Author: UllalaVani

Kannada News From Coastal Karnataka

ನವದೆಹಲಿ,ಏ. 23; ನ್ಯಾಯಾಲಯದ ವಿಚಾರಣೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಹಿನ್ನೆಲೆ ದೆಹಲಿ ಹೈಕೋರ್ಟ್ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಹೊಸ ಅಬಕಾರಿ ನೀತಿಯಲ್ಲಿ ಅಕ್ರಮ ಆರೋಪ ಪ್ರಕರಣದಲ್ಲಿ ಕೇಜ್ರಿವಾಲ್ ಅವರು ವೈಯಕ್ತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ವಾದವನ್ನು ಮಂಡಿಸಿದ್ದರು. ಬಳಿಕ ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.ನ್ಯಾಯಾಲಯದ ವಿಚಾರಣೆಯ ವಿಡಿಯೋಗಳನ್ನು ಹರಡುವುದು ನ್ಯಾಯಾಂಗದ ಗೌರವ ಮತ್ತು ಮಾನವನ್ನು ಕುಂಠಿತಗೊಳಿಸುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.ಆದ್ದರಿಂದ ಇಂತಹ ವಿಷಯಗಳನ್ನು ತಕ್ಷಣ ತೆಗೆದುಹಾಕಬೇಕು ಎಂದು ಆದೇಶಿಸಿದೆ. ನ್ಯಾಯಮೂರ್ತಿ ಸ್ವರ್ಣಾ ಕಾಂತಾ ಶರ್ಮಾ ಅವರು ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ವಿಡಿಯೋಗಳನ್ನು ತೆಗೆದುಹಾಕುವಂತೆ ಫೇಸ್‌ಬುಕ್, ಗೂಗಲ್, ಎಕ್ಸ್ ಸೇರಿದಂತೆ ಸಾಮಾಜಿಕ ಮಾಧ್ಯಮ ಮಧ್ಯಸ್ಥರಿಗೆ ಮತ್ತು ಸರ್ಚ್ ಎಂಜಿನ್‌ಗಳಿಗೆ ನಿರ್ದೇಶನ ನೀಡಿದ್ದಾರೆ.ಇನ್ನೂ ಪತ್ರಕರ್ತ ರವೀಶ್ ಕುಮಾರ್ ಸೇರಿದಂತೆ ವಿಡಿಯೋ ಅಪ್‌ಲೋಡ್ ಮಾಡಿದ ಇತರ ವ್ಯಕ್ತಿಗಳಿಗೂ ನೋಟಿಸ್ ಜಾರಿ ಮಾಡಲಾಗಿದೆ.

Read More

ಉಳ್ಳಾಲ‌: ಮುಡಿಪು ಉತ್ಸವ ಸಮಿತಿ, ಕೃಷಿಕ ಸಮಾಜ ಉಳ್ಳಾಲ‌ ಹಾಗೂ ಯು.ಟಿ‌.ಫರೀದ್ ಚಾರಿಟೇಬಲ್ ಫೌಂಡೇಶನ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳು ಮತ್ತು ಸರ್ಕಾರಿ ಇಲಾಖೆಗಳ ಸಹಭಾಗಿತ್ವದಲ್ಲಿ ಬೃಹತ್ ಕೃಷಿ ಮೇಳ ಹಾಗೂ ಮುಡಿಪು ಉತ್ಸವ ಏ.24ರಿಂದ 26ರವರೆಗೆ ಮುಡಿಪು ಬೆಟ್ಟದ ಬಳಿ ನಡೆಯಲಿದೆ ಎಂದು ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ದೇವದಾಸ್ ಭಂಡಾರಿ ತಿಳಿಸಿದರು. ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿದಾನಸಭಾಧ್ಯಕ್ಷ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ಏ.24ರಂದು ಬೆಳಗ್ಗೆ 9:30ಕ್ಕೆ ಕೃಷಿ ಸಚಿವ ಚೆಲುವರಾಯ ಸ್ವಾಮಿ ಕೃಷಿ ಮೇಳ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉತ್ಸವ ಹಾಗೂ ಸಂಸದ ಕ್ಯಾ.ಬ್ರಿಜೇಶ್ ಚೌಟ ಆಹಾರ ಮೇಳ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಧ್ಯಾನ ಮಂದಿರದ ಸ್ಥಾಪಕ ಡಾ.ಮದನ್ ಮೋಹನ್ ನಾಯಕ್ ಅಡೇಕಳ‌ ಇವರಿಗೆ ‘ಸೇವಾ ಧುರಂಧರ’ ಪ್ರಶಸ್ತಿ, ಮಾನವ ಹಕ್ಕು ಅಯೋಗದ ಅಧ್ಯಕ್ಷ ಶ್ಯಾಮ್ ಭಟ್, ಯೇನೆಪೊಯ ವಿವಿ ಕುಲಾಧಿಪತಿ ವೈ.ಅಬ್ದುಲ್ಲಾ ಕುಂಞಿ, ಅದಾನಿ ಗ್ರೂಪ್…

Read More

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ವಿದೇಶದಲ್ಲೂ ದೇಶವಿರೋಧಿ ಹೇಳಿಕೆ ನೀಡುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಟೀಕಿಸಿದರು.ಖರ್ಗೆ ಮತ್ತು ರಾಹುಲ್ ಗಾಂಧಿಯವರು ಭಾರತ ವಿರೋಧಿಗಳು ಎಂದು ಆಕ್ಷೇಪಿಸಿದರು. ಇವರು ವಿದೇಶಿ ಏಜೆಂಟರಂತೆ ನಡೆದುಕೊಳ್ಳುತ್ತಿದ್ದಾರೆ. ಇವರಿಬ್ಬರು ಜಾರ್ಜ್ ಸೊರೊಸ್ ಏಜೆಂಟರು ಎಂದು ಟೀಕಿಸಿದರು. ಅವರ ಮಾನಸಿಕತೆಗೆ ತಕ್ಕಂತೆ ಇವರು ಭಾರತದಲ್ಲಿ ಕುಣಿಯುತ್ತಿದ್ದಾರೆ ಎಂದು ಖಂಡಿಸಿದರು. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಖರ್ಗೆಯವರ ಮಾತು ಅಕ್ಷಮ್ಯ ಅಪರಾಧ ಮತ್ತು ದೇಶಕ್ಕೆ ಮಾಡಿದ ಅವಮಾನ ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷದವರು ಕುಕ್ಕರ್ ಬ್ಲಾಸ್ಟ್ ಆರೋಪಿಯನ್ನು ಬ್ರದರ್ಸ್ ಎಂದು ಕರೆದಿದ್ದಾರೆ ಎಂದು ಆಕ್ಷೇಪಿಸಿದರು.ವಿಧಾನಸೌಧದಲ್ಲಿ ಖರ್ಗೆಯವರ ಬಲಗೈ ಬಂಟ, ರಾಜ್ಯಸಭಾ ಸದಸ್ಯ ಪಾಕಿಸ್ತಾನ ಜಿಂದಾಬಾದ್ ಎಂದಿದ್ದರು. ಇದನ್ನು ಖರ್ಗೆಯವರು ಖಂಡಿಸಿರಲಿಲ್ಲ ಎಂದು ದೂರಿದರು. ಮುಂಬೈಯಲ್ಲಿ ಹೊಟೇಲ್ ಮೇಲೆ ಭಯೋತ್ಪಾದಕರ ದಾಳಿ ಆದಾಗ ಕಾಂಗ್ರೆಸ್ಸಿನವರು ಕೈಕಟ್ಟಿ ಕೂತಿದ್ದರು ಎಂದು ಗಮನ ಸೆಳೆದರು.

