ಮಂಜನಾಡಿ : ಕರಾವಳಿ ಜಿಲ್ಲೆಯಲ್ಲಿ ಸೌಹಾರ್ದ, ಸಾಮರಸ್ಯ ಮತ್ತು ಸಹಬಾಳ್ವೆಯ ಸಂದೇಶವನ್ನು ಬಿತ್ತುತ್ತಿರುವ ಸಂಘಟನೆಗಳಲ್ಲಿ ‘ಸಾಯಿ ಫ್ರೆಂಡ್ಸ್ ಅಸೈಗೋಳಿ’ ಪ್ರಮುಖ ಸ್ಥಾನವನ್ನು ಪಡೆದಿದೆ. ಧರ್ಮ, ಜಾತಿ, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ಮಾನವೀಯತೆಯ ನೆಲೆಯಲ್ಲಿ ಸಮಾಜವನ್ನು ಒಗ್ಗೂಡಿಸುವ ಉದ್ದೇಶದಿಂದ ಸ್ಥಾಪನೆಯಾದ ಈ ಸಂಘಟನೆಯು ಇಂದು ಅನೇಕ ಯುವಕರಿಗೆ ಮಾದರಿಯಾಗಿದೆ.ಈ ಸಂಘಟನೆಯ ಸ್ಥಾಪನೆಗೆ ಮುನ್ನುಡಿ ಬರೆದವರು ಸಮಾಜಮುಖಿ ಚಿಂತಕರಾದ ಉದ್ಯಮಿ ಮೈಸೂರು ಬಾವಾ. ಬಾಲ್ಯದ ದಿನಗಳಲ್ಲಿ ಕಂಡಿದ್ದ ಪರಸ್ಪರ ಪ್ರೀತಿ, ವಿಶ್ವಾಸ, ಸ್ನೇಹ ಮತ್ತು ಸಹೋದರತ್ವದ ವಾತಾವರಣ ಮತ್ತೆ ಸಮಾಜದಲ್ಲಿ ನೆಲೆಸಬೇಕು ಎಂಬ ಅವರ ಕನಸು ಇಂದು ಸಾಯಿ ಫ್ರೆಂಡ್ಸ್ ಮೂಲಕ ಸಾಕಾರಗೊಳ್ಳುತ್ತಿದೆ.ಆ ಕನಸನ್ನು ಕಾರ್ಯರೂಪಕ್ಕೆ ತರುವಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅಹರ್ನಿಶಿ ಶ್ರಮಿಸುತ್ತಿರುವ ವ್ಯಕ್ತಿ ಅಶ್ರಫ್ ನಾಟೆಕಲ್. ಅವರು ಕೇವಲ ಸಂಘಟನೆಯ ಅಧ್ಯಕ್ಷ ಅಥವಾ ಮುಖಂಡರಲ್ಲ; ಎಲ್ಲರನ್ನು ಒಗ್ಗೂಡಿಸುವ, ಸಂಕಷ್ಟದ ಸಂದರ್ಭಗಳಲ್ಲಿ ಶಾಂತಿಯ ಸಂದೇಶ ಸಾರುವ, ಯುವಕರಿಗೆ ಮಾರ್ಗದರ್ಶನ ನೀಡುವ ಒಬ್ಬ ಸಮರ್ಥ ಸಾರಥಿ.ಸೌಹಾರ್ದಕ್ಕೆ ಧಕ್ಕೆಯಾಗುವ ಯಾವುದೇ ಘಟನೆ ಸಂಭವಿಸಿದಾಗ ಹಿಂದೂ, ಮುಸ್ಲಿಂ…
Author: UllalaVani
ಉಳ್ಳಾಲ: ಬಿಜೆಪಿಯ ಭದ್ರಕೋಟೆ ಮಾಡೂರಿನ ಅರಸುನಗರಕ್ಕೆ, ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿದ್ದ ಉಸ್ತುವಾರಿ ಸಚಿವರು, ಸಂಸದರು, ಸ್ಥಳೀಯಾಡಳಿತ, ಪಕ್ಷದ ರಾಜ್ಯಾಧ್ಯಕ್ಷರ ಸ್ಪಂಧನೆಯಿಂದ ಗ್ರಾಮದ ಜನರ ೧೮ ವರ್ಷಗಳ ಕನಸು ನನಸಾಗಿದೆ ಎಂದು ಕೋಟೆಕಾರು ಪಟ್ಟಣ ಪಂಚಾಯಿತಿ ಸದಸ್ಯ ಸುಜಿತ್ ಮಾಡೂರು ಹೇಳಿದರು.