ಮುಡಿಪು, ಜೂನ್ 5: ಬಾಳೆಪುಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೂ ಹಾಕುವ ಕಲ್ಲು ಪಿಎಂ ಶ್ರೀ ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಜನ ಶಿಕ್ಷಣ ಟ್ರಸ್ಟ್ ದಾನಿಗಳ ನೆರವಿನಿಂದ ₹2.40 ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ STEM (Science, Technology, Engineering and Mathematics) ಪ್ರಯೋಗಾಲಯವನ್ನು ಒದಗಿಸಿದೆ. STEM ಲ್ಯಾಬ್ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗೂ ಗಣಿತ ವಿಷಯಗಳನ್ನು ಪ್ರಾಯೋಗಿಕವಾಗಿ ಕಲಿಯಲು ನೆರವಾಗುವ ಆಧುನಿಕ ಕಲಿಕಾ ವ್ಯವಸ್ಥೆಯಾಗಿದೆ. ಇಲ್ಲಿ ವಿದ್ಯಾರ್ಥಿಗಳು ಸ್ವತಃ ಉಪಕರಣಗಳನ್ನು ಬಳಸಿ ವಿವಿಧ ಪ್ರಯೋಗಗಳನ್ನು ನಡೆಸುವ ಮೂಲಕ ಸಂಕೀರ್ಣವಾದ ಗಣಿತ ಮತ್ತು ವಿಜ್ಞಾನ ತತ್ವಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಹೊಸ ಆವಿಷ್ಕಾರಗಳಿಗೆ ಪ್ರೋತ್ಸಾಹ ದೊರೆತು ವೈಜ್ಞಾನಿಕ ಮನೋಭಾವ ಹಾಗೂ ಸೃಜನಶೀಲತೆ ಬೆಳೆಯಲು ಸಹಕಾರಿಯಾಗುತ್ತದೆ. ಎಲ್‌ಕೆಜಿ ಯಿಂದ 8ನೇ ತರಗತಿವರೆಗೆ ಒಟ್ಟು 586 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಹೊಸ STEM ಲ್ಯಾಬ್ ವಿಶೇಷವಾಗಿ 5ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಹೆಚ್ಚು…
Author: UllalaVani
ಕರ್ನಾಟಕದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಘೋಷಿಸಿರುವ 5 ಗ್ಯಾರಂಟಿಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿರುವುದು ಸ್ವಾಗತಾರ್ಹ ಕ್ರಮ. ಆದರೆ ಕೇವಲ ಉಚಿತ ಬಸ್ ಪಾಸ್ ನೀಡುವುದರಿಂದ ಮಾತ್ರ ಸಮಾಜದ ಅಭಿವೃದ್ಧಿ ಸಂಪೂರ್ಣವಾಗುವುದಿಲ್ಲ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಉಚಿತ ಶಿಕ್ಷಣ, ಕರ್ನಾಟಕದ ಪ್ರತಿಯೊಬ್ಬ ನಾಗರಿಕರಿಗೆ ಉಚಿತ ಮತ್ತು ಉತ್ತಮ ಆರೋಗ್ಯ ಸೇವೆ, ಹಾಗೂ ವಿದ್ಯಾವಂತರಿಗೆ ಉದ್ಯೋಗಾವಕಾಶಗಳ ಭರವಸೆ ನೀಡಿದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯವಾಗುತ್ತದೆ. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಎಂಬ ಮೂರು ಮೂಲಭೂತ ಹಕ್ಕುಗಳನ್ನು ಸರ್ಕಾರ ಪರಿಣಾಮಕಾರಿಯಾಗಿ ಒದಗಿಸಿದರೆ, ಗ್ಯಾರಂಟಿ ಯೋಜನೆಗಳ ಉದ್ದೇಶ ಮತ್ತಷ್ಟು ಸಾರ್ಥಕವಾಗಲಿದೆ. “ಉಚಿತ ಬಸ್ ಪಾಸ್ ವಿದ್ಯಾರ್ಥಿಯನ್ನು ಶಾಲೆಗೆ ತಲುಪಿಸುತ್ತದೆ; ಉಚಿತ ಶಿಕ್ಷಣ ಅವನ ಭವಿಷ್ಯವನ್ನು ರೂಪಿಸುತ್ತದೆ. ಉದ್ಯೋಗ ಅವನ ಜೀವನವನ್ನು ಕಟ್ಟಿಕೊಡುತ್ತದೆ.” ಉಸ್ಮಾನ್ ಅಲ್ತಾಫ್
ಜಾಗತಿಕ ಯುಧ್ಧ ಪರಿಣಾಮ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದಾಗಿ ಕೃಷಿ ವಲಯಕ್ಕೆ ದೊಡ್ಡ ಹೊಡೆತ ಉಂಟಾಗಿದೆ. ಈಗಾಗಲೆ ಗದ್ದೆ ಉಳುಮೆ,ಅಡಿಕೆ ತೋಟಗಳಿಗೆ ಮದ್ದು ಸಿಂಪಡಣೆ,ಅಡಿಕೆ ತೋಟಗಳಲ್ಲಿ ಹಾಗೂ ಇತರ ಕಡೆ ಕಳೆನಾಶ ಸಿಂಪಡಣೆ ಹಾಗೂ ಇತರ ಕೆಲಸಗಳು ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ ಅವಲಂಬಿತವಾಗಿದ್ದು ತೈಲ ಬೆಲೆ ಏರಿಕೆಯಿಂದಾಗಿ ರೈತರಿಗೆ ಹಾಗೂ ಕೃಷಿವಲಯಕ್ಕೆ ನಷ್ಟ ಉಂಟಾಗಿದೆ.ಕೂಲಿಯಾಳುಗಳ ಕೊರತೆಯಿಂದ ಕೃಷಿ ಚಟುವಟಿಕೆಗಳು ಹಿನ್ನಡೆಗೊಂಡಿದ್ದರೂ ರೈತರು ಯಾಂತ್ರಿಕ ಕೃಷಿ ಚಟುವಟಿಕೆಯತ್ತ ಗಮನ ಹರಿಸಿದ್ದರು.ಕೃಷಿ ಸರಕು ಸಾಗಣೆಯ ವಾಹನಗಳಿಗೆ ದುಬಾರಿ ಖರ್ಚು ತಗುಲಿದ್ದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.ಆದ್ದರಿಂದ ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ ಕೃಷಿ ಯಂತ್ರೋಪಕರಣ ಹಾಗೂ ವಾಹನಗಳಿಗೆ ಡಿಸೇಲ್ ಸಬ್ಸಿಡಿ ನೀಡಬೇಕೆಂದು ದ.ಕ ಜಿಲ್ಲೆಯ ಸಂಸದರು ಹಾಗೂ ಶಾಸಕರಿಗೆ ಮನವಿ ಮಾಡುತ್ತ ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಇವರಲ್ಲಿ ಮನವಿ ಮಾಡಲಾಗುವುದು ಎಂದು ಕ.ರಾ.ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ್ ಶೆಟ್ಟಿ ನಡಿಕಂಬಳಗುತ್ತು ಹಾಗೂ ಕ.ರಾ.ರೈತ ಸಂಘ ದ.ಕ ಜಿಲ್ಲಾಧ್ಯಕ್ಷರಾದ ಶ್ರೀಧರ…
ಬೆಂಗಳೂರು, ಜೂನ್ 04: ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸರ್ಕಾರ ರಚನೆಯಾದ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಬಿರುಸು ಪಡೆದುಕೊಂಡಿವೆ. ಸಿಎಂ ಡಿಕೆಶಿ ಜೊತೆ ನಿನ್ನೆ (ಜೂನ್ 03) ಡಿಸಿಎಂ ಆಗಿ ಡಾ.ಜಿ. ಪರಮೇಶ್ವರ್ ಮತ್ತು 12 ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದರು. ಮೊದಲ ಹಂತದಲ್ಲಿ ಕೆಲ ನಾಯಕರಷ್ಟೇ ಸಂಪುಟಕ್ಕೆ ಸೇರ್ಪಡೆಯಾಗಿದ್ದು, ಸಾಕಷ್ಟು ಚರ್ಚೆ ಬಳಿಕ ಈ ನಿರ್ಧಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಬಂದಿತ್ತು. ಹೀಗಾಗಿ ರಾಜ್ಯ ಕಾಂಗ್ರೆಸ್ ನಾಯಕರ ನಡುವೆಯೇ ಹತ್ತು ಹಲವು ಲೆಕ್ಕಾಚಾರಗಳು ಶುರುವಾಗಿವೆ. ಪ್ರಮಾಣವಚನ ಸ್ವೀಕರಿಸಿರುವ ನೂತನ ಸಚಿವರಿಗೆ ಇನ್ನೂ ಯಾವುದೇ ಖಾತೆ ಹಂಚಿಕೆ ಆಗಿಲ್ಲ. ಹೀಗಾಗಿ ಸಂಭವನೀಯ ಖಾತೆಗಳ ಬಗ್ಗೆಯೂ ಸಾಕಷ್ಟು ಚರ್ಚೆಗಳು ಶುರುವಾಗಿವೆ. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರು ಸಚಿವ ಎಂ.ಬಿ.ಪಾಟೀಲ್, ಸಚಿವರಿಗೆ ಖಾತೆ ಹಂಚಿಕೆ ಮುಖ್ಯಮಂತ್ರಿಗಳ ಪರಮಾಧಿಕಾರ. ಹೈಕಮಾಂಡ್ ಹೇಳಿದ್ದನ್ನು ಸಂತೋಷದಿಂದ ಸ್ವೀಕಾರ ಮಾಡಿದ್ದೇವೆ ಎಂದಿದ್ದಾರೆ. ಯಾವುದೇ ಖಾತೆಯನ್ನು ಕೊಟ್ಟರೂ ನಾನು ನಿಭಾಯಿಸುತ್ತೇನೆ. ಖಾತೆ ಯಾವುದು ಅನ್ನೋದು ಮುಖ್ಯವಲ್ಲ, ಕೆಲಸ…
ಬೆಂಗಳೂರು : ರಾಜ್ಯ ರಾಜಕಾರಣದ ಪ್ರಮುಖ ಸ್ಥಿತ್ಯಂತರದಲ್ಲಿ, ಸಿದ್ದರಾಮಯ್ಯ ಅವರ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ.ಶಿವಕುಮಾರ್ ಅಧಿಕೃತವಾಗಿ ಅಲಂಕರಿಸಿದ್ದಾರೆ. ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶಿವಕುಮಾರ್ ಅವರ ಹೊಸ ಸಂಪುಟಕ್ಕೆ ಕರಾವಳಿಯ ಪ್ರಭಾವಿ ನಾಯಕ ಹಾಗೂ ಮಾಜಿ ಸ್ಪೀಕರ್ ಯು.ಟಿ.ಖಾದರ್ ಅವರು ಸಚಿವರಾಗಿ ಸೇರ್ಪಡೆಗೊಳ್ಳುವ ಮೂಲಕ ಬಲ ತುಂಬಿದ್ದಾರೆ. ಉಳ್ಳಾಲ ಕ್ಷೇತ್ರದ ಶಾಸಕರಾಗಿರುವ ಯು.ಟಿ.ಖಾದರ್ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಉಳ್ಳಾಲ ಕ್ಷೇತ್ರವಾಗಿ ಪ್ರಚಲಿತವಾಗಿದ್ದ, ಈಗಿನ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ 2007ರಲ್ಲಿ ಶಾಸಕರಾಗಿದ್ದ ಯು.ಟಿ. ಫರೀದ್ ಅವರ ನಿಧನದಿಂದ ತೆರವಾದ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ದಿವಂಗತ ಫರೀದ್ ಅವರ ಪುತ್ರ ಯು.ಟಿ.ಖಾದರ್ ಅವರು ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದವರು. ಅಲ್ಲಿಂದ ಇಲ್ಲಿಯವರೆಗೆ ಅಂದರೆ ಐದು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಸೋಲಿಲ್ಲದ ಸರದಾರನಾಗಿ ಮಂಗಳೂರು ಕ್ಷೇತ್ರವನ್ನು ಯು.ಟಿ.ಖಾದರ್ ಪ್ರತಿನಿಧಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಆಡಳಿತದಲ್ಲಿ ಹಲವು ಮಂತ್ರಿಗಿರಿಯ ಜತೆಗೆ ಅತ್ಯುನ್ನತ ಸ್ಥಾನವಾದ ವಿಧಾನಸಭಾ ಸ್ಪೀಕರ್ ಹುದ್ದೆಯನ್ನು ಸುಮಾರು…
