UN NETWORKS
ತಲಪಾಡಿ: ವಿದ್ಯಾರ್ಥಿಗಳು ಎಳೆವಯಸ್ಸಿನಲ್ಲಿಯೇ ಸಮಾಜ ಸೇವೆಯಂತಹ ಉನ್ನತ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ, ಸಮಾಜದ ಬೆಳವಣಿಗೆಯಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಮಂಗಳೂರು ರೋಟರಿ ಕ್ಲಬ್‍ನ ಅಧ್ಯಕ್ಷ ಡಾ| ವಸಂತ್ ಪೈ ಅವರು ಅಭಿಪ್ರಾಯಪಟ್ಟರು. ಅವರು ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‍ನಲ್ಲಿ ನಡೆದ ವನಮಹೋತ್ಸವ ಹಾಗೂ ಇಂಟರಾಕ್ಟ್ ಕ್ಲಬ್‍ನ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್‍ನ ಚೇರ್‍ಮ್ಯಾನ್ ಸಿದ್ದಾರ್ಥ ಶೆಟ್ಟಿ ಮಾತನಾಡಿ, ಶೇ 28 ರಷ್ಟು ಯುವ ಜನತೆಯನ್ನು ಹೊಂದಿರುವ ಭಾರತ, 2020 ರಲ್ಲಿ ಅತ್ಯಧಿಕ ಯುವಜನರನ್ನು ಹೊಂದಿರುವ ಮಹಾನ್ ರಾಷ್ಟ್ರವಾಗಿ ಹೊರಹಮ್ಮಲಿದೆ. ಹಾಗಾಗಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಈ ಯುವಜನತೆಯ ಪಾಲ್ಗೊಳ್ಳುವಿಕೆ ದೇಶದಲ್ಲಿ ಮಹತ್ತರವಾದ ಬದಲಾವಣೆಯನ್ನು ತರಲಿದೆ ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದರು. ರೊಟೇರಿಯನ್ ಮಯೂರ್ ಶೇರಿಗಾರ್, ರೋಟರಿ ಕ್ಲಬ್‍ನ ಉಗಮ ಮತ್ತು ಸಮಾಜಕ್ಕೆ ಅದು ನೀಡುತ್ತಿರುವ ಕೊಡಗೆಯ ಬಗ್ಗೆ ವಿಸೃತ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ ಸುಷ್ಮಾ ದಿನಕರ್, ಉಪಪ್ರಾಂಶುಪಾಲ ಮೋಹನ್‍ದಾಸ್, ರೊಟೇರಿಯನ್‍ಗಳಾದ ರಾಘವೇಂದ್ರ ಭಟ್, ವಿನೋದ್ ಡಿ’ಸೋಜ ಉಪಸ್ಥಿತರಿದ್ದರು, ಇಂಟರಾಕ್ಟ್ ಕ್ಲಬ್‍ನ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿದರು.
ವಿದ್ಯಾರ್ಥಿಗಳು ಪರಿಸರ ಜಾಗೃತಿಯನ್ನು ಸಾರುವ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಪ್ರಸ್ತುತ ಪಡಿಸಿದರು ಹಾಗೂ ರೋಟರಿ ಕ್ಲಬ್‍ನವರು ನೀಡಿದ ವಿವಿಧ ಜಾತಿಯ ನೂರು ಗಿಡಗಳನ್ನು ಶಾಲೆಯ ಆವರಣದಲ್ಲಿ ನೆಟ್ಟು, ಅದನ್ನು ಪೋಷಿಸಿ ಸಂರಕ್ಷಿಸುವ ಸಂಕಲ್ಪ ಕೈಗೊಂಡರು.
ಕುಮಾರಿ ಭೂಮಿಕ ಮತ್ತು ಸೃಷ್ಠಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಪ್ರಾಂಶುಪಾಲೆ ಸುಷ್ಮಾ ದಿನ್‍ಕರ್ ಸ್ವಾಗತಿಸಿದರು, ಗಣಿತ ಶಿಕ್ಷಕಿ ಲಿಜಿ ನಿರನ್ ವಂದಿಸಿದರು.


