UN NETWORKS ತಲಪಾಡಿ: ದೇಶದಲ್ಲಿ ಕ್ಯಾನ್ಸರ್ ಎಂಬ ಮಾರಣಾಂತಿಕ ಕಾಯಿಲೆಗೆ ಗುರಿಯಾಗಿ ಸಾವನ್ನಪ್ಪುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗಿದ್ದು ಅದರ ಬಗ್ಗೆ ಜನರಲ್ಲಿ ಜಾಗೃತಿ ಅತೀ ಅಗತ್ಯ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ, ಈ ರೋಗದ ಜಾಗೃತಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸದೃಢ ಸಮಾಜವನ್ನು ನಿರ್ಮಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಬೇಕಾಗಿದೆ ಎಂದು ಯೇನೆಪೋಯ ಮೆಡಿಕಲ್ ಕಾಲೇಜಿನ ಅಂಕೋಲಜಿ ವಿಭಾಗದ ಮುಖ್ಯಸ್ಥ ಡಾ| ಇಬ್ರಾಹಿಂ ನಾಗನೂರು ಅಭಿಪ್ರಾಯಪಟ್ಟರು. ಅವರು ತಲಪಾಡಿಯ ಶಾರದಾ ವಿದ್ಯಾನಿಕೇತನದಲ್ಲಿ ನಡೆದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಾಯಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ರೋಗದ ಕಾರಣಗಳು, ಗುಣಲಕ್ಷಣಗಳು ಮತ್ತು ಚಿಕಿತ್ಸೆಯ ಸವಿವರ ಮಾಹಿತಿಯನ್ನು ಯೆನಪೋಯ ಮೆಡಿಕಲ್ ಕಾಲೇಜಿನ ವೈದ್ಯಾಧಿಕಾರಿಗಳಾದ ಡಾ| ರಚನಾ ಪ್ರಭು, ಡಾ| ಪ್ರಜ್ಞಾ ಕಿಣಿ ಮತ್ತು ಡಾ| ಇಮ್ರಾನ್ ಪಾಶ ವಿದ್ಯಾರ್ಥಿಗಳಿಗೆ ನೀಡಿದರು ಮತ್ತು ಈ ರೋಗದ ಬಗೆಗಿನ ವಿದ್ಯಾರ್ಥಿಗಳ ಸಂದೇಹವನ್ನು ಪರಿಹರಿಸಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ ಸುಷ್ಮಾ…
Author: UllalaVani
UN NETWORKS ಉಳ್ಳಾಲ: ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ಗ್ರಾಹಕರು ಪಡೆದ ಸೇವೆಯೇ ಈ ಸಂಘದ ಬೆಳವಣಿಗೆಗೆ ಸ್ಪೂರ್ತಿ ಎಂದು ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಅಭಿಪ್ರಾಯಪಟ್ಟರು. ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘ ಉಳ್ಳಾಲ ಶಾಖೆಯ ತೃತೀಯ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಳ್ಳಾಲ ಶಾಖೆಯು ಕಳೆದ ಮೂರು ವರ್ಷದ ಅವಧಿಯಲ್ಲಿ ಹೆಚ್ಚು ಗ್ರಾಹಕರನ್ನು ಹೊಂದಿ ಉತ್ತಮ ಲಾಭದಲ್ಲಿ ಮುನ್ನಡೆಯುತ್ತಿದೆ ಹಾಗೂ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ. ಈ ಯಶಸ್ಸು ಅಭಿವೃದ್ದಿಗೆ ಸಂಘದ ಸದಸ್ಯರು, ಗ್ರಾಹಕರು ಕಾರಣಿಭೂತರು ಎಂದರು. ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ. ಮಾತನಾಡಿ ಸಂಘದಲ್ಲಿ ಕೆ.ಎಸ್.ಅರ್.ಟಿ.ಸಿ ಮತ್ತು ಖಾಸಗಿ ಟಿಕೇಟ್ ಬುಕ್ಕಿಂಗ್ ಅಲ್ಲದೆ ಜೀವ ವಿಮೆ, ಆರೋಗ್ಯ ವಿಮೆ, ಹಾಗೂ ಮಣಿಪಾಲ್ ಆರೋಗ್ಯ ಕಾರ್ಡ್‍ನ್ನು ನೋಂದಯಿಸುವ ಸೌಲಭವಿದ್ದು, ಅದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು. ಸಂಘದ ಸದಸ್ಯರು , ಸಿಬಂದಿಗಳು ಮತ್ತು ಪದಾಧಿಕಾರಿಗಳು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭೆಯಲ್ಲಿ ಸಂಘದ…
UN NETWORKS ಉಳ್ಳಾಲ: ಇಂದಿನ ಕಾಲದಲ್ಲಿ ರಾಮಾಯಣದಂತಹ ಕಥೆಗಳನ್ನು ಹರಿಕಥೆಯ ಮೂಲಕ ತಿಳಿಸುವುದರಿಂದ ನಮ್ಮ ಸಂಸ್ಕೃತಿ ಸಂಸ್ಕಾರ ಆಚಾರ ವಿಚಾರ ಉಳಿಸಿ ಬೆಳೆಸಲು ಸಹಕಾರಿ ಎಂದು ಹರಿಕಥಾ ಸತ್ಸಂಗ ಸಮಿತಿಯ ಗೌರವ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಅಭಿಪ್ರಾಯಪಟ್ಟರು. ಕೀರ್ತನ ಪ್ರವೀಣ ಯೋಗಾಚಾರ್ಯ ಪುಂಡರಿಕಾಕ್ಷ ಬೆಳ್ಳೊರು ಇವರ ಎರಡನೇ ವರ್ಷದ ಶ್ರೀ ರಾಮಾಯಣ ಮಾಸಾಚರಣೆಯ ಅಂಗವಾಗಿ ಜಿಲ್ಲೆಯ ವಿವಿದೆಡೆ ಜು. 16ರಿಂದ ಆ.7ರವರೆಗೆ ನಡೆಯಲಿರುವ ಹರಿಕಥಾ ಸತ್ಸಂಗ, ರಾಮನಾಮ ಜಪಯಜ್ಞ ಹಾಗೂ ಆದಿತ್ಯ ಹೃದಯ ಹವನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಕೊಲ್ಯ ಶ್ರೀ ಸೌಭಾಗ್ಯ ಸಭಾಭವನ ದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಮುಂದಿನ ದಿನಗಳಲ್ಲಿ ಉತ್ತಮ ಪ್ರಜೆಗಳ ನಿರ್ಮಾಣ ಮಾಡಲು ಹರಿಕಥಾ ಸತ್ಸಂಗ ತುಂಬಾ ಒಳ್ಳೆಯ ಕೆಲಸ. ಆ ಕಾರ್ಯಕ್ರಮವನ್ನು ಎಲ್ಲರೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಾವೆಲ್ಲ ಒಟ್ಟು ಸೇರಿ ಕೆಲಸ ಮಾಡೋಣ ಎಂದು ಹೇಳಿದರು. ಪುಂಡರಿಕಾಕ್ಷ ಬೆಳ್ಳೊರು ಮಾತನಾಡಿ ಮನೆ ಮನೆಗೆ ರಾಮಾಯಣ ಮನಮನಕೆ ರಾಮಾಯಣ ಮುಟ್ಟಿಸುವ ಆಮೂಲಕ…
