Author: UllalaVani

Kannada News From Coastal Karnataka

UN NETWORKS ದೇರಳಕಟ್ಟೆ: ಪ್ರಸ್ತುತ ತಲೆಮಾರಿನ ಗಿಡಮರಗಳನ್ನು ಮುಂದಿನ ಪೀಳಿಗೆಗೆ ಮುಟ್ಟಿಸುವ ನಿಟ್ಟಿನಲ್ಲಿ ಪರಿಸರ ಉಳಿಸುವುದರೊಂದಿಗೆ ಮರಗಿಡಗಳನ್ನು ಉಳಿಸಿ ಬೆಳಸುವ ಕಾರ್ಯ ಆಗಬೇಕು ಎಂದು ಮಂಗಳೂರು ಉಪ ವಿಭಾಗದ ಮುಖ್ಯ ಅರಣ್ಯಾಧಿಕಾರಿ ಡಾ| ವಿ. ಕರಿಕಲನ್ ಅಭಿಪ್ರಾಯಪಟ್ಟರು. ನಿಟ್ಟೆ ವಿಶ್ವವಿದ್ಯಾನಿಲಯದ ಪಾನೀರು ಕ್ಯಾಂಪಸ್‍ನಲ್ಲಿ ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಗ್ರೀನ್ ಇನಿಶಿಯೇಟಿವ್ ಪ್ರಾಜೆಕ್ಟ್(ಎನ್‍ಯುಜಿಐಪಿ) ಕಾರ್ಯಕ್ರಮಕ್ಕೆ ಚಾಲನೆ ಮತ್ತು ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಇನ್‍ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಇದರ ಆಶ್ರಯದಲ್ಲಿ ಅಭಿವೃದ್ಧಿ ಪಡಿಸಲಾದ `ಜೀವಂತಿಕ` ಗಿಡಮೂಲಿಕಾ ಉದ್ಯಾನವನಕ್ಕೆ ಚಾಲನೆ ನೀಡಿ ಮಾತನಾಡಿದರು. ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಪತಿ ಡಾ| ಎಂ.ಎಸ್. ಮೂಡಿತ್ತಾಯ ಅಧ್ಯಕ್ಷತೆ ವಹಿಸಿ ನಿಟ್ಟೆ ವಿಶ್ವವಿದ್ಯಾನಿಲಯವನ್ನು ಹಸಿರು ಕ್ಯಾಂಪಸ್ ಆಗಿ ಅಭಿವೃದ್ಧಿಪಡಿಸುತ್ತಿದ್ದು ಕಳೆದ ವರ್ಷ 400 ಗಿಡಗಳನ್ನು ನೆಟ್ಟಿದ್ದು, 200ರಷ್ಟು ಸ್ಥಳೀಯ ಗಿಡಗಳನ್ನು ನಾಟಿ ಮಾಡಲಾಗಿದೆ. ಒಟ್ಟು 1500 ಗಿಡ ಮರಗಳನ್ನು ಗುರುತಿಸಲಾಗಿದ್ದು, 200ಕ್ಕೂ ಅಧಿಕ ಔಷದಿಯ ಗಿಡಗಳು ಕ್ಯಾಂಪಸ್‍ನಲ್ಲಿದ್ದು, ಸಂಶೋಧನಾ ಚಟುವಟಿಕೆಗಳಿಗೆ ಪೂರಕವಾಗಿದೆ ಎಂದರು. ಕಾರ್ಯಕ್ರಮದಲ್ಲಿ ದೇರಳಕಟ್ಟೆಯ ಎ.ಬಿ.…

