ಮಂಗಳೂರು, ಜ. 21 : ನಗರದ ಪಾಂಡೇಶ್ವರ ಲೆವೆಲ್ ಕ್ರಾಸಿಂಗ್‌ನಲ್ಲಿ ಪದೇಪದೇ ಗೂಡ್ಸ್ ರೈಲು ಹಾಗೂ ಖಾಲಿ ಪ್ಯಾಸೆಂಜರ್ ರೈಲು ಹಾದು ಹೋಗುವುದರಿಂದ ಸಾರ್ವಜನಿಕರಿಗೆ ಉಂಟಾಗುವ ತೊಂದರೆ ಹಾಗೂ ಟ್ರಾಫಿಕ್ ಸಮಸ್ಯೆ ತಪ್ಪಿಸಲು ತುರ್ತಾಗಿ ತಾತ್ಕಾಲಿಕ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮಂಗಳೂರು ವ್ಯಾಪ್ತಿಯ ರೈಲ್ವೆ ಸಮಸ್ಯೆಗಳ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ಸಂಸದರು, ಪಾಂಡೇಶ್ವರ ಲೆವೆಲ್ ಕ್ರಾಸಿಂಗ್‌ನಲ್ಲಿ ದಿನನಿತ್ಯ ಹತ್ತಾರು ಬಾರಿ ಗೂಡ್ಸ್ ಹಾಗೂ ಪ್ಯಾಸೆಂಜರ್ ರೈಲುಗಳು ಮಂಗಳೂರು ಸೆಂಟ್ರಲ್‌ನಿಂದ ಬಂದರ್ ಗೂಡ್ಸ್ ಶೆಡ್‌ಗೆ ಹಾದು ಹೋಗುವ ವೇಳೆ ರೈಲ್ವೆ ಗೇಟ್ ಹಾಕುವುದರಿಂದ ಜನರು ಹೆಚ್ಚು ಹೊತ್ತು ಕಾಯುವ ಪರಿಸ್ಥಿತಿಯಿದೆ. ಹೀಗಾಗಿ, ಈ ಕೂಡಲೇ ರೈಲ್ವೆಗೇಟ್ ಬಳಿ ರೈಲು ಓಡಾಡುವ ಸಮಯದ ಬಗ್ಗೆ ಎಲ್‌ಇಡಿ ಡಿಸ್‌ಪ್ಲೇ ಬೋರ್ಡ್ ಹಾಕಬೇಕು. ಅಲ್ಲದೆ, ಕಚೇರಿ ವೇಳೆಯಲ್ಲಿ ಈ ಮಾರ್ಗದಲ್ಲಿ ರೈಲುಗಳ ಓಡಾಟವನ್ನು ತಡೆ ಹಿಡಿಯುವುದಕ್ಕೆ ಅಗತ್ಯ…
Author: UllalaVani
ಮಂಗಳೂರು : ಮಂಗಳೂರಿನ ಪದವಿನಂಗಡಿ ಪ್ರದೇಶದ ಕೊರಗಜ್ಜ ಕಟ್ಟೆ ಮುಂಭಾಗದಲ್ಲಿ ಇಂದು ಆಕಸ್ಮಿಕವಾಗಿ ಬೃಹತ್ ಗಾತ್ರದ ಮರ ನೆಲಕಚ್ಚಿದೆ. ಮರ ಕೆಳಭಾಗದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಮೇಲೆ ಮರ ಬಿದ್ದ ಪರಿಣಾಮ ಸ್ಕೂಟರ್‌ಗೆ ಭಾರೀ ಹಾನಿಯಾಗಿದ್ದು, ಮರ ಬಿದ್ದ ರಭಸಕ್ಕೆ ಸಮೀಪದಲ್ಲಿದ್ದ ವಿದ್ಯುತ್ ಕಂಬವೂ ಮುರಿದು ಬಿದ್ದಿದೆ.ಅದೃಷ್ಟವಶಾತ್, ಸ್ಕೂಟರ್ ಬಳಿ ಯಾರೂ ಇರದ ಕಾರಣ ಪ್ರಾಣಾಪಾಯ ತಪ್ಪಿದೆ. ಅಲ್ಲದೆ, ಅದೇ ಸಮಯದಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಟೆಂಪೋ ಚಾಲಕ ಮರ ಬೀಳುವ ಕ್ಷಣದಲ್ಲಿ ತಪ್ಪಿಸಿಕೊಂಡು ಪಾರಾಗಿದ್ದಾರೆ. ಮರ ಕುಸಿತದ ಪರಿಣಾಮವಾಗಿ ಸಮೀಪದ ಕಟ್ಟಡವೊಂದರ ಗಾಜುಗಳು ನುಚ್ಚುನೂರಾಗಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಘಟನೆ ನಡೆದ ತಕ್ಷಣ ಮೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದು, ಸ್ಥಳೀಯರ ಸಹಕಾರದೊಂದಿಗೆ ಮರ ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವೆAದು ತಿಳಿದುಬಂದಿದೆ.
