UN NETWORKS
ಉಳ್ಳಾಲ: ಕೇರಳದಲ್ಲಿ ಶೇ.100 ಸಾಕ್ಷರತೆ ಇಂದು ನೆಲೆಯೂರಲು ಬ್ರಹ್ಮಶ್ರೀ ನಾರಾಯಣ ಗುರುಗಳು ಅಂದು ಜನಸಾಮಾನ್ಯರಿಗೆ ನೀಡಿದ ಜ್ಞಾನವೇ ಕಾರಣ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.
ಅವರು ಸೋಮೇಶ್ವರ ಕೊಲ್ಯದ ಬ್ರಹ್ಮಶ್ರೀ ನಾರಾಯಣಗುರು ಧ್ಯಾನವಮಂದಿರ ಆಶ್ರಯದಲ್ಲಿ ಕೊಲ್ಯ ನಾರಾಯಣ ಗುರು ಮಂದಿರ ಇಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 164 ನೇ ಜನ್ಮದಿನಾಚರಣೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜನರಲ್ಲಿ ಆಧ್ಯಾತ್ಮದ ಚಿಂತನೆ ಮೂಡಿಸುತ್ತಾ ದೇವರ ಭಯದೊಂದಿಗೆ ಜ್ಞಾನವನ್ನು ಮೂಡಿಸಿದರು.
ಇದರಿಂದ ಎಲ್ಲರೂ ಜ್ಞಾನ ವೃದ್ಧಿಸಿಕೊಂಡ ಹಿನ್ನೆಲೆಯಲ್ಲಿ ಕೇರಳದಲ್ಲಿ ಹಿಂದೂ ಸಮಾಜ ಮತಾಂತರವಾಗದೆ ಉಳಿಯಿತು. ಇಂತಹ ಮತಾಂತರದಂತಹ ಪ್ರಕ್ರಿಯೆಗಳಿಂದ ಸಮಾಜದಲ್ಲಿ ವಿಂಗಡಣೆಗಳು ಜಾಸ್ತಿಯಾಗುತ್ತದೆ. ಆದರೆ ಎಲ್ಲಾ ಧರ್ಮಗಳ ಮಹಾಪುರುಷರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಸಾಮರಸ್ಯವನ್ನು ಸಮಾಜದಲ್ಲಿ ನೆಲೆಯೂರಿಸಿದರು. ಈ ನಿಟ್ಟಿನಲ್ಲಿ ನಾರಾಯಣ ಗುರುಗಳ ಚಿಂತನೆಗಳು ಹಾಗೂ ಕಲ್ಪನೆಗಳನ್ನು ಮುಂದಿಟ್ಟುಕೊಂಡೇ ಡಾ| ಬಿ.ಆರ್ ಅಂಬೇಡ್ಕರ್ ದೇಶದ ಸಂವಿಧಾನವನ್ನು ರಚಿಸಿದ್ದಾರೆ. ಕತ್ತಲಲ್ಲಿ ಕೂಡಿದ್ದ ದೇಶವನ್ನು ಬೆಳಕಿನ ಕಿರಣಗಳಿಂದ ಬೆಳಗಿಸಿ ವಿಶ್ವಗುರುವಾಗಿದ್ದಾರೆ. ಸ್ವಾಭಿಮಾನ ಸಮಾಜದ ನಿರೂಪಣೆ ಹಾಗೂ ಸಮಾಜ ಜೋಡಿಸಿದ ನಾರಾಯಣ ಗುರುಗಳ ಆದರ್ಶಗಳಿಂದಾಗಿ ಇಂದಿಗೂ ಕೇರಳ ಮತ್ತು ಮಂಗಳೂರಿನಲ್ಲಿ ಅವರ ಹೆಸರಿನಲ್ಲಿರುವ ಆರಾಧಾನಾಲಯಗಳು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಜಗತ್ತಿಗೆ ಆದ್ಯಾತ್ನ ಲೋಕದ ಬೆಳಕನ್ನು ಭಾರತದ ಪುರಾಣಗಳು ಕೊಟ್ಟಿದೆ
ಮಹಾಪುರುಷರು ಆಧ್ಯಾತ್ಮದ ಮೂಲಕ ಭಗವಂತರಾದರು. ಈ ನಡುವೆ ಆಧ್ಯಾತ್ಮದಲ್ಲಿ ಕ್ರಾಂತಿಯನ್ನು ಹುಟ್ಟಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಸರಕಾರ ನಾರಾಯಣ ಗುರು ಜಯಂತಿ ಆಚರಿಸುತ್ತದೆ. ಅವರ ಜೀವನಗಾಥೆ, ಆಧ್ಯಾತ್ಮದ ಚಿಂತನೆ, ಸಾಮಾಜಿಕ ಹೋರಾಟ ಪ್ರಪಪಂಚಕ್ಕೆ ಮಾದರಿ. ವಿಚಾರಗಳು ಚರ್ಚೆ ಮಾಡಬೇಕಾದ ಅನಿವಾರ್ಯತೆ ಇದೆ . ದೇವರ ಬಳಿಯಿಂದ ಅಸ್ಪೃಶ್ಯತೆಯ ಕ್ರಾಂತಿ ಸಾರಿದವರಾಗಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಹಾಗೂ ಸಿನಿಮಾ ನಟ ರಾಜಶೇಖರ್ ಕೋಟ್ಯಾನ್ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನಚರಿತ್ರೆಯ ಸಿನಿಮಾವನ್ನು ದೇಶಕ್ಕೆ ಅವರ ಸಂದೇಶಗಳನ್ನು ಒದಗಿಸುವ ನಿಟ್ಟಿನಲ್ಲಿ ರಚಿಸಲಾಗಿದೆ. ಇದರಿಂದ ನಾರಾಯಣ ಗುರುಗಳ ಸಂದೇಶ ಇತರೆ ಸಮುದಾಯದವರಿಗೂ ಅರ್ಥವಾಗಲಿದೆ. ಅವರ ಸಂದೇಶದ ಪಾಲನೆಯಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕಟೀಲ್, ಚೆಂಬುಗುಡ್ಡೆ ರುದ್ರಭೂಮಿಯ ಮೇಲ್ವಿಚಾರಕ ಶಂಕರ ಮಣಿ, ರೋಟರಿ ಕ್ಲಬ್ ಮಂಗಳೂರು ಪೂರ್ವ ಇದರ ಅಧ್ಯಕ್ಷ ಜೈಕುಮಾರ್ ಕೊಲ್ಯ ಇವರನ್ನು ಸನ್ಮಾನಿಸಲಾಯಿತು.ದಿ| ಜೆ. ಲಿಂಗಪ್ಪ ಪೂಜಾರಿ ಕನೀತುತೋಟ ಸ್ಮರಣಾರ್ಥ ನೀಡಲಾಗುವ ಶ್ರೀಗೋಪಾಲಕೃಷ್ಣ ಸೋಮೇಶ್ವರ ನೀಡುವ ಭಜನಾ ಪುರಸ್ಕಾರವನ್ನು ಪ್ರೀತೇಶ್ ಮಲಯಾಳಕೋಡಿ ಇವರಿಗೆ ನೀಡಲಾಯಿತು.
ಗರೋಡಿ ಬಿಲ್ಲವ ಸೇವಾ ಸಮಾಜದ ರಜತೋತ್ಸವ ಸಮಿತಿ ಯ ಪ್ರಧಾನ ಸಂಚಾಲಕ ಆನಂದ್ ಕುಮಾರ್ ಸರಿಪಲ್ಲ ಗುರು ಸಂದೇಶ ನೀಡಿದರು.ಮುಖ್ಯ ಅತಿಥಿಗಳಾಗಿ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ , ಸೋಮೇಶ್ವರ ನೆಹರು ನಗರದ ಪಶ್ಚಿಮ್ ಟ್ರಸ್ಟ್ ಇದರ ಸಂಸ್ಥಾಪಕ ರೋಹಿತ್ ಸಾಂಕ್ಟಸ್ , ಯುವವಾಹಿನಿ ಕೊಲ್ಯ ಘಟಕ ಅಧ್ಯಕ್ಷ ಕುಸುಮಾಕರ್ ಕುಂಪಲ, ಮಹಿಳಾ ಸಂಘದ ಅಧ್ಯಕ್ಷೆ ಮೀನಾಕ್ಷಿ ಐತಪ್ಪ ಭಾಗವಹಿಸಿದ್ದರು.
ಸಂಘದ ಅಧ್ಯಕ್ಷ ಆನಂದ ಎಸ್ ಕೊಂಡಾಣ ಸ್ವಾಗತಿಸಿದರು. ಜೈಕುಮಾರ್ ಕೊಲ್ಯ ಕಾರ್ಯಕ್ರಮ ನಿರೂಪಿಸಿದರು. ಗೌರವಾಧ್ಯಕ್ಷ ಡಾ.ಪಿ.ರಾಮಾನುಜಂ ಪ್ರಾಸ್ತಾವಿಕ ಮಾತನಾಡಿದರು. ವೇಣುಗೋಪಾಲ ಕೊಲ್ಯ ಅಭಿನಂದನಾ ಪತ್ರ ವಾಚಿಸಿದರು. ಪ್ರಶಸ್ತಿ ವಿಜೇತರ ವಿವರವನ್ನು ಆನಂದ ಮಲಯಾಳಕೋಡಿ ವಾಚಿಸಿದರು. ಪ್ರ.ಕಾರ್ಯರ್ಶಿ ಡಿ.ಯನ್ ರಾಘವ ವಂದಿಸಿದರು.