Read More

UN NETWORKS ಉಳ್ಳಾಲ: ನಾಡಿನ ಸಾಮರಸ್ಯವನ್ನು ಉಳಿಸುವ ಭವಿಷ್ಯದ ಪ್ರಜೆಗಳಾಗಿ ವಿದ್ಯಾರ್ಥಿಗಳು ಬದಲಾಗಬೇಕು ಶಿಕ್ಷಣದೊಂದಿಗೆ ದೇವ ನಿಯವಿರುವವರಾಗಬೇಕು ಎಂದು ಜಮಾಅತೇ ಇಸ್ಲಾಮಿ ಉಳ್ಳಾಲ ಘಟಕದ ಉಪಾಧ್ಯಕ್ಷ ಅಬ್ದುಲ್ ರಹೀಂ ಅಭಿಪ್ರಾಯಪಟ್ಟರು. ಎಸ್ ಐ ಓ ಉಳ್ಳಾಲ ಘಟಕದ ವತಿಯಿಂದ ಎಸ್‍ಐಒ ಕಚೇರಿಯಲ್ಲಿ ಕ್ಯಾನ್ಸರ್ ವಿಭಾಗದಲ್ಲಿ ಸಂಶೋಧನೆ ನಡೆಸಿ ಮಣಿಪಾಲ ವಿಶ್ವವಿದ್ಯಾಲಯದಿಂದ ಪಿ ಎಚ್‍ಡಿ ಪದವಿ ಗಳಿಸಿದ ಫಾರ್ಮಸ್ಸುಟಿಕಲ್ ವಿಭಾಗದ ಸಂಶೋಧಕ ಡಾ| ಮುಹಮ್ಮದ್ ಮುಬೀನ್ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು. ಸನ್ಮಾನ ಸ್ವೀಕರಿಸಿದ ಸಂಶೋಧಕ ಡಾ| ಮುಹಮ್ಮದ್ ಮುಬೀನ್ ಮಾತನಾಡಿ ವಿದ್ಯಾವಂತರಾಗಿ ಬೆಳೆಯಲು ಎಸ್ ಐ ಓ ಉತ್ತಮ ವೇದಿಕೆ ಪಿ ಎಚ್ ಡಿ ಪದವಿಗಳಿಸುವುದು ಹಲವು ಕಾಲದ ಕನಸ್ಸಾಗಿತ್ತು. ಎಲ್ಲಾ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯಲು ಕಠಿಣಪರಿಶ್ರಮ ಮತ್ತು ತ್ಯಾಗ ಅತ್ಯಗತ್ಯ. ಇಂದಿನ ವಿಜ್ಞಾನ ಯುಗ ಬೆಳೆಯುತ್ತಿದ್ದು, ಅದಕ್ಕೆ ಅನುಗುಣವಾಗಿ ನಾವು ಬೆಳೆಯಬೇಕು ಎಂದರು. ಕಾರ್ಯಕ್ರಮದಲ್ಲಿ ಜಮಾಅತೇ ಇಸ್ಲಾಮಿ ಉಳ್ಳಾಲ ಘಟಕದ ಅಧ್ಯಕ್ಷ ಅಬ್ದುಲ್ ಕರೀಮ್, ತೊಕ್ಕೊಟ್ಟು ಘಟಕದ…

Read More

UN NETWORKS ಉಪ್ಪಿನಂಗಡಿ: ಗೃಹರಕ್ಷಕ ದಳ ಉಪ್ಪಿನಂಗಡಿ ಘಟಕ ವಿಪತ್ತು ನಿರ್ವಹಣಾ ತಂಡಕ್ಕೆ ಕಾರ್ಯಚರಣೆ ಮಾಡಲು ಅನುಕೂಲವಾಗುವಂತೆ ನೆರೆ ಸಂದರ್ಭಗಳಲ್ಲಿ ಜನರನ್ನು ಸುಲಭವಾಗಿ ಸ್ಥಳಾಂತರಿಸುವ ನಿಟ್ಟಿನಲ್ಲಿ, ಗಾಳಿ ತುಂಬಿಸಿ ಚಲಾವಣೆ ಮಾಡುವ ರಬ್ಬರ್ ಬೋಟನ್ನು ದ.ಕ. ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ| ಮುರಲೀ ಮೋಹನ್ ಚೂಂತಾರು ರವಿವಾರ, 8-07-2018ರಂದು ಉಪ್ಪಿನಂಗಡಿ ಗೃಹರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ಮತ್ತು ವಿಪತ್ತು ನಿರ್ವಹಣಾ ತಂಡದ ಮುಖ್ಯಾಸ್ಥ ಶ್ರೀ ದಿನೇಶ್ ಇವರಿಗೆ ಹಸ್ತಾಂತರ ಮಾಡಿದರು. ದ.ಕ. ಜಿಲ್ಲಾ ಜಿಲ್ಲಾಧಿಕಾರಿಯವರು ದ.ಕ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರ ಕೋರಿಕೆಯ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳಕ್ಕೆ ವಿಪತ್ತು ನಿರ್ವಹಣೆ ಮಾಡಲು ಅನುಕೂಲವಾಗುವಂತೆ ಎರಡು ರಬ್ಬರ್ ಬೋಟು, 50 ರೈನ್ ಕೋಟ್, 50 ರೈನ್ ಬೂಟ್ ಮತ್ತು 25 ಟಾರ್ಚ್‍ಗಳನ್ನು ಜಿಲ್ಲಾ ವಿಪತ್ತು ನಿಧಿಯಿಂದ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇದರಲ್ಲಿ ಒಂದು ಬೋಟು, 5 ರೈನ್‍ಕೋಟ್, 5 ರೈನ್ ಬೂಟ್ ಮತ್ತು 2 ಟಾರ್ಚ್‍ಗಳನ್ನು ಉಪ್ಪಿನಂಗಡಿ…

