Author: UllalaVani

Kannada News From Coastal Karnataka

UN NETWORKS ಬಂಟ್ವಾಳ: ಜಮ್ಮು ಕಾಶ್ಮೀರದಲ್ಲಿ ಹಾಗೂ ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನ ಖಂಡಿಸಿ ಬಂಟ್ವಾಳ ತಾಲೂಕಿನ ಗಡಿಯಾರದ ಇತಿಕಾಫ್ ಮೀಲಾದ್ ಕಮಿಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಗಡಿಯಾರ ಜಂಕ್ಷನ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಮಂದಿ ಭಿತ್ತಿಚಿತ್ರಗಳನ್ನ ಹಿಡಿದು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪತ್ರಕರ್ತ ಶಂಶೀರ್ ಬುಡೋಳಿ, ಈ ಎರಡು ಪ್ರಕರಣಗಳನ್ನ ವಿರೋಧಿಸಿ ಇವತ್ತು ದೇಶಾದ್ಯಂತ ಹೋರಾಟ ನಡೆಯುತ್ತಿದೆ. ಜಾತಿ, ಧರ್ಮ ಮೀರಿ ಇವತ್ತು ನಡೆಯುತ್ತಿರುವ ಹೋರಾಟದ ಉದ್ದೇಶ ನ್ಯಾಯವೇ ಹೊರತು ಬಲಪ್ರದರ್ಶನವಲ್ಲ. ದೇಶದ ಜನರ ಒಗ್ಗಟ್ಟಿನ ಹೋರಾಟಕ್ಕೆ ನ್ಯಾಯ ಸಿಗಬೇಕು. ಕಾನೂನು ಬಲಗೊಳ್ಳಬೇಕು ಅಂದರು. ಇದೇ ವೇಳೆ ಝೈನುಲ್ ಅಕ್ಬರ್, ಹಮೀದ್ ದಾರಿಮಿ ಸಂಪ್ಯ, ರಶೀದ್ ಸಖಾಫಿ ಗಡಿಯಾರ ಮಾತನಾಡಿದರು. ಪ್ರತಿಭಟನೆಯಲ್ಲಿ ಅಬ್ದುಲ್ ಮಜೀದ್ ದಾರಿಮಿ, ಸ್ವಾದೀಕ್ ಮುಹಿನಿ, ಸಿದ್ದೀಕ್ ಫೈಝಿ ಉಪಸ್ಥಿತರಿದ್ದರು. ಜೊತೆಗೆ ಇತಿಕಾಫ್ ಮೀಲಾದ್ ಕಮಿಟಿಯ ಪದಾಧಿಕಾರಿಗಳಾದ ಅಬ್ದುಲ್ ರಶೀದ್ ಗಡಿಯಾರ, ಅಬ್ದುಲ್ ಅಝೀಝ್ ಗಡಿಯಾರ, ಹೈದರ್…