ಅವರು ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಾಡೂರು ಶಾಲೆ ಎದುರಿನ ಕಾಂಕ್ರೀಟಿಕರಣಗೊಂಡ ಅರಸುನಗರ ೨ ನೇ ಅಡ್ಡರಸ್ತೆ ಹಾಗೂ ೩ ನೇ ಅಡ್ಡರಸ್ತೆಯ ಉದ್ಘಾಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ಗ್ರಾಮದ ಹಿರಿಯ ಸುಂದರಿ ಅವರು ರಸ್ತೆಯನ್ನು ಉದ್ಘಾಟಿಸಿದರು. ೧೮ ವರ್ಷಗಳ ಬಹುಬೇಡಿಕೆಯ ರಸ್ತೆಯ ಕಾಂಕ್ರೀಟಿಕರಣಕ್ಕೆ ಶಾಸಕರು ನೀಡಬೇಕಾದಂತಹ ಅನುದಾನವನ್ನು ಕೌನ್ಸಿಲರ್ ಒದಗಿಸಬಹುದೇ ಅನ್ನುವ ಪ್ರಶ್ನೆಯಿತ್ತು. ಆದರೆ ಬಿಜೆಪಿ ಸರಕಾರದ ಅವಧಿಯಲ್ಲಿ ಉಸ್ತುವಾರಿ ಸಚಿವರಾಗಿದ್ದ ಸುನಿಲ್ ಕುಮಾರ್ ನಗರೋತ್ಥಾನ ಅನುದಾನ, ಅಂದಿನ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರು ರೂ. ೫ ಲಕ್ಷ ಅನುದಾನ ಇಟ್ಟಿದ್ದರು. ನಳಿನ್ ಕಟೀಲ್ ರಾಜ್ಯಾಧ್ಯಕ್ಷರಾಗಿದ್ದ ಸಂದರ್ಭ ತಹಶೀಲ್ದಾರ್ ಅವರನ್ನು ಸ್ಥಳಕ್ಕೆ ಕರೆಸಿ ಸ್ಥಳಿಯಾಡಳಿತದಿಂದ ಅನುದಾನ ಇರಿಸಲು ಸೂಚಿಸಿದಂತೆ ಸ್ಥಳೀಯಾಡಳಿತ ,…
ಮಂಗಳೂರು: ಸಾಮಾಜಿಕ ಜಾಲತಾಣ ಹಾಗೂ ಯೂಟ್ಯೂಬ್ ವೇದಿಕೆಗಳಲ್ಲಿ ಪ್ರಸಾರವಾದ ವಿಡಿಯೊದಲ್ಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 196 ಮತ್ತು 353ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ವಿಡಿಯೊದಲ್ಲಿನ ಕೆಲವು ಹೇಳಿಕೆಗಳು ಧರ್ಮ, ಪ್ರದೇಶ, ಭಾಷೆ ಅಥವಾ ಇತರೆ ಗುರುತುಗಳ ಆಧಾರದ ಮೇಲೆ ದ್ವೇಷ, ವೈಮನಸ್ಸು ಅಥವಾ ಅಸಾಮರಸ್ಯವನ್ನು ಉತ್ತೇಜಿಸುವ ಸಾಧ್ಯತೆಯನ್ನು ಹೊಂದಿವೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಈ ಸಂಬಂಧ ದೂರು ಇಂದು ಸ್ವೀಕರಿಸಲಾಗಿದ್ದು, ಘಟನೆ ನಡೆದ ದಿನ ಸ್ಥಳದಿಂದ ತೆರಳಿದ್ದ ವ್ಯಕ್ತಿಯೊಬ್ಬರು ಬಳಿಕ ಹಿಂದಿರುಗಿ ಅಧಿಕೃತ ದೂರು ಸಲ್ಲಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಆಯುಕ್ತರು , ಪತ್ರಕರ್ತರು ಮತ್ತು ವರದಿಗಾರರ ಜವಾಬ್ದಾರಿ ಘಟನೆಗಳು ಹಾಗೂ ಸತ್ಯಾಂಶಗಳನ್ನು ನಿಷ್ಪಕ್ಷಪಾತವಾಗಿ ವರದಿ ಮಾಡುವುದಾಗಿದೆ. ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ವೈಮನಸ್ಸು ಸೃಷ್ಟಿಸುವುದು, ಸಮಾಜದಲ್ಲಿ ವಿಭಜನೆ ಉಂಟುಮಾಡುವುದು ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವುದು ಯಾವುದೇ ಮಾಧ್ಯಮ…
ಮುಡಿಪು : ಇಲ್ಲಿನ ಪಿ.ಕೆ ಟವರ್ಸ್ ನಲ್ಲಿ ಕಳೆದ ಸುಮಾರು 30 ವರ್ಷಗಳಿಂದ ಭಾರತ್ ಚಿಕನ್ ಸ್ಟಾಲ್ ನಡೆಸುತ್ತಿದ್ದ ಉದ್ಯಮಿ ಇರಾ ಗ್ರಾಮದ ನಿವಾಸಿ ಅಬ್ದುಲ್ ರೆಹಮಾನ್ (55) ಇವರು ಹೃದಯಘಾತಕ್ಕೀಡಾಗಿ ಇಂದು ಸ್ವಗೃಹದಲ್ಲಿ ನಸುಕಿನ ಜಾವ ನಿಧನ ಹೊಂದಿದರು. ಸರಳ ಸ್ವಭಾವದ ಪ್ರಾಮಾಣಿಕ ವ್ಯಕ್ತಿತ್ವದವರಾಗಿದ್ದ ರೆಹಮಾನ್ ಫಜಲ್ ಜುಮಾ ಮಸೀದಿ ಪಂಜಿಕಲ್ಲು ಇರಾ ಮಂಚಿ ಇದರ ಮಾಜಿ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ ಹಾಗೂ ಮೂವರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಇಂದಿನ ಡಿಜಿಟಲ್ ಯುಗದಲ್ಲಿ ವ್ಯಕ್ತಿಯ ಹೆಸರು, ಚಿತ್ರ, ಧ್ವನಿ, ಖಾಸಗಿ ಮಾಹಿತಿ ಮತ್ತು ವ್ಯಕ್ತಿತ್ವವನ್ನು ದುರುಪಯೋಗಪಡಿಸಿಕೊಳ್ಳುವ ಘಟನೆಗಳು ಹೆಚ್ಚಾಗುತ್ತಿವೆ. ಸಾಮಾಜಿಕ ಜಾಲತಾಣಗಳು, ಕೃತಕ ಬುದ್ಧಿಮತ್ತೆ (AI), ಡೀಪ್‌ಫೇಕ್ ತಂತ್ರಜ್ಞಾನ ಮತ್ತು ಡಿಜಿಟಲ್ ಮಾಧ್ಯಮಗಳ ಬೆಳವಣಿಗೆಯಿಂದ ವ್ಯಕ್ತಿಯ ಅನುಮತಿ ಇಲ್ಲದೆ ಅವರ ಫೋಟೋ, ವಿಡಿಯೊ ಅಥವಾ ಧ್ವನಿಯನ್ನು ಬಳಸಿ ಸುಳ್ಳು ಮಾಹಿತಿ ಹರಡುವುದು, ಮಾನಹಾನಿ ಮಾಡುವುದು ಹಾಗೂ ಆರ್ಥಿಕ ಲಾಭ ಗಳಿಸುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಬೆಳವಣಿಗೆಗಳ ನಡುವೆ ವ್ಯಕ್ತಿತ್ವ ಹಿತ ರಕ್ಷಣೆ ಕಾನೂನಿನ ಅಗತ್ಯತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಭಾರತದಲ್ಲಿ “ವ್ಯಕ್ತಿತ್ವ ಹಿತ ರಕ್ಷಣೆ ಕಾನೂನು” ಎಂಬ ಹೆಸರಿನ ಪ್ರತ್ಯೇಕ ಕಾಯ್ದೆ ಇಲ್ಲದಿದ್ದರೂ, ಸಂವಿಧಾನದ ವಿಧಿ 21ರ ಅಡಿಯಲ್ಲಿ ದೊರೆಯುವ ಜೀವಿಸುವ ಹಕ್ಕು, ಖಾಸಗಿತನದ ಹಕ್ಕು ಮತ್ತು ಗೌರವದಿಂದ ಬದುಕುವ ಹಕ್ಕಿನ ಮೂಲಕ ವ್ಯಕ್ತಿಯ ವ್ಯಕ್ತಿತ್ವಕ್ಕೆ ರಕ್ಷಣೆ ಒದಗಿಸಲಾಗುತ್ತಿದೆ. ದೇಶದ ವಿವಿಧ ನ್ಯಾಯಾಲಯಗಳು ವ್ಯಕ್ತಿಯ ಹೆಸರು, ಚಿತ್ರ, ಧ್ವನಿ ಮತ್ತು ಖ್ಯಾತಿಯು ಅವರ ವೈಯಕ್ತಿಕ ಹಕ್ಕಿನ ಭಾಗವಾಗಿದೆ ಎಂದು ಅನೇಕ ತೀರ್ಪುಗಳಲ್ಲಿ ಸ್ಪಷ್ಟಪಡಿಸಿವೆ.…
ಬೊಳಂತೂರು, ಮೇ 30: ಕಳೆದ ಸುಮಾರು ಐದು ದಶಕಗಳ ಕಾಲ ಭಾರತೀಯ ಜನತಾ ಪಕ್ಷದ ಸಕ್ರಿಯ ಹಾಗೂ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ಬೊಳಂತೂರಿನ ಹಿರಿಯ ಮುಖಂಡ ಈಶ್ವರ್ ಭಟ್ ರಾಕೋಡಿ ಅವರು ಬಿಜೆಪಿ ತೊರೆದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಸ್ಥಳೀಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮಾಜಿ ಸಚಿವ ಬಿ. ರಮಾನಾಥ ರೈ ಅವರ ನಿವಾಸದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಈಶ್ವರ್ ಭಟ್ ರಾಕೋಡಿ ಅವರಿಗೆ ಕಾಂಗ್ರೆಸ್ ಪಕ್ಷದ ಶಾಲು ಹೊದಿಸಿ ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಲವು ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಸುಮಾರು 50 ವರ್ಷಗಳ ಕಾಲ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಈಶ್ವರ್ ಭಟ್ ರಾಕೋಡಿ ಅವರು ಪಕ್ಷ ತೊರೆಯುವ ನಿರ್ಧಾರಕ್ಕೆ ಕಾರಣವನ್ನು ವಿವರಿಸಿದ್ದು, ದೀರ್ಘಕಾಲ ಪಕ್ಷಕ್ಕಾಗಿ ದುಡಿದ ಸಾಮಾನ್ಯ ಕಾರ್ಯಕರ್ತರಿಗೆ ಸಮರ್ಪಕ ಗೌರವ ಮತ್ತು ಮಾನ್ಯತೆ ಸಿಗುತ್ತಿಲ್ಲ ಎಂಬ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಪ್ರಾಮಾಣಿಕ ಕಾರ್ಯಕರ್ತರ ಅಭಿಪ್ರಾಯಗಳಿಗೆ ಪಕ್ಷದೊಳಗೆ ಸೂಕ್ತ ಸ್ಪಂದನೆ…