ದುಬೈ,ಜೂ. 04: ಮೇ 30 ರ ಮಧ್ಯಾಹ್ನ ದುಬೈ ನ ಫಿಶೇರ್ ಮನ್ಸ್ ಹಬ್ ನಲ್ಲಿ ಹೊಸ ತುಳು ಚಿತ್ರ ‘ಕಜ್ಜ’ದ ಆಡಿಯೋ, ಟ್ರೇಲರ್ ಮತ್ತು ಸಂಗೀತ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಹೆಚ್ಚು ನಿರೀಕ್ಷಿತ ತುಳು ವೈಶಿಷ್ಟ್ಯಪೂರ್ಣ ಚಿತ್ರ ‘ಕಜ್ಜ’ ತನ್ನ ಆಡಿಯೋ, ಟ್ರೇಲರ್ ಮತ್ತು ಸಂಗೀತದ ಅದ್ದೂರಿ ಬಿಡುಗಡೆಯನ್ನು ದುಬೈನಲ್ಲಿ ಏಕಾಲದಲ್ಲಿ ನೆರವೇರಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಸುಮುಖ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಸಮಾರಂಭದಲ್ಲಿ ಪ್ರಮುಖ ಉದ್ಯಮಿಗಳು, ಸಮುದಾಯದ ಗಣ್ಯರು ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು.ಈ ಚಿತ್ರವನ್ನು ನಿರ್ಮಾಪಕ ವಿಶಾಂತ್ ಮೆನೇಜಸ್ ನಿರ್ಮಿಸಿದ್ದು, ಜಿಷ್ಣು ಮೆನನ್ ಮತ್ತು ಸಿದ್ಧಾರ್ಥ್ ಶೆಟ್ಟಿ ಅವರ ನಿರ್ದೇಶಕ ದ್ವಯರು ನಿರ್ದೇಶಿಸಿದ್ದಾರೆ.ಗಣ್ಯರ ಸಮ್ಮಿಲನಸಮಾರಂಭಕ್ಕೆ ಮುಖ್ಯ ಅತಿಥಿಗಳು ಮತ್ತು ಗೌರವಾನ್ವಿತ ಆಹ್ವಾನಿತರ ಅದ್ದೂರಿ ಸಮೂಹವು ಕಳೆ ತಂದಿತು. ಪ್ರಮುಖ ವ್ಯಕ್ತಿಗಳಾದ ಡಾ. ಬಿ.ಆರ್. ಶೆಟ್ಟಿ, ಸರ್ವೋತ್ತಮ ಶೆಟ್ಟಿ, ಜೇಮ್ಸ್ ಮೆಂಡೋನ್ಸಾ, ವಿನೋದ್ ಶೆಟ್ಟಿ, ದಿವಾಕರ್ ಶೆಟ್ಟಿ, ಓಸ್ವಾಲ್ಡ್ ರೋಡ್ರಿಗಸ್ – ಸಿಇಒ, ಅಸೈಡ್ ಲಾಜಿಸ್ಟಿಕ್ಸ್, ಆದಿತ್…
ಬೆಂಗಳೂರು, ಜೂ. 04; ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಡಿ.ಕೆ ಶಿವಕುಮಾರ್ ಅವರು ನಾಗರಭಾವಿಯಲ್ಲಿರುವ ಅಜ್ಜಯ್ಯನ ಶಾಖಾ ಮಠಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದರು. ಸತತ 2:15 ಗಂಟೆ ಅಜ್ಜಯ್ಯನ ಜೊತೆ ಮಾತುಕತೆ ನಡೆಸಿದರು. ಮುಂದಿನ ರಾಜಕೀಯ ನಡೆ, ಆಡಳಿತ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು. ಬಳಿಕ ಅಜ್ಜಯ್ಯನ ಆಶಿರ್ವಾದ ಪಡೆದು ತೆರಳಿದರು.ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅವರು ಬುಧವಾರ (ಜೂ.3) ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕರಿಸುವ ಮೊದಲು ವೇದಿಕೆಯಲ್ಲಿ ಡಿಕೆ ಶಿವಕುಮಾರ್ ನೆಲಕ್ಕೆ ಅಡ್ಡ ಬಿದ್ದು ನಮಸ್ಕರಿಸಿದರು. ಬಳಿಕ ಅಜ್ಜಯ್ಯನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದರು.
