UN NETWORKS
ಉಳ್ಳಾಲ: ಪರಿಸರ ನಾಶದಿಂದ ಜಲ ಸಂಪನ್ಮೂಲಕ್ಕೂ ತೊಂದರೆಯಾಗುತ್ತಿದ್ದು, ಜನರಲ್ಲಿ ಜಲಸಂರಕ್ಷಣೆಯ ಕುರಿತು ಜಾಗೃತಿ ಮೂಡದಿದ್ದರೆ ಮುಂದಿನ ದಿನಗಳಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಬಹುದು ಎಂದು ಚಂದ್ರಹಾಸ ಕೊಲ್ಯ ಅಭಿಪ್ರಾಯಪಟ್ಟರು.
ಜನ್ಮಭೂಮಿ ಸ್ವಸಹಾಯ ಸೌಹಾರ್ದ ಸಹಕಾರಿ ತೊಕ್ಕೋಟು ಇದರ ವತಿಯಿಂದ ಕೊಲ್ಯ ಶಾರದಾ ಸಭಾಭವನದಲ್ಲಿ ಸಹಕಾರಿ ಸದಸ್ಯರಿಗೆ ಜಲ ಹಾಗೂ ಆಹಾರದ ಸದ್ಬಳಕೆಯ ಕುರಿತು ನಡೆದ ಕಾರ್ಯಗಾರದಲ್ಲಿ ಜಲಸಂರಕ್ಷಣೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷರು-ಸದಸ್ಯರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಆಹಾರ ಸದ್ಬಳಕೆಯ ಬಗ್ಗೆ ಸುರೇಶ್ ಮಂಗಳೂರು ಇವರು ಮಾಹಿತಿ ನೀಡಿದರು.
ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ನಿತೇಶ್ ಸ್ವಾಗತಿಸಿದರು. ನಾರಾಯಣ ಕುಂಪಲ ಪ್ರಸ್ತಾವನೆಗೈದರು ಸೋಮೇಶ್ವರ ಮಂಡಲ ಬೌದ್ಧಿಕ ಪ್ರಮುಖ ಸಂತೋಶ್ ಕುಂಪಲ ವಂದಿಸಿದರು.ಯೋಜನಾಧಿಕಾರಿ ಜಿತೇಂದ್ರ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಒಟ್ಟು 80 ಜನ ಸಹಕಾರಿ ಸದಸ್ಯರು ಸದುಪಯೋಗ ಪಡೆದರು.