ಮಂಗಳೂರು, ಮೇ. 29 : ಉಡುಪಿಯ ಮಲ್ಪೆ ಬಂದರಿನಿಂದ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿದ್ದ ‘ಭಾಗೀರಥಿ’ ಹೆಸರಿನ ಮೀನುಗಾರಿಕಾ ದೋಣಿ ಮಂಗಳೂರು ಕರಾವಳಿಯಿಂದ ಸುಮಾರು ಐದು ನಾಟಿಕಲ್ ಮೈಲು ದೂರದಲ್ಲಿ ಮುಳುಗಿದ ಘಟನೆ ನಡೆದಿದೆ. ದೋಣಿಯಲ್ಲಿದ್ದ ಎಲ್ಲಾ ಮೀನುಗಾರರನ್ನು ಹತ್ತಿರದ ದೋಣಿಗಳ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿರುವುದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಈ ದೋಣಿ ಬ್ರಹ್ಮಾವರದ ಮಾಬುಕಲ ನಿವಾಸಿ ಜೈ ಸಾಲಿಯಾನ್ ಅವರಿಗೆ ಸೇರಿದ್ದು, ಮೇ 24ರಂದು ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿತ್ತು. ಮೇ 26ರಂದು ಬೆಳಿಗ್ಗೆ ಮಂಗಳೂರಿನಿಂದ ಸುಮಾರು 8 ರಿಂದ 10 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿಯ ಗೇರ್‌ಬಾಕ್ಸ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಬಳಿಕ ಬೆಳಿಗ್ಗೆ 9.30ರ ಸುಮಾರಿಗೆ ದೋಣಿ ದುರಸ್ತಿಗಾಗಿ ಮಂಗಳೂರು ಹಳೆಯ ಬಂದರಿಗೆ ಕರೆತರಲಾಗಿತ್ತು. ದುರಸ್ತಿ ಕಾರ್ಯದ ನಂತರ ಅದೇ ದಿನ ರಾತ್ರಿ ಸುಮಾರು 9.30ಕ್ಕೆ ದೋಣಿ ಅಲೈವ್ ಗೇಟ್ ಮೂಲಕ ಮತ್ತೆ ಸಮುದ್ರಕ್ಕೆ ತೆರಳಿ ಮೀನುಗಾರಿಕೆ ಕಾರ್ಯಾಚರಣೆಯನ್ನು ಪುನರಾರಂಭಿಸಿತ್ತು.ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಸಮುದ್ರದ ಅಡಿಯಲ್ಲಿ ಇದ್ದ…
ಬೆಂಗಳೂರು, ಮೇ. 29 : ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು (ಮೇ 29) ಅಂಗೀಕರಿಸಿದ್ದಾರೆ. ಸಂವಿಧಾನಬದ್ಧವಾಗಿ ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದಾರೆ. ಈ ಬಗ್ಗೆ ಲೋಕಭವನದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಆದರೆ ಹೊಸ ಸರ್ಕಾರ ರಚನೆಯಾಗುವವರೆಗೆ ಸಿದ್ದರಾಮಯ್ಯ ಅವರು ಹಂಗಾಮಿ ಸಿಎಂ ಆಗಲಿದ್ದಾರೆ.ರಾಜ್ಯಪಾಲರು ರಾಜಧಾನಿಯಲ್ಲಿ ಇಲ್ಲದ ಕಾರಣ, ಅವರ ಅನುಪಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಗುರುವಾರ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರು ವಿಶೇಷ ಕಾರ್ಯದರ್ಶಿಗೆ ಹಸ್ತಾಂತರಿಸಿದರು. ರಾಜೀನಾಮೆ ಪತ್ರವನ್ನ ಕಾರ್ಯದರ್ಶಿಗಳು ಸ್ವೀಕರಿಸಿದರೂ, ಸಂವಿಧಾನದ ನಿಯಮಾವಳಿಗಳ ಪ್ರಕಾರ ರಾಜ್ಯಪಾಲರು ಖುದ್ದಾಗಿ ಸಹಿ ಮಾಡಬೇಕಿತ್ತು. ಗುರುವಾರ (ಮೇ 28) ರಾತ್ರಿ ಇಂದೋರ್‌ನಿಂದ ಬೆಂಗಳೂರಿಗೆ ಆಗಮಿಸಿದ್ದ ರಾಜ್ಯಪಾಲರು ಇಂದು ಬೆಳಗ್ಗೆ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಹೀಗಾಗಿ ಹೊಸ ಸರ್ಕಾರ ರಚನೆ ಪ್ರಕ್ರಿಯೆ ಭರದಿಂದ ಸಾಗಿದೆ.ರಾಜ್ಯಪಾಲರು ರಾಜೀನಾಮೆ ಅಂಗೀಕಾರ ಮಾಡಿದ್ದರಿಂದ ಶನಿವಾರ (ಮೇ 30) ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುವ ಸಾಧ್ಯತೆಗಳಿವೆ. ಸಿಎಲ್‌ಪಿ ನಾಯಕರಾಗಿ ಡಿಕೆಶಿ ಆಯ್ಕೆಯಾಗುವುದು…
ಮೂಡುಬಿದಿರೆ,ಮೇ. 28 :ಕಾರ್ಕಳ-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬೆಳುವಾಯಿ ಕಾಂತಾವರ ಕ್ರಾಸ್ ಬಳಿ ಗುರುವಾರ ಖಾಸಗಿ ಬಸ್ ಮತ್ತು ಕಾರು ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಅಪಘಾತದ ಪರಿಣಾಮ ಎರಡೂ ವಾಹನಗಳಿಗೆ ತೀವ್ರವಾಗಿ ಹಾನಿಯಾಗಿದೆ. ಕಾಂತಾವರ ಕ್ರಾಸ್ ಬಳಿಯ ಯು-ಟರ್ನ್ ಅನ್ನು ಬುಧವಾರದಿಂದ ಸಾರ್ವಜನಿಕರಿಗೆ ಸ್ಥಗಿತಗೊಳಿಸಲಾಗಿದ್ದರಿಂದ ಹಠಾತ್ ಸಂಚಾರ ಬದಲಾವಣೆಯ ಹಿನ್ನೆಲೆಯಲ್ಲಿ ಈ ಅಪಘಾತ ಸಂಭವಿಸಿದೆ.ಕಾಂತಾವರ ಕಡೆಯಿಂದ ಮೂಡುಬಿದಿರೆ ಕಡೆಗೆ ಹೋಗುವ ವಾಹನಗಳಿಗೆ ಅಡ್ಡರಸ್ತೆಯನ್ನು ಮುಚ್ಚಿರುವುದರಿಂದ ದೈನಂದಿನ ಸಂಚಾರದಲ್ಲಿ ಭಾರಿ ಗೊಂದಲ ನಿರ್ಮಾಣವಾಗಿದೆ ಕಾಂತಾವರದಿಂದ ಬೆಳುವಾಯಿ ಪಟ್ಟಣವನ್ನು ತಲುಪಲು ಪ್ರಯತ್ನಿಸುವ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಏಕೆಂದರೆ ಅವರು ಈಗ ಅನಿವಾರ್ಯವಾಗಿ ಯು-ಟರ್ನ್ ಮಾಡಲು ಚಿಲಿಂಬಿಯವರೆಗೆ ಹೆಚ್ಚು ದೂರ ಪ್ರಯಾಣಿಸಬೇಕಾಗಿದೆ.ಈ ಪರಿಸ್ಥಿತಿ ಸ್ಥಳೀಯ ಜನರಲ್ಲಿ ತೀವ್ರ ಆಕ್ರೋಶವನ್ನು ಹುಟ್ಟುಹಾಕಿದೆ ಏಕಾಏಕಿ ರಸ್ತೆ ತಡೆ ಮಾಡಿರುವುದು ಅಪಘಾತಗಳಿಗೆ ಕಾರಣ ಎಂದು ನಿವಾಸಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಹೆಸರಿನಲ್ಲಿ ನಡೆಯುತ್ತಿರುವ ಹೂಡಿಕೆ ಯೋಜನೆಗಳು, ಡೆಪಾಸಿಟ್ ಸ್ಕೀಂಗಳು, ಚಿಟ್ ಮಾದರಿಯ ಹಣಕಾಸು ವ್ಯವಹಾರಗಳು ಹಾಗೂ “ಹೆಚ್ಚು ಲಾಭ”ದ ಭರವಸೆ ನೀಡುವ ಖಾಸಗಿ ಹಣಕಾಸು ವ್ಯವಸ್ಥೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಗಂಭೀರ ಆತಂಕ ವ್ಯಕ್ತವಾಗುತ್ತಿದೆ. “ತಿಂಗಳಿಗೆ ಖಚಿತ ಲಾಭ”, “ಕೆಲವೇ ತಿಂಗಳಲ್ಲಿ ಡಬಲ್ ಹಣ”, “ಸೇಫ್ ಇನ್ವೆಸ್ಟ್‌ಮೆಂಟ್”, “ಗ್ಯಾರಂಟಿ ರಿಟರ್ನ್” ಎಂಬ ಜಾಹೀರಾತುಗಳು ಮತ್ತು ಸಾಮಾಜಿಕ ಜಾಲತಾಣಗಳ ಪ್ರಚಾರಗಳ ಮೂಲಕ ಸಾಮಾನ್ಯ ಜನರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿರುವ ಬಗ್ಗೆ ಹಲವು ಆರೋಪಗಳು ಕೇಳಿಬರುತ್ತಿವೆ. ಗ್ರಾಮೀಣ ಭಾಗಗಳಿಂದ ಹಿಡಿದು ನಗರ ಪ್ರದೇಶಗಳವರೆಗೆ ಜನರನ್ನು ಸಂಪರ್ಕಿಸಿ ಹಣ ಸಂಗ್ರಹಿಸುವ ಕೆಲವು ಗುಂಪುಗಳು ಹಾಗೂ ಸಂಸ್ಥೆಗಳ ಚಟುವಟಿಕೆಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತಿವೆ. ಅನೇಕ ಜನರು ಬ್ಯಾಂಕ್ ಬಡ್ಡಿದರಕ್ಕಿಂತ ಹೆಚ್ಚಿನ ಲಾಭ ಸಿಗುತ್ತದೆ ಎಂಬ ನಂಬಿಕೆಯಲ್ಲಿ ತಮ್ಮ ದುಡಿದ ಹಣವನ್ನು ಇಂತಹ ಯೋಜನೆಗಳಿಗೆ ನೀಡುತ್ತಿರುವುದು ಕಂಡುಬರುತ್ತಿದೆ. ಕೆಲವರು ಸಾಲ ಮಾಡಿ, ಕೆಲವರು ನಿವೃತ್ತಿ ಹಣ ಹೂಡಿಕೆ ಮಾಡಿ, ಇನ್ನೂ ಕೆಲವರು ಕುಟುಂಬದ ಭವಿಷ್ಯಕ್ಕಾಗಿ…