Read More

UN NETWORKS ಕೊಣಾಜೆ: ಕೊಣಾಜೆ ಮರಕಳಬೆಟ್ಟುವಿನ ಬಡ ಕೃಷಿಕರ ಗದ್ದೆಗಳನ್ನು ದತ್ತು ಪಡೆದ ಮಂಗಳೂರು ರಥಬೀದಿಯ ಡಾ|.ಪಿ.ದಯಾನಂದಪೈ-ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿದ್ಯಾರ್ಥಿಗಳು ಭಾನುವಾರ ನಾಟಿ ಕಾರ್ಯ ನಡೆಸಿದರು. ನಾಲ್ಕು ಎಕರೆಗಳಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಸುಮಾರು 100ಕ್ಕೂ ಅಧಿಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸುರಿಯುತ್ತಿರುವ ಮಳೆಯ ನಡುವೆಯೂ ನಾಟಿ ಕಾರ್ಯ ನಡೆಸಿದರು. ಕಳೆದ ವರ್ಷವೂ ಕೊಣಾಜೆ ಗ್ರಾಮದ ಎರಡನೇ ವಾರ್ಡನ್ನು ದತ್ತು ಪಡೆದ ಇದೇ ಕಾಲೇಜಿನ ತಂಡ ಹಡಿಲು ಬಿದ್ದ ಗದ್ದೆಯಲ್ಲಿ ಉಳುಮೆ ನಡೆಸಿ ಕೃಷಿ ಕಾರ್ಯವನ್ನು ಪೂರೈಸಿ, ತಾವೇ ಬೆಳೆದ ಅಕ್ಕಿಯನ್ನು ಕಾಲೇಜಿನಲ್ಲಿ ಬಿಸಿಯೂಟ ಆರಂಭಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದರು. https://www.youtube.com/watch?v=vI9rwFn-CE0 ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಶೇಖರ್ ಹೆಬ್ಬಾರ್ ಮತ್ತು ಡಾ| ನವೀನ್ .ಎನ್ ಕೊಣಾಜೆ ವಿದ್ಯಾರ್ಥಿಗಳ ಜತೆಗೆ ಭಾಗವಹಿಸಿದ್ದರು.

