UN NETWORKS
ಉಳ್ಳಾಲ: ಭಾರತ್ ಪ್ರೌಢಶಾಲೆ ಕೇವಲ ಶೈಕ್ಷಣಿಕ ಕಾರ್ಯಕ್ಕೆ ಸೀಮಿತವಾಗಿದೆ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಭಾರತ್ ಪ್ರೌಢಶಾಲಾ ಮೈದಾನದಲ್ಲಿ ಆಡಿದ ಅನೇಕ ಕ್ರೀಡಾಪಟುಗಳು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದ್ದು ಮುಂದಿನ ದಿನಗಳಲ್ಲಿಯೂ ಈ ಕ್ರೀಡಾಂಗಣದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿ ಎಂದು ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ ಅಭಿಪ್ರಾಯಪಟ್ಟರು.
ಉಳ್ಳಾಲ ಭಾರತ್ ಪ್ರೌಢಶಾಲಾ ಮೈದಾನದಲ್ಲಿ ನಡೆದ ದ.ಕ.ಜಿ.ಪ. ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಹಾಗೂ ಅನುದಾನಿತ ಭಾರತ್ ಪ್ರೌಢಶಾಲೆ ಉಳ್ಳಾಲ ಇವರ ಸಂಯುಕ್ತ ಆಶ್ರಯದಲ್ಲಿ ದ.ಕ. ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಬಾಲಕ ಬಾಲಕಿಯರ ಹ್ಯಾಂಡ್ ಬಾಲ್ ಪಂದ್ಯಾಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿ ಸೇವಂತಿ ಪಂದ್ಯಾಟಕ್ಕೆ ಚಾಲನೆ ನೀಡಿ ಸ್ಪರ್ಧಾತ್ಮಕ ಮನೋಭಾವನೆಯೊಂದಿಗೆ ಆಟವಾಡುವ ಮೂಲಕ ಗೆಲುವನ್ನು ಸಾಧಿಸಿ. ಸೋಲು ಗೆಲುವು ಸಹಜ ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ದಿನಗಳಲ್ಲಿ ಗೆಲುವಿನ ಪಥದತ್ತ ಸಾಗಬೇಕು ಎಂದರು. ಪಂದ್ಯಾಟ ನಡೆಯುವ ಅಂಕಣದ ಉದ್ಘಾಟನೆಯನ್ನು ಭಾರತ್ ಪ್ರೌಢಶಾಲೆಯ ಸಂಚಾಲಕ ಯಶವಂತ್ ಅಮೀನ್ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ರಘುನಾಥ್, ತಾಲೂಕು ಪರಿವೀಕ್ಷಣಾಧಿಕಾರಿ ವಿಷ್ಣು ಹೆಬ್ಬಾರ್, ಜಿಲ್ಲಾ ಸಂಘದ ಕಾರ್ಯದರ್ಶಿ ಶೇಖರ್ ಕಡ್ತಲ, ತಾಲೂಕು ಸಂಘದ ಕಾರ್ಯದರ್ಶಿ ರಾಜೀವ್ ನಾಯಕ್, ಕೋಶಾಧಿಕಾರಿ ಲ್ಯಾನ್ಸಿ ಸಿಕ್ವೇರಾ, ಮಂಗಳೂರು ತಾಲೂಕು ಪ್ರೌಢಶಾಲಾ ಸಹಶಿಕ್ಷಕ ಸಂಘದ ಅಧ್ಯಕ್ಷ ಪಿ.ಡಿ.ಶೆಟ್ಟಿ, ಜಿಲ್ಲಾ ಮಟ್ಟದ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ಕೆ. ಮಂಜಿನಾಡಿ, ತಾಲೂಕು ಮಟ್ಟದ ಅನುದಾನಿತ ಪ್ರಾಥಮಿಕ ಸಂಘದ ಅಧ್ಯಕ್ಷ ಎಂ.ಎಚ್.ಮಲಾರ್, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಗುರುನಾಥ ಬಾಗೇವಾಡಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಲೋಕನಾಥ ರೈ, ನಿವೃತ್ತ ಮುಖ್ಯ ಶಿಕ್ಷಕರಾದ ವಾಸಗೋಪಾಲ್, ಉಳ್ಳಾಲ ನಗರ ಸಭೆಯ ಕೌನ್ಸಿಲರ್ ಇಬ್ರಾಹಿಂ, ವಿಜಯ ಬ್ಯಾಂಕ್ ಪ್ರಬಂಧಕ ಸಂದೀಪ್ ಶೆಟ್ಟಿ, ಪದವಿ ಪೂರ್ವ ವಿಭಾಗದ ಪ್ರಾಂಶುಪಾಲ ಅನುರಾಜ್, ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ರಾಜೇಶ್ವರಿ, ಮೊಗವೀರ ಹಿರಿಯ ಪ್ರಾಥಮಿಕ ಶಾಲಾ ,ಮುಖ್ಯ ಶಿಕ್ಷಕಿ ವೇದಾವತಿ, ನೋಡಲ್ ದೈಹಿಕ ಶಿಕ್ಷಣ ಶಿಕ್ಷಕರಾದ ಉರ್ಬನ್ ಮಸ್ಕರೇನಸ್, ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರೀತಂ ಮತ್ತು ಎಲ್ವಿರಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉದ್ಯಮಿ ಕೆ.ಕೆ.ಖಾದರ್, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕರಾದ ಕೆ.ಎಚ್.ನಾಯಕ್ ಮತ್ತು ಲಿಲ್ಲಿ ಪಾಯಸ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ವ್ಯಕ್ತಿ ಪರಿಚಯವನ್ನು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ತ್ಯಾಗಂ ಹರೇಕಳ ಮತ್ತು ಶಿಕ್ಷಕಿ ಪ್ರಜ್ಞಾ ನೆರವೇರಿಸಿ ಕೊಟ್ಟರು.ಶಾಲಾ ಮುಖ್ಯೋಪಾಧ್ಯಾಯಿನಿ ನಾಗವೇಣಿ ವಂದಿಸಿದರು. ಶಿಕ್ಷಕಿ ವಿನಯ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.