Read More

ತಲಪಾಡಿ: ಕೆಸಿ ನಗರ ದಾರುಲ್ ಹುದಾ ಮುಸ್ಲಿಂ ಎಜುಕೇಶನ್ ಸೆಂಟರ್ (ಕೆಸಿ ನಗರ) ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಲ್ಹರುಲ್ ಉಲೂಂ ಮದರಸದಲ್ಲಿ ಮೇಲಂತಸ್ತು ನಿರ್ಮಾಣ ಪೂರ್ಣಗೊಂಡು ಇತ್ತೀಚೆಗೆ ಉದ್ಘಾಟನೆ ನೆರವೇರಿತು. ಮದರಸದಲ್ಲಿ ವಿದ್ಯಾರ್ಥಿಗಳಿಗೆ ತರಗತಿ ಕೊಠಡಿಗಳ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಮೇಲಂತಸ್ತಿನಲ್ಲಿ ತಗಡು ಶೀಟ್ ಅಳವಡಿಸಿ ಅಗತ್ಯ ಸೌಕರ್ಯಗಳೊಂದಿಗೆ ವಿಶಾಲವಾದ ತರಗತಿ ಕೊಠಡಿಯನ್ನು ನಿರ್ಮಿಸಿದೆ. ಈ ಹೊಸ ಕಟ್ಟಡವನ್ನು ಬಹು ಕೆ.ಪಿ. ಹುಸೈನ್ ಸಅದಿ (ಕೆಸಿ ರೋಡ್) ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕಟ್ಟಡ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡಿದ ಜಮಾತ್ ಸದಸ್ಯರಿಗೆ ವಿಶೇಷ ಕೃತಜ್ಞತೆ ಸಲ್ಲಿಸಲಾಗಿದ್ದು, ಅವರಿಗಾಗಿ ಪ್ರಾರ್ಥನೆ ನೆರವೇರಿಸಲಾಯಿತು. ವೇದಿಕೆಯಲ್ಲಿ ಜಮಾತ್ ಅಧ್ಯಕ್ಷ ಯುಸಿ ಅಬ್ಬಾಸ್, ಮದರಸಾ ಮುಖ್ಯೋಪಾಧ್ಯಾಯ ಇಬ್ರಾಹಿಂ ಸಾಹಾರಿ, ಮಸೀದಿ ಖತೀಬ್ ಅಬ್ದುಲ್ಲಾ ಮದಿನಿ, ಮಾಸಿನ್ ಉಸ್ತಾದ್, ಅಸರ ಪುಸ್ತಕ ಶಿಹ ಬುದ್ಧಿಂ ಜವರಿ, ಮುಸ್ತಫಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. ಜಮಾತ್ ಸದಸ್ಯರು ಮತ್ತು ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶುಭಾಶಯ ಕೋರಿದರು.

Read More

ಬೆಂಗಳೂರು, ಏ. 23 : 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯ ಫಲಿತಾಂಶ ಇಂದು ಮಧ್ಯಾಹ್ನ 12 ಗಂಟೆಗೆ ಪ್ರಕಟಗೊಂಡಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿ ವಿವರಗಳನ್ನು ಹಂಚಿಕೊಂಡಿದ್ದಾರೆ. ಈ ಬಾರಿ ಪರೀಕ್ಷೆಗೆ ಹಾಜರಾದ 7,70,209 ವಿದ್ಯಾರ್ಥಿಗಳ ಪೈಕಿ 7,24,794 ಮಂದಿ ಉತ್ತೀರ್ಣರಾಗಿದ್ದು, ಒಟ್ಟು ಪಾಸ್ ಪ್ರಮಾಣ ಶೇ.94.1 ಎಂದು ದಾಖಲಾಗಿದೆ. ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ರಾಜ್ಯದಾದ್ಯಂತ 2,870 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಶೇ.98.40 ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಉಡುಪಿ ಶೇ.98.18 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಇನ್ನೊಂದೆಡೆ, ಕಲಬುರಗಿ ಶೇ.85.06 ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ. ರಾಜ್ಯದಲ್ಲಿ ಈ ಬಾರಿ ಉತ್ತಮ ಫಲಿತಾಂಶ ದಾಖಲಾಗಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಣ ಇಲಾಖೆಗೆ ಇದು ಸಂತಸದ ಸುದ್ದಿಯಾಗಿದೆ. ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಒಟ್ಟು 9,02,889 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಅವರಲ್ಲಿ 8,12,855 ವಿದ್ಯಾರ್ಥಿಗಳು ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿರುವ ಹೊಸಬರು, 62,845 ಮಂದಿ ಪುನರಾವರ್ತಿತರು…

