ಬಹರೈನ್ ರಾಷ್ಟ್ರದಲ್ಲಿರುವ ಕನ್ನಡ ಸಂಘದ ಶ್ರೀಮತಿ ಆಶಾ ಪ್ರಕಾಶ್ ಶೆಟ್ಟಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಶ್ರೀ ಸತ್ಯನಾರಾಯಣ ಪೂಜಾ ಮಹೋತ್ಸವವು ಭಕ್ತಿ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ನೆರವೇರಿತು. ಈ ಶುಭ ಸಂದರ್ಭದಲ್ಲಿ ಮಂಗಳೂರಿನ ಯುವ ಪ್ರತಿಭಾವಂತ ಕಲಾವಿದೆ ಕುಮಾರಿ ಶ್ರೀರಕ್ಷಾ ಎಸ್. ಹೆಚ್. ಪೂಜಾರಿ (ಕೊಣಾಜೆ) ಅವರು ವೀಣಾ ವಾದನ ಹಾಗೂ ಭಕ್ತಿ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟು ನೆರೆದಿದ್ದ ಭಕ್ತರು ಮತ್ತು ಪ್ರೇಕ್ಷಕರನ್ನು ಭಕ್ತಿ ಪರವಶಗೊಳಿಸಿದರು. ತಮ್ಮ ಸುಮಧುರ ಗಾಯನ ಮತ್ತು ಮನಮೋಹಕ ವೀಣಾ ನಾದದ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದ ಶ್ರೀರಕ್ಷಾ ಅವರು, ಭಾರತೀಯ ಸಾಂಸ್ಕೃತಿಕ ಪರಂಪರೆಯ ಸೊಬಗನ್ನು ಅನಾವರಣಗೊಳಿಸಿದರು. ಅವರ ಭಾವಪೂರ್ಣ ಸಂಗೀತ ಪ್ರದರ್ಶನಕ್ಕೆ ಸಭಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಸಂಘ ಬಹರೇನ್ ಅಧ್ಯಕ್ಷ ಅಜಿತ್ ಬಂಗೇರ, ಪ್ರಧಾನ ಕಾರ್ಯದರ್ಶಿ ರಾಮ್ ಪ್ರಸಾದ್ ಆಮೆನಡ್ಕ, ಕೋಶಾಧಿಕಾರಿ ಹರಿಣಿ ಉತ್ಕರ್ಷ ಶೆಟ್ಟಿ ಹಾಗೂ ಸಂಘದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದರು. ಧಾರ್ಮಿಕ…
Author: UllalaVani
ಬಂಟ್ವಾಳ, ಜೂ. 03 : ಮಂಗಳೂರು-ಸುಬ್ರಹ್ಮಣ್ಯ ರೈಲಿನ ಕೊನೆಯ ಬೋಗಿಯಲ್ಲಿ ಗಲಾಟೆ ಸೃಷ್ಟಿಸಿ, ಪ್ರಯಾಣಿಕನೋರ್ವನ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ವ್ಯಕ್ತಿಗಳನ್ನು ರೈಲ್ವೆ ರಕ್ಷಣಾ ಪಡೆ ಮಂಗಳವಾರ ಬೆಳಗ್ಗೆ ಬಂಟ್ವಾಳ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದಿದೆ. ವರದಿಗಳ ಪ್ರಕಾರ, ಕೋಡಿಂಬಾಳ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತಿದ್ದ ಮೂವರು ವ್ಯಕ್ತಿಗಳು ಬೋಗಿಯೊಳಗೆ ತೀವ್ರ ಗದ್ದಲ ಎಬ್ಬಿಸುತ್ತಿದ್ದರು ಎಂದು ರೈಲ್ವೆ ಪೊಲೀಸರಿಗೆ ದೂರು ನೀಡಲಾಗಿತ್ತು. ರೈಲು ಬಂಟ್ವಾಳ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ಜಾಗೃತರಾದ ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿ, ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ರೈಲನ್ನು ಬಂಟ್ವಾಳ ನಿಲ್ದಾಣದಲ್ಲಿ ಕೆಲವು ನಿಮಿಷಗಳ ಕಾಲ ಸ್ಥಗಿತಗೊಳಿಸಲಾಗಿತ್ತು.
ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಬಾರ್ಶಿಯಲ್ಲಿ ನಡೆದಿರುವ ದುರ್ಘಟನೆ ದೇಶದಾದ್ಯಂತ ಪೋಷಕರು, ಕ್ರೀಡಾ ತರಬೇತುದಾರರು ಹಾಗೂ ಕ್ರೀಡಾ ಸಂಸ್ಥೆಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರದಲ್ಲಿ 15 ವರ್ಷದ ಬಾಲಕ ಆರವ್ ಅಲಿಯಾಸ್ ವಿರೇನ್ ಚೌಧರಿ ಕ್ರಿಕೆಟ್ ಪಿಚ್ ಸಮತಟ್ಟು ಮಾಡಲು ಬಳಸುವ ಭಾರೀ ರೋಲರ್ ಅಡಿಗೆ ಸಿಲುಕಿ ಮೃತಪಟ್ಟಿರುವುದು ಅತ್ಯಂತ ದುಃಖಕರ ಮತ್ತು ಆತಂಕಕಾರಿ ಘಟನೆ. ಕ್ರೀಡೆ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅಗತ್ಯವಾದರೂ, ಸುರಕ್ಷತೆ ಅದಕ್ಕಿಂತಲೂ ಮುಖ್ಯವಾಗಿದೆ. ಯಾವುದೇ ತರಬೇತಿ ಶಿಬಿರದಲ್ಲಿ ಮಕ್ಕಳು ತಮ್ಮ ವಯಸ್ಸು ಮತ್ತು ಸಾಮರ್ಥ್ಯಕ್ಕೆ ಮೀರಿದ ಅಪಾಯಕಾರಿ ಕೆಲಸಗಳಲ್ಲಿ ತೊಡಗಿಸಬಾರದು. ಭಾರೀ ತೂಕದ ರೋಲರ್, ಯಂತ್ರೋಪಕರಣಗಳು ಅಥವಾ ಅಪಾಯಕಾರಿಯಾದ ಸಾಧನಗಳನ್ನು ನಿರ್ವಹಿಸುವ ಜವಾಬ್ದಾರಿ ಮಕ್ಕಳಿಗೆ ನೀಡುವುದು ಸುರಕ್ಷತಾ ನಿಯಮಗಳಿಗೆ ವಿರುದ್ಧವಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಯಾವುದೇ ಕ್ರೀಡಾ ಶಿಬಿರಕ್ಕೆ ಕಳುಹಿಸುವ ಮೊದಲು ಅಲ್ಲಿ ಸುರಕ್ಷತಾ ವ್ಯವಸ್ಥೆಗಳು, ತರಬೇತುದಾರರ ಜವಾಬ್ದಾರಿ ಮತ್ತು ತುರ್ತು ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಬೇಕು. ಅದೇ ರೀತಿ ಕೋಚ್‌ಗಳು…
ಮುಡಿಪು, ಜೂನ್ 2: ಹೃದಯಾಘಾತದಿಂದ ಉದ್ಯಮಿ ಎಸ್‌ಕೆ ಅಬ್ದುಲ್ ಖಾದರ್ ಹಾಜಿ ಅವರ ಅಕ್ಕನ ಮಗ ಮೊಹಮ್ಮದ್ ಯಾನೆ ಪುತ್ತುಬಾವಾ (44) ಅವರು ನಿಧನ ಹೊಂದಿದ್ದಾರೆ. ಮೃತ ಮೊಹಮ್ಮದ್ ಅವರು ಮುಡಿಪುವಿನಲ್ಲಿ ಜವಳಿ ಅಂಗಡಿಯನ್ನು ನಡೆಸುತ್ತಿದ್ದರು. ಬಳಿಕ ಎಸ್‌ಕೆ ದಿಂಬರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.ಮೃತರು ನಾಲ್ವರು ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
ಉಳ್ಳಾಲ, ಜೂನ್ 2: ಪೊಲೀಸ್ ಇಲಾಖೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಪೊಲೀಸ್ ಸಿಬ್ಬಂದಿಗಳಿಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಭಾವಪೂರ್ಣ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ವರ್ಗಾವಣೆಗೊಂಡ ಸಿಬ್ಬಂದಿಗಳಾದ ವೆಂಕಟೇಶ್ (ಎಎಸ್‌ಐ), ಮನ್ಸೂರ್ (ಎಎಸ್‌ಐ), ಮಂಜುನಾಥ್ (ಹೆಡ್ ಕಾನ್ಸ್ಟೇಬಲ್), ಸುರೇಶ್ ಕುಮಾರ್ (ಹೆಡ್ ಕಾನ್ಸ್ಟೇಬಲ್), ಶಿವಪ್ರಸಾದ್ (ಹೆಡ್ ಕಾನ್ಸ್ಟೇಬಲ್), ಅಂದಾನ್ ಸ್ವಾಮಿ (ಹೆಡ್ ಕಾನ್ಸ್ಟೇಬಲ್), ಸುನಿತಾ (ಮಹಿಳಾ ಹೆಡ್ ಕಾನ್ಸ್ಟೇಬಲ್) ಹಾಗೂ ಕುಶಾಲ್ ಮಣಿಯಾಣಿ (ಎಎಸ್‌ಐ) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಪಾಂಡೇಶ್ವರದ ವೆಂಕಟೇಶ್, ಮನ್ಸೂರ್ ಹಾಗೂ ಮಂಜುನಾಥ್, ಊರ್ವ ಪೊಲೀಸ್ ಠಾಣೆಯ ಸುರೇಶ್ ಕುಮಾರ್, ಸುರತ್ಕಲ್ ಪೊಲೀಸ್ ಠಾಣೆಯ ಶಿವಪ್ರಸಾದ್, ಟ್ರಾಫಿಕ್ ಈಸ್ಟ್ ಪೊಲೀಸ್ ಠಾಣೆಯ ಅಂದಾನ್ ಸ್ವಾಮಿ, ಮಂಗಳೂರು ಉತ್ತರ ಪೊಲೀಸ್ ಠಾಣೆಯ ಸುನಿತಾ ಹಾಗೂ ಕುಶಾಲ್ ಮಣಿಯಾಣಿ ಅವರು ಇಲಾಖೆಯಿಂದ ವರ್ಗಾವಣೆಗೊಂಡಿದ್ದು, ಅವರ ಸೇವೆಯನ್ನು ಸ್ಮರಿಸಿ ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು. ಕಾರ್ಯಕ್ರಮದಲ್ಲಿ ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ವಿಜಯ್…
ಕುಂಪಲ: ಕುಂಪಲ, ಪಿಲಾರ್, ಅಂಬಿಕಾರೋಡ್ ಹಾಗೂ ಕಾಪಿಕಾಡ್ ಭಾಗದ ವಾಹನ ಸವಾರರು ಇಂದಿನಿಂದ ಹೆಚ್ಚುವರಿ ಸಂಚಾರ ಸಮಸ್ಯೆ ಹಾಗೂ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಭೀತಿಯನ್ನು ಎದುರಿಸುವಂತಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರವೀಣ್ ಎಸ್. ಕುಂಪಲ ಅಭಿಪ್ರಾಯಪಟ್ಟಿದ್ದಾರೆ. ಕುಂಪಲದಿಂದ ಓವರ್‌ಬ್ರಿಡ್ಜ್ ಕಡೆಗೆ ಸಂಚರಿಸುವ ವಾಹನ ಸವಾರರಿಗೆ ಸಮರ್ಪಕ ಸರ್ವಿಸ್ ರಸ್ತೆ ಇಲ್ಲದ ಕಾರಣ ಅನಗತ್ಯವಾಗಿ ಸುತ್ತುವ ಮಾರ್ಗ ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕುಂಪಲದಿಂದ ಕಾಪಿಕಾಡ್ ಸಂಪರ್ಕಿಸುವ ಕೇವಲ ಕಾಲು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸರ್ವಿಸ್ ರಸ್ತೆ ನಿರ್ಮಿಸಲು ಅವಕಾಶವಿದ್ದರೂ, ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ ಸಂಸ್ಥೆಗಳು ಹಾಗೂ ವ್ಯಾಪಾರ ಸಂಕೀರ್ಣಗಳ ಸುತ್ತ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದ್ದರೂ, ಸಾರ್ವಜನಿಕರ ಸಂಚಾರಕ್ಕೆ ಅಗತ್ಯವಾದ ಸರ್ವಿಸ್ ರಸ್ತೆ ನಿರ್ಮಾಣವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಪ್ರಸ್ತುತ ಕುಂಪಲ, ಪಿಲಾರ್ ಹಾಗೂ ಕಾಪಿಕಾಡ್ ಭಾಗದ ವಾಹನ ಸವಾರರು ತೊಕ್ಕೊಟ್ಟಿಗೆ ತಲುಪಲು ಸಾಮಾನ್ಯವಾಗಿ ಅರ್ಧ ಕಿಲೋಮೀಟರ್‌ಗಿಂತ ಕಡಿಮೆ ದೂರ ಕ್ರಮಿಸಬೇಕಾದರೆ,…
ಉಳ್ಳಾಲ, ಜೂ. 2: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ) ಉಳ್ಳಾಲ ಹಾಗೂ ಕೊಣಾಜೆ ಉಪವಿಭಾಗಗಳ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಜನ ಸಂಪರ್ಕ ಸಭೆಯನ್ನು ಆಯೋಜಿಸಿದೆ. ಈ ಸಭೆಯು ಜೂನ್ 4ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಉಳ್ಳಾಲ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ.) ಅವರ ಕಚೇರಿಯಲ್ಲಿ ನಡೆಯಲಿದೆ. ಸಭೆಯಲ್ಲಿ ಮೆಸ್ಕಾಂನ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದು, ವಿದ್ಯುತ್ ಸರಬರಾಜು, ಬಿಲ್ಲಿಂಗ್, ಹೊಸ ಸಂಪರ್ಕ, ನಿರ್ವಹಣೆ ಸೇರಿದಂತೆ ವಿವಿಧ ವಿದ್ಯುತ್ ಸಂಬಂಧಿತ ಸಮಸ್ಯೆಗಳು ಹಾಗೂ ಕುಂದುಕೊರತೆಗಳನ್ನು ಗ್ರಾಹಕರು ನೇರವಾಗಿ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬಹುದಾಗಿದೆ. ವಿದ್ಯುತ್ ಗ್ರಾಹಕರು ಈ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯುವ ಜೊತೆಗೆ ಇಲಾಖೆಯ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಬಾಕ್ರಬೈಲು, ಜೂನ್ 2: ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಕೇರಳದ 14 ಜಿಲ್ಲೆಗಳಿಗೆ ಬೈಕ್ ರೈಡ್ ಕೈಗೊಂಡಿದ್ದ ತುಳುನಾಡಿನ ಯುವಕ ವಿಷ್ಣು ಅವರು ತಮ್ಮ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಕಾಸರಗೋಡು ಜಿಲ್ಲೆ ತಲುಪಿದ ಹಿನ್ನೆಲೆಯಲ್ಲಿ ಬಾಕ್ರಬೈಲಿನಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಬಾಕ್ರಬೈಲಿನ ಕಟೀಲೇಶ್ವರೀ ಆಟೋ ವರ್ಕ್ಸ್ ಹಾಗೂ ತುಳುನಾಡ ಫ್ರೆಂಡ್ಸ್ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿಷ್ಣು ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ವೇಳೆ ಅವರ ಜಾಗೃತಿ ಅಭಿಯಾನಕ್ಕೆ ಸಹಕಾರ ನೀಡಿದ ಜೀವಿತ್ ಅವರನ್ನೂ ಗೌರವಿಸಲಾಯಿತು. “ಸೇವ್ ನೇಚರ್, ಸೇ ನೋ ಟು ಡ್ರಗ್ಸ್” ಎಂಬ ಸಂದೇಶದೊಂದಿಗೆ ಮೇ 28ರಂದು ಮಂಗಳೂರಿನಿಂದ ಬೈಕ್ ಯಾತ್ರೆ ಆರಂಭಿಸಿದ್ದ ವಿಷ್ಣು, ಕೇರಳದ ಎಲ್ಲಾ 14 ಜಿಲ್ಲೆಗಳಲ್ಲಿ ಸಂಚರಿಸಿ ಡ್ರಗ್ಸ್‌ನ ದುಷ್ಪರಿಣಾಮಗಳ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಿದ್ದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಷ್ಣು, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಸಂದರ್ಭದಲ್ಲಿ ಅನೇಕ ಯುವಕರು ಡ್ರಗ್ಸ್ ಹಾಗೂ ಗಾಂಜಾ ವ್ಯಸನಕ್ಕೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳುತ್ತಿರುವುದನ್ನು ಕಂಡಿದ್ದಾಗಿ ಹೇಳಿದರು.…
ಉಳ್ಳಾಲ: ರಂಗ ಮಂದಿರವನ್ನು ಕೊಡುಗೆಯಾಗಿ ನೀಡಿರುವುದು ಅಂಬ್ಲಮೊಗರಿನ ಊರವರಿಗೆ ಶಾಲಾ ಮಕ್ಕಳಿಗೆ ಬಹುದೊಡ್ಡ ಸೊತ್ತಾಗಿದೆ. ವಿದ್ಯಾ ಕೇಂದ್ರಗಳಲ್ಲಿ ಅಭಿವೃದ್ಧಿ ಕೆಲಸಗಳಾದಲ್ಲಿ ಮಾತ್ರ ಗ್ರಾಮ ಅಭಿವೃದ್ಧಿಯಾಗುವುದು. ಶಾಲೆಯ ಅಭಿವೃದ್ಧಿಯಲ್ಲಿ ಶ್ರಮಿಸುತ್ತಿರುವ ಮುಖ್ಯೋಪಾಧ್ಯಾಯರು ಸೇರಿದಂತೆ ಶಿಕ್ಷಕರ ತಂಡದ ಕಾರ್ಯ ಶ್ಲಾಘನೀಯವಾದುದು. ಮುಖ್ಯೋಪಾಧ್ಯಾಯರ ಶ್ರಮ ಜೀವನದಿಂದಲೇ ಶಾಲೆ ಅಭಿವೃದ್ಧಿ ಮಟ್ಟವನ್ನು ಏರಿದೆ ಎಂದು ತಾಲೂಕು ಪಂಚಾಯತ್ ಮಾಜಿ ಸದಸ್ಯ ಸುದರ್ಶನ್ ಶೆಟ್ಟಿ ಅಭಿಪ್ರಾಯಪಟ್ಟರು.