UN NETWORKS
ಬಂಟ್ವಾಳ: ಭಾರತದ ಎಪ್ಪತ್ತೆರಡನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ವಲಯ ಮಟ್ಟದಲ್ಲಿ ಆಗಸ್ಟ್ ಒಂದರಿಂದ ಹದಿನೈದರ ತನಕ ನಡೆಸಲಿರುವ “ಪ್ರಜಾ ಸಂಗಮ” ಕಾರ್ಯಕ್ರಮದ ರಾಜ್ಯ ಮಟ್ಟದ ಚಾಲನಾ ಸಮಾವೇಶವು ಆಗಸ್ಟ್ ಒಂದರಂದು ಬುದವಾರ ಸಂಜೆ ನಾಲ್ಕು ಗಂಟೆಗೆ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಸ್ಪರ್ಶ ಸಭಾಂಗಣದಲ್ಲಿ ನಡೆಯಲಿರುವುದಾಗಿ ಎಸ್. ವೈ.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಝೈನೀ ಕಾಮಿಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಂದು ನಡೆಯುವ ಕಾರ್ಯಕ್ರಮ ದಲ್ಲಿ ಸಂಘಟನೆಯ ರಾಜ್ಯ ನಾಯಕರು, ಜಿಲ್ಲಾ ಸಮಿತಿಯ ಮುಖಂಡರು , ವಿವಿಧ ವಲಯ ಸಮಿತಿಗಳ ಪ್ರತಿನಿಧಿಗಳು ಹಾಗೂ ಸ್ಥಳೀಯ ಸಾಮಾಜಿಕ, ರಾಜಕೀಯ ರಂಗದ ಪ್ರಮುಖರು ಭಾಗವಹಿಸಲಿರುವರು.ಮುಂದೆ ರಾಜ್ಯದ ವಿವಿಧ ಸೆಂಟರ್ ಸಮಿತಿಗಳ ಉಸ್ತುವಾರಿಯಲ್ಲಿ ಸ್ಥಳೀಯ ಎಲ್ಲಾ ಮತ-ಧರ್ಮ-ವರ್ಗ ದ ಜನರನ್ನು ಸೇರಿಸಿ ಸೆಂಟರ್ ಮಟ್ಟದಲ್ಲಿ ಪ್ರಜಾ ಸಂಗಮಗಳು ನಡೆಯಲಿದ್ದು ಕಾರ್ಯಕ್ರಮ ದ ಘೋಷವಾಕ್ಯವಾದ ” ಭಾರತ ಭಾರತೀಯರದ್ದಾಗಲಿ” ಎಂಬ ವಿಷಯದ ಕುರಿತು ಉಪನ್ಯಾಸ ಹಾಗೂ ಚರ್ಚೆ ಗಳು ನಡೆಯಲಿರುವುದು.
ಈ ಕುರಿತು ಅಂತಿಮ ಹಂತದ ಸಿಧ್ಧತಗಳ ಅವಲೋಕನಕ್ಕೆ ಬಿಸಿ ರೋಡ್ ಎಸ್. ಎಸ್.ಎಫ್.ಜಿಲ್ಲಾ ಕಚೇರಿಯ ಲ್ಲಿ ಸೇರಿದ ಸಭೆಯಲ್ಲಿ ರಾಜ್ಯಾಧ್ಯಕ್ಷ ಮೌಲಾನಾ ಜಿ.ಎಂ.ಕಾಮಿಲ್ ಸಖಾಫಿ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಝೈನೀ ಕಾಮಿಲ್ ಕಾರ್ಯಕ್ರಮದ ರೂಪುರೇಷೆ ಮಂಡಿಸಿದರು. ಕಾರ್ಯದರ್ಶಿ ಸಿದ್ದೀಖ್ ಸಖಾಫಿ ಮೂಳೂರು ಸ್ವಾಗತಿಸಿ ಕೊನೆಗೆ ಧನ್ಯವಾದ ಹೇಳಿದರು.