UN NETWORKS ಉಳ್ಳಾಲ: ಪರಿಸರ ನಾಶದಿಂದ ಜಲ ಸಂಪನ್ಮೂಲಕ್ಕೂ ತೊಂದರೆಯಾಗುತ್ತಿದ್ದು, ಜನರಲ್ಲಿ ಜಲಸಂರಕ್ಷಣೆಯ ಕುರಿತು ಜಾಗೃತಿ ಮೂಡದಿದ್ದರೆ ಮುಂದಿನ ದಿನಗಳಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಬಹುದು ಎಂದು ಚಂದ್ರಹಾಸ ಕೊಲ್ಯ ಅಭಿಪ್ರಾಯಪಟ್ಟರು. ಜನ್ಮಭೂಮಿ ಸ್ವಸಹಾಯ ಸೌಹಾರ್ದ ಸಹಕಾರಿ ತೊಕ್ಕೋಟು ಇದರ ವತಿಯಿಂದ ಕೊಲ್ಯ ಶಾರದಾ ಸಭಾಭವನದಲ್ಲಿ ಸಹಕಾರಿ ಸದಸ್ಯರಿಗೆ ಜಲ ಹಾಗೂ ಆಹಾರದ ಸದ್ಬಳಕೆಯ ಕುರಿತು ನಡೆದ ಕಾರ್ಯಗಾರದಲ್ಲಿ ಜಲಸಂರಕ್ಷಣೆ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷರು-ಸದಸ್ಯರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಆಹಾರ ಸದ್ಬಳಕೆಯ ಬಗ್ಗೆ ಸುರೇಶ್ ಮಂಗಳೂರು ಇವರು ಮಾಹಿತಿ ನೀಡಿದರು. ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ನಿತೇಶ್ ಸ್ವಾಗತಿಸಿದರು. ನಾರಾಯಣ ಕುಂಪಲ ಪ್ರಸ್ತಾವನೆಗೈದರು ಸೋಮೇಶ್ವರ ಮಂಡಲ ಬೌದ್ಧಿಕ ಪ್ರಮುಖ ಸಂತೋಶ್ ಕುಂಪಲ ವಂದಿಸಿದರು.ಯೋಜನಾಧಿಕಾರಿ ಜಿತೇಂದ್ರ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಒಟ್ಟು 80 ಜನ ಸಹಕಾರಿ ಸದಸ್ಯರು ಸದುಪಯೋಗ ಪಡೆದರು.
UN NETWORKS ಮಂಗಳೂರು: ನಗರದ ಕೇಂದ್ರ ಮಾರುಕಟ್ಟೆಯ ಬೀದಿ ಬದಿ ಹಣ್ಣು ಹಂಪಲು ವ್ಯಾಪಾರಸ್ಥರಿಂದ ಕೇಂದ್ರ ಮಾರುಕಟ್ಟೆಯಲ್ಲಿ ರವಿವಾರ ಸಂಜೆ ಇಫ್ತಾರ್ ಕೂಟ ನಡೆಯಿತು. ಇಫ್ತಾರ್ ಕೂಟದಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್, ಮಾಜಿ ಮೇಯರ್ ಅಶ್ರಫ್, ಮಂಗಳೂರು ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಬೆಳ್ಮ ಗ್ರಾ.ಪಂ. ಉಪಾಧ್ಯಕ್ಷ ಸತ್ತಾರ್ ಸಿ.ಎಂ., ಶಿವಣ್ಣ, ನೂರುದ್ದೀನ್ ಕುದ್ರೋಳಿ, ಮುಹಮ್ಮದ್ ಹಾರಿಸ್ ದೇರಳಕಟ್ಟೆ, ಫಝಲ್ ಕುದ್ರೋಳಿ, ಇಸ್ಮಾಯೀಲ್ ಕಣ್ಣೂರು, ಜಲೀಲ್ ವಳಚ್ಚಿಲ್, ಫಾರೂಕ್ ಬೆಳ್ಮಕಲ್ಲಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.