ಉಡುಪಿ, ಜೂ. 04: ಆಕಸ್ಮಿಕವಾಗಿ ಬಾವಿಗೆ ಬಿದ್ದ ದಂಪತಿಯನ್ನು ರಕ್ಷಿಸಿದ ಘಟನೆ ಕೆಮ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜು ಸಮೀಪ ನಡೆದಿದೆ. ಕೆಮ್ಮಣ್ಣು ನಿವಾಸಿ ಗೋಪಾಲಕೃಷ್ಣ(65) ಹಾಗೂ ಶ್ಯಾಮಲಾ(60) ರಕ್ಷಿಸಲ್ಪಟ್ಟ ದಂಪತಿ. ಶ್ಯಾಮಲಾ ಮನೆ ಸಮೀಪದ ಬಾವಿಯ ಬಳಿ ಹೋದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದರೆನ್ನಲಾಗಿದೆ.ಇದನ್ನು ಗಮನಿಸಿದ ಅವರ ಪತಿ ಗೋಪಾಲಕೃಷ್ಣ ಪತ್ನಿಯನ್ನು ರಕ್ಷಿಸಲು ಬಾವಿಗೆ ಹಾರಿದರೆಂದು ತಿಳಿದುಬಂದಿದೆ. ಕೂಡಲೇ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಈಶ್ವರ ಮಲ್ಪೆ ಈಶ್ವರ ಮಲ್ಪೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ, ಬಾವಿಗೆ ಬಿದ್ದ ದಂಪತಿಯನ್ನು ಹಗ್ಗದ ನೆರವಿನೊಂದಿಗೆ ಮೇಲಕ್ಕೆತ್ತಿದ್ದಾರೆ.ತೀವ್ರವಾಗಿ ಅಸ್ವಸ್ಥಗೊಂಡ ದಂಪತಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಮಲ್ಪೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಉಳ್ಳಾಲ: ತೊಕ್ಕೊಟ್ಟು ಶಕ್ತಿಭಾರತ್ ವ್ಯಾಯಾಮ ಶಾಲೆಯ ಸಕ್ರಿಯ ಸದಸ್ಯರು, ಪದಾಧಿಕಾರಿ, ರಾಷ್ಟ್ರಮಟ್ಟದ ಪವರ್ ಲಿಫ್ಟರ್ ಆಗಿರುವ ಉಳ್ಳಾಲಬೈಲ್ ನಿವಾಸಿ ಸಂತೋಷ್ ಪೂಜಾರಿ (45) ವೆಲ್ಡಿಂಗ್ ವೃತ್ತಿ ನಿರ್ವಹಿಸುತ್ತಿದ್ದ ಸಂದರ್ಭ ಕಟ್ಟಡದಿಂದ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಪದವಿನಂಗಡಿ ಸಮೀಪ ಇಂದು ಸಂಜೆ ವೇಳೆ ಸಂಭವಿಸಿದೆ. ದಿ| ಸುಂದರ್ ಪೂಜಾರಿ ಪುತ್ರನಾಗಿದ್ದ ಇವರು ಐದು ವರ್ಷಗಳ ಕಾಲ ಒಮಾನ್ ನ ಮಸ್ಕತ್ ನಲ್ಲಿ ವೆಲ್ಡಿಂಗ್ ವೃತ್ತಿಯನ್ನು ನಿರ್ವಹಿಸುತ್ತಿದ್ದರು. ಮದುವೆ ನಂತರ ಊರಿಗೆ ಬಂದವರು ವಾಪಸ್ಸು ತೆರಳಿರಲಿಲ್ಲ. ಮನೆ ಸಮೀಪವೇ ವರ್ಕ್ ಶಾಪ್ ಆರಂಭಿಸಿ ಕೆಲಸ ನಿರ್ವಹಿಸುತ್ತಿದ್ದರು. ಪದವಿನಂಗಡಿ ಸಮೀಪದ ಕಟ್ಟಡದಲ್ಲಿ ವೃತ್ತಿ ನಿರ್ವಹಿಸುತ್ತಿರುವ ಸಂದರ್ಭ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಮೃತದೇಹವನ್ನು ನಗರದ ತೇಜಸ್ವಿನಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಅನೇಕ ಸ್ಪರ್ಧಾಳುಗಳನ್ನು ತಯಾರಿಸಿದಂತಹ ತೊಕ್ಕೊಟ್ಟು ಭಟ್ನಗರದ ಶಕ್ತಿ ಭಾರತ್ ವ್ಯಾಯಾಮ ಶಾಲೆಯಲ್ಲಿ ಸಂತೋಷ್ ಅವರು ಸಕ್ರಿಯ ಸದಸ್ಯರಾಗಿದ್ದರು. ಅಲ್ಲದೇ ಶಾಲೆಯಿಂದ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟರ್…
ಮುಡಿಪು : ಯಾವುದೇ ಧರ್ಮಕ್ಕೂ ಬೇಧಭಾವವಿಲ್ಲದೇ, ಸಿಕ್ಕ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಾ, ತನ್ನ ಕ್ಷೇತ್ರದ ಜನರೊಂದಿಗೇ ಸದಾ ಇದ್ದುಕೊಂಡು ಯಶಸ್ವಿ ರಾಜಕಾರಣಿಗೆ ಮತ್ತೆ ಸಚಿವ ಸ್ಥಾನ ಒಲಿದಿರುವುದು ಕ್ಷೇತ್ರದ ಜನತೆಗೆ ಹೆಮ್ಮೆಯ ವಿಚಾರ ಎಂದು ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರತಾಪ್ ಚಂದ್ರ ಕರ್ಕೇರ ಅಭಿಪ್ರಾಯಪಟ್ಟರು. ಅವರು ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಮುಡಿಪು ಜಂಕ್ಷನ್ನಿನಲ್ಲಿ ಹಮ್ಮಿಕೊಳ್ಳಲಾದ ನೂತನ ಮುಖ್ಯಮಂತ್ರಿ ಡಿಕೆಶಿ ಹಾಗೂ ನೂತನ ಸಚಿವರಾಗಿ ಅಧಿಕಾರ ವಹಿಸಿಕೊಂಡ ಯು.ಟಿ.ಖಾದರ್ ಅವರ ಸಂಭ್ರಮವನ್ನು ಆಚರಿಸಿ ಅಂಗಡಿ ಮುಂಗಟ್ಟುಗಳಿಗೆ ಹಾಗೂ ಸಾರ್ವಜನಿಕರಿಗೆ ಸಿಹಿತಿಂಡಿ ವಿತರಿಸಿ, ಪಟಾಕಿ ಸಿಡಿಸಿ ಆಚರಿಸಿದರು. ಕಳೆದ ಮೂರು ವರ್ಷಗಳಿಂದ ಸ್ಪೀಕರ್ ಸ್ಥಾನದಲ್ಲಿದ್ದುಕೊಂಡು ಪಕ್ಷದ ಪ್ರಾಥಮಿಕ ಸದಸ್ಯತನಕ್ಕೆ ರಾಜೀನಾಮೆ ಕೊಟ್ಟರೂ, ಕಾರ್ಯಕರ್ತರ ಕಷ್ಟ ಸುಖಗಳಿಗೆ ಸದಾ ಬೆನ್ನೆಲುಬಾಗಿ ನಿಂತವರು. ಪಕ್ಷದ ಮೇಲಿನ ಪ್ರೀತಿ ಹಾಗೂ ಗೌರವ ಅವರನ್ನು ಮತ್ತೆ ಜವಾಬ್ದಾರಿ ವಹಿಸುವಂತೆ ಮಾಡಿದೆ. ಪಕ್ಷಕ್ಕಾಗಿ ಸದಾ ತ್ಯಾಗ ಮಾಡಿದ ಕಾರ್ಯಕರ್ತರಿಗೆ ಸದಾ ಆತ್ಮಸ್ಥೈರ್ಯ ತುಂಬುವ ಡಿ.ಕೆ.ಶಿವಕುಮಾರ್…

