ಎಳವೆಯಲ್ಲಿ ಮಕ್ಕಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಆಳವಾದ ತಿಳುವಳಿಕೆಯನ್ನು ಮೂಡಿಸಬೇಕು. ಪರಿಸರ ಸ್ನೇಹಿ ಜೀವನಶೈಲಿಯ ಬಗ್ಗೆ ಆಸಕ್ತಿ ಮೂಡುವಂತೆ ಹೇಳಿದಾಗ ಮಕ್ಕಳಲ್ಲಿ ಪ್ರಕೃತಿಯ ಬಗ್ಗೆ ಪ್ರೀತಿ ಉಂಟಾಗುತ್ತದೆ ನೀರನ್ನು ಉಳಿಸುವುದರ ಬಗ್ಗೆ, ಪ್ಲಾಸ್ಟಿಕ್ ತ್ಯಾಜ್ಯಗಳ ದುಷ್ಪರಿಣಾಮಗಳ ಬಗ್ಗೆ, ಅತಿಯಾದ ವಾಹನ ಬಳಕೆ ಬಗ್ಗೆ, ಶಾಲೆ ಮತ್ತು ಮನೆಯಲ್ಲಿ ಅಗತ್ಯವಿಲ್ಲದಾಗ ದೀಪಗಳನ್ನು ಆರಿಸುವುದರ ಬಗ್ಗೆ ಮುಂತಾದ ದಿನ ನಿತ್ಯದ ಕಾರ್ಯ ಚಟುವಟಿಕೆಗಳಲ್ಲಿ ನಾವುಗಳು ಮಾಡುವ ತಪ್ಪುಗಳನ್ನು ಸರಿ ಪಡಿಸಿ, ಅವುಗಳ ಬಗ್ಗೆ ಮಾರ್ಗದರ್ಶನ ನೀಡಿದಾಗ ಪರಿಸರ ಮೇಲೆ ದೊಡ್ಡ ಸಕರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪರಿಸರವಾದಿ ಕೃಷ್ಣಪ್ಪ ಅವರು ಅಭಿಪ್ರಾಯಪಟ್ಟರು. ಇವರು ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಹರೇಕಳದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯನ್ನು ಸಸಿ ನೆಡುವ ಮುಖೇನ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮೋಹಿನಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ನಿಟ್ಟೆ ಎ ಬಿ ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಸಂಸ್ಥೆಯ ಹಿರಿಯ ಉಪನ್ಯಾಸಕರು…
Author: UllalaVani
ಮಕ್ಕಳ ಸಾಧನೆಯಲ್ಲಿ ತಂದೆ ತಾಯಿಯರ ಪಾತ್ರ ಹಿರಿದು,ಯಾವುದೇ ಸಾಧನೆಗೆ ಬಡತನ ಅಡ್ಡಿ ಬರುವುದಿಲ್ಲ ಎಂಬುದಕ್ಕೆ ಸಿಂಚನ ಸಾಕ್ಷಿ ಯಾಗಿದ್ದಾಳೆ. ಯಾವುದೇ ಟ್ಯೂಷನ್ ಗಳಿಗೆ ಹೋಗದೆ ಸರಕಾರಿ ಶಾಲೆಯಲ್ಲಿ ಶಿಕ್ಷಕರು ಕಲಿಸಿರುವ ವಿಷಯಗಳನ್ನು ಸರಿಯಾಗಿ ಕಲಿತು ಇಂದು ರ್‍ಯಾಂಕ್ ಗಳಿಸಿರುವುದು ಹೆಮ್ಮೆಯ ವಿಚಾರ. ಇಂತಹ ಸಾಧಕರನ್ನು ಅವರ ಮನೆಯಲ್ಲಿ ಹೆತ್ತವರ ಸಮ್ಮುಖದಲ್ಲಿ ಸನ್ಮಾನ ಮಾಡಿದಾಗ ಹೆತ್ತವರ ಶ್ರಮ ಮಕ್ಕಳಿಗೆ ಅರ್ಥವಾಗುವಲ್ಲಿ ಸಂಶಯ ಇಲ್ಲ ಎಂದು ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಅಭಿಪ್ರಾಯಪಟ್ಟರು. ಇವರು ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಇತ್ತೀಚಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6 ನೇ ರ್‍ಯಾಂಕ್ ಗಳಿಸಿದ ಸಿಂಚನಳಿಗೆ ಅವರ ದೇರಳಕಟ್ಟೆ ಮನೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿದರು. ಕರ್ನಾಟಕ ಪಬ್ಲಿಕ್ ಸ್ಕೂಲ್ ಮೊಂಟೆಪದವು ಈ ಶಾಲೆಯ ವಿದ್ಯಾರ್ಥಿನಿ ಯಾಗಿರುವ ಇವಳು ಉಳ್ಳಾಲ ತಾಲೂಕಿಗೆ ಪ್ರಥಮ ಸ್ಥಾನಿಯಾಗಿ ಮೂಡಿಬಂದಿರುತ್ತಾಳೆ.…
ದಕ್ಷಿಣ ಕನ್ನಡ, ಉಡುಪಿ ಹಾಗೂ ಕರಾವಳಿ ಕರ್ನಾಟಕದ ಅನೇಕ ಭಾಗಗಳಲ್ಲಿ ಕಂಡುಬರುವ ಲೆಟರೈಟ್ (ಕೆಂಪು ಕಲ್ಲು) ಕೇವಲ ಕಟ್ಟಡ ನಿರ್ಮಾಣಕ್ಕೆ ಬಳಸುವ ಕಲ್ಲು ಮಾತ್ರವಲ್ಲ. ಅದು ಪ್ರಕೃತಿಯು ಸಾವಿರಾರು ವರ್ಷಗಳಲ್ಲಿ ರೂಪಿಸಿದ ಜಲಸಂಗ್ರಹ ವ್ಯವಸ್ಥೆಯ ಒಂದು ಅವಿಭಾಜ್ಯ ಅಂಗವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಅಕ್ರಮ ಗಣಿಗಾರಿಕೆ, ನಿಯಂತ್ರಣರಹಿತ ಕಲ್ಲು ಕಟಾವು ಮತ್ತು ವಾಣಿಜ್ಯ ಲಾಭದ ಉದ್ದೇಶದಿಂದ ಅನೇಕ ಗುಡ್ಡಗಳು ಹಾಗೂ ಬೆಟ್ಟಗಳು ನಾಶವಾಗುತ್ತಿವೆ. ಜನರು ಇದನ್ನು ಸಾಮಾನ್ಯವಾಗಿ “ರೆಡ್ ಬಾಕ್ಸೈಟ್ ಅಥವಾ ಲೆಟರೈಟ್ ಮಾಫಿಯಾ” ಎಂದು ಕರೆಯುತ್ತಾರೆ. ಈ ಸಮಸ್ಯೆಯನ್ನು ಕೇವಲ ಕಲ್ಲು ತೆಗೆಯುವ ಚಟುವಟಿಕೆಯಾಗಿ ನೋಡಲಾಗದು. ಇದು ಪರಿಸರ, ಕೃಷಿ, ನೀರಿನ ಭದ್ರತೆ ಮತ್ತು ಮುಂದಿನ ಪೀಳಿಗೆಯ ಬದುಕಿನ ಮೇಲೆ ನೇರ ಪರಿಣಾಮ ಬೀರುವ ಗಂಭೀರ ವಿಷಯವಾಗಿದೆ. ವೈಜ್ಞಾನಿಕವಾಗಿ ನೋಡಿದರೆ, ಲೆಟರೈಟ್ ಗುಡ್ಡಗಳು ನೈಸರ್ಗಿಕ ಜಲಸಂಗ್ರಹ ಕೇಂದ್ರಗಳಾಗಿವೆ. ಮಳೆಗಾಲದಲ್ಲಿ ಸುರಿಯುವ ನೀರನ್ನು ಅವು ಹೀರಿಕೊಂಡು ನಿಧಾನವಾಗಿ ಭೂಗರ್ಭಕ್ಕೆ ಇಳಿಸುತ್ತವೆ. ಇದರಿಂದ ಬಾವಿಗಳು, ಕೆರೆಗಳು, ಹೊಳೆಗಳು ಮತ್ತು ನದಿಗಳಿಗೆ ವರ್ಷಪೂರ್ತಿ…
ಕೋಟೆಕಾರ್: ಹಿದಾಯತ್ ನಗರ ಅಲ್ ಹಿದಾಯ ಜುಮಾ ಮಸ್ಜಿದ್ ನಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಮಸೀದಿ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ಪರಿಸರ ದಿನಾಚರಣೆ ಕುರಿತು ವಿಶೇಷ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮಸೀದಿ ಕಾರ್ಯದರ್ಶಿ ಸಿದ್ದೀಕ್ ಟಿ ಎಚ್,ಜಿ ಎ ಇಬ್ರಾಹಿಮ್ ಎಸ್ಸೆಸ್ಸಫ್ ಅಧ್ಯಕ್ಷ ಸಬೀರ್ ಹಿದಾಯತ್ ನಗರ ಇಬ್ರಾಹಿಮ್ ಹಾಗೂ ಕಮಿಟಿ ಸದಸ್ಯರು ಇನ್ನಿತರರು ಭಾಗವಹಿಸಿದರು,