Read More

UN NETWORKS ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ 66ರ ಉಪ್ಪಳ ಸಮೀಪದ ನಯಬಝಾರ್‌ನಲ್ಲಿ ಇಂದು ಬೆಳಗ್ಗೆ ಲಾರಿ ಮತ್ತು ತೂಫಾನ್ ಜೀಪ್ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಹಿಳೆಯರ ಸಹಿತ ಐವರು ಮೃತಪಟ್ಟು, 8 ಮಂದಿ ಗಾಯಗೊಂಡಿದ್ದಾರೆ. ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಮೃತಪಟ್ಟವರನ್ನು ತಲಪಾಡಿ ಸಮೀಪದ ಕೆ.ಸಿ.ರೋಡ್ ನಿವಾಸಿಗಳೆಂದು ಗುರುತಿಸಲಾಗಿದೆ. ಕೆ.ಸಿ. ರೋಡ್ ಸಮೀಪದ ಅಜ್ಜಿನಡ್ಕ ಸಾಮನಿಗೆ ನಿವಾಸಿಗಳಾದ ಬೀಫಾತಿಮಾ(65), ಅಸ್ಮಾ(30), ನಸೀಮಾ(38), ಮುಸ್ತಾಕ್(41) ಹಾಗೂ ಇಮ್ತಿಯಾಝ್(35) ಮೃತಪಟ್ಟವರಾಗಿದ್ದಾರೆ. ಮೃತದೇಹವನ್ನು ಮಂಗಲ್ಪಾಡಿ ಸಿ.ಎಚ್.ಸಿ. ಶವಾಗಾರದಲ್ಲಿರಿಸಲಾಗಿದೆ. ಜೀಪಿನಲ್ಲಿದ್ದ ಉಳಿದ 8 ಮಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೀಪಿನಲ್ಲಿದ್ದವರು ಪಾಲಕ್ಕಾಡಿನಲ್ಲಿ ಗೃಹ ಪ್ರವೇಶ ಕಾರ್ಯಕ್ರಮವೊಂದಕ್ಕೆ ತೆರಳಿ ಹಿಂದಿರುಗುತ್ತಿದ್ದ ವೇಳೆ ಈ ಅಪಫಾತ ಸಂಭವಿಸಿದೆ. ಇವರಿದ್ದ ಜೀಪಿಗೆ ಕಾಸರಗೋಡು ಕಡೆ ತೆರಳುತ್ತಿದ್ದ ಲಾರಿ ನಯಬಝಾರ್‌ನಲ್ಲಿ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಲಾರಿ ಟಯರ್ ಸಿಡಿದದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

Read More

UN NETWORKS ಉಳ್ಳಾಲ: ಕೊಡುಗೈ ದಾನಿ, ಕೋಟೆಕಾರ್ ಬಾಂಬೆ ಸಾ ಮಿಲ್ ಮಾಲೀಕ ಕೆ.ಅಬ್ದುಲ್ಲಾ ಹಾಜಿ(85) ಶನಿವಾರ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಗಂಡು, ನಾಲ್ವರು ಹೆಣ್ಣು ಮಕ್ಕಳು ಇದ್ದಾರೆ. ಧಾರ್ಮಿಕ ಹಾಗೂ ಸಾಮಾಜಿಕವಾಗಿ ಸಕ್ರಿಯರಾಗಿದ್ದ ಅವರು ಸ್ಥಳೀಯವಾಗಿ ಸರ್ವರ ಪ್ರೀತಿಗೆ ಪಾತ್ರರಾಗಿದ್ದರು. ಅಬ್ದುಲ್ ಖಾದರ್ ಹಾಜಿ ಸ್ಮಾರಕ ಟ್ರಸ್ಟ್ ಅಧ್ಯಕ್ಷರಾಗಿ, ಕೋಟೆಕಾರ್ ಸಿದ್ದೀಕ್ ಮಸೀದಿಯ ಅಧ್ಯಕ್ಷರಾಗಿ, ಕುಂಪಲ ನೂರಾನಿ ಯತೀಂಖಾನಾ ಉಪಾಧ್ಯಕ್ಷ, ಗೌರವಾಧ್ಯಕ್ಷರಾಗಿ, ಹಲವಾರು ಸಂಸ್ಥೆಗಲ್ಲಿ ಸೇವೆ ಸಲ್ಲಿಸಿದ್ದರು.