UN NETWORKS ಮಂಜೇಶ್ವರ : ದೇಶದಾದ್ಯಂತ ಕೋಮುವಾದವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಇದು ಅಪಾಯಕಾರಿ ,ವಿವಿಧ ಭಾಷೆಗಳ ಸಂಸ್ಕೃತಿಯ, ಶಾಂತಿ , ಸೌಹಾರ್ಧತೆಯ ತವರೂರು ಮಂಜೇಶ್ವರ , ಮಂಜೇಶ್ವರದ ಜನತೆಯು ಸೌಹಾರ್ಧತೆಯನ್ನು ಕಾಯ್ದುಕೊಂಡು ಬಂದಿದ್ದಾರೆ ಎಂದು ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎ.ಕೆ.ಎಂ ಅಶ್ರಫ್ ಹೇಳಿದ್ದಾರೆ. ಅವರು ಮಂಜೇಶ್ವರ ಪ್ರೆಸ್ ಕ್ಲಬ್ ಹೊಸಂಗಡಿ ಹಿಲ್ ಸೈಡ್ ಸಭಾಂಗಣದಲ್ಲಿ ಆಯೋಜಿಸಿದ್ದ ಇಫ್ತಾರ್ ಸಂಗಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಂಜೇಶ್ವರ ಪ್ರೆಸ್ ಕ್ಲಬ್ ಆಯೋಜಿಸಿರುವ ಇಫ್ತಾರ್ ಸಂಗಮದಿಂದ ಮನುಷ್ಯರೊಳಗಿನ ಸೌಹಾರ್ಧತೆ ಇನ್ನಷ್ಟು ಹೆಚ್ಚುವಂತಾಗಲಿ ಎಂದು ಅವರು ಹೇಳಿದರು. ಮಂಜೇಶ್ವರ ಪ್ರೆಸ್ ಕ್ಲಬ್ ಅಧ್ಯಕ್ಷ ಆರಿಫ್ ಮಚ್ಚಂಪಾಡಿ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ರಹಿಮಾನ್ ಉದ್ಯಾವರ ಸ್ವಾಗತಿಸಿದರು. ಕಾಸರಗೋಡು ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ , ಸಿ.ಪಿ.ಐ ಮುಖಂಡ ಬಿ.ವಿ ರಾಜನ್ , ಮಂಜೇಶ್ವರ ಬ್ಲಾಕ್ ಪಂಚಾಯತು ಸ್ಥಾಯೀ ಸಮಿತಿ ಸದಸ್ಯ ಮುಸ್ತಫಾ ಉದ್ಯಾವರ , ಕರ್ನಾಟಕ ಕೊಂಕಣಿ ಅಕಾಡೆಮಿ ಸದಸ್ಯ ಲಕ್ಷ್ಮಣ್…
UN NETWORKS ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಜೂ.13 ರಂದು ಅಜ್ಜರಕಾಡು ಗೋವಿಂದ ಕಲ್ಯಾಣ ಮಂಟಪದಲ್ಲಿ ನಡೆಸಲು ಉದ್ದೇಶಿಸಿದ್ದ ಇಫ್ತಾರ್ ಕೂಟ ರದ್ದುಗೊಂಡಿರುವ ಬಗ್ಗೆ ತಿಳಿದುಬಂದಿದೆ. ಕಳೆದ ವರ್ಷ ಪೇಜಾವರ ಸ್ವಾಮೀಜಿಯ ಪರ್ಯಾಯ ಅವಧಿಯಲ್ಲಿ ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಏರ್ಪಡಿಸಿ, ನಮಾಝ್ ನಿರ್ವಹಿಸಲು ಅವಕಾಶ ನೀಡಿದ ಕಾರಣಕ್ಕೆ ಬಹಳಷ್ಟು ವಿವಾದ ಉಂಟಾಗಿತ್ತು. ಇದರ ವಿರುದ್ಧ ಶ್ರೀರಾಮ ಸೇನೆ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಈ ಬಾರಿ ಪೇಜಾವರ ಸ್ವಾಮೀಜಿ ಮಠದಿಂದ ಹೊರಗಡೆ ಗೋವಿಂದ ಕಲ್ಯಾಣ ಮಂಟಪದಲ್ಲಿ ಇಫ್ತಾರ್ ಕೂಟ ನಡೆಸುವುದಾಗಿ ತಿಳಿಸಿದ್ದರು. ಈ ಬಗ್ಗೆ ಭಾರೀ ಚರ್ಚೆ ಹಾಗೂ ವಿರೋಧಗಳು ವ್ಯಕ್ತವಾಗಿತ್ತು. ಇದೀಗ ಸ್ವಾಮೀಜಿ ಮೇಲೆ ಒತ್ತಡ ಹೇರಿದ ಕಾರಣ ಇಫ್ತಾರ್ ಕೂಟವನ್ನು ರದ್ದುಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಮಠದ ಮೂಲಗಳ ಪ್ರಕಾರ, ಸ್ವಾಮೀಜಿಗೆ ಎಡೆಬಿಡದ ಕಾರ್ಯಕ್ರಮಗಳು ಇರುವುದರಿಂದ ಈ ಬಾರಿಯ ಇಫ್ತಾರ್ ಕೂಟವನ್ನು ಕೈಬಿಡಲಾಗಿದೆ ಎಂದು ತಿಳಿಸಲಾಗಿದೆ. ಇದೇ ವಿಚಾರವಾಗಿ ಉಡುಪಿ ಪೇಜಾವರ ಸ್ವಾಮೀಜಿ ಬ್ಲಡ್ ಡೋನೆಟಿಂಗ್ ಟೀಮ್‍ನ…