Read More

ಮಂಗಳೂರು: ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರುವ ಅನುದಾನರಹಿತ ಕನ್ನಡ ಮಾಧ್ಯಮ ಸೈಯದ್ ಮದನಿ ಪ್ರೌಢಶಾಲೆ ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 34 ಮಂದಿ ವಿದ್ಯಾರ್ಥಿಗಳಲ್ಲಿ 5 ಮಂದಿ ಡಿಸ್ಟಿಂಕ್ಷನ್, 19 ಮಂದಿ ಪ್ರಥಮ ದರ್ಜೆ ಹಾಗೂ 10 ಮಂದಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಶಾಲೆಗೆ ಶೇ.100 ಫಲಿತಾಂಶ ತಂದಿದ್ದಾರೆ. ಇದಲ್ಲದೆ, ಕುಮಾರಿ ಸುಹಪಾತಿಮ ಅವರು 574 ಅಂಕಗಳನ್ನು ಪಡೆದು ಶಾಲೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಶಾಲೆಯ ಈ ಸಾಧನೆಗೆ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಹಾಗೂ ಟ್ರಸ್ಟ್ ಪದಾಧಿಕಾರಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.

Read More

ಕೊಣಾಜೆ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.), ಗ್ರಾಮಚಾವಡಿ ಕೊಣಾಜೆ ವತಿಯಿಂದ ಭಕ್ತರಿಗಾಗಿ ಶಿರಡಿ ಪ್ರವಾಸವನ್ನು ಆಯೋಜಿಸಲಾಗಿದೆ. ಪ್ರವಾಸವು ಏಪ್ರಿಲ್ 24ರಂದು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಗ್ರಾಮಚಾವಡಿ ಶ್ರೀ ಗುರು ಸಾನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಿ ಹೊರಡುವುದು. 25ರಂದು ಪಂಡರಪುರ ತಲುಪಿ, ಶ್ರೀ ಕ್ಷೇತ್ರ ಪಂಡರಪುರ ಹಾಗೂ ಶ್ರೀಕ್ಷೇತ್ರ ಶನಿಸಿಂಗಾಣುಪುರಗಳ ದರ್ಶನಗೈದು ಸಂಜೆ ಶಿರ್ಡಿಯಲ್ಲಿ ತಂಗುವುದು. 26ರಂದು ಶ್ರೀ ಕ್ಷೇತ್ರ ಶಿರ್ಡಿ ಸಾಯಿಬಾಬಾ, ತ್ರೆöÊಂಬಕೇಶ್ವರ ದೇವಸ್ಥಾನ ಹಾಗೂ ಪಂಚವಟಿಯ ದೇವಸ್ಥಾನಗಳ ದರ್ಶನಗೈದು ಸಂಜೆ ಮಿನಿ ತಿರುಪತಿಯಲ್ಲಿ ತಂಗುವುದು. 27ರಂದು ಬೆಳಿಗ್ಗೆ ಮಿನಿತಿರುಪತಿ ಹಾಗೂ ಕೋಲಾಪುರ ಮಹಾಲಕ್ಷಿö್ಮÃ ದೇವಸ್ಥಾನಗಳ ದರ್ಶನ ಮಾಡಿ ಹೊರಡುವುದು.28ರಂದು ಬೆಳಿಗ್ಗೆ ಗ್ರಾಮಚಾವಡಿಯ ಶ್ರೀ ಗುರು ಸಾನಿಧ್ಯಕ್ಕೆ ತಲುಪುವುದು. ಪ್ರವಾಸದ ಶುಲ್ಕವು ವಯಸ್ಕರಿಗೆ ರೂ.8000, 5ರಿಂದ 7 ವರ್ಷ ವಯಸ್ಸಿನ ಮಕ್ಕಳಿಗೆ ರೂ. 6000 ಮತ್ತು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ರೂ. 4000 ಎಂದು ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 8970343505 ಮತ್ತು 9844823686 ಸಂಖ್ಯೆಯನ್ನು ಸಂಪರ್ಕಿಸಬಹುದು.