Read More

UN NETWORKS ತೊಕ್ಕೊಟ್ಟು: ತಲಪಾಡಿಯಿಂದ ಪಂಪ್ ವೆಲ್ ವರೆಗಿನ ಚತುಷ್ಪಥ ರಸ್ತೆಯ ಜೊತೆಗೆ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ತ್ವರಿತ ಪೂರ್ಣಗೊಳಿಸಲು, ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಮತ್ತು ಕಾಮಗಾರಿ ಪೂರ್ಣಗೊಳ್ಳುವವರೆಗೆ ಟೋಲ್ ಗೇಟ್ ನಲ್ಲಿ ಶುಲ್ಕ ತಡೆಹಿಡಿಯುವಂತೆ ಆಗ್ರಹಿಸಿ ಮಂಗಳೂರು ವಿಧಾನಸಭಾ ಕ್ಷೇತ್ರದ ಕರ್ನಾಟಕ ಪ್ರದೇಶ ಜನತಾದಳ (ಜಾತ್ಯಾತೀತ) ವತಿಯಿಂದ ಅಪರ ಜಿಲ್ಲಾಧಿಕಾರಿ ಕುಮಾರ ಇವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು. ತಲಪಾಡಿಯಿಂದ -ಪಂಪ್ ವೆಲ್ ವರೆಗಿನ ಚತುಷ್ಪಥ ರಸ್ತೆ ಅಸಮರ್ಪಕ, ವಿಳಂಬಿತ ಮತ್ತು ಯೋಜನೆಯಿಲ್ಲದೆ ನಡೆಯುತ್ತಿರುವುದರಿಂದಾಗಿ ವಾಹನ ಸವಾರರಿಗೆ ಮತ್ತು ಜನರಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಎಂಟು ವರ್ಷಗಳಿಂದ ನಡೆಯುತ್ತಿರುವ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿಯ ಅವ್ಯವಸ್ಥೆಯಿಂದಾಗಿ ಹೆದ್ದಾರಿ ಸುತ್ತಮುತ್ತಲಿನ ರಸ್ತೆಗಳೆಲ್ಲಾ ತಡೆಗಳಿಂದ ಕೂಡಿದೆ. ಕಾಮಗಾರಿಯ ಸೊತ್ತುಗಳು, ಮಣ್ಣು, ತಗಡಿನ ರಾಶಿ, ಕಬ್ಬಿಣದ ತುಂಡುಗಳು ರಾ.ಹೆ. ಬದಿಯಲ್ಲೇ ಇರುವುದರಿಂದ ಸಂಚರಿಸುವುದು ಅಪಾಯಕಾರಿಯಾಗಿದೆ. ನಿತ್ಯ ಟ್ರಾಫಿಕ್ ಜಾಮ್ ಸಂಭವಿಸಿ, 2 ತಾಸಿಗೂ ಮಿಕ್ಕಿ ಜನರು ಸಿಕ್ಕಿಕೊಂಡು ಸಂಕಷ್ಟ ಅನುಭವಿಸುವಂತಾಗಿದೆ. ಗುತ್ತಿಗೆದಾರರು ಫ್ಲೈಓವರಿನ ಕಾಮಗಾರಿಯನ್ನು ಶೀಘ್ರವಾಗಿ ನಡೆಸಿಕೊಡುವಂತೆ…

Read More

UN NETWORKS ಮಂಗಳೂರು: ಬಿಜೈ ಕಾಪಿಕಾಡು ರಸ್ತೆಯ ಅಧಿತಿ ಎಂಕ್ಲೇವ್ ಕಟ್ಟಡದಲ್ಲಿ ಸಾಯಿರಾಧ ಟಿವಿಎಸ್ ದ್ವಿಚಕ್ರ ವಾಹನಗಳ ಷೋರೂಂ ಮತ್ತು ಸರ್ವಿಸ್ ಸೆಂಟರನ್ನು ಗುರುವಾರ ಸಂಸ್ಥೆಯ ಮುಖ್ಯಸ್ಥ ಸಾಯಿರಾಧ ಸಮೂಹ ಸಂಸ್ಥೆಗಳ ಅಧ್ಯಕ್ಷ ಮನೋಹರ್.ಯಸ್ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಕುಟುಂಬಸ್ಥರು ಹಾಗೂ ಮುಖ್ಯ ಅತಿಥಿಗಳು ಭಾಗವಹಿಸಿ ಶುಭಹಾರೈಸಿದರು.ಪತ್ನಿ ಅನುರಾಧಾ ಪುತ್ರರಾದ ಸಿದ್ದಾರ್ಥ ಮತ್ತು ಶರಣಂ ಉಪಸ್ಥಿತರಿದ್ದರು. ಇದೇ ವೇಳೆ ಪುತ್ರ ಸಿದ್ದಾರ್ಥ ಅವರ ಹುಟ್ಟುಹಬ್ಬವನ್ನು ಷೋರೂಂ ಉದ್ಘಾಟನೆ ಸಮಾರಂಭದ ಜೊತೆಗೆ ಆಚರಿಸಲಾಯಿತು. https://www.youtube.com/watch?v=LvBNJT9a55k

