಗಾನ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕ ಡಾ.ಕೆ.ಚಿನ್ನಪ್ಪ ಗೌಡ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಯಕ್ಷಮಂಗಳ ಪ್ರಶಸ್ತಿಯು ತಲಾ ರೂ.25 ಸಾವಿರ ನಗದು,…
UN NETWORKS ಉಳ್ಳಾಲ: ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಅಳವಡಿಸಿಕೊಂಡಾಗ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯ,. ಇತರರಿಗೆ ಸಹಕಾರಿಯಾಗುವಂತಹ ಮನೋಭಾವವನ್ನು ಇಟ್ಟುಕೊಂಡು ಸಂಘಟಕರು ಹಮ್ಮಿಕೊಂಡಿರುವ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಹಾಗೂ ಸಮಾಜಕ್ಕೆ ಪೂರಕವಾದ ಕಾರ್ಯಕ್ರಮ ಎಂದು ಬದ್ರಿಯ ಜುಮಾ ಮಸೀದಿ ಖತೀಬ್ ಮುಹಮ್ಮದ್ ಶರೀಫ್ ಅರ್ಶದಿ ಹೇಳಿದರು. ಅವರು ಬದ್ರಿಯಾ ಜುಮಾ ಮಸೀದ್ ದೇರಳಕಟ್ಟೆ, ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಶನ್(ರಿ) ಹಯಾತುಲ್ ಇಸ್ಲಾಂ ಮದರಸ ದೇರಳಕಟ್ಟೆ ಮತ್ತು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಹಯೋಗದಲ್ಲಿ ದೇರಳಕಟ್ಟೆಯ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಭಾನುವಾರ ಜರಗಿದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದೇರಳಕಟ್ಟೆ ವಿದ್ಯಾರತ್ನ ಅಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ, ರಕ್ತದಾನದ ಮೂಲಕ ಜೀವದಾನದಂತಹ ಮಹತ್ಕಾರ್ಯದಲ್ಲಿ ಎಲ್ಲರೂ ಕೈಜೋಡಿಸುವುದು ಅವಶ್ಯಕ. ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಪೂರಕವಾದ ಸಂದೇಶ ಒದಗಿಸುತ್ತದೆ .ರಕ್ತದ ಅವಶ್ಯಕತೆಯಿದ್ದಾಗ ಜಾತಿ, ಧರ್ಮ…
UN NETWORKS ಕಿನ್ಯಾ: ಕಾಶ್ಮೀರದ 8 ಹರೆಯದ ಆಸೀಫ ಎಂಬ ಪುಟ್ಟ ಕಂದಮ್ಮ ಮೇಲೆ ಅತ್ಯಾಚಾರವೆಸಗಿ ಅತಿ ದಾರುಣವಾಗಿ ಹತ್ಯೆಗೈದ ರಕ್ಷಾಸಿ ಗಳಿಗೆ ಅತಿ ಕಠಿಣ ಶಿಕ್ಷೆ ಯಾಗುವಂತೆ ಒತ್ತಾಯಿಸಿ 15-04-2018 ಸಂಜೆ 7.30 ಕ್ಕೆ ಸರಿಯಾಗಿ ಉಕ್ಕುಡ ಜಂಕ್ಷನ್ ನಲ್ಲಿ ನಡೆದಿದ್ದು, ಇಂದು ವಿಶ್ವದ ಎದುರಿಗೆ ಭಾರತ ತಲೆತಗ್ಗಿಸಿದೆ, ಇಂತಹ ಕ್ರೂರ ಕೃತ್ಯಗಳು ಮುಂದಕ್ಕೆ ಸಮಾಜದಲ್ಲಿ ನಡೆಯದಿರಲೀ ಹಾಗೂ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡುವಲ್ಲಿ ಕಾನೂನು ಯಶಸ್ವಿಯಾಗಲಿ ಎಂದು ಹಬೀಬ್ ಉಸ್ತಾದರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಶಾಂತಿ ಸೌಹಾರ್ಧ ನೆಲೆಸಿರುವ ಭಾರತ ಪುಣ್ಯ ಭೂಮಿಯಲ್ಲಿ ದೇಶದ ಗೌರವಕ್ಕೆ ಕಲಂಕ ತಂದಿರುವ ಕೃತ್ಯ ಬಹಳ ಖಂಡನೀಯ ಹಾಗೂ ಖೇದಕರ ಅಪರಾಧಿಗಳಿಗೆ ಗಲ್ಲು ವಿಧಿಸಿ ಆಪುಟ್ಟ ಬಾಲಕಿಗೆ ನ್ಯಾ ಯ ದೊರಕುವಲ್ಲಿ ಯಶಸ್ವಿಯಾಗಲಿ ಎಂದು ಫಾರೂಕ್ ಕಿನ್ಯ. ನುಡಿದರು. ಹಸೈನಾರ್ , ಇಬ್ರಾಹಿಂ , ಅಹಮ್ಮದ್ , ಅಶ್ರಫ್, ಅಬ್ದುಲ್ಲ, ಹೈದರ್ , ಮುಂತಾದ ಹಿರಿಯರು ಹಾಜರಿದ್ದರು. ಆಸಿಫಾ ಎಂಬ ಪುಟ್ಟ ಬಾಲಕಿಯ…
UN NETWORKS ಮೊಂಟೆಪದವು : ಎಸ್.ಎಸ್.ಎಫ್ ರಾಜ್ಯ ಸಮಿತಿಯ ನಿರ್ದೇಶನದಂತೆ *ಜಸ್ಟಿಸ್ ಪಾರ್ ಆಸಿಫಾ* ಎಂಬ ಘೋಷಣೆಯೊಂದಿಗೆ ಬೃಹತ್ ಪ್ರತಿಭಟನಾ ಕಾರ್ಯಕ್ರಮವು ಎಸ್.ಎಸ್.ಎಫ್ ಮೊಂಟೆಪದವು ಯುನಿಟ್ ಅಧ್ಯಕ್ಷರು ಶೆರೀಫ್ ರವರ ಸಮ್ಮುಖದಲ್ಲಿ ಜರಗಿತು. ಕಾಶ್ಮೀರದ ಕಾಥುವಾ ಎಂಬಲ್ಲಿ 8 ವರ್ಷದ ಪುಟ್ಟ ಕಂದಮ್ಮ ಆಸಿಫಾಳ ವಿರುಧ್ಧ ನಡೆದ ಪೈಶಾಚಿಕ ಕೃತ್ಯವನ್ನು ಖಂಡಿಸಿ ಎಸ್.ಎಸ್.ಎಫ್ ಮೋಂಟುಗೋಳಿ ಸೆಕ್ಟರ್ ಅಧ್ಯಕ್ಷರಾದ *ಇರ್ಷಾದ್ ಮದನಿ ಉಸ್ತಾದರು ಭಾಷಣ ಮಾಡಿದರು. ದಾರುಣ ಅಂತ್ಯಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆ ಜಾರಿಗೊಳಿಸಬೇಕು. ದುಷ್ಕರ್ಮಿಗಳು ಯಾರು ಎಂದು ಹೀಗಾಗಲೇ ತಿಳಿದಿರುವ ವಿಷಯ.ಆದರೆ ಈವರೆಗೂ ಯಾವುದೇ ಕಠಿಣ ಶಿಕ್ಷೆ ಜಾರಿಯಾಗಿಲ್ಲ ಯಾಕೆ? ಎಂದು ಇವರು ಪ್ರಶ್ನಿಸಿದರು. ಈ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್.ಎಸ್.ಎಫ್ ಮೊಂಟೆಪದವು ಯುನಿಟ್ ಗೌರವ ಅಧ್ಯಕ್ಷರಾದ ಮೊಯ್ದಿನ್ ಹಾಜಿಯವರು ” ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಾ ಇವೆ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಲು ಜಾತಿ-ಧರ್ಮ ನೋಡದೆ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕೆಂದು ಅಭಿಪ್ರಾಯ ಪಟ್ಟರು. ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ…
UN NETWORKS ಇನೋಳಿ: ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸಾಧನೆಗಳ ಬದಲಾಗಿ ಮಾನ್ಯತೆಯನ್ನು ತುಲನೆ ಮಾಡಲಾಗುತ್ತಿದೆ. ವಾಸ್ತವವಾಗಿ ವಿದ್ಯಾರ್ಥಿಗಳು ಬುದ್ಧಿವಂತಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದಲ್ಲಿ ಅವರ ಭವಿಷ್ಯದ ಜತೆಗೆ ಶಿಕ್ಷಣ ಸಂಸ್ಥೆಯ ಹೆಸರು ಖ್ಯಾತಿ ಪಡೆಯುವುದು ಎಂದು ಮುಂಬೈ ಐಐಟಿ ಇದರ ನಿರ್ದೇಶಕ ಡಾ.ಎ.