UN NETWORKS ಉಳ್ಳಾಲ: ಯೇನಪೋಯ ಡೀಮ್ಡ್ ವಿಶ್ವವಿದ್ಯಾಲಯ ಇದರ ದೈಹಿಕ ಶಿಕ್ಷಣ ವಿಭಾಗ ವತಿಯಿಂದ ಯೇನಪೋಯ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಅಂತರ್ ಕಾಲೇಜು 5ನೇ ವಾಲಿಬಾಲ್ ಪಂದ್ಯದಲ್ಲಿ ನಿಟ್ಟೆ ಕಾರ್ಕಳ ಪ್ರಥಮ ಸ್ಥಾನಿಯಾಗಿ, ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯ ದ್ವಿತೀಯ ಪ್ರಶಸ್ತಿಗಳಿಸಿತು.ಮತ್ತು 11ನೇ ಬಿ.ಎಸ್.ಕುಮಾರ್ ಬಾಸ್ಕೆಟ್ ಬಾಲ್ ಪಂದ್ಯಾಟದಲ್ಲಿ ಪುರುಷರ ವಿಭಾಗದಲ್ಲಿ ಯೇನಪೋಯ ವಿಶ್ವವಿದ್ಯಾಲಯ ಪ್ರಥಮ ಸ್ಥಾನಿಯಾಗಿ, ನಿಟ್ಟೆ ಕಾರ್ಕಳ ದ್ವಿತೀಯ ಪ್ರಶಸ್ತಿಗಳಿಸಿತು. ಹುಡುಗಿಯರ ವಿಭಾಗದಲ್ಲಿ ಯೇನಪೋಯ ಡೀಮ್ಡ್ ವಿಶ್ವವಿದ್ಯಾಲಯ ತಂಡ ಚಾಂಪಿಯನ್ ಶಿಪ್ ಪಡೆಯಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಪಿಜಿ ಕಲಿಕಾ ಕೇಂದ್ರದ ದೈಹಿಕ ಶಿಕ್ಷಣದ ಅದ್ಯಕ್ಷ ಡಾ. ಜೆರಾಲ್ಡ್ ಸಂತೋಷ್ ಡಿಸೋಜ, ಯೇನಪೋಯ ವಿಶ್ವವಿದ್ಯಾನಿಲಯದ ಎಲುಬು ಶಸ್ತ್ರ ಕೇಂದ್ರದ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರಾದ ಡಾ. ಅಕ್ತಾರ್ ಹುಸೈನ್ ಕಾರ್ಯದರ್ಶಿ ಐ.ಎ.ಇ, ದ.ಕ.ಜಿಲ್ಲಾ ಅಮೆಚೂರ್ ಕಬ್ಬಡ್ಡಿ ಎಸೋಸಿಯೇಶನ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ ಬಹುಮಾನವಿತರಣೆಗೈದರು. 11ನೇ ಬಿ.ಎಸ್.ಕುಮಾರ್ ಸ್ಮಾರಕ ಬಾಸ್ಕೆಟ್ ಬಾಲ್ ಪಂದ್ಯಾಕೂಟದ…
Author: UllalaVani
UN NETWORKS ಮಂಜನಾಡಿ : 2004ರಲ್ಲಿ25ಮಕ್ಕಳಿಂದ ಆರಂಭಗೊಂಡ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಸಂಸ್ಥೆಯಲ್ಲಿಇದೀಗ 3500 ಅನಾಥ ಮಕ್ಕಳಿದ್ದಾರೆ. ನಿಜಕ್ಕೂ ರಾಜ್ಯದ ಮಟ್ಟಿಗೆ ಇದು ದೊಡ್ಡ ಸಾಧನೆ. ಸಂಸ್ಥೆಯ ಅಧ್ಯಕ್ಷ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ಅವರು ಚಿಂತನೆ ಹೊಂದಿದ್ದು ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಹಾಗಾಗಿ ಒಳ್ಳೆಯ ಮನಸ್ಸಿನಿಂದ ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡರೆ ರಾಜ್ಯದಲ್ಲಿಅನಾಥ ಮಕ್ಕಳು ಇರಲು ಸಾಧ್ಯವಿಲ್ಲ ಎಂದು ವಕ್ಪ್ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು. ಮಂಜನಾಡಿಯ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಬೆಳ್ಳಿಹಬ್ಬ ಆಚರಣೆಯ ಪ್ರಯುಕ್ತ ಸಂಸ್ಥೆಗೆ ಗುರುವಾರ ಭೇಟಿ ನೀಡಿ, ನೂತನವಾಗಿ ನಿರ್ಮಾಣವಾಗಲಿರುವ ಅನಾಥಾಲಯ ಕಟ್ಟಡಕ್ಕೆ ಶಿಲಾನ್ಯಾಸಗೈದು ಮಾತನಾಡಿದ ಅವರು ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮೂಲಕ ಅದೆಷ್ಟೋ ಅನಾಥ ಮಕ್ಕಳ ಬದುಕು ಹಸನಾಗಿದೆ. ನಾನೀಗ ರಾಜ್ಯದ ಮಂತ್ರಿ ಆಗಿದ್ದೇನೆ. ಅದಕ್ಕೂ ಮುಂಚೆ ನಾನು ಒಬ್ಬ ಸಾಮಾನ್ಯ ಮನುಷ್ಯ, ಸಾಮಾನ್ಯ ಮುಸ್ಲಿಂ. ಈ ಸಂಸ್ಥೆ ವಕ್ಪ್ ಬೋರ್ಡ್ ನಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಇದಕ್ಕೆ ಸರಕಾರದಿಂದ ಕೊಡುವಂತಹ ಕಾನೂನು…
UN NETWORKS ಉಳ್ಳಾಲ: ಅಕ್ಟೋಬರ್ 6ರಂದು, ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆದ, 15ನೇ ಆಲ್ ಐಲೆಂಡ್ ಟೆನ್ಶಿಂಕನ್ ಕರಾಟೆ ಚಾಂಪಿಯನ್‍ಶಿಪ್ ಹಾಗೂ 2ನೇ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ನಿತ್ಯಾಧಾರ್ ಆಂಗ್ಲ ಮಾಧ್ಯಮ ಶಾಲೆ, ಪೆರ್ಮನ್ನೂರು, ಇದರ 5ನೇ ತರಗತಿಯ ಶೇಕ್ ಶಯೀನ್,ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ ಕುಮಿಟೆ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿರುತ್ತಾರೆ. ಈತನಿಗೆ ಧರ್ನಪ್ಪರವರು ಕರಾಟೆ ತರಬೇತಿ ಶಿಕ್ಷಕರಾಗಿದ್ದಾರೆ. ಶೇಕ್ ಶಯೀನ್, ಪೆರ್ಮನ್ನೂರು ಗ್ರಾಮದ ಸಂತೋಷ್ ನಗರದ ನಿವಾಸಿಗಳಾದ ರಿಯಾಜ್ ಹಾಗೂ ಸಮೀನಾ ದಂಪತಿಯ ಹೆಮ್ಮೆಯ ಪುತ್ರ.
UN NETWORKS ಉಳ್ಳಾಲ: ಉಳ್ಳಾಲ ಕಡಪರ, ಖಿಲರಿಯಾನಗರ ,ಸುಭಾಸ್ ನಗರ,ಪ್ರದೇಶದಲ್ಲಿ ತೀವೃಗೊಂಡಿರುವ ಕಡಲ್ಕೊರೆತಕ್ಕೆ ಶಾಶ್ವತಪರಿಹಾರ ಕಾಮಗಾರಿಯನ್ನು ತಕ್ಷಣ ಆರಂಭಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು, ಉಳ್ಳಾಲನಗರಕ್ಕೆ ನಿರಂತರ ಕುಡಿಯುವ ನೀರು ಪೂರೈಕೆಗೆ ಶಾಶ್ವತ ಯೋಜನೆ ಸಿದ್ದಪಡಿಸಲು ನಗರಸಭೆಗೆ 25ಕೋಟಿ ವಿಶೇಷ ಅನುದಾನಕ್ಕೆ ಆಗ್ರಹಿಸಿ ಉಳ್ಳಾಲ ಜನತಾದಳ ನಿಯೋಗವು ಹಾಜಿ ಅಬೂಬಕ್ಕರ್ ನಾಟೆಕಲ್,ನಝೀರ್ ಉಳ್ಳಾಲ್,ಯು.ಯಚ್.ಫಾರೂಕ್,ಅಶ್ರಫ್ ಕೋಡಿ,ಮುಸ್ತಫ,ಹೈದರ್,ನೂತನ ಕೌನ್ಸಿಲರ್ ಗಳಾದ ಖಲೀಲ್ ,ಜಬ್ಬಾರ್,ಬಶೀರ್ ರವರು ಮುಖ್ಯಮಂತ್ರಿ ಶ್ರೀ ಹೆಚ್.ಡಿ ಕುಮಾರ ಸ್ವಾಮಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
UN NETWORKS ಮಂಗಳೂರು : ಗ್ರಾಮ ಪಂಚಾಯತ್ ಅಧ್ಯಕ್ಷರು ಅತ್ಯಂತ ಪ್ರಭಾವಿಶಾಲಿಗಳಾಗಿರುತ್ತಾರೆ. ಪ್ರಧಾನಿ ಮಂಜೂರುಗೊಳಿಸಿದ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಗ್ರಾಮದ ಪ್ರಥಮ ಪ್ರಜೆಯಿಂದ ಸಾಧ್ಯ. ಅನುದಾನಗಳನ್ನು ಗ್ರಾ.ಪಂ ಮೂಲಕ ಅನುಷ್ಠಾನಗೊಳಿಸಿದಾಗ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು. ಅವರು ಅಡ್ಯಾರ್ ಗ್ರಾಮ ಪಂಚಾಯಿತಿಯ ರಾಜೀವ್ ಗಾಂಧಿ ಸೇವಾ ಕೇಂದ್ರದ ಸಭಾಂಗಣ ಉದ್ಘಾಟಿಸಿ ಮಾತನಾಡಿದರು. ಆಡಳಿತ ಪಕ್ಷ ಅಭಿವೃದ್ಧಿ ಕೆಲಸ ಮಾಡಿದಾಗ ಕೈಜೋಡಿಸುವುದು, ಅಡ್ಡದಾರಿ ಹೋದಾಗ ತಪ್ಪುಗಳನ್ನು ಎತ್ತಿ ಹಿಡಿದು ಸರಿಪಡಿಸುವುದು ವಿಪಕ್ಷಗಳ ಪಾತ್ರ ಮುಖ್ಯ, ವಿರೋಧ ಪಕ್ಷ ಎಂಬುದು ಸಂಸತ್ ಕಡತದಲ್ಲಿ ಎಲ್ಲೂ ಇಲ್ಲ . ಗ್ರಾಮ ಪಂಚಾಯಿತಿ ಎನ್ನುವುದು ಅತ್ಯಂತ ಪ್ರಭಾವಿ ಕ್ಷೇತ್ರ, ಸರ್ಕಾರದ ಸವಲತ್ತು ಜನರ ಮನೆಬಾಗಿಲಿಗೆ ತಲುಪಿಸುವ ಕೆಲಸ ಪಂಚಾಯತಿಯದ್ದಾಗಿದ್ದು, ಅಧ್ಯಕ್ಷರ ಅಧಿಕಾರದಲ್ಲಿ ಯಾರೂ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಹೇಳಿದರು. ವಿದಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಎಲ್ಲ ಕೆಲಸವನ್ನೂ ಗ್ರಾಮ ಪಂಚಾಯಿತಿಯೇ…
UN NETWORKS ಉಳ್ಳಾಲ: ಅಪರಿಚಿತ ನಾಲ್ವರ ತಂಡ ವಿದ್ಯಾರ್ಥಿಗೆ ರೇಸರ್ ಮೂಲಕ ಕುತ್ತಿಗೆ ಮತ್ತು ಭುಜದ ಭಾಗಕ್ಕೆ ಇರಿದಿರುವ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ಶುಕ್ರವಾರ ಸಂಜೆ ವೇಳೆ ಸಂಭವಿಸಿದೆ. ಶಿವಮೊಗ್ಗ ತೀರ್ಥಹಳ್ಳಿಯ ನಿವಾಸಿ ಶ್ರೇಯಸ್ ಶೆಟ್ಟಿ (25) ಹಲ್ಲೆಗೊಳಗಾದ ವಿದ್ಯಾರ್ಥಿ. ಬೋಳಾರ ಅಜ್ಜಿ ಮನೆಯಲ್ಲಿ ಇರುವ ಈತ ಪಂಪ್‍ವೆಲ್ ಖಾಸಗಿ ಕಾಲೇಜಿನಲ್ಲಿ ಫೈರ್ ಆಂಡ್ ಸೇಫ್ಟಿ ವಿಭಾಗದಲ್ಲಿ ವಿದ್ಯಾರ್ಥಿಯಾಗಿದ್ದಾನೆ. ಈ ಹಿಂದೆ ಚಿತ್ರದುರ್ಗದಲ್ಲಿ ಡಿಪ್ಲೋಮಾ ಕಲಿಯುತ್ತಿದ್ದ ಈತ ಅರ್ಧದಲ್ಲೇ ವ್ಯಾಸಾಂಗ ಬಿಟ್ಟು ಮಂಗಳೂರಿನ ಕಾಲೇಜಿಗೆ ಸೇರ್ಪಡೆಗೊಂಡಿದ್ದ. ಚಿತ್ರದುರ್ಗದಲ್ಲಿದ್ದ ಸಂದರ್ಭ ವಿದ್ಯಾರ್ಥಿನಿ ಜತೆಗೆ ಪರಿಚಯವಾಗಿದ್ದು, ಆಕೆಯ ಜತೆಗೆ ಮಂಗಳೂರಿಗೆ ಬಂದರೂ ಸಂಪರ್ಕ ಇಟ್ಟುಕೊಂಡಿದ್ದರು. ಗುರುವಾರ ರಾತ್ರಿ ವಿದ್ಯಾರ್ಥಿನಿಗೆ ಕರೆ ಮಾಡಿದಾಗ ಅಪರಿಚಿತ ಮಾತನಾಡಿ ಶ್ರೇಯಸ್ ಗೆ ಬೆದರಿಕೆ ಒಡ್ಡಿದ್ದನು. ಇದರಿಂದ ಇಬ್ಬರ ನಡುವೆ ವಾಗ್ವಾದ ನಡೆದು ನೋಡಿಕೊಳ್ಳುವುದಾಗಿ ತಿಳಿಸಿದ್ದರು. ಅದರಂತೆ ತಾನೂ ಮಂಗಳೂರಿನಲ್ಲಿ ಇರುವುದಾಗಿ ಶ್ರೇಯಸ್ ತಿಳಿಸಿದ್ದರು. ಶುಕ್ರವಾರ ಮಧ್ಯಾಹ್ನ ಶ್ರೇಯಸ್ ನನ್ನು ಅಪರಿಚಿತ ತಂಡ ಸೋಮೇಶ್ವರದಲ್ಲಿ ಭೇಟಿಯಾಗುವಂತೆ ತಿಳಿಸಿತ್ತು. ಅದರಂತೆ…
UN NETWORKS ಉಳ್ಳಾಲ : ಚಂಡಮಾರುತದ ಪ್ರಭಾವದಿಂದ ಕಳೆದ ಮೂರು ದಿನಗಳಿಂದ ಉಳ್ಳಾಲದಲ್ಲಿ ಸಮುದ್ರ ಬಿರುಸು ಮುಂದುವರೆದಿದ್ದು ಶುಕ್ರವಾರ ಸಮುದ್ರದ ಅಲೆಗೆ ಭಾಗಶ: ಹಾನಿಯಾಗಿದ್ದ ಝೊಹರಾ ರಹೀಮ್ ಅವರ ಮನೆ ಸಂಪೂರ್ಣ ಹಾನಿಯಾದರೆ 47 ಮನೆಗಳ ಅತ್ಯಂತ ಅಪಾಯದಲ್ಲಿರುವ ಮನೆಗಳೆಂದು ಗುರುತಿಸಲಾಗಿದೆ. ಉಳ್ಳಾಲ ಕೈಕೋ, ಕಿಲೆರಿಯಾನಗರ, ಸುಭಾಷ್‍ನಗರದಲ್ಲಿ ಸಮುದ್ರದ ಅಲೆಗಳು ಮನೆಗಳಿಗೆ ಅಪ್ಪಳಿಸುತ್ತಿದ್ದು,ಕೈಕೋದಲ್ಲಿ ಝೋಹರಾ ರ ಹೀಮ್ ಅವರ ಮೆನ ಸಂಪೂರ್ಣ ಸಮುದ್ರ ಪಾಲಾಗಿದೆ. ಸೋಮೇಶ್ವರ ಉಚ್ಚಿಲದ ಪೆರಿಬೈಲು ಪ್ರದೇಶದಲ್ಲೂ ಸಮುದ್ರದ ಅಲೆಗಳು ರಸ್ತೆ ಬದಿಗೆ ಅಪ್ಪಳಿಸುತ್ತಿದ್ದು, ಸ್ಥಳೀಯ ಮೂರು ಮನೆಗಳು ಹಾನಿಯಾಗಿದೆ.ಉಳ್ಳಾಲ ಮತ್ತು ಸೋಮೇಶ್ವರದಲ್ಲಿ ಸಮುದ್ರ ಉಬ್ಬರದ ಸಂದರ್ಭದಲ್ಲಿ ಸಮುದ್ರದ ಅಲೆಗಳು ಬಿರುಸುಗೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಅಲೆಗಳು ಮನೆಗೆ ಅಪ್ಪಳಿಸುತ್ತಿದೆ. ಶುಕ್ರವಾರವೂ ಬೆಳಗ್ಗಿನ ಸಂದರ್ಭ, ಮಧ್ಯಾಹ್ನ3 ಗಂಟೆವೆರೆಗ ಮತ್ತು ತಡರಾತ್ರಿ ಸಮುದ್ರದ ಅಲೆಗಳು ಮನೆಗೆ ಅಪ್ಪಳಿಸುತ್ತಿದ್ದು, ಗುರುವಾರ ತಡರಾತ್ರಿ ಕೈಕೋ ಇಂದಿರಾನಗರದಲ್ಲಿ 6 ಮನೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸಿದ್ದು ಜನರು ಮನೆಗಳಿಂದ ಹೊರ ಓಡಿ ಬಂದಿದ್ದರು. ಉಳ್ಳಾಲ ಕೈಕೋ, ಕಿಲೆರಿಯಾನಗರ,…
UN NETWORKS ಕೋಟೆಕಾರು : ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಪನೀರಿನ 11ನೇ ಮತ್ತು 13 ಅವಾರ್ಡ್ ನ್ನು ಸಂಪರ್ಕಿಸುವ ರಸ್ತೆಯು ಕಳೆದ 50 ವರ್ಷಗಳಿಂದಲೂ ಕಾಲುದಾರಿಯಾಗಿತ್ತು ಮತ್ತು ಕಾಲುವೆ ಮುಖಾಂತರ ಸಂಪರ್ಕ ಸಾಧಿಸುತ್ತಿತ್ತು. ಯಾವುದೇ ವಾಹನಗಳಿಂದ ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ. ಇದೀಗ ಜಮೀನಿನ ಮಾಲಕರು ಸಾರ್ವಜನಿಕ ಸುಗಮ ಸಂಚಾರಕ್ಕೆ ಜಾಗವನ್ನು ದಾನ ಮಾಡಿದ್ದು ಊರ ಜನರು ತಾತ್ಕಾಲಿಕ ರಸ್ತೆ ನಿರ್ಮಿಸಿದ್ದಾರೆ. ಇವಾಗ ದ್ವಿಚಕ್ರ ,ರಿಕ್ಷಾ,ಕಾರುಗಳು ಸಂಚರಿಸುತ್ತಿದ್ದು ಆದಷ್ಟು ಬೇಗ ಈ ರಸ್ತೆಗೆ ಸರ್ಕಾರದಿಂದ ಅನುದಾನ ಒದಗಿಸಿ ರಸ್ತೆ ಕಾಂಕ್ರಿಟೀಕರಣ ಮತ್ತು ಅಗಲೀಕರಣ ಮಾಡಿ ಈ ಊರಿನ ಬಹಳ ವರ್ಷಗಳ ಬೇಡಿಕೆಯನ್ನು ಆದಷ್ಟು ಬೇಗ ಈಡೇರಿಸಬೇಕಾಗಿ ಜನತೆಯ ಪರವಾಗಿ ಸಹಿಗಳನ್ನು ಸಂಗ್ರಹಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪನೀರ್ ಬ್ರಾಂಚ್ ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಹಾಗೂ ಅಧ್ಯಕ್ಷರಿಗೆ ಮನವಿಯನ್ನು ಸಲ್ಲಿಸಲಾಯ್ತು. ನಿಯೋಗದಲ್ಲಿ ಬ್ರಾಂಚಿನ ಪ್ರಧಾನ ಕಾರ್ಯದರ್ಶಿ ಪಿ.ಎ ಅಬುಸಾಲಿ ಪನೀರ್, ಕೋಶಾಧಿಕಾರಿ ಇಕ್ಬಾಲ್ ಪನೀರ್, ಸಮೀರ್ ಪಿ.ಬಿ ,ಮನ್ಸೂರ್…
UN NETWORKS ತೊಕ್ಕೊಟ್ಟು: ಪೆಟ್ರೋಲ್, ಅನಿಲ ಬೆಲೆ ಸೇರಿದಂತೆ ದಿನಬಳಕೆ ವಸ್ತುಗಳಿಗೆ ದುಬಾರಿಯಾಗಿರುವ ಸಮಯದಲ್ಲಿ 1,000 ಬೀಡಿಗೆ 180 ರೂ. ನೀಡುವ ಮೂಲಕ ಬೀಡಿ ಕಾರ್ಮಿಕರಿಗೆ ಬದುಕಲು ಅಸಾಧ್ಯವಾಗದ ವಾತಾವರಣ ನಿರ್ಮಿಸಲಾಗಿದೆ ಎಂದು ಎಂದು ಎಐಟಿಯುಸಿ ಮುಖಂಡ ಶೇಖರ್ ಹೇಳಿದ್ದಾರೆ. ಸಿಐಟಿಯು, ಎಐಟಿಯುಸಿ, ಬಿಎಂಎಸ್, ಹೆಚ್ ಎಂಎಸ್ ಜಂಟಿಯಾಗಿ ಅ.23 ರಂದು ಕದ್ರಿ ಭಾರತ್ ಬೀಡಿ ವರ್ಕ್ಸ್ ಎದುರು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ಮತ್ತು ಧರಣಿ ಸತ್ಯಾಗ್ರಹದ ಅ.11,12,13 ಜಿಲ್ಲೆಯಾದ್ಯಂತ ಕೈಗೊಂಡಿರುವ ಪ್ರಚಾರ ಜಾಥಾದ ತೊಕ್ಕೊಟ್ಟುವಿನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಬೀಡಿ ಸೂಪುಗಳಿಲ್ಲದ ಮನೆಯಿಲ್ಲ. ವಿದ್ಯಾಭ್ಯಾಸ, ಜೀವನ ಸಾಗಿಸಲು ಇದರಿಂದಲೇ ಸಾಧ್ಯವಾಗಿದೆ ಅನ್ನುವ ಅರಿವು ಮಕ್ಕಳಲ್ಲಿ ಮೂಡಬೇಕಾಗಿದೆ. ಈ ಮೂಲಕ ಅವರು ಮುಷ್ಕರ ಮತ್ತು ಧರಣಿ ಸತ್ಯಾಗ್ರಹದಲ್ಲಿ ಕೈಜೋಡಿಸಬೇಕಾಗಿದೆ. ಕಾರ್ಮಿಕರನ್ನು ದುಡಿಸಿದ ಮಾಲೀಕರು ಹಣ ಸಂಪಾದಿಸಿ, ಅದನ್ನು ಬೇರೆ ವ್ಯವಹಾರಗಳಲ್ಲಿ ತೊಡಗಿಸಿಕೊಂಡು ಐಷಾರಾಮಿಯಾಗಿ ಬಾಳುತ್ತಿದ್ದಾರೆ. ಆದರೆ ಕಾರ್ಮಿಕರ ಬವಣೆ ಕೇಳುವವರಿಲ್ಲ. ರಾಜ್ಯ ಸರಕಾರ ಕನಿಷ್ಟ ಕೂಲಿ ಕಾಯಿದೆ ಸೆಕ್ಷನ್ 5(1)(ಎ)…
UN NETWORKS ಉಳ್ಳಾಲ: ಚಂಡಾಮಾರುತ ಹಿನ್ನೆಲೆಯಲ್ಲಿ ಉಳ್ಳಾಲ, ಉಚ್ಚಿಲ ಸಮುದ್ರ ತೀರದಲ್ಲಿ ಅಲೆಗಳ ಅಬ್ಬರ ಎರಡನೇ ದಿನಕ್ಕೆ ಮುಂದುವರಿದಿದೆ. ಹಿಲೆರಿಯಾನಗರದಲ್ಲಿರುವ ಮೂರು ಮನೆಗಳು ಭಾಗಶ: ಸಮುದ್ರಪಾಲಾಗಿವೆ. 41 ಮನೆಗಳು ಅಪಾಯದಂಚಿನಲ್ಲಿ ಸಿಲುಕಿವೆ. ಅ.9 ರಂದು ಮಂಗಳವಾರ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿತ್ತು. ನಿನ್ನೆ ತಡರಾತ್ರಿಯೂ ಅಲೆಗಳು ಮುಂದುವರಿದು ಇಂದು ಮೂರು ಮನೆಗಳು ಭಾಗಶ: ಸಮುದ್ರಪಾಲಾಗಿವೆ. ಹಿಲೆರಿಯಾನಗರದ ಐಸಮ್ಮ, ಜಮೀಲಾ, ಅನ್ವರ್ ತಸ್ಲೀಂ ಎಂಬವರ ಮನೆಗಳು ಭಾಗಶ: ಸಮುದ್ರದ ಪಾಲಾಗಿದ್ದು, ಮನೆಯಲ್ಲಿ ವಾಸಿಸಲು ಅಸಾಧ್ಯವಾಗಿದೆ. ಇಂದು ರಾತ್ರಿಯೂ ಅಲೆಗಳು ಅಪ್ಪಳಿಸಿದರೆ ಸಂಪೂರ್ಣ ಸಮುದ್ರಪಾಲಾಗುವ ಭೀತಿಯಲ್ಲಿ ಮನೆಮಂದಿಯಿದ್ದಾರೆ. ಹಿಲೆರಿಯಾನಗರ, ಕೈಕೋ, ಇಂದಿರಾನಗರ, ಸುಭಾಷನಗರ ಭಾಗದಲ್ಲಿ ಸಮುದ್ರದ ಅಲೆಗಳು ಗುರುವಾರ ಮಧ್ಯಾಹ್ನದದವರೆಗೂ ಅಪ್ಪಳಿಸುತ್ತಾ ಜನರನ್ನು ಆತಂಕಗೊಳಿಸಿದೆ. ಈವರೆಗೂ ಇಷ್ಟು ಮುಂದೆ ಸಮುದ್ರ ಬಂದಿಲ್ಲ ಅನ್ನುವುದು ಈ ಭಾಗದ ಜನರ ಅಭಿಪ್ರಾಯವಾಗಿದೆ. ಉಚ್ಚಿಲ ಪೆರಿಬೈಲು ಸಮೀಪವೂ ಅಲೆಗಳು ಮಧ್ಯಾಹ್ನ ವೇಳೆ ರಸ್ತೆಯನ್ನು ದಾಟಿ ಅಪ್ಪಳಿಸಿದರಿಂದಾಗಿ ರಸ್ತೆಯಿಡೀ ಮರಳಿನಿಂದ ಮುಚ್ಚಿಹೋಗಿದೆ. ಜನವಸತಿ ಪ್ರದೇಶದಲ್ಲಿ ಉಪ್ಪು ನೀರು ನಿಂತಿರುವುದರಿಂದ ಜನರಿಗೆ…