ಅವರು ಅಂಬ್ಲಮೊಗರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸ್ಥಳದಾನಿ ಪಡ್ಯಾರಮನೆ ರಾಮಕ್ಕ ಪಕೀರ ಶೆಟ್ಟಿ ಅವರ ಸ್ಮರಣಾರ್ಥ ಅವರ ಮಕ್ಕಳಾದ ಪಡ್ಯಾರಮನೆ ಆನಂದ ಶೆಟ್ಟಿ ಮುಂಬೈ, ಸದಾಶಿವ ಶೆಟ್ಟಿ ಕಡೆಂಜ ಹಾಗೂ ವಿಠಲ ಶೆಟ್ಟಿ ಬೆಂಗಳೂರು ಅವರ ಕೊಡುಗೆಯಾಗಿ ನಿರ್ಮಿಸಿದ ಶಾಲಾ ರಂಗಮಂದಿರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಂಚ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಉಳ್ಳಾಲ ತಾಲೂಕು ಅಧ್ಯಕ್ಷ ಮಹಮ್ಮದ್ ರಫೀಕ್ ಅಂಬ್ಲಮೊಗರು ಮಾತನಾಡಿ, ಅಂಬ್ಲಮೊಗರು ಶಾಲೆಗೂ ಬಂಟ ಸಮುದಾಯಕ್ಕೂ ಬಹಳಷ್ಟಿದೆ ನಂಟಿದೆ. ೧೦೦ ವರ್ಷಗಳ ಹಿಂದೆ ಸ್ಥಾಪನೆಯಾದ…
ಉಳ್ಳಾಲ: ತೊಕ್ಕೊಟ್ಟು ಓವರ್ ಬ್ರಿಡ್ಜ್ ನಲ್ಲಿ ಕೆಲ ದಿನಗಳ ಹಿಂದೆ ಸಂಚಾರಿ ಅವ್ಯವಸ್ಥೆಯಿಂದ ಉಂಟಾದ ಗೊಂದಲಗಳಿಗೆ ಪರಿಹಾರ ಸಿಗುವಂತೆ ಸ್ಪೀಕರ್ ಯು.ಟಿ.ಖಾದರ್ ನೇತೃತ್ವದ ನಿಯೋಗ ತೊಕ್ಕೊಟ್ಟು ಓವರ್ ಬ್ರಿಡ್ಜ್, ಉಳ್ಳಾಲಬೈಲು, ತೊಕ್ಕೊಟ್ಟು ಜಂಕ್ಷನ್ ಗೆ ಸಂಚಾರಿ ಪೊಲೀಸ್, ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ನಿಯೋಗದೊಂದಿಗೆ ಭೇಟಿ ನೀಡಿ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ತಕ್ಷಣಕ್ಕೆ ಪರಿಹಾರ ಕ್ರಮಗಳನ್ನು ಅನುಸರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತೊಕ್ಕೊಟ್ಟು ಎರಡು ಬದಿಯ ಸರ್ವಿಸ್ ರಸ್ತೆಗಳಲ್ಲಿ ಏಕಮುಖ ಸಂಚಾರ ನಡೆಸಬೇಕು. ಉಳ್ಳಾಲ ಹೋಗುವ ಬಸ್ಸು, ಇತರೆ ವಾಹನಗಳು ಕಾಪಿಕಾಡು ಡಿವೈಡರ್ ದಾಟಿಯೇ ಉಳ್ಳಾಲದ ರಸ್ತೆಯಾಗಿ ತೆರಳಬೇಕು. ತೊಕ್ಕೊಟ್ಟು ಒಳಪೇಟೆ ಸಂಚರಿಸುವ ವಾಹನಗಳು ಉಳ್ಳಾಲಬೈಲ್ ಡಿವೈಡರ್ ದಾಟಿ ಬಳಿಕ ಓವರ್‌ಬ್ರಿಡ್ಜ್ ರಸ್ತೆಯಿಂದ ಇಳಿಯುವಂತೆ ಮಾಡಿದಾಗ ಸಂಚಾರ ವ್ಯವಸ್ಥೆಯಲ್ಲಿ ಅಡಚಣೆಗಳು ಆಗಲು ಸಾಧ್ಯವಿಲ್ಲ. ತೊಕ್ಕೊಟ್ಟುವಿನಿಂದ ಉಳ್ಳಾಲ ವರೆಗಿನ ರಸ್ತೆಬದಿಯ ಅಂಗಡಿಗಳನ್ನು ತೆರವುಗೊಳಿಸಬೇಕು, ಗಿಡಗಂಟೆಗಳನ್ನು ಕಡಿದು ಎರಡು ಬದಿಗಳಲ್ಲಿಯೂ ಸ್ವಚ್ಛತೆಯನ್ನು ಕಾಪಾಡುವಂತೆ ಉಳ್ಳಾಲ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು. ತೊಕ್ಕೊಟ್ಟು ಓವರ್‌ಬ್ರಿಡ್ಜ್ -ಉಳ್ಳಾಲಬೈಲ್ ರಸ್ತೆ…