ಕೆ ಸುರೇಶ್ ಅಭಿಪ್ರಾಯಪಟ್ಟರು. ಅವರು ಕೊಣಾಜೆ ಇನೋಳಿಯ ಬೇರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಬೇರಿಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ `ಬಿಐಟಿ ಆಂಡ್ ಬೀಡ್ಸ್ ಉತ್ಸವ-2018′ ನ್ನು ಉದ್ಘಾಟಿ ಮಾತನಾಡಿದರು. ಬಿಐಟಿ ಶಿಕ್ಷಣ ಸಂಸ್ಥೆಯ ವಾತಾವರಣ ಪ್ರಕೃತಿ ಮಡಿಲಿನ ಜತೆಗಿನ ಒಡನಾಟ ಇರುವುದರಿಂದ ಶಿಕ್ಷಣಕ್ಕೆ ಪೂರಕವಾಗಿದೆ. ಶಿಕ್ಷಣದ ಜತೆಗೆ ನಡತೆಯ ಪಾಠವೂ ಮುಖ್ಯವಾಗಿರುತ್ತದೆ. ಪ್ರಸ್ತುತ ಕ್ರಿಕೆಟ್ ಆಟದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು. ಆದರೂ ಗೆಲುವಿಗಾಗಿ ಹಿಡಿದ ಹಾದಿ ಇಡೀ ದೇಶವನ್ನೇ ಮುಜುಗರಕ್ಕೀಡಾಗುವಂತೆ ಮಾಡಿತ್ತು. ಅದಕ್ಕಾಗಿ ಯಶಸ್ಸಿನ ಹಾದಿಯಲ್ಲಿ ನಡತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾಗಿದೆ. ಇಂಜಿನಿಯರಿಂಗ್ ವಿಭಾಗ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ವಿಚಾರಗಳನ್ನು ಒಳಗೊಂಡ ಸಮಗ್ರ ವಿಷಯವಾಗಿದೆ.…
UN NETWORKS ಮುಡಿಪು : ಮನೆಗೆ ನುಗ್ಗಿದ ನಾಲ್ವರು ಕಳ್ಳರ ತಂಡದಲ್ಲಿ ಓರ್ವನನ್ನು ಬೋಳಿಯಾರು ನಾಗರಿಕರು ರೆಡ್ ಹ್ಯಾಂಡಾಗಿ ಹಿಡಿದು ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಮುಡಿಪು ಕರ್ಣಾಟಕ ಬ್ಯಾಂಕಿನ ಎಟಿಎಂನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿರುವ ಕಾರ್ಯ ನಿರ್ವಹಿಸುವ ತಮಿಳುನಾಡು ಮೂಲದ 70ರ ಹರೆಯದ ವೃದ್ಧನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ನಿನ್ನೆ ತಡರಾತ್ರಿ ಮೂವರು ಮಹಮ್ಮದ್ ಎಂಬವರ ಮನೆಯ ಮುಂಬಾಗಿಲಿನ ಚಿಲಕಕ್ಕೆ ಹಗ್ಗದಿಂದ ಕಟ್ಟಿ ಹಿಂಬಾಗಿಲನ್ನು ಒಡೆದು ಒಳನುಗ್ಗಿದ್ದರು. ಶಬ್ದ ಕೇಳಿ ಮನೆಮಂದಿ ಎಚ್ಚರಗೊಂಡಾಗ ಮೂವರು ಕಳ್ಳರು ಅಲ್ಲಿಂದ ಪರಾರಿಯಾಗಿದ್ದರು. ಮತ್ತೆ ಅಲ್ಪ ದೂರದಲ್ಲಿ ಇನ್ನೊಂದು ಮನೆಗೆ ನುಗ್ಗಲು ಯತ್ನಿಸುವ ಸಂದರ್ಭ, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ನಾಲ್ವರಲ್ಲಿ ಓರ್ವನನ್ನು ಹಿಡಿದಿದ್ದಾರೆ. ಹೆಚ್ಚಿನ ವಿಚಾರಣೆಗೆ ಕೊಣಾಜೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಉಳಿದ ಮೂವರನ್ನು ತಮಿಳುನಾಡು ಮೂಲದವರೇ ಆಗಿರಬಹುದೆಂದು ಸಂಶಯಿಸಲಾಗಿದ್ದು, ಅವರಿಗಾಗಿ ಕೊಣಾಜೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