ಉಳ್ಳಾಲ: ಉಳ್ಳಾಲದ ಸೀ ಗ್ರೌಂಡ್ ಕಡಲತೀರದ ಪ್ರದೇಶದಲ್ಲಿ ಮಾರಕ ತ್ಯಾಜ್ಯಗಳ ವಿಲೇವಾರಿ ವಿರುದ್ಧ ಸ್ಥಳೀಯರು ಯುನೈಟೆಡ್ ಎಂಪವರ್‌ಮೆoಟ್ ಅಸೋಸಿಯೇಷನ್ ನೇತೃತ್ವದಲ್ಲಿ ಸೀ ಗ್ರೌಂಡ್ ಪ್ರದೇಶದಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ. ಭಿತ್ತಿಫಲಕಗಳನ್ನು ಪ್ರದರ್ಶಿಸಿ ಘೋಷಣೆ ಕೂಗಿದ ಪ್ರತಿಭಟನಕಾರರು, ಪರಿಸರದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಶಾಶ್ವತ ವ್ಯವಸ್ಥೆಯನ್ನು ಕಲ್ಪಿಸುವಂತೆ ಸ್ಥಳೀಯಾಡಳಿತವನ್ನು ಒತ್ತಾಯಿಸಿದ್ದಾರೆ. ಇದೇ ವೇಳೆ ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಮಂಗಳೂರು ಮಾತನಾಡಿ, ಸೀಗ್ರೌಂಡ್ ಕಡಲತೀರದ ಕಸದ ರಾಶಿಯಿಂದಾಗಿ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿದೆ. ಜೊತೆಗೆ ಪರಿಸರ ಮಾಲಿನ್ಯ ಹೆಚ್ಚಾಗಲು ಕಾರಣವಾಗಿದೆ ಎಂದು ಸಮಸ್ಯೆಗಳ ಬಗ್ಗೆ ತಿಳಿಸಿದ್ದಾರೆ. ಅಧ್ಯಕ್ಷತೆ ವಹಿಸಿದ್ದ ಅಬ್ದುಲ್ ರೆಹಮಾನ್ ಹಾಗೂ ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷರಾದ ಇಮ್ತಿಯಾಜ್ ಬಿ.ಕೆ ಅವರು, ಸೀ ಗ್ರೌಂಡ್‌ನ ಇತಿಹಾಸದ ಮಹತ್ವವನ್ನು ಹಾಗೂ ಪರಿಸರ ಸಂರಕ್ಷಣೆಯಲ್ಲಿ ಯುವಕರ ಪಾತ್ರ ಮಹತ್ವವನ್ನು ಸಾರಿದ್ರು. ಇನ್ನು ಪ್ರತಿಭಟನೆಯಲ್ಲಿ ಸ್ಥಳೀಯ ಮಾಜಿ ಕೌನ್ಸಿಲರ್ ಇಬ್ರಾಹೀಂ ಖಲೀಲ್, ಕರ್ನಾಟಕ ರಕ್ಷಣಾ ವೇದಿಕೆ ಉಳ್ಳಾಲ ಘಟಕದ ಅಧ್ಯಕ್ಷರಾಧ ಫೈರೋಜ್ ಕೋಟೆಪುರ, ರಾಜ್ಯ ಘಟಕದ ಸದಸ್ಯರಾದ ಅಶ್ರಫ್…
ಮಂಗಳೂರು: ಕಳೆದ 30 ವರ್ಷಗಳಿಂದ ಪತ್ರಿಕಾ ವಿತರಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಗಳೂರು ಉರ್ವ ನಿವಾಸಿ ನರೇಶ್ (54) ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಕುದ್ರೋಳಿ ಭಾರತ್ ಪತ್ರಿಕಾಲಯದಲ್ಲಿ ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮಂಗಳೂರಿನಾದ್ಯಂತ ಎಲ್ಲಾ ಕಚೇರಿಗಳಲ್ಲಿ ಚಿರಪರಿಚತರಾಗಿದ್ದರು. ತೀವ್ರ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ ಅವರು ಜ.20 ರಂದು ಉರ್ವ ಮನೆಯಲ್ಲಿ ನಿಧನರಾದರು. ಮೃತರು ಪತ್ನಿಯನ್ನು ಅಗಲಿದ್ದಾರೆ.
ಉಳ್ಳಾಲ;ದ.ಕ ಜಿಲ್ಲಾ ಖಾಸಗಿ ಬಸ್ಸಿಗೆ ಸುಮಾರು ವರ್ಷಗಳ ಇತಿಹಾಸವಿದೆ. ಸಾರ್ವಜನಿಕರು 1950 ರಿಂದ 1970ರ ದಶಕದವರೆಗೂ ಬಸಿಗಾಗಿ ಪರದಾಡುತ್ತಿದ್ದರು. ಆದರೆ ಇಂದು ನಿಮಿಷಕ್ಕೊಂದರ0ತೆ ನಮ್ಮ ಜಿಲ್ಲೆಯ ಮೂಲೆ ಮೂಲೆಗೆ, ಹಳ್ಳಿ ಹಳ್ಳಿಗೆ ಬಸ್ ಸಂಚಾರವನ್ನು ಒದಗಿಸಿ ಜಿಲ್ಲೆಯ ಜನರಿಗೆ ಬಸ್ಸು ಸಂಚಾರದ ಚುರುಕನ್ನು ಮುಟ್ಟಿಸಿದ ಸಂಪೂರ್ಣ ಖ್ಯಾತಿ ಜಿಲ್ಲೆಯ ಖಾಸಗಿ ಬಸ್ ಮಾಲಕರಿಗೆ ಸಲ್ಲತ್ತೆ. ಆದರೆ ಇತ್ತಿಚೇಗೆ ಶಕ್ತಿ ಯೋಜನೆ ಮೂಲಕ ಪ್ರೆöÊವೇಟ್ ಬಸ್ ಮಾಲೀಕರಿಗೆ ಹೊಡೆತ ಬಿದ್ದಿದ್ದು, ಅಲ್ಪಸ್ವಲ್ಪ ಆದಾಯಗಳನ್ನು ಗಳಿಸುತ್ತಿದ್ದಾರೆ. ಇದರ ಮಧ್ಯೆ ಬಸ್ ಸೇವೆ ಚೆನ್ನಾಗಿ ಇರುವ ಕಡೆಗಳಲ್ಲಿ ನಿಮಿಷಕ್ಕೊಂದು ಬಸ್ ಓಡಿಸುವ ಮೂಲಕ ಕೆಎಸ್‌ಆರ್‌ಟಿಸಿ ಖಾಸಗಿ ಬಸ್ ಮಾಲೀಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಬಗ್ಗೆ ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘದ ಅಧ್ಯಕ್ಷರಾ ಅಝೀಝ್ ಪರ್ತಿಪ್ಪಾಡಿ ಮಾತನಾಡಿ, ಕಳವಳ ವ್ಯಕ್ತಪಡಿಸಿದ್ದಾರೆ. ಅನಾರೋಗ್ಯಕರ ಪೈಪೋಟಿಯಿಂದಾಗಿ ಖಾಸಗಿ ಬಸ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ಹಲವು ಭಾಗಗಳಲ್ಲಿ ಬಸ್ ಸೇವೆಗಳು ಸರಿಯಾದ ಸಮಯಕ್ಕಿಲ್ಲ. ಅಂತಹ ಕಡೆಗಳಲ್ಲಿ ಬಸ್ಸ್ ಸೇವೆಗಳನ್ನು…
ಬೆಂಗಳೂರು, ಜ. 20: ಡಿಸೆಂಬರ್ 25 ರಂದು ತಡರಾತ್ರಿ ಬೆಂಗಳೂರಿನಿಂದ ಗೋಕರ್ಣಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಬೆಂಕಿಗೆ ಆಹುತಿಯಾಗಿ 8 ಜನ ಪ್ರಾಣ ಕಳೆದುಕೊಂಡಿದ್ದರು.ಈ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಕರ್ನಾಟಕ ಸಾರಿಗೆ ಇಲಾಖೆ ಖಾಸಗಿ ಬಸ್ಗಳಿಗೆ ಕೆಲವೊಂದು ನಿಯಮಗಳನ್ನು ಅನುಸರಿಸುವಂತೆ ಖಡಕ್ ಆಗಿ ಸೂಚನೆ ನೀಡಿದೆ. ವಿಮಾನದಲ್ಲಿ ಟೇಕ್ ಆಫ್ಗೂ ಮುನ್ನ ಗಗನಸಖ-ಸಖಿಯರು ನೀಡುವ ಸಂದೇಶದಂತೆ, ಖಾಸಗಿ ಬಸ್ಗಳಲ್ಲೂ ಸಂದೇಶ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ. ವಿಮಾನದಲ್ಲಿ ಟೇಕ್ ಆಫ್ಫ್ ಆಗುವುದಕ್ಕೂ ಮುನ್ನ ಪ್ರಯಾಣಿಕರಿಗೆ ತುರ್ತು ದ್ವಾರಗಳ ಬಗ್ಗೆ ಮಾಹಿತಿ ನೀಡುತ್ತಾರೆ. ತುರ್ತು ಸಂದರ್ಭಗಳಲ್ಲಿ ತುರ್ತು ನಿರ್ಗಮನದ ಮೂಲಕ ಹೇಗೆ ನಿರ್ಗಮಿಸಬೇಕೆಂದು ತಿಳಿಸುತ್ತಾರೆ. ಆದೇ ರೀತಿಯಲ್ಲಿ ಬಸ್ ಪ್ರಯಾಣಿಕರಿಗೂ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಒಂದು ವೇಳೆ ಪ್ರಯಾಣಿಕರಿಗೆ ಈ ಬಗ್ಗೆ ಮಾಹಿತಿ ನೀಡಲಿಲ್ಲ ಅಂದರೆ, ಖಾಸಗಿ ಬಸ್ ಮಾಲೀಕರ ಮೇಲೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲು ಮುಂದಾಗುತ್ತೇವೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.ಬಸ್ ಹೊರಡುವ ಮುನ್ನ ಪ್ರಯಾಣಿಕರಿಗೆ ಕಂಡಕ್ಟರ್…
ಮಂಗಳೂರು : ಸುಲಿಗೆ ಪ್ರಕರಣದಲ್ಲಿ ಮೂರು ವರ್ಷ ಶಿಕ್ಷೆ ಪ್ರಕಟವಾದ ಬಳಿಕ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ತೊಕ್ಕೊಟ್ಟು ಚಂಬುಗುಡ್ಡೆ, ಪೆರ್ಮನ್ನೂರು ನಿವಾಸಿ ನವೀನ್ ಸಿಕ್ವೇರಾ ( 52) ಎಂದು ತಿಳಿದುಬಂದಿದೆ. ಈತನ ಮೇಲೆ 2011 ಹಾಗೂ 2012ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಠಾಣಾ ಅಕ್ರ ನಂಬರ್ 195/2011 ಕಲಂ 392 ಐಪಿಸಿ ರಂತೆ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2015 ರಲ್ಲಿ ಮೂರು ವರ್ಷಗಳ ಕಠಿಣ ಕಾರವಾಸ ಶಿಕ್ಷೆ ಹಾಗೂ ರೂಪಾಯಿ 5000 ಜುಲ್ಮಾನೆ ವಿಧಿಸಿ ತೀರ್ಪು ನೀಡಿತ್ತು.ಆರೋಪಿಯು ಮಾನ್ಯ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಕ್ರಿಮಿನಲ್ ರಿಟ್ ಪೆಟಿಷನ್ ಅರ್ಜಿ ಸಲ್ಲಿಸಿದ್ದು ಅರ್ಜಿ ಪರಿಶೀಲಿಸಿದ ಮಾನ್ಯ ಉಚ್ಚ ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಒಂದು ವರ್ಷ ಸಾಧಾ ಕಾರವಾಸ ಶಿಕ್ಷೆ ಹಾಗೂ ರೂಪಾಯಿ 15000 ದಂಡ ವಿಧಿಸಿ ಈ ಶಿಕ್ಷೆಯನ್ನು 2022ರ…
ಮಂಗಳೂರು : ಹೊಯಿಗೆ ಬಜಾರ್‌ನ ಬೋಲಾರದಲ್ಲಿರುವ ಅಲ್ಬುಕರ್ಕ್ & ಸನ್ಸ್ ಕಾರ್ಖಾನೆಯಲ್ಲಿ ಮಂಗಳವಾರ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ದಟ್ಟವಾದ ಜ್ವಾಲೆ ಮತ್ತು ಹೊಗೆ ಏರಿದ್ದರಿಂದ ಆತಂಕ ಮನೆಮಾಡಿತ್ತು. ಮಾಹಿತಿ ಪಡೆದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹಲವಾರು ಗಂಟೆಗಳ ಕಾಲ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಯಾವುದೇ ಸಾವುನೋವುಗಳು ಸಂಭವಿಸಿಲ್ಲವೆಂದು ತಿಳಿದುಬಂದಿದೆ.ಬೆಂಕಿಯ ನಿಖರ ಕಾರಣ ಮತ್ತು ಹಾನಿಯ ಪ್ರಮಾಣದ ಬಗ್ಗೆ ಇನ್ನಷ್ಟೇ ಮಾಹಿತಿ ಡೇರೆಯಬೇಕಾಗಿದ್ದು ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಆಗಮಿಸಿದ್ದು ತನಿಖೆ ಆರಂಭಿಸಿದ್ದಾರೆ.
ಕಾಸರಗೋಡು;ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟಿçÃಯ ಹೆದ್ದಾರಿಯ ಚಟ್ಟಂಚಾಲ್ ತೆಕ್ಕಿಲ್ ಎಂಬಲ್ಲಿ ನಡೆದಿದೆ. ಮೃತರನ್ನು ದ.ಕ.ಜಿಲ್ಲೆಯ ಸಜೀಪ್ ಬೈಲುಗುತ್ತು ನಿವಾಸಿ ಸಿ.ಎಸ್ ಮುಹಮ್ಮದ್ ಎಂಬವರ ಪುತ್ರ ಆಸಿಫ್ ಮುಹಮ್ಮದ್ ಮತ್ತು ನಾಟೆಕಲ್ ನಿವಾಸಿ ಅಬ್ಬಾಸ್ ಹಾಜಿ ಎಂಬವರ ಪುತ್ರ ಮುಹಮ್ಮದ್ ಶಫೀಕ್ ಎಂದು ಗುರುತಿಸಲಾಗಿದೆ. ಕಾರಿನಲ್ಲಿ ವಯನಾಡಿಗೆ ಪ್ರವಾಸ ತೆರಳಿದ್ದ ಈ ಐವರು ಗೆಳೆಯರು ಸೋಮವಾರ ರಾತ್ರಿ ಊರಿಗೆ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಇವರು ಪ್ರಯಾಣಿಸುತ್ತಿದ್ದ ಬಿಎಂಡಬ್ಲೂö್ಯ ಕಾರು ಚಟ್ಟಂಚಾಲ್ ತೆಕ್ಕಿಲ್ ಎಂಬಲ್ಲಿಗೆ ತಲುಪಿದಾಗ ಲಾರಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಆಸಿಫ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಶಫೀಕ್ ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜಗುಜ್ಜಾಗಿದೆ. ಕಾರಿನಲ್ಲಿ ಸಿಲುಕಿದವರನ್ನು ಕಾಸರಗೋಡಿನಿಂದ ಆಗಮಿಸಿದ ಅಗ್ವಿ ಶಾಮಕ ದಳದ ಸಿಬ್ಬಂದಿ ಹೊರತೆಗೆದು ಕಾಸರಗೋಡಿನ ಆಸ್ಪತ್ರೆಗೆ…
ಮಂಗಳೂರು: ತಂಡದ ಕೆಲಸ ಮತ್ತು ಸಾಮಾಜಿಕ ಏಕೀಕರಣವನ್ನು ಪ್ರದರ್ಶಿಸುವ ವಿಶಿಷ್ಟ ಕಾರ್ಯಕ್ರಮವೊಂದರಲ್ಲಿ, ಸೈಂಟ್ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲಾ ಹಳೆಯ ವಿದ್ಯಾರ್ಥಿ ಸಂಘವು, ಸೈಂಟ್ ಅಲೋಶಿಯಸ್ ಕಾಲೇಜು ಹಳೆಯ ವಿದ್ಯಾರ್ಥಿ ಸಂಘದ (SACAA) ಸಹಯೋಗದೊಂದಿಗೆ ಭಾನುವಾರ, ಜನವರಿ 18 ರಂದು ‘ಅಲೋಯ್ ಕ್ವಿಜ್-ವಿಜ್ 2026’ ಅನ್ನು ಯಶಸ್ವಿಯಾಗಿ ಆಯೋಜಿಸಿತು. ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿರುವ ಶಾಲಾ ಆವರಣದಲ್ಲಿ ನಡೆದ ಈ ಕಾರ್ಯಕ್ರಮವು, ವಿವಿಧ ಹಿನ್ನೆಲೆಯ ಮತ್ತು ವಿಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಸಾಂಪ್ರದಾಯಿಕ ರಸಪ್ರಶ್ನೆ ಮಾದರಿಯನ್ನು ಹೊಸ ರೂಪದಲ್ಲಿ ಪ್ರಸ್ತುತಪಡಿಸಿತು. ಬೆಳಿಗ್ಗೆ 9:00 ಗಂಟೆಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಸೇರಿದಂತೆ ಸುಮಾರು 200 ಮಂದಿ ಭಾಗವಹಿಸಿದ್ದರು. ಸಾಮಾನ್ಯ ಶೈಕ್ಷಣಿಕ ಸ್ಪರ್ಧೆಗಳಿಗಿಂತ ಭಿನ್ನವಾಗಿ, ಈ ರಸಪ್ರಶ್ನೆಯು ಸಹಾನುಭೂತಿ ಮತ್ತು ಸಹಕಾರವನ್ನು ಬೆಳೆಸಲು ನವೀನ ತಂಡದ ರಚನೆಯನ್ನು ಹೊಂದಿತ್ತು. ಪ್ರತಿ ತಂಡವು ಸಮಾಜದ ವಿವಿಧ ವರ್ಗಗಳ ಪ್ರತಿನಿಧಿಯಾಗಿತ್ತು; ತಂಡದಲ್ಲಿ ಒಬ್ಬ ದೃಷ್ಟಿ ವಿಕಲಚೇತನ ವಿದ್ಯಾರ್ಥಿ, ಒಬ್ಬ…