Read More

ಮಂಗಳೂರು: ಮಂಗಳೂರು ಗ್ರಾಮಾಂತರ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಘದ ಮಹಾಸಭೆ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಂಘದ ನೂತನ ಅಧ್ಯಕ್ಷೆಯಾಗಿ ಹರಿಣಾಕ್ಷಿ ಅಡ್ಯಂತಾಯ ಆಯ್ಕೆಯಾಗಿದ್ದು, ಕೋಟೆಕಾರ್ ವಲಯ ಉಪಾಧ್ಯಕ್ಷೆಯಾಗಿ ಪೂರ್ಣಿಮಾ ಶಿರ್ತಾಡಿ, ಕಾರ್ಯದರ್ಶಿಯಾಗಿ ಪ್ರೇಮ ಬೋಳಿಯಾರ್, ಜೊತೆ ಕಾರ್ಯದರ್ಶಿಯಾಗಿ ಹೇಮಾ ಕಟೀಲ್ ಹಾಗೂ ಕೋಶಾಧಿಕಾರಿಯಾಗಿ ಗಾಯತ್ರಿ ಬಜಪೆ ಅವರನ್ನು ಆಯ್ಕೆ ಮಾಡಲಾಗಿದೆ. ಇದೇ ವೇಳೆ ವಲಯದ ಅಧ್ಯಕ್ಷೆಯರನ್ನೂ ಆಯ್ಕೆ ಮಾಡಲಾಗಿದೆ. ಅಡ್ಯಾರ್ ಪುಷ್ಪಲತಾ, ಕಾಟಿಪಲ್ಲ ಪಾರ್ವತಿ, ಉಳ್ಳಾಲ ಧರ್ಮಿನಿ, ಕಟೀಲು ತುಳಸಿ, ಬಜಪೆ ಯೋಗಿನಿ, ಬೀಳುವಾಯಿ ಸುಜಯ, ಕುಡುಪು ಮಮತಾ, ಮುಲ್ಕಿ ನಳಿನಾಕ್ಷಿ, ಶಿರ್ತಾಡಿ ಪೂರ್ಣಿಮಾ, ಬೊಂದೆಲ್ ಕಸ್ತೂರಿ, ಕೋಟೆಕಾರ್ ಸುನಂದ, ಕೊಣಾಜೆ ವಿಜಯ, ಪೆರ್ಮನ್ನೂರು ಪ್ರೇಮ ಹಾಗೂ ಬೋಳಿಯಾರ್ ಮೋಂತಿ ಡಿಸೋಜಾ ಅವರು ವಲಯ ಅಧ್ಯಕ್ಷೆಯರಾಗಿ ಆಯ್ಕೆಯಾಗಿದ್ದಾರೆ.

Read More

“ಅಂಧಕಾರ ಎಷ್ಟೇ ಗಾಢವಾಗಿದ್ದರೂ, ಒಂದು ದೀಪವು ಸಾಕು ಬೆಳಕಿಗೆ” – ಆ ದೀಪವೇ ಭಾರತದ ಇತಿಹಾಸದಲ್ಲಿ ಹೊಳೆಯುವ ಮಹಾನ್ ವ್ಯಕ್ತಿತ್ವ – ಡಾ. ಬಿ.ಆರ್. ಅಂಬೇಡ್ಕರ್ ಅವರು ಹುಟ್ಟಿದ್ದು ಸಾಮಾನ್ಯ ಕುಟುಂಬದಲ್ಲಿ, ಆದರೆ ಅವರ ಕನಸುಗಳು ಅಸಾಮಾನ್ಯವಾಗಿದ್ದವು.ಅವರು ಎದುರಿಸಿದ್ದು ಅಸ್ಪೃಶ್ಯತೆ, ಆದರೆ ಅವರು ಆರಿಸಿಕೊಂಡದ್ದು ಸಮಾನತೆಯ ಹೋರಾಟ.ಅವರು ಅನುಭವಿಸಿದ್ದು ಅನ್ಯಾಯ, ಆದರೆ ಅವರು ನಿರ್ಮಿಸಿದ್ದು ನ್ಯಾಯದ ಸಮಾಜ. ಭಾರತದ ಸಂವಿಧಾನ ರಚನೆಯಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ, ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದರು. ಭಾರತದ ಸಂವಿಧಾನವು ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯದ ಮೌಲ್ಯಗಳನ್ನು ಒಳಗೊಂಡಿರುವುದು ಅವರ ದೂರದೃಷ್ಟಿಯ ಫಲವಾಗಿದೆ. ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯ ಎಂಬ ಮೂಲಭೂತ ಮೌಲ್ಯಗಳನ್ನು ಸಂವಿಧಾನದಲ್ಲಿ ಬಲವಾಗಿ ನೆಲೆಯೂರಿಸಿದವರು ಅವರು. ಅವರ ದೂರದರ್ಶಿತ್ವದಿಂದಲೇ ಇಂದಿನ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠವಾಗಿದೆ ಅಂಬೇಡ್ಕರ್ ಅವರು ಸಮಾಜದ ಹಿಂದುಳಿದ ವರ್ಗಗಳಿಗೆ ಸಮಾನ ಹಕ್ಕುಗಳನ್ನು ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಅವರು…

Read More

ಮಂಗಳೂರು, ಎ.23: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದಲ್ಲಿ ಶಿಶಿಕ್ಷು ತರಬೇತಿ ಪಡೆಯಲು ಇಚ್ಛಿಸುವ ಎಸೆಸೆಲ್ಸಿ ಅಥವಾ ಐಟಿಐ ವಿದ್ಯಾರ್ಹತೆಯಲ್ಲಿ ಮೆಕ್ಯಾನಿಕ್ ಡೀಸೆಲ್, ಇಲೆಕ್ಟ್ರಿಷಿಯನ್, ಮೆಷಿನಿಸ್ಟ್, ಇಲೆಕ್ಟ್ರಾನಿಕ್ಸ್ ಮೆಕಾನಿಕ್, ವೆಲ್ಡ‌ರ್, ಮೆಕ್ಯಾನಿಕ್ ಮೋಟರ್ ವೆಹಿಕಲ್, ಪ್ರೋಗ್ರಾಮಿಂಗ್ ಸಿಸ್ಟಮ್ ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್‌ ವೃತ್ತಿಗಳಲ್ಲಿ ಉತ್ತೀರ್ಣರಾದವರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹರು ಮೇ 8ರೊಳಗೆ ನಗರದ ಬಿಜೈನಲ್ಲಿರುವ ಕೆಎಸ್ಸಾರ್ಟಿಸಿ ವಿಭಾಗೀಯ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಮೇ12ರಂದು ಬೆಳಗ್ಗೆ 10ಕ್ಕೆ ಮೂಲ ದಾಖಲಾತಿಗಳೊಂದಿಗೆ ಶಿಶಿಕ್ಷು ಆಯ್ಕೆ ಸಮಿತಿಯ ಮುಂದೆ ನೇರ ಸಂದರ್ಶನಕ್ಕೆ ಹಾಜರಾಗಬೇಕು ಎಂದು ಪ್ರಕಟನೆ ತಿಳಿಸಿದೆ.

Read More