UN NETWORKS ಉಳ್ಳಾಲ: ಶಾಸಕನಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿದ್ದೇನೆ. ಆರೋಗ್ಯ ಹಾಗೂ ಆಹಾರ ಇಲಾಖೆ ಸಚಿವನಾಗಿ ಸರಕಾರದ ಪ್ರತಿ ಯೋಜನೆಯನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಿದ್ದಲ್ಲದೆ ಬಹಳಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದು ಕ್ಷೇತ್ರ ಹಾಗೂ ರಾಜ್ಯದ ಜನರ ಪ್ರೀತಿಗೆ ಪಾತ್ರನಾಗಿದ್ದು ಪಕ್ಷದ ಮುಖಂಡರು ನನ್ನ ಸೇವೆಯನ್ನು ಪರಿಗಣಿಸಿ ನೂತನ ಸಮಿಶ್ರ ಸರಕಾರದಲ್ಲಿಯೂ ಜನರ ಸೇವೆ ಮಾಡಲು ಸಚಿವ ಸ್ಥಾನ ನೀಡಿದ್ದಾರೆ. ಅವರ ನಂಬಿಕೆ ವಿಶ್ವಾಸಕ್ಕೆ ತಕ್ಕಂತೆ ಕೊಟ್ಟ ಇಲಾಖೆಯಡಿಯಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಖಾತೆ ಸಚಿವ ಯು.ಟಿ.ಖಾದರ್ ಹೇಳಿದರು. ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ವತಿಯಿಂದ ಶುಕ್ರವಾರ ದರ್ಗಾ ವಠಾರದಲ್ಲಿ ನೂತನ ಸಚಿವ ಹಾಗೂ ಶಾಸಕರುಗಳಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನಾಲ್ಕನೆಯ ಬಾರಿಗೆ ಶಾಸಕನಾಗಿ, ಎರಡನೆಯ ಬಾರಿ ಸಚಿವನಾಗಿ ಮುಂದುವರಿಯಲು ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಶ್ರಮ ಸಾರ್ಥಕಗೊಳಿಸುತ್ತೇನೆ. ನನ್ನನ್ನು ನಂಬಿಕೊಂಡು ಕ್ಷೇತ್ರದಲ್ಲಾಗ ಬೇಕಾದ ಅಭಿವೃದ್ದಿ…
UN NETWORKS ಉಳ್ಳಾಲ : ಉಳ್ಳಾಲ ಭಾಗದಲ್ಲಿ ಶನಿವಾರ ಸುರಿದ ಧಾರಾಕಾರ ಮಳೆ ಮತ್ತು ಗಾಳಿಗೆ ಹಲವೆಡೆ ಮರ ಬಿದ್ದು ಸುಮಾರು 70ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಉರುಳಿಬಿದ್ದರೆ, ಮನೆ ಮತ್ತು ಅಂಗಡಿ ಮೇಲೆ ಮರ ಬಿದ್ದು ಅಪಾರ ನಷ್ಟ ಸಂಭವಿಸಿರುವ ಘಟನೆಯೂ ನಡೆದಿದೆ. ಉರುಳಿಬಿದ್ದ ವಿದ್ಯುತ್ ಕಂಬಗಳು: ಮೆಸ್ಕಾಂ ವಿಭಾಗದ ಉಳ್ಳಾಲ-1 ಭಾಗದ ಮೊಗವೀರಪಟ್ನ, ಉಳ್ಳಾಲ ಹೊಯ್ಗೆ, ವಿಜಯನಗರ, ಮೂರುಕಟ್ಟ, ಆನಂದಾಶ್ರಮ ಶಾಲೆ, ಸೋಮೇಶ್ವರ ದೇವಸ್ಥಾನ ದ್ವಾರದ ಬಳಿ, ಸೋಮೇಶ್ವರ ಬೀಚ್ ಪ್ರದೇಶಗಳಲ್ಲಿ 25 ಕ್ಕೂ ಹೆಚ್ಚು ಕಂಬಗಳು ನೆಲಕ್ಕೆ ಉರುಳಿ ಧರಾಶಾಹಿಯಾಗಿದೆ. ಕೋಟೆಕಾರು ವಿಭಾಗದ ಸೋಮೇಶ್ವರ, ಉಚ್ಚಿಲ, ಕಿನ್ಯಾ ಬೆಳರಿಂಗೆ, ಮಾಡೂರು, ತಲಪಾಡಿ, ಬಜಂಗ್ರೆ, ಕನೀರುತೋಟ ಬಳಿ 28 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದಿವೆ. ದೇರಳಕಟ್ಟೆ (ಉಳ್ಳಾಲ-2) ಭಾಗದ ಬೆಳ್ಮ ಮಾಗಂತಡಿ, ಬರಿಕೆ, ಮಂಗಳಾಂತಿ, ಗಟ್ಟಿಕುದ್ರು, ಎಲಿಯಾರುಪದವು ಸ್ಥಳಗಳಲ್ಲಿ ತಂತಿ ತುಂಡಾಗಿ ನೆಲಕ್ಕೆ ಬಿದ್ದು ಮೆಸ್ಕಾಂ ಇಲಾಖೆಗೆ ಅಪಾರ ನಷ್ಟ ಉಂಟಾಗಿದೆ. ಸಮುದ್ರ ತೀರದ ಪ್ರದೇಶಗಳಲ್ಲಿ ಶನಿವಾರ…
UN NETWORKS ಉಳ್ಳಾಲ: ಮೊಗವೀರಪಟ್ನ ಶಿವಾಜಿ ಕ್ಲಬ್ ಬಳಿ ಕಳೆದ ಎರಡು ದಿನಗಳಿಂದ ವಿದ್ಯುತ್ ಕಂಬ ನೆಲಕ್ಕೆ ಬಿದ್ದರೂ, ಅದನ್ನು ತೆರವುಗೊಳಿಸದೆ ಅಪಾಯವನ್ನು ಆಹ್ವಾನಿಸುವ ಸ್ಥಿತಿ ಇದೆ. ಇದರಿಂದಾಗಿ ಸ್ಥಳೀಯರು ವಿದ್ಯುತ್ ಇಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಶನಿವಾರ ಬೆಳಿಗ್ಗೆ ಬೀಸಿದ ಗಾಳಿಯಿಂದಾಗಿ ಸಾಲು ಸಾಲಾಗಿ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಸಾರ್ವಜನಿಕರು ನಡೆದಾಡುವ ರಸ್ತೆ ಬದಿಯಲ್ಲೇ ವಿದ್ಯುತ್ ಕಂಬ ಹಾಗೂ ತಂತಿಗಳು ಬಿದ್ದಿರುವುದರಿಂದ ಸಾರ್ವಜನಿಕರಿಗೂ ತೊಂದರೆಯಾಗಿದೆ. ಈ ಕುರಿತು ಮೆಸ್ಕಾಂ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿರುವ ಅಧಿಕಾರಿಗಳು ಹಾಗೂ ಲೈನ್ ಮೆನ್ ನೋಡಿ ಹೋಗಿದ್ದಾರೆ. ಆದರೆ 24 ಗಂಟೆಯಾದರೂ ತೆರವಾಗಲಿ, ದುರಸ್ತಿಯಾಗಲಿ ಮಾಡಲಿಲ್ಲ ಅನ್ನುವುದು ಸಾರ್ವಜನಿಕರ ಆರೋಪ. ಸಮುದ್ರ ಕಿನಾರೆಗೆ ನೂರಾರು ಪ್ರವಾಸಿಗರು, ಸ್ಥಳೀಯ ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ದಾಟುತ್ತಿರುತ್ತಾರೆ. ಆದರೂ ಇಲಾಖೆಯವರು ತೆರವುಗೊಳಿಸದೇ ಇರುವುದರಿಂದ ತೊಂದರೆಯಾಗಿದೆ ಅನ್ನುವ ಆರೋಪ ಕೇಳಿಬಂದಿದೆ. ಶನಿವಾರ ಬೆಳಿಗ್ಗೆ ಬೀಸಿದ ಗಾಳಿಯಿಂದಾಗಿ ಉಳ್ಳಾಲ ವ್ಯಾಪ್ತಿಯಲ್ಲಿ 70ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕೆ…

