UN NETWORKS
ಉಳ್ಳಾಲ: ಆದರ್ಶ ಮಿತ್ರ ಮಂಡಳಿ, ಕೊಲ್ಯ ಇದರ ನೂತನ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಕೊಲ್ಯ ಆಯ್ಕೆಯಾಗಿದ್ದಾರೆ.
ಕೊಲ್ಯ ಶಾರದಾ ಸಭಾಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2018-19ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರುಗಳಾಗಿ ಶ್ರವಣ್ ಕುಜುಮಗದ್ದೆ, ಗುರುಪ್ರಸಾದ್ ಕೆ.ಪಿ, ಪ್ರಧಾನ ಕಾರ್ಯದರ್ಶಿಯಾಗಿ ಮನೋಜ್ ಕುಮಾರ್ ಕುಜುಮಗದ್ದೆ, ಜತೆ ಕಾರ್ಯದರ್ಶಿಯಾಗಿ ಜಗಜೀವನ್ ಕೊಲ್ಯ, ಶೈಲೇಶ್ ಕನೀರುತೋಟ, ಕೋಶಾಧಿಕಾರಿಯಾಗಿ ಸಚಿನ್ ಸಾಲ್ಯಾನ್ ಕೊಲ್ಯ, ಕ್ರೀಡಾ ಕಾರ್ಯದರ್ಶಿಯಾಗಿ ನಿಖಿಲ್ ರಾಜ್ ಕೊಲ್ಯ, ಕ್ರೀಡಾ ಸಂಚಾಲಕರುಗಳಾಗಿ, ಅನುಷ್, ಹೃತಿಕ್, ಪ್ರದೀಪ್ ಕುಜುಮಗದ್ದೆ, ಹೃತಿಕ್, ಮೋಹನ್ ಮಂಕುಹಿತ್ಲು, ಚಂದ್ರಮೋಹನ್ ಕೆ.ಪಿ, ಮನು ಕಟ್ಟೆಮನೆ ಆಯ್ಕೆಯಾದರು.