Read More

UN NETWORKS ಮುಡಿಪು: ಬಂಟ್ವಾಳ ತಾಲೂಕಿನ‌ ಕುರ್ನಾಡು ಗ್ರಾಮದ ಮುಡಿಪು-ಬೋಳಿಯಾರು ರಸ್ತೆಯ ಮಿತ್ತಕೋಡಿ ಬಳಿ‌ ಗುರುವಾರ ಸಂಜೆ ಕಾರು ಹಾಗೂ ಈಚರ್ ಲಾರಿಯ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಮೊಯ್ಯದ್ದಿನ್ ಕಡಬ ಅವರ ಹತ್ತು ವರ್ಷದ ಪುತ್ರ ಮೊಹಮ್ಮದ್ ಮುಝಮ್ಮಿಲ್ ಶುಕ್ರವಾರ ಮಧ್ಯರಾತ್ರಿ ಸಾವನ್ನಪ್ಪಿದ್ದಾರೆ. ಗುರುವಾರ ರಾತ್ರಿ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಮಂಗಳೂರಿನ ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತ ವಿದ್ಯಾರ್ಥಿ ದೇರಳಕಟ್ಟೆ ಪಬ್ಲಿಕ್ ಸ್ಕೂಲ್ ನ 4ನೇ ತರಗತಿ ವಿದ್ಯಾರ್ಥಿ. ಅಪಘಾತದಲ್ಲಿ ಕಾರು ಚಾಲಕ ಕಮಲುದ್ದಿನ್ ಗುರುವಾರ ತಡರಾತ್ರಿ ಸಾವನ್ನಪ್ಪಿದ್ದರು. ಅಪಘಾತದಲ್ಲಿ ಗಾಯಗೊಂಡು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುಟುಂಬದ ಇತರ ಸದಸ್ಯರು ಆಸ್ಪತ್ರೆಯಿಂದ ಇಂದು ಮನೆಗೆ ತೆರಳಲಿದ್ದಾರೆ.

Read More

UN NETWORKS ಮಂಗಳೂರು: ದ.ಕ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮಧ್ವ ಕಲ್ಕರಬೆಟ್ಟು ಪ್ರದೇಶದಲ್ಲಿ ನೆರೆ ನೀರು ತುಂಬಿ 10 ಮನೆಮಂದಿ ಅಪಾಯದಂಚಿನಲ್ಲಿದ್ದಾರೆ. ಕಲ್ಕಾರಬೆಟ್ಟು ಕೋಟ್ಯಪ್ಪ ಪೂಜಾರಿ ಎಂಬವರ ಮನೆ ಸದ್ಯ ಅಪಾಯದಂಚಿನಲ್ಲಿದೆ. ಇತರೆ 9 ಮನೆಗಳ ಎದುರಿನಲ್ಲಿ ನೆರೆ ನೀರು ತುಂಬಿ ಮನೆಮಂದಿ ಹೊರಗೆ ಹೋಗಲು ಅಸಾಧ್ಯವಾಗಿದೆ. ಗ್ರಾಮದಲ್ಲಿರುವ ಕಿರು ಸೇತುವೆಗಳು ಜಲಾವೃತವಾಗಿ ಮಕ್ಕಳು, ಕೆಲಸಕ್ಕೆ ಹೋಗುವವರು, ಗ್ರಾಮಸ್ಥರು ಮನೆಯಲ್ಲೇ ಉಳಿಯುವಂತಾಗಿದೆ. ಗದ್ದೆ ತೋಟಗಳಲ್ಲಿಯೂ ಜಲಾವೃತವಾಗಿದ್ದು, ಕೃಷಿ ಚಟುವಟಿಕೆಗಳಿಗೂ ತೊಂದರೆಯಾಗಿದೆ.ಮತ್ತೆ ಎಡಬಿಡದೆ ಮಳೆ ಸುರಿದಲ್ಲಿ ಮನೆಗಳು ಸಂಪೂರ್ಣ ನೀರಿನಲ್ಲಿ ಮುಳುಗುವುದರಲ್ಲಿ ಸಂಶಯವಿಲ್ಲ ಎಂದು ಸ್ಥಳೀಯ ನಿವಾಸಿ ವಿಶ್ವನಾಥ್ ತಿಳಿಸಿದ್ದಾರೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತು ಗ್ರಾಮದ ಜನರಿಗೆ ಸಹಕರಿಸಬೇಕು ಅನ್ನುವ ಒತ್ತಾಯ ಸ್ಥಳೀಯರಿಂದ ಕೇಳಿಬಂದಿದೆ.

Read More