Read More

UN NETWORKS ತೊಕ್ಕೊಟ್ಟು: ಪೋಕ್ಸೋ ಕಾಯಿದೆ ಜಾರಿಯಲ್ಲಿದ್ದರೂ ದೇಶದ ಕೆಲವು ರಾಜ್ಯಗಳಲ್ಲಿ ಅತ್ಯಾಚಾರ ಪ್ರಕರಣ ಕಡಿಮೆ ಆಗಿಲ್ಲ. ಹಾಗಾಗಿ ಜನರ ಬೇಡಿಕೆಯಂತೆ ಅತ್ಯಾಚಾರಿಗಳಿಗೆ ಮರಣದಂಡನೆಯಂತಹ ಕಠಿಣ ಶಿಕ್ಷೆ ಕೊಡುವುದೊಂದೇ ಉಳಿದ ದಾರಿಯಾಗಿದ್ದು ಅಂತಹ ಪ್ರಕರಣದಲ್ಲಿ ಕೇಸ್ ದಾಖಲಾದರೆ ಜಾಮೀನು ಕೊಡಲು ಅವಕಾಶವೇ ಇರದಂತಹ ಕಾನೂನು ರಚನೆ ಆಗಬೇಕಿದೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು. ಜಮ್ಮು ಕಾಶ್ಮೀರ, ಉತ್ತರ ಪ್ರದೇಶ , ಗುಜರಾತ್‍ನಲ್ಲಿ ಬಾಲೆಯರ ಮೇಲೆ ನಡೆದ ಅತ್ಯಾಚಾರ, ಹತ್ಯೆ ಖಂಡಿಸಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಬಾಲಕಿಯರ ಅತ್ಯಾಚಾರ ಕೃತ್ಯ ನಡೆಸಿದವರಿಗೆ ಕಠಿಣ ಶಿಕ್ಷೆ ಆಗಬೇಕು. ಕಾಂಗ್ರೆಸ್ ರಾಷ್ಟ್ರವ್ಯಾಪಿ ಕೇಂದ್ರದ ಸರಕಾರಕ್ಕೆ ಪ್ರತಿಭಟನೆ ನಡೆಸುವ ಮೂಲಕ ಎಚ್ಚರಿಕೆ ಕೊಡುತ್ತಿದೆ. ಜೊತೆಗೆ ಅಪರಾಗಳ ಪರವಾಗಿ ಬೆಂಬಲಿಸುವವರಿಗೆ ಅದಕ್ಕಿಂತ ದೊಡ್ಡ ಶಿಕ್ಷೆ ಕೊಡಿಸಬೇಕು. ಆ ಮೂಲಕ ಅಪರಾಗಳಿಗೆ ಕಠಿಣ ಶಿಕ್ಷೆ ಕೊಡುವುದರಿಂದ ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಟ್ಟಂತಾಗುತ್ತದೆ ಎಂದರು. ದೇಶದಲ್ಲಿ ಮಹಾರಾಷ್ಟ್ರ, ಉತ್ತರ…

Read More

UN NETWORKS ಮಂಗಳೂರು: ಕುಪ್ಪೆಪದವು ಕಿಲೆಂಜಾರು ನಡಿಕಂಬಳ ಗುತ್ತಿನಲ್ಲಿ ನಡೆದ ಮಂಗಳೂರು ತೆಂಗು ಮಂಡಳಿಯ ಕಲ್ಪವೃಕ್ಷ ಕಲ್ಪ ಸಭೆಯಲ್ಲಿ ತೆಂಗು ಅಭಿವೃದ್ಧಿ ಮಂಡಳಿ ಬೆಂಗಳೂರಿನಿಂದ ತೆಂಗು ಬೆಳೆಗಾರರಿಗೆ ವಿವಿಧ ಸವಲತ್ತುಗಳ ವಿತರಣೆ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಭಟ್, ಎನ್.ಕೆ ಇದಿನಬ್ಬ, ಸುದೀಶ್ ಮಯ್ಯ, ರೊನಾಲ್ಡ್ ಡಿಸೋಜ, ಇರುವೈಲ್ ದೇವರಾಜ್, ಶೇಖ್ ಅಬ್ದುಲ್ಲಾ ಉಪಸ್ಥಿತರಿದ್ದರು. ರೈತ ಸಂಘದ ಕಾರ್ಯದರ್ಶಿ ಮನೋಹರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Read More

UN NETWORKS ಮುಡಿಪು: ಬಾಲಕಿ ಆಸಿಫಾ ಅತ್ಯಾಚಾರ ಮತ್ತು ಕೊಲೆ ಅತ್ಯಂತ ಖಂಡನೀಯವಾದ ವಿಚಾರ. ಪ್ರಕರಣದಿಂದ ವಿಶ್ವದಲ್ಲೇ ಭಾರತೀಯರು ತಲೆತಗ್ಗಿಸುವಂತಹ ಕೃತ್ಯವಾಗಿದೆ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್ ಹೇಳಿದರು. ಅವರು ಜಮ್ಮು ಕಾಶ್ಮೀರದ ಕತುವಾ ಪ್ರದೇಶದಲ್ಲಿ ಎಂಟರ ಹರೆಯದ ಬಾಲಕಿ ಆಸಿಫಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಮುಡಿಪು ವಲಯ ನಾಗರಿಕ ಹೋರಾಟ ಸಮಿತಿ ಆಶ್ರಯದಲ್ಲಿ ವಿವಿಧ ಸಂಘಟನೆಗಳ ಪಾಲ್ಗೊಳ್ಳುವಿಕೆಯಲ್ಲಿ ಮಂಗಳವಾರ ಮುಡಿಪು ಜಂಕ್ಷನ್ನಿನಲ್ಲಿ ಹಮ್ಮಿಕೊಂಡಿದ್ದ ಮೊಂಬತ್ತಿ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕೃತ್ಯ ದೇಶದ ಬಹುಸಂಸ್ಕೃತಿಕಿಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಜಾರಿಗೊಳಿಸುವ ಮೂಲಕ ಅದಕ್ಕೆ ಬೆಂಬಲಿಸುವವರಿಗೆ ಹಾಗೂ ಬೆಂಬಲಿಸಿ ಮಾತನಾಡುವವರಿಗೂ ಬಹುದೊಡ್ಡ ಶಿಕ್ಷೆಯಾಗಬೇಕಿದೆ. ದೇಶಾದ್ಯಂತ ಇಂತಹ ನೀಚ ಕೃತ್ಯಗಳು ಪುನರಾವರ್ತನೆಗೊಳ್ಳುತ್ತಿದೆ. ಅದಕ್ಕಾಗಿ ನಿರ್ಭಯ ಕಾನೂನು ಇನ್ನಷ್ಟು ಕಠಿಣಗೊಳ್ಳಿಸಲು ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಪಿಶಾಚಿಗಳಿಗೆ ಭಯ ಹುಟ್ಟಿಸುವಂತಹ ಕಾನೂನು ಶೀಘ್ರವೇ ಜಾರಿಗೆ ಬರಬೇಕಿದೆ.…

Read More

UN NETWORKS ಮಂಗಳಗಂಗೋತ್ರಿ : ಇಂದಿನ ಕಾಲಘಟ್ಟಕ್ಕೆ ಇಂಟರ್ನೆಟ್ ಆಫ್ ಥಿಂಗ್ಸ್ ಅತ್ಯವಶ್ಯಕವಾಗಿದ್ದು , ಈ ಕ್ಷೇತ್ರದಲ್ಲಿ ಹೆಚ್ಚು ಸಂಶೋಧನೆ ನಡೆಸುವುದರಿಂದ ಸಮಾಜಕ್ಕೆ ಹಾಗೂ ದೇಶಕ್ಕೆ ದೊಡ್ಡ ಪ್ರಮಾಣದ ಕೊಡುಗೆ ನೀಡಿದಂತಾಗುತ್ತದೆ ಎಂದು ಇನ್‍ಫೋಸಿಸ್‍ನ ಆಸೋಸಿಯೇಟಿವ್ ಉಪಾಧ್ಯಕ್ಷ ಮತ್ತು ಮಂಗಳೂರು ಕೇಂದ್ರದ ಮುಖ್ಯಸ್ಥ ವಾಸುದೇವ ಕಾಮತ್ ಆಭಿಪ್ರಾಯಪಟ್ಟರು. ಮಂಗಳೂರು ವಿವಿಯ ಮಂಗಳಾ ಆಡಿಟೋರಿಯಂನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಇಲೆಕ್ಟ್ರಾನಿಕ್ಸ್ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ ಮೂರು ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. ಇಂಟರ್ ನೆಟ್ ಮೂಲಕ ಕೃಷಿ, ಆಟೋಮೊಬೈಲ್, ಆಹಾರ, ಗಾರ್ಮೆಂಟ್ ಸೇರಿದಂತೆ ಪ್ರತಿಯೊಂದು ವಸ್ತುವಿಗೂ ಸಂಪರ್ಕಿಸಲು ಸಾಧ್ಯವಿದ್ದು ಆ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಬಹಳಷ್ಟು ಪ್ರಯೋಜನಕಾರಿಯಾಗಲಿದೆ ಎಂದ ಅವರು ಪ್ರಸ್ತುತ ಚಾಲ್ತಿಯಲ್ಲಿರುವ ಇತರ ಎಲ್ಲ ತಂತ್ರಗಾರಿಕೆಗಳನ್ನು ಮೀರಿಸುವ ಇಂಟರ್‍ನೆಟ್ ಆಫ್ ಥಿಂಗ್ಸ್ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯೋಗವಾಗುವ ಕಾರಣ ಅದರ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು. ಮಂಗಳೂರು ವಿವಿಯ ಕುಲಪತಿ ಪ್ರೊ| ಕೆ.ಬೈರಪ್ಪ…

