UN NETWORKS
ಕೈರಂಗಳ:ಇಲ್ಲಿನ ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ವತಿಯಿಂದ 72 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವು ಡಿ.ಜಿ ಕಟ್ಟೆ ಸಂಸ್ಥೆಯ ಕಛೇರಿಯಲ್ಲಿ ನಡೆಯಿತು.ತಾ.ಪಂ ಸದಸ್ಯರಾದ ಹೈದರ್ ಕೈರಂಗಳ ಧ್ವಜಾರೋಹಣ ನೆರವೇರಿಸಿದರು.
ದುಆ ನೆರವೇರಿಸಿ ಮಾತನಾಡಿದ ಮುಹಿಯ್ಯದ್ದೀನ್ ಜುಮಾ ಮಸ್ಜಿದ್ ತೋಟಾಲ್ ಖತೀಬ್ ಮುಹಿಯ್ಯದ್ದೀನ್ ಸಹದಿ ತೋಟಾಲ್, ಸಮಾಜದಲ್ಲಿ ಸೌಹರ್ದತೆ ನೆಲೆನಿಲ್ಲಬೇಕಾಗಿದೆ.ಎಲ್ಲರೂ ಜಾತಿ-ಭೇದವನ್ನು ಮರೆತು ಈ ನಾಡಿನ ಒಳಿತಿಗಾಗಿ ಒಂದಾದಾಗ ಮಾತ್ರ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.ಗ್ರಾ.ಪಂ ಸದಸ್ಯರಾದ ಲೋಹಿತ್ ಗಟ್ಟಿ,ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ಅಧ್ಯಕ್ಷ ಹಂಝ.ಬಿ,ಕೃಷ್ಣ ಗೇಮ್ಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ್ ಕೈರಂಗಳ,ಪ್ರಮುಖರಾದ ಹೈದರ್,ಆಸಿಫ್ ಪಾರೆ,ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಉಪಾಧ್ಯಕ್ಷ ಜಾಬಿರ್ ತೋಟಾಲ್ ಸ್ವಾಗತಿಸಿ,ಧನ್ಯವಾದಗೈದರು.