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕ ಮತ್ತು ಸಂಸದರು ಕೇವಲ ಚುನಾಯಿತ ಪ್ರತಿನಿಧಿಗಳಲ್ಲ; ಅವರು ಜನರ ಆಶೋತ್ತರಗಳ ಪ್ರತಿಬಿಂಬವಾಗಿರುತ್ತಾರೆ. ಅಧಿಕಾರವು ಹಕ್ಕು ಮಾತ್ರವಲ್ಲ, ಅದು ಒಂದು ದೊಡ್ಡ ಜವಾಬ್ದಾರಿಯೂ ಆಗಿದೆ. ಆದ್ದರಿಂದ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಕರ್ತವ್ಯವನ್ನೇ ಧರ್ಮ ಎಂದು ತಿಳಿದು ಕೆಲಸ ಮಾಡುವ ಶಾಸಕ-ಸಂಸದರ ಅಗತ್ಯತೆ ಹಿಂದೆಂದಿಗಿಂತ ಹೆಚ್ಚಾಗಿದೆ. ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲಿ, ಅಭಿವೃದ್ಧಿ ಕಾರ್ಯಗಳು ನಡೆಯಲಿ, ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ ಮತ್ತು ಉದ್ಯೋಗದಂತಹ ಮೂಲಭೂತ ಸೌಲಭ್ಯಗಳು ದೊರೆಯಲಿ ಎಂಬ ನಿರೀಕ್ಷೆಯಿಂದ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಆದರೆ ಕೆಲವೊಮ್ಮೆ ರಾಜಕೀಯ ಭಿನ್ನಾಭಿಪ್ರಾಯಗಳು, ಪಕ್ಷ ರಾಜಕಾರಣ ಮತ್ತು ವೈಯಕ್ತಿಕ ಹಿತಾಸಕ್ತಿಗಳು ಜನಸೇವೆಯ ಗುರಿಯನ್ನು ಮರೆಮಾಚುತ್ತವೆ. ಒಬ್ಬ ಉತ್ತಮ ಶಾಸಕ ಅಥವಾ ಸಂಸದ ತನ್ನ ಸ್ಥಾನವನ್ನು ಅಧಿಕಾರದ ಸಂಕೇತವಾಗಿ ಅಲ್ಲ, ಸೇವೆಯ ಅವಕಾಶವಾಗಿ ನೋಡಬೇಕು. ಜನರ ಸಮಸ್ಯೆಗಳನ್ನು ಆಲಿಸುವುದು, ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವುದು, ಸಾರ್ವಜನಿಕ ಹಣದ ಸದ್ಬಳಕೆಯನ್ನು ಖಚಿತಪಡಿಸುವುದು ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರಲು ಪ್ರಯತ್ನಿಸುವುದು ಅವರ ಪ್ರಮುಖ…
ಕೋಟೆಕಾರು, ಜೂನ್ 5: ವಿಶ್ವ ಪರಿಸರ ದಿನಾಚರಣೆ-2026ರ ಅಂಗವಾಗಿ ಕೋಟೆಕಾರು ಪಟ್ಟಣ ಪಂಚಾಯತ್ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಇದೇ ಸಂದರ್ಭದಲ್ಲಿ ಘನತ್ಯಾಜ್ಯ ನಿರ್ವಹಣೆ ನಿಯಮಗಳು-2026ರ ಅನ್ವಯ ನಾಲ್ಕು ವಿಧದ ತ್ಯಾಜ್ಯ ವಿಂಗಡಣೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವೂ ನಡೆಯಿತು. ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಲಾಯಿತು. ಪರಿಸರ ಸಂರಕ್ಷಣೆ, ಹಸಿರು ಪರಿಸರ ನಿರ್ಮಾಣ ಹಾಗೂ ತ್ಯಾಜ್ಯಗಳ ಸಮರ್ಪಕ ವಿಂಗಡಣೆಯ ಮಹತ್ವದ ಕುರಿತು ಆರೋಗ್ಯ ನಿರೀಕ್ಷಕರು ಮಾಹಿತಿ ನೀಡಿದರು. ಮನೆಮನೆಗಳಲ್ಲಿ ತ್ಯಾಜ್ಯವನ್ನು ಒಣ, ತೇವ, ಸ್ಯಾನಿಟರಿ ಹಾಗೂ ಅಪಾಯಕಾರಿ ತ್ಯಾಜ್ಯಗಳಾಗಿ ಪ್ರತ್ಯೇಕಿಸುವ ಅಗತ್ಯವನ್ನು ಅವರು ವಿವರಿಸಿದರು. ಕಾರ್ಯಕ್ರಮದಲ್ಲಿ ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯ ಸತೀಶ್ ಶೆಟ್ಟಿ, ಉಪಾಧ್ಯಕ್ಷ ಪ್ರವೀಣ್ ಬಗಂಬಿಲ, ಸದಸ್ಯರಾದ ಶ್ರೀ ಉದಯಕುಮಾರ್ ಶೆಟ್ಟಿ ಹಾಗೂ ಸೇಲಿಮಾಬೀ, ಮುಖ್ಯಾಧಿಕಾರಿ ಮಾಲಿನಿ, ಪಂಚಾಯತ್ ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು. ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬ ನಾಗರಿಕರೂ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸ್ವಚ್ಛ ಮತ್ತು ಹಸಿರು ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕು…
ಕೋಟೆಕಾರು, ಜೂನ್ 5: ಕೃಷಿಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿರುವುದು ಸಂತಸದ ವಿಚಾರ ಎಂದು ನಟ ಹಾಗೂ ನಿರ್ದೇಶಕ ದೇವದಾಸ್ ಕಾಪಿಕಾಡ್ ಅಭಿಪ್ರಾಯಪಟ್ಟರು. ಅವರು ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ನೇತೃತ್ವದಲ್ಲಿ, ಸಿರಿ ತೋಟಗಾರಿಕೆ ಸಂಘ ಮಂಗಳೂರು ಹಾಗೂ ರೈತ ಕುಡ್ಲ ಪ್ರತಿಷ್ಠಾನದ ಸಹಯೋಗದೊಂದಿಗೆ ಮೂರು ದಿನಗಳ ಕಾಲ ಆಯೋಜಿಸಲಾಗಿರುವ “ಹಲಸು–ಮಾವು ಮೇಳ”ಕ್ಕೆ ಕೋಟೆಕಾರು ಬೀರಿಯ ಕೆವಿಎಸ್‌ಎಸ್ ಕನ್ವೆನ್ಶನ್ ಹಾಲ್‌ನಲ್ಲಿ ಹಲಸಿನ ಕಾಯಿ ತುಂಡರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಕೃಷಿ ಕುಟುಂಬದ ಹಿನ್ನಲೆಯಿಂದ ಬಂದ ನಾನು ಮಾವು ಹಾಗೂ ಹಲಸಿನ ಕಾಯಿಯ ರುಚಿಯನ್ನು ಸವಿದು ಬೆಳೆದವನು. ಹಲಸಿನ ಕಾಯಿಯಿಂದ ಹತ್ತು ಹಲವು ರೀತಿಯ ವಿಭಿನ್ನ ತಿಂಡಿ-ತಿನಿಸುಗಳನ್ನು ತಯಾರಿಸಲಾಗುತ್ತದೆ. ಇಂತಹ ಮೇಳಗಳು ರೈತರಿಗೆ ಉಪಯುಕ್ತವಾಗುವ ಜೊತೆಗೆ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುತ್ತವೆ ಎಂದರು. ಸಿರಿ ತೋಟಗಾರಿಕೆ ಸಂಘದ ಉಪಾಧ್ಯಕ್ಷೆ ಡಾ. ಭಾರತಿ ನಿರ್ಮಲ್ ಮಾತನಾಡಿ, ಮನೆಗಳಲ್ಲಿ ಬೆಳೆದ ತರಕಾರಿಗಳು ಹಾಗೂ ಹಣ್ಣುಗಳು ಜನರಿಗೆ ಲಭ್ಯವಾಗಬೇಕು. ಆ…
ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ನೂತನವಾಗಿ ಖಾತೆ ಹಂಚಿಕೆಯಾಗುತ್ತಿದ್ದಂತೆಯೇ ನೂತನ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಪೂರ್ಣ ಪ್ರಮಾಣದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ರಾಜಧಾನಿಯ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು ಮುಂದಾಗಿರುವ ಅವರು, ತಡರಾತ್ರಿ ಜಯನಗರದ ಜನರಲ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಅಧಿಕಾರಿಗಳಿಗೆ ಮತ್ತು ವೈದ್ಯರಿಗೆ ಬಿಸಿ ಮುಟ್ಟಿಸಿದ್ದಾರೆ. ಆಸ್ಪತ್ರೆಗೆ ಸರ್ಪ್ರೈಸ್ ವಿಸಿಟ್ ನೀಡಿದ ಸಚಿವರು, ಅಲ್ಲಿನ ಸ್ವಚ್ಛತೆ ಹಾಗೂ ರೋಗಿಗಳಿಗೆ ಚಿಕಿತ್ಸೆ ಸರಿಯಾಗಿ ಸಿಗುತ್ತಿದೆಯಾ ಇಲ್ಲವಾ ಎಂಬುದನ್ನು ಖುದ್ದಾಗಿ ಪರಿಶೀಲಿಸಿದರು. ಈ ವೇಳೆ ರಾತ್ರಿ ಪಾಳಯದ ಕರ್ತವ್ಯದಲ್ಲಿದ್ದ ಕೆಲವು ವೈದ್ಯರು ಆಸ್ಪತ್ರೆಗೆ ಗೈರಾಗಿರುವುದು ಸಚಿವರ ಗಮನಕ್ಕೆ ಬಂದಿದೆ. ರೋಗಿಗಳಿಗೆ ತೊಂದರೆ ಕೊಟ್ಟು ಕರ್ತವ್ಯಕ್ಕೆ ಹಾಜರಾಗದ ವೈದ್ಯರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಈ ಬೇಜವಾಬ್ದಾರಿತನದ ಬಗ್ಗೆ ಉನ್ನತ ಮಟ್ಟದ ವಿಚಾರಣೆ ನಡೆಸಲಾಗುವುದು ಎಂದು ಖಡಕ್ ಆಗಿ ಹೇಳಿದ್ದಾರೆ ಇನ್ನು ಆಸ್ಪತ್ರೆಯ ವಾರ್ಡ ಗಳ ರೌಂಡ್ಸ್ ನಡೆಸುತ್ತಿದ್ದ ಸಂದರ್ಭದಲ್ಲಿ ತಪಾಸಣೆಗಾಗಿ ಬಂದಿದ್ದ ಗರ್ಭಿಣಿಯೊಬ್ಬರು ಆಸನಗಳ…
ಮುನ್ನೂರು: ಮಕ್ಕಳ ಉತ್ತಮ ಶಿಕ್ಷಣ ಹಾಗೂ ಸುಗಮ ಕಲಿಕೆಗೆ ನೆರವಾಗುವ ಉದ್ದೇಶದಿಂದ ಶ್ರೀ ಜೈ ವೀರಾಂಜನೇಯ ವ್ಯಾಯಾಮ ಶಾಲೆ ಟ್ರಸ್ಟ್ (ರಿ.), ಕುತ್ತಾರ್-ಮುನ್ನೂರು ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ, ಮುನ್ನೂರುಗೆ ಬೆಂಚ್ ಹಾಗೂ ಕುರ್ಚಿಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಅಗತ್ಯವಾದ ಮೂಲಸೌಕರ್ಯ ಒದಗಿಸುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಟ್ರಸ್ಟ್ ಈ ಸಮಾಜಮುಖಿ ಸೇವಾ ಕಾರ್ಯವನ್ನು ಕೈಗೊಂಡಿದೆ. ಸಂಸ್ಥೆಯ ಈ ಕೊಡುಗೆಯನ್ನು ಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿ, ಟ್ರಸ್ಟ್‌ನ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳು, ಶಾಲಾ ಶಿಕ್ಷಕರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.
ಉಳ್ಳಾಲ, ಜೂನ್ 5: ಮಾರುತಿ ಯುವಕ ಮಂಡಲ (ರಿ.) ಹಾಗೂ ಮಾರುತಿ ಜನಸೇವಾ ಸಂಘ, ಮೊಗವೀರ ಪಟ್ನ, ಉಳ್ಳಾಲ ಇದರ 2025-26ನೇ ಸಾಲಿನ ಮಹಾಸಭೆಯು ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ನೂತನ ಅಧ್ಯಕ್ಷರಾಗಿ ಅನಿಲ್ ಚರಣ್ ಉಳ್ಳಾಲ ಆಯ್ಕೆಯಾಗಿದ್ದಾರೆ. ಪ್ರಧಾನ ಸಂಚಾಲಕರಾಗಿ ಸುಧೀರ್ ವಿ. ಅಮೀನ್, ಗೌರವ ಅಧ್ಯಕ್ಷರಾಗಿ ಕಿರಣ್ ಕುಮಾರ್, ಉಪಾಧ್ಯಕ್ಷರಾಗಿ ಪ್ರಶಾಂತ್ ಬಿ. ಉಳ್ಳಾಲ, ಪ್ರಧಾನ ಕಾರ್ಯದರ್ಶಿಯಾಗಿ ಕಪಿಲ್ ಎಸ್. ಬಂಗೇರ, ಕೋಶಾಧಿಕಾರಿಯಾಗಿ ತಿಲಕ್ ಎಸ್. ಬಂಗೇರ, ಕ್ರೀಡಾ ಕಾರ್ಯದರ್ಶಿಯಾಗಿ ಮಹೇಶ್ ಸಾಲ್ಯಾನ್ ಹಾಗೂ ಜೊತೆ ಕಾರ್ಯದರ್ಶಿಯಾಗಿ ಪವನ್ ಬಂಗೇರ ಆಯ್ಕೆಯಾಗಿದ್ದಾರೆ. ಸಮಿತಿ ಸದಸ್ಯರಾಗಿ ವರದರಾಜ ಬಂಗೇರ, ಸಂದೀಪ್ ಪುತ್ರನ್, ಅಶ್ವಿನ್ ಕೋಟ್ಯಾನ್, ದಿನೇಶ್ ಕರ್ಕೇರ, ವಾಸುದೇವ ಕರ್ಕೇರ, ಅಜಿತ್ ಸುವರ್ಣ ಹಾಗೂ ಪ್ರಕಾಶ್ ತಿಂಗಳಾಯ ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಹಿರಿಯ ಸದಸ್ಯರಾದ ಲೋಕನಾಥ್ ಕೋಟ್ಯಾನ್, ಚೆನ್ನಪ್ಪ ಅಮೀನ್, ರಘವೀರ್ ಗುರಿಕಾರ, ರೂಪೇಶ್, ರಂಜಿತ್,…

