UN NETWORKS
ಉಳ್ಳಾಲ: ಉದ್ಯೋಗದೊಂದಿಗೆ ಕಾನೂನು ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುವ ಕುರಿತು ಜನರಲ್ಲಿ ಜಾಗೃತಿ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಮುನ್ನೂರು ಯುವಕ ಸಂಘ ಉದ್ಯೋಗ ಮಾಹಿತಿಯೊಂದಿಗೆ ಕಾನೂನು ಮಾಹಿತಿ ಶಿಬಿರವನ್ನು ಗ್ರಾಮದ ಜನರಿಗೆ ಸಂಘಟಿಸಿರುವುದು ಶ್ಲಾಘನೀಯ ಎಂದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ ಅಭಿಪ್ರಾಯಪಟ್ಟರು.
ಕುತ್ತಾರಿನ ಮುನ್ನೂರು ಯುವಕ ಮಂಡಲದ ಸುವರ್ಣ ಮಹೋತ್ಸವದ ಅಂಗವಾಗಿ ಭಾನುವಾರ ಮುನ್ನೂರು ಯುವಕ ಮಂಡಲದ ಸಭಾಂಗಣದಲ್ಲಿ ನಡೆದ ಕಾನೂನು ಮಾಹಿತಿ ಶಿಬಿರ ಹಾಗೂ ಉದ್ಯೋಗ ಮಾಹಿತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುನ್ನೂರು ನುವ ಗ್ರಾಮದ ಹೆಸರಿನಲ್ಲಿ ಕಳೆದ 50 ವರ್ಷಗಳಲ್ಲಿ ಸಾರ್ಥಕ ಸಮಾಜ ಸೇವೆ ನಡೆಸುತ್ತಿರುವ ಮುನ್ನೂರು ಯುವಕ ಸಂಘ ಯುವ ಪ್ರತಿಭೆಗಳಿಗೆ ಮಾರ್ಗದರ್ಶನದೊಂದಿಗೆ ಸಮಾಜಿಕ ಸಂಘಟನೆಯನ್ನು ನಡೆಸುತ್ತಿದೆ. ಇಂದಿನ ಯುವ ಜನಾಂಗ ಸಂಘಟನೆಗಳ ಮೂಲಕ ಸಮಾಜಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಅಗತ್ಯ ಇದೆ ಎಂದರು.
ಅಖಿಲ ಭಾರತ ವಕೀಲರ ಸಂಘದ ದ.ಕ.ಜಿಲ್ಲಾಧ್ಯಕ್ಷ ಯಶವಂತ ಮರೋಳಿ ಅಧ್ಯಕ್ಷತೆ ವಹಿಸಿದ್ದರು. ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದ ಗೌರವಾಧ್ಯಕ್ಷ ರಾಮಕೃಷ್ಣ ಕಾಯಂಗಳ, ಉಳ್ಳಾಲ ಬಿ.ಎಂ. ಪ್ರೌಢಶಾಲಾ ಶಿಕ್ಷಕಿ ಉಷಾ ಎಂ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಜಿಲ್ಲಾ ಸರ್ಕಾರಿ ವಕೀಲರು, ವಿಶೇಷ ಸರ್ಕಾರಿ ಅಭಿಯೋಜಕ ಉದಯಾನಂದ ಎ. ಅವರು ಕಾನೂನು ಮಾಹಿತಿ ಕಾರ್ಯಗಾರವನ್ನು ನಡೆಸಿಕೊಟ್ಟರು. ವಿಕಾಸ್ ಎಜ್ಯು ಸೊಲ್ಯುಷನ್ಸ್ ನ ನಿರ್ದೇಶಕ ಅನಂತ ಪ್ರಭು ಜಿ. ವೃತ್ತಿ ಮಾರ್ಗದರ್ಶನ ಮಾಹಿತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ರವೀಂದ್ರನಾಥ ಪೂಂಜ, ಸಲಹೆಗಾರ ಕೃಷ್ಣಪ್ಪ ಸಾಲ್ಯಾನ್, ಅಧ್ಯಕ್ಷ ಶಶೀಂದ್ರ ಕುಕ್ಯಾನ್ ಉಪಸ್ಥಿತರಿದ್ದರು. ಹರೀಶ್ ಮುಂಡೋಳಿ ಸ್ವಾಗತಿಸಿದರು. ಆಡಳಿತ ಮಂಡಳಿ ಸದಸ್ಯ ಮನೋಹರ್ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಭೋಜ ಶೆಟ್ಟಿ ವಂದಿಸಿದರು.