Read More

UN NETWORKS ನರಿಂಗಾನ: ಮರಿಕ್ಕಳ ಜುಮಾ ಮಸ್ಜಿದ್ ವತಿಯಿಂದ ಸ್ವಲಾತ್ ವಾರ್ಷಿಕೋತ್ಸವದ ಪ್ರಯುಕ್ತ ನಡೆದ 3 ದಿವಸಗಳ ಮತ ಪ್ರವಚನ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮವು ಮರಿಕ್ಕಳ ಜುಮಾ ಮಸ್ಜಿದ್ ಖಾಝಿ ಶೈಖುನಾ ಬೇಕಲ್ ಉಸ್ತಾದರ ಅಧ್ಯಕ್ಷತೆಯಲ್ಲಿ ಮಸ್ಜಿದ್ ವಠಾರದಲ್ಲಿ ನಡೆಯಿತು. ಸಯ್ಯಿದ್ ಝೈನುಲ್ ಆಬಿದ್ ಜಮಾಲುಲೈಲ್ ತಂಙಳ್ ಕಾಜೂರು ಸ್ವಲಾತ್ ವಾರ್ಷಿಕ ಕಾರ್ಯಕ್ರಮದ ನೇತೃತ್ವ ಹಾಗೂ ದುಆ ಮಜ್ಲಿಸ್‍ಗೆ ನೇತೃತ್ವ ನೀಡಿದರು. ಕಾರ್ಯಕ್ರಮದಲ್ಲಿ ಮರಿಕ್ಕಳ ಜುಮಾ ಮಸ್ಜಿದ್ ಖತೀಬ್ ಅಬ್ಬಾಸ್ ಸಖಾಫಿ ಮಡಿಕೇರಿ, ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ, ಮರಿಕ್ಕಳ ಸದರ್ ಉಸ್ತಾದ್ ಝೈನುಲ್ ಆಬಿದ್ ಸಖಾಫಿ, ಮುಅಲ್ಲಿಂ ರಮಳಾನ್ ಮದನಿ ಕಂಬ್ಲಬೆಟ್ಟು, ಮರಿಕ್ಕಳ ಜುಮಾ ಮಸ್ಜಿದ್ ಉಪಾಧ್ಯಕ್ಷ ಅಬ್ಬಾಸ್ ಕೊಡಂಚಿಲ್, ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಚಂದಹಿತ್ತಿಲು, ಕೋಶಾಧಿಕಾರಿ ಹನೀಫ್ ಚಂದಹಿತ್ತಿಲು ಹಾಗೂ ಇನ್ನಿತರ ಜಮಾಅತ್ ನಾಯಕರು ಉಪಸ್ಥಿತರಿದ್ದರು. ಮರಿಕ್ಕಳ ಖತೀಬ್ ಅಬ್ಬಾಸ್ ಸಖಾಫಿ ಸ್ವಾಗತಿಸಿದರು. ಸದರ್ ಉಸ್ತಾದ್ ಝೈನುಲ್ ಆಬಿದ್ ಸಖಾಫಿ ವಂದಿಸಿದರು.

Read More

UN NETWORKS ಕೊಣಾಜೆ: ಸಂವಿದಾನ ಶಿಲ್ಪಿ ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದ ನಾಯಕರಾಗದೆ ಅವರು ಇಡೀ ಜಗತ್ತಿನ ಮಹಾನ್ ನಾಯಕರಾಗಿದ್ದಾರೆ. ಆಧುನಿಕ ಭಾರತದ ಪಿತಾಮಹನಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರು ಆರ್ಥಿಕ ತಜ್ಞ, ರಾಜಕೀಯ ವಿಶ್ಲೇಷಕ, ಕಾನೂನು ತಜ್ಞ ಹಾಗೂ ಸಮಾಜ ಸುಧಾರಕರಾಗಿದ್ದು ಅವರ ವ್ಯಕ್ತಿತ್ವ ಹಾಗೂ ಜೀವನ ನಮಗೆಲ್ಲರಿಗೂ ಮಾದರಿಯಾಗಿದೆ ಎಂದು ಬೆಂಗಳೂರು ಗಾಂಧಿಭವನದ ಉಪಾಧ್ಯಕ್ಷರಾದ ಪ್ರೊ.ಜಿ.ಬಿ.ಶಿವರಾಜು ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಘಟಕದ ಆಶ್ರಯದಲ್ಲಿ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್‍ರವರ 127ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಇತರ ದೇಶಗಳ ಸಂವಿಧಾನವನ್ನು ಹೋಲಿಸಿದರೆ ಭಾರತದ ಸಂವಿಧಾನವು ಅತ್ಯಂತ ಪ್ರಮುಖವಾಗಿ ನಮಗೆ ಕಾಣುತ್ತದೆ. ಇಂದಿಗೂ ಮೂಲ ಸ್ವರೂಪ ಹಾಗೂ ಸತ್ಯತೆಯನ್ನು ಉಳಿಸಿಕೊಂಡು ಬಂದಿದೆ. ಅಸಮಾನತೆ, ಜಾತೀಯತೆಯನ್ನು ಹೋಗಲಾಡಿಸಿ ಆಧುನಿಕ ಭಾರತದ ನಿರ್ಮಾಣ ಮಾಡಿದ ಡಾ.ಅಂಬೇಡ್ಕರ್ ಅವರ ಆಶಯವನ್ನು ಈಡೇರಿಸುವ…

Read More

UN NETWORKS ತಲಪಾಡಿ: ಶಿಬಿರಗಳಲ್ಲಿ ಸಿಗುವ ಸಂಸ್ಕಾರ, ಸಾಮಾನ್ಯ ಜ್ಞಾನವು ಮುಂದೆ ಮಕ್ಕಳಲ್ಲಿ ಬೆಳವಣಿಗೆಯಲ್ಲಿ ಅದು ದೊಡ್ಡ ರೂಪದಲ್ಲಿ ವೃದ್ಧಿಯಾಗಲಿ ಎಂದು ಆನಂದಾಶ್ರಮ ಪ್ರೌಢಶಾಲಾ ನಿವೃತ್ತ ಅಧ್ಯಾಪಕರಾದ ಕೆ. ಆರ್.ಚಂದ್ರ ಅವರು ಅಭಿಪ್ರಾಯಪಟ್ಟರು. ಅವರು ಕಿನ್ಯ ಕೇಶವ ಶಿಶುಮಂದಿರ ಹಾಗೂ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಹಕಾರದೊಂದಿಗೆ ಶ್ರೀ ಕ್ಷೇತ್ರ ತಲಪಾಡಿಯ ಸಭಾ ಭವನದಲ್ಲಿ 5 ದಿನಗಳ ಪರ್ಯಂತ ನಡೆಯುವ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡಿ ಶಾಲೆಯಲ್ಲಿ ಪಾಠಗಳಲ್ಲಿ ಸಿಗದ ಅನೇಕ ವಿಷಯಗಳು, ಮೌಲ್ಯಗಳು ಈ ಶಿಬಿರಗಳಿಂದ ಪಡೆಯಬಹುದು ಎಂದು ಹೇಳಿದರು. ವೇದಮೂರ್ತಿ ಬಾಲಕೃಷ್ಣ ಭಟ್ ಪಂಜಾಳ ಶಿಬಿರ ಉದ್ಘಾಟಿಸಿ ಮಾತನಾಡಿ ಕೇವಲ ಹಣದಿಂದ ದೊರಕುವ ವಿಚಾರ, ವಿಷಯಗಳು ಮಾತ್ರ ಮುಖ್ಯವಲ್ಲ ಉಚಿತವಾಗಿ ಸಿಗುವ ಈ ಸಂಸ್ಕಾರಯುತ ಶಿಕ್ಷಣವನ್ನು ಮಕ್ಕಳು ಪಡೆದು ಅದನ್ನು ಪೋಷಿಸಿದರೆ ಮಕ್ಕಳ ಭವಿಷ್ಯ ಉಜ್ವಲವಾಗುವುದು ಎಂದರು. ನಿವೃತ್ತ ಕೃಷಿ ಅಧಿಕಾರಿ ಕೇಶವ ತಚ್ಚಣಿ ಮಾತಾನಾಡಿ ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳು ತಮ್ಮತನವನ್ನು ಕಳೆದುಕೊಳ್ಳುತ್ತಿದ್ದು, ಇಂತಹ…

Read More

UN NETWORKS ಪಿಲಾರ್: ಮಹಿಳೆಯರು ನಮ್ಮ ಸನಾತನ ಸಂಸ್ಕೃತಿಯನ್ನು ಪಾಲಿಸಿದರೆ ಸಮಾಜದಲ್ಲಿ ಯಾರು ಮಹಿಳೆಯರನ್ನು ವಕ್ರದೃಷ್ಟಿಯಿಂದ ನೋಡಲು ಸಾಧ್ಯವಿಲ್ಲ, ಪ್ರತಿಯೊಬ್ಬರಿಗೂ ಜೀವನದ ಸ್ವಾತಂತ್ರ್ಯ ನೀಡಿದ ದೇಶ ಇದ್ದರೆ ಅದು ಭಾರತ ಮಾತ್ರ ನಮಗೆ ನೀಡಿದ ಸ್ವಾತಂತ್ರ್ಯದ ದುರುಪಯೋಗ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಮಾತೆಯರಿಗಿದೆ ಎಂದು ಪ್ರಖರ ವಾಗ್ಮಿ, ಯುವ ನ್ಯಾಯವಾದಿ ಸಹನಾ ಕುಮಾರಿ ಸೂಡ ಅಭಿಪ್ರಾಯಪಟ್ಟರು. ಪಿಲಾರ್ ಪ್ರಕಾಶನಗರದ ಕೆಟಿಎಸ್‍ಎಸ್.ಬಾಯ್ಸ್ ಹಮ್ಮಿಕೊಂಡ 8ನೇ ವರ್ಷದ ಬಿಸು ಪರ್ಬ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಕಾಪಿಕಾಡು ಉಮಾಮಹೇಶ್ವರಿ ಕಬ್ಬಡ್ಡಿ ಅಕಾಡೆಮಿ ಅಧ್ಯಕ್ಷ ಗೋಪಿನಾಥ್ ಕಾಪಿಕಾಡ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮೂಕಾಂಬಿಕಾ ಗಾರ್ಮೆಂಟ್ಸ್ ನ ಮಾಲಕ ಚಂದ್ರಹಾಸ್ ಪಂಡಿತ್ ಹೌಸ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಗಿರೀಶ್ ಆಳ್ವ ಮೊರ್ಲ, ಕೊರಗತನಿಯ ಸೇವಾ ಸಮಿತಿ ಅಧ್ಯಕ್ಷ ರಾಜೇಶ್ ಪೂಜಾರಿ, ಮಹಿಳಾ ಸಮಿತಿ ಅಧ್ಯಕ್ಷೆ ಸುಜಯ, ರಾ.ಸ್ವಂ.ಸೇ.ಸಂಘದ ತಾಲೂಕ್ ವ್ಯ.ಪ್ರಮುಖ್ ಅರ್ಜುನ್ ಮಾಡೂರು, ಕೆಟಿಎಸ್‍ಎಸ್‍ನ ಅಧ್ಯಕ್ಷ ಕೀರ್ತಿರಾಜ್, ಕೋಶಾಧಿಕಾರಿ ನಿಶಾಂತ್ , ಉಪಾಧ್ಯಕ್ಷ ಸಂತೋಷ್, ಚಿರಂಜನ್,…

Read More

UN NETWORKS ಉಳ್ಳಾಲ: ಜಾರ್ಖಂಡ್ ರಾಂಚಿಯಲ್ಲಿ ನಡೆದ 2018ರ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯ 74 ಕೆ.ಜಿ ವಿಭಾಗದಲ್ಲಿ ಹೇಮಚಂದ್ರ್ರ ಬಬ್ಬುಕಟ್ಟೆ ಇವರು ಚಿನ್ನ ಮತ್ತು ಕಂಚಿನ ಪದಕ ಪಡೆದುಕೊಂಡಿದ್ದಾರೆ. ಇವರು ಸಮಾಜ ಕಲ್ಯಾಣ ಇಲಾಖೆಯ ಉದ್ಯೋಗಿಯಾಗಿದ್ದು, ಶ್ರೀ ಶಕ್ತಿ ಭಾರತ್ ವ್ಯಾಯಾಮ ಶಾಲೆಯ ಸದಸ್ಯ. ಬಿ. ಶೇಖರ್ ಭಟ್ನಗರ ಇವರಿಂದ ತರಬೇತಿಯನ್ನು ಪಡೆದಿದ್ದರು.

Read More