UN NETWORKS
ಹರೇಕಳ: ಜ್ಞಾನ ವೃದ್ಧಿ ಮತ್ತು ಉದ್ಯೋಗಕ್ಕಾಗಿ ನಾವು ಎಷ್ಟು ಭಾಷೆ ಬೇಕಾದರೂ ಕಲಿಯಬಹುದು, ಆದರೆ ಮಾತೃ ಮತ್ತು ನಾಡಿನ ಭಾಷೆ ಮರೆಯಬಾರದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಅಭಿಪ್ರಾಯಪಟ್ಟರು.
ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಶಾಲಾ ಪಠ್ಯೇತರ ಚಟುವಟಿಕೆಯ ವಿವಿಧ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಶಾಲೆಗಳಲ್ಲಿ ಕಲಿತ ಅದೆಷ್ಟೋ ಮಂದಿ ಉನ್ನತ ಸ್ಥಾನಕ್ಕೇರಿ ದೇಶ, ನಾಡಿಗೆ ಕೀರ್ತಿ ತಂದಿದ್ದಾರೆ. ಈ ನಿಟ್ಟಿನಲ್ಲಿ ಶಿಕ್ಷಣದ ಮಾಧ್ಯಮದ ಬಗ್ಗೆ ಚಿಂತಿಸದೆ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಯಶಸ್ಸು ಪಡೆಯಬಹುದು ಎಂದರು.
ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ| ರಘುನಾಥ ರೈ ಮಾತನಾಡಿ ಯಾವುದೇ ಕಾರ್ಯ ಯಶಸ್ಸುಗೊಳ್ಳಬೇಕಾದರೆ ಎಲ್ಲರೂ ಒಟ್ಟು ಸೇರಬೇಕು, ಶಿಕ್ಷಣ ಸಂಸ್ಥೆಗಳೂ ಸಾಧನೆ ಮಾಡಬೇಕಾದರೆ ವಿವಿಧ ಸಂಘಗಳನ್ನು ಸ್ಥಾಪಿಸಿ ಅವುಗಳ ಮೂಲಕ ಕಾರ್ಯಕ್ರಮ ಅಯೋಜಿಸುವುದು ಉತ್ತಮ ಬೆಳವಣಿಗೆ ಎಂದರು.
ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಹ್ಲಾದ್ ರೈ ಮುದಲೇಮಾರು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಶ್ರೀನಿವಾಸ ಭಟ್ ಸೇರಾಜೆ ಮುಖ್ಯ ಅತಿಥಿಯಾಗಿದ್ದರು. ಶಾಲೆಯ ಸಂಚಾಲಕ ಜಯರಾಮ ಆಳ್ವ ಪೋಡಾರ್, ವಿವಿಧ ಸಂಘಗಳ ಅಧ್ಯಕ್ಷರುಗಳಾದ ಕೌಶಿಕ್, ನಿಶ್ಮಿತಾ, ಮುಹಮ್ಮದ್ ಅಸ್ಪಾಕ್, ಶ್ರೇಯಸ್, ಹರ್ಷನ್, ನಿರೀಕ್ಷ, ಲಾವಣ್ಯ, ಮುಹಮ್ಮದ್ ತೌಫೀಕ್, ಸೌಜನ್ಯ ಸ್ಕೌಟ್ ದಳ ಮತ್ತು ಗೈಡ್ ಕಂಪನಿ ನಾಯಕರಾದ ಜಾನ್ಸನ್ ಐವಾನ್ ಆಂದ್ರಾದೆ ಹಾಗೂ ಶರಣ್ಯ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ರೈ ಕಲ್ಲಿಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿಯರಾದ ಕಾವ್ಯ ಮತ್ತು ಹರ್ಷಿಣಿ ವರದಿ ವಾಚಿಸಿದರು. ಸಹಶಿಕ್ಷಕ ರವಿಶಂಕರ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಂ ಕಾರ್ಯಕ್ರಮ ನಿರೂಪಿಸಿದರು.
* ತುಳು ಭಾಷೆಯ ಅಭಿವೃದ್ದಿಗೆ ತುಳು ಸಾಹಿತ್ಯ ಅಕಾಡೆಮಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಶಾಲೆಗಳಲ್ಲಿ ತುಳು ಭಾಷೆಗೆ ಇಂದು ಶಾಲೆಗಳಲ್ಲೂ ತುಳು ಕಲಿಸಾಗುತ್ತಿದ್ದು, ಮುಂದಿನ ವರ್ಷ 740 ವಿದ್ಯಾರ್ಥಿಗಳು ಎಸ್ಸೆಸ್ಸೆಎಲ್ಸಿ ಪರೀಕ್ಷೆ ಬರೆಯಲಿದ್ದಾರೆ.
ಎ.ಸಿ.ಭಂಡಾರಿ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